Tag: Nagachaitanya

  • ಒಟಿಟಿಗೆ ಭಾರೀ ಮೊತ್ತಕ್ಕೆ ಸೇಲ್ ಆಯ್ತು ನಾಗಚೈತನ್ಯ, ಸಾಯಿ ಪಲ್ಲವಿ ಸಿನಿಮಾ

    ಒಟಿಟಿಗೆ ಭಾರೀ ಮೊತ್ತಕ್ಕೆ ಸೇಲ್ ಆಯ್ತು ನಾಗಚೈತನ್ಯ, ಸಾಯಿ ಪಲ್ಲವಿ ಸಿನಿಮಾ

    ತೆಲುಗಿನ ನಟ ನಾಗಚೈತನ್ಯ (Nagachaitanya) ಮತ್ತು ಸಾಯಿ ಪಲ್ಲವಿ (Sai Pallavi) ಜೋಡಿ ಲವ್ ಸ್ಟೋರಿ ಚಿತ್ರದ ನಂತರ ಮತ್ತೆ ಒಂದಾಗಿದ್ದಾರೆ. ‘ತಾಂಡೇಲ್’ (Thandel Film) ಚಿತ್ರದ ಮೂಲಕ ಮತ್ತೆ ಹೊಸ ಪ್ರೇಮ ಕಹಾನಿ ಹೇಳಲು ರೆಡಿಯಾಗಿದ್ದಾರೆ. ಈ ಸಿನಿಮಾ ರಿಲೀಸ್‌ಗೂ ಮುನ್ನವೇ ಭಾರೀ ಮೊತ್ತಕ್ಕೆ ಒಟಿಟಿಗೆ ಸೇಲ್ ಆಗಿದೆ.

    ನಾಗಚೈತನ್ಯ ಕೆರಿಯರ್‌ನಲ್ಲಿ ಮೊದಲ ಬಾರಿಗೆ ದುಬಾರಿ ಮೊತ್ತಕ್ಕೆ ಸಿನಿಮಾ ಒಟಿಟಿಗೆ ಮಾರಾಟವಾಗಿದೆ. ಬಹುಭಾಷೆಗಳಲ್ಲಿ ‘ತಾಂಡೇಲ್’ ಚಿತ್ರದ ಒಟಿಟಿ ರೈಟ್ಸ್ ಅನ್ನು ಖರೀದಿಸಿದೆ. 40 ಕೋಟಿ ರೂ.ಗೆ ಸಿನಿಮಾವನ್ನು ಖರೀದಿ ಮಾಡಲಾಗಿದೆ. ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಇದನ್ನೂ ಓದಿ:ವಿಲನ್ ಆಗಿ ಮತ್ತೆ ಕಿರುತೆರೆಗೆ ಕಾವ್ಯಾ ಶಾಸ್ತ್ರಿ ಎಂಟ್ರಿ

    ನಿರ್ದೇಶಕ ಚಂದು ಮಾಂಡೇಟಿ ನಿರ್ದೇಶನದ ‘ತಾಂಡೇಲ್’ ಸಿನಿಮಾ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇದೇ ಡಿಸೆಂಬರ್‌ನಲ್ಲಿ ಕನ್ನಡ, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ರಿಲೀಸ್‌ ಆಗಲಿದೆ.

    ‘ತಾಂಡೇಲ್’ ಸಿನಿಮಾ ಆ್ಯಕ್ಷನ್ ಕಮ್ ಲವ್ ಸ್ಟೋರಿ ಸಿನಿಮಾವಾಗಿದ್ದು, ವಿಭಿನ್ನ ಕಥೆ ಮೂಲಕ ನಾಗಚೈತನ್ಯ, ಸಾಯಿ ಪಲ್ಲವಿ ಬರುತ್ತಿದ್ದಾರೆ. ಬನ್ನಿ ವಾಸು ನಿರ್ಮಾಣ ಮಾಡಿದ್ದಾರೆ.

  • ಮತ್ತೆ ಶೋಭಿತಾ ಜೊತೆ ತಗ್ಲಾಕೊಂಡ ನಾಗಚೈತನ್ಯ- ಡೇಟಿಂಗ್ ಸುದ್ದಿಗೆ ಸಿಕ್ತು ಸಾಕ್ಷಿ

    ಮತ್ತೆ ಶೋಭಿತಾ ಜೊತೆ ತಗ್ಲಾಕೊಂಡ ನಾಗಚೈತನ್ಯ- ಡೇಟಿಂಗ್ ಸುದ್ದಿಗೆ ಸಿಕ್ತು ಸಾಕ್ಷಿ

    ಸೌತ್ ಸ್ಟಾರ್ ನಟಿ ಸಮಂತಾ (Samantha) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಶೋಭಿತಾ (Sobhita Dhulipala) ಜೊತೆ ಅಕ್ಕಿನೇನಿ ನಾಗಚೈತನ್ಯ (Nagachaitanya) ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಈಗ ಮತ್ತೆ ಇಬ್ಬರೂ ಒಟ್ಟಿಗೆ ಓಡಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಮತ್ತೆ ನಟಿ ಜೊತೆ ನಾಗಚೈತನ್ಯ ತಗ್ಲಾಕೊಂಡಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಆರುಷಿ ಶರ್ಮಾ

    ಇತ್ತೀಚೆಗೆ ನಾಗಪುರದ ತಿಪೇಶ್ವರ್ ವನ್ಯಜೀವಿಧಾಮಕ್ಕೆ ಶೋಭಿತಾ ಭೇಟಿ ನೀಡಿದ್ದರು. ಇದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ಮಾಡಿದ್ದರು. ಇದರಲ್ಲಿ ಅವರು ಕಾಡು ಸುತ್ತಾಡುತ್ತಿರುವ ಫೋಟೋ ಇದೆ. ಅದೇ ರೀತಿ ನಾಗ ಚೈತನ್ಯ ಕೂಡ ಒಂದು ಫೋಟೋ ಪೋಸ್ಟ್ ಮಾಡಿದ್ದು, ಕಾಡಿನ ರೀತಿಯ ಬ್ಯಾಕ್‌ಗ್ರೌಂಡ್ ಇದೆ. ಇದರಿಂದ ಇಬ್ಬರೂ ಒಂದೇ ಕಡೆಯಲ್ಲಿ ಸುತ್ತಾಡುತ್ತಿದ್ದಾರೆ ಎಂದು ರ‍್ಚೆಯಾಗುತ್ತಿದೆ. ಕಾಡು ಮೇಡು ಅಂತ ಇಬ್ಬರೂ ಸುತ್ತಾಟದಲ್ಲಿ ಬ್ಯುಸಿಯಾಗಿದ್ದಾರೆ.

     

    View this post on Instagram

     

    A post shared by Sobhita (@sobhitad)

    ಕೆಲ ತಿಂಗಳುಗಳ ಹಿಂದೆ ನಾಗಚೈತನ್ಯ- ನಟಿ ಶೋಭಿತಾ ಲಂಡನ್‌ಗೆ ತೆರಳಿದ್ದರು. ಅಲ್ಲಿ ಒಂದು ಹೋಟೆಲ್‌ನಲ್ಲಿ ಇವರು ಊಟಕ್ಕೆ ತೆರಳಿದ್ದರು. ಅಲ್ಲಿಯ ಶೆಫ್ ನಾಗ ಚೈತನ್ಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಹಿಂಭಾಗದಲ್ಲಿ ಶೋಭಿತಾ ಇದ್ದರು. ಇದರಿಂದ ಇವರ ಡೇಟಿಂಗ್ ವಿಷ್ಯ ಹೊರಬಿತ್ತು.

    ಡೇಟಿಂಗ್ ವಿಚಾರಕ್ಕೆ ಅದಷ್ಟೇ ಸಾಕ್ಷಿ ಸಿಕ್ಕಿದ್ದರೂ ಕೂಡ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಾ ಗಾಸಿಪ್‌ಗೆ ತೆರೆ ಎಳೆಯುತ್ತಿದ್ದಾರೆ. ಸದ್ದಿಲ್ಲದೇ ಇಬ್ಬರೂ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡ್ತಾರಾ? ಕಾಯಬೇಕಿದೆ.

  • ಅಮಾಯಕ ಗಂಡನಿಗೆ ಯಾಕೆ ಮೋಸ ಮಾಡಿದ್ರಿ ಎಂದವನಿಗೆ ತಕ್ಕ ಉತ್ತರ ಕೊಟ್ಟ ಸಮಂತಾ

    ಅಮಾಯಕ ಗಂಡನಿಗೆ ಯಾಕೆ ಮೋಸ ಮಾಡಿದ್ರಿ ಎಂದವನಿಗೆ ತಕ್ಕ ಉತ್ತರ ಕೊಟ್ಟ ಸಮಂತಾ

    ಟಾಲಿವುಡ್ (Tollywood) ನಟಿ ಸಮಂತಾ (Samantha) ಇದೀಗ ಗಟ್ಟಿಗಿತ್ತಿಯಾಗಿ ಇತರೆ ಮಹಿಳೆಯರಿಗೂ ಮಾದರಿಯಾಗಿದ್ದಾರೆ. ಸಿನಿಮಾ ಮಾತ್ರವಲ್ಲ, ವೈಯಕ್ತಿಕ ವಿಚಾರವಾಗಿ ಸಮಂತಾ ಬೋಲ್ಡ್ ಡಿಸಿಷನ್ ತೆಗೆದುಕೊಂಡು ಮುನ್ನುಡೆಯುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ವಿಚಾರದಲ್ಲಿ ಕೆಣಕಿದವನಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

    ಆರೋಗ್ಯದ ವಿಚಾರವಾಗಿ ದೈನಂದಿನ ಬದುಕಿನ ಬಗ್ಗೆ ಕೆಲವು ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ. ಅದರ ಕಾಮೆಂಟ್ ಬ್ಯಾಕ್ಸ್‌ನಲ್ಲಿ ನಿಮ್ಮ ಅಮಾಯಕ ಪತಿಗೆ (Nagachaitanya) ಯಾಕೆ ಮೋಸ ಮಾಡಿದ್ರಿ ಎಂದು ಸಮಂತಾಗೆ ನೆಟ್ಟಿಗನೊಬ್ಬ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ತಕ್ಕ ಉತ್ತರ ನೀಡುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.

    ‘ಕ್ಷಮಿಸಿ’ ಇಂತಹ ವಿಚಾರಗಳು ನಿಮಗೆ ಬೇಕಾಗಿಲ್ಲ. ಹೇಳಿದರೆ ನಿಮಗೆ ಅರ್ಥವಾಗದೇ ಇರಬಹುದು. ವಿಶ್ ಯೂ ವೆಲ್ ಎಂದು ಸಮಂತಾ ರಿಪ್ಲೈ ನೀಡಿದ್ದಾರೆ. ಬಳಿಕ ಸ್ಯಾಮ್‌ಗೆ ಬೆಂಬಲಿಸಿ ಫ್ಯಾನ್ಸ್, ಇಂತಹ ಪ್ರಶ್ನೆಗಳನ್ನು ಕೇಳುವುದು ಸೂಕ್ತವಲ್ಲ ಎಂದು ನೆಟ್ಟಿಗನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಅಂದಹಾಗೆ, ಸಮಂತಾ ಬಾಲಿವುಡ್ ಸಿನಿಮಾ ಜೊತೆ ಅಲ್ಲು ಅರ್ಜುನ್ ಜೊತೆ ಹೊಸ ಸಿನಿಮಾ, ವಿಜಯ್ ದಳಪತಿ ಜೊತೆ ಹೊಸ ಸಿನಿಮಾವನ್ನು ಮಾಡಲು ಒಪ್ಪಿಕೊಂಡಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

  • 10 ವರ್ಷಗಳ ನಂತರ ಮತ್ತೆ ಒಂದಾದ ‘ಒಕಾ ಲೈಲಾ ಕೋಸಂ’ ಜೋಡಿ

    10 ವರ್ಷಗಳ ನಂತರ ಮತ್ತೆ ಒಂದಾದ ‘ಒಕಾ ಲೈಲಾ ಕೋಸಂ’ ಜೋಡಿ

    ರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಮತ್ತೆ ಟಾಲಿವುಡ್‌ಗೆ (Tollywood) ಮರಳಿದ್ದಾರೆ. ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಚಿತ್ರದಿಂದ ಹೊರಬಂದ್ಮೇಲೆ, ಬಾಲಿವುಡ್‌ನತ್ತ ಮುಖ ಮಾಡಿದ್ದ ನಟಿ ಮತ್ತೆ ತೆಲುಗಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. 10 ವರ್ಷಗಳ ನಂತರ ಮತ್ತೆ ‘ಒಕಾ ಲೈಲಾ ಕೋಸಂ’ ಜೋಡಿ ಒಂದಾಗುತ್ತಿದೆ.

    ಸಿನಿಮಾ ಕೆರಿಯರ್ ಶುರು ಮಾಡಿದ ನಟನ ಜೊತೆಯೇ ಪೂಜಾ ಹೆಗ್ಡೆ ರೊಮ್ಯಾನ್ಸ್ ಮಾಡೋಕೆ ಶುರು ಮಾಡಿದ್ದಾರೆ. ‘ಒಕಾ ಲೈಲಾ ಕೋಸಂ’ (Oka Laila Kosam) ಚಿತ್ರದಲ್ಲಿ ನಾಗಚೈತನ್ಯಗೆ (Nagachaitanya) ನಾಯಕಿಯಾಗಿ ಪೂಜಾ ಹೆಗ್ಡೆ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಈಗ 10 ವರ್ಷಗಳ ನಂತರ ನಾಗಚೈತನ್ಯ ನಟನೆಯ ಹೊಸ ಚಿತ್ರಕ್ಕೆ ಕುಡ್ಲದ ಬೆಡಗಿ ನಾಯಕಿಯಾಗಿದ್ದಾರೆ.

    ‘ವಿರೂಪಾಕ್ಷ’ ಡೈರೆಕ್ಟರ್ ಕಾರ್ತಿಕ್ ವರ್ಮಾ ದಂಡು ನಿರ್ದೇಶನದ ಹೊಸ ಸಿನಿಮಾದಲ್ಲಿ ನಾಗಚೈತನ್ಯ ನಾಯಕನಾಗಿ ನಟಿಸಿದ್ದಾರೆ. ಆ್ಯಕ್ಷನ್ ಜೊತೆ ಲವ್ ಸ್ಟೋರಿ ಸಿನಿಮಾ ತೋರಿಸೋಕೆ ರೆಡಿಯಾಗಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲು ಯೋಚಿಸಿದ್ದಾರೆ. ಹೊಸ ಕಥೆಯಲ್ಲಿ ನಾಗಚೈತನ್ಯ- ಪೂಜಾ ಹೆಗ್ಡೆ ಜೋಡಿಯನ್ನು ನೋಡಲು ಫ್ಯಾನ್ಸ್‌ ಕ್ಯೂರಿಯಸ್‌ ಆಗಿದ್ದಾರೆ. ಇದನ್ನೂ ಓದಿ:ಡಿಸಾರ್ಜ್ ಆದ ಶಿವಣ್ಣ: ನಾಗವಾರದ ನಿವಾಸಕ್ಕೆ ಆಗಮನ

    ಅಂದಹಾಗೆ, ಪೂಜಾ ಹೆಗ್ಡೆ ಕೈಯಲ್ಲಿ ಸುನೀಲ್ ಶೆಟ್ಟಿ ಪುತ್ರನ ಜೊತೆಗಿನ ಹೊಸ ಸಿನಿಮಾ, ಶಾಹಿದ್ ಕಪೂರ್ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಬಾಲಿವುಡ್ ಪ್ರಾಜೆಕ್ಟ್‌ಗಳಿವೆ.

  • ಡಿವೋರ್ಸ್ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಮಂತಾ- ನಾಗಚೈತನ್ಯ

    ಡಿವೋರ್ಸ್ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಮಂತಾ- ನಾಗಚೈತನ್ಯ

    ಟಾಲಿವುಡ್‌ನ ಸೆನ್ಸೇಷನ್ ಜೋಡಿಯಾಗಿದ್ದ ಸಮಂತಾ- ನಾಗಚೈತನ್ಯ (Nagachaitanya) ಡಿವೋರ್ಸ್ ಪಡೆಯುವ ಮೂಲಕ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದರು. ಇದೀಗ ಡಿವೋರ್ಸ್ ಬಳಿಕ ಬರೋಬ್ಬರಿ ಎರಡೂವರೆ ವರ್ಷದ ನಂತರ ಒಂದೇ ವೇದಿಕೆಯಲ್ಲಿ ಸಮಂತಾ- ನಾಗಚೈತನ್ಯ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳು ನಟಿ ಮೀತಾ ರಘುನಾಥ್

     

    View this post on Instagram

     

    A post shared by Chay Akkineni (@nagachaitanyaoffl)

    ಬಹುಭಾಷಾ ಕಲಾವಿದರು ಮತ್ತು ತಂತ್ರಜ್ಞರು ಈ ಮೆಗಾ ಇವೆಂಟ್‌ಗಳಲ್ಲಿ ಭಾಗವಹಿಸಿದ್ದರು. ಕರಣ್ ಜೋಹರ್ (Karan Johar) ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಭಾಗವಹಿಸಿದ್ದರು. ಸಮಂತಾ (Samantha) ನಟಿಸಿದ ‘ಸಿಟಾಡೆಲ್’ ವೆಬ್ ಸರಣಿಯನ್ನು ಒಟಿಟಿ ಸಂಸ್ಥೆಯೊಂದು ನಿರ್ಮಾಣ ಮಾಡಿದೆ. ಭಾರತ ವರ್ಷನ್‌ನ ಈ ವೆಬ್ ಸೀರಿಸ್ ಅನ್ನು ‘ಫ್ಯಾಮಿಲಿ ಮ್ಯಾನ್’ (Familyman 2) ಸೀರಿಸ್‌ನ ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದವರೇ ಸಿಟಾಡೆಲ್‌ ಕೂಡ ನಿರ್ದೇಶನ ಮಾಡಿದ್ದಾರೆ. ಹೀಗಾಗಿ ಸಮಂತಾ ಈ ಕಾರ್ಯಕ್ರಮದ ಭಾಗವಾಗಿದ್ದರು.

     

    View this post on Instagram

     

    A post shared by Samantha (@samantharuthprabhuoffl)

    ಇನ್ನೊಂದು ಕಡೆ ನಾಗಚೈತನ್ಯ ನಟಿಸಿದ ‘ಧೂತ’ ವೆಬ್ ಸೀರಿಸ್‌ಗೆ ದೊಡ್ಡ ಯಶಸ್ಸು ಸಿಕ್ಕಿತ್ತು. ಹೀಗಾಗಿ ಅವರನ್ನು ಆಹ್ವಾನ ಮಾಡಲಾಗಿತ್ತು. ಈಗ ಒಂದೇ ಕಾರ್ಯಕ್ರಮದಲ್ಲಿ ಮಾಜಿ ದಂಪತಿ ಕಾಣಿಸಿಕೊಂಡಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಹಳೆಯ ಮುನಿಸೆಲ್ಲಾ ಮರೆತು ಮತ್ತೆ ಈ ಜೋಡಿ ಒಂದಾಗಬಾರದಾ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಇದನ್ನೂ ಓದಿ:ಮಹಿಳಾ ಪ್ರಧಾನ ಸಿನಿಮಾದಲ್ಲಿ ಕ್ರೇಜಿಸ್ಟಾರ್- ‘ತಪಸ್ಸಿ’ ಚಿತ್ರಕ್ಕೆ ವಿ.ರವಿಚಂದ್ರನ್ ಸಾಥ್‌


    2021ರಲ್ಲಿ ಸಮಂತಾ-ನಾಗಚೈತನ್ಯ ಡಿವೋರ್ಸ್ ಕುರಿತು ಅಧಿಕೃತವಾಗಿ ಅನೌನ್ಸ್ ಮಾಡಿದ್ದರು. ಕೆಲ ಮನಸ್ತಾಪಗಳಿಂದ ದಾಂಪತ್ಯ ಜೀವನಕ್ಕೆ ಇಬ್ಬರು ಗುಡ್‌ ಬೈ ಹೇಳಿದ್ದರು. ಅದಾದ ನಂತರ ಇಬ್ಬರೂ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಒಟ್ನಲ್ಲಿ ಈ ಒಂದು ಕಾರ್ಯಕ್ರಮ ಮಾಜಿ ದಂಪತಿಯನ್ನು ಒಟ್ಟು ಗೂಡಿಸಿರೋದು ಸದ್ಯ ಭಾರೀ ಸುದ್ದಿ ಮಾಡುತ್ತಿದೆ.

  • ಸಮಂತಾ ಡಿವೋರ್ಸ್‌ಗೆ ಆಪ್ತ ಸ್ನೇಹಿತೆನೇ ಕಾರಣನಾ?

    ಸಮಂತಾ ಡಿವೋರ್ಸ್‌ಗೆ ಆಪ್ತ ಸ್ನೇಹಿತೆನೇ ಕಾರಣನಾ?

    ಸೌತ್ ನಟಿ ಸಮಂತಾ (Samantha) ಅವರು ಡಿವೋರ್ಸ್ (Divorce) ಆದ್ಮೇಲೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸದಾ ಒಂದಲ್ಲಾ ಒಂದು ವಿಷ್ಯವಾಗಿ ಪುಷ್ಪ ನಟಿ ಸುದ್ದಿಯಲ್ಲಿದ್ದಾರೆ. ಈಗ ಸಮಂತಾ ಡಿವೋರ್ಸ್‌ಗೆ ಇವರೇ ಕಾರಣ ಅಂತ ಸ್ಯಾಮ್ ಬೆಸ್ಟ್ ಫ್ರೆಂಡ್ ಮೇಘನಾ ಕಡೆ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ಹೀಗೊಂದು ಸುದ್ದಿ ಟಾಲಿವುಡ್‌ನಲ್ಲಿ ಭಾರೀ ಚರ್ಚೆಯಾಗುತ್ತಿದೆ.

    ನನ್ನ ಎಲ್ಲಾ ಉತ್ತಮ ನಿರ್ಧಾರಗಳಿಗೆ ಹಿಂದೊಂದು ಮುಖವಿದೆ ಎಂದು ಕ್ಯಾಪ್ಷನ್ ನೀಡಿ, ಆಪ್ತ ಸ್ನೇಹಿತೆ ಮೇಘನಾ ಜೊತೆಯಿರುವ ಫೋಟೋವನ್ನು ಸಮಂತಾ ಶೇರ್ ಮಾಡಿದ್ದಾರೆ. ಈ ಪೋಸ್ಟ್ ಹಂಚಿಕೊಳ್ತಿದ್ದಂತೆ, ನಿಮ್ಮ ಡಿವೋರ್ಸ್‌ಗೆ ಮೇಘನಾನೇ ಕಾರಣನಾ? ಅಂತ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.

     

    View this post on Instagram

     

    A post shared by Samantha (@samantharuthprabhuoffl)

    ಅಷ್ಟಕ್ಕೂ ಮೇಘನಾ ಯಾರು? ಸಮಂತಾ ಅವರ ಆಪ್ತ ಸ್ನೇಹಿತೆ ಮೇಘನಾ ವಿನೋದ್ ಅವರು ಮಲೇಷ್ಯಾದಲ್ಲಿ ನೆಲೆಸಿದ್ದಾರೆ. ಸ್ಯಾಮ್- ಮೇಘನಾ ಹಲವು ವರ್ಷಗಳಿಂದ ಫ್ರೆಂಡ್ಸ್. ಸಮಂತಾ ನೋವು, ನಲಿವಿಗೆ ಮೇಘನಾ ಜೊತೆಯಾಗಿ ನಿಂತಿದ್ದಾರೆ.  ಸದ್ಯ ಸ್ಯಾಮ್‌ ಪೋಸ್ಟ್‌ಗೆ ನಿಮ್ಮಿಂದಲೇ ಸಮಂತಾಗೆ ಡಿವೋರ್ಸ್ ಆಯ್ತಾ? ಎಂದೆಲ್ಲಾ ನೆಟ್ಟಿಗರು ಕೇಳಿದ್ದಾರೆ. ಇದನ್ನೂ ಓದಿ:ಧನ್ಯವಾದ ತಿಳಿಸಿದ ನಟ ದರ್ಶನ್

    ವಿವಾದ, ಅನಾರೋಗ್ಯ, ಯಶಸ್ಸು ಎಲ್ಲವೂ ಅನುಭವಿಸಿರುವ ಜೀವ ಸಮಂತಾ. ನಾಗಚೈತನ್ಯ (Nagachaitanya) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಎಲ್ಲಾ ವಿಚಾರಕ್ಕೂ ಸಮಂತಾ ಕಡೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ಸಹವಾಸವೇ ಬೇಡ ಅಂತ ವೃತ್ತಿರಂಗದಲ್ಲಿ ಬ್ಯುಸಿಯಾದರು. ‘ಪುಷ್ಪ’ ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ಸಮಂತಾ ಲಕ್ ಬದಲಾಯ್ತು.

    ಆದರೆ ‘ಯಶೋದ’ ಮತ್ತು ‘ಖುಷಿ’ (Kushi) ಸಿನಿಮಾ ಆದ್ಮೇಲೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರಲಿಲ್ಲ. ಎರಡೂ ಹೀನಾಯವಾಗಿ ಸೋತ ಚಿತ್ರಗಳು. ಸೋಲಿನ ಹೊಡೆತಕ್ಕೆ ಅನಾರೋಗ್ಯದ ಆಘಾತ ಎರಡನ್ನೂ ಸಹಿಕೊಳ್ಳೋಕೆ ಸ್ಯಾಮ್‌ಗೆ 6 ತಿಂಗಳು ಹಿಡಿಯಿತು. ಕೆಲದಿನಗಳ ಹಿಂದೆ ನಟನೆಗೆ ಮರಳುವ ಸುದ್ದಿ ನೀಡಿದ್ದರು ಸಮಂತಾ. ಇದನ್ನೂ ಓದಿ:ರಾಕುಲ್ ಮದುವೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಶಿಲ್ಪಾ ಶೆಟ್ಟಿ ದಂಪತಿ

    ಬಣ್ಣ ಹಚ್ಚದೆ 6 ತಿಂಗಳು ಸಮಂತಾ ವನವಾಸ ಮುಗಿಸಿದ್ದಾರೆ. ಅಭಿಮಾನಿಗಳ ಕಮ್‌ಬ್ಯಾಕ್ ಪ್ರಶ್ನೆಗೆ ನಟಿ ವೀಡಿಯೋ ಮೂಲಕ ಗುಡ್ ನ್ಯೂಸ್ ಕೊಟಿದ್ದರು. ಮತ್ತೆ ಶೀಘ್ರದಲ್ಲೇ ಬಣ್ಣ ಹಚ್ಚುವ ಸಂದೇಶ ನೀಡಿದ್ದರು. ವೆಬ್‌ಸಿರೀಸ್‌ಗಳಲ್ಲಿ ಬ್ಯುಸಿ ಇದ್ದ ಸ್ಯಾಮ್ ಟಾಲಿವುಡ್‌ನಲ್ಲಿ ಹಲವು ಆಫರ್‌ಗಳಿಂದ ದೂರ ಉಳಿದಿದ್ದರು. ಇದೀಗ ಬಹಳ ಗ್ಯಾಪ್ ಆದ್ಮೇಲೆ ಬರುತ್ತಿರುವ ಸಮಂತಾ ರೀ ಎಂಟ್ರಿ ಹೇಗಿರುತ್ತೆ ಅನ್ನುವ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ.

    ಸದ್ಯ ಸಮಂತಾಗೆ ಟಾಲಿವುಡ್ ಮಾತ್ರವಲ್ಲ ಬಾಲಿವುಡ್‌ನಿಂದಲೂ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಹಾಗಾಗಿ ಸಮಂತಾ ಸಿನಿಮಾ ಮತ್ತು ಲುಕ್ ಹೇಗಿರಲಿದೆ ಎಂಬದನ್ನು ಕಾದುನೋಡಬೇಕಿದೆ.

  • 2ನೇ ಮದುವೆಗೆ ನಾಗಚೈತನ್ಯ ಸಿದ್ಧತೆ- ಹುಡುಗಿ ಯಾರು?

    2ನೇ ಮದುವೆಗೆ ನಾಗಚೈತನ್ಯ ಸಿದ್ಧತೆ- ಹುಡುಗಿ ಯಾರು?

    ಸೌತ್ ನಟ ನಾಗಚೈತನ್ಯ (Nagachaitanya) ಅವರು ಡಿವೋರ್ಸ್ ಬಳಿಕ ಸಿನಿಮಾಗಳತ್ತ ಹೆಚ್ಚು ಗಮನ ನೀಡುತ್ತಿದ್ದಾರೆ. ಸದ್ಯ ಸಮಂತಾ (Samantha) ಮಾಜಿ ಪತಿ ನಾಗಚೈತನ್ಯ ಅವರು 2ನೇ ಮದುವೆಗೆ ಸಜ್ಜಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹಾಗಾದ್ರೆ ನಾಗಾರ್ಜುನ ಮದುವೆಯಾಗುತ್ತಿರುವ ಹುಡುಗಿ ಯಾರು? ಎಂದು ಚರ್ಚೆಯಾಗುತ್ತಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

    ಸಮಂತಾ ಜೊತೆಗಿನ ದಾಂಪತ್ಯಕ್ಕೆ (Wedding) ಅಂತ್ಯ ಹಾಡಿ 2 ವರ್ಷಗಳಾಗಿದೆ. ವೃತ್ತಿರಂಗದಲ್ಲಿ ಇಬ್ಬರು ಬ್ಯುಸಿಯಾಗಿದ್ದಾರೆ. ಆಗಾಗ ನಾಗಚೈತನ್ಯ ಅವರು ಸಿನಿಮಾಗಿಂತ ವೈಯಕ್ತಿಕ ವಿಚಾರವಾಗಿ ಹೆಚ್ಚು ಸುದ್ದಿಯಾಗುತ್ತಾರೆ. ಈಗ 2ನೇ ಮದುವೆ ನಾಗಚೈತನ್ಯ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

    ನಾಗಾರ್ಜುನ (Nagarjuna) ಅವರು ಪುತ್ರನ ಮದುವೆಗೆ ಆಯ್ಕೆ ಮಾಡಿರುವ ಆ ಹುಡುಗಿ ಬೇರೆ ಯಾರೂ ಅಲ್ಲ. ನಾಗಾರ್ಜುನನ ಸೋದರ ಸಂಬಂಧಿಯಾಗಿದ್ದು, ಮದುವೆಗೆ ಸಕಲ ಸಿದ್ಧತೆ ನಡೆದಿದೆಯಂತೆ. ಸಮಂತಾ ಜೊತೆಗಿನ ಡಿವೋರ್ಸ್ ನಂತರ ನಾಗಚೈತನ್ಯ ಬಾಲಿವುಡ್‌ನ (Bollywood) ಶೋಭಿತಾ ದೂಳಿಪಾಲ ಅವರೊಂದಿಗೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಇದಲ್ಲದೇ ವಿದೇಶದಲ್ಲಿ ಡಿನ್ನರ್ ಡೇಟ್ ಮಾಡಿರುವ ಫೋಟೋ ಕೂಡ ಬಿಡುಗಡೆಯಾಗಿ ಸಂಚಲನ ಮೂಡಿಸಿತ್ತು. ಇದನ್ನೂ ಓದಿ:ಪ್ರಿಯಾಂಕ ಉಪೇಂದ್ರ ನಟನೆಯ ‘ಕಮರೊಟ್ಟು 2’ ಟ್ರೈಲರ್ ರಿಲೀಸ್

    ನಾಗಚೈತನ್ಯ ಕುಟುಂಬ ಮದುವೆ ಬಗ್ಗೆ ಮತ್ತು ಹುಡುಗಿ ಬಗ್ಗೆ ಅಧಿಕೃತವಾಗಿ ತಿಳಿಸುವವರೆಗೂ ಕಾದುನೋಡಬೇಕಿದೆ.

  • ಮತ್ತೆ ಜೊತೆಯಾಗ್ತಿದ್ದಾರೆ ನಾಗಚೈತನ್ಯ, ಸಮಂತಾ- ಸಿನಿಮಾಗಾಗಿ ಅಲ್ಲ!

    ಮತ್ತೆ ಜೊತೆಯಾಗ್ತಿದ್ದಾರೆ ನಾಗಚೈತನ್ಯ, ಸಮಂತಾ- ಸಿನಿಮಾಗಾಗಿ ಅಲ್ಲ!

    ಮಂತಾ (Samantha) ಮತ್ತು ನಾಗಚೈತನ್ಯ (Nagachaitanya) ಮತ್ತೆ ಒಂದಾಗುತ್ತಾರಾ? ಹಳೆಯ ನೋವನ್ನು ಮರೆತು ಕ್ಯಾಮೆರಾ ಮುಂದೆ ನಿಲ್ಲುತ್ತಾರಾ? ಯಾರು ಇವರನ್ನು ಜಂಟಿ ಮಾಡೋರು? ನಿಜ ಜೀವನದಲ್ಲಿ ಇವರು ಕೈ ಜೋಡಿಸುತ್ತಾರಾ? ಗೊತ್ತಿಲ್ಲ. ಆದರೆ ಹೀಗೊಂದು ಸುದ್ದಿ ಮಾತ್ರ ಟಾಲಿವುಡ್ (Tollywood) ಅಂಗಳದಲ್ಲಿ ಬಿರುಗಾಳಿ ಎಬ್ಬಿಸಿದೆ. ಏನಿದರ ಹಿಂದಿನ ಕಥನ? ಇಲ್ಲಿದೆ ಮಾಹಿತಿ.

    ಸಮಂತಾ ಈಗಿನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಯೋಸಿಟಿಸ್ ಖಾಯಿಲೆ ಇನ್ನೂ ದೂರವಾಗಿಲ್ಲ. ಹಾಗಿದ್ದರೂ ಉತ್ತಮ ಆರೋಗ್ಯಕ್ಕಾಗಿ ಏನೇನು ಬೇಕು ಎಲ್ಲವನ್ನೂ ಪಡೆದುಕೊಳ್ಳುತ್ತಿದ್ದಾರೆ. ಸಿನಿಮಾದಿಂದ ಸದ್ಯ ದೂರ ಇದ್ದಾರೆ. ಆದರೆ ಇವರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಇನ್ನೊಂದು ಸುದ್ದಿ ಟಾಲಿವುಡ್ ಅಂಗಳದಿಂದ ಬಂದಿದೆ. ಇಬ್ಬರೂ ಮತ್ತೆ ಬಣ್ಣದಲೋಕಕ್ಕಾಗಿ ಕೈ ಜೋಡಿಸಲಿದ್ದಾರೆ. ಹಾಗಂತ ಸುದ್ದಿ ಹಬ್ಬಿದೆ. ಇದನ್ನೂ ಓದಿ:ಅಯೋಧ್ಯೆಗೆ 2ನೇ ಬಾರಿ ಭೇಟಿ ಕೊಟ್ಟ ಬಿಗ್ ಬಿ

    ಆದರೆ ಇದು ಸಿನಿಮಾ ಅಲ್ಲ ಬದಲಿಗೆ ವೆಬ್ ಸರಣಿ (Web Series) ಎನ್ನುವುದು ಕುತೂಹಲ ಮೂಡಿಸಿದೆ. ಆ ಪ್ರಾಜೆಕ್ಟ್ ಹೆಸರು ಧೂತ. ನಾಗಚೈತನ್ಯ ಹೀರೋ. ಮೊದಲ ಭಾಗ ಹಿಟ್ ಆಗಿದೆ. ಎರಡನೇ ಭಾಗದಲ್ಲಿ ಸಮಂತಾ ಕೂಡ ಇರಲಿದ್ದಾರೆ ಎಂಬುದು ಸದ್ಯದ ಟಾಕ್. ಹಳೇ ಪತ್ನಿ ಜೊತೆ ಹೊಸ ಸಂಬಂಧ ಬೆಸೆದುಕೊಳ್ಳುತ್ತಾರಾ ನಾಗಚೈತನ್ಯ.

    ‘ಧೂತ’ (Dhootha) ವೆಬ್ ಸರಣಿಗೆ ವಿಕ್ರಮ್ ಇದರ ನಿರ್ದೇಶಕರಾಗಿದ್ದರು. ಮೊದಲ ಭಾಗ ಜನರಿಂದ ಮೆಚ್ಚುಗೆ ಪಡೆದಿತ್ತು. ಹೀಗಾಗಿಯೇ 2ನೇ ಭಾಗಕ್ಕೆ ಪಕ್ಕಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ನಿರ್ದೇಶಕ ವಿಕ್ರಮ್. ಇದರಲ್ಲಿ ಸಮಂತಾ ನಟಿಸಬೇಕು ಎನ್ನುವುದು ಇವರ ಉದ್ದೇಶ. ಆದರೆ ಅದು ಈಡೇರುತ್ತದಾ? ಕಾರಣ ಒಡೆದು ಹೋದ ಹೃದಯ ಅಷ್ಟು ಬೇಗ ಜಂಟಿ ಆಗಲ್ಲ. ಅದು ಎಲ್ಲರಿಗೂ ಗೊತ್ತು. ಹೀಗಿದ್ದರೂ ಡೈರೆಕ್ಟರ್ ವಿಕ್ರಮ್ (Vikram) ಸಮಂತಾ ಹಿಂದೆ ಬಿದ್ದಿದ್ದಾರೆ. ನೋಡ ನೋಡುತ್ತಲೇ ಇಬ್ಬರನ್ನೂ ಒಂದು ಮಾಡಲು ಸಜ್ಜಾಗಿದ್ದಾರೆ. ಸಮಂತಾ ಬಣ್ಣದ ಮೇಲಿನ ನಿಯತ್ತು ಇಟ್ಟು ಹಳೆಯ ಗಂಡನ ಜೊತೆ ಹೆಜ್ಜೆ ಹಾಕುತ್ತಾರಾ? ಸದ್ಯಕ್ಕೆ ಇದು ಉತ್ತರ ಇಲ್ಲದ ಪ್ರಶ್ನೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡಬೇಕಿದೆ.

  • ನಾಗಚೈತನ್ಯ ಜೊತೆ ಮತ್ತೆ ಒಂದಾಗುವ ಮುನ್ಸೂಚನೆ ಕೊಟ್ರಾ ಸಮಂತಾ

    ನಾಗಚೈತನ್ಯ ಜೊತೆ ಮತ್ತೆ ಒಂದಾಗುವ ಮುನ್ಸೂಚನೆ ಕೊಟ್ರಾ ಸಮಂತಾ

    ಟಾಲಿವುಡ್ ನಟಿ ಸಮಂತಾ (Samantha) ಅವರು ನಾಗಚೈತನ್ಯಗೆ (Nagachaitanya) ಡಿವೋರ್ಸ್ (Divorce) ಕೊಟ್ಟು 2 ವರ್ಷ ಕಳೆದರೂ ಕೂಡ ಅವರ ವೈಯಕ್ತಿಕ ವಿಚಾರ ಇನ್ನೂ ಚಾಲ್ತಿಯಲ್ಲಿದೆ. ಮೈ ಮೇಲಿನ ಮಾಜಿ ಗಂಡನ ಹೆಸರಿನ ಟ್ಯಾಟೂ ಅಳಿಸದ ಸಮಂತಾ ಹೊಸ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ಇದೀಗ ಸಮಂತಾ ಹೊಸ ಫೋಟೋಶೂಟ್‌ವೊಂದನ್ನ ಮಾಡಿಸಿದ್ದಾರೆ. ಗ್ಲ್ಯಾಮರಸ್ ಆಗಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಈ ಫೋಟೋದಲ್ಲಿ ಮಾಜಿ ಪತಿ ಚೈ ಹೆಸರಿನ ಟ್ಯಾಟೂ ಹೈಲೆಟ್ ಆಗಿದೆ. ನಟಿ ಇನ್ನೂ ಟ್ಯಾಟೂ ಅಳಿಸದೇ ಇರೋದನ್ನ ನೋಡಿ, ಈ ಜೋಡಿ ಮತ್ತೆ ಒಂದಾಗುತ್ತಾರಾ? ಇದು ಮುನ್ಸೂಚನೆ ಎಂದು ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಇದನ್ನೂ ಓದಿ:ವಿನಯ್‌ ವಿರುದ್ಧ ಧ್ವನಿ ಎತ್ತದ ನಮ್ರತಾಗೆ ಕಿಚ್ಚನ ಖಡಕ್‌ ಕ್ಲಾಸ್‌

     

    View this post on Instagram

     

    A post shared by Samantha (@samantharuthprabhuoffl)

    ಹಚ್ಚೆ ಕಾಣಿಸಿದರೂ ಡೋಂಟ್ ಕೇರ್ ಎನ್ನದೇ ಫೋಟೋಗೆ ಸಮಂತಾ ಪೋಸ್ ಕೊಟ್ಟಿರೋದು ನೋಡಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇಬ್ಬರು ಮುನಿಸು ಮರೆತು ಮತ್ತೆ ಒಂದಾದ್ರೆ ಖುಷಿ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್‌ ಮಾಡ್ತಿದ್ದಾರೆ.

    ‘ಖುಷಿ’ ಚಿತ್ರದ ಬಳಿಕ ಸಮಂತಾ, ಕೆರಿಯರ್ ಬ್ರೇಕ್ ಕೊಟ್ಟಿದ್ದಾರೆ. ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸ್ಯಾಮ್, ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಸ್ಯಾಮ್ ಮೈಮೇಲಿದ್ದ ಮಾಜಿ ಪತಿ ಹೆಸರು ಏನಾಯ್ತು- ಪ್ಯಾಚ್ ಸುದ್ದಿಗೆ ಠಕ್ಕರ್ ಕೊಟ್ರಾ ನಟಿ?

    ಸ್ಯಾಮ್ ಮೈಮೇಲಿದ್ದ ಮಾಜಿ ಪತಿ ಹೆಸರು ಏನಾಯ್ತು- ಪ್ಯಾಚ್ ಸುದ್ದಿಗೆ ಠಕ್ಕರ್ ಕೊಟ್ರಾ ನಟಿ?

    ಸೌತ್ ಬ್ಯೂಟಿ ಸಮಂತಾ (Samantha) ಅವರು ವೃತ್ತಿರಂಗದಲ್ಲಿ ಮುಂಚೂಣಿಯಲ್ಲಿದ್ದಾರೆ. ವೈಯಕ್ತಿಕ ಬದುಕಿನ ಕಹಿ ನೆನಪುಗಳಿಂದ ಹೊರ ಬಂದು ಹೊಸ ಜೀವನ ಕಟ್ಟಿಕೊಳ್ತಿದ್ದಾರೆ. ಹೀಗಿರುವಾಗ ಮಾಜಿ ನಾಗಚೈತನ್ಯ (Nagachaitanya) ಜೊತೆ ಮತ್ತೆ ಸಮಂತಾ ಜೊತೆಯಾಗುತ್ತಾರೆ ಎಂಬ ಸುದ್ದಿಗೆ ಒಂದೇ ಒಂದು ಪೋಸ್ಟ್ ಶೇರ್ ಮಾಡುವ ಮೂಲಕ ನಟಿ ಬ್ರೇಕ್ ಹಾಕಿದ್ದಾರೆ.

    ಇತ್ತೀಚೆಗೆ ನಟಿ ಸಮಂತಾ ಪಿಂಕ್ ಬಣ್ಣದ ಸೀರೆಯಲ್ಲಿ ಕಲರ್‌ಫುಲ್ ಫೋಟೋಶೂಟ್ ಮಾಡಿಸಿದ್ದರು. ಈಗೀನ ಫೋಟೋದಲ್ಲಿ ಸ್ಯಾಮ್ ಮೈಮೇಲಿದ್ದ ನಾಗಚೈತನ್ಯ ಹೆಸರು ಮಾಯವಾಗಿದೆ. ಈ ಮೂಲಕ ಮಾಜಿ ಪತಿ ಜೊತೆ ಮತ್ತೆ ಪ್ಯಾಚ್ ಅಪ್ ಸುದ್ದಿಗೆ ನಟಿ ಉತ್ತರ ಕೊಟ್ಟಿದ್ದಾರೆ. ಸಂಬಂಧವೇ ಬ್ರೇಕ್ ಆದ ಮೇಲೆ ಮತ್ತೆ ಜೊತೆಯಾಗಲ್ಲ ಎಂಬ ಉತ್ತರ ನಟಿ ನೀಡಿದ್ರಾ ಎಂದು ಸೋಶಿಯಲ್ ಮೀಡಿಯಾದಲ್ಲಿ‌ ನೆಟ್ಟಿಗರ ಚರ್ಚೆ ಗ್ರಾಸವಾಗಿದೆ.

     

    View this post on Instagram

     

    A post shared by Samantha (@samantharuthprabhuoffl)

    ಸಮಂತಾ- ನಾಗಚೈತನ್ಯ ಪ್ಯಾಚ್ ಸುದ್ದಿಗೆ ಪುಷ್ಟಿ ನೀಡಿದ ಪೋಸ್ಟ್ ಅಂದರೆ, ನಾಗಚೈತನ್ಯ ಇತ್ತೀಚೆಗೆ ‘ಹ್ಯಾಶ್’ ಫ್ರೆಂಚ್ ಡಾಗ್ ಫೋಟೋ ಹಂಚಿಕೊಂಡಿದ್ದರು. ಡಿವೋರ್ಸ್ ನಂತರವೂ ಆಗಾಗ ‘ಹ್ಯಾಶ್’ ಫೋಟೋವನ್ನ ನಟಿ ಶೇರ್ ಮಾಡಿದ್ದರು. ಈ ಪೋಸ್ಟ್‌ನಿಂದ ಇಬ್ಬರು ಮತ್ತೆ ಒಂದಾಗುತ್ತಾರೆ ಎಂದು ಅಭಿಮಾನಿಗಳು ಊಹಿಸಿದ್ದರು. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ಗನ್‌ಮ್ಯಾನ್‌ಗಳು- ಏನಿದು ಟ್ವಿಸ್ಟ್?

    ಸಮಂತಾ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ, ಇಬ್ಬರ ಮದುವೆಯ ಫೋಟೋ ರೀ ಸ್ಟೋರ್ ಆಗಿತ್ತು. ಹ್ಯಾಶ್ ಫೋಟೋವನ್ನ ನಾಗಚೈತನ್ಯ ಶೇರ್ ಮಾಡಿದ್ದು, ಇದೆಲ್ಲಾ ಪ್ಯಾಚ್‌ ಅಪ್‌ ಸುದ್ದಿಗೆ ಒತ್ತು ನೀಡಿತ್ತು. ಈ ವದಂತಿಗೆ ಸಮಂತಾ ಬ್ರೇಕ್ ಹಾಕಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]