ಬೆಂಗಳೂರು: ನಕಲಿ ನಾಗಸಾಧುವೊಬ್ಬ (Fake Naga Sadhu) ಕಾರು ಚಾಲಕನಿಗೆ ಮಂಕುಬೂದಿ ಎರಚಿರೊ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಚಾಲಕನಿಗೆ ರುದ್ರಾಕ್ಷಿ ಕೊಟ್ಟು ಕೈಯಲ್ಲಿದ್ದ 10 ಗ್ರಾಂ ಚಿನ್ನದ ಉಂಗುರ (Gold Ring) ಕಸಿದು ಪರಾರಿಯಾಗಿದ್ದಾನೆ.
ವೈಯಾಲಿಕಾವಲ್ ನಿವಾಸಿ ವೆಂಕಟಕೃಷ್ಣಯ್ಯ ಇದೇ ಏ.19ರಂದು ಖಾಸಗಿ ಹೋಟೆಲ್ ಬಳಿ ಮಾಲೀಕರನ್ನ ಡ್ರಾಪ್ ಮಾಡಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿಕೊಂಡು ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ನಕಲಿ ನಾಗಸಾಧು ಚಾಲಕನನ್ನು ಕಂಡು 5 ನಿಮಿಷ ವಿಶ್ರಾಂತಿ ಪಡೆದುಕೊಳ್ಳಬೇಕು ಅಂತ ಹೇಳಿದ್ದಾನೆ. ನಂತ್ರ ತನ್ನ ಅಸಲಿ ವರಸೆ ತೆಗೆದಿದ್ದಾನೆ. ಇದನ್ನೂ ಓದಿ: ಮೇ 7ರಿಂದ ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಪ್ರಾರಂಭ
ನಂತ್ರ ನಿನ್ನ ಕೈಯಲ್ಲಿರುವ ಚಿನ್ನದ ಉಂಗುರ ಕೊಡು ಅಂತ ಹೇಳಿದ್ದಾನೆ. ಚಿನ್ನದ ಉಂಗುರ ಬಿಚ್ಚಿ ಕೊಡುತ್ತಿದ್ದಂತೆ ಹಣೆಗೆ ಬೂದಿ ರೀತಿಯ ವಸ್ತುವನ್ನು ಹಚ್ಚಿದ್ದಾನೆ. ಹಿಂದೆ ತಿರುಗಿ ನೋಡದೇ ಸ್ವಲ್ಪ ಮುಂದೆ ಹೋಗು ಇಲ್ಲದಿದ್ರೆ ನಿನಗೆ ಕೆಡುಕಾಗುತ್ತದೆ ಅಂತ ಹೇಳಿದ್ದಾನೆ. ಆತನ ಮಾತು ಕೇಳಿ ಮಂಕುಬಡಿದಂತಾದ ವೆಂಕಟಕೃಷ್ಣಯ್ಯ ಮುಂದೆ ಬಂದಿದ್ದಾನೆ. ಬಳಿಕ ನಕಲಿ ನಾಗಸಾಧು ಅಲ್ಲಿಂದ ಮಾಯವಾಗಿದ್ದಾನೆ.
‘ನಾಗ’ ಎಂಬ ಪದವು ಪ್ರಾಚೀನ ಕಾಲದಲ್ಲಿ ಭಾರತದ ಕಾಡುಗಳು ಮತ್ತು ಬೆಟ್ಟಗಳಲ್ಲಿ ಅಲೆದಾಡುತ್ತಿದ್ದ ಹಾವಿನ ಆರಾಧಕರ ಪ್ರಾಚೀನ ಬುಡಕಟ್ಟು ಜನಾಂಗವನ್ನು ಸೂಚಿಸುತ್ತದೆ. ನಾಗ ಸಾಧುಗಳು (Naga sadhu) ಶಿವನೇ (Shiva) ದೇವರೆಂದು ನಂಬುತ್ತಾರೆ. ಶಿವನು ಆಧ್ಯಾತ್ಮಿಕ ನಿರ್ಲಿಪ್ತತೆಯ ಸಾಕಾರ ಮತ್ತು ಹಿಂದೂ ಧರ್ಮದ ಪ್ರಬಲ ರಕ್ಷಕ ಎಂದು ನಾಗ ಜನರು ಭಾವಿಸುತ್ತಾರೆ.
ನಾಗ ಜನರು ಶಿವನನ್ನು ಯಾಕೆ ಆರಾಧಿಸುತ್ತಾರೆ ಎನ್ನುವುದಕ್ಕೂ ಕಥೆಯಿದೆ. ದುರ್ವಾಸರ ಶಾಪದಿಂದ ಸ್ವರ್ಗದ ಸುವಸ್ತಗಳು ಸಮುದ್ರದಲ್ಲಿ ಮುಳುಗಿಹೋದವು. ಅದನ್ನೆಲ್ಲ ಹೊರ ತೆಗೆಯಲು ಸಮುದ್ರ ಮಥನ ಮಾಡಬೇಕಾಯಿತು. ಆಗ ತ್ರಿಮೂರ್ತಿಗಳ ಸೂಚನೆಯಂತೆ ಮಂದರಪರ್ವತವನ್ನೇ ಕಡೆಗೋಲನ್ನಾಗಿಸಿ ಕಡೆಯಲು ಉದ್ದೇಶಿಸಲಾಯಿತು. ಅದಕ್ಕೆ ಸುತ್ತು ಬರುವಷ್ಟು ಉದ್ದದ ಹಗ್ಗಕ್ಕೆ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದಾಗ ಸರ್ಪರಾಜ ವಾಸುಕಿ ತಾನೇ ಹಗ್ಗವಾಗುತ್ತೇನೆ ಎಂದು ಒಪ್ಪಿಕೊಳ್ಳುತ್ತಾನೆ. ಆತನನ್ನು ಮಂದರ ಪರ್ವತಕ್ಕೆ ಸುತ್ತಿ ಮಥಿಸಲಾಯಿತು. ಆಗ ಮೊದಲಿಗೆ ಹಾಲಾಹಲ ವಿಷ ಉಕ್ಕಿಬಂತು. ಅದು ದೇವತೆಗಳನ್ನು ಸುಡಲಾರಂಭಿಸಿದಾಗ ಕೋಲಾಹಲ ಉಂಟಾಯಿತು.
ದೇವತೆಗಳನ್ನು ಕಾಪಾಡಲು ಶಿವನೇ ಅದನ್ನು ಹೀರಿ ಗಂಟಲಲ್ಲಿ ಇಟ್ಟುಕೊಂಡ. ಹಾಗೆ ನೀಲಕಂಠನಾದ. ಆದರೆ ಇನ್ನೂ ಸಾಕಷ್ಟು ವಿಷ ಉಳಿಯಿತು. ಆಗ ವಾಸುಕಿ ಮತ್ತು ಆತನ ಸಹಚರ ಸರ್ಪಗಳು ಸೇರಿ ಸೇವಿಸಿ ಹಲ್ಲುಗಳಲ್ಲಿ ಇಟ್ಟುಕೊಂಡು ದೇವತೆಗಳನ್ನು ಕಾಪಾಡಿದವು. ವಾಸುಕಿಯ ಈ ಸೇವೆಯಿಂದ ಪುನೀತನಾದ ಶಿವ ಆತನನ್ನು ತನ್ನ ಕೊರಳ ಸುತ್ತ ಕಂಠಾಭರಣವಾಗಿ ಧರಿಸಿ ಶಾಶ್ವತ ಸ್ಥಾನ ನೀಡಿದ. ನಾಗಗಳ ರಾಜನಾದ ವಾಸುಕಿಗೆ ತನ್ನ ಕೊರಳಿನಲ್ಲಿ ಸ್ಥಾನ ನೀಡಿದ್ದಕ್ಕೆ ನಾಗಗಳು ಈಗಲೂ ಶಿವನನ್ನೇ ದೇವರೆಂದು ಭಾವಿಸಿ ಪೂಜೆ ಮಾಡುತ್ತಾರೆ.
ಶೈವ ಸಂಪ್ರದಾಯದ ಕಟ್ಟಾ ಅನುಯಾಯಿಗಳಾಗಿರುವ ಇವರು ಶಿವಲಿಂಗಕ್ಕೆ ಬಿಲ್ವ ಪತ್ರೆ, ಬೂದಿ ಮತ್ತು ನೀರನ್ನು ಅರ್ಪಿಸುವ ಮೂಲಕ ಪೂಜಿಸುತ್ತಾರೆ. ನಾಗಾ ಸಾಧುಗಳ ಸಂಪ್ರದಾಯದಲ್ಲಿ ಬೆಂಕಿ ಮತ್ತು ಬೂದಿ ಪ್ರಮುಖ ಪಾತ್ರ ವಹಿಸುತ್ತದೆ. ಶಿವನನ್ನು ಒಲಿಸಿಕೊಳ್ಳಲು ಯೋಗ, ಧ್ಯಾನ ಮಾಡುತ್ತಾರೆ. ಇದನ್ನೂ ಓದಿ: ಮಹಾ ಶಿವರಾತ್ರಿಯಂದು ಭೇಟಿ ನೀಡಬಹುದಾದ ದಕ್ಷಿಣ ಕರ್ನಾಟಕದ ಪುರಾಣ ಪ್ರಸಿದ್ಧ ದೇವಾಲಯಗಳು
ಒಂದು ಬಾರಿ ಮಾತ್ರ ಊಟ ಸೇವಿಸುವ ಇವರು ಭಿಕ್ಷೆ ಬೇಡುವ ಮೂಲಕ ತಮ್ಮ ಆಹಾರವನ್ನು ಪಡೆಯುತ್ತಾರೆ. ಒಂದು ದಿನದಲ್ಲಿ ಅವರು ಕೇವಲ ಏಳು ಮನೆಗಳಿಂದಷ್ಟೇ ಭಿಕ್ಷೆ ಸಂಗ್ರಹಿಸುವ ಕಠಿಣ ನಿಯಮ ಪಾಲಿಸುತ್ತಾರೆ. ಒಂದು ವೇಳೆ ಏಳು ಮನೆಯಲ್ಲಿ ಆಹಾರ ಸಿಗದೇ ಇದ್ದರೆ ಆ ದಿನ ಅವರು ಉಪವಾಸ ಇರುತ್ತಾರೆ. ಯಾವುದೇ ಕುಂಭ ಮೇಳ ಇರಲಿ ಮೊದಲು ಸ್ನಾನ ಮಾಡುವವರು ಈ ನಾಗ ಸಾಧುಗಳು. ಕುಂಭ ಹಬ್ಬದ ಸಮಯದಲ್ಲಿಯೂ ಸಹ ಹಲವಾರು ಜನರು ನಾಗಾ ಸಾಧುಗಳ ಆಶೀರ್ವಾದ ಪಡೆಯಲು ಅವರ ಅಖಾಡಗಳಿಗೆ ಭೇಟಿ ನೀಡುತ್ತಾರೆ.
ನಾಗಾ ಸಾಧು ಆಗಲು ಬಹಳ ಕಷ್ಟಕರವಾದ ಪರೀಕ್ಷೆಗಳಿಗೆ ಒಳಗಾಗಬೇಕು ಮತ್ತು ಕಷ್ಟಕರವಾದ ತಪಸ್ಸನ್ನು ಅಭ್ಯಾಸ ಮಾಡಬೇಕಾಗುತ್ತದೆ. ನಾಗಾ ಸಾಧು ಆಗಲು ಸುಮಾರು 12 ವರ್ಷ ಅಖಾಡಗಳಲ್ಲಿಯೇ ಇರುತ್ತಾರೆ ಮತ್ತು ಸನ್ಯಾಸಿಯಾಗಲು ಅಖಾಡಗಳ ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಗುರುಗಳ ಬೋಧನೆಗಳನ್ನು ಸರಿಯಾದ ರೀತಿಯಲ್ಲಿ ಪಡೆದಾಗ ನಾಗ ಸಾಧುವಾಗುವ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ನಾಗ ಸಾಧುವಾದ ಬಳಿಕ ಅಖಾಡದ ಯಾವುದಾದರೂ ವಿಭಾಗದ ಮುಖ್ಯಸ್ಥರಾಗುತ್ತಾರೆ ಅಥವಾ ಅಖಾಡದಲ್ಲಿಯೇ ಯಾವುದೇ ದೊಡ್ಡ ವಿದ್ವಾಂಸರಾಗುತ್ತಾರೆ.
ನಾಗಾ ಸಾಧುಗಳು ಸಾಮಾನ್ಯವಾಗಿ ಬೆತ್ತಲೆಯಾಗಿ ಸುತ್ತಾಡುತ್ತಾರೆ. ಕುಂಭಮೇಳದಲ್ಲಿ (Kumbh Mela) ಭಾಗವಹಿಸಿದ ನಂತರ ಹಿಮಾಲಯಕ್ಕೆ ತೆರಳುತ್ತಾರೆ. ಭಾರತದಲ್ಲಿ ಮಹಾಕುಂಭ ಹಬ್ಬದ ಸಮಯದಲ್ಲಿ ಪವಿತ್ರ ಸ್ನಾನದಲ್ಲಿ ಭಾಗವಹಿಸಲು ನಾಗ ಸಾಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಚಿತ್ರದುರ್ಗ: ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ (Maha Kumbh 2025) ಕಾಲ್ತುಳಿತಕ್ಕೆ ಸಿಕ್ಕಿ ಕರ್ನಾಟಕ ಮೂಲದ ನಾಗ ಸಾಧು (Naga Sadhu) ಸಾವನ್ನಪ್ಪಿರುವ ಪ್ರಕರಣತಡವಾಗಿ ಬೆಳಕಿಗೆ ಬಂದಿದೆ.
ಚಿತ್ರದುರ್ಗದ ಬಂಜಾರ ಗುರು ಪೀಠದಲ್ಲಿ ಕಳೆದ 7 ವರ್ಷಗಳಿಂದ ನೆಲೆಸಿದ್ದ ನಾಗಸಾಧು ರಾಜನಾಥ್ ಮಹಾರಾಜ್(49) ಕಾಲ್ತುಳಿತಕ್ಕೆ ಸಿಲುಕಿ ದುರ್ಮರಣಕ್ಕಿಡಾಗಿದ್ದಾರೆ. ಕಳೆದ ಒಂದು ವಾರದ ಹಿಂದೆಯಷ್ಟೇ ಕುಂಭಮೇಳಕ್ಕೆ ತೆರಳಿದ್ದ ರಾಜನಾಥ್ ಮಹಾರಾಜ್ ಬಂಜಾರ ಗುರುಪೀಠದ ಪೀಠಾಧಿಪತಿ ಸರ್ಧಾರ್ ಸೇವಾಲಾಲ್ ಶ್ರೀಗಳ ಒಡನಾಡಿಯಾಗಿದ್ದರು. ಇದನ್ನೂ ಓದಿ: ಸೋನಿಯಾ ಗಾಂಧಿ ಹೇಳಿಕೆಯಿಂದ ರಾಷ್ಟ್ರಪತಿ ಹುದ್ದೆಯ ಘನತೆಗೆ ಘಾಸಿ – ರಾಷ್ಟ್ರಪತಿ ಭವನ ಪ್ರತಿಕ್ರಿಯೆ
ಚಿತ್ರದುರ್ಗಕ್ಕೆ ರಾಜನಾಥ್ ಮಹಾರಾಜರ ಪಾರ್ಥಿವ ಶರೀರವನ್ನು ತಲುಪಿಸುವಂತೆ ಉತ್ತರಪ್ರದೇಶ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಕ್ಕೆ ಸರ್ಧಾರ್ ಸೇವಾಲಾಲ್ ಸ್ವಾಮೀಜಿ ಮನವಿ ಮಾಡಿದ್ದಾರೆ. ಅಲ್ಲದೇ ಕಾಲ್ತುಳಿತದಿಂದ ಸಾವುನೋವಾಗದಂತೆ ಕ್ರಮವಹಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗ್ರಾಪಂ ಮಾಜಿ ಅಧ್ಯಕ್ಷನ ಮಗನ ಕೊಲೆ – ಚರಂಡಿಯಲ್ಲಿ ಶವ ಮುಚ್ಚಿಹಾಕಿ ಕೊಲೆಗಾರ ಎಸ್ಕೇಪ್
ಪ್ರಯಾಗ್‌ರಾಜ್‌ನಲ್ಲಿ ಜನವರಿ 13ರಿಂದ ಮಹಾ ಕುಂಭ ಮೇಳ (Maha Kumbh Mela) ಆರಂಭವಾಗಿದ್ದು, ಫೆಬ್ರವರಿ 26ರಂದು ಮುಕ್ತಾಯಗೊಳ್ಳಲಿದೆ. 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವು ಹಾಗೂ 144 ವರ್ಷಗಳ ಬಳಿಕ ನಡೆಯುವ ಮಹಾ ಕುಂಭಮೇಳವು ಪೌರಾಣಿಕ ಹಿನ್ನೆಲೆ ಹೊಂದಿರುವ ಧಾರ್ಮಿಕ ಆಚರಣೆಯಾಗಿದೆ, ಹಿಂದೂ ಪುರಾಣದೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತದೆ. ಈ ಮಹಾಕುಂಭಮೇಳವು ನಾಗ ಸಾಧುಗಳಿಗೆ ತುಂಬಾನೇ ವಿಶೇಷ. ನಾಗ ಸಾಧುಗಳನ್ನು ಎಲ್ಲೆಂದರಲ್ಲಿ ನೋಡುವುದು ತುಂಬಾನೇ ಕಷ್ಟ. ಅವರನ್ನು ನಾವು ಕೇವಲ ಈ ಕುಂಭಮೇಳಗಳಲ್ಲಿ ಮಾತ್ರ ನೋಡಬಹುದಾಗಿದೆ. ಇದಲ್ಲದೇ ವಿವಿಧ ಸಂಸ್ಕೃತಿಗಳ ವೈಭವ, ಅಘೋರಿಗಳ ಸಮಾಗಮ, ಕೋಟ್ಯಂತರ ಭಕ್ತರಿಂದ ಪುಣ್ಯಸ್ನಾನ ಈ ಎಲ್ಲ ವಿಶೇಷತೆಗಳ ಮಿಳಿತಗೊಂಡಿರುವ ಕುಂಭಮೇಳ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಿದೆ. ಇದನ್ನು ಸಾಕ್ಷೀಕರಿಸುವ ಒಂದಿಷ್ಟು ಚಿತ್ರಗಳು ಇಲ್ಲಿವೆ…
ಪ್ರಯಾಗರಾಜ್: ಮಹಾ ಕುಂಭಮೇಳದಲ್ಲಿ (Maha Kumbh Mela) ನಾಗ ಸಾಧುಗಳ (Naga Sadhus) ದೀಕ್ಷೆಗಾಗಿ ಅಭ್ಯರ್ಥಿಗಳ ವಿಶಿಷ್ಟ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.
ಸನಾತನ ಧರ್ಮಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಉದ್ದೇಶದಿಂದ ವಿವಿಧ ಅಖಾರಗಳಲ್ಲಿ ನಾಗಗಳು ಸಿದ್ಧರಾಗಿರುವ ಸಾವಿರಾರು ಯುವ ಸನ್ಯಾಸಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದು ಅಖಾರಗಳು ಈಗಾಗಲೇ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿವೆ.
ನಾಗಗಳು ಅಂದರೆ ಯಾರು?
‘ನಾಗ’ ಎಂಬ ಪದವು ಪ್ರಾಚೀನ ಕಾಲದಲ್ಲಿ ಭಾರತದ ಕಾಡುಗಳು ಮತ್ತು ಬೆಟ್ಟಗಳಲ್ಲಿ ಅಲೆದಾಡುತ್ತಿದ್ದ ಹಾವಿನ ಆರಾಧಕರ ಪ್ರಾಚೀನ ಬುಡಕಟ್ಟು ಜನಾಂಗವನ್ನು ಸೂಚಿಸುತ್ತದೆ. ನಾಗ ಸಾಧುಗಳು ಶಿವನೇ (Shiva) ದೇವರೆಂದು ನಂಬುತ್ತಾರೆ.
ನಾಗಾ ಸಾಧುಗಳಾಗುವ ಮೊದಲ ಹೆಜ್ಜೆ ಯಾವುದೆಂದರೆ ಮಾರ್ಗದರ್ಶನ ಮಾಡುವ ಗುರುವನ್ನು ಹುಡುಕಬೇಕಾಗುತ್ತದೆ. ಗುರು ಸಿಕ್ಕಿದ ಬಳಿಕ ಕಠಿಣ ತರಬೇತಿ ಮತ್ತು ಶಿಸ್ತಿನ ಅವಧಿಗೆ ಒಳಗಾಗಬೇಕಾಗುತ್ತದೆ. ಇದರಲ್ಲಿ ಧ್ಯಾನ, ಯೋಗ ಮತ್ತು ಇತರ ಆಧ್ಯಾತ್ಮಿಕ ಅಭ್ಯಾಸಗಳು ಸೇರಿವೆ. ಕಟ್ಟುನಿಟ್ಟಾದ ಬ್ರಹ್ಮಚರ್ಯ ನಿಯಮಗಳನ್ನು ಪಾಲಿಸಬೇಕು ಮತ್ತು ಲೌಕಿಕ ಸುಖಗಳಿಂದ ದೂರವಿರಬೇಕಾಗುತ್ತದೆ.
ರಹಸ್ಯ ಸಂದರ್ಶನ:
ಅಖಾರ ಸೇರಲು ನೋಂದಣಿ ಫಾರಂ ನೀಡಲಾಗುತ್ತದೆ. ನಾಗ ಸಾಧುಗಳಾಲು ಇಚ್ಛಿಸಿದ ವ್ಯಕ್ತಿಗಳನ್ನು ರಹಸ್ಯವಾಗಿ ಸಂದರ್ಶಿಸಲಾಗುತ್ತಿದೆ. ಜುನಾ, ಶ್ರೀ ನಿರಂಜನಿ, ಶ್ರೀ ಮಹಾನಿರ್ವಾಣಿ, ಆವಾಹನ್, ಅಟಲ್ ಮತ್ತು ಆನಂದ್ ಅಖಾರಗಳಲ್ಲಿನ ಎಲ್ಲಾ ಮಾನದಂಡಗಳನ್ನು ಪೂರೈಸಿದವರನ್ನು ನಾಗ ಸನ್ಯಾಸದ ದೀಕ್ಷೆ ನೀಡಲಾಗುತ್ತದೆ. ಇದನ್ನೂ ಓದಿ: ನನ್ನ ಹಲವು ಪ್ರಶ್ನೆಗಳಿಗೆ ಸನಾತನ ಧರ್ಮದಲ್ಲಿ ಉತ್ತರ ಸಿಕ್ಕಿತು – ಕುಂಭಮೇಳದಲ್ಲಿ ಆಫ್ರಿಕಾದ ಸಾಧು
ಪಿಂಡ ಪ್ರದಾನ ಮಾಡುತ್ತಾರೆ ಯಾಕೆ?
ನಾಗ ಸಾಧುಗಳ ದೀಕ್ಷೆ ಪಡೆಯುತ್ತಿರುವ ಮೊದಲ ಬ್ಯಾಚ್ ಸದಸ್ಯರಿಗೆ ಗಂಗಾ ನದಿಯ ದಡದಲ್ಲಿ ಆಚರಣೆಯನ್ನು ನಡೆಸಲಾಗಿದೆ. ಪ್ರತಿ ಅಖಾರದಲ್ಲಿ ವಿಭಿನ್ನ ದಿನಗಳಲ್ಲಿ ದೀಕ್ಷೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಶನಿವಾರ ಜುನಾ ಅಖಾರದಲ್ಲಿ ಸನ್ಯಾಸಿಗಳಿಗೆ ಕೇಶ ಮುಂಡನ ಮಾಡಲಾಗಿದೆ. ಈ ಸನ್ಯಾಸಿಗಳು ತಮ್ಮ ಪಿಂಡ ಪ್ರದಾನ ಮಾಡಬೇಕಾಗುತ್ತದೆ. ಹಿಂದೂ ಧರ್ಮದದಲ್ಲಿ ತಮ್ಮ ಮನೆಯವರು, ಕುಟುಂಬಸ್ಥರು ಅಗಲಿದಾಗ ಅವರಿಗೆ ಗೌರವ ಸಲ್ಲಿಸುವ ಪರಿಯನ್ನು ಪಿಂಡ ಪ್ರದಾನ ಎನ್ನಲಾಗುತ್ತದೆ. ಆದರೆ ನಾಗಗಳಾದವರು ಜೀವಂತವಾಗಿದ್ದರೂ, ಭೌತಿಕ ಪ್ರಪಂಚದೊಂದಿನ ಸಂಬಂಧವನ್ನು ಕಡಿತಗೊಳಿಸಬೇಕಾಗುತ್ತದೆ. ಸಂಬಂಧ ಕಡಿತಗೊಳಿಸುವ ಸಲುವಾಗಿ ತಮ್ಮ ಪಿಂಡವನ್ನೇ ಪ್ರದಾನ ಮಾಡುತ್ತಾರೆ.
ನಾಗಾದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?
ಕೇಶ ಮುಂಡನ ಮತ್ತು ಪಿಂಡ ದಾನದ ನಂತರ ಮೌನಿ ಅಮಾವಾಸ್ಯೆಯ ಅಮೃತ ಸ್ನಾನ ಹಬ್ಬದ ರಾತ್ರಿ ನಾಗ ಸಾಧುವಾಗಲು ಸಂಪೂರ್ಣ ದೀಕ್ಷೆಯನ್ನು ನಡೆಸಲಾಗುತ್ತದೆ. ಎಲ್ಲಾ ಅಭ್ಯರ್ಥಿಗಳು ಧರ್ಮದ ಧ್ವಜದ ಅಡಿಯಲ್ಲಿ ವಿವಸ್ತ್ರವಾಗಿ ನಿಲ್ಲುತ್ತಾರೆ. ಆಚಾರ್ಯ ಮಹಾಮಂಡಲೇಶ್ವರರು ಅವರನ್ನು ವಿಧಿವಿಧಾನಗಳೊಂದಿಗೆ ನಾಗರಾಗಲು ದೀಕ್ಷೆ ನೀಡುತ್ತಾರೆ. ಸಭಾಪತಿ (ಸಮಾರಂಭದ ಅಧ್ಯಕ್ಷತೆ ವಹಿಸುವ ವ್ಯಕ್ತಿ) ಅವರಿಗೆ ಅಖಾರದ ನಿಯಮಗಳು ಮತ್ತು ನಿಯಮಗಳ ಬಗ್ಗೆ ತಿಳಿಸುತ್ತಾರೆ ಮತ್ತು ಪ್ರತಿಜ್ಞೆಯನ್ನು ಬೋಧಿಸುತ್ತಾರೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಎಲ್ಲರನ್ನೂ ಅಮೃತ ಸ್ನಾನಕ್ಕೆ ಕಳುಹಿಸಲಾಗುತ್ತದೆ. ಅಮೃತ ಸ್ನಾನದ ರಾತ್ರಿಯಂದು ಇವರ ನಾಗಾದೀಕ್ಷೆ ಪೂರ್ಣಗೊಳ್ಳುತ್ತದೆ. ಇದನ್ನೂ ಓದಿ: ಕುಂಭಮೇಳದಲ್ಲಿ 7 ಅಡಿ ಎತ್ತರದ ರಷ್ಯಾದ ಬಾಬಾ – ‘ಪರಶುರಾಮನ ಅವತಾರ’ ಎಂದ ಭಕ್ತರು
ಮೂರು ಹಂತಗಳಲ್ಲಿ ಪರಿಶೀಲನೆ:
ಜುನಾ ಅಖಾರದಲ್ಲಿ ಸುಮಾರು 2,000 ಜನರಿಗೆ ನಾಗ ಸನ್ಯಾಸಕ್ಕೆ ದೀಕ್ಷೆ ನೀಡಿದರೆ ಶ್ರೀ ನಿರಂಜನಿ ಅಖಾರದಲ್ಲಿ ಸುಮಾರು 1,100 ಮಂದಿಯನ್ನು ನಾಗಾ ಸನ್ಯಾಸಿಗಳನ್ನಾಗಿ ಮಾಡಲಾಗುತ್ತದೆ. ಅದೇ ರೀತಿಯಾಗಿ ಶ್ರೀ ಮಹಾನಿರ್ವಾಣಿ, ಅಟಲ್, ಆನಂದ್ ಮತ್ತು ಆವಾಹನ ಅಖಾರಗಳಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗಿದೆ.
ಅರ್ಜಿದಾರರನ್ನು ಮೂರು ಹಂತಗಳಲ್ಲಿ ಸಂಪೂರ್ಣವಾಗಿ ಅವರ ವಿವರವನ್ನು ಪರಿಶೀಲಿಸಲಾಗುತ್ತದೆ. ಈ ಪರಿಶೀಲನಾ ಪ್ರಕ್ರಿಯೆ ಆರು ತಿಂಗಳ ಮೊದಲೇ ಆರಂಭವಾಗುತ್ತದೆ. ಅಖಾರದ ಠಾಣಾಪತಿ ಅಷ್ಟಕೋಶಲ್ ಮಹಂತ್, ಅಭ್ಯರ್ಥಿಯ ವಿವರ ಮತ್ತು ಆತನ ಚಟುವಟಿಕೆಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸುತ್ತಾರೆ. ಪರಿಶೀಲನೆ ನಡೆಸಿದ ಬಳಿಕ ವರದಿಯನ್ನು ಅಖಾರದ ಆಚಾರ್ಯ ಮಹಾಮಂಡಲೇಶ್ವರರಿಗೆ ನೀಡಲಾಗುತ್ತದೆ. ಆಚಾರ್ಯ ಮಹಾಮಂಡಲೇಶ್ವರರು ಅಖಾರದ ಪಂಚರಿಂದ ಮತ್ತೆ ಪರಿಶೀಲನೆ ನಡೆಸುತ್ತಾರೆ.
ಅರ್ಜಿಗಳ ಪರಿಶೀಲನೆಯ ಸಮಯದಲ್ಲಿ ಜುನಾ ಅಖಾರ 53 ಮಂದಿಯನ್ನು ಮತ್ತು ನಿರಂಜನಿ ಅಖಾರ 22 ಜನರನ್ನು ಅನರ್ಹಗೊಳಿಸಿದೆ.
ಟಿಕೆಟ್ ಖಚಿತವಾದ ಬಳಿಕ ನಾಗ ಸಾಧು ಆಶೀರ್ವಾದ ಪಡೆದ ಶ್ರೀರಾಮುಲು ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಡಿಕೆಶಿ ಶಿವಕುಮಾರ್ ಸೇರಿದಂತೆ ಅನೇಕರು ಈ ನಾಗಸಾಧು ರನ್ನ ಪ್ರಮುಖ ಕೆಲಸ ಇದ್ದಾಗ ಆಗಲೆಂದು ಭೇಟಿ ಮಾಡಿ ಆಶ್ರೀವಾದ ಪಡೆಯುತ್ತಾರೆ. ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಬಿಗ್ ಬಿ: ಆಂಜಿಯೋಪ್ಲ್ಯಾಸ್ಟಿಗೆ ಒಳಗಾದ ನಟ ಅಮಿತಾಭ್ ಬಚ್ಚನ್
ತುಮಕೂರು: ನಾಗಾ ಸಾಧುಗಳ (Naga sadhu) ಸೋಗಿನಲ್ಲಿ ಬಂದ ಇಬ್ಬರು ಆಸಾಮಿಗಳು ಫೋಟೋ ಸ್ಟುಡಿಯೋ (Studio) ಮಾಲೀಕನ ಕೈ ಬೆರಳಲ್ಲಿದ್ದ ಉಂಗುರವನ್ನು(Ring) ಸಿನಿಮೀಯ ಸ್ಟೈಲ್‌ನಲ್ಲಿ ದೋಚಿ ಪರಾರಿಯಾದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.
ಎಮ್‌ಜಿ ರಸ್ತೆಯಲ್ಲಿ ಇರುವ ಫೋಟೋ ಸ್ಟುಡಿಯೊವೊಂದರ ಮಾಲೀಕನಿಗೆ ನಕಲಿ ಸಾಧುಗಳು ಮಂಕುಬೂದಿ ಎರಚಿದ್ದು, ಸ್ಟುಡಿಯೋ ಮಾಲೀಕನ ಬೆರಳಲ್ಲಿದ್ದ ಉಂಗುರ ದೋಚಿದ್ದಾರೆ. ನಾಗಾ ಸಾಧುಗಳು ಎಂದು ಹೇಳಿಕೊಂಡು ಬಂದಿದ್ದ ಇಬ್ಬರಿಗೂ ಸ್ಟುಡಿಯೋ ಮಾಲೀಕ ಬಾಳೆ ಹಣ್ಣು, ನೀರು ಕೊಟ್ಟು ಸತ್ಕಾರ ಮಾಡಿದ್ದಾರೆ. ಆ ಬಳಿಕ ನಕಲಿ ಸಾಧುಗಳು ಮಾಲೀಕನ ಕೈಯಲ್ಲಿ ರುದ್ರಾಕ್ಷಿ ಕೊಟ್ಟು ಕಣ್ಣು ಮುಚ್ಚಿಸಿ ಜಪ ಮಾಡಿಸಿದ್ದಾರೆ. ಇದನ್ನೂ ಓದಿ: ಭೀಕರ ಅಪಘಾತ- ಒಂದೇ ಕುಟುಂಬದ ನಾಲ್ವರ ದುರ್ಮರಣ
ಮಾಲೀಕನ ಎರಡೂ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಧಾನವಾಗಿ ಬೆರಳಿನ ಉಂಗುರವನ್ನು ಎಗರಿಸಿದ್ದಾರೆ. ಇನ್ನೂ ಎರಡು ನಿಮಿಷ ಧ್ಯಾನ ಮಾಡಿ ಎಂದು ಹೇಳಿ ನಾಗಾಸಾಧುಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಧ್ಯಾನದಿಂದ ಹೊರ ಬಂದು ನೋಡಿದಾಗ ಸ್ಟುಡಿಯೋ ಮಾಲೀಕನ ಕೈಯಲ್ಲಿದ್ದ ಉಂಗುರ ಮಾಯವಾಗಿರುವುದು ಕಂಡುಬಂದಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಧರ್ಮಸ್ಥಳದಿಂದ ವಾಪಾಸ್ ಆಗುತ್ತಿದ್ದಾಗ ಅಪಘಾತ – ತಾಯಿ, ಮಗ ಸ್ಥಳದಲ್ಲೇ ಸಾವು
ಮಡಿಕೇರಿ: ನಾಗಾ ಸಾಧುಗಳ ವೇಷ ಧರಿಸಿ ಹಣ, ಮೊಬೈಲ್ ದೋಚುತ್ತಿದ್ದ ನಾಲ್ವರು ಖತರ್ನಾಕ್ ಖದೀಮರನ್ನು ಕೊಡಗು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ನಾಗನಾಥ್, ಮಜೂರ್ ನಾಥ್, ಸುರಬ್ ನಾಥ್ ಮತ್ತು ಉಮೇಶ್ ನಾಥ್ ಬಂಧಿತ ಕಳ್ಳರು. ಆರೋಪಿಗಳು ಜಿಲ್ಲೆಯ ವಿವಿಧ ಕಡೆ ತಮ್ಮ ಕೈಚಳಕ ತೋರಿದ್ದರು. ಆರೋಪಿಗಳಿ ಬಲೆ ಬೀಸಿದ್ದ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಪೊಲೀಸರು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ನಾಗಾ ಸಾಧುಗಳ ವೇಷ ಧರಿಸಿ ಇಬ್ಬರು ಉದ್ಯಮಿಗಳನ್ನು ಮರುಳು ಮಾಡಿ ನಗದು ಹಾಗೂ ಭಾರೀ ಮೌಲ್ಯದ ಮೊಬೈಲ್‍ಗಳನ್ನು ಎಗರಿಸಿದ್ದರು. ಕುಶಾಲನಗರದ ಜನಶ್ರೀ ಫೈನಾನ್ಸ್ ಮಾಲೀಕ ನಾಗೇಗೌಡ ಅವರಿಗೆ ನವೆಂಬರ್ 24ರಂದು ಕೆಂಪು ಪುಡಿ ನೀಡಿದ್ದರು. ಬಳಿಕ ತಾವು ಹೇಳಿದ ಜಾಗಕ್ಕೆ ಬರುವಂತೆ ಮಾಡಿ 25 ಸಾವಿರ ಮೌಲ್ಯದ ಮೊಬೈಲ್ ಹಾಗೂ ಒಂದೂವರೆ ಸಾವಿರ ರೂಪಾಯಿ ನಗದು ಎಗರಿಸಿದ್ದರು.
ಇದಕ್ಕೂ ಹದಿನೈದು ದಿನಗಳ ಮುನ್ನ ಫೋಟೊ ಶಾಫ್ ಮಾಲೀಕ ನಾಗೇಶ್ ಅವರಿಗೂ ಇದೇ ರೀತಿ ಮಾಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಕುಶಾಲನಗರ ಸಿಪಿಐ ಕುಮಾರ್ ಆರಾಧ್ಯ ಅವರ ನೇತೃತ್ವದಲ್ಲಿ ತಂಡ ರಚಿಸಿ, ಆರೋಪಿಗಳಿಗೆ ಶೋಧಕಾರ್ಯ ನಡೆದಿತ್ತು. ಸೋಮವಾರ ಕುಶಾಲನಗರದಲ್ಲಿ ಆರೋಪಿಗಳು ಇರುವಾಗ ಜಾಗದ ಬಗ್ಗೆ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಕಾರ್ಯಾಚರಣೆ ಚುರುಕುಕೊಳಿಸಿದ ಪೊಲೀಸರು ನ್ವಾರನ್ನೂ ಬಂಧಿಸಿ, ಕೃತ್ಯಕ್ಕೆ ಬಳಸುತ್ತಿದ್ದ ಕಾರು ಹಾಗೂ ರಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ಕುಶಾಲನಗರ ಅಷ್ಟೇ ಅಲ್ಲದೆ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆ ಇದೇ ರೀತಿ ಕೃತ್ಯ ಎಸಗಿರಬಹುದು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಅಭ್ಯರ್ಥಿಗಳು ನಾಗಸಾಧು ಮೊರೆ ಹೋಗುತ್ತಿದ್ದಾರೆ.
ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರು ನಾಗಸಾಧುರೊಬ್ಬರನ್ನ ಭೇಟಿ ಮಾಡಿ ಗೆಲುವಿಗಾಗಿ ಆಶೀರ್ವಾದ ಪಡೆದಿದ್ದಾರೆ. ಸಂಡೂರು ತಾಲೂಕಿನ ಜೋಗದ ಬಳಿಯಿರುವ ದಿಗಂಬರ ರಾಜಾಭಾರತಿ ಸ್ವಾಮೀಜಿಯನ್ನ ಭೇಟಿ ಮಾಡಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿಗಾಗಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ನಡೆದ ಉಪಚುನಾವಣೆಯ ವೇಳೆ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಸಹ ಈ ನಾಗಸಾಧು ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಚುನಾವಣೆ ನಡೆಸಿದ್ದರು. ಆಗ ಉಗ್ರಪ್ಪ ಬಹುಮತಗಳಿಂದ ಗೆದ್ದ ಪರಿಣಾಮ ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರು ಈ ನಾಗಸಾಧು ಮೊರೆ ಹೋಗಿ ಜಯಕ್ಕಾಗಿ ಪಾರ್ಥಿಸಿದ್ದಾರೆ.
ಇತ್ತೀಚೆಗೆ ಚಾಮರಾಜನಗರದಲ್ಲೂ ಲೋಕಸಭಾ ಚುನಾವಣೆಯನ್ನು ಗೆಲ್ಲಲು ಮೂರು ಪಕ್ಷದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಕೊಳ್ಳೇಗಾಲಕ್ಕೆ ಬಂದು ಮಾಟ-ಮಂತ್ರ ಮಾಡಿಸಿ ತಮ್ಮ ಎದುರಾಳಿಗಳನ್ನು ಸೋಲಿಸುವ ತಂತ್ರಕ್ಕೆ ಮುಂದಾಗಿದ್ದರು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ರಾಜ್ಯದಲ್ಲಿ ಮಾಟ-ಮಂತ್ರಕ್ಕೆ ಫುಲ್ ಫೇಮಸ್ ಆಗಿದ್ದು, ಇದ್ರಿಂದ ಇಲ್ಲಿಗೆ ಇದೀಗ 28 ಲೋಕಸಭಾ ಕ್ಷೇತ್ರದ ಹಲವು ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಬರುತ್ತಿದ್ದಾರೆ ಎಂದು ತಿಳಿದು ಬಂದಿತ್ತು.
ಬೆಂಗಳೂರು: ಭಾನುವಾರ ಫೇಸ್‍ಬುಕ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯಂತೆ ನಾಗಾಸಾಧು ಎಂದು ಹೇಳುವ ವ್ಯಕ್ತಿಯೊಬ್ಬನ ಮೇಲಿನ ಹಲ್ಲೆಯ ವಿಡಿಯೋ ವೈರಲ್ ಆಗುತ್ತಿದೆ. ಕೆಲವರು ತಮ್ಮ ವಾಟ್ಸಪ್ ಸ್ಟೇಟಸ್ ನಲ್ಲಿ ಈ ವಿಡಿಯೋ ಹಾಕಿಕೊಳ್ಳುವ ಮೂಲಕ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
ಹಲವರು ಫೇಸ್‍ಬುಕ್ ನಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರು ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಪ್ರಾಯವನ್ನು ಪೋಸ್ಟ್ ಮಾಡುತ್ತಿದ್ದಾರೆ. ಕೆಲ ಮುಸ್ಲಿಂ ಯುವಕರು ಅಮಾಯಾಕ ನಾಗಾಸಾಧು ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡ್ತಿದ್ದಾರೆ ಎಂದು ಸಾಲುಗಳನ್ನು ಹಾಕಿ ವಿಡಿಯೋ ಶೇರ್ ಆಗುತ್ತಿದೆ. ಆದ್ರೆ ಈ ವಿಡಿಯೋ ನಿಜವಾದ ಸತ್ಯ ಇಲ್ಲಿದೆ.
ಏನಿದು ವಿಡಿಯೋ..?
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಖಾಸಗಿ ಮಾಧ್ಯಮವೊಂದು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದೆ. ಹಲ್ಲೆಗೊಳಗಾದ ವ್ಯಕ್ತಿ ಓರ್ವ ಭಿಕ್ಷುಕನಾಗಿದ್ದು, ನಾಗಾ ಸಾಧು ಅಲ್ಲ ಅಂತಾ ಹೇಳಿದೆ. ಭಿಕ್ಷುಕ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಆತನನ್ನು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದರು ಎಂಬ ಸ್ಫೋಟಕ ವಿಷಯ ರಿವೀಲ್ ಆಗಿದೆ.
ಈ ವಿಡಿಯೋ ಶಿಖಾ ಎಂಬ ಹೆಸರಿನ ಖಾತೆಯಿಂದ ಮೊದಲ ಬಾರಿಗೆ ಅಪ್ಲೋಡ್ ಆಗಿದೆ. ಶಿಖಾ ವಿಡಿಯೋ ಅಪ್ಲೋಡ್ ಮಾಡಿಕೊಂಡು, ‘ಭಾರತದ ಕೆಲ ಮುಸ್ಲಿಂ ಯುವಕರು ಬಡ ಭಿಕ್ಷುಕ ಮೇಲೆ ಹಲ್ಲೆ ನಡೆಸಿದ್ದಾರೆ. ಆದಷ್ಟು ಬೇಗ ಈ ಮುಸ್ಲಿಂ ಅಪರಾಧಿಗಳನ್ನು ಪೊಲೀಸರು ಬಂಧಿಸಬೇಕು.’ ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಹಲವರು ಶೇರ್ ಮತ್ತು ಟ್ವೀಟ್ ಮಾಡಿಕೊಂಡು ಪ್ರಧಾನಿ ಮೋದಿ ಅವರಿಗೂ ಸಹ ಟ್ಯಾಗ್ ಮಾಡಿದ್ದಾರೆ. ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ನೆಟ್ಟಿಗರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವಿಡಿಯೋವನ್ನು ಹಲವು ರಾಜಕೀಯ ಗಣ್ಯರು ಮತ್ತು ಸಿನಿಮಾ ತಾರೆಯರು ಸಹ ಶೇರ್ ಮಾಡಿಕೊಂಡಿದ್ದಾರೆ. ಕೆಲವರು ವಿಡಿಯೋ ಶೇರ್ ಮಾಡಿಕೊಳ್ಳುವ ಕೋಮುಭಾವನೆ ಹುಟ್ಟಿಸುವಂತಹ ಸಾಲುಗಳನ್ನು ಬರೆದಿದ್ದಾರೆ. ನಟ ಕೊಯಿರಲಾ ಮಿತ್ರ ವಿಡಿಯೋ ಶೇರ್ ಮಾಡಿಕೊಂಡು, ‘ಭಾರತದಲ್ಲಿ ಇಂತಹ ಘಟನೆಗಳು ಈ ಮೊದಲು ನಡೆಯುತ್ತಿದ್ದವು, ಅಂತಹ ಪ್ರಕರಣಗಳು ಇಂದು ನಡೆಯುತ್ತಿವೆ.’ ಎಂದು ಬರೆದುಕೊಂಡಿದ್ದರು. ಕೆಲ ಸಮಯದ ಬಳಿಕ ಎಚ್ಚೆತ್ತ ನಟ ವಿಡಿಯೋವನ್ನು ತಮ್ಮ ಖಾತೆಯಿಂದ ಡಿಲೀಟ್ ಮಾಡಿದ್ದಾರೆ.
ಹಾಗಾದ್ರೆ ನಿಜವಾಗಿ ನಡೆದಿದ್ದೇನು?:
ವಿಡಿಯೋ ವೈರಲ್ ಆಗುತ್ತಿದ್ದಂತೆ ಡೆಹರಾಡೂನ್ ಎಸ್.ಎಸ್.ಪಿ. ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ. ಆಗಸ್ಟ್ 24 ರಿಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಸಂಬಂಧಿಸಿದಂತೆ ಕೆಲವರು ಪ್ರಚೋದನಕಾರಿ ಸಾಲುಗಳನ್ನು ಬರೆದುಕೊಳ್ಳುತ್ತಿದ್ದಾರೆ.
सोशल मीडिया पर एक व्यक्ति जिसे नागा साधु बताते हुए कुछ लोगों द्वारा पीटने का एक वीडियो वाइरल किया जा रहा है। उक्त संबंध में ज्ञात हो कि उक्त व्यक्ति एक बहुरूपिया है, जिसके विरुद्ध नशे की हालत में छेड़छाड़ की एक घटना में संलिप्त होने की शिकायत पर वैधानिक कार्यवाही की गयी है। pic.twitter.com/GB9uoDlsMs
— Dehradun Police Uttarakhand (@DehradunPolice) August 30, 2018
ಹಲ್ಲೆಗೊಳಗಾದ ವ್ಯಕ್ತಿ ಹೆಸರು ಸುಶೀಲನಾಥ್ ಸೋಮನಾಥ್. ಡೆಹ್ರಾಡೂನಿನ ವಿಕಾಸನಗರದ ನಿವಾಸಿಯಾಗಿದ್ದು, ಸಾಧು ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದನು. ಸುಶೀಲನಿಗೆ ಪತ್ನಿ ಸೇರಿದಂತೆ 6 ಜನ ಮಕ್ಕಳು ಇದ್ದಾರೆ. ಸುಶೀಲನಾಥ್ ಮೂಲತಃ ಹರಿಯಾಣ ರಾಜ್ಯದ ಯಮುನಾ ನಗರದ ಜಗದಾರಿ ಎಂಬಲ್ಲಿಯ ನಿವಾಸಿಯಾಗಿದ್ದು, ಡೆಹ್ರಾಡೂನಿನಲ್ಲಿ ವಾಸವಾಗಿದ್ದಾನೆ. ಸುಶೀಲನಾಥ್ ಪ್ರತಿದಿನ ನಕಲಿ ವೇಷ ಧರಿಸಿ ಭಿಕ್ಷೆ ಬೇಡಿ ಜೀವನ ನಡೆಸುವ ವ್ಯಕ್ತಿಯಾಗಿದ್ದು, ಮದ್ಯವ್ಯಸನಿ ಸಹ ಆಗಿದ್ದಾನೆ.
ಆಗಸ್ಟ್ 24 ರಂದು ಸುಶೀಲನಾಥ್ ಪಟೇಲನಗರದ ಮನೆಯೊಂದಕ್ಕೆ ನುಗ್ಗಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಕೂಡಲೇ ಮನೆಯಲ್ಲಿದ್ದ ಯುವತಿಯ ಸೋದರ ಶುಭಂ ಎಂಬವರ ಆತನನ್ನು ಹೊರ ಎಳೆದು ತಂದಿದ್ದಾರೆ. ನೆರೆಹೊರೆಯವರು ಸುಶೀಲನಾಥನಿಗೆ ಧರ್ಮದೇಟು ನೀಡಿ ನಂತರ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಮಯದಲ್ಲಿ ಕೆಲವರು ಈ ದೃಶ್ಯಗಳನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡು ಕೋಮು ಸಂಘರ್ಷದ ರೂಪ ನೀಡಿದ್ದಾರೆ. ಘಟನೆ ಸಂಬಂಧ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಟ್ವಿಟ್ಟರ್ ನಲ್ಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.