Tag: Nagachaitanya

  • ಸಮಂತಾ- ನಾಗಚೈತನ್ಯ ಮತ್ತೆ ಪ್ಯಾಚ್ ಅಪ್?

    ಸಮಂತಾ- ನಾಗಚೈತನ್ಯ ಮತ್ತೆ ಪ್ಯಾಚ್ ಅಪ್?

    ಮಂತಾ-ನಾಗಚೈತನ್ಯ(Nagachaitanya) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಈಗ ಇಬ್ಬರ ನಡುವೆ ಪ್ಯಾಚ್ ಅಪ್ ಆಗಿದ್ಯಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ನಾಗಚೈತನ್ಯ ಶೇರ್ ಮಾಡಿರುವ ಹೊಸ ಫೋಟೋದಲ್ಲಿ ಸ್ಯಾಮ್ ಜೊತೆ ಒಂದಾಗುವ ಸುಳಿವು ಸಿಕ್ಕಿದೆ.

    ಸ್ಯಾಮ್-ನಾಗಚೈತನ್ಯ ಡಿವೋರ್ಸ್ (Divorce) ಪಡೆದು 3 ವರ್ಷಗಳಾಗಿದೆ. ಆದರೆ ಮತ್ತೆ ಒಂದಾಗುವ ಮುನ್ಸೂಚನೆ ಸಿಕ್ಕಿದೆ. ಇಬ್ಬರು ಜೊತೆಯಾಗಿದ್ದಾಗ ಹ್ಯಾಶ್ ಎಂಬ ಹೆಸರಿನ ಫ್ರೆಂಚ್ ಬುಲ್ ಡಾಗ್ ಅನ್ನು ಬರಮಾಡಿಕೊಂಡಿದ್ದರು. ಡಿವೋರ್ಸ್ ಬಳಿಕ ಸಮಂತಾ, ಆಗಾಗ ‘ಹ್ಯಾಶ್’ (Hash) ಜೊತೆಗಿನ ಫೋಟೋವನ್ನ ಆಗಾಗ ಹಂಚಿಕೊಳ್ಳುತ್ತಿದ್ದರು.

     

    View this post on Instagram

     

    A post shared by Chay Akkineni (@chayakkineni)

    ಈಗ ಹ್ಯಾಶ್ ಜೊತೆಯಿರುವ ಫೋಟೋವನ್ನ ನಾಗಚೈತನ್ಯ ಶೇರ್ ಮಾಡಿದ್ದಾರೆ. ಹ್ಯಾಶ್ ಕಾರಿನಲ್ಲಿ ಕುಳಿತು ಸೂರ್ಯಾಸ್ತವನ್ನು ಎಂಜಾಯ್ ಮಾಡುತ್ತಿರುವ ಫೋಟೋ ಹಂಚಿಕೊಂಡು, ‘ವೆಬ್’ ಎಂದು ಅಡಿಬರಹ ನೀಡಿ ನಟ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ತಾತನ ಅಗಲಿಕೆಯ ನೋವಿನಲ್ಲಿ ‘ಆಪರೇಷನ್‌ ಅಲಮೇಲಮ್ಮ’ ನಟ ರಿಷಿ

    ಈ ಪೋಸ್ಟ್ ನೋಡ್ತಿದ್ದಂತೆ, ಇಬ್ಬರು ಸಂಬಂಧ ಸುಧಾರಿಸುವ ಹಂತದಲ್ಲಿದ್ದಾರೆ ಎನ್ನಲಾಗುತ್ತಿದೆ. ಮತ್ತೆ ಜೊತೆಯಾಗುವ ಸೂಚನೆ ಕೊಡ್ತಿದ್ದಾರೆ ಎಂದೇ ಫ್ಯಾನ್ಸ್ ಊಹೆ ಮಾಡ್ತಿದ್ದಾರೆ.

    ಕೆಲ ದಿನಗಳ ಹಿಂದೆ ಸಮಂತಾ(Samantha) ಇನ್ಸ್ಟಾಗ್ರಾಂನಲ್ಲಿ ಮಾಜಿ ಪತಿ ಜೊತೆಗಿನ ಫೋಟೋ ರೀ ಸ್ಟೋರ್ ಆಗಿತ್ತು. ಈಗ ನಾಗಚೈತನ್ಯ ಪೋಸ್ಟ್ ನೋಡಿ ಇಲ್ಲಿ ಏನೋ ಮತ್ತೆ ಸಮ್‌ಥಿಂಗ್ ಸಮ್‌ಥಿಂಗ್ ನಡೆಯುತ್ತಿದೆ ಎಂದು ಖುಷಿಪಡ್ತಿದ್ದಾರೆ ಫ್ಯಾನ್ಸ್. ಈ ಬಗ್ಗೆ ಸ್ಯಾಮ್-ಚೈ ಪ್ರತಿಕ್ರಿಯೆ ನೀಡುವವರೆಗೂ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2ನೇ ಮದುವೆ ಸುದ್ದಿ ಬೆನ್ನಲ್ಲೇ ಮಾಜಿ ಪತಿ ಜೊತೆ ಒಂದಾಗುವ ಸೂಚನೆ ಕೊಟ್ರಾ ಸ್ಯಾಮ್?

    2ನೇ ಮದುವೆ ಸುದ್ದಿ ಬೆನ್ನಲ್ಲೇ ಮಾಜಿ ಪತಿ ಜೊತೆ ಒಂದಾಗುವ ಸೂಚನೆ ಕೊಟ್ರಾ ಸ್ಯಾಮ್?

    ಟಾಲಿವುಡ್ (Tollywood) ನಟ ನಾಗಚೈತನ್ಯ (Nagachaitanya) 2ನೇ ಮದುವೆಯಾಗ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗ್ತಿದ್ದಂತೆ ಸಮಂತಾ ಖಾಸಗಿ ಖಾತೆಯಲ್ಲಿ ನಾಗಚೈತನ್ಯ ಜೊತೆಗಿನ ಮದುವೆ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಇಬ್ಬರ ಮದುವೆಯ ಹಳೆಯ ಫೋಟೋ ವೈರಲ್ ಆಗುತ್ತಿದ್ದಂತೆ ಈ ಜೋಡಿ ಮತ್ತೆ ಒಂದಾಗಲಿದ್ದಾರೆ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ.

    ಖ್ಯಾತ ಉದ್ಯಮಿ ಪುತ್ರಿ ಜೊತೆ ನಾಗಚೈತನ್ಯ 2ನೇ ಮದುವೆಯಾಗುತ್ತಿದ್ದಾರೆ. ಆದರೆ ವಧು ನಟಿ ಶೋಭಿತಾ ಜೊತೆ ಅಲ್ಲ ಎಂದು ಹಬ್ಬಿತ್ತು. ಈ ಸುದ್ದಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸ್ಯಾಮ್ ಮತ್ತು ಚೈ ಮದುವೆ ಫೋಟೋ ಮತ್ತೆ ಸಮಂತಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಕಾಣಿಸಿಕೊಂಡಿದೆ. ಫ್ಯಾನ್ಸ್‌ ಈ ಪೋಸ್ಟ್ ನೋಡ್ತಿದ್ದಂತೆ ಸಮಂತಾ- ಚೈತನ್ಯ ಮತ್ತೆ ಜೊತೆಯಾಗುತ್ತಾರೆ ಎಂದು ಸುದ್ದಿಯಾಗುತ್ತಿದೆ.‌ ಇದನ್ನೂ ಓದಿ:‘ಕುದ್ರು’ ಸಿನಿಮಾದಲ್ಲಿ ಕ್ಲಾಸ್ ಬಂಕ್ ಹಾಡು

     

    View this post on Instagram

     

    A post shared by Samantha (@samantharuthprabhuoffl)

    ಹಲವು ವರ್ಷಗಳ ಡೇಟಿಂಗ್ ನಂತರ ಮದುವೆಯಾಗಿದ್ದ ಈ ಜೋಡಿ, 2021ರಲ್ಲಿ ಸಮಂತಾ- ನಾಗಚೈತನ್ಯ ಡಿವೋರ್ಸ್ (Divorce) ಪಡೆದುಕೊಂಡರು. ಆಗಲೇ ಮಾಜಿ ಪತಿ ಜೊತೆಗಿನ ಒಂದೊಂದೇ ಫೋಟೋಗಳನ್ನ ಸಮಂತಾ ಇನ್ಸ್ಟಾಗ್ರಾಂನಲ್ಲಿ ಮರೆ ಮಾಚಿದ್ರು. ನಟಿಯ ನಡೆ ನೋಡಿ ಫ್ಯಾನ್ಸ್ ಡಿವೋರ್ಸ್ ಸಂಶಯ ವ್ಯಕ್ತಪಡಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಡಿವೋರ್ಸ್ ಆಗಿರುವ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡಿದ್ದರು.

    ಅಂದು ಕಣ್ಮರೆಯಾಗಿದ್ದ ಫೋಟೋಗಳು ಈಗ ಮತ್ತೆ ಸ್ಯಾಮ್‌ ಖಾತೆಯಲ್ಲಿ ಕಾಣಿಸಿಕೊಂಡಿರುವುದರಿಂದ ಈ ಜೋಡಿ ಮತ್ತೆ ಒಂದಾಗಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ. ಇದನ್ನೂ ಓದಿ:ನಟಿ ಪರಿಣಿತಿ ಚೋಪ್ರಾ ಮದುವೆ : ಭರ್ಜರಿ ಸಿದ್ಧತೆ

    ಡಿವೋರ್ಸ್ ಬಳಿಕ ಇಬ್ಬರು ಕೆರಿಯರ್‌ನತ್ತ ಮುಖ ಮಾಡಿದ್ದರು. ಸಮಂತಾ ಮತ್ತಷ್ಟು ಸ್ಟ್ರಾಂಗ್ ಆಗಿ ನಿಂತುಕೊಂಡರು. ಮತ್ತೆ ಈ ಜೋಡಿ ಗುಡ್ ನ್ಯೂಸ್ ಕೊಡುತ್ತಾರಾ ಎಂದು ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2ನೇ ಮದುವೆಗೆ ಸಜ್ಜಾದ ಸಮಂತಾ ಮಾಜಿ ಪತಿ- ಹುಡುಗಿ ಯಾರು ಗೊತ್ತಾ?

    2ನೇ ಮದುವೆಗೆ ಸಜ್ಜಾದ ಸಮಂತಾ ಮಾಜಿ ಪತಿ- ಹುಡುಗಿ ಯಾರು ಗೊತ್ತಾ?

    ಟಾಲಿವುಡ್ (Tollywood) ಯಂಗ್ ಹೀರೋ ನಾಗಚೈತನ್ಯ ಇದೀಗ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 2ನೇ ಮದುವೆಗೆ ತಯಾರಿ ನಡೆಸುತ್ತಿದ್ದಾರೆ ಸಮಂತಾ ಮಾಜಿ ಪತಿ. ಆದರೆ ವಧು ಶೋಭಿತಾ (Sobhita) ಅಲ್ಲವೇ ಅಲ್ಲ. ಸದ್ಯ ಈ ಸುದ್ದಿ, ಗಾಸಿಪ್ ಪ್ರಿಯರ ಚರ್ಚೆಗೆ ಕಾರಣವಾಗಿದೆ.

    ಸಮಂತಾ (Samantha) ಜೊತೆಗಿನ ನಾಗಚೈತನ್ಯ (Nagachaitanya) ಡಿವೋರ್ಸ್ (Divorce) ಆಗಿ 2 ವರ್ಷಗಳು ಕಳೆದಿವೆ. ಇಬ್ಬರ ಡಿವೋರ್ಸ್ ಬಳಿಕ ನಟಿ ಶೋಭಿತಾ (Shobitha) ಜೊತೆ ನಾಗಚೈತನ್ಯ ಹೆಸರು ಕೇಳಿ ಬಂದಿತ್ತು. ಇಬ್ಬರು ಡೇಟ್ ಮಾಡ್ತಿದ್ದಾರೆ ಎನ್ನಲಾಗಿತ್ತು. ಈಗ ನಾಗಚೈತನ್ಯ ಮದುವೆ ಸುದ್ದಿ ಹೊರ ಬೀಳುತ್ತಿದ್ದಂತೆ ವಧು ಶೋಭಿತಾ ಅಲ್ಲ ಎಂದು ತಿಳಿದು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

    ಮೂಲಗಳ ಪ್ರಕಾರ, ಖ್ಯಾತ ಉದ್ಯಮಿಯೊಬ್ಬರ ಪುತ್ರಿಯನ್ನು ನಟ ಮದುವೆಯಾಗುತ್ತಿದ್ದಾರಂತೆ. ಅದಕ್ಕಾಗಿ ನಾಗಾರ್ಜುನ (Nagarjuna) ದಂಪತಿ ಓಡಾಟದಲ್ಲಿ ಬ್ಯುಸಿಯಿದ್ದಾರೆ ಎನ್ನಲಾಗುತ್ತಿದೆ. ಆದರೆ ನಾಗಚೈತನ್ಯ ಮದುವೆ ಬಗ್ಗೆ ಅಕ್ಕಿನೇನಿ ಫ್ಯಾಮಿಲಿ ಕಡೆಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ನಾಗಚೈತನ್ಯ 2ನೇ ಮದುವೆಯಾಗ್ತಿರೋ ಆ ಹುಡುಗಿ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

    ಮತ್ತೆ ತಮ್ಮ ಜೀವನದ ಹೊಸ ಚಾಪ್ಟರ್ ತಿರುಗಿಸಲು ನಾಗಚೈತನ್ಯ ರೆಡಿಯಾಗಿದ್ದಾರೆ. ಮನೆ ಮಂದಿ ಮೆಚ್ಚಿದ ಹುಡುಗಿಯನ್ನೇ ನಟ ಮದುವೆಯಾಗ್ತಿದ್ದಾರೆ. ಈಗ ಏನಿದ್ರು ಹಸೆಮಣೆ ಏರೋದೊಂದೇ ಬಾಕಿ. ಇದನ್ನೂ ಓದಿ:ಹಳದಿ ಸೀರೆಯುಟ್ಟು ಹಳದಿ ಕಂಗಳಿಗೆ ಉತ್ತರಿಸಿದ್ರಾ ಸೋನು ಗೌಡ

    ಸೌತ್‌ನ ಬೆಸ್ಟ್ ಜೋಡಿಯಾಗಿ ಗುರುತಿಸಿಕೊಂಡಿದ್ದ ನಾಗಚೈತನ್ಯ-ಸಮಂತಾ 4 ವರ್ಷಗಳು ದಾಂಪತ್ಯ (Wedding) ಜೀವನವನ್ನ ಒಟ್ಟಾಗಿ ನಡೆಸಿದ್ದರು. 2021ರಲ್ಲಿ ಇಬ್ಬರು ಡಿವೋರ್ಸ್‌ ಪಡೆದುಕೊಂಡರು. ಆದರೂ ಎಲ್ಲೋ ಒಂದ್ ಕಡೆ ಚೈ ಮತ್ತು ಸ್ಯಾಮ್ ಅಭಿಮಾನಿಗಳಿಗೆ ಈ ಜೋಡಿ ಮತ್ತೆ ಒಂದಾದ್ರೆ ಚೆನ್ನಾಗಿರುತ್ತೆ ಎಂದು ಆಸೆಯಿದೆ. ಸದ್ಯ ನಾಗಚೈತನ್ಯ ಮದುವೆ ಸುದ್ದಿ ಕೇಳಿ ನೆಟ್ಟಿಗರು ಸೈಲೆಂಟ್ ಆಗಿದ್ದಾರೆ. ಇತ್ತ ಸಮಂತಾ, ಕಹಿ ನೆನಪೆಲ್ಲಾ ಮರೆತು ಆರೋಗ್ಯ (Health) ಮತ್ತು ವೃತ್ತಿ ಜೀವನದ ಗಮನ ನೀಡುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮಂತಾ, ನಾಗಚೈತನ್ಯ ಡಿವೋರ್ಸ್ ನಿಜ ಆಯ್ತು- 2ನೇ ಮದುವೆ ಬಗ್ಗೆ ಜ್ಯೋತಿಷಿ ಭವಿಷ್ಯ

    ಸಮಂತಾ, ನಾಗಚೈತನ್ಯ ಡಿವೋರ್ಸ್ ನಿಜ ಆಯ್ತು- 2ನೇ ಮದುವೆ ಬಗ್ಗೆ ಜ್ಯೋತಿಷಿ ಭವಿಷ್ಯ

    ಟಿ ಸಮಂತಾ(Samantha)- ನಾಗಚೈತನ್ಯ ಅಕ್ಕಿನೇನಿ (Nagachaitanya) ಡಿವೋರ್ಸ್ (Divorce) ಆಗುತ್ತಾರೆ ಅಂತಾ ಕೆಲ ವರ್ಷಗಳ ಹಿಂದೆ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದರು. ಅದರಂತೆಯೇ ಆಯ್ತು, ಈಗ ಇವರಿಬ್ಬರಿಗೂ ವಿವಾಹ(Wedding) ಯೋಗವಿದೆ ಎಂದು ಹೇಳಿ 2ನೇ ಮದುವೆ ಬಗ್ಗೆ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ:60ನೇ ವಸಂತಕ್ಕೆ ಕಾಲಿಟ್ಟ ಸುಮಲತಾ- ಸಂಭ್ರಮದಲ್ಲಿ ಭಾಗಿಯಾದ ಸ್ಟಾರ್ಸ್

    ಟಾಲಿವುಡ್ (Tollywood) ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರು ಸೆಲೆಬ್ರಿಟಿಗಳ ವೈಯಕ್ತಿಕ ಜೀವನ, ವೃತ್ತಿ ಜೀವನದ ಬಗ್ಗೆ ಭವಿಷ್ಯ ಹೇಳುತ್ತಿರುತ್ತಾರೆ. ಈಗ ಮತ್ತೆ ಸಮಂತಾ- ನಾಗಚೈತನ್ಯ ವೈವಾಹಿಕ ಬದುಕಿನ ಬಗ್ಗೆ ಮಾತನಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ನಾಗಚೈತನ್ಯ- ಸಮಂತಾ ಡಿವೋರ್ಸ್ ಬಗ್ಗೆ ನಾನು ಮೊದಲು ಹೇಳಿದ್ದೆ. ನಾನು ಡಿವೋರ್ಸ್ (Divorce) ಬಗ್ಗೆ ಹೇಳಿದಾಗ ಅನೇಕರು ನನ್ನ ಟೀಕಿಸಿದ್ದರು. ನಾನು ಹೇಳಿದಂತೆ ಆಯ್ತು. ಇವರಿಬ್ಬರು ಮತ್ತೆ ಒಂದಾಗೋದು ಸಾಧ್ಯವೇ ಇಲ್ಲ. ಇವರಿಬ್ಬರಿಗೂ ಎರಡನೇ ವಿವಾಹದ ಯೋಗವಿದೆ. ವೃತ್ತಿ ವಿಚಾರದಲ್ಲಿ ಸಮಂತಾ ಸ್ಟ್ರಾಂಗ್ ಆಗಿದ್ದರು, ಹಾಗಾಗಿ ಹೀಗೆ ಆಯ್ತು ಎಂದು ವೇಣು ಸ್ವಾಮಿ ಭವಿಷ್ಯ ಹೇಳಿದ್ದಾರೆ.

    ಜಾತಕ ಮ್ಯಾಚ್ ಆಗದೆ ಮದುವೆಯಾದ್ರೆ ಡಿವೋರ್ಸ್ ಆಗತ್ತೆ. ಜಾತಕ ಮ್ಯಾಚ್ ಆಗದೆ ಮದುವೆ ಆದರೆ ಏನೇನೋ ಸಮಸ್ಯೆ ಆಗುತ್ತದೆ. ನಾಗಚೈತನ್ಯ- ಸಮಂತಾ ವಿಚ್ಛೇದನದ ಬಗ್ಗೆ ಮಾತನಾಡಿದ್ವಿ. ಆದರೆ ಅವರ ಸಮಸ್ಯೆ ಅವರಿಗೆ ಗೊತ್ತಿರುತ್ತದೆ. ಅಭಿಷೇಕ್ ಬಚ್ಚನ್ ನೋಡಿ ಒಂದು ಕ್ಯಾಮೆರಾ ಬಂದ್ರೆ, ಐಶ್ವರ್ಯಾ ರೈ ನೋಡಿ 10 ಕ್ಯಾಮೆರಾ ಬರುತ್ತದೆ. ಸೆಲೆಬ್ರಿಟಿಗಳ ಸ್ಟೇಟಸ್ ಕಾಪಾಡಿಕೊಳ್ಳೋದು ತುಂಬ ಕಷ್ಟ. ಇಬ್ಬರೂ ಒಂದೇ ರೀತಿ ಸ್ಟೇಟಸ್ ಮೆಂಟೇನ್ ಮಾಡಿಕೊಳ್ಳೋದು ಕಷ್ಟ. ಹೀಗಾಗಿಯೇ ತಾರಾ ಜೋಡಿಗಳು ವಿಚ್ಛೇದನ ಪಡೆಯೋದು. ಇದನ್ನೂ ಓದಿ:Salaar: ಪ್ರಭಾಸ್‌ ಸಿನಿಮಾ ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್

    ನಾಗಾರ್ಜುನ ಕುಟುಂಬದಲ್ಲಿ ತುಂಬ ದೋಷಗಳಿವೆ, ಹೀಗಾಗಿ ಅವರ ಕುಟುಂಬದಲ್ಲಿ ತುಂಬ ಡಿವೋರ್ಸ್ ಆಗುತ್ತಿದೆ. ನಾಗಾರ್ಜುನ ಅವರಿಗೆ ಲಕ್ಷ್ಮೀ ಎನ್ನುವವರ ಜೊತೆ ವಿಚ್ಛೇದನ ಆದ ಬಳಿಕ ಅವರು ಅಮಲಾ ಜೊತೆ ಮದುವೆಯಾದರು. ನಾಗಾರ್ಜುನ, ಅಮಲಾ ಮಗ ಅಖಿಲ್‌ಗೆ ನಿಶ್ಚಿತಾರ್ಥ ಮುರಿದು ಹೋಗಿದೆ. ಅಖಿಲ್ ಜೀವನದಲ್ಲಿ ಅವರ ತಾಯಿ ಮಧ್ಯಸ್ತಿಕೆ ವಹಿಸಿದ್ರೆ ಮದುವೆ ಆಗೋದು ಕಷ್ಟ, ನಾಗಾರ್ಜುನ ನಿರ್ಧಾರ ತಗೊಂಡರೆ ಸರಿ ಹೋಗತ್ತೆ ಎಂದಿದ್ದಾರೆ. ಒಟ್ನಲ್ಲಿ ಜ್ಯೋತಿಷಿ ವೇಣು ಸ್ವಾಮಿ ಆಡಿರುವ ಮಾತು ಸಖತ್‌ ವೈರಲ್‌ ಆಗಿದೆ. ಅನೇಕ ಚರ್ಚೆಗಳಿಗೆ ಗ್ರಾಸವಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕಾರ್ತಿಕೇಯ 2’ ನಿರ್ದೇಶಕನ ಜೊತೆ ಕೈ ಜೋಡಿಸಿದ ನಾಗಚೈತನ್ಯ

    ‘ಕಾರ್ತಿಕೇಯ 2’ ನಿರ್ದೇಶಕನ ಜೊತೆ ಕೈ ಜೋಡಿಸಿದ ನಾಗಚೈತನ್ಯ

    ಟಾಲಿವುಡ್ (Tollywood) ಯುವ ಸಾಮ್ರಾಟ ನಾಗಚೈತನ್ಯ (Nagachaitanya) ಹೊಸ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಅದಕ್ಕಾಗಿ ಅವರು ಆಂಧ್ರಪ್ರದೇಶದ ಶ್ರೀಕಾಕುಳಂ ಹಳ್ಳಿಗೆ ಭೇಟಿ ನೀಡಿ ಮೀನುಗಾರರ ಸಮುದಾಯ ಭೇಟಿ ಮಾಡಿ ಕೆಲ ಸಮಯ ಅವರೊಟ್ಟಿಗೆ ಕಳೆದಿದ್ದಾರೆ. ಮೀನುಗಾರರ ಸಂಸ್ಕೃತಿ, ನೆಲ, ಭಾಷೆ, ಜೀವನಶೈಲಿಯ ಬಗ್ಗೆ ತಿಳಿದುಕೊಂಡಿದ್ದಾರೆ. ಅಂದಹಾಗೇ ನಾಗಚೈತನ್ಯ ನಟಿಸುತ್ತಿರುವ 23ನೇ ಚಿತ್ರ ಇದಾಗಿದ್ದು, ನೈಜ ಘಟನೆಯ ಸುತ್ತ ಇಡೀ ಕಥೆಯನ್ನು ಕಟ್ಟಿಕೊಡಲಾಗಿದೆ.

    ಕಾರ್ತಿಕೇಯ 2 (Karthikeya 2)  ನಂತಹ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ಚಂದು ಮೊಂಡೇಟಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ Nc23  ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿದ್ದು, ಶೀಘ್ರದಲ್ಲೇ ಈ ಚಿತ್ರ ಸೆಟ್ಟೇರುತ್ತಿದೆ. ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಈ ಸಿನಿಮಾವನ್ನು ಪ್ರಸ್ತುತಪಡಿಸ್ತಿದ್ದು, ಬನ್ನಿ ವಾಸ್ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನೂ ಓದಿ:ಟೆಂಪಲ್ ರನ್ ಮುಗಿಸಿ ಫೋಟೋಶೂಟ್ ನಲ್ಲಿ ಭಾಗಿಯಾದ ಸಾರಾ ಅಲಿ ಖಾನ್

    #Nc23 ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದ್ದು, ಇದೇ ತಿಂಗಳಿಂದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ನಾಗಚೈತನ್ಯ, ಚಂದೂ ಮೊಂಡೇಟಿ ಹಾಗೂ ಬನ್ನಿ ವಾಸ್ ನಿನ್ನೆ ವೈಜಾಗ್ ನಲ್ಲಿ ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಂದು ಶ್ರೀಕಾಕುಳಂ ಗ್ರಾಮಕ್ಕೆ ತೆರಳಿ ಮೀನುಗಾರರ ಕುಟುಂಬವನ್ನು ಭೇಟಿ ಮಾಡಿದ್ದಾರೆ.

    ಈ ವೇಳೆ ಮಾಧ್ಯಮದವರನ್ನು ಉದ್ದೇಶಿಸಿ‌ ಮಾತನಾಡಿದ ನಾಯಕ ನಾಗಚೈತನ್ಯ, ಚಂದು ಅವರು 6 ತಿಂಗಳ ಹಿಂದೆ ಕಥೆಯನ್ನು ಹೇಳಿದ್ದರು. ನಾನು ತುಂಬಾ ಉತ್ಸುಕನಾಗಿದ್ದೇನೆ. ನೈಜ ಘಟನೆಗಳನ್ನು ಆಧರಿಸಿ ಅವರು ಕಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ವಾಸ್ ಮತ್ತು ಚಂದೂ ಎರಡು ರ‍್ಷಗಳಿಂದ ಕಥೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಥೆ ತುಂಬಾ ಸ್ಪರ‍್ತಿದಾಯಕವಾಗಿತ್ತು. ಮೀನುಗಾರರ ಜೀವನಶೈಲಿ, ಅವರ ಭಾಷೆ ಮತ್ತು ಹಳ್ಳಿಯ ಸೊಬಗನ್ನು ತಿಳಿಯಲು ನಾವು ಇಲ್ಲಿಗೆ ಬಂದಿದ್ದೇವೆ. ಪ್ರಿ-ಪ್ರೊಡಕ್ಷನ್ ಕೆಲಸಗಳು ಇಂದಿನಿಂದ ಪ್ರಾರಂಭವಾಗುತ್ತವೆ.

    ಚಂದೂ ಮೊಂಡೇಟಿ, ಕಾರ್ತಿಕ್ ಎಂಬ ಸ್ಥಳೀಯ ವ್ಯಕ್ತಿ 2018ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಕಥೆಯನ್ನು ಸಿದ್ಧಪಡಿಸಿದ್ದಾರೆ. ಅವರು ಆರಂಭದಲ್ಲಿ ಅರವಿಂದ್ ಮತ್ತು ಬನ್ನಿ ವಾಸ್ ಅವರಿಗೆ ಕಥೆಯನ್ನು ಹೇಳಿದರು. ಕಥೆ ಕೇಳಿದಾಗ ಎಕ್ಸೈಟ್ ಆದೆ. ನಾವು ಕಳೆದ 2 ವರ್ಷಗಳಿಂದ ಸ್ಕ್ರಿಪ್ಟ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ. ಇದೀಗ ಸ್ಕ್ರಿಪ್ಟ್ ಸಿದ್ಧವಾಗಿದ್ದು, ಚೆನ್ನಾಗಿ ಬಂದಿದೆ. ಚೈತನ್ಯ ಕಥೆಯಿಂದ ಸಂತಸಗೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿಯೇ ಸಿನಿಮಾದ ಪ್ರೀ-ಪ್ರೊಡಕ್ಷನ್‌ ಆರಂಭಿಸಲು ನಾವು ಬಯಸಿದ್ದೇವೆ ಎಂದರು.ಶೀಘ್ರದಲ್ಲೇ ಈ ಪ್ರಾಜೆಕ್ಟ್ ಅಪ್ ಡೇಟ್ ಬಗ್ಗೆ ತಿಳಿಸುವುದಾಗಿ ಚಿತ್ರತಂಡ ಹೇಳಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮಂತಾ, ರಶ್ಮಿಕಾ ಈಗ ಶ್ರೀಲೀಲಾ ಭವಿಷ್ಯ ನುಡಿದ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ

    ಸಮಂತಾ, ರಶ್ಮಿಕಾ ಈಗ ಶ್ರೀಲೀಲಾ ಭವಿಷ್ಯ ನುಡಿದ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ

    ಟಾಲಿವುಡ್‌ನಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಹೆಸರಾಗಿರೋ ವೇಣು ಸ್ವಾಮಿ (Venu Swamy) ಅವರು ಈ ಹಿಂದೆ ಸಮಂತಾ- ಚೈತನ್ಯರ ದಾಂಪತ್ಯದ ಬಗ್ಗೆ ಮಾತನಾಡಿದ್ದರು. ಅವರು ಹೇಳಿದಂತೆಯೇ ಇಬ್ಬರು ಬೇರೆಯಾದರು. ರಶ್ಮಿಕಾ(Rashmika), ಪ್ರಭಾಸ್(Prabhas) , ವಿಜಯ್ ದೇವರಕೊಂಡ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿ ಭವಿಷ್ಯ ನುಡಿದಿರೋ ತೆಲುಗಿ ಜ್ಯೋತಿಷಿ ವೇಣು ಸ್ವಾಮಿ ಇಘ ಶ್ರೀಲೀಲಾ (Sreeleela) ಬಗ್ಗೆ ಮಾತನಾಡಿದ್ದಾರೆ.

    ವೇಣು ಸ್ವಾಮಿ ಅವರು ಹೇಳುವ ಮಾತು ಸತ್ಯ ಎಂದು ನಂಬುವ ನಟ-ನಟಿಯರು ಅಲ್ಲಿಯೇ ಬಂದು ದೇವಿ ಪೂಜೆ ಮಾಡಿಸಿ ಹೋಗುತ್ತಾರೆ. ಹಾಗಿಯೇ ರಶ್ಮಿಕಾ ಮಂದಣ್ಣ (Rashmika Mandanna) ಅಷ್ಟರಮಟ್ಟಿಗೆ ಯಶಸ್ಸು ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಈಗ ತೆಲುಗು ರಂಗದಲ್ಲಿ ಅಗ್ರ ಸ್ಥಾನದಲ್ಲಿರುವ ನಟಿ ಶ್ರೀಲೀಲಾ 10 ಹೆಚ್ಚು ಸಿನಿಮಾಗಳಿಗೆ ನಾಯಕಿಯಾಗುವ ಬೇಡಿಕೆ ಕ್ರಿಯೆಟ್ ಮಾಡಿಕೊಂಡಿದ್ದಾರೆ.

    ಇತ್ತೀಚಿನ ಸಂದರ್ಶನವೊಂದರಲ್ಲಿ ವೇಣು ಸ್ವಾಮಿ ಶ್ರೀಲೀಲಾ ಜಾತಕ ನೋಡಿ ಭವಿಷ್ಯ ಹೇಳಿದ್ದಾರೆ. ಚಿತ್ರರಂಗಕ್ಕೆ ಹೊಸ ಹೊಸ ನಟಿಯರು ಬರುತ್ತಿರುತ್ತಾರೆ. ಎಲ್ಲರ ಜೊತೆ ಪೈಪೋಟಿ ನಡೆಸುತ್ತಾ ಬಹಳ ದಿನ ಉಳಿದುಕೊಳ್ಳುವುದು ಕಷ್ಟ. ತಮನ್ನಾ, ಕಾಜಲ್ ಅಗರ್‌ವಾಲ್, ತ್ರಿಶಾ, ಶ್ರಿಯಾ ಶರಣ್ ಮಾತ್ರ ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಸ್ಟಾರ್ ನಟಿಯರಾಗಿ ಮುನ್ನುಗ್ಗುತ್ತಿದ್ದಾರೆ. ಅದೇ ರೀತಿ ಶ್ರೀಲೀಲಾ ಸಿನಿ ಕೆರಿಯರ್ ಬಗ್ಗೆ ವೇಣು ಸ್ವಾಮಿ ಮಾತನಾಡಿದ್ದಾರೆ. ಶ್ರೀಲೀಲಾ (Sreeleela) ಅವರದ್ದು ಮೀನ ರಾಶಿ. ಆಕೆಯ ಜಾತಕದಲ್ಲಿ ರಾಜಯೋಗವಿದೆ. ಆದರೆ ಆ ರಾಜಯೋಗ ಬಹುಕಾಲ ಇರುತ್ತದೆಯೇ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ವೇಣು ಸ್ವಾಮಿ ಹೇಳಿದ್ದಾರೆ.

    ಸದ್ಯ ಆಕೆಯ ಗ್ರಹಬಲ ನೋಡಿದರೆ 2028ರ ವರೆಗೆ ಶ್ರೀಲೀಲಾಗೆ ಸೋಲೇ ಇಲ್ಲ. ಶ್ರೀಲೀಲಾ ಮತ್ತು ನಯನತಾರಾ (Nayanatara) ಜಾತಕಗಳು ಬಹುತೇಕ ಒಂದೇ ರೀತಿ ಇದೆ. ಆದರೆ ನಯನತಾರಾ ಸೌತ್‌ನಲ್ಲಿ ಟಾಪ್ ಹೀರೋಯಿನ್ ಆಗಿ ಮುಂದುವರೆದಿದ್ದಾರೆ. ಆ ಮಟ್ಟಕ್ಕೆ ಶ್ರೀಲೀಲಾ ಹವಾ ಇರುತ್ತದೋ ಇಲ್ಲವೋ ಗೊತ್ತಿಲ್ಲ ಎಂದು ವೇಣು ಸ್ವಾಮಿ ವಿವರಿಸಿದ್ದಾರೆ. ಒಟ್ಟಾರೆಯಾಗಿ ಇನ್ನು 5 ವರ್ಷ ಕಾಲ ಶ್ರೀಲೀಲಾ ದರ್ಬಾರ್ ಜೋರಾಗಿರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಮತ್ತೆ ಪ್ರೀತಿಯಲ್ಲಿ ಬಿದ್ರಾ ಸಮಂತಾ- ಏನಿದು ಹೊಸ ಕಹಾನಿ?

    ಶ್ರೀಲೀಲಾ, ಪೆಳ್ಳಿ ಸಂದಡಿ ಸಿನಿಮಾ ಮೂಲಕ ತೆಲುಗಿಗೆ ಲಗ್ಗೆ ಇಟ್ಟರು ‘ಧಮಾಕಾ’ ನಾಯಕಿಯಾಗಿ ಬೆಳಗಿದ್ದರು. ಕಡಿಮೆ ಸಮಯದಲ್ಲಿ ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ರು. ಮಹೇಶ್ ಬಾಬು, ಪವನ್ ಕಲ್ಯಾಣ್, ರಾಮ್ ಪೋತಿನೇನಿ, ನಿತಿನ್, ವಿಜಯ್ ದೇವರಕೊಂಡಗೆ ಹೀರೋಯಿನ್ ಆಗುವ ಮೂಲಕ ಸಂಚಲನ ಮೂಡಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಸ್ಟಡಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆದ  ನಾಗ ಚೈತನ್ಯ: ಸ್ಟಾರ್ ಬದ್ಧತೆಗೆ ಮೆಚ್ಚಿದ ಫ್ಯಾನ್ಸ್

    ಕಸ್ಟಡಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆದ ನಾಗ ಚೈತನ್ಯ: ಸ್ಟಾರ್ ಬದ್ಧತೆಗೆ ಮೆಚ್ಚಿದ ಫ್ಯಾನ್ಸ್

    ತೆಲುಗಿನ ಹೆಸರಾಂತ ನಟ ನಾಗ ಚೈತನ್ಯ ನಟನೆಯ ಕಸ್ಟಡಿ (Custody) ಸಿನಿಮಾದ ಇಂದು ರಿಲೀಸ್ ಆಗಿದ್ದು, ಅಭಿಮಾನಿಗಳು ನಾಗ ಚೈತನ್ಯ (Nagachaitanya) ನಿರ್ವಹಿಸಿದ ಪಾತ್ರ ನೋಡಿ ಶಾಕ್ ಆಗಿದ್ದಾರೆ. ಕೋಟ್ಯಾಂತರ ಅಭಿಮಾನಿಯನ್ನು ಹೊಂದಿರುವ ಈ ನಟ, ಪೊಲೀಸ್ (Police) ಕಾನ್ಸ್ ಟೇಬಲ್ (Constable) ಪಾತ್ರ ಮಾಡಿದ್ದು ಅಭಿಮಾನಿಗಳಿಗೆ ಅಚ್ಚರಿ ಮತ್ತು ಕುತೂಹಲವನ್ನು ಮೂಡಿಸಿದೆ.

    ಸಾಮಾನ್ಯವಾಗಿ ಸ್ಟಾರ್ ನಟರು ಈ ರೀತಿಯ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಕಥೆಯಲ್ಲೇ ಆ ರೀತಿ ಇದ್ದರೆ, ಬದಲಾಯಿಸಲು ನೋಡುತ್ತಾರೆ. ಆದರೆ, ನಾಗ ಚೈತನ್ಯ ಇದಾವುದನ್ನೂ ಮಾಡದೇ, ನಿರ್ದೇಶಕರು ಹೆಣೆದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಗಾಗಿಯೇ ಕಸ್ಟಡಿ ಸಿನಿಮಾ ನೋಡಿದ ಅಭಿಮಾನಿಗಳು ನಾಗಚೈತನ್ಯಗೆ ದೊಡ್ಡ ಗೆಲುವು ಸಿಗಲಿ ಎಂದು ಶುಭ ಹಾರೈಸಿದ್ದಾರೆ. ಅಲ್ಲದೇ, ಅತ್ಯುತ್ತಮವಾಗಿ ಸಿನಿಮಾ ಮೂಡಿ ಬಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ.

    ವೆಂಕಟ್ ಪ್ರಭು ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಇಳಯರಾಜ ಹಾಗೂ ಯುವನ್ ಶಂಕರ್ ರಾಜ್ ಜಂಟಿಯಾಗಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೃತಿ ಶೆಟ್ಟಿ ನಾಯಕಿಯಾದರೆ, ಮಹತ್ವದ ಪಾತ್ರವೊಂದನ್ನು ಅರವಿಂದ್ ಸ್ವಾಮಿ ನಿಭಾಯಿಸಿದ್ದಾರೆ. ಪ್ರಿಯಾಮಣಿ, ಶರತ್ ಕುಮಾರ್ ಸೇರಿದಂತೆ ಅನುಭವಿ ಕಲಾವಿದರ ತಂಡವೇ ತಾರಾ ಬಳಗದಲ್ಲಿದೆ. ಇದನ್ನೂ ಓದಿ:ಲವರ್‌ಗಾಗಿ ಕವಿತೆ ಬರೆದ ‘ಗಟ್ಟಿಮೇಳ’ ನಟಿ ನಿಶಾ? ಹುಡುಗ ಯಾರು?

    ನಾಗ ಚೈತನ್ಯಗೆ ಈಗ ತುರ್ತಾಗಿ ಒಂದು ಗೆಲವು ಬೇಕಿದೆ. ಇತ್ತೀಚಿನ ದಿನಗಳಲ್ಲಿ ಮಾಡಿದ ಅಷ್ಟೂ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿವೆ. ಹಾಗಾಗಿ ಕಸ್ಟಡಿ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸ್ವತಃ ನಾಗ ಚೈತನ್ಯ ಅವರೇ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದಾರೆ. ರಿಲೀಸ್ ಆದ ಚಿತ್ರಕ್ಕೆ ರೆಸ್ಪಾನ್ಸ್ ಹೇಗ ಬರಬಹುದು ಎಂದು ಕಾದು ನೋಡಬೇಕಿದೆ.

  • ‘ಕಸ್ಟಡಿ’ ಸಿನಿಮಾ ತೆರೆಗೆ- ಕಾನ್ಸ್‌ಟೇಬಲ್ ಪಾತ್ರದಲ್ಲಿ ನಾಗ ಚೈತನ್ಯ

    ‘ಕಸ್ಟಡಿ’ ಸಿನಿಮಾ ತೆರೆಗೆ- ಕಾನ್ಸ್‌ಟೇಬಲ್ ಪಾತ್ರದಲ್ಲಿ ನಾಗ ಚೈತನ್ಯ

    ಟಾಲಿವುಡ್‌ನ (Tollywood) ಲವರ್ ಬಾಯ್ ಅಕ್ಕಿನೇನಿ ನಾಗ ಚೈತನ್ಯ (Akkineni Naga Chaitanya) ಅವರು ಸಮಂತಾ (Samantha)  ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮೇಲೆ ಸಿನಿಮಾ ರಂಗದಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ. ಇದೀಗ ಕರಾವಳಿ ಬೆಡಗಿ ಕೃತಿ ಶೆಟ್ಟಿ (Krithi Shetty) ಜೊತೆ ‘ಕಸ್ಟಡಿ’ (Custody) ಸಿನಿಮಾ ಮೂಲಕ ನಾಗ ಚೈತನ್ಯ ಬರುತ್ತಿದ್ದಾರೆ.

    ನಾಗ ಚೈತನ್ಯ (Naga Chaitanya) ಅವರು ಸಿನಿಮಾಗಿಂತ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿಯೇ ಸಾಕಷ್ಟು ಸುದ್ದಿಯಾಗಿದ್ದರು. ಸಮಂತಾ- ಚೈತನ್ಯ ಡಿವೋರ್ಸ್ ಬಳಿಕ ಮೂವ್ ಆನ್ ಆಗಿದ್ದರು ಕೂಡ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದ್ದಾರೆ. ಸ್ಯಾಮ್- ಚೈ ಬೇರೆ ಆದ ಮೇಲೆ, ಸಮಂತಾ ಸೌತ್- ಬಾಲಿವುಡ್‌ನಲ್ಲಿ ಬಂಪರ್ ಅವಕಾಶಗಳನ್ನ ಬಾಚಿಕೊಳ್ತಿದ್ದಾರೆ. ಚೈತನ್ಯ ತಮಗೆ ಅವಕಾಶವನ್ನ ಸದುಪಯೋಗಪಡಿಸಿಕೊಳ್ತಿದ್ದಾರೆ. ಕೆಲ ಸಿನಿಮಾಗಳ ಸೋಲಿನ ನಂತರ ತಾವು ಗೆಲ್ಲಲೇಬೇಕು. ಗೆದ್ದು ಬೀಗಬೇಕು ಎಂದು ಪಣ ತೊಟ್ಟಿದ್ದಾರೆ. ಇದನ್ನೂ ಓದಿ:ಲವರ್‌ಗಾಗಿ ಕವಿತೆ ಬರೆದ ‘ಗಟ್ಟಿಮೇಳ’ ನಟಿ ನಿಶಾ? ಹುಡುಗ ಯಾರು?

    ಸಾಮಾನ್ಯವಾಗಿ ಸಿನಿಮಾ ಹೀರೋಗಳು ತಮ್ಮ ಪಾತ್ರದ ಇಮೇಜ್ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ಅನೇಕ ಹೀರೋಗಳು ಈಗಾಗಲೇ ಪೊಲೀಸ್ ಪಾತ್ರ ಮಾಡಿ ಮಿಂಚಿದ್ದಾರೆ. ಆದರೆ ಆ ಎಲ್ಲ ಪಾತ್ರಗಳು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಪಾತ್ರಗಳೇ ಆಗಿರುತ್ತವೆ. ಕಾನ್ಸ್‌ಟೇಬಲ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದಾಗ ಕೆಲವು ಹೀರೋಗಳು ಒಪ್ಪಿಕೊಳ್ಳದೇ ಇರಬಹುದು. ಆದರೆ ನಾಗ ಚೈತನ್ಯ ಅವರು ಈ ಪಾತ್ರವನ್ನು ಇಷ್ಟಪಟ್ಟು ನಟಿಸಿದ್ದಾರೆ. ಇಮೇಜ್‌ಗಿಂತ ಪಾತ್ರ, ಕಥೆಗೆ ಒತ್ತು ನೀಡಿದ್ದಾರೆ.

    ಕಾನ್ಸ್‌ಟೇಬಲ್ ಪಾತ್ರ ಮಾಡುವಾಗ ನಾಗ ಚೈತನ್ಯ ಅವರು ಕಥೆಗೆ ಅವರು ಹೆಚ್ಚು ಮಹತ್ವ ನೀಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ಗೆ ಹೆಚ್ಚು ಅಧಿಕಾರ ಇರುವುದಿಲ್ಲ. ಅಂಥ ಪಾತ್ರವನ್ನು ‘ಕಸ್ಟಡಿ’ ಚಿತ್ರದಲ್ಲಿ ಹೀರೋ ರೀತಿ ತೋರಿಸುತ್ತಿರುವುದು ವಿಶೇಷ. ಚಿತ್ರದ ದ್ವಿತೀಯಾರ್ಧದಲ್ಲಿ ಈ ಪಾತ್ರ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆಯಂತೆ. ಆಗ ಪ್ರೇಕ್ಷಕರಿಗೆ ಟ್ವಿಸ್ಟ್ ಸಿಗಲಿದೆ. ಈ ಎಲ್ಲಾ ಕಾರಣದಿಂದ ನಾಗ ಚೈತನ್ಯ ಅವರು ಕಾನ್ಸ್‌ಟೇಬಲ್ ಪಾತ್ರವನ್ನು ಒಪ್ಪಿಕೊಂಡು ನಟಿಸಿದ್ದಾರೆ. ಮೇ 12ರಂದು ವೆಂಕಟ್ ಪ್ರಭು ನಿರ್ದೇಶನದ ‘ಕಸ್ಟಡಿ’ ಸಿನಿಮಾ ತೆರೆಗೆ ಬಂದಿದೆ.

     

    View this post on Instagram

     

    A post shared by Chay Akkineni (@chayakkineni)

    ನಾಗಚೈತನ್ಯಗೆ ನಾಯಕಿಯಾಗಿ ಕೃತಿ ಶೆಟ್ಟಿ ನಟಿಸಿದ್ದಾರೆ. ಚೈ ಮುಂದೆ ಅರವಿಂದ್ ಸ್ವಾಮಿ ವಿಲನ್ ಆಗಿ ಅಬ್ಬರಿಸಿದ್ದಾರೆ. ನಟಿ ಪ್ರಿಯಾಮಣಿ (Priyamani), ಶರತ್ ಕುಮಾರ್, ಸಂಪತ್ ರಾಜ್, ಪ್ರೇಮ್‌ಜಿ ಸೇರಿದಂತೆ ಹಲವರು ನಟಿಸಿದ್ದಾರೆ.

  • ಮಾಜಿ ಪತ್ನಿ ಜೊತೆಗಿನ ಡಿವೋರ್ಸ್‌ ನಿರ್ಧಾರದ ಬಗ್ಗೆ ನಾಗಚೈತನ್ಯಗೆ ಇದ್ಯಾ ಬೇಸರ?

    ಮಾಜಿ ಪತ್ನಿ ಜೊತೆಗಿನ ಡಿವೋರ್ಸ್‌ ನಿರ್ಧಾರದ ಬಗ್ಗೆ ನಾಗಚೈತನ್ಯಗೆ ಇದ್ಯಾ ಬೇಸರ?

    ಟಾಲಿವುಡ್‌ನ ಬೆಸ್ಟ್ ಜೋಡಿ ಎಂದೇ ಖ್ಯಾತಿ ಗಳಿಸಿದ್ದ ಸಮಂತಾ- ನಾಗ್‌ಚೈತನ್ಯ (Nagachaitanya) ಡಿವೋರ್ಸ್ ಪಡೆದುಕೊಳ್ಳುವ ಮೂಲಕ ಶಾಕ್ ನೀಡಿದ್ದರು. ಡಿವೋರ್ಸ್ ಪಡೆದು ಒಂದು ವರ್ಷ ಕಳೆದರೂ ತವರ ಬಗ್ಗೆ ಗಾಸಿಪ್ ಹಬ್ಬೋದು ಮಾತ್ರ ಕಮ್ಮಿಯಾಗಿಲ್ಲ. ಇದೀಗ ಸಮಂತಾ (Samantha) ಜೊತೆಗಿನ ಡಿವೋರ್ಸ್ (Divorce) ನಿರ್ಧಾರದ ಬಗ್ಗೆ ಬೇಸರವಿದ್ಯಾ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.

    ಸ್ಯಾಮ್- ನಾಗ್ ಅವರ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ತಮ್ಮ ತಮ್ಮ ಸಿನಿಮಾ ಕೆಲಸಗಳತ್ತ ಬ್ಯುಸಿಯಾಗಿದ್ದಾರೆ. ನಾಗಚೈತನ್ಯ ಸಿನಿಮಾ- ಹೊಸ ಮನೆ ಶುಭಾರಂಭ, ಶೋಭಿತಾ ಜೊತೆ ಡೇಟಿಂಗ್ ಅಂತಾ ಸುದ್ದಿಯಲ್ಲಿದ್ದಾರೆ. ಸಮಂತಾ ಬಾಲಿವುಡ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇದನ್ನೂ ಓದಿ:ವಿಧಾನಸಭೆ ಚುನಾವಣೆ 2023: ಸುದೀಪ್ ರೋಡ್ ಶೋ ಮತ್ತೆ ರದ್ದು

    ನಟ ನಾಗಚೈತನ್ಯ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಹಲವು ವಿಚಾರಗಳ ಬಗ್ಗೆ ಹಂಚಿಕೊಂಡಿದ್ದಾರೆ. ನಿಮ್ಮ ಜೀವನದ ಯಾವ ನಿರ್ಧಾರದ ಬಗ್ಗೆ ವಿಷಾದವಿದೆ (Regret) ಎಂದು ಕೇಳಲಾಗಿದೆ.

    ನನ್ನ ಜೀವನದ ಯಾವುದೇ ನಿರ್ಧಾರದ ಬಗ್ಗೆ ನನಗೆ ಬೇಸರವಿಲ್ಲ. ಎಲ್ಲವೂ ಒಂದು ರೀತಿಯ ಪಾಠ ಎಂದು ಹೇಳಿದ್ದಾರೆ. ನಾಗ್ ಉತ್ತರಕ್ಕೆ ಫ್ಯಾನ್ಸ್ ಬಗೆ ಬಗೆಯ ಕಾಮೆಂಟ್ ಹಾಕಿದ್ದಾರೆ. ಸಮಂತಾ ಜೊತೆಗಿನ ಡಿವೋರ್ಸ್ಗೆ ವಿಷಾದವಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

  • ಮಾಜಿ ಪತಿ ಕುಟುಂಬದ ಜೊತೆ ಸಮಂತಾ ಒಡನಾಟ.!

    ಮಾಜಿ ಪತಿ ಕುಟುಂಬದ ಜೊತೆ ಸಮಂತಾ ಒಡನಾಟ.!

    ಸೌತ್ ನಟಿ ಸಮಂತಾ (Samantha) ಅವರು ನಾಗಚೈತನ್ಯ (Nagachaitanya) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿ ಒಂದೂವರೆ ವರ್ಷ ಕಳೆದಿದೆ. ಈವರೆಗೂ ಇಬ್ಬರ ಡಿವೋರ್ಸ್‌ಗೆ (Divorce) ಕಾರಣ ಏನು ಎಂಬುದು ಸೀಕ್ರೆಟ್ ಆಗಿಯೇ ಇದೆ. ಸಂಬಂಧ ಕಳೆದುಕೊಂಡರು ಕೂಡ ಮಾಜಿ ಪತಿಯ ಕುಟುಂಬದ ಜೊತೆ ಸ್ಯಾಮ್‌ಗೆ ಒಡನಾಟವಿದೆ. ಮಾಜಿ ಪತಿಯ ಕುಟುಂಬದ ಮೇಲಿನ ಪ್ರೀತಿ ಸ್ಯಾಮ್‌ಗೆ ಕಮ್ಮಿಯಾಗಿಲ್ಲ. ಬಾಮೈದ ಬರ್ತ್‌ಡೇಗೆ ಸಮಂತಾ ಶುಭಕೋರಿದ್ದಾರೆ.

    ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಎರಡು ಕುಟುಂಬವನ್ನು ಒಪ್ಪಿಸಿ ಸಮಂತಾ- ನಾಗಚೈತನ್ಯ ಅದ್ದೂರಿಯಾಗಿ ಮದುವೆಯಾಗಿದ್ದರು. ಆದರೆ ಅವರ ದಾಂಪತ್ಯ ನಾಲ್ಕೇ ವರ್ಷಕ್ಕೆ ಬ್ರೇಕ್ ಬಿತ್ತು. ಸದ್ಯ ಇಬ್ಬರು ತಮ್ಮ ತಮ್ಮ ಸಿನಿಮಾಗಳತ್ತ ಬ್ಯುಸಿಯಾಗಿದ್ದಾರೆ. ಜೊತೆಗೆ ಆಗಾಗ ತಮ್ಮ ಖಾಸಗಿ ವಿಚಾರವಾಗಿ ಸದ್ದು ಮಾಡುತ್ತಾರೆ.

    ಅಖಿಲ್ ಅಕ್ಕಿನೇನಿ (Akhil Akkineni) ಅವರಿಗೆ ಈಗ 29 ವರ್ಷ ವಯಸ್ಸು. ಶನಿವಾರ (ಏಪ್ರಿಲ್ 08) ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆ ಪ್ರಯುಕ್ತ ಅವರ ಹೊಸ ಸಿನಿಮಾ ‘ಏಜೆಂಟ್’ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸ್ನೇಹಿತರು, ಅಭಿಮಾನಿಗಳು, ಸೆಲೆಬ್ರಿಟಿಗಳು ಅಖಿಲ್‌ಗೆ ಶುಭಾಶಯ ಕೋರಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ಸಮಂತಾ ಕೂಡ ಅಖಿಲ್‌ಗೆ ಶುಭ ಹಾರೈಸಿದ್ದಾರೆ. `ಏಜೆಂಟ್’ (Agent) ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಅವರು ವಿಶ್ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ಉಪಸ್ಥಿತಿಗೆ ಬೆಲೆ ಕೊಡುವವರನ್ನು ಬಿಟ್ಟೋಗ್ಬೇಡಿ-ರಾಧಿಕಾ ಪಂಡಿತ್ ಹಿಂಗ್ಯಾಕಂದ್ರು?

    ಸೌತ್ ಬ್ಯೂಟಿ ಸಮಂತಾ, ಯಶೋದ ಸೂಪರ್ ಸಕ್ಸಸ್ ನಂತರ ‘ಶಾಕುಂತಲಂ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಏ.14ಕ್ಕೆ ಸಿನಿಮಾ ತೆರೆಗೆ ಅಪ್ಪಳಿಸುತ್ತಿದೆ. ಸಮಂತಾ ಶಾಕುಂತಲೆಯಾಗಿ ಬರುತ್ತಿದ್ದಾರೆ.