Tag: Nagachaitanya

  • ‘ತಾಂಡೇಲ್’ ಸಕ್ಸಸ್ ಬಳಿಕ ಹೊಸ ಸಿನಿಮಾ ಘೋಷಿಸಿದ ನಾಗಚೈತನ್ಯ

    ‘ತಾಂಡೇಲ್’ ಸಕ್ಸಸ್ ಬಳಿಕ ಹೊಸ ಸಿನಿಮಾ ಘೋಷಿಸಿದ ನಾಗಚೈತನ್ಯ

    ತೆಲುಗು ನಟ ನಾಗಚೈತನ್ಯ ‘ತಾಂಡೇಲ್’ (Thandel) ಸಕ್ಸಸ್  ಬಳಿಕ ಹೊಸ ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ‘ವಿರೂಪಾಕ್ಷ’ ಡೈರೆಕ್ಟರ್ ಕಾರ್ತಿಕ್ ದಂಡು ಜೊತೆ ಅವರು ಕೈಜೋಡಿಸಿದ್ದಾರೆ.‌ ಇದನ್ನೂ ಓದಿ:ಅಮಾಯಕರ ಜೀವ ತೆಗೆದ ಉಗ್ರರನ್ನು ಹುಡ್ಕೊಂಡು ಹೋಗಿ ಹೊಡೆಯಬೇಕು: ಶ್ರೀಮುರಳಿ

    ಸಾಯಿ ಪಲ್ಲವಿ ಜೊತೆಗಿನ ‘ತಾಂಡೇಲ್’ ಚಿತ್ರದ ಯಶಸ್ಸಿನ ಬಳಿಕ ವಿಭಿನ್ನ ಕಥೆಯೊಂದಕ್ಕೆ ಓಕೆ ಎಂದಿದ್ದಾರೆ. ಯಶಸ್ಸಿಗಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಈ ಬಾರಿ ಥ್ರಿಲ್ಲರ್ ಕಥೆ ಹೇಳೋಕೆ ನಾಗಚೈತನ್ಯ (Nagachaitanya) ಸಜ್ಜಾಗಿದ್ದಾರೆ. ಹೊಸ ಚಿತ್ರದ ತಯಾರಿ ತುಣುಕೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಹೊಸ ಚಿತ್ರದ ಅನೌನ್ಸ ಮಾಡಿದ್ದಾರೆ. ಇದನ್ನೂ ಓದಿ:ನಾವಿಬ್ಬರೂ ಮೂವರಾಗಿ ಇಂದಿಗೆ 3 ತಿಂಗಳು: ಮಗನ ಫೋಟೋ ಹಂಚಿಕೊಂಡ ಹರಿಪ್ರಿಯಾ ದಂಪತಿ

    ‘ಪುಷ್ಪ 2’ ಖ್ಯಾತಿಯ ಡೈರೆಕ್ಟರ್ ಸುಕುಮಾರ್ ಮತ್ತು ಬಿವಿಎಸ್‌ಎನ್ ಪ್ರಸಾದ್ ಬರೆದ ಕಥೆಗೆ ಕಾರ್ತಿಕ್ ದಂಡು ನಿರ್ದೇಶನ ಮಾಡಲಿದ್ದಾರೆ. ಪೌರಾಣಿಕ ಥ್ರಿಲ್ಲರ್ ಅಂಶದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಈ ಮುಂದಿನ ವರ್ಷ ಈ ಸಿನಿಮಾ ರಿಲೀಸ್‌ಗೆ ಚಿತ್ರತಂಡ ಪ್ಲ್ಯಾನ್ ಮಾಡಿದೆ.

    2009ರಲ್ಲಿ ತೆಲುಗಿನ ‘ಜೋಶ್’ ಸಿನಿಮಾ ಮೂಲಕ ನಾಯಕನಾಗಿ ನಾಗಚೈತನ್ಯ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

  • ಹನಿಮೂನ್ ಮೂಡ್‌ನಲ್ಲಿ ಲವ್ ಬರ್ಡ್ಸ್- ನಾಗಚೈತನ್ಯ ಜೊತೆ ಶೋಭಿತಾ ಜಾಲಿ ರೈಡ್

    ಹನಿಮೂನ್ ಮೂಡ್‌ನಲ್ಲಿ ಲವ್ ಬರ್ಡ್ಸ್- ನಾಗಚೈತನ್ಯ ಜೊತೆ ಶೋಭಿತಾ ಜಾಲಿ ರೈಡ್

    ಸೌತ್‌ನ ಮುದ್ದಾದ ಜೋಡಿ ನಾಗಚೈತನ್ಯ (Nagachaitanya) ಮತ್ತು ಶೋಭಿತಾ (Sobhita Dhulipala) ಹನಿಮೂನ್ ಮೂಡ್‌ನಲ್ಲಿದ್ದಾರೆ. ಪತಿ ನಾಗಚೈತನ್ಯ ಜೊತೆ ಶೋಭಿತಾ ಕಾರ್ ರೈಡ್ ಮಾಡಿದ್ದಾರೆ. ಇದನ್ನೂ ಓದಿ:ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಮಿಂಚಿದ ‘ಎರಡನೇ ಸಲ’ ಚಿತ್ರದ ನಟಿ ಸಂಗೀತಾ

    ಮದುವೆಯ ಬಳಿಕ ನಾಗಚೈತನ್ಯ ಹಾಗೂ ಶೋಭಿತಾ ಜೋಡಿ ಹೊಸ ಸ್ಥಳಗಳಿಗೆ ಭೇಟಿ ಕೊಡುತ್ತಲೇ ಇರುತ್ತಾರೆ. ಈಗ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಾಗಚೈತನ್ಯ ಜೊತೆ ನಟಿ ಕಾರ್ ರೈಸಿಂಗ್ ಮಾಡಿದ್ದಾರೆ.

    ಇತ್ತೀಚೆಗೆ ಈ ಜೋಡಿ ಮೆಕ್ಸಿಕೋಗೆ ಭೇಟಿ ನೀಡಿತ್ತು. ಅಲ್ಲಿನ ಹೊಸ ಜಾಗಗಳಿಗೆ ಭೇಟಿ ನೀಡಿ ಸಮಯ ಕಳೆದಿದ್ದರು. ಇದನ್ನೂ ಓದಿ:ಸಮಂತಾ ನಿರ್ಮಾಣದ ಚೊಚ್ಚಲ ಸಿನಿಮಾ ರಿಲೀಸ್‌ಗೆ ರೆಡಿ

     

    View this post on Instagram

     

    A post shared by Sobhita (@sobhitad)

    ಅಂದಹಾಗೆ, ಸಮಂತಾ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಶೋಭಿತಾ ಜೊತೆ ನಾಗಚೈತನ್ಯ ಮದುವೆಯಾದರು. ಕಳೆದ ವರ್ಷ ಡಿ.4ರಂದು ಹೊಸ ಬಾಳಿಗೆ ಕಾಲಿಟ್ಟರು.

  • ಮದುವೆಯ ಬಳಿಕ ಮೊದಲ ಬಾರಿಗೆ ಚಿತ್ರೀಕರಣದಲ್ಲಿ ಭಾಗಿಯಾದ ಶೋಭಿತಾ

    ಮದುವೆಯ ಬಳಿಕ ಮೊದಲ ಬಾರಿಗೆ ಚಿತ್ರೀಕರಣದಲ್ಲಿ ಭಾಗಿಯಾದ ಶೋಭಿತಾ

    ಟಾಲಿವುಡ್ ನಟ ನಾಗಚೈತನ್ಯ (Naga Chaitanya) ಜೊತೆ ವೈವಾಹಿಕ ಜೀವನದಲ್ಲಿ ಬ್ಯುಸಿಯಿದ್ದ ಶೋಭಿತಾ (Sobhita Dhulipala) ಮತ್ತೆ ಕ್ಯಾಮೆರಾ ಮುಂದೆ ಬಂದಿದ್ದಾರೆ. ಮದುವೆಯ ಬಳಿಕ ಮೊದಲ ಬಾರಿಗೆ ಚಿತ್ರೀಕರಣದಲ್ಲಿ ನಟಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ:ನಟ ದರ್ಶನ್‌ಗೆ ಇನ್ಮುಂದೆ ದೇಶಾದ್ಯಂತ ಸಂಚಾರಕ್ಕೆ ಅವಕಾಶ – ಹೈಕೋರ್ಟ್ ಆದೇಶ

    ಶೋಭಿತಾ ನಟನೆಯ ಹೊಸ ಸಿನಿಮಾದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ನಟಿ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದುವೆಯಾಗಿ ಮೂರು ತಿಂಗಳು ಕಳೆದಿಲ್ಲ. ಅಷ್ಟರಲ್ಲಿ ಕೆಲಸಕ್ಕೆ ಹಾಜರಿ ಹಾಕಿರುವ ನಟಿಯ ನಡೆಗೆ ಫ್ಯಾನ್ಸ್ ಸೂಚಿಸಿದ್ದಾರೆ.

    ಅಂದಹಾಗೆ, ನಾಗಚೈತನ್ಯ ಮತ್ತು ಶೋಭಿತಾ ಹಲವು ವರ್ಷಗಳಿಂದ ಪರಿಚಿತರು. ಆ ಪರಿಚಯವೇ ಮದುವೆಗೆ ಮುನ್ನುಡಿ ಬರೆಯುತು. ಸಮಂತಾ ಜೊತೆ ಡಿವೋರ್ಸ್ ಆದ್ಮೇಲೆ ಶೋಭಿತಾ ಜೊತೆ ನಾಗಚೈತನ್ಯ ಡೇಟಿಂಗ್‌ನಲ್ಲಿದ್ದರು.

    ಇನ್ನೂ ಆಗಸ್ಟ್ 8ರಂದು ತಮ್ಮ ನಿವಾಸದಲ್ಲಿ ಉಂಗುರ ಬದಲಿಸಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕಳೆದ ವರ್ಷದ ಅಂತ್ಯದಲ್ಲಿ ಡಿ.4ರಂದು ಶೋಭಿತಾ ಹಾಗೂ ನಾಗಚೈತನ್ಯ ಮದುವೆಯಾದರು. ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಈ ಮದುವೆ ನಡೆಯಿತು.

  • ಸಮಂತಾಗೆ ಡಿವೋರ್ಸ್ ಕೊಡುವಾಗ ಸಾವಿರ ಬಾರಿ ಯೋಚಿಸಿದ್ದೇನೆ: ನಾಗಚೈತನ್ಯ

    ಸಮಂತಾಗೆ ಡಿವೋರ್ಸ್ ಕೊಡುವಾಗ ಸಾವಿರ ಬಾರಿ ಯೋಚಿಸಿದ್ದೇನೆ: ನಾಗಚೈತನ್ಯ

    ಟಾಲಿವುಡ್ ನಟ ನಾಗಚೈತನ್ಯ (Nagachaitanya) ಸದ್ಯ ‘ತಾಂಡೇಲ್’ (Thandel) ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ನೀಡಿದ ಸಂದರ್ಶನವೊಂದರಲ್ಲಿ ಸಮಂತಾ ಜೊತೆ ದಾಂಪತ್ಯ ಅಂತ್ಯವಾಗಿದ್ದೇಕೆ? ಎಂದು ನಟ ಮುಕ್ತವಾಗಿ ಮಾತನಾಡಿದ್ದಾರೆ. ಸಮಂತಾಗೆ (Samantha) ಡಿವೋರ್ಸ್ (Divorce) ಕೊಡುವಾಗ ಸಾವಿರ ಬಾರಿ ಯೋಚಿಸಿದ್ದೇನೆ ಎಂದು ನಾಗಚೈತನ್ಯ ಹೇಳಿದ್ದಾರೆ. ಇದನ್ನೂ ಓದಿ:ಶೂಟಿಂಗ್‌ಗೆ ಬಂದ ನಟಿಯ ತಾಯಿ ಜೊತೆ ಸಾಲ- ‘ರಣಾಕ್ಷ’ ನಿರ್ಮಾಪಕನ ಮೇಲೆ FIR ದಾಖಲು

    ನಾಗಚೈತನ್ಯ ಸಂದರ್ಶನವೊಂದರಲ್ಲಿ ಮಾತನಾಡಿ, ನಾವು ನಮ್ಮದೇ ಕಾರಣಗಳಿಂದ ನಾವು ದೂರ ಆಗಲು ನಿರ್ಧರಿಸಿದೆವು. ನಮ್ಮ ಈ ನಿರ್ಧಾರವನ್ನು ಪರಸ್ಪರ ಗೌರವಿಸುತ್ತೇವೆ. ನಾವು ಬೇರೆ ಆಗಿ ನಮ್ಮ ಜೀವನದಲ್ಲಿ ನಾವು ಮುಂದುವರೆಯುತ್ತಿದ್ದೇವೆ. ಹೀಗಿದ್ರೂ ಮತ್ತೆ ಯಾಕೆ ವಿವರಣೆ ನೀಡಬೇಕು ಎಂಬುದು ಅರ್ಥವಾಗುತ್ತಿಲ್ಲ. ಜನರು ಮತ್ತು ಮಾಧ್ಯಮದವರು ನಮ್ಮ ನಿರ್ಧಾರವನ್ನು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ. ನಮ್ಮ ವೈಯಕ್ತಿಕ ಜೀವನವನ್ನು ಗೌರವಿಸಿ. ನಮ್ಮ ವಿಚಾರ ಕೆಲವರಿಗೆ ಮನರಂಜನೆ ಆಗಿದೆ ಎಂದು ಖಾರವಾಗಿ ನಟ ಮಾತನಾಡಿದ್ದಾರೆ.

    ನಾವು ನಮ್ಮದೇ ಆದ ಜೀವನ ನಡೆಸುತ್ತಿದ್ದೇವೆ. ಜೀವನದಲ್ಲಿ ನಾನು ಮತ್ತೆ ಪ್ರೀತಿಯನ್ನು ಕಂಡುಕೊಂಡಿದ್ದೇನೆ. ನಾನು ಹಾಗೂ ಶೋಭಿತಾ ಖುಷಿಯಾಗಿದ್ದೇವೆ. ಇಬ್ಬರೂ ಪರಸ್ಪರ ಗೌರವಿಸುತ್ತೇವೆ. ಡಿವೋರ್ಸ್ ಪಡೆಯೋದು ಸೆನ್ಸಿಟಿವ್ ವಿಚಾರ. ನಾನು ಕೂಡ ಒಡೆದು ಹೋದ ಕುಟುಂಬದಿಂದ ಬಂದವನು. ಆ ನೋವು ಏನು ಎಂಬುದು ನನಗೆ ಗೊತ್ತು. ಹಾಗಾಗಿ ಸಮಂತಾಗೆ ಡಿವೋರ್ಸ್ ಕೊಡುವಾಗ ಸಾವಿರ ಬಾರಿ ಯೋಚಿಸಿ ನಿರ್ಧಾರ ತೆಗೆದುಕೊಂಡಿದ್ದೇನೆ. ಇಬ್ಬರು ಒಮ್ಮತದಿಂದಲೇ ಈ ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದಾರೆ ನಾಗಚೈತನ್ಯ.

    ಅಂದಹಾಗೆ, ಸಮಂತಾ ಹಾಗೂ ನಾಗಚೈತನ್ಯ ಅವರು 2017ರಲ್ಲಿ ಮದುವೆಯಾದರು. 2021ರಲ್ಲಿ ಇಬ್ಬರೂ ಡಿವೋರ್ಸ್ ಅನೌನ್ಸ್ ಮಾಡಿದರು. ಬಳಿಕ 2024ರ ಡಿಸೆಂಬರ್‌ನಲ್ಲಿ ನಟಿ ಶೋಭಿತಾ ಜೊತೆ ನಾಗಚೈತನ್ಯ 2ನೇ ಮದುವೆಯಾದರು.

  • ಡೇಟಿಂಗ್ ಸುದ್ದಿ ನಡುವೆ ಮಾಜಿ ಪತಿಯ 2ನೇ ಮದುವೆ ಬಗ್ಗೆ ಸಮಂತಾ ಶಾಕಿಂಗ್ ಕಾಮೆಂಟ್

    ಡೇಟಿಂಗ್ ಸುದ್ದಿ ನಡುವೆ ಮಾಜಿ ಪತಿಯ 2ನೇ ಮದುವೆ ಬಗ್ಗೆ ಸಮಂತಾ ಶಾಕಿಂಗ್ ಕಾಮೆಂಟ್

    ತೆಲುಗಿನ ನಟಿ ಸಮಂತಾ (Samantha) ಈಗೀಗ ಸಿನಿಮಾಗಿಂತ ಹೆಚ್ಚು ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನಿರ್ಮಾಪಕ ರಾಜ್ ನಿಡಿಮೋರು ಜೊತೆಗಿನ ಡೇಟಿಂಗ್ ವಿಚಾರದ ನಡುವೆ ಮಾಜಿ ಪತಿ ನಾಗಚೈತನ್ಯ (Nagachaitanya) ಮದುವೆ (Wedding) ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ:ದರ್ಶನ್‌ರನ್ನು ಮದುವೆಗೆ ಯಾಕೆ ಕರೆದಿಲ್ಲ? – ಖಡಕ್ ಪ್ರಶ್ನೆಗೆ ಡಾಲಿ ಧನಂಜಯ್ ಉತ್ತರ

    ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಸಮಂತಾಗೆ ಮಾಜಿ ಪತಿಯ 2ನೇ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ಮಾಜಿ ಪತಿಯ ಹೊಸ ಜೀವನದ ಬಗ್ಗೆ ನಿಮಗೆ ಅಸೂಯೆ ಇದೆಯೇ? ಎಂದು ಕೇಳಲಾಗಿದೆ. ಈ ಕುರಿತು ಮಾತನಾಡಿದ ನಟಿ, ಅಸೂಯೆಗೆ ನನ್ನ ಜೀವನದಲ್ಲಿ ಜಾಗವಿಲ್ಲ. ಅದು ನನ್ನ ಜೀವನದ ಭಾಗವಾಗುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಎಲ್ಲಾ ಕೆಟ್ಟ ವಿಷಯಗಳಿಗೆ ಅಸೂಯೆಯೇ ಕಾರಣ ಎಂದು ನಾನು ನಂಬುತ್ತೇನೆ.

    ಅಸೂಯೆ ಎಲ್ಲ ಕೆಟ್ಟದ್ದಕ್ಕೂ ಮೂಲ ಎಂದು ನಾನು ಭಾವಿಸುತ್ತೇನೆ. ಉಳಿದಂತೆ ಎಲ್ಲವೂ ಉತ್ತಮವಾಗಿದೆ. ಆದರೆ, ಅಸೂಯೆಗಿಂತ ಅನಾರೋಗ್ಯಕರ ವಿಚಾರಗಳಿಗೆ ಸ್ಥಳವಿಲ್ಲ ಎಂದಿದ್ದಾರೆ ಸಮಂತಾ.

    ಇನ್ನೂ ಕೆಲ ವರ್ಷಗಳ ಡೇಟಿಂಗ್ ಬಳಿಕ 2017ರಲ್ಲಿ ಸಮಂತಾ ಹಾಗೂ ನಾಗಚೈತನ್ಯ ಮದುವೆಯಾದರು. ಆದರೆ ಕೆಲ ಮನಸ್ತಾಪಗಳಿಂದ ಅವರು 2021ರಲ್ಲಿ ಡಿವೋರ್ಸ್ ಘೋಷಿಸಿದರು. ಇದೀಗ ಕಳೆದ ವರ್ಷ ಡಿ.4ರಂದು ಶೋಭಿತಾ ಜೊತೆ ನಾಗಚೈತನ್ಯ ಮದುವೆಯಾದರು.

  • ಶೋಭಿತಾಗೆ ಪ್ರೀತಿಯಿಂದ ನಾಗಚೈತನ್ಯ ಏನೆಂದು ಕರೆಯುತ್ತಾರೆ ಗೊತ್ತಾ?- ರಿವೀಲ್ ಮಾಡಿದ ನಟ

    ಶೋಭಿತಾಗೆ ಪ್ರೀತಿಯಿಂದ ನಾಗಚೈತನ್ಯ ಏನೆಂದು ಕರೆಯುತ್ತಾರೆ ಗೊತ್ತಾ?- ರಿವೀಲ್ ಮಾಡಿದ ನಟ

    ತೆಲುಗಿನ ನಟ ನಾಗಚೈತನ್ಯ ನಟನೆಯ ‘ತಾಂಡೇಲ್’ (Thandel) ಸಿನಿಮಾ ಇದೇ ಫೆ.7ರಂದು ರಿಲೀಸ್‌ಗೆ ಸಜ್ಜಾಗಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ವೇಳೆ, ಪತ್ನಿ ಶೋಭಿತಾ (Sobhita Dhulipala) ಪ್ರೀತಿಯಿಂದ ಯಾವ ಅಡ್ಡ ಹೆಸರಿನಿಂದ ಕರೆಯುತ್ತಾರೆ ಎಂದು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

    ‘ತಾಂಡೇಲ್’ ಸಿನಿಮಾದ ಸಾಂಗ್ಸ್ ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲಿ ‘ಬುಜ್ಜಿ ತಲ್ಲಿ’ ಹಾಡಿಗೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರದಲ್ಲಿ ನಾಯಕಿ ಸಾಯಿ ಪಲ್ಲವಿಗೆ (Sai Pallavi) ನಾಗಚೈತನ್ಯ (Naga Chaitanya) ಬುಜ್ಜಿ ತಲ್ಲಿ ಎಂದು ಕರೆಯುತ್ತಾರೆ. ಇದೇ ಹೆಸರನ್ನು ಪತ್ನಿಗೂ ಕರೆಯುವ ವಿಚಾರವನ್ನು ಸಂದರ್ಶನದಲ್ಲಿ ನಟ ರಿವೀಲ್ ಮಾಡಿದ್ದಾರೆ.

    ಶೋಭಿತಾಗೆ ‘ಬುಜ್ಜಿ ತಲ್ಲಿ’ ಎಂದು ನಟ ಅಡ್ಡ ಹೆಸರು ಇಟ್ಟಿರೋದಾಗಿ ಹೇಳುವ ಮೂಲಕ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಪತ್ನಿಗೆ ಮುದ್ದಾಗಿ ಏನೆಂದು ಕರೆಯುತ್ತಾರೆ ಎಂದು ತಿಳಿಸಿದ್ದಾರೆ.

    ಇನ್ನೂ ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿಯೂ ಶೋಭಿತಾ ಜೊತೆ ಸಿನಿಮಾದಲ್ಲಿಯೂ ಜೋಡಿಯಾಗಿ ಕಾಣಿಸಿಕೊಳ್ಳುತ್ತೇವೆ ಎಂದು ನಾಗಚೈತನ್ಯ ತಿಳಿಸಿದ್ದಾರೆ.

  • ಪೂಜಾ ಹೆಗ್ಡೆಗೆ ಠಕ್ಕರ್-‌ ನಾಗಚೈತನ್ಯಗೆ ಶ್ರೀಲೀಲಾ ಜೋಡಿ?

    ಪೂಜಾ ಹೆಗ್ಡೆಗೆ ಠಕ್ಕರ್-‌ ನಾಗಚೈತನ್ಯಗೆ ಶ್ರೀಲೀಲಾ ಜೋಡಿ?

    ನ್ನಡತಿ ಶ್ರೀಲೀಲಾ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ ಮೇಲೆ ಬೇಡಿಕೆ ಹೆಚ್ಚಾಗಿದೆ. ಸದ್ಯ ಕರಾವಳಿ ನಟಿ ಪೂಜಾ ಹೆಗ್ಡೆಗೆ (Pooja Hegde) ಠಕ್ಕರ್ ಕೊಟ್ಟು ಶ್ರೀಲೀಲಾ ಬಿಗ್ ಆಫರ್‌ವೊಂದನ್ನು ಬಾಚಿಕೊಂಡಿದ್ದಾರೆ. ಸಮಂತಾ ಮಾಜಿ ಪತಿ ನಾಗಚೈತನ್ಯ ಸಿನಿಮಾಗೆ ನಾಯಕಿಯಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಪಿಎಂ ಮೋದಿರನ್ನು ಭೇಟಿಯಾದ ಕರೀನಾ ಕಪೂರ್ ಕುಟುಂಬ

    ಟಾಲಿವುಡ್‌ನಲ್ಲಿ ನಟನೆ, ಡ್ಯಾನ್ಸ್, ಬ್ಯೂಟಿ ಮೂಲಕ ಎಲ್ಲರ ಮನಗೆದ್ದಿರುವ ಸುಂದರಿ ಶ್ರೀಲೀಲಾ ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿವೆ. ನಾಗಚೈತನ್ಯ (Naga Chaitanya) ನಟನೆಯ 24ನೇ ಸಿನಿಮಾಗೆ ಪೂಜಾ ಹೆಗ್ಡೆರನ್ನು ಆಯ್ಕೆ ಮಾಡಿದೆ ಎಂಬ ಸುದ್ದಿ ಇತ್ತು. ಈಗ ಪೂಜಾರನ್ನು ನಾಯಕಿ ಪಾತ್ರಕ್ಕೆ ಕೈಬಿಡಲಾಗಿದ್ದು, ಶ್ರೀಲೀಲಾರನ್ನು ತಂಡ ಫೈನಲ್ ಮಾಡಿದೆ ಎನ್ನಲಾಗಿದೆ. ಚಿತ್ರತಂಡದಿಂದ ಈ ಕುರಿತು ಅಧಿಕೃತ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.

    ಇನ್ನೂ ‘ಪುಷ್ಪ 2’ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಜೊತೆ ಶ್ರೀಲೀಲಾ ಡ್ಯಾನ್ಸ್ ಮಾಡುವ ಮೂಲಕ ಹೈಪ್ ಕ್ರಿಯೆಟ್ ಆಗಿದೆ. ಜೊತೆಗೆ ನಿತಿನ್ ಜೊತೆಗಿನ ‘ರಾಬಿನ್‌ಹುಡ್’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ.

  • ಮದುವೆ ಸಂಭ್ರಮದ ಫೋಟೋ ಹಂಚಿಕೊಂಡ ನಾಗಚೈತನ್ಯ

    ಮದುವೆ ಸಂಭ್ರಮದ ಫೋಟೋ ಹಂಚಿಕೊಂಡ ನಾಗಚೈತನ್ಯ

    ತೆಲುಗಿನ ನಟ ನಾಗಚೈತನ್ಯ (Naga Chaitanya) ಮತ್ತು ಶೋಭಿತಾ (Sobhita Dhulipala) ಡಿ.4ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ಸಂಭ್ರಮದಿಂದ ಮದುವೆಯಾಗಿರುವ (Wedding) ಬ್ಯೂಟಿಫುಲ್ ಫೋಟೋವನ್ನು ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

    ಅನ್ನಪೂರ್ಣ ಸ್ಟುಡಿಯೋದಲ್ಲಿ ಡಿ.4ರಂದು ರಾತ್ರಿ 8:15ಕ್ಕೆ ಶೋಭಿತಾ ಮತ್ತು ನಾಗಚೈತನ್ಯ ಹಸೆಮಣೆ ಏರಿದರು. ಖುಷಿ ಖುಷಿಯಾಗಿ ಇಬ್ಬರೂ ಮದುವೆಯಾಗಿದ್ದಾರೆ.

    ಮದುವೆಯಲ್ಲಿ ಶೋಭಿತಾ ಮತ್ತು ನಾಗಚೈತನ್ಯ ಬಿಳಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಮತ್ತೊಂದು ಫೋಟೋದಲ್ಲಿ ನಟಿ ಗೋಲ್ಡನ್ ಸೀರೆಯಲ್ಲಿ ಮಿಂಚಿದ್ದಾರೆ.

    ಇನ್ನೂ ಶೋಭಿತಾ ಮತ್ತು ನಾಗಚೈತನ್ಯ ಕಾಲೇಜು ದಿನಗಳಿಂದ ಪರಿಚಿತರು. ಸಮಂತಾ (Samantha) ಜೊತೆಗಿನ ದಾಂಪತ್ಯಕ್ಕೆ ಪೂರ್ಣ ವಿರಾಮ ಬಿದ್ಮೇಲೆ ಶೋಭಿತಾ ಎಂಟ್ರಿ ಕೊಟ್ಟರು. ಇದನ್ನೂ ಓದಿ:ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಅನಿಲ್ ಕಪೂರ್?

    ಎರಡೂವರೆ ವರ್ಷಗಳ ಡೇಟಿಂಗ್ ನಂತರ ಗುರುಹಿರಿಯರ ಸಮ್ಮತಿ ಪಡೆದು ಹೊಸ ಬಾಳಿಗೆ ನಾಗಚೈತನ್ಯ ಮತ್ತು ಶೋಭಿತಾ ಕಾಲಿಟ್ಟಿದ್ದಾರೆ. ಮದುವೆಯಲ್ಲಿ ಈ ಜೋಡಿಗೆ ಶುಭಕೋರಲು ನ್ಯಾಚುರಲ್‌ ಸ್ಟಾರ್‌ ನಾನಿ ದಂಪತಿ, ನಟ ಕಾರ್ತಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

    ಈ ವರ್ಷ ಆಗಸ್ಟ್ 8ರಂದು ಈ ಜೋಡಿ ನಿಶ್ಚಿತಾರ್ಥ ಕಾರ್ಯಕ್ರಮ ನಟನ ನಿವಾಸದಲ್ಲಿ ಸರಳವಾಗಿ ಜರುಗಿತು. ನಾಗಾರ್ಜುನ ಅಕ್ಕಿನೇನಿ (Nagarjuna Akkineni) ಅವರು ಸೊಸೆಯನ್ನು ಫ್ಯಾನ್ಸ್‌ಗೆ ಪರಿಚಿಯಿಸಿದರು.

    ಅಂದಹಾಗೆ, ‘ಯೇ ಮಾಯ ಚೇಸಾವೆ’ ಸಿನಿಮಾದಲ್ಲಿ ನಾಗಚೈತನ್ಯ ಮತ್ತು ಸಮಂತಾ ಜೊತೆಯಾಗಿ ನಟಿಸಿದರು. ಈ ವೇಳೆ, ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಹಲವು ವರ್ಷಗಳ ಡೇಟಿಂಗ್ ನಂತರ 2017ರಲ್ಲಿ ಹಿಂದೂ ಮತ್ತು ಕ್ರೈಸ್ತ ಧರ್ಮದಂತೆ ಇಬ್ಬರ ಮದುವೆ ನಡೆದಿತ್ತು.

    ಕೆಲ ಮನಸ್ತಾಪಗಳಿಂದ 2021ರಲ್ಲಿ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಘೋಷಿಸಿದರು. 4 ವರ್ಷಗಳ ದಾಂಪತ್ಯಕ್ಕೆ ಈ ಜೋಡಿ ಅಂತ್ಯ ಹಾಡಿದರು.

     

    View this post on Instagram

     

    A post shared by Sobhita (@sobhitad)

    ಇನ್ನೂ ಸಮಂತಾ ಡಿವೋರ್ಸ್ ವಿಚಾರ ತಂದೆ ಜೋಸೆಫ್ ಪ್ರಭುಗೆ ನೋವುಂಟು ಮಾಡಿತ್ತು. ಈ ನೋವಿನಿಂದ ಹೊರಬರಲು ಸಾಕಷ್ಟು ಸಮಯ ತೆಗೆದುಕೊಂಡಿದರು. ನಾಗಚೈತನ್ಯ ಮದುವೆಯ 1 ವಾರಗಳ ಮುನ್ನ ಅಂದರೆ ನ.29ರಂದು ಸಮಂತಾ ತಂದೆ ನಿಧನರಾದರು.

  • ಮಾಜಿ ಪತಿ ಮದುವೆ ದಿನ ಸಮಂತಾ ಪೋಸ್ಟ್ ವೈರಲ್- ‘ಹುಡುಗಿಯಂತೆ ಹೋರಾಡಿ’ ಎಂದ ನಟಿ

    ಮಾಜಿ ಪತಿ ಮದುವೆ ದಿನ ಸಮಂತಾ ಪೋಸ್ಟ್ ವೈರಲ್- ‘ಹುಡುಗಿಯಂತೆ ಹೋರಾಡಿ’ ಎಂದ ನಟಿ

    ಟಿ ಶೋಭಿತಾ (Sobhita Dhulipala) ಜೊತೆ ನಾಗಚೈತನ್ಯ (Nagachaitanya) ಡಿ.4ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮಾಜಿ ಪತಿ ನಾಗಚೈತನ್ಯ ಮದುವೆ ದಿನ ಸಮಂತಾ (Samantha) ಹಂಚಿಕೊಂಡ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹುಡುಗಿಯಂತೆ ಹೋರಾಡಿ ಎಂದು ನಟಿ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಶ್ರೀಲೀಲಾಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ: ಹೊಗಳಿದ ಅಲ್ಲು ಅರ್ಜುನ್

    ಹಾಲಿವುಡ್ ತಾರೆ ವಯೋಲಾ ಡೇವಿಸ್ ಕಥೆಯ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಪುಟ್ಟ ಬಾಲಕ ಹಾಗೂ ಬಾಲಕಿಯ ನಡುವೆ ಫೈಟ್ ನಡೆಯುತ್ತಿದೆ. ಆತ್ಮವಿಶ್ವಾಸದ ಮನೋಭಾವದಿಂದ ಹುಡುಗ ಜಗಳ ಆರಂಭಿಸಿ ನಂತರ ಹುಡುಗಿಯ ಎದುರು ಸೋತು ಅಳಲು ಆರಂಭಿಸುತ್ತಾನೆ. ಈ ವಿಡಿಯೋ ಹಂಚಿಕೊಂಡಿರುವ ಸಮಂತಾ, ‘ಹುಡುಗಿಯಂತೆ ಹೋರಾಡಿ’ ಎಂದು ಬರೆದಿದ್ದಾರೆ. ಈ ಮೂಲಕ ನಿಗೂಢ ಸಂದೇಶ ಬರೆದುಕೊಂಡಿದ್ದಾರೆ.

    ಅಂದಹಾಗೆ, ಸಮಂತಾ ಜೊತೆ 2017ರಲ್ಲಿ ನಾಗಚೈತನ್ಯ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ ಇಬ್ಬರೂ ಡಿವೋರ್ಸ್ ಪಡೆದುಕೊಳ್ಳುವುದಾಗಿ 2021ರಲ್ಲಿ ಅನೌನ್ಸ್ ಮಾಡಿದರು. ಡಿ.4ರಂದು ಶೋಭಿತಾ ಜೊತೆ ನಟ 2ನೇ ಮದುವೆ ಆಗಿದ್ದಾರೆ.

  • ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾಗಚೈತನ್ಯ, ಶೋಭಿತಾ – ನಾಗಾರ್ಜುನ ಭಾವುಕ

    ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾಗಚೈತನ್ಯ, ಶೋಭಿತಾ – ನಾಗಾರ್ಜುನ ಭಾವುಕ

    ಹೈದರಾಬಾದ್: ಕೆಲ ವರ್ಷಗಳ ಡೇಟಿಂಗ್ ಬಳಿಕ ತೆಲುಗು ನಟ ನಾಗಚೈತನ್ಯ (Naga Chaitanya) ಮತ್ತು ನಟಿ ಶೋಭಿತಾ (Sobhita Dhulipala)  ಡಿಸೆಂಬರ್ 4ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ವೇಳೆ ಮಗನ ಮದುವೆ ಕಂಡು ತಂದೆ ನಾಗಾರ್ಜುನ (Nagarjuna Akkineni) ಭಾವುಕರಾಗಿದ್ದಾರೆ.

    ಡಿಸೆಂಬರ್ 4ರಂದು ರಾತ್ರಿ 8:15ಕ್ಕೆ ನಾಗಚೈತನ್ಯ ಹಾಗೂ ಶೋಭಿತಾ ಸಪ್ತಪದಿ ತುಳಿದಿದ್ದಾರೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿರುವ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪ್ರತಿಮೆ ಮುಂದೆ ನಾಗಚೈತನ್ಯ ಹಾಗೂ ಶೋಭಿತಾ ಕಲ್ಯಾಣ ನಡೆದಿದೆ. ತಂದೆ ನಾಗಾರ್ಜುನ ಮುಂದೆ ನಿಂತು ಮಗನ ಎರಡನೇ ಮದುವೆ ನಡೆಸಿದ್ದಾರೆ.

    ಮಗನ ಮದುವೆ ಫೋಟೋ ಎಕ್ಸ್‌ನಲ್ಲಿ ಹಂಚಿಕೊಂಡು ನಾಗಾರ್ಜುನ ಭಾವುಕರಾಗಿದ್ದಾರೆ. ಮಗನ ಮದುವೆ ಭಾವನಾತ್ಮಕ ಕ್ಷಣ. ನನ್ನ ಪ್ರೀತಿಯ ಚೈಗೆ ಅಭಿನಂದನೆಗಳು ಹಾಗೇ ಕುಟುಂಬಕ್ಕೆ ಸ್ವಾಗತ ಶೋಭಿತಾ. ನೀವಿಬ್ಬರು ನಮ್ಮ ಜೀವನದಲ್ಲಿ ತುಂಬಾ ಸಂತೋಷವನ್ನು ತಂದಿದ್ದೀರಿ ಎಂದು ಬರೆದು ಎಕ್ಸ್‌ನಲ್ಲಿ ನಾಗಾರ್ಜುನ ಪೋಸ್ಟ್ ಮಾಡಿದ್ದಾರೆ.

    ನಾಗಚೈತನ್ಯ ಹಾಗೂ ಶೋಭಿತಾ ಕಲ್ಯಾಣಕ್ಕೆ ಕೇವಲ 400 ಅತಿಥಿಗಳಿಗೆ ಮಾತ್ರ ಮದುವೆ ಆಹ್ವಾನ ನೀಡಲಾಗಿತ್ತು. ಅಲ್ಲು ಅರ್ಜುನ್, ರಾಮ್ ಚರಣ್ ದಂಪತಿ, ಮಹೇಶ್ ಬಾಬು ದಂಪತಿ, ಪ್ರಭಾಸ್, ರಾಜಮೌಳಿ, ಪಿ.ವಿ ಸಿಂಧೂ ಸೇರಿ ಹಲವು ಗಣ್ಯರು ನವದಂಪತಿಗೆ ಶುಭಕೋರಿದರು.