Tag: Naga Sadhu

  • ಸ್ಮಶಾನದಲ್ಲಿ ಜಾಗರಣೆ ಮಾಡಿದ್ದಕ್ಕೆ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ತಪ್ಪಿದೆ: ನಾಗಾ ಸಾಧು

    ಸ್ಮಶಾನದಲ್ಲಿ ಜಾಗರಣೆ ಮಾಡಿದ್ದಕ್ಕೆ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ತಪ್ಪಿದೆ: ನಾಗಾ ಸಾಧು

    ಬೆಳಗಾವಿ: ಶಾಸಕ ಸತೀಶ್ ಜಾರಕಿಹೊಳಿ ಸ್ಮಶಾನದಲ್ಲಿ ಜಾಗರಣೆ ಮಾಡಿದ್ದರಿಂದಲೇ ಸಚಿವ ಸ್ಥಾನ ಕೈ ತಪ್ಪಿದೆ ಎಂದು ಹರಿದ್ವಾರದ ನಾಗಾ ಸಾಧುಗಳು ಹೇಳಿದ್ದಾರೆ.

    ಉತ್ತರ ಭಾರತದ ಪ್ರವಾಸದಲ್ಲಿರುವ ನಾಗಾ ಸಾಧುಗಳು ಬೆಳಗಾವಿಯ ಭಕ್ತರೊಬ್ಬರ ಮನೆಗೆ ಆಗಮಿಸಿ, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸ್ಮಶಾನದಲ್ಲಿ ಸಿದ್ಧಿ ಮಾಡುವಾಗ ವ್ಯತಿರಿಕ್ತ ಪರಿಣಾಮಗಳು ಆಗುತ್ತದೆ. ಸದ್ಯ ಆ ಪರಿಣಾಮ ಸತೀಶ್ ಜಾರಕಿಹೊಳಿ ಅವರಿಗೆ ಉಂಟಾಗಿದ್ದು, ಅದನ್ನು ಎದುರಿಸುತ್ತಿದ್ದಾರೆ ಎಂದು ನುಡಿದರು.

    ರಾಜ್ಯದಲ್ಲಿ ಸಮಿಶ್ರ ಸರ್ಕಾರ ಉತ್ತಮ ಆಡಳಿತ ನೀಡಲಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃದ ಸರ್ಕಾರ 5 ವರ್ಷದ ಆಳ್ವಿಕೆ ಮಾಡಲಿದೆ ಎಂದು ನಾಥ ಪಂತಿಯ ಸಾಧುಗಳು ಭವಿಷ್ಯ ನುಡಿದರು.

    ಕಳೆದ ವರ್ಷ ಡಿಸೆಂಬರ್ 6ರಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಮೂಢನಂಬಿಕೆ ವಿರೋಧಿ ಪರಿವರ್ತನಾ ಜಾಥಾ ಆಯೋಜಿಸಿದ್ದರು. ಅಲ್ಲದೇ ಅಂದು ಬೆಳಗಾವಿಯ ಸ್ಮಶಾನದಲ್ಲಿ ಜಾಗರಣೆ ಹಮ್ಮಿಕೊಂಡಿದ್ದರು.

  • ಉದ್ಯಮಿ ಮನೆಗೆ ದಿಢೀರ್ ಭೇಟಿ ನೀಡಿ ವಿಶೇಷ ಆಶೀರ್ವಾದ ನೀಡಿದ ನಾಗಾಸಾಧು!

    ಉದ್ಯಮಿ ಮನೆಗೆ ದಿಢೀರ್ ಭೇಟಿ ನೀಡಿ ವಿಶೇಷ ಆಶೀರ್ವಾದ ನೀಡಿದ ನಾಗಾಸಾಧು!

    ಚಿತ್ರದುರ್ಗ: ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಮನೆಗೆ ಭೇಟಿ ಕೊಟ್ಟಿದ್ದ ಸಾಧುಗಳಲ್ಲಿ ಓರ್ವ ಚಿತ್ರದುರ್ಗಕ್ಕೆ ದಿಢೀರ್ ಭೇಟಿ ನೀಡಿದ್ದಾರೆ.

    ದೆಹಲಿ ನೋಂದಣಿಯುಳ್ಳ ಕೆಂಪು ಕಾರಿನಲ್ಲಿ ಬಂದಿದ್ದ ನಾಗಸಾಧು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮುತ್ತುಗದೂರು ಗ್ರಾಮಕ್ಕೆ ಭೇಟಿ ನೀಡಿದ್ದರು. ಆ ವೇಳೆ ನಾಗಸಾಧುವನ್ನು ಗ್ರಾಮಸ್ಥರು ಕುತೂಹಲದಿಂದ ರಸ್ತೆ ಬದಿಯಲ್ಲಿ ವೀಕ್ಷಿಸುತ್ತಿದ್ದರು. ಆಗ ಅಲ್ಲಿಗೆ ಆಗಮಿಸಿದ ಉದ್ಯಮಿ ಸಿದ್ದೇಶ್ ಅವರನ್ನು ನಾಗಸಾಧುಗಳೇ ಮಾತನಾಡಿಸಿ, ತಮ್ಮ ಮನೆಗೆ ತಾವು ಆಹ್ವಾನಿಸಿದರೆ ಭೇಟಿ ನೀಡಿ ಆಶೀರ್ವದಿಸಿ ಮುಂದೆ ಸಾಗುವುದಾಗಿ ಹೇಳಿದರು.

    ಉದ್ಯಮಿ ಸಿದ್ದೇಶ್ ಮನೆಯಲ್ಲಿ ಚಹಾ ಸೇವಿಸಿದ ನಾಗ ಸಾಧು ಮುಂಬರುವ ದಿನಗಳಲ್ಲಿ ಈ ಮನೆಯ ಯಜಮಾನರಾಗಿರೊ ಸಿದ್ದೇಶ್ ಶಾಸಕರಾಗುವ ಭಾಗ್ಯವಿದೆ ಅಂತ ಹೇಳಿದ್ದಾರೆ. ನಂತರ ಸಿದ್ದೇಶ್ ಕುಟುಂಬದ ಸದಸ್ಯರೆಲ್ಲರನ್ನು ಆಶೀರ್ವದಿಸಿ ಮುಂದೆ ನಡೆದ್ರು. ಈ ವೇಳೆ ನಾಗಸಾಧು ಭೇಟಿ ಹಾಗು ಹೇಳಿಕೆ ಚಿತ್ರದುರ್ಗ ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇನ್ನು ಮನೆಗೆ ಆಹ್ವಾನಿಸಿದರೂ ಕೆಲವೊಮ್ಮೆ ಬಾರದ ನಾಗಸಾಧುಗಳು, ದಿಢೀರ್ ಮನೆಗೆ ಬಂದಿದ್ದರಿಂದ ತೀವ್ರ ಸಂತಸ ಹಾಗು ಆಶ್ಚರ್ಯ ಕುಟುಂಬಸ್ಥರಿಂದ ವ್ಯಕ್ತವಾಗಿದೆ.

  • ನಾಗಾ ಸಾಧುಗಳ ಬೆನ್ನುಬಿದ್ದ ಸಿದ್ದರಾಮಯ್ಯ ಆಪ್ತರು!

    ನಾಗಾ ಸಾಧುಗಳ ಬೆನ್ನುಬಿದ್ದ ಸಿದ್ದರಾಮಯ್ಯ ಆಪ್ತರು!

    ಮೈಸೂರು: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದಂತೆ ಅದು ಯಾವ ಯಾವ ಬಗೆಯ ರಾಜಕಾರಣ ಶುರುವಾಗುತ್ತೋ ಆ ದೇವರೆ ಬಲ್ಲ ಅನ್ನೋ ಸ್ಥಿತಿ ಇದೆ. ಕಾರಣ, ಟೀಕೆ ರಾಜಕಾರಣ, ಪಕ್ಷಾಂತರ ರಾಜಕಾರಣ, ಜ್ಯೋತಿಷ್ಯ ರಾಜಕಾರಣ ನಡೆದಂತೆ ಈಗ ರಾಜ್ಯದಲ್ಲಿ ನಾಗಾಸಾಧು ಪಾಲಿಟೆಕ್ಸ್ ಆರಂಭವಾಗಿದೆ.

    ಅಕ್ಟೋಬರ್ 2 ರಂದು ಬೆಂಗಳೂರಿನಲ್ಲಿ ಕೆಲ ನಾಗಾಸಾಧುಗಳು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ಆಗಮಿಸಿ ಸಿಎಂ ಆಗುವಂತೆ ಆಶಿರ್ವಾದ ಮಾಡಿದ್ದರು. ಇವತ್ತು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಭಿಮಾನಿ ಕಂಸಾಳೆ ರವಿ ಅವರ ಮನೆಗೆ ನಾಗಾಸಾಧುಗಳು ಬಂದು ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ವರ್ತೂರು ಪ್ರಕಾಶ್ ಅವರ ಫೋಟೋಗೆ ಆಶೀರ್ವದಿಸಿ ಶುಭಾವಾಗುವಂತೆ ಹಾರೈಸಿದ್ದಾರೆ.

    ಕಂಸಾಳೆ ರವಿ ಸಿಎಂ ಅವರ ಪರಮ ಅಭಿಮಾನಿ. ಹೀಗಾಗಿ ಸಿದ್ದರಾಮಯ್ಯ ಹಾಗೂ ವರ್ತೂರು ಪ್ರಕಾಶ್ ಅವರ ಫೋಟೋಗೆ ಹಿಮಾಲಯದಿಂದ ಬಂದ ಈ ನಾಗಾ ಸಾಧು ಮುಂದಿನ ಚುನಾವಣೆಯಲ್ಲಿ ಶುಭವಾಗಲಿ ಎಂದು ಆಶಿರ್ವಾದಿಸಿದ್ದಾರೆ.

    ಇದನ್ನೂ ಓದಿ: ಮನೆಗೆ ನಾಗ ಸಾಧುಗಳು ಬಂದು ಹೇಳಿದ್ದೇನು: ಬಿಎಸ್‍ವೈ ತಿಳಿಸಿದ್ರು