Tag: Nag Ashwin

  • ಸ್ಪಿರಿಟ್‌ ಬಳಿಕ ʻಕಲ್ಕಿʼ ಸೀಕ್ವೆಲ್‌ನಿಂದ ದೀಪಿಕಾ ಪಡುಕೋಣೆ ಔಟ್‌

    ಸ್ಪಿರಿಟ್‌ ಬಳಿಕ ʻಕಲ್ಕಿʼ ಸೀಕ್ವೆಲ್‌ನಿಂದ ದೀಪಿಕಾ ಪಡುಕೋಣೆ ಔಟ್‌

    ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಅವರನ್ನ ಸಂದೀಪ್ ರೆಡ್ಡಿ ವಂಗಾ ತಮ್ಮ ʻಸ್ಪಿರಿಟ್ʼ ಸಿನಿಮಾದಿಂದ ಕೈಬಿಟ್ಟಿದ್ದರು. ಇದೀಗ ಮತ್ತೊಂದು ಟಾಲಿವುಡ್ ಸಿನಿಮಾದಿಂದ ದೀಪಿಕಾ ಅವರನ್ನ ಹೊರಹಾಕಲಾಗಿದೆ.

    ಹೌದು, ʻಕಲ್ಕಿʼ ಸೀಕ್ವೆಲ್‌ (Kalki 2898 AD Sequel) ಸಿನಿಮಾ ತಂಡದಿಂದ ದೀಪಿಕಾ ಪಡುಕೋಣೆ ಅವರನ್ನ ಹೊರಗಿಡಲಾಗಿದೆಯಂತೆ. ಪ್ರಭಾಸ್ ನಟನೆಯ ಕಲ್ಕಿ 2898AD ಸಿನಿಮಾದ ಪಾರ್ಟ್-1 ನಲ್ಲಿ ನಟಿ ದೀಪಿಕಾ ಪಡುಕೋಣೆ ಮುಖ್ಯವಾದ ಪಾತ್ರ ನಿಭಾಯಿಸಿದ್ದರು. ಇದೀಗ ಈ ಸಿನಿಮಾದ ಸಿಕ್ವೇಲ್ ಬರುತ್ತಿದ್ದು, ಪ್ರಮುಖ ಪಾತ್ರದಲ್ಲಿ ನಟಿಸಬೇಕಾಗಿತ್ತು. ಆ ಪಾತ್ರಕ್ಕಾಗಿ ನಟಿ ದೀಪಿಕಾ ಪಡುಕೋಣೆ ಮೊದಲ ಪಾರ್ಟ್ ಗಿಂತ 2ನೇ ಪಾರ್ಟ್‌ಗೆ ದುಪ್ಪಟ್ಟು ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರಂತೆ.

    ನಟಿ ದೀಪಿಕಾ ಪಡುಕೋಣೆ ದುಪ್ಪಟ್ಟು ಸಂಭಾವನೆ ಜೊತೆಗೆ ಸಿನಿಮಾ ತೆರೆಕಂಡ ಬಳಿಕ ಬಂದ ಲಾಭದಲ್ಲಿ ಶೇರ್ ಕೇಳಿದ್ದಾರಂತೆ. ಅಲ್ಲದೇ ದಿನಕ್ಕೆ 5 ಗಂಟೆಗಳ ಕಾಲ ಮಾತ್ರ ಶೂಟಿಂಗ್‌ನಲ್ಲಿ ಭಾಗಿಯಾಗಲು ಕೇಳಿಕೊಂಡಿದ್ದಾರೆ. ಅನ್ನೋ ಕಾರಣದಿಂದಾಗಿ ದೀಪಿಕಾ ಅವರನ್ನ ಚಿತ್ರತಂಡ ಕಲ್ಕಿ 2898AD ಚಿತ್ರದಿಂದ ಹೊರಗಿಟ್ಟಿದೆಯಂತೆ.

    ಈ ಬಗ್ಗೆ ನಿರ್ದೇಶಕ ನಾಗ್ ಅಶ್ವಿನ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೊದಲು ʻಸ್ಪಿರಿಟ್ʼ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕೂಡಾ ಇಂತಹದ್ದೇ ಕೆಲ ಕಾರಣ ನೀಡಿ ದೀಪಿಕಾ ಅವರನ್ನ ಸ್ಪಿರಿಟ್ ಚಿತ್ರದಿಂದ ಕೈಬಿಡುವ ಬಗ್ಗೆ ಸ್ಪಷ್ಟಪಡಿಸಿದ್ದರು.

    ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಟಾಲಿವುಡ್ ನಲ್ಲಿ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಇದ್ದ ಅವಕಾಶಗಳು ತಮ್ಮ ಕೈಬಿಟ್ಟುಹೋಗುತ್ತಿವೆ. ಸಾಲು ಸಾಲು ಟಾಲಿವುಡ್ ಸಿನಿಮಾಗಳಿಂದ ದೀಪಿಕಾ ಪಡುಕೋಣೆ ಅವರನ್ನ ಹೊರಗಿಡಲಾಗ್ತಿದೆ.

  • ದೀಪಿಕಾ ಪಡುಕೋಣೆ ಬಳಿಕ ಆಲಿಯಾ ಭಟ್‌ಗೆ ನಾಗ್ ಅಶ್ವಿನ್ ಆ್ಯಕ್ಷನ್ ಕಟ್?

    ದೀಪಿಕಾ ಪಡುಕೋಣೆ ಬಳಿಕ ಆಲಿಯಾ ಭಟ್‌ಗೆ ನಾಗ್ ಅಶ್ವಿನ್ ಆ್ಯಕ್ಷನ್ ಕಟ್?

    ‘ಕಲ್ಕಿ 2898 ಎಡಿ’ ಚಿತ್ರದ ಸಕ್ಸಸ್‌ ಖುಷಿಯಲ್ಲಿದ್ದಾರೆ ನಾಗ್‌ ಅಶ್ವಿನ್.‌ ದೀಪಿಕಾ ಪಡುಕೋಣೆಗೆ (Deepika Padukone) ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ನಾಗ್‌ ಅಶ್ವಿನ್‌ ಅವರು ಆಲಿಯಾ ಭಟ್‌ಗೆ ಡೈರೆಕ್ಷನ್‌ ಮಾಡಲು ಸಜ್ಜಾಗಿದ್ದಾರೆ ಎನ್ನಲಾದ ವಿಚಾರವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:‘ಪುಷ್ಪ 2’ನಲ್ಲಿ ಹೆಜ್ಜೆ ಹಾಕಲು 2 ಕೋಟಿ ಸಂಭಾವನೆ ಚಾರ್ಜ್ ಮಾಡಿದ್ರಾ ಶ್ರೀಲೀಲಾ?

    ‘ಕಲ್ಕಿ 2898 ಎಡಿ’ ಚಿತ್ರ ಸಕ್ಸಸ್ ಕಂಡಿದೆ. ಈ ಚಿತ್ರದಲ್ಲಿ ಸ್ಟಾರ್ ನಟಿ ದೀಪಿಕಾ ಅವರು ಪ್ರಭಾಸ್‌ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದರು. ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದರು. ಈ ಬೆನ್ನಲ್ಲೇ, ಮಹಿಳಾ ಪ್ರಧಾನ ಚಿತ್ರ ಮಾಡಲು ಅವರು ಮುಂದಾಗಿದ್ದಾರೆ. ಇದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಆಲಿಯಾರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

    ಈಗಾಗಲೇ ಆಲಿಯಾ (Alia Bhatt) ಜೊತೆ ನಾಗ್ ಅಶ್ವಿನ್ (Nag Ashwini) ಒಂದು ಹಂತದ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ. ಸಿನಿಮಾ ಕಥೆ ಕುರಿತು ಚರ್ಚಿಸಿದ್ದಾರೆ. ಆದರೆ ನಟಿ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ರಾ? ಎಂಬುದು ಖಾತ್ರಿಯಾಗಿಲ್ಲ. ಅಧಿಕೃತವಾಗಿ ಚಿತ್ರತಂಡದಿಂದ ಅಪ್‌ಡೇಟ್ ಬರುವವರೆಗೂ ಕಾಯಬೇಕಿದೆ.

    ಈಗಾಗಲೇ ಕೀರ್ತಿ ಸುರೇಶ್ ಜೊತೆ ‘ಮಹಾನಟಿ’, ದೀಪಿಕಾ ಜೊತೆ ‘ಕಲ್ಕಿ 2898 ಎಡಿ’ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. 2 ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ನಾಗ್ ಅಶ್ವಿನ್ ಮುಂಬರುವ ಸಿನಿಮಾಗಳ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ‘ಕಲ್ಕಿ’ ಸಿನಿಮಾದ ಫೈನಲ್ ಟ್ರೈಲರ್ ರಿಲೀಸ್:  ಜೂನ್ 27ಕ್ಕೆ ಪ್ರಭಾಸ್ ಫ್ಯಾನ್ಸ್ ಗೆ ಹಬ್ಬ

    ‘ಕಲ್ಕಿ’ ಸಿನಿಮಾದ ಫೈನಲ್ ಟ್ರೈಲರ್ ರಿಲೀಸ್: ಜೂನ್ 27ಕ್ಕೆ ಪ್ರಭಾಸ್ ಫ್ಯಾನ್ಸ್ ಗೆ ಹಬ್ಬ

    ವೈಜ್ಞಾನಿಕ ಮತ್ತು ಕಾಲ್ಪನಿಕ ಸಮ್ಮಿಶ್ರಣದ ದೃಶ್ಯಕಾವ್ಯ ‘ಕಲ್ಕಿ 2898 AD’ (Kalki) ಚಿತ್ರದ ಬಹು ನಿರೀಕ್ಷಿತ ಬಿಡುಗಡೆಯ ಟ್ರೈಲರ್ ಅಂತಿಮವಾಗಿ ಅನಾವರಣಗೊಂಡಿದೆ. ಮೊದಲ ನೋಟವು ಭಾರತೀಯ ಪುರಾಣಗಳಲ್ಲಿ ಬೇರೂರಿರುವ ಅಸಾಧಾರಣ ‘ಕಲ್ಕಿ 2898 AD’ ಸಿನಿಮೀಯ ಬ್ರಹ್ಮಾಂಡವನ್ನು ಪ್ರೇಕ್ಷಕರಿಗೆ ಪರಿಚಯಿಸಿದರೆ, ಇದೀಗ ಬಿಡುಗಡೆ ಆಗಿರುವ ಟ್ರೇಲರ್ ಚಿತ್ರದೊಳಗಿನ ಇನ್ನಷ್ಟ ಆಳವನ್ನು ನೋಡುಗನಿಗೆ ಪರಿಚಯಿಸಿದೆ. ಇದು ಮಹಾಕಾವ್ಯದ ಇನ್ನೊಂದು ಹಂತದ ಬಗ್ಗೆ ಸುಳಿವು ನೀಡುತ್ತದೆ.

    ಟ್ರೇಲರ್‌ನಲ್ಲಿ ಒಂದಕ್ಕಿಂತ ಒಂದು ಮೀರಿಸುವ ಪಾತ್ರಗಳೇ ಹೈಲೈಟ್.‌ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ‘ಅಶ್ವತ್ಥಾಮ’ ಆಗಿ ಧೈರ್ಯಶಾಲಿ ಸಾಹಸಗಳನ್ನು ಪ್ರದರ್ಶಿಸುತ್ತಾರೆ. ಉಳಗನಾಯಗನ್ ಕಮಲ್ ಹಾಸನ್ ಗುರುತಿಸಲಾಗದ ಇನ್ನೂ ಮಾರಣಾಂತಿಕ ಅವತಾರದಲ್ಲಿ ‘ಯಾಸ್ಕಿನ್’ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಭೈರವನಾಗಿ, ದೀಪಿಕಾ ಪಡುಕೋಣೆ ‘ಸುಮತಿ’ ಪಾತ್ರದಲ್ಲಿ ಎದುರಾಗಿದ್ದಾರೆ. ದಿಶಾ ಪಟಾನಿ ‘ರಾಕ್ಸಿ’ ಖಡಕ್‌ ಆಗಿಯೇ ಮಿಂಚು ಹರಿಸಿದ್ದಾರೆ.

    ಕಲ್ಕಿ 2898 AD ಚಿತ್ರದ ಟ್ರೇಲರ್‌ನಲ್ಲಿ ಬಗೆಬಗೆ ವಿಭಿನ್ನ ಪ್ರಪಂಚಗಳನ್ನು ಕಾಣಬಹುದು. ಒಂದು  ಕಾಶಿ, ಅದರ ಉಳಿವಿಗಾಗಿ ಹೋರಾಡುತ್ತಿರುವ, ಕೊನೆಯದಾಗಿ ಉಳಿದ ನಗರವೆಂದು ಬಿಂಬಿಸಲಾಗಿದೆ. ದೃಶ್ಯವೈಭವವೇ ಇಡೀ ಟ್ರೇಲರ್‌ನ ಜೀವಾಳ. ಊಹೆಗೂ ನಿಲುಕದ ಒಂದಷ್ಟು ಅಚ್ಚರಿಗೆ ದೂಡುವ ದೃಶ್ಯಗಳೇ ಇಲ್ಲಿನ ಹೈಲೈಟ್.‌ ಅತ್ಯುತ್ತಮ ಹಿನ್ನೆಲೆ ಸ್ಕೋರ್, ಹೈ ಕ್ಲಾಸ್ VFX ಮತ್ತು ರೋಮಾಂಚನಗೊಳಿಸುವ ದೃಶ್ಯಗಳೊಂದಿಗೆ, ಈ ಸಿನಿಮಾ ಮೂಡಿಬಂದಿದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

    ‘ಕಲ್ಕಿ 2898 AD’ ಚಿತ್ರದಲ್ಲಿ ನಿರ್ದೇಶಕ ನಾಗ್ ಅಶ್ವಿನ್ ಅವರ ದೂರದೃಷ್ಟಿಯ ವಿಧಾನವು ಭಾರತೀಯ ಸಿನಿಮಾವನ್ನು ಅದರ ನೆಲದ ದೃಶ್ಯಗಳು ಮತ್ತು ಕಥೆ ಹೇಳುವ ಮೂಲಕ ಮರುವ್ಯಾಖ್ಯಾನಿಸುವ ಭರವಸೆ ನೀಡುತ್ತದೆ. ‘ಕಲ್ಕಿ 2898 AD’ ನಿಜವಾದ ಪ್ಯಾನ್-ಇಂಡಿಯನ್ ಸಿನಿಮಾ ಎನಿಸಿಕೊಂಡಿದೆ. ತಾರಾಗಣದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ ಮತ್ತು ವೈಜಯಂತಿ ಮೂವೀಸ್ ಬಂಡವಾಳ ಹೂಡಿದೆ. ಈ ಬಹುಭಾಷಾ, ಪುರಾಣ- ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ, ಜೂನ್ 27ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

  • ‘ಪ್ರಾಜೆಕ್ಟ್ ಕೆ’ ಮೂಲಕ 50 ವರ್ಷದ ನಂತರ ಒಂದಾದ ಅಶ್ವಿನಿ ದತ್ ಮತ್ತು ಕಮಲ್

    ‘ಪ್ರಾಜೆಕ್ಟ್ ಕೆ’ ಮೂಲಕ 50 ವರ್ಷದ ನಂತರ ಒಂದಾದ ಅಶ್ವಿನಿ ದತ್ ಮತ್ತು ಕಮಲ್

    ಡಾರ್ಲಿಂಗ್ ಪ್ರಭಾಸ್ (Prabhas) ಮತ್ತು ಬಿಗ್ ಬಿ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ನಟಿಸುತ್ತಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪ್ರಾಜೆಕ್ಟ್ K (Project K). ಮುಂದಿನ ವರ್ಷದ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಲಿದ್ದು, ಇದೀಗ ಈ ಚಿತ್ರದಿಂದ ಕ್ರೇಜಿ ಅಪ್ ಡೇಟ್ ವೊಂದು ಹೊರಬಿದಿದ್ದೆ. ಎಲ್ಲರ ನಿರೀಕ್ಷೆಯಂತೆ ಉಳಗ ನಾಯಗನ್ ಕಮಲ್ ಹಾಸನ್ (Kamal Haasan) ಪ್ರಾಜೆಕ್ಟ್ K ಭಾಗವಾಗಿದ್ದಾರೆ. ಸ್ಪೆಷಲ್ ವಿಡಿಯೋ ಝಲಕ್ ಮೂಲಕ ಕಮಲ್ ಎಂಟ್ರಿ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ.

    ಕಳೆದೊಂದು ತಿಂಗಳಿನಿಂದ ಪ್ರಾಜೆಕ್ಟ್ K ಸಿನಿಮಾದಲ್ಲಿ ಕಮಲ್ ಹಾಸನ್ ಅವರು ಪ್ರಭಾಸ್ ಎದುರು ವಿಲನ್ ಆಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದರಂತೆ ಈಗ ಚಿತ್ರತಂಡ ಕಮಲ್ ಎಂಟ್ರಿ ಬಗ್ಗೆ  ಘೋಷಿಸಿದೆ. ಆದರೆ ಪ್ರಭಾಸ್ ಅವರಿಗೆ ಉಳಗ ನಾಯಗನ್ ಖಳನಾಯಕ ಅನ್ನೋದರ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ. ಪ್ರಮುಖ ಪಾತ್ರವೊಂದರಲ್ಲಿ ಕಮಲ್ ಹಾಸನ್ ನಟಿಸಲಿದ್ದಾರೆ ಎಂದಷ್ಟೇ ತಿಳಿಸಿದೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕಿಡಿಕಾರಿದ ನಟ ರಾಜೀವ್ ಖಂಡೇಲ್ವಾಲ್

    ಪ್ರಾಜೆಕ್ಟ್ K ಸಿನಿಮಾದಲ್ಲಿ ನಟಿಸುತ್ತಿರುವುದರ ಬಗ್ಗೆ ಕಮಲ್ ಹಾಸನ್ ಮಾತನಾಡಿ, ನಾನು 50 ವರ್ಷದ ಹಿಂದೆ ನೃತ್ಯ ಸಹಾಯಕ ಮತ್ತು ಸಹಾಯಕ ನಿರ್ದೇಶಕನಾಗಿದ್ದಾಗ ನಿರ್ಮಾಣ ವಲಯದಲ್ಲಿ ಅಶ್ವಿನಿ ದತ್  (Ashwini Dutt) ಹೆಸರು ದೊಡ್ಡ ಮಟ್ಟದಲ್ಲಿ ಖ್ಯಾತಿಗೊಳಿಸಿತ್ತು. ಐವತ್ತು ವರ್ಷದ ನಂತರ ನಾವು ಒಂದಾಗುತ್ತಿದ್ದೇವೆ. ಇಂದಿನ ಪೀಳಿಗೆಯ ಅದ್ಭುತ ನಿರ್ದೇಶಕ ನಾಗ್ ಅಶ್ವಿನ್ (Nag Ashwin), ನನ್ನ ಸಹನಟರಾದ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಜಿ ಜೊತೆ ನಟಿಸುತ್ತಿರುವುದು ಖುಷಿಕೊಟ್ಟಿದೆ. ಪ್ರಾಜೆಕ್ಟ್ K ಸಿನಿಮಾಗಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ ಎಂದರು.

    ನಿರ್ಮಾಪಕ ಅಶ್ವಿನಿ ದತ್, ಸುದೀರ್ಘವಾದ ವೃತ್ತಿ ಜೀವನದಲ್ಲಿ ‌ನಿಮ್ಮೊಟ್ಟಿಗೆ ಕೆಲಸ ಮಾಡುವುದು ನನ್ನ ಕನಸಾಗಿತ್ತು. ಪ್ರಾಜೆಕ್ಟ್ ಕೆ ಮೂಲಕ ಅದು ನನಸಾಗಿದೆ. ಕಮಲ್ ಹಾಸನ್-ಅಮಿತಾಭ್ ಜಿ ಅವರೊಟ್ಟಿಗಿನ ಕೆಲಸ ಮಾಡುವ ಅವಕಾಶ ದೊರೆತಿರುವುದು ನನಗೆ ಆಶೀರ್ವಾದ ಎಂದರು. ನಿರ್ದೇಶಕ ನಾಗ್ ಅಶ್ವಿನ್, ಕಮಲ್ ಸರ್ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದೇನೆ. ನಮ್ಮ ಜಗತ್ತನ್ನು ಪೂರ್ಣಗೊಳಿಸಲು ಅವರು ಒಪ್ಪಿಕೊಂಡಿರುವುದು ಸಂತಸ ಎಂದರು.

    ವೈಯಂತಿ ಮೂವೀಸ್ ಬ್ಯಾನರ್‌ನಲ್ಲಿ ಅದ್ಧೂರಿಯಾಗಿ ಮೂಡಿ ಬರುತ್ತಿರುವ ಮಲ್ಟಿ ಸ್ಟಾರ್  ಪ್ರಾಜೆಕ್ಟ್ ಕೆ ಸಿನಿಮಾಗೆ ಮಹಾನಟಿ ಸಿನಿಮಾ ಖ್ಯಾತಿಯ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳಿದ್ದಾರೆ.

  • ಪ್ರಭಾಸ್ ಎದುರಾಗಿ ನಿಲ್ಲಲಿದ್ದಾರೆ ಉಳುಗ ನಾಯಗನ್ ಕಮಲ್ ಹಾಸನ್

    ಪ್ರಭಾಸ್ ಎದುರಾಗಿ ನಿಲ್ಲಲಿದ್ದಾರೆ ಉಳುಗ ನಾಯಗನ್ ಕಮಲ್ ಹಾಸನ್

    ಪ್ರಭಾಸ್ (Prabhas) ಮತ್ತು ದೀಪಿಕಾ ಪಡುಕೋಣೆ ಕಾಂಬಿನೇಷನ್ ‘ಪ್ರಾಜೆಕ್ಟ್ ಕೆ’ (Project K) ಸಿನಿಮಾದಲ್ಲಿ ತಮಿಳಿನ ಹೆಸರಾಂತ ನಟ ಕಮಲ್ ಹಾಸನ್ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈವರೆಗೂ ಅದರ ಕುರಿತು ಚಿತ್ರತಂಡವಾಗಲಿ, ನಿರ್ಮಾಣ ಸಂಸ್ಥೆಯಾಗಲಿ ಅಧಿಕೃತವಾಗಿ ಹೇಳಿಕೆ ನೀಡಿರಲಿಲ್ಲ. ಇದೀಗ ಕಮಲ್ ಹಾಸನ್ ಆ ಸಿನಿಮಾದಲ್ಲಿ ನಟಿಸುತ್ತಿರುವ ಕುರಿತು ಅಧಿಕೃತ ಮಾಹಿತಿಯೇ ಹೊರ ಬಿದ್ದಿದೆ.

    ಪ್ರಾಜೆಕ್ಟ್ ಕೆ ನಿರ್ಮಾಣ ಸಂಸ್ಥೆಯಾದ ವೈಜಯಂತಿ ಮೂವೀಸ್ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರ ಬಿದ್ದಿದ್ದು, ‘ಇವರು ಲೆಜೆಂಡ್. ಈ ಪಾತ್ರವು ಯಾರನ್ನು ನಿರೀಕ್ಷೆ ಮಾಡುತ್ತಿತ್ತೋ ಅವರು ನಮಗೆ ಸಿಕ್ಕಿದ್ದಾರೆ. ಕಮಲ್ ಹಾಸನ್ (Kamal Haasan) ಅವರಿಂದ ನಾನು ಸಾಕಷ್ಟು ಕಲಿಯಬಹುದು. ಆ ಕ್ಷಣಕ್ಕಾಗಿ ನಾನಂತೂ ಕಾಯುತ್ತಿದ್ದೇನೆ’ ಎಂದು ನಿರ್ದೇಶಕ ನಾಗ್ ಅಶ್ವಿನ್ (Nag Ashwin) ಹೇಳಿಕೊಂಡಿದ್ದಾರೆ.

    ಒಂದು ಕಡೆ ಕಮಲ್ ಹಾಸನ್ ರಂಥ ದಿಗ್ಗಜರು ಈ ಸಿನಿಮಾದಲ್ಲಿದ್ದರೆ ಮತ್ತೊಂದು ಕಡೆ ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಕೂಡ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. `ಪಠಾಣ್’ (Pathaan) ಚಿತ್ರದ ಸೂಪರ್ ಸಕ್ಸಸ್‌ ನಂತರ ದೀಪಿಕಾ ಅವರು ಪ್ರಭಾಸ್ ಜೊತೆ `ಪ್ರಾಜೆಕ್ಟ್ ಕೆ’ ಸಿನಿಮಾದಲ್ಲಿ ನಟಿಸುವುದಕ್ಕಾಗಿ ಭರ್ಜರಿ ಸಂಭಾವನೆ ಪಡೆದಿದ್ದಾರೆ.

    ಐಶ್ವರ್ಯಾ’ (Aishwarya Kannada Film) ಸಿನಿಮಾ ಮೂಲಕ ರಿಯಲ್ ಸ್ಟಾರ್ ಉಪ್ಪಿಗೆ (Upendra)  ನಾಯಕಿಯಾಗುವ ಮೂಲಕ ಬಣ್ಣದ ಲೋಕಕ್ಕೆ ಕನ್ನಡತಿ ದೀಪಿಕಾ ಪಡುಕೋಣೆ ಎಂಟ್ರಿ ಕೊಟ್ಟರು. ಬಳಿಕ ಶಾರುಖ್ ಖಾನ್‌ಗೆ (Sharukh Khan) ನಾಯಕಿಯಾಗಿ `ಓಂ ಶಾಂತಿ ಓಂ’ ಚಿತ್ರದಿಂದ ಬಾಲಿವುಡ್‌ಗೆ ಲಗ್ಗೆ ಇಟ್ಟರು. ಸಾಕಷ್ಟು ಹಿಂದಿ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡು ಸೈ ಎನಿಸಿಕೊಂಡಿದ್ದಾರೆ.

    K Project

    ಈ ವರ್ಷ `ಪಠಾಣ್’ ಚಿತ್ರದ ಮೂಲಕ ಭರ್ಜರಿ ಓಪನಿಂಗ್ಸ್ ಪಡೆದಿದ್ದಾರೆ. ಶಾರುಖ್ ನಾಯಕಿಯಾಗಿ ದೀಪಿಕಾ ಮಿಂಚಿದ್ದಾರೆ. ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಹಾಗಾಗಿ ತಮ್ಮ ಮುಂದಿನ ಸಿನಿಮಾ `ಪ್ರಾಜೆಕ್ಟ್ ಕೆ’ ಚಿತ್ರಕ್ಕೆ ದುಬಾರಿ ಸಂಭಾವನೆಯನ್ನೇ ನಟಿ ಪಡೆದಿದ್ದಾರೆ.

     

    ಈ ಸಿನಿಮಾಗಾಗಿ ಅವರು ದೊಡ್ಡ ಕಾಲ್‌ಶೀಟ್ ನೀಡಿದ್ದಾರೆ. ಹಲವು ದಿನಗಳನ್ನ ಈ ಚಿತ್ರಕ್ಕಾಗಿ ಮುಡಿಪಿಟ್ಟಿದ್ದಾರೆ. ನಾಗ್ ಅಶ್ವೀನ್ ನಿರ್ದೇಶನದ ಈ ಚಿತ್ರಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಕೆಲ ಸ್ಟಾರ್ ಹೀರೋಗಳು ಕೂಡ ಇಷ್ಟು ಸಂಭಾವನೆ ಪಡೆಯಲ್ಲ ಅನ್ನೋದು ಗಮಿನಿಸಬೇಕಾದ ವಿಷಯ. ಪ್ರಭಾಸ್ ಜೊತೆಗಿನ ಈ ಚಿತ್ರ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ಭಾರೀ ತಾರಾಗಣದ ಕಾರಣದಿಂದಾಗಿ ಸಿನಿಮಾ ಕುತೂಹಲ ಮೂಡಿಸಿದೆ.