Tag: Nagachaitanya

  • ಮದುಮಗನ ಗೆಟಪ್‌ನಲ್ಲಿ ನಾಗಚೈತನ್ಯ- ಸೀಕ್ರೆಟ್ ಆಗಿ ಶೋಭಿತಾ ಜೊತೆ ಮದುವೆಗೆ ರೆಡಿಯಾದ್ರಾ ಸಮಂತಾ ಮಾಜಿ ಪತಿ?

    ಮದುಮಗನ ಗೆಟಪ್‌ನಲ್ಲಿ ನಾಗಚೈತನ್ಯ- ಸೀಕ್ರೆಟ್ ಆಗಿ ಶೋಭಿತಾ ಜೊತೆ ಮದುವೆಗೆ ರೆಡಿಯಾದ್ರಾ ಸಮಂತಾ ಮಾಜಿ ಪತಿ?

    ಟಾಲಿವುಡ್ ನಟ ನಾಗಚೈತನ್ಯ (Nagachaitanya) ಅವರು ಇತ್ತೀಚೆಗೆ ನಟಿ ಶೋಭಿತಾ ಜೊತೆ ಸೀಕ್ರೆಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಗುಟ್ಟಾಗಿ ಹಸೆಮಣೆ ಏರಲು ನಾಗಚೈತನ್ಯ ರೆಡಿಯಾಗಿದ್ದಾರೆ ಎನ್ನಲಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಇಂದು (ಆ.28) ನಾಗಚೈತನ್ಯ ಮದುಮಗನ ಗೆಟಪ್‌ನಲ್ಲಿ ಸ್ಟೈಲೀಶ್ ಲುಕ್‌ನಲ್ಲಿ ಕಾರಿನಲ್ಲಿ ಕುಳಿತು ಹಾಯ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ನಿಶ್ಚಿತಾರ್ಥದಂತೆಯೇ ಗುಟ್ಟಾಗಿ ಶೋಭಿತಾ (Sobhita) ಜೊತೆ ಮದುವೆಯಾಗಲು ನಟ ರೆಡಿ ಆದ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಹೇಮಾ ವರದಿ: 17 ದೂರುಗಳು ದಾಖಲು

     

    View this post on Instagram

     

    A post shared by Viral Bhayani (@viralbhayani)


    ಅಸಲಿಗೆ ವಿಚಾರ ಬೇರೆನೇ ಇದೆ. ಹೈದರಾಬಾದ್‌ನ ಹೊಸ ಸ್ಟೋರ್‌ವೊಂದರ ಉದ್ಘಾಟನೆಗೆ ನಟ ಮದುಮಗನನಂತೆ ರೆಡಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ವಿಡಿಯೋ ವೈರಲ್ ಆದ ಹಿನ್ನೆಲೆ ಸೀಕ್ರೆಟ್ ಆಗಿ ಮದುವೆನೇ ಆಗ್ತಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದಾರೆ.

    ಇನ್ನೂ ಆ.8ರಂದು ಶೋಭಿತಾಗೆ ನಾಗಚೈತನ್ಯ ರಿಂಗ್ ತೊಡಿಸುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಇನ್ನೂ ಮುಂದಿನ ವರ್ಷದ ಅಂತ್ಯದಲ್ಲಿ ಈ ಜೋಡಿ ವಿದೇಶದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಿದ್ದಾರೆ. ಅದಕ್ಕೂ ಮುನ್ನ ಇಬ್ಬರೂ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಬೇಕಿದೆ.

  • ಪ್ರೀತಿ ಒಂದು ತ್ಯಾಗ- ಮಾಜಿ ಪತಿಯ ನಿಶ್ಚಿತಾರ್ಥದ ಬಳಿಕ ನಟಿ ಸಮಂತಾ ಪೋಸ್ಟ್

    ಪ್ರೀತಿ ಒಂದು ತ್ಯಾಗ- ಮಾಜಿ ಪತಿಯ ನಿಶ್ಚಿತಾರ್ಥದ ಬಳಿಕ ನಟಿ ಸಮಂತಾ ಪೋಸ್ಟ್

    ಮಾಜಿ ಪತಿ ನಾಗಚೈತನ್ಯ (Nagachaitanya) ಮತ್ತು ಶೋಭಿತಾ (Sobhita) ನಿಶ್ಚಿತಾರ್ಥದ ಬಳಿಕ ಸಮಂತಾ (Samantha) ಮೌನ ಮುರಿದಿದ್ದಾರೆ. ಪ್ರೀತಿ ಒಂದು ತ್ಯಾಗ ಎಂದು ಮಾರ್ಮಿಕವಾಗಿ ಸಮಂತಾ ಅವರು ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಹ್ಯಾಪಿ ಆ್ಯನಿವರ್ಸರಿ ಚಿನ್ನ- ಅಗಲಿದ ಪತ್ನಿಗೆ ವಿಜಯ್ ರಾಘವೇಂದ್ರ ವಿಶ್

    ಮಾಜಿ ಪತಿಯ ನಿಶ್ಚಿತಾರ್ಥದ ನಂತರ ಸಮಂತಾ ಪೋಸ್ಟ್ ವೈರಲ್ ಆಗಿದೆ. ಪ್ರೀತಿ ಎಂದರೆ ತ್ಯಾಗ. ನಾನು ಕೂಡ ಮಾತನ್ನು ಒಪ್ಪಿಕೊಳ್ಳುತ್ತೇನೆ. ಇದನ್ನು ಇಷ್ಟು ವರ್ಷಗಳಲ್ಲಿ ಅರಿತುಕೊಂಡೆ. ಬೇರೆ ಅವರು ನಮಗೆ ಪ್ರೀತಿ ಕೊಡದೆ ಇದ್ದರೂ ನಾವು ಅವರಿಗೆ ಪ್ರೀತಿ ಕೊಡಬೇಕಾಗುತ್ತದೆ. ಕೊಡ್ತಾನೇ ಇರಬೇಕಾಗುತ್ತದೆ. ಒಂದು ಹಂತದಲ್ಲಿ ನೀವು ಸಮತೋಲನ ಕಳೆದುಕೊಂಡರೂ ಪ್ರೀತಿ ತ್ಯಾಗವಾಗುತ್ತದೆ. ನನ್ನಿಂದ ಪ್ರೀತಿ ಮರಳಿ ನೀಡದೆ ಇದ್ದರೂ ನನ್ನನ್ನೂ ಇಷ್ಟಪಡುವ, ನನ್ನ ಮೇಲೆ ಪ್ರೀತಿಯ ಮಳೆಗೈಯುವ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಅಂದಹಾಗೆ, ನಾಗಚೈತನ್ಯರಿಂದ ಡಿವೋರ್ಸ್ ಪಡೆದ ಮೇಲೆ ಆರೋಗ್ಯ ಮತ್ತು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ತಿದ್ದಾರೆ.

  • ನಾಗಚೈತನ್ಯ ಮದುವೆ ಡೇಟ್ ಫಿಕ್ಸ್- ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಭರ್ಜರಿ ಪ್ಲ್ಯಾನ್

    ನಾಗಚೈತನ್ಯ ಮದುವೆ ಡೇಟ್ ಫಿಕ್ಸ್- ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಭರ್ಜರಿ ಪ್ಲ್ಯಾನ್

    ಸೌತ್‌ನ ನಟಿ ಸಮಂತಾರ ಮಾಜಿ ಪತಿ ನಾಗ ಚೈತನ್ಯ (Naga Chaitanya) ಮತ್ತು ಶೋಭಿತಾ (Sobhita Dhulipala) ಮದುವೆಗೆ (Wedding) ದಿನಾಂಕ ನಿಗದಿಯಾಗಿದೆ. ಅದಷ್ಟೇ ಅಲ್ಲ, ಡೆಸ್ಟಿನೇಷನ್ ವೆಡ್ಡಿಂಗ್ ಮಾಡಲು ತೆರೆಮರೆಯಲ್ಲಿ ತಯಾರಿ ಕೂಡ ಜೋರಾಗಿ ನಡೆಯುತ್ತಿದೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಕೈಹಿಡಿಯದ ಅದೃಷ್ಟ- ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ ಚಿತ್ರ ಹೀನಾಯ ಸೋಲು

    ಈ ವರ್ಷದ ಅಂತ್ಯದಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಹಸೆಮಣೆ ಏರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ರಾಜಸ್ಥಾನ ಅಥವಾ ವಿದೇಶದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಸಕಲ ತಯಾರಿ ಕೂಡ ನಡೆಯುತ್ತಿದೆಯಂತೆ. ಇನ್ನೂ ಇತ್ತೀಚೆಗೆ ಮಗನ ನಿಶ್ಚಿತಾರ್ಥದ ಕುರಿತು ನಾಗರ್ಜುನ ಅಕ್ಕಿನೇನಿ ಘೋಷಿಸಿದ್ದರು. ಈಗ ಮದುವೆ ಬಗ್ಗೆ ಕೂಡ ಅಧಿಕೃತ ಮಾಹಿತಿ ನೀಡ್ತಾರಾ? ಕಾದುನೋಡಬೇಕಿದೆ.

    ಆ.8ರಂದು ಸೈಲೆಂಟ್ ಆಗಿ ನಟಿ ಶೋಭಿತಾಗೆ ರಿಂಗ್ ತೊಡಿಸಿ ಸಮಂತಾ ಫ್ಯಾನ್ಸ್‌ಗೆ ನಾಗಚೈತನ್ಯ ಶಾಕ್ ಕೊಟ್ಟಿದ್ದರು. ಈಗ ಮದುವೆ ಮುಹೂರ್ತ ಫಿಕ್ಸ್ ಮಾಡುವ ಮೂಲಕ ಮತ್ತೊಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

    ಇನ್ನೂ ಹಲವು ವರ್ಷಗಳು ಪ್ರೀತಿಸಿ ಸಮಂತಾರನ್ನು (Actress Samantha) 2017ರಲ್ಲಿ ನಾಗಚೈತನ್ಯ ಮದುವೆಯಾಗಿದ್ದರು. ಹಿಂದೂ ಮತ್ತು ಕ್ರೈಸ್ತ ಪದ್ಧತಿಯಂತೆ ಮದುವೆ ಜರುಗಿತ್ತು. ಕೆಲ ಮನಸ್ತಾಪಗಳಿಂದ 2021ರಲ್ಲಿ ಇಬ್ಬರೂ ಡಿವೋರ್ಸ್ ಪಡೆದರು.

  • ನಾಗಚೈತನ್ಯ, ಶೋಭಿತಾ ನಿಶ್ಚಿತಾರ್ಥ- ತಿರುಗೇಟು ಕೊಟ್ಟ ಸಮಂತಾ

    ನಾಗಚೈತನ್ಯ, ಶೋಭಿತಾ ನಿಶ್ಚಿತಾರ್ಥ- ತಿರುಗೇಟು ಕೊಟ್ಟ ಸಮಂತಾ

    ತೆಲುಗು ನಟಿ ಶೋಭಿತಾ (Sobhita) ಜೊತೆ ನಾಗಚೈತನ್ಯ(Nagachaitanya) ನಿಶ್ಚಿತಾರ್ಥ ನಡೆದ ಬೆನ್ನಲ್ಲೇ ಸಮಂತಾ ಕುರಿತು ಅಪಪ್ರಚಾರ ಮಾಡುವ ಕೆಲಸ ನಡೆಯುತ್ತಿದೆ. ಕೆಲ ಕಿಡಿಗೇಡಿಗಳು ಬಾಲಿವುಡ್ ಡೈರೆಕ್ಟರ್ ರಾಜ್ ಜೊತೆ ನಟಿಯ ಮರು ಮದುವೆ ಎಂದೆಲ್ಲಾ ಸುದ್ದಿ ಹಬ್ಬಿಸಿದ್ದು, ಅದಕ್ಕೆಲ್ಲಾ ಈಗ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ನಟಿ ಖಡಕ್ ಆಗಿ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟನೆಯ ‘ಛಾವಾ’ ಸಿನಿಮಾ ಟೀಸರ್ ರಿಲೀಸ್

    ನಟಿಯ ಮುಖದ ಮೇಲೆ ಮಧ್ಯೆ ಕೈ ಬೆರಳು ಇಟ್ಟುಕೊಂಡು ಪೋಸ್ ನೀಡಿದ್ದಾರೆ. ಕಂದು ಬಣ್ಣದ ಟೀ ಶರ್ಟ್ ಅನ್ನು ಸಮಂತಾ (Samantha) ಧರಿಸಿದ್ದಾರೆ. ಅದಕ್ಕೆ ‘ನೌ ಆರ್ ಫ್ರೀ’ ಎಂಬ ಸಾಂಗ್ ಅನ್ನು ಹಾಕಿ ಪೋಸ್ಟ್ ಮಾಡಿದ್ದಾರೆ. ಯಾರು ಅದಷ್ಟೇ ವದಂತಿ ಹಬ್ಬಿಸಿದರೂ ತಾವು ಕೂಲ್ ಆಗಿಯೇ ಇರೋದಾಗಿ ಪರೋಕ್ಷವಾಗಿ ನಟಿ ತಿರುಗೇಟು ನೀಡಿದ್ದಾರೆ.

     

    View this post on Instagram

     

    A post shared by Samantha (@samantharuthprabhuoffl)

    ಅಂದಹಾಗೆ, ಹಲವು ವರ್ಷಗಳು ಪ್ರೀತಿಸಿ 2017ರಲ್ಲಿ ನಾಗಚೈತನ್ಯರನ್ನು ನಟಿ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಘೋಷಣೆ ಮಾಡಿದರು. ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ & ಗ್ಯಾಂಗ್ ಕೂದಲು ಸ್ಯಾಂಪಲ್ ಡಿಎನ್‌ಎ ವರದಿಗೆ ಮ್ಯಾಚ್

    ಒಂಟಿಯಾಗಿರುವ ಸಮಂತಾ ಅವರು ತಮ್ಮ ಆರೋಗ್ಯದ ಕಡೆ ಗಮನ ಕೊಡುತ್ತಾ ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  • ‘ದಿ ಫ್ಯಾಮಿಲಿ ಮ್ಯಾನ್ 2’ ನಿರ್ದೇಶಕನ ಜೊತೆ ಸಮಂತಾ ಡೇಟಿಂಗ್

    ‘ದಿ ಫ್ಯಾಮಿಲಿ ಮ್ಯಾನ್ 2’ ನಿರ್ದೇಶಕನ ಜೊತೆ ಸಮಂತಾ ಡೇಟಿಂಗ್

    ಸೌತ್‌ ಬ್ಯೂಟಿ ಶೋಭಿತಾ (Sobhita) ಜೊತೆಗಿನ ನಾಗಚೈತನ್ಯ (Nagachaitanya) ನಿಶ್ಚಿತಾರ್ಥದ ಬೆನ್ನಲ್ಲೇ ಬಾಲಿವುಡ್ ನಿರ್ದೇಶಕನ ಜೊತೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ಅಶ್ಲೀಲ ಮೆಸೇಜ್‌ಗೆ ಬೇಸತ್ತ ನಟಿ- 1 ಸಾವಿರ ಅಕೌಂಟ್ ಬ್ಲಾಕ್ ಮಾಡಿದ ಜ್ಯೋತಿ ರೈ

    ಸಮಂತಾ (Samantha) ಮತ್ತೆ ಖಾಸಗಿ ವಿಚಾರವಾಗಿ ಮುನ್ನೆಲೆಗೆ ಬಂದಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್ 2’ ಡೈರೆಕ್ಟರ್ ರಾಜ್ ನಿಡಿಮೋರು (Raj Nidimoru) ಜೊತೆ ಸಮಂತಾ ಕೆಲ ಕಾಲದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಸದ್ಯದಲ್ಲೇ ಈ ನಿರ್ದೇಶಕನ ಜೊತೆ ಸಮಂತಾ ಮರು ಮದುವೆ ಆಗ್ತಾರೆ ಎಂಬ ಸುದ್ದಿ ಈಗ ಚರ್ಚೆಗೆ ಗ್ರಾಸವಾಗಿದೆ.

    ಈ ಹಿಂದೆ ‘ದಿ ಫ್ಯಾಮಿಲಿ ಮ್ಯಾನ್ 2’ ಪ್ರಾಜೆಕ್ಟ್‌ನಲ್ಲಿ ರಾಜ್ ಜೊತೆ ಸಮಂತಾ ಕೆಲಸ ಮಾಡಿದ್ರು. ಅದರಲ್ಲಿ ನಟಿಯ ಬೋಲ್ಡ್ ದೃಶ್ಯಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಇದು ನಾಗಚೈತನ್ಯ ಮತ್ತು ಸಮಂತಾ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು ಎನ್ನಲಾಗಿದೆಯಂತೆ. ಆ ಸಮಯದಲ್ಲಿಯೇ ಡೈರೆಕ್ಟರ್‌ ಜೊತೆ ನಟಿ ಡೇಟ್‌ ಮಾಡುತ್ತಿದ್ದರು ಎಂಬುದು ಸದ್ಯದ ಟಾಕ್. ಇದನ್ನೂ ಓದಿ:‘ಮಿಸ್ಟರ್ ಅಂಡ್ ಮಿಸಸ್ ರಾಜಾ ಹುಲಿ’ ಪೋಸ್ಟರ್ ರಿಲೀಸ್ ಮಾಡಿದ ವೀರೇಂದ್ರ ಹೆಗ್ಗಡೆ

    ಈಗ ಅದೇ ಡೈರೆಕ್ಟರ್ ರಾಜ್ ಜೊತೆ ‘ಸಿಟಾಡೆಲ್’ನಲ್ಲಿ ಸಮಂತಾ ನಟಿಸಿರುವ ಹಿನ್ನೆಲೆ ಡೇಟಿಂಗ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ ಎಂಟ್ರಿಯಿಂದಲೇ ಸಮಂತಾ‌ ದಾಂಪತ್ಯದಲ್ಲಿ ಬಿರುಕಾಗಿತ್ತು. ಇಬ್ಬರ ಡಿವೋರ್ಸ್ ನಂತರ ಇದೀಗ ರಾಜ್ ಜೊತೆ ಸ್ಯಾಮ್ ಹೊಸ ಜೀವನ ನಡೆಸಲು ಮುಂದಾಗಿದ್ದಾರೆ ಎಂಬೆಲ್ಲಾ ಸುದ್ದಿ ಹಬ್ಬಿದೆ.

    ಈ ಕುರಿತು ಸಮಂತಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಆದರೆ ನಾಗಚೈತನ್ಯ ನಿಶ್ಚಿತಾರ್ಥದ ವಿಚಾರ ಭಾರೀ ಟ್ರೋಲ್ ಆದ ಬೆನ್ನಲ್ಲೇ ನಟನ ಫ್ಯಾನ್ಸ್, ಸಮಂತಾ ಹೆಸರನ್ನು ಹಾಳು ಮಾಡಲು ಹೀಗೆ ಸುಳ್ಳು ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಅದರ ಜೊತೆಗೆ ಅಸಲಿ ಸಂಗತಿ ಏನೆಂದರೆ ಡೈರೆಕ್ಟರ್‌ ರಾಜ್‌ಗೆ ಈಗಾಗಲೇ ಮದುವೆಯಾಗಿದೆ. ಆದ್ರೂ ಸಮಂತಾ ಜೊತೆ ಅವರ ಹೆಸರು ಸದ್ದು ಮಾಡುತ್ತಿದೆ.

  • ಸಮಂತಾ ಪ್ರಪೋಸ್ ಮಾಡಿದ ದಿನಾಂಕದಂದೇ ಶೋಭಿತಾಗೆ ರಿಂಗ್ ತೊಡಿಸಿದ ನಾಗಚೈತನ್ಯ

    ಸಮಂತಾ ಪ್ರಪೋಸ್ ಮಾಡಿದ ದಿನಾಂಕದಂದೇ ಶೋಭಿತಾಗೆ ರಿಂಗ್ ತೊಡಿಸಿದ ನಾಗಚೈತನ್ಯ

    ಟಾಲಿವುಡ್ ನಟ ನಾಗಚೈತನ್ಯ (Nagachaitanya) 2ನೇ ಮದುವೆಯಾಗೋಕೆ ಸಜ್ಜಾಗಿದ್ದಾರೆ.  ಆಗಸ್ಟ್‌ 8ರಂದು ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಮಾಜಿ ಪತ್ನಿ ಸಮಂತಾ (Samantha) ಮೇಲೆ ನಾಗಚೈತನ್ಯ ಸೇಡು ತೀರಿಸಿಕೊಂಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ:‘ನಾಗ ದೇವರ’ ಮಹಿಮೆ ಸಾರುವ ಕನ್ನಡದ ಸಿನಿಮಾಗಳು

    ಆಗಸ್ಟ್ 8ರ ದಿನಾಂಕಕ್ಕೂ ಸಮಂತಾ ಮತ್ತು ನಾಗಚೈತನ್ಯಗೂ ನಂಟಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗ್ತಿದೆ. ಕೆಲ ವರ್ಷಗಳ ಹಿಂದೆ ‘ಏ ಮಾಯಾ ಚೇಸಾವೆ’ ಸಿನಿಮಾ ಮಾಡುವಾಗ ಆ.8ರ ದಿನಾಂಕದಂದು ನಾಗಚೈತನ್ಯಗೆ ಸಮಂತಾ ಪ್ರೇಮ ನಿವೇದನೆ ಮಾಡಿದ್ದರು. ಹಾಗಾಗಿ ಈ ದಿನ ಇಬ್ಬರ ಪಾಲಿಗೆ ವಿಶೇಷವಾಗಿತ್ತು. ಈಗ ಬೇಕಂತಲೇ ಮಾಜಿ ಪತ್ನಿ ವಿರುದ್ಧ ಸೇಡು ತೀರಿಸಿಕೊಳ್ಳಲು ನಟ ಹೀಗೆ ಮಾಡಿದ್ದಾರೆ ಎಂದು ಸಮಂತಾ ಫ್ಯಾನ್ಸ್ ಸೋಷಿಯಲ್‌ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:Bigg Boss Kannada 11: ದೊಡ್ಮನೆ ಆಫರ್‌ ಬಗ್ಗೆ ಜ್ಯೋತಿ ರೈ ಪ್ರತಿಕ್ರಿಯೆ

    ನಿನ್ನೆ (ಆ.8) ಶೋಭಿತಾ ಮತ್ತು ನಾಗಚೈತನ್ಯ ನಿಶ್ಚಿತಾರ್ಥ ಸರಳವಾಗಿ ಜರುಗಿದೆ. ಈ ಖುಷಿಯ ಸುದ್ದಿಯನ್ನು ನಾಗರ್ಜುನ ಅಕ್ಕಿನೇನಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ನಮ್ಮ ಮಗ ನಾಗಚೈತನ್ಯ ಮತ್ತು ಶೋಭಿತಾ ಅವರೊಂದಿಗೆ ಇಂದು ಬೆಳಗ್ಗೆ 9:42ಕ್ಕೆ ನಡೆದ ನಿಶ್ಚಿತಾರ್ಥವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಶೋಭಿತಾಳನ್ನು (Sobhita) ನಮ್ಮ ಕುಟುಂಬಕ್ಕೆ ಸ್ವಾಗತಿಸಲು ಖುಷಿಯಾಗುತ್ತಿದೆ. ಈ ಜೋಡಿಗೆ ಅಭಿನಂದನೆಗಳು. ಅವರಿಗೆ ಜೀವನಪೂರ್ತಿ ಸಂತೋಷ ಮತ್ತು ಪ್ರೀತಿಯಿಂದ ಕೂಡಿರಲಿ ಎಂದು ಹಾರೈಸುತ್ತೇನೆ. ದೇವರು ಒಳ್ಳೆಯದು ಮಾಡಲಿ. 8-8-8 ಪ್ರೀತಿಯ ಆರಂಭ ಎಂದು ಈ ಜೋಡಿಗೆ ನಾಗಾರ್ಜುನ ಶುಭಕೋರಿದ್ದಾರೆ.

    ಸಮಂತಾ ಜೊತೆಗಿನ ಡಿವೋರ್ಸ್ ನಂತರ ಶೋಭಿತಾ ಜೊತೆ ನಾಗಚೈತನ್ಯ ಹೆಸರು ಕೇಳಿ ಬಂದಿತ್ತು. ಆಗಾಗ ಶೋಭಿತಾ ಜೊತೆ ನಾಗಚೈತನ್ಯ ವಿದೇಶಕ್ಕೆ ತೆರಳುತ್ತಿದ್ದರು. ಆ ಫೋಟೋಗಳು ವೈರಲ್ ಆಗಿತ್ತು. ಈಗ ನಿಶ್ಚಿತಾರ್ಥ ಸುದ್ದಿ ಮೂಲಕ ಕ್ಲ್ಯಾರಿಟಿ ಸಿಕ್ಕಿದೆ.

  • ಫ್ಯಾನ್ಸ್‌ಗೆ ಗುಡ್‌ ನ್ಯೂಸ್-‌ ಶೋಭಿತಾ ಜೊತೆ ಸಮಂತಾ ಮಾಜಿ ಪತಿ ನಿಶ್ಚಿತಾರ್ಥ

    ಫ್ಯಾನ್ಸ್‌ಗೆ ಗುಡ್‌ ನ್ಯೂಸ್-‌ ಶೋಭಿತಾ ಜೊತೆ ಸಮಂತಾ ಮಾಜಿ ಪತಿ ನಿಶ್ಚಿತಾರ್ಥ

    ಟಾಲಿವುಡ್ ನಟ ನಾಗಚೈತನ್ಯ (Nagachaitanya) ಇಂದು (ಆ.8) ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ನಟಿ ಶೋಭಿತಾ (Sobhita) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸಿಹಿಸುದ್ದಿಯನ್ನು ನಾಗಾರ್ಜುನ ಅಕ್ಕಿನೇನಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:ದರ್ಶನ್‌ ಪ್ರಕರಣದ ಬಗ್ಗೆ ಇತ್ತೀಚೆಗೆ ಗೊತ್ತಾಯ್ತು: ಶರ್ಮಿಳಾ ಮಾಂಡ್ರೆ

    ನಮ್ಮ ಮಗ ನಾಗಚೈತನ್ಯ ಮತ್ತು ಶೋಭಿತಾ ಅವರೊಂದಿಗೆ ಇಂದು ಬೆಳಗ್ಗೆ 9:42ಕ್ಕೆ ನಡೆದ ನಿಶ್ಚಿತಾರ್ಥವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಶೋಭಿತಾಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ಖುಷಿಯಾಗುತ್ತಿದೆ. ಈ ಜೋಡಿಗೆ ಅಭಿನಂದನೆಗಳು. ಅವರಿಗೆ ಜೀವನಪೂರ್ತಿ ಸಂತೋಷ ಮತ್ತು ಪ್ರೀತಿಯಿಂದ ಕೂಡಿರಲಿ ಎಂದು ಹಾರೈಸುತ್ತೇನೆ. ದೇವರು ಒಳ್ಳೆಯದು ಮಾಡಲಿ. 8-8-8 ಪ್ರೀತಿಯ ಆರಂಭ ಎಂದು ಈ ಜೋಡಿಗೆ ನಾಗಾರ್ಜುನ ಶುಭಕೋರಿದ್ದಾರೆ.

    ಸಮಂತಾ (Samantha) ಜೊತೆಗಿನ ಡಿವೋರ್ಸ್ (Divorce) ನಂತರ ಶೋಭಿತಾ ಜೊತೆ ನಾಗಚೈತನ್ಯ ಹೆಸರು ಕೇಳಿ ಬಂದಿತ್ತು. ಆಗಾಗ ಶೋಭಿತಾ ಜೊತೆ ನಾಗಚೈತನ್ಯ ವಿದೇಶಕ್ಕೆ ತೆರಳುತ್ತಿದ್ದರು. ಆ ಫೋಟೋಗಳು ವೈರಲ್ ಆಗಿತ್ತು. ಈಗ ನಿಶ್ಚಿತಾರ್ಥ ಸುದ್ದಿ ಮೂಲಕ ಕ್ಲ್ಯಾರಿಟಿ ಸಿಕ್ಕಿದೆ. ಸದ್ಯ ಈ ವಿಷ್ಯ ಕೇಳಿ ಸಮಂತಾ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ.

    ಅಂದಹಾಗೆ, ಸಮಂತಾ ಜೊತೆಗಿನ ಹಲವು ವರ್ಷಗಳ ಪ್ರೀತಿಗೆ ನಾಗಚೈತನ್ಯ 2021ರಲ್ಲಿ ಡಿವೋರ್ಸ್ ಪಡೆಯುವ ಮೂಲಕ ಬೇರೆಯಾದರು.

  • ಡೇಟಿಂಗ್‌ಗೆ ಸಿಕ್ತು ಸಾಕ್ಷಿ- ಯುರೋಪ್‌ನಲ್ಲಿ ಸಿಕ್ಕಿಬಿದ್ದ ನಾಗಚೈತನ್ಯ, ಶೋಭಿತಾ ಜೋಡಿ

    ಡೇಟಿಂಗ್‌ಗೆ ಸಿಕ್ತು ಸಾಕ್ಷಿ- ಯುರೋಪ್‌ನಲ್ಲಿ ಸಿಕ್ಕಿಬಿದ್ದ ನಾಗಚೈತನ್ಯ, ಶೋಭಿತಾ ಜೋಡಿ

    ಟಾಲಿವುಡ್ ನಟ ನಾಗಚೈತನ್ಯ (Naga Chaitanya) ಮತ್ತು ಶೋಭಿತಾ (Sobhita) ಯುರೋಪ್‌ಗೆ (Europe) ಹಾರಿದ್ದಾರೆ. ವಿದೇಶದ ಇಬ್ಬರ ಲವ್ವಿ ಡವ್ವಿ ಫೋಟೋ ಸೋಷಿಯಲ್‌ ಭಾರೀ ಸದ್ದು ಮಾಡುತ್ತಿದೆ. ಡೇಟಿಂಗ್‌ ಸುದ್ದಿ ಪುಷ್ಠಿ ನೀಡುವಂತಹ ಮತ್ತೊಂದು ಫೋಟೋ ವೈರಲ್‌ ಆಗಿದ್ದು, ನೆಟ್ಟಿಗರಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಇದನ್ನೂ ಓದಿ:ನಾನು ರಿಲೇಷನ್‌ಶಿಪ್‌ನಲ್ಲಿದ್ದೇನೆ ಎಂದು ಪಡ್ಡೆಹುಡುಗರಿಗೆ ಶಾಕ್ ಕೊಟ್ಟ ಕೃತಿ ಶೆಟ್ಟಿ

    ಸಮಂತಾ (Samantha) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಶೋಭಿತಾ ಜೊತೆ ನಾಗಚೈತನ್ಯ ಲವ್ವಿ ಡವ್ವಿ ಶುರು ಮಾಡಿದ್ದಾರೆ. ಈ ಜೋಡಿ ಜಂಟಿಯಾಗಿ ಯುರೋಪ್‌ಗೆ ಹಾರಿದ್ದಾರೆ. ವಿದೇಶದ ಬೀದಿಗಳಲ್ಲಿ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಯುರೋಪ್‌ನಲ್ಲಿ ಸ್ಟೈಜ್‌ ಶೋ ಅನ್ನು ಇಬ್ಬರೂ ವೀಕ್ಷಿಸುತ್ತಿರುವ ಫೋಟೋ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದನ್ನು ನೋಡಿ ಶೋಭಿತಾ ಮೇಲೆ ನಾಗಚೈತನ್ಯ ಲವ್‌ ಆಗಿದೆ ಎಂದೆಲ್ಲಾ ಫ್ಯಾನ್ಸ್‌ ಕಾಮೆಂಟ್‌ ಮಾಡುತ್ತಿದ್ದಾರೆ.

    ಇನ್ನೂ ಕೆಲ ತಿಂಗಳುಗಳ ಹಿಂದೆ ಲಂಡನ್ ರೆಸ್ಟೋರೆಂಟ್‌ವೊಂದರಲ್ಲಿ ಇಬ್ಬರೂ ಜೊತೆಯಾಗಿದ್ದ ಫೋಟೋ ವೈರಲ್ ಆಗಿತ್ತು. ಆದರೆ ಇದು ಎಡಿಟ್ ಆಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿದೆ ಎಂದು ಹೇಳಲಾಯ್ತು. ಫೇಕ್ ಫೋಟೋ ಎನ್ನುವ ಮಾತು ಕೇಳಿ ಬಂದಿತ್ತು. ಹಾಗಾದ್ರೆ ಈಗ ಯುರೋಪ್‌ನಲ್ಲಿ ಜೊತೆಯಾಗಿ ನಿಂತಿರುವ ಫೋಟೋಗೆ ಈ ಜೋಡಿಯ ಪ್ರತಿಕ್ರಿಯೆ ಏನು ಎಂದು ಫ್ಯಾನ್ಸ್ ಎದುರು ನೋಡ್ತಿದ್ದಾರೆ.

    ಅಂದಹಾಗೆ, ಹಲವು ವರ್ಷಗಳ ಡೇಟಿಂಗ್ ನಂತರ ಸಮಂತಾ ಮತ್ತು ನಾಗಚೈತನ್ಯ 2017ರಲ್ಲಿ ಮದುವೆಯಾದರು. 2021ಕ್ಕೆ ಈ ಜೋಡಿ ಡಿವೋರ್ಸ್ ಕುರಿತು ಅಧಿಕೃತ ಘೋಷಣೆ ಮಾಡಿದ್ದರು.

  • ಬೆಳ್ಳಿಪರದೆಯಲ್ಲಿ ಸಮಂತಾ ಎಂಟ್ರಿ ನೋಡ್ತಿದ್ದಂತೆ ನಾಚಿ ನೀರಾದ ನಾಗಚೈತನ್ಯ

    ಬೆಳ್ಳಿಪರದೆಯಲ್ಲಿ ಸಮಂತಾ ಎಂಟ್ರಿ ನೋಡ್ತಿದ್ದಂತೆ ನಾಚಿ ನೀರಾದ ನಾಗಚೈತನ್ಯ

    ಟಾಲಿವುಡ್ ನಟ ನಾಗಚೈತನ್ಯ (Nagachaitanya)  ಮತ್ತು ಸಮಂತಾ (Samantha) ನಟನೆಯ ‘ಮನಂ’ (Manam) ಸಿನಿಮಾ ಮತ್ತೆ ಮರು ಬಿಡುಗಡೆಯಾಗಿದೆ. ಈ ಸಿನಿಮಾದ ವಿಶೇಷ ಪ್ರದರ್ಶನಕ್ಕೆ ಚಿತ್ರದ ನಿರ್ದೇಶಕ ವಿಕ್ರಮ್ ಕುಮಾರ್ ಜೊತೆ ನಾಗಚೈತನ್ಯ ಹಾಜರಿ ಹಾಕಿದ್ದಾರೆ. ಈ ವೇಳೆ, ಬೆಳ್ಳಿಪರದೆಯಲ್ಲಿ ಮಾಜಿ ಸಮಂತಾರನ್ನು ನೋಡುತ್ತಿದ್ದಂತೆ ನಾಗಚೈತನ್ಯ ಸ್ಮೈಲ್ ಮಾಡಿದ್ದಾರೆ.

    2014ರಲ್ಲಿ ತೆರೆಕಂಡ ‘ಮನಂ’ ಇದೀಗ ಮತ್ತೆ ರೀ ರಿಲೀಸ್ ಆಗಿದೆ. ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂನ ಹಲವು ಚಿತ್ರಮಂದಿರಗಳಲ್ಲಿ ಮನಂ ಸಿನಿಮಾ ವಿಶೇಷ ಪ್ರದರ್ಶನ ಕಾಣುತ್ತಿದೆ. ಇದೇ ಮೇ 23ರ ರಾತ್ರಿ ಹೈದರಾಬಾದ್‌ನಲ್ಲಿ `ಮನಂ’ ಸಿನಿಮಾದ ವಿಶೇಷ ಪ್ರದರ್ಶನದ ವೇಳೆ, ಚಿತ್ರದ ನಿರ್ದೇಶಕನ ಜೊತೆಗೆ ನಾಗ ಚೈತನ್ಯ ಆಗಮಿಸಿದ್ದಾರೆ. ಅಭಿಮಾನಿಗಳ ಮಧ್ಯೆ ಕುಳಿತು ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಇದನ್ನೂ ಓದಿ:ಸಿನಿಮಾ ಇಂಡಸ್ಟ್ರಿ ಜೊತೆಗೆ ಚಿತ್ರಮಂದಿರ ಬಂದ್ ಮಾಡುವುದಿಲ್ಲ: ಫಿಲ್ಮ್‌ ಚೇಂಬರ್ ಅಧ್ಯಕ್ಷ ಸ್ಪಷ್ಟನೆ

    ಈ ಸಿನಿಮಾದಲ್ಲಿ ಸಮಂತಾ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ತೆರೆಯ ಮೇಲೆ ಸಮಂತಾ ಅವರನ್ನು ಮತ್ತೊಮ್ಮೆ ನೋಡಿ ಕಣ್ತುಂಬಿಕೊಂಡಿದ್ದಾರೆ. ಆಗ ಅವರ ಖುಷಿಗೆ ಪಾರವೇ ಇರಲಿಲ್ಲ. ಸಮಂತಾ ದೃಶ್ಯ ಸ್ಕ್ರೀನ್ ಮೇಲೆ ಬರುತ್ತಿದ್ದಂತೆ ನಾಗ ಚೈತನ್ಯ ನಕ್ಕಿದ್ದಾರೆ. ಮಾಜಿ ಪತ್ನಿಯ ಎಂಟ್ರಿಗೆ ನಾಚಿ ನೀರಾಗಿದ್ದಾರೆ. ಈ ವಿಡಿಯೋಗಳು ವೈರಲ್ ಆಗುತ್ತಿವೆ.

    ಸಿನಿಮಾದಲ್ಲಿ ಸಮಂತಾ ಜೊತೆಗಿನ ನಾಗಚೈತನ್ಯ ರೊಮ್ಯಾಂಟಿಕ್ ಸೀನ್ ಬರುತ್ತಿದ್ದಂತೆ ಅಭಿಮಾನಿಗಳು ಕೂಗಲು ಶುರು ಮಾಡಿದ್ದಾರೆ. ಈ ವಿಡಿಯೋ ಸದ್ದು ಮಾಡುತ್ತಿದ್ದಂತೆ ಮತ್ತೆ ಈ ಜೋಡಿ ಒಂದಾಗಬಾರದಾ ಎಂದು ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿದೆ.

    ‘ಮನಂ’ ಸಿನಿಮಾದಲ್ಲಿ ನಾಗಾರ್ಜುನ, ಅಕ್ಕಿನೇನಿ ನಾಗೇಶ್ವರ ರಾವ್, ನಾಗಚೈತನ್ಯ, ಸಮಂತಾ, ಅಖಿಲ್ ಅಕ್ಕಿನೇನಿ, ಶ್ರೀಯಾ ಶರಣ್ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ದುಬಾರಿ ಕಾರು ಖರೀದಿಸಿದ ತೆಲುಗು ನಟ ನಾಗಚೈತನ್ಯ

    ದುಬಾರಿ ಕಾರು ಖರೀದಿಸಿದ ತೆಲುಗು ನಟ ನಾಗಚೈತನ್ಯ

    ತೆಲುಗು ನಟ ನಾಗಚೈತನ್ಯ (Nagachaitanya) ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಕಾರಿನ ಬಗ್ಗೆ ವಿಶೇಷ ಕ್ರೇಜ್ ಹೊಂದಿರುವ ನಾಗಚೈತನ್ಯ ಈಗ ದುಬಾರಿ ಕಾರೊಂದನ್ನು ಖರೀದಿಸಿದ್ದಾರೆ. ಇದನ್ನೂ ಓದಿ:ಶ್ರೀವಲ್ಲಿ ಫ್ಯಾನ್ಸ್‌ಗೆ ಸಿಹಿಸುದ್ದಿ- ‘ಪುಷ್ಪ 2’ ಅಪ್‌ಡೇಟ್ ಹಂಚಿಕೊಂಡ ರಶ್ಮಿಕಾ ಮಂದಣ್ಣ

    ಸದ್ಯ ನಾಗಚೈತನ್ಯ ಅವರು ಚೆನ್ನೈನಲ್ಲಿ ಪೋರ್ಷಾ 911 ಜಿಟಿ3 ಆರ್‌ಎಸ್ ಕಾರನ್ನು ಖರೀದಿ ಮಾಡಿದ್ದಾರೆ. ಈ ಫೋಟೋಗಳನ್ನು ಶೋರೂಂನವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Sai (@always__about__akkineni)

    ಫೋರ್ಷಾ 911 ಜಿಟಿ3 ಆರ್‌ಎಸ್ ಕಾರಿನ ಎಕ್ಸ್ ಶೋರೂಂ ಬೆಲೆ 3.5 ಕೋಟಿ ರೂ. ಮೌಲ್ಯದಾಗಿದೆ. ಈ ಕಾರು ಆಟೋಮ್ಯಾಟಿಕ್, 7 ಗೇರ್ ಲಭ್ಯವಿದೆ. ಈ ಕಾರು ಪ್ರತಿ ಲೀಟರ್‌ಗೆ 7.4 ಕಿಮೀ ಮೈಲೇಜ್ ನೀಡಲಿದೆ. ಸದ್ಯ ಕಾರು ಖರೀದಿಸಿರುವ ಖುಷಿಯಲ್ಲಿರುವ ನಟನಿಗೆ ಇದೀಗ ಫ್ಯಾನ್ಸ್ ವಿಶ್ ಮಾಡಿದ್ದಾರೆ.

    ಸದ್ಯ ನಾಗಚೈತನ್ಯ ‘ತಾಂಡೇಲ್’ (Thandel) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ (Sai Pallavi) ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಪೂಜಾ ಹೆಗ್ಡೆ ಜೊತೆ ಹೊಸ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.