Tag: Nagachaitanya

  • ಮದುವೆ ಸಂಭ್ರಮದಲ್ಲಿ ನಾಗಚೈತನ್ಯ, ಶೋಭಿತಾ- ವಿವಾಹಪೂರ್ವ ಶಾಸ್ತ್ರಗಳು ಶುರು

    ಮದುವೆ ಸಂಭ್ರಮದಲ್ಲಿ ನಾಗಚೈತನ್ಯ, ಶೋಭಿತಾ- ವಿವಾಹಪೂರ್ವ ಶಾಸ್ತ್ರಗಳು ಶುರು

    ಟಾಲಿವುಡ್ ನಟ ನಾಗಚೈತನ್ಯ, ಶೋಭಿತಾ (Sobhita Dhulipala) ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಾಗಚೈತನ್ಯ (Nagachaitanya) ಮತ್ತು ಶೋಭಿತಾರವರ ವಿವಾಹಪೂರ್ವ ಶಾಸ್ತ್ರಗಳು ಜರುಗಿವೆ. ಇಬ್ಬರೂ ಖುಷಿ ಖುಷಿಯಾಗಿ ಭಾಗಿಯಾಗಿರುವ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿವೆ.

    ಮದುವೆ ಕಾರ್ಯಕ್ರಮದ ಆರಂಭದ ಭಾಗವಾಗಿ ನಾಗಚೈತನ್ಯ ಹಾಗೂ ಶೋಭಿತಾ ಅರಿಶಿಣ ಕುಂಕುಮ ನೀರಿನಲ್ಲಿ ಪವಿತ್ರವಾದ ಮಂಗಳಸ್ನಾನ ಮಾಡಿದ್ದಾರೆ. ಜೊತೆಗೆ ಹಳದಿ ಶಾಸ್ತ್ರ ಕೂಡ ನೆರವೇರಿದೆ. ಶಾಸ್ತ್ರದ ವೇಳೆ, ಇಬ್ಬರೂ ಫುಲ್ ಖುಷಿಯಾಗಿದ್ದಾರೆ. ಇದನ್ನೂ ಓದಿ:ತಲೈವಾ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಸಿಗಲಿದೆ ‘ಜೈಲರ್’ ಟೀಮ್‌ನಿಂದ ಗುಡ್ ನ್ಯೂಸ್- ಏನದು?

    ಇದೇ ಡಿ.4ರಂದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಗಚೈತನ್ಯ ಮತ್ತು ಶೋಭಿತಾ ಮದುವೆ ಜರುಗಲಿದೆ. ಈ ಮದುವೆಗೆ ತೆಲುಗು ಖ್ಯಾತ ನಟ, ನಟಿಯರು ಮತ್ತು ರಾಜಕೀಯ ಗಣ್ಯರು ಭಾಗಿಯಾಗಿದ್ದಾರೆ.

    ಅಂದಹಾಗೆ, ಈ ಹಿಂದೆ ಸಮಂತಾ (Samantha) ಜೊತೆ ನಾಗಚೈತನ್ಯ ಮದುವೆಯಾಗಿದ್ದರು. ಕಾರಣಾಂತರಗಳಿಂದ 2021ರಲ್ಲಿ ಇಬ್ಬರೂ ಡಿವೋರ್ಸ್ ಪಡೆದರು. ಈಗ ಶೋಭಿತಾ ಜೊತೆ 2ನೇ ಮದುವೆಗೆ ನಟ ಸಜ್ಜಾಗಿದ್ದಾರೆ.

  • ಡಿವೋರ್ಸ್ ಬಳಿಕ ಸೆಕೆಂಡ್ ಹ್ಯಾಂಡ್ ಎಂದು ಟೀಕಿಸಿದರು: ಸಮಂತಾ

    ಡಿವೋರ್ಸ್ ಬಳಿಕ ಸೆಕೆಂಡ್ ಹ್ಯಾಂಡ್ ಎಂದು ಟೀಕಿಸಿದರು: ಸಮಂತಾ

    ಸೌತ್‌ನ ಸ್ಟಾರ್ ನಟಿ ಸಮಂತಾ (Samantha) ಅವರು 2021ರಲ್ಲಿ ನಾಗಚೈತನ್ಯ (Naga Chaitanya) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ತಾವು ಎದುರಿಸಿದ ಟೀಕೆಗಳ ಬಗ್ಗೆ ಮೌನ ಮುರಿದ್ದಾರೆ. ಡಿವೋರ್ಸ್ (Divorce) ಬಳಿಕ ನನ್ನನ್ನು ಸೆಕೆಂಡ್ ಹ್ಯಾಂಡ್ ಎಂದು ಟೀಕಿಸಿದರು ಎಂದು ಸ್ಯಾಮ್ ದುಃಖದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಓದುವುದರಲ್ಲಿ ನಶೆ ಕಂಡುಕೊಳ್ಳಿ, ಮಾದಕ ವಸ್ತುವಿನ ನಶೆ ಬೇಡ: ವಿದ್ಯಾರ್ಥಿಗಳಿಗೆ ಶಿವಣ್ಣ ಸಲಹೆ

    ಸಂದರ್ಶನವೊಂದರಲ್ಲಿ ಸಮಂತಾ ಮಾತನಾಡಿ, ಮಹಿಳೆಯರು ಡಿವೋರ್ಸ್ ಪಡೆದರೆ ಸಾಕಷ್ಟು ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಡಿವೋರ್ಸ್ ಬಳಿಕ ನನ್ನನ್ನು ಸೆಕೆಂಡ್ ಹ್ಯಾಂಡ್, ಜೀವನ ಹಾಳು ಮಾಡಿಕೊಂಡವಳು ಎಂದು ನಾನಾ ರೀತಿಯಲ್ಲಿ ನಿಂದಿಸಿದರು. ಇಂತಹ ಸಂದರ್ಭದಲ್ಲಿ ನಮ್ಮ ಕುಟುಂಬ ಕೂಡ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ.

    ಆರಂಭದಲ್ಲಿ ಈ ವಿಚಾರದಿಂದ ನನಗೆ ತುಂಬಾ ನೋವಾಗಿತ್ತು. ಆದರೆ ನಾನು ಡಿವೋರ್ಸ್ ಪಡೆದಿದ್ದೇನೆ ಎಂದು ಒಪ್ಪಿಕೊಂಡೆ. ಹೌದು.. ಡಿವೋರ್ಸ್ ಆಗಿದೆ. ಅದನ್ನು ನಾನು ಎಲ್ಲೂ ಮರೆಮಾಚಿಲ್ಲ. ಹಾಗಂತ ನಾನು ಮೂಲೆಯಲ್ಲಿ ಕುಳಿತು ಅಳುತ್ತಾ ಇರುತ್ತೇನೆ ಎಂದರ್ಥವಲ್ಲ. ಎಲ್ಲಿ ಕೊನೆ ಇದೆಯೋ ಅಲ್ಲಿಂದಲೇ ಆರಂಭ ಆಗುತ್ತದೆ. ನಾನು ಈಗ ತುಂಬಾ ಖುಷಿಯಾಗಿದ್ದೇನೆ. ನಾನು ಬೆಳೆಯುತ್ತಿದ್ದೇನೆ. ಒಳ್ಳೆಯ ಕೆಲಸ ಸಿಗುತ್ತಿದೆ. ಒಳ್ಳೆಯ ವ್ಯಕ್ತಿಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ. ನನ್ನ ಜೀವನವನ್ನು ಮುಂದಿನ ಹಂತದತ್ತ ನೋಡುತ್ತಿದ್ದೇನೆ ಎಂದು ಸಮಂತಾ ಮಾತನಾಡಿದ್ದಾರೆ.

    ಅಂದಹಾಗೆ, ಸಮಂತಾ ಮತ್ತು ನಾಗಚೈತನ್ಯ 2017ರಲ್ಲಿ ಮದುವೆಯಾದರು. 2021ರಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್ ಪಡೆದರು. ಇದೀಗ ಸಮಂತಾ ಮಾಜಿ ಪತಿ ನಾಗಚೈತನ್ಯ ಅವರು ಶೋಭಿತಾ (Sobhita) ಜೊತೆ ಡಿ.4ರಂದು ಮದುವೆಗೆ ರೆಡಿಯಾಗಿದ್ದಾರೆ.

  • NC 24: ಪೌರಾಣಿಕ ಕಥೆ ಹೇಳಲು ಸಜ್ಜಾದ ನಾಗಚೈತನ್ಯ- ಪೋಸ್ಟರ್ ಔಟ್

    NC 24: ಪೌರಾಣಿಕ ಕಥೆ ಹೇಳಲು ಸಜ್ಜಾದ ನಾಗಚೈತನ್ಯ- ಪೋಸ್ಟರ್ ಔಟ್

    ಟಾಲಿವುಡ್ ನಟ ನಾಗಚೈತನ್ಯ (Naga Chaitanya) ಇಂದು (ನ.23) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಬರ್ತ್‌ಡೇಯಂದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಪೌರಾಣಿಕ ಸಿನಿಮಾ ಮಾಡಲು ನಟ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:Pushpa 2: ಅಲ್ಲು ಅರ್ಜುನ್, ಶ್ರೀಲೀಲಾ ಐಟಂ ಹಾಡಿನ ಪ್ರೋಮೋ ರಿಲೀಸ್

    ನಾಗಚೈತನ್ಯ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ತಾಂಡೇಲ್’ ರಿಲೀಸ್‌ಗೆ ರೆಡಿಯಿದೆ. ಈ ಬೆನ್ನಲ್ಲೇ ಹೊಸ ಚಿತ್ರವನ್ನು ನಟ ಒಪ್ಪಿಕೊಂಡಿದ್ದಾರೆ. ನಿಗೂಢವಾಗಿರುವ ಕಣ್ಣಿನ ಚಿತ್ರವಿರುವ ಪೋಸ್ಟರ್‌ನಲ್ಲಿ ನಾಗಚೈತನ್ಯ ಲುಕ್ ನೋಡುಗರಲ್ಲಿ ಕುತೂಹಲ ಕೆರಳಿಸಿದೆ. ಈ ಚಿತ್ರವನ್ನು ‘ವಿರೂಪಾಕ್ಷ’ ಡೈರೆಕ್ಟರ್ ಕಾರ್ತಿಕ್ ದಂಡು ನಿರ್ದೇಶನ ಮಾಡಿದ್ದಾರೆ.

     

    View this post on Instagram

     

    A post shared by Chay Akkineni (@chayakkineni)

    ಅಂದಹಾಗೆ, ನಾಗಚೈತನ್ಯ ಅವರು ಶೋಭಿತಾ (Sobhita) ಜೊತೆ ಇದೇ ಡಿ.4ರಂದು ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ತೆರೆಮರೆಯಲ್ಲಿ ಮದುವೆ ತಯಾರಿ ಕೂಡ ಜೋರಾಗಿದೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಮದುವೆ ಹೈದರಾಬಾದ್‌ನಲ್ಲಿ ಸರಳವಾಗಿ ಜರುಗಲಿದೆ.

  • ಡಿ.4ರಂದು ನಾಗಚೈತನ್ಯ, ಶೋಭಿತಾ ಮದುವೆ- ಆಮಂತ್ರಣ ಪತ್ರಿಕೆ ವೈರಲ್

    ಡಿ.4ರಂದು ನಾಗಚೈತನ್ಯ, ಶೋಭಿತಾ ಮದುವೆ- ಆಮಂತ್ರಣ ಪತ್ರಿಕೆ ವೈರಲ್

    ಟಾಲಿವುಡ್ ನಟ ನಾಗಚೈತನ್ಯ (Nagachaitanya) ಮತ್ತು ಶೋಭಿತಾ ಧುಲಿಪಾಲ್ (Sobhita Dhulipala) ಹಸೆಮಣೆ (Wedding) ಏರೋಕೆ ರೆಡಿಯಾಗಿದ್ದಾರೆ. ಡಿ.4ರಂದು ನಾಗಚೈತನ್ಯ ಮದುವೆ ಡೇಟ್ ನಿಗದಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ಇದನ್ನೂ ಓದಿ:BBK 11: ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಶೋಭಾ ಶೆಟ್ಟಿ, ರಜತ್ ಬುಜ್ಜಿ

    ಸಮಂತಾ ಮಾಜಿ ಪತಿ ನಾಗಚೈತನ್ಯ ಅವರು ಶೋಭಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಇದೇ ಡಿಸೆಂಬರ್ 4ರಂದು ಬಂಜಾರಾ ಹಿಲ್ಸ್ನಲ್ಲಿರುವ ಅನುಪಮಾ ಸ್ಟುಡಿಯೋದಲ್ಲಿ ಮದುವೆಯಾಗುತ್ತಿದ್ದಾರೆ. ಇದು ನಾಗಾರ್ಜುನ ಅಕ್ಕಿನೇನಿ ಅವರ ಒಡೆತನದಲ್ಲಿದೆ. ಈ ಮದುವೆಗೆ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

    ಅಂದಹಾಗೆ, ನಟಿ ಸಮಂತಾ (Samantha) ಜೊತೆ ನಾಗಚೈತನ್ಯ 2017ರಲ್ಲಿ ಮದುವೆಯಾದರು. 2021ರಲ್ಲಿ ಇಬ್ಬರೂ ಡಿವೋರ್ಸ್ ಘೋಷಿಸಿದರು. ಹಲವು ವರ್ಷಗಳು ಪ್ರೀತಿ, ಮದುವೆಯ ಮುದ್ರೆ ಒತ್ತಿದ್ದ ಜೋಡಿ ಆ ನಂತರ ಡಿವೋರ್ಸ್ ಮೂಲಕ ವೈವಾಹಿಕ ಬದುಕಿಗೆ ಪೂರ್ಣ ವಿರಾಮವಿಟ್ಟರು.

  • Thandel: ಸಾಯಿ ಪಲ್ಲವಿ, ನಾಗಚೈತನ್ಯ ರೊಮ್ಯಾಂಟಿಕ್ ಪೋಸ್ಟರ್ ರಿಲೀಸ್

    Thandel: ಸಾಯಿ ಪಲ್ಲವಿ, ನಾಗಚೈತನ್ಯ ರೊಮ್ಯಾಂಟಿಕ್ ಪೋಸ್ಟರ್ ರಿಲೀಸ್

    ‘ಲವ್ ಸ್ಟೋರಿ’ (Love Story) ಸಿನಿಮಾದ ಸಕ್ಸಸ್ ನಂತರ ನಾಗಚೈತನ್ಯ (Naga Chaitanya) ಮತ್ತು ಸಾಯಿ ಪಲ್ಲವಿ ಮತ್ತೆ ಜೊತೆಯಾಗಿದ್ದಾರೆ. ‘ತಾಂಡೆಲ್’ (Thandel) ಚಿತ್ರಕ್ಕಾಗಿ ಕೈಜೋಡಿಸಿದ್ದು, ಇದರಲ್ಲೂ ರೊಮ್ಯಾಂಟಿಕ್ ಕಥೆ ಹೇಳಲು ಹೊರಟಿದ್ದಾರೆ. ಅದಷ್ಟೇ ಅಲ್ಲ, ತಾಂಡೆಲ್ ರಿಲೀಸ್‌ಗೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಇದನ್ನೂ ಓದಿ:ದೇವಸ್ಥಾನದಲ್ಲಿ ಕ್ಷಮೆಯಾಚಿಸಿ ಇಲ್ಲವೇ 5 ಕೋಟಿ ಕೊಡಿ: ಸಲ್ಮಾನ್‌ ಖಾನ್‌ಗೆ ಮತ್ತೊಂದು ಬೆದರಿಕೆ

    ‘ತಾಂಡೆಲ್’ (Thandel) ಸಿನಿಮಾದಲ್ಲಿನ ಸಾಯಿ ಪಲ್ಲವಿ ಜೊತೆಗಿನ ನಾಗಚೈತನ್ಯ ರೊಮ್ಯಾಂಟಿಕ್ ಪೋಸ್ಟರ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ. ಸಾಯಿ ಪಲ್ಲವಿ ಅವರನ್ನು ನಟ ತಬ್ಬಿಕೊಂಡಿರುವ ಫೋಟೋ ಅಭಿಮಾನಿಗಳ ಗಮನ ಸೆಳೆದಿದೆ. ಫೆ.14 ಪ್ರೇಮಿಗಳ ದಿನಾಚರಣೆಗೂ ಮುನ್ನ ಫೆ.7ರಂದು ‘ತಾಂಡೆಲ್’ ಸಿನಿಮಾ ರಿಲೀಸ್ ಆಗುತ್ತಿದೆ.

     

    View this post on Instagram

     

    A post shared by Geetha Arts (@geethaarts)

    ಈ ಹಿಂದಿನ ‘ಲವ್ ಸ್ಟೋರಿ’ ಚಿತ್ರಕ್ಕಿಂತ ವಿಭಿನ್ನ ಕಥೆಯನ್ನೇ ತೋರಿಸಲು ಚಿತ್ರತಂಡ ಸಜ್ಜಾಗಿದೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನೋಡಿ ಅಭಿಮಾನಿಗಳಿಗೆ ಸಿನಿಮಾ ಬಗೆಗಿನ ನಿರೀಕ್ಷೆ ಹೆಚ್ಚಿಸಿದೆ. ಇನ್ನೂ ಈ ಚಿತ್ರವನ್ನು ಗೀತಾ ಆರ್ಟ್ಸ್ ಮೂಲಕ ಅಲ್ಲು ಅರವಿಂದ್ ನಿರ್ಮಾಣ ಮಾಡಿದ್ದಾರೆ.

  • ಶೋಭಿತಾ ಜೊತೆ ಸಮಂತಾ ಮಾಜಿ ಪತಿಯ ಮದುವೆ ಡೇಟ್ ಫಿಕ್ಸ್

    ಶೋಭಿತಾ ಜೊತೆ ಸಮಂತಾ ಮಾಜಿ ಪತಿಯ ಮದುವೆ ಡೇಟ್ ಫಿಕ್ಸ್

    ಕ್ಕಿನೇನಿ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಸದ್ದಿಲ್ಲದೇ ನಾಗಚೈತನ್ಯ (Nagachaitanya) ಮತ್ತು ಶೋಭಿತಾ (Sobhita Dhulipala) ಮದುವೆಗೆ ತಯಾರಿ ನಡೆಯುತ್ತಿದೆ. ಈ ಜೋಡಿಯ ಮದುವೆ ಯಾವಾಗ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಇದೇ ಡಿ.4ರಂದು ಹಸೆಮಣೆ ಏರೋದಕ್ಕೆ ಈ ಜೋಡಿ ಸಜ್ಜಾಗಿದೆ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ದರ್ಶನ್‌ ಭೇಟಿಯಾದ ನಿರ್ಮಾಪಕಿ ಶೈಲಜಾ ನಾಗ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ

    ಇತ್ತೀಚೆಗೆ ಸದ್ದಿಲ್ಲದೇ ಶೋಭಿತಾ ಜೊತೆ ನಾಗಚೈತನ್ಯ ಅವರ ನಿಶ್ಚಿತಾರ್ಥ ಜರುಗಿತ್ತು. ಇದೀಗ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಇದೇ ಡಿಸೆಂಬರ್ 4ರಂದು ಶೋಭಿತಾ ಜೊತೆ ಸಮಂತಾ ಮಾಜಿ ಪತಿ ನಾಗಚೈತನ್ಯ ಮದುವೆ ವಿದೇಶದಲ್ಲಿ ಜರುಗಲಿದೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಆ ನಂತರ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮದಲ್ಲಿ ನಡೆಯಲಿದೆ ಎನ್ನಲಾಗಿದೆ. ಈ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ಕುಟುಂಬಸ್ಥರು ಅಧಿಕೃತವಾಗಿ ತಿಳಿಸುವವರೆಗೂ ಕಾಯಬೇಕಿದೆ.

    ಈ ಹಿಂದೆ 2017ರಲ್ಲಿ ಸಮಂತಾ ಜೊತೆ ನಾಗಚೈತನ್ಯ ಮದುವೆಯಾಗಿದ್ದರು. ಹಿಂದೂ ಮತ್ತು ಕ್ರಿಶ್ಚಿಯನ್ ಪಪದ್ಧತಿಯಂತೆ ಈ ಮದುವೆ ಜರುಗಿತ್ತು. ಆದರೆ ಕೆಲ ಮನಸ್ತಾಪಗಳಿಂದ 2021ರಲ್ಲಿ ಇಬ್ಬರೂ ಡಿವೋರ್ಸ್ ಪಡೆದು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದರು.

  • ಮದುವೆ ಸಂಭ್ರಮದಲ್ಲಿ ನಾಗಚೈತನ್ಯ, ಶೋಭಿತಾ

    ಮದುವೆ ಸಂಭ್ರಮದಲ್ಲಿ ನಾಗಚೈತನ್ಯ, ಶೋಭಿತಾ

    ಮಂತಾ (Samantha) ಮಾಜಿ ಪತಿ ನಾಗಚೈತನ್ಯ (Nagachaitanya) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಹೆಣ್ಣಿನ ಮನೆಯಲ್ಲಿ ಮದುವೆ (Wedding) ಶಾಸ್ತ್ರ ಶುರು ಆಗಿದೆ. ಸಂಭ್ರಮದ ಸುಂದರ ಫೋಟೋಗಳನ್ನು ನಾಗಚೈತನ್ಯ ಭಾವಿ ಪತ್ನಿ ಶೋಭಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ನಾಗಚೈತನ್ಯ ಅವರ 2ನೇ ಮದುವೆ ಯಾವಾಗ ಎಂದು ಗುಟ್ಟು ಬಿಟ್ಟು ಕೊಡದೆ ಸೈಲೆಂಟ್ ಮದುವೆ ಶಾಸ್ತ್ರಗಳನ್ನು ಶುರು ಮಾಡಿದ್ದಾರೆ. ಸದ್ದಿಲ್ಲದೆ ಹೆಣ್ಣಿನ ಮನೆಯಲ್ಲಿ ಮದುವೆ ಶಾಸ್ತ್ರ ಜರುಗಿದೆ. ಕೆಂಪು ಬಣ್ಣದ ಸೀರೆಯುಟ್ಟು ನಗುತ್ತಾ ಅರಿಶಿಣವನ್ನು ಕಟ್ಟುವ ಶಾಸ್ತ್ರದಲ್ಲಿ ಶೋಭಿತಾ (Sobhita Dhuliapala) ಕಾಣಿಸಿಕೊಂಡಿದ್ದಾರೆ.

    ಆದರೆ ಮದುವೆ ಯಾವಾಗ? ಎಲ್ಲಿ ಎಂಬುದನ್ನು ಎಲ್ಲೂ ರಿವೀಲ್ ಮಾಡಿಲ್ಲ. ಆದರೆ ರಾಜಸ್ಥಾನದಲ್ಲಿ ನಾಗಚೈತನ್ಯ ಮತ್ತು ಶೋಭಿತಾ ಮದುವೆ ನಡೆಯಲಿದೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದು ನಿಜನಾ? ಎಂಬುದು ಖಾತ್ರಿಯಾಗಿಲ್ಲ. ಇದನ್ನೂ ಓದಿ:ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಹಿರಿಯ ನಟಿ ಶ್ರುತಿ ಕುಟುಂಬದ ಮನೆ ಮಗಳು

    ಅಂದಹಾಗೆ, ಆಗಸ್ಟ್ 8ರಂದು ನಾಗಚೈತನ್ಯ ಅವರು ಶೋಭಿತಾ ಜೊತೆ ತಮ್ಮ ನಿವಾಸದಲ್ಲಿ ಸರಳವಾಗಿ ನಿಶ್ಚಿತಾರ್ಥ ಆದರು. ಈ ಸಂಭ್ರಮದ ವಿಚಾರವನ್ನು ನಾಗರ್ಜುನ ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದರು.

    ಇನ್ನೂ 2017ರಲ್ಲಿ ಸ್ಟಾರ್ ನಟಿ ಸಮಂತಾ ಜೊತೆ ನಾಗಚೈತನ್ಯ ಮದುವೆಯಾಗಿದ್ದರು. ಆದರೆ 2021ರಲ್ಲಿ ಕೆಲ ಮನಸ್ತಾಪಗಳಿಂದ ಇಬ್ಬರೂ ಬೇರೆಯಾದರು. 4 ವರ್ಷಗಳ ದಾಂಪತ್ಯಕ್ಕೆ ಇಬ್ಬರೂ ಅಂತ್ಯ ಹಾಡಿದರು.

  • ಭಾವಿ ಪತ್ನಿ ಜೊತೆ ಬಿಗ್ ಬಾಸ್‌ಗೆ ಬರಲಿದ್ದಾರೆ ಸಮಂತಾ ಮಾಜಿ ಪತಿ

    ಭಾವಿ ಪತ್ನಿ ಜೊತೆ ಬಿಗ್ ಬಾಸ್‌ಗೆ ಬರಲಿದ್ದಾರೆ ಸಮಂತಾ ಮಾಜಿ ಪತಿ

    ತೆಲುಗಿನ ಬಿಗ್ ಬಾಸ್ ಸೀಸನ್ 8ಕ್ಕೆ (Bigg Boss Telugu 8) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ನಾಗಾರ್ಜುನ ನಿರೂಪಣೆಯ ಬಿಗ್ ಬಾಸ್ ಶೋ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಭಾವಿ ಪತ್ನಿ ಶೋಭಿತಾ (Sobhita) ಜೊತೆ ಸಮಂತಾ (Samantha) ಮಾಜಿ ಪತಿ ನಾಗಚೈತನ್ಯ (Nagachaitanya) ದೊಡ್ಮನೆಗೆ ಬರಲಿದ್ದಾರೆ. ಇದನ್ನೂ ಓದಿ:ನನ್ನ ಲೈಫ್‌ನಲ್ಲಿ ಆಗಿದ್ದು ಬೇರೆಯವರಿಗೆ ಆಗಬಾರದು: ಕಾಸ್ಟಿಂಗ್ ಕೌಚ್ ಬಗ್ಗೆ ಸಂಜನಾ ಗಲ್ರಾನಿ ಪ್ರತಿಕ್ರಿಯೆ

    ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡ ನಾಗಚೈತನ್ಯ ಮತ್ತು ಶೋಭಿತಾ ಈ ವಾರಾಂತ್ಯ ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಬರಲಿದ್ದಾರೆ. ವೇದಿಕೆ ಮೇಲೆ ಬಂದು ಹೋಸ್ಟ್ ನಾಗಾರ್ಜುನ ಜೊತೆ ಮಾತನಾಡಿ ತೆರಳುತ್ತಾರಾ? ಅಥವಾ ಬಿಗ್ ಬಾಸ್ ಮನೆಯೊಳಗೆ ಹೋಗ್ತಾರಾ ಎಂಬ ಪ್ರಶ್ನೆ ಈಗ ಅಭಿಮಾನಿಗಳಲ್ಲಿ ಮೂಡಿದೆ.

    ಇನ್ನೂ ಇದುವರೆಗೂ ನಾಗಚೈತನ್ಯ ಮತ್ತು ಶೋಭಿತಾ ಜೋಡಿ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಹಾಗಾಗಿ ಬಿಗ್ ಬಾಸ್‌ಗೆ ಜೊತೆಯಾಗಿ ಬಂದರೆ ಟಿಆರ್‌ಪಿ ಕೂಡ ಹೆಚ್ಚುತ್ತದೆ. ಅಭಿಮಾನಿಗಳು ಕೂಡ ಅವರನ್ನು ನೋಡಲು ಶೋನತ್ತ ಆಸಕ್ತಿ ವಹಿಸುತ್ತಾರೆ.

    ಇನ್ನೂ ಆ.8ರಂದು ಶೋಭಿತಾಗೆ ನಾಗಚೈತನ್ಯ ರಿಂಗ್ ತೊಡಿಸುವ ಮೂಲಕ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಇನ್ನೂ ಮುಂದಿನ ವರ್ಷದ ಅಂತ್ಯದಲ್ಲಿ ಈ ಜೋಡಿ ವಿದೇಶದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಿದ್ದಾರೆ. ಅದಕ್ಕೂ ಮುನ್ನ ಇಬ್ಬರೂ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಬೇಕಿದೆ.

    ಅಂದಹಾಗೆ, 2017ರಲ್ಲಿ ಸ್ಟಾರ್ ನಟಿ ಸಮಂತಾ ಜೊತೆ ನಾಗಚೈತನ್ಯ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಇಬ್ಬರೂ ಡಿವೋರ್ಸ್ ಪಡೆದುಕೊಂಡರು.

  • ಶೋಭಿತಾ ಜೊತೆ ಮದುವೆ ಹೇಗಿರಬೇಕು?- ರಿವೀಲ್ ಮಾಡಿದ ನಾಗಚೈತನ್ಯ

    ಶೋಭಿತಾ ಜೊತೆ ಮದುವೆ ಹೇಗಿರಬೇಕು?- ರಿವೀಲ್ ಮಾಡಿದ ನಾಗಚೈತನ್ಯ

    ಟಾಲಿವುಡ್ ನಟ ನಾಗಚೈತನ್ಯ (Nagachaitanya) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಶೋಭಿತಾ (Sobhita) ಜೊತೆಗಿನ ಮದುವೆ ಹೇಗಿರಬೇಕು ಎಂದು ನಾಗಚೈತನ್ಯ ವಿವರಿಸಿದ್ದಾರೆ. ಮದುವೆ ಕುರಿತಾದ ಕನಸನ್ನು ನಟ ರಿವೀಲ್‌ ಮಾಡಿದ್ದಾರೆ. ಇದನ್ನೂ ಓದಿ:ಇಂದು ದರ್ಶನ್‌ಗೆ ಸಿಗಲಿದೆ 90 ಗ್ರಾಂ ಮಟನ್

    ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮದುಮಗನ ಗೆಟಪ್‌ನಲ್ಲಿ ಅತಿಥಿಯಾಗಿ ನಾಗಚೈತನ್ಯ ಭಾಗಿಯಾಗಿದ್ದರು. ಈ ವೇಳೆ, ಮದುವೆ ಹೇಗೆ ನಡೆಯಬೇಕು ಎಂದು ಎದುರಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಮದುವೆ ಯಾವಾಗಲೂ ದೊಡ್ಡದಾಗಿ ನಡೆಯಬೇಕು ಎಂದೇನು ಇಲ್ಲ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಂತೆ ಮದುವೆ (Wedding) ಆಗಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ ನಾಗಚೈತನ್ಯ.

    ಇನ್ನೂ ಆ.8ರಂದು ಶೋಭಿತಾಗೆ ನಾಗಚೈತನ್ಯ ರಿಂಗ್ ತೊಡಿಸುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಇನ್ನೂ ಮುಂದಿನ ವರ್ಷದ ಅಂತ್ಯದಲ್ಲಿ ಈ ಜೋಡಿ ವಿದೇಶದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಿದ್ದಾರೆ. ಅದಕ್ಕೂ ಮುನ್ನ ಇಬ್ಬರೂ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಬೇಕಿದೆ.

    ಅಂದಹಾಗೆ, 2017ರಲ್ಲಿ ಸ್ಟಾರ್ ನಟಿ ಸಮಂತಾ ಜೊತೆ ನಾಗಚೈತನ್ಯ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಇಬ್ಬರೂ ಡಿವೋರ್ಸ್ ಪಡೆದುಕೊಂಡರು.

  • ಭಾವಿ ಪತ್ನಿ ಶೋಭಿತಾ ಜೊತೆ ಸಿನಿಮಾ ಮಾಡಲ್ಲ: ನಾಗಚೈತನ್ಯ

    ಭಾವಿ ಪತ್ನಿ ಶೋಭಿತಾ ಜೊತೆ ಸಿನಿಮಾ ಮಾಡಲ್ಲ: ನಾಗಚೈತನ್ಯ

    ಟಾಲಿವುಡ್ ನಟ ನಾಗಚೈತನ್ಯ (Nagachaitanya) ಅವರು ಸಿನಿಮಾಗಿಂತ ಹೆಚ್ಚು ಖಾಸಗಿ ವಿಚಾರವಾಗಿ ಸಖತ್ ಸುದ್ದಿಯಾಗ್ತಿದ್ದಾರೆ. ಇದೀಗ ಭಾವಿ ಪತ್ನಿ ಶೋಭಿತಾ (Sobhita) ಜೊತೆ ಸಿನಿಮಾ ಮಾಡ್ತೀರಾ ಎಂದು ಕೇಳಲಾದ ಪ್ರಶ್ನೆಗೆ ನಾಗಚೈತನ್ಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಶೋಭಿತಾ ಜೊತೆ ಸಿನಿಮಾ ಮಾಡಲ್ಲ ಎಂದು ಮಾತನಾಡಿದ್ದಾರೆ.

    ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ನಾಗಚೈತನ್ಯ ಭಾಗವಹಿಸಿದ್ದರು. ಆಗ ಸೂಕ್ತ ಕಥೆ ಸಿಕ್ಕರೆ ಶೋಭಿತಾ ಜೊತೆ ನಟಿಸುತ್ತೀರಾ ಎಂದು ಪ್ರಶ್ನೆ ಕೇಳಲಾಗಿದೆ. ಆ ರೀತಿ ಯಾವುದೇ ಪ್ಲ್ಯಾನ್‌ಗಳಿಲ್ಲ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ತಮಿಳು ನಟಿ ರೇಖಾ ನಾಯರ್ ಕಾರು ಅಪಘಾತ: ವ್ಯಕ್ತಿಯೋರ್ವ ಸಾವು

    ಇನ್ನೂ ಆ.8ರಂದು ಶೋಭಿತಾಗೆ ನಾಗಚೈತನ್ಯ ರಿಂಗ್ ತೊಡಿಸುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಇನ್ನೂ ಮುಂದಿನ ವರ್ಷದ ಅಂತ್ಯದಲ್ಲಿ ಈ ಜೋಡಿ ವಿದೇಶದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಿದ್ದಾರೆ. ಅದಕ್ಕೂ ಮುನ್ನ ಇಬ್ಬರೂ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಬೇಕಿದೆ.

    ಅಂದಹಾಗೆ, 2017ರಲ್ಲಿ ಸ್ಟಾರ್ ನಟಿ ಸಮಂತಾ (Samantha) ಜೊತೆ ನಾಗಚೈತನ್ಯ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಇಬ್ಬರೂ ಡಿವೋರ್ಸ್ ಪಡೆದುಕೊಂಡರು.