Tag: nadav lapid

  • ಕಾಶ್ಮೀರಿ ಪಂಡಿತ್ ಸಮುದಾಯವನ್ನು ಅವಮಾನಿಸೋದು ನನ್ನ ಉದ್ದೇಶವಲ್ಲ: ನಡಾವ್ ಲಾಪಿಡ್

    ಕಾಶ್ಮೀರಿ ಪಂಡಿತ್ ಸಮುದಾಯವನ್ನು ಅವಮಾನಿಸೋದು ನನ್ನ ಉದ್ದೇಶವಲ್ಲ: ನಡಾವ್ ಲಾಪಿಡ್

    ತ್ತೀಚೆಗೆ ಗೋವಾ ಸಿನಿಮೋತ್ಸವದಲ್ಲಿ ಜ್ಯೂರಿಯಾಗಿದ್ದ ನಡಾವ್ ಲಾಪಿಡ್ (Nadav Lapid) `ಕಾಶ್ಮೀರ್ ಫೈಲ್ಸ್’ (The Kashmir Files) ಚಿತ್ರದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಡಾವ್ ವಿರುದ್ಧ ವಿರೋಧ ವ್ಯಕ್ತವಾಗಿದ್ದ ಬೆನ್ನಲ್ಲೇ ಈಗ ನಡಾವ್ ಕ್ಷಮೆ ಕೇಳಿದ್ದಾರೆ.

    `ಕಾಶ್ಮೀರಿ ಫೈಲ್ಸ್’ ಸಿನಿಮಾ ಅಶ್ಲೀಲ ಪ್ರಚಾರದ ಸಿನಿಮಾ ಎಂದು ಹೇಳಿಕೆ ನೀಡುವ ಮೂಲಕ ಅನೇಕರ ಕೆಂಗಣ್ಣಿಗೆ ನಡಾವ್ ಲಾಪಿಡ್ ಗುರಿಯಾಗಿದ್ದರು. ಬಳಿಕ ಈ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ನಡಾವ್ ಹೇಳಿಕೆಗೆ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದರು. ಈಗ ಕಾಶ್ಮೀರಿ ಪಂಡಿತ್ ಸಮುದಾಯವನ್ನು ಅವಮಾನಿದೋದು ನನ್ನ ಉದ್ದೇಶವಲ್ಲ ಕ್ಷಮಿಸಿ ಎಂದು ನಡಾವ್ ಪ್ರತಿಕ್ರಿಯೆ ನೀಡಿದ್ದಾರೆ.

    kashmirನಾನು ಯಾರನ್ನು ಅವಮಾನಿಸಲು ಬಯಸಲಿಲ್ಲ. ಯಾವುದೇ ಸಮುದಾಯವನ್ನು ದೂಷಿಸುವುದು ನನ್ನ ಗುರಿಯಾಗಿರಲಿಲ್ಲ ಎಂದು ತಪ್ಪು ಗ್ರಹಿಕೆಗೆ ಕ್ಷಮಿಸಿ ಎಂದು ನಡಾವ್ ಚಿತ್ರತಂಡಕ್ಕೆ ಮತ್ತು ಇಡೀ ಕಾಶ್ಮೀರಿ ಸಮುದಾಯಕ್ಕೆ ಕ್ಷಮೆ ಕೋರಿದ್ದಾರೆ. ಇದನ್ನೂ ಓದಿ: ಸಮಂತಾ ಬದಲು ಶ್ರೀದೇವಿ ಪುತ್ರಿಯನ್ನ ಕರೆತಂದ `ಪುಷ್ಪ 2′ ಟೀಮ್

    ಗೋವಾದಲ್ಲಿ ನಡೆದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸೋಮವಾರ (ನ.28) ಅದ್ದೂರಿಯಾಗಿ ನಡೆದಿತ್ತು. ಮುಕ್ತಾಯ ಸಮಾರಂಭದಲ್ಲಿ ತೀರ್ಪುಗಾರರ ಮುಖ್ಯಸ್ಥರಾಗಿದ್ದ ಇಸ್ರೇಲ್‌ನ ಖ್ಯಾತ ನಿರ್ದೇಶಕ ನಡಾವ್ ಲಾಪಿಡ್ ದಿ ಕಾಶ್ಮಿರ್ ಫೈಲ್ಸ್ ಸಿನಿಮಾ ವಿರುದ್ಧ ಅಸಮಾಧಾನ ಹೊರಹಾಕಿದರು. ʻಕಾಶ್ಮೀರ ಫೈಲ್ಸ್ʼ ಸಿನಿಮಾ ವೀಕ್ಷಿಸಿ ತುಂಬಾ ಡಿಸ್ಟರ್ಬ್ ಆಗಿದ್ದೀವಿ. ಇದೊಂದು ಅಶ್ಲೀಲ ಪ್ರಚಾರದ ಸಿನಿಮಾ. ಇಂಥ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ ಈ ಸಿನಿಮಾ ಸೂಕ್ತವಲ್ಲ ಎಂದು ಭಾಸವಾಯಿತು ಎಂದು ಹೇಳುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಾಶ್ಮೀರ್‌ ಫೈಲ್ಸ್‌ ಕಾಲ್ಪನಿಕ ಅಂತಾ ಸಾಬೀತುಪಡಿಸಿದ್ರೆ, ಸಿನಿಮಾ ಮಾಡೋದನ್ನೇ ಬಿಡ್ತೀನಿ- ವಿವೇಕ್ ಅಗ್ನಿಹೋತ್ರಿ

    ಕಾಶ್ಮೀರ್‌ ಫೈಲ್ಸ್‌ ಕಾಲ್ಪನಿಕ ಅಂತಾ ಸಾಬೀತುಪಡಿಸಿದ್ರೆ, ಸಿನಿಮಾ ಮಾಡೋದನ್ನೇ ಬಿಡ್ತೀನಿ- ವಿವೇಕ್ ಅಗ್ನಿಹೋತ್ರಿ

    ತ್ತೀಚೆಗೆ ಗೋವಾ ಸಿನಿಮೋತ್ಸವದಲ್ಲಿ ಜ್ಯೂರಿ ಕಮಿಟಿ ಅಧ್ಯಕ್ಷ ನಡಾವ್ ಲಪಿಡ್(Nadav Lapid) `ದಿ ಕಾಶ್ಮೀರಿ ಫೈಲ್ಸ್’ (The Kashmir Files) ಸಿನಿಮಾ ಬಗ್ಗೆ ಅವಹೇಳನಕಾರಿ ಹೇಳಿಕೆಯೊಂದನ್ನ ಕೊಟ್ಟಿದ್ದರು. ಇದೊಂದು ಪ್ರಚಾರದ, ಅಶ್ಲೀಲ ಸಿನಿಮಾ ಎಂದು ನಡಾವ್ ಕಿಡಿಕಾರಿದ್ದರು. ಇದೀಗ ನಡಾವ್ ಹೇಳಿಕೆಗೆ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ರಿಯಾಕ್ಟ್ ಮಾಡಿದ್ದಾರೆ. ನಮ್ಮ ಚಿತ್ರದಲ್ಲಿ ಯಾವುದೇ ದೃಶ್ಯ ಕಾಲ್ಪನಿಕ ಅಂತಾ ಸಾಬೀತಾದ್ರೆ ತಾವು ಸಿನಿಮಾ ಮಾಡುವುದನ್ನೇ ಬಿಟ್ಟು ಬಿಡ್ತೀನಿ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.

    ನಡಾವ್ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ನಡಾವ್‌ಗೆ ಟಕ್ಕರ್ ಕೊಡುವಂತಹ ವೀಡಿಯೊವೊಂದನ್ನ ವಿವೇಕ್ ಶೇರ್ ಮಾಡಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್ ವಿರುದ್ಧ ಮಾತನಾಡಿದ ನಡಾವ್ ಲಪಿಡ್ ಮನಸ್ಥಿತಿ ಬಗ್ಗೆ ವಿವೇಕ್ ಅಗ್ನಿಹೋತ್ರಿ ಟೀಕೆ ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಜಪಾನ್ ನಲ್ಲಿ ಕುತ್ಕೊಂಡು ತನಗೀಗ 40 ವರ್ಷ ಎಂದು ಘೋಷಿಸಿಕೊಂಡ ರಮ್ಯಾ

    ಜ್ಯೂರಿ ಕಮಿಟಿಯ ಅಧ್ಯಕ್ಷ ಆ ರೀತಿ ಹೇಳಿಕೆ ನೀಡಿದ್ದು ನನಗೆ ಹೊಸದೇನೂ ಅನಿಸುತ್ತಿಲ್ಲ. ಭಯೋತ್ಪಾದಕ ಸಂಘಟನೆಗಳು, ಅರ್ಬನ್ ನಕ್ಸಲರು, ತುಕ್ಡೆ ತುಕ್ಡೆ ಗ್ಯಾಂಗ್ ಸದಸ್ಯರು ಮೊದಲಿನಿಂದಲೂ ಇದನ್ನೇ ಹೇಳುತ್ತಾ ಬಂದಿದ್ದಾರೆ. ಆದರೆ ಆಶ್ಚರ್ಯ ಎನಿಸಿದ್ದು ಏನೆಂದರೆ, ಭಾರತ ಸರ್ಕಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ವಿಚಾರಕ್ಕೆ ಬೆಂಬಲ ನೀಡಲಾಯಿತು. ಭಾರತದ ಕೆಲವು ಜನರೇ ಆ ವಿಚಾರವನ್ನು ದೇಶ ವಿರೋಧಿಯಾಗಿ ಬಳಸಿಕೊಂಡಿದ್ದಾರೆ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.

    ನಾಲ್ಕು ವರ್ಷದ ಹಿಂದೆ ನಾನು ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕಾಗಿ ಅಧ್ಯಯನ ಶುರುಮಾಡಿದಾಗ ಅದನ್ನು ಪ್ರಚಾರ ಎಂದು ಹೇಳಿದ್ದು ಇದೇ ಜನರು. 700 ಜನರು ಸಂದರ್ಶನ ನಡೆಸಿ ಈ ಸಿನಿಮಾ ಮಾಡಲಾಯ್ತು. ಆ 700 ಜನರ ಕುಟುಂಬದವರ ಮೇಲೆ ಕೊಲೆ-ಅತ್ಯಾಚಾರ ಆಗಿದ್ದು ಅಶ್ಲೀಲ ಮತ್ತು ಪ್ರಚಾರವೇ ಇಂದಿಗೂ ಆ ನೆಲದಲ್ಲಿ ಹಿಂದೂಗಳನ್ನು ಆರಿಸಿ ಕೊಲ್ಲಲಾಗುತ್ತಿದೆ. ಕಾಶ್ಮೀರದಲ್ಲಿ ಹತ್ಯಾಕಾಂಡ ಆಗಿರಲೇ ಇಲ್ಲ ಎಂದು ಆಗಾಗ ಈ ವಿಚಾರ ಚರ್ಚೆ ಆಗುತ್ತಲೇ ಇರುತ್ತದೆ. ಹಾಗಾದರೆ ನಮ್ಮ ಚಿತ್ರದಲ್ಲಿ ಯಾವುದೇ ದೃಶ್ಯ ಕಾಲ್ಪನಿಕ ಅಂತಾ ಸಾಬೀತಾದ್ರೆ ತಾವು ಸಿನಿಮಾ ಮಾಡುವುದನ್ನೇ ಬಿಟ್ಟು ಬಿಡ್ತೀನಿ ಎಂದು ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಸವಾಲು ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]