ಟಾಲಿವುಡ್ (Tollywood) ಬ್ಯೂಟಿ ಸಮಂತಾ(Samantha) ಅನಾರೋಗ್ಯದಿಂದ ಬಳಲುತ್ತಿದ್ದಾರೆ. `ಮೈಯೋಸಿಟಿಸ್’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಬೆನ್ನಲ್ಲೇ ಇದೀಗ ಹೊಸ ಸುದ್ದಿಯೊಂದು ಸಮಂತಾ ಮತ್ತು ನಾಗಚೈತನ್ಯ ಬಗ್ಗೆ ಹರಿದಾಡುತ್ತಿದೆ. ಸಮಂತಾಗೆ ಆರೋಗ್ಯ ಕೈಕೊಟ್ಟ ಈ ಬೆನ್ನಲ್ಲೇ ಮಾಜಿ ಪತ್ನಿಯನ್ನ ನಾಗಚೈತನ್ಯ(Nagachaitanya) ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಚೈತನ್ಯ ಜೊತೆಗಿನ ಡಿವೋರ್ಸ್ ನಂತರ ಸಾಕಷ್ಟು ಸವಾಲುಗಳು, ನೋವುಗಳನ್ನ ಎದುರಿಸಿರುವ ನಟಿ ಸಮಂತಾ ಇದೀಗ ಕೆಲ ತಿಂಗಳಿಂದ ಮೈಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಈ ಕುರಿತು ಸ್ವತಃ ಸಮಂತಾನೇ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಬಳಿಕ ಸಾಕಷ್ಟು ಸ್ಟಾರ್ ನಟ ನಟಿಯರು ಸಮಂತಾ ಬೇಗ ಗುಣಮುಖರಾಗಿ ಎಂದು ಹಾರೈಸಿದ್ದರು.

ಇನ್ನೂ ಅಕ್ಕಿನೇನಿ ಕುಟುಂಬದಿಂದ ಅಖಿಲ್ ಕೂಡ ಸಮಂತಾಗೆ ಬೇಗ ಚೇತರಿಕೊಳ್ಳಿ ಎಂದು ಪೋಸ್ಟ್ ಮಾಡಿದ್ದರು. ಆದರೆ ಸ್ಯಾಮ್ ಆರೋಗ್ಯದ ಬಗ್ಗೆ ಒಂದೇ ಒಂದು ಪೋಸ್ಟ್ ಕೂಡ ನಾಗಚೈತನ್ಯ ಮಾಡಿಲ್ಲ. ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಮೂಲಕ ಈ ಮಾಜಿ ದಂಪತಿ ಹಾಟ್ ಟಾಪಿಕ್ ಆಗಿದ್ದಾರೆ. ಇದನ್ನೂ ಓದಿ:ಅನುಪಮಾ ಗೌಡ ವಿರುದ್ಧ ಸಿಡಿದೆದ್ದ ರೂಪೇಶ್ ರಾಜಣ್ಣ

ಆದರೆ ಇದೀಗ ಮತ್ತೊಂದು ಹೊಸ ಸುದ್ದಿ ಹೊರ ಬಿದ್ದಿದೆ. ಸಮಂತಾ ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ನಾಗಚೈತನ್ಯ ಭೇಟಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಇದೆಷ್ಟು ನಿಜ ಎಂಬುದನ್ನ ಭೇಟಿಯ ಬಳಿಕ ತಿಳಿದು ಬರಲಿದೆ.









ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ನಂತರ ತಮ್ಮ ತಮ್ಮ ವೃತ್ತಿರಂಗದತ್ತ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶಗಳನ್ನ ಪಡೆಯುತ್ತಾ ಚಿತ್ರರಂಗದಲ್ಲಿ ಗಟ್ಟಿ ಸ್ಥಾನ ಪಡೆಯುವಲ್ಲಿ ಮುನ್ನುಗ್ಗುತ್ತಿದ್ದಾರೆ. ಸಮಂತಾ ಕುರಿತು ಈಗ ತಮಗಿರುವ ಭಾವನೆ ಬಗ್ಗೆ ನಾಗಚೈತನ್ಯ ಮಾತನಾಡಿದ್ದಾರೆ.







`ಕಾಫಿ ವಿತ್ ಕರಣ್’ ಶೋನಲ್ಲಿ ಸಮಂತಾ, ನಾಗಚೈತನ್ಯ ಬಗ್ಗೆ ಮಾತನಾಡಿದ್ದರು. ಸಮಂತಾ ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಹಾಗಾಗಿ ಈಗ ಅಸಲಿಗೆ ಇಲ್ಲಿವರೆಗೂ ಸುಮ್ಮನಿದ್ದ ನಾಗಚೈತನ್ಯ ಕಳೆದ ಕೆಲವು ದಿನಗಳಿಂದ ಆಕ್ಟಿವ್ ಆಗುತ್ತಿದ್ದಾರೆ. ಮೇಲ್ನೋಟಕ್ಕೆ ಸಮಂತಾಗೆ ಟಕ್ಕರ್ ಕೊಡೋಕೆ ನಾಗಚೈತನ್ಯ ಸಕಲ ಪ್ರಯತ್ನವೂ ನಡೆಸಿದ್ದಾರೆ ಅನ್ನೋ ಚರ್ಚೆಯಾಗ್ತಿದೆ. ಇದನ್ನೂ ಓದಿ:
ಸಮಂತಾ ಮುಂಬೈಗೆ ಬಂದಿಳಿಯುವ ಮುನ್ನವೇ ನಾಗಚೈತನ್ಯ ಬಂದಿದ್ದರು. ಅವರ ಮೊದಲ ಬಾಲಿವುಡ್ ಸಿನಿಮಾ `ಲಾಲ್ ಸಿಂಗ್ ಚಡ್ಡಾ’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಾಗಚೈತನ್ಯ ಬಾಲಿವುಡ್ ಫಿಲ್ಮ್ ಮೇಕರ್ ಸಂಜಯ್ ಲೀಲಾ ಬನ್ಸಾಲಿ ಅವರನ್ನ ನಾಗಚೈತನ್ಯ ಭೇಟಿಯಾಗಿ ಬಂದಿದ್ದರು. ಇಬ್ಬರೂ ಸೇರಿ ಸಿನಿಮಾ ಮಾಡುತ್ತಾರೆ ಅನ್ನೋ ಪುಕಾರು ಹಬ್ಬಿದೆ. ಆದರೆ, ಚರ್ಚೆ ಆಗುತ್ತಿರೋ ವಿಷಯವೇ ಬೇರೆ. ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಕಾಂಪಿಟೇನ್‌ಗೆ ಬಿದ್ದಿದ್ದಾರೆ ಅನ್ನೋ ಗುಸು ಗುಸು ಓಡಾಡುತ್ತಿದೆ. ವೃತ್ತಿರಂಗದಲ್ಲಿ ಸಮಂತಾಗೆ ಟಕ್ಕರ್ ಕೊಡಲು ಮಾಜಿ ಪತಿ ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.
ನಿರೂಪಕಿಯ ಪ್ರಶ್ನೆಗೆ ನಾಗಚೈತನ್ಯ ಕ್ಯೂಟ್ ಆಗಿ ಸ್ಮೈಲ್ ಮಾಡಿದ್ದಾರೆ. ನಾನು ಕಿರುನಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಶೋಭಿತಾ ಜತೆಗಿನ ಡೇಟಿಂಗ್ ವಿಚಾರ ನಿಜ ಎಂಬುದನ್ನ ಬಹುತೇಕ ಖಚಿತಪಡಿಸಿದ್ದಾರೆ. ಇನ್ನು ಮೂಲಗಳ ಪ್ರಕಾರ ಈ ಹಿಂದೆ ನಾಗಚೈತನ್ಯ ಹೊಸ ಮನೆಯಲ್ಲಿ ಶೋಭಿತಾ ಕಾಣಿಸಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಈ ಜೋಡಿ, ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರಾ ನಾಗಚೈತನ್ಯ ಶೋಭಿತಾ ಜತೆಯಾಗುತ್ತಾರಾ ಅಂತಾ ಕಾದುನೋಡಬೇಕಿದೆ.

