Tag: NADA

  • ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟುಗೆ ಶಾಕ್‌ – ಬಜರಂಗ್‌ ಪುನಿಯಾ 4 ವರ್ಷ ಬ್ಯಾನ್‌

    ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟುಗೆ ಶಾಕ್‌ – ಬಜರಂಗ್‌ ಪುನಿಯಾ 4 ವರ್ಷ ಬ್ಯಾನ್‌

    ನವದೆಹಲಿ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA) ಕುಸ್ತಿಪಟು ಬಜರಂಗ್ ಪುನಿಯಾ (Wrestler Bajrang Punia) ಅವರನ್ನ ನಾಲ್ಕು ವರ್ಷಗಳ ಕಾಲ ಬ್ಯಾನ್‌ ಮಾಡಿದೆ.

    ಮಾರ್ಚ್ 10 ರಂದು ಸೋನೆಪತ್‌ನಲ್ಲಿ ನಡೆದ ರಾಷ್ಟ್ರೀಯ ತಂಡದ ಆಯ್ಕೆಗೆ ನಡೆದ ಟ್ರಯಲ್ಸ್‌ನಲ್ಲಿ ಆಯ್ಕೆಯಾದ ನಂತರ ಪುನಿಯಾ ಮೂತ್ರದ ಮಾದರಿಯನ್ನು (Urine Sample) ಪರೀಕ್ಷೆಗೆ ನೀಡಲಿ ನಿರಾಕರಿಸಿದರು. ಇದನ್ನು ನಿಯಮ ಬಾಹಿರ ಎಂದು ಪರಿಗಣಿಸಿರುವ ನಾಡಾ ಪೂನಿಯಾರನ್ನ ನಾಲ್ಕು ವರ್ಷಗಳ ಕಾಲ ಬ್ಯಾನ್‌ ಮಾಡಿದೆ. ಕಳೆದ ಏಪ್ರಿಲ್‌ 23ರಂದು ಪುನಿಯಾರನ್ನ ನಾಡಾ ಮೊದಲಬಾರಿಗೆ ಅಮಾನತುಗೊಳಿಸಿತ್ತು. ನಂತರ ವಿಶ್ವ ಕುಸ್ತಿ ಆಡಳಿತ ಮಂಡಳಿ (UWW) ಸಹ ಅವರನ್ನ ಅಮಾನತುಗೊಳಿಸಿತ್ತು. ಇದರ ವಿರುದ್ಧ ಪುನಿಯಾ ಮೇಲ್ಮನವಿ ಸಲ್ಲಿಸಿದ್ದರು. ಆದ್ರೆ ನಾಡಾದ ಆಂಟಿ-ಡಿಸಿಪ್ಲಿನರಿ ಡೋಪಿಂಗ್ ಪ್ಯಾನೆಲ್ (ADDP) ಮುಂದಿನ ಸೂಚನೆ ನೀಡುವವರೆಗೆ ಮೇಲ್ಮನವಿಯನ್ನು ರದ್ದುಗೊಳಿಸಿತ್ತು. ಇದನ್ನೂ ಓದಿ: 1,000 ಕೋಟಿಗೆ RCB ಫ್ರಾಂಚೈಸಿ ಖರೀದಿಸಲು ಪ್ಲ್ಯಾನ್‌; ಮಂಡ್ಯದಲ್ಲಿ ಸದ್ದು ಮಾಡ್ತಿದೆ ಫ್ಯಾನ್ಸ್‌ ಪೋಸ್ಟರ್‌

    ನಾಡಾಗೆ ಮೂತ್ರ ಮಾದರಿಯನ್ನು ನೀಡದೇ ಇದ್ದದ್ದು ಯಾಕೆ? ಎಂದು ಜೂನ್‌ 23 ರಂದು ಕುಸ್ತಿಪಟುಗೆ ನೋಟಿಸ್‌ ನೀಡಿತ್ತು. ಸೆಪ್ಟೆಂಬರ್ 20 ಮತ್ತು ಅಕ್ಟೋಬರ್ 4 ರಂದು ವಿಚಾರಣೆ ನಡೆಸಲಾಗಿತ್ತು. ಇದೀಗ ಆದೇಶ ಪ್ರಕಟಿಸಿರುವ ಎಡಿಡಿಪಿ, ಕಲಂ 10.3.1 ರ ಅಡಿಯಲ್ಲಿ ನಿರ್ಬಂಧಗಳಿಗೆ ಅಥ್ಲೀಟ್ ಹೊಣೆಗಾರನಾಗಿರುತ್ತಾನೆ ಮತ್ತು 4 ವರ್ಷಗಳ ಅವಧಿಗೆ ಅನರ್ಹತೆಗೆ ಹೊಣೆಗಾರನಾಗಿರುತ್ತಾನೆ ಎಂದು ಹೇಳಿದೆ. ಈ ಸಂದರ್ಭದಲ್ಲಿ ಬಜರಂಗ್ ಪುನಿಯಾ ಸ್ಪರ್ಧಾತ್ಮಕ ಕುಸ್ತಿಗೆ ಮರಳಲು ಮತ್ತು ವಿದೇಶದಲ್ಲಿ ಕೋಚಿಂಗ್‌ ಕೆಲಸಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂದು ಸಹ ತನ್ನ ಆದೇಶದಲ್ಲಿ ತಿಳಿದಿದೆ. ಇದನ್ನೂ ಓದಿ: Keep Distance – ಇದು ನಮ್ಮ ನಿಮ್ಮ ನೆಮ್ಮದಿಯ ವಿಷಯ!

    ಕೆಲ ದಿನಗಳ ಹಿಂದೆಯಷ್ಟೇ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಕಾಂಗ್ರೆಸ್‌ ಸೇರ್ಪಡೆಯಾದರು. ಆನಂತರ ಪೂನಿಯಾ ಅವರನ್ನ ಅಖಿಲ ಭಾರತ ಕಿಸಾನ್ ಕಾಂಗ್ರೆಸ್‌ನ (Indian Kisan Congress) ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದಕ್ಕೂ ಮುನ್ನ ಅವರು ರೈಲ್ವೆ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು. ಇದನ್ನೂ ಓದಿ: 2026ರ ವೇಳೆಗೆ ದುಬೈನಲ್ಲಿ ವಿಶ್ವದ ಮೊದಲ ಡ್ರೋನ್‌ ಏರ್‌ ಟ್ಯಾಕ್ಸಿ ಹಾರಾಟ- ಹೇಗಿರಲಿದೆ ಟ್ಯಾಕ್ಸಿ?

  • ಮತ್ತೆ ಕುಸ್ತಿಪಟು ಭಜರಂಗ್‌ ಪೂನಿಯಾ ಅಮಾನತು

    ಮತ್ತೆ ಕುಸ್ತಿಪಟು ಭಜರಂಗ್‌ ಪೂನಿಯಾ ಅಮಾನತು

    ನವದೆಹಲಿ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA) ಕುಸ್ತಿಪಟು ಭಜರಂಗ್ ಪುನಿಯಾ (Wrestler Bajrang Punia) ಅವರನ್ನು ಮತ್ತೆ ಅಮಾನತು ಮಾಡಿದೆ.

    ಮಾರ್ಚ್ 10 ರಂದು ಸೋನಿಪತ್‌ನಲ್ಲಿ ನಡೆದ ಟ್ರಯಲ್ಸ್‌ನಲ್ಲಿ ಆಯ್ಕೆಯಾದ ನಂತರ ಭಜರಂಗ್ ಪುನಿಯಾ ಮೂತ್ರದ ಮಾದರಿಯನ್ನು (Urine Sample) ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಭವಿಷ್ಯದ ಯಾವುದೇ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಅಮಾನತುಗೊಳಿಸುವ ಆದೇಶವನ್ನು ನಾಡಾ ಹೊರಡಿಸಿದೆ.

    ಈ ಅಮಾನತು ನಿರ್ಧಾರ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ಸ್ಪರ್ಧಿಸುವ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ.

     

    ಒಲಿಂಪಿಯನ್‌ಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಸೇರಿದಂತೆ ಇತರ ಅಗ್ರ ಕುಸ್ತಿಪಟುಗಳು ಬಿಜೆಪಿ ಮಾಜಿ ಸಂಸದ ಮತ್ತು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಬಳಿಕ ನಡೆಸಿದ ಪ್ರತಿಭಟನೆಯಲ್ಲಿ ಭಜರಂಗ್‌ ಪೂನಿಯಾ ಮುಂಚೂಣಿಯಲ್ಲಿದ್ದರು. ಇದನ್ನೂ ಓದಿ: ಏಕದಿನ ವಿಶ್ವಕಪ್‌ ಸೋಲಿನ ಸೇಡು – ಬಲಿಷ್ಠ ಆಸೀಸ್‌ ವಿರುದ್ಧ ಅಫ್ಘಾನ್‌ಗೆ ಐತಿಹಾಸಿಕ ಗೆಲುವು!

    ಪುನಿಯಾ ಅವರಲ್ಲಿ ಮೂತ್ರದ ಮಾದರಿ ನೀಡುವಂತೆ ಕೇಳಿದ್ದರೂ ಅವರು ನಿಗದಿತ ಸಮಯದ ಒಳಗಡೆ ನೀಡಿಲ್ಲ ಎಂದು ನಾಡಾ ತಿಳಿಸಿದೆ.

    ಉದ್ದೀಪನಾ ಪರೀಕ್ಷೆ ಉದ್ದೇಶಕ್ಕಾಗಿ ಅಗತ್ಯವಾದ ಮೂತ್ರ ಮಾದರಿಗಳನ್ನು ಒದಗಿಸಲು ಸಂಬಂಧಿಸಿದ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸಿದ್ದರು. ಆದರೆ ಅಧಿಕಾರಿಗಳಿ ಮನವಿಯ ನಂತರವೂ ನೀವು ಮೂತ್ರದ ಮಾದರಿಗಳನ್ನು ನೀಡಲು ನೀರಕಾರಿಸಿದ್ದೀರಿ. ಮೂತ್ರ ಮಾದರಿ ಸಂಗ್ರಹಿಸಲು ಅವಧಿ ಮೀರಿದ ಕಿಟ್‌ಗಳನ್ನು ನೀಡಲಾಗಿದೆ ಎಂಬ ನಿಮ್ಮ ಆರೋಪಕ್ಕೆ ಈಗಾಗಲೇ ಅಧಿಕಾರಿಗಳು ಉತ್ತರ ನೀಡಿದ್ದಾರೆ. ಈ ಕಾರಣಕ್ಕೆ ಅಮಾನತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಾಡಾ ತನ್ನ ನೋಟಿಸ್‌ನಲ್ಲಿ ಹೇಳಿದೆ.

     

    ಅಧಿಕಾರಿಗಳು ಹಲವು ಮನವಿಗಳ ನಂತರವೂ ನೀವು ಮೂತ್ರ ಮಾದರಿಗಳನ್ನು ನೀಡಲು ನಿರಾಕರಿಸಿದ್ದೀರಿ. ಮೂತ್ರ ಮಾದರಿಗಾಗಿ ಅವಧಿ ಮೀರಿದ ಕಿಟ್‌ಗಳನ್ನು ನೀಡಲಾಗಿದೆ ಎಂಬ ನಿಮ್ಮ ಆರೋಪಗಳಿಗೂ ಸಂಬಂಧಿಸಿದ ಅಧಿಕಾರಿಗಳು ವಿವರವಾಗಿ ಉತ್ತರ ನೀಡಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ನಿಮ್ಮ ವಿರುದ್ಧ ನಾಡಾ ಕ್ರಮ ಕೈಗೊಂಡಿದೆ” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

    ಮೂತ್ರದ ಮಾದರಿಯನ್ನು ನೀಡದ್ದು ಯಾಕೆ ಎನ್ನುವುದರ ಬಗ್ಗೆ ಲಿಖಿತವಾಗಿ ಕಾರಣವನ್ನು ಮೇ 7ರ ಒಳಗಡೆ ತಿಳಿಸಬೇಕು ಎಂದು ನಾಡಾ ಸೂಚಿಸಿತ್ತು. ಒಂದು ವೇಳೆ ಈ ಅವಧಿಯ ಒಳಗಡೆ ಸರಿಯಾದ ಕಾರಣ ನೀಡದೇ ಇದ್ದರೆ ಮುಂದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತ್ತು.

    ಈ ನೋಟಿಸ್‌ಗೆ ಎಕ್ಸ್‌ನಲ್ಲಿ ಉತ್ತರಿಸಿದ ಭಜರಂಗ್ ಪುನಿಯಾ, ನಾನು ಮೂತ್ರ ನೀಡಲು ಯಾವುದೇ ಹಂತದಲ್ಲಿ ನಿರಾಕರಿಸಲಿಲ್ಲ. ಮಾರ್ಚ್‌ 10, 2024 ರಂದು ಡೋಪಿಂಗ್ ನಿಯಂತ್ರಣ ಅಧಿಕಾರಿಗಳು ನನ್ನನ್ನು ಮೂತ್ರದ ಮಾದರಿಯನ್ನು ಎರಡು ಬಾರಿ ಪಡೆಯಲು ಬಂದಾಗ ಅವರು ಅವಧಿ ಮೀರಿದ ಕಿಟ್‌ಗಳನ್ನು ನೀಡಿದ್ದರು ಎಂದು ತಿಳಿಸಿದ್ದರು.

     

  • ನಾಡಾದಿಂದ ಕುಸ್ತಿಪಟು ಭಜರಂಗ್ ಪುನಿಯಾ ಅಮಾನತು

    ನಾಡಾದಿಂದ ಕುಸ್ತಿಪಟು ಭಜರಂಗ್ ಪುನಿಯಾ ಅಮಾನತು

    ನವದೆಹಲಿ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA) ಕುಸ್ತಿಪಟು ಭಜರಂಗ್ ಪುನಿಯಾ (Wrestler Bajrang Punia) ಅವರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿದೆ.

    ಮೂಲಗಳ ಪ್ರಕಾರ ಮಾರ್ಚ್ 10 ರಂದು ಸೋನೆಪತ್‌ನಲ್ಲಿ ನಡೆದ ಟ್ರಯಲ್ಸ್‌ನಲ್ಲಿ ಆಯ್ಕೆಯಾದ ನಂತರ ಭಜರಂಗ್ ಪುನಿಯಾ ಮೂತ್ರದ ಮಾದರಿಯನ್ನು (Urine Sample) ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಭವಿಷ್ಯದ ಯಾವುದೇ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಅಮಾನತುಗೊಳಿಸುವ ಆದೇಶವನ್ನು ನಾಡಾ ಹೊರಡಿಸಿದೆ.

    ಈ ಅಮಾನತು ನಿರ್ಧಾರ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ಸ್ಪರ್ಧಿಸುವ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ. ಇದನ್ನೂ ಓದಿ: ಅಣ್ಣಾಮಲೈ ಬಯೋಪಿಕ್‌ನಲ್ಲಿ ತಮಿಳು ನಟ ವಿಶಾಲ್?

    ಒಲಿಂಪಿಯನ್‌ಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಸೇರಿದಂತೆ ಇತರ ಅಗ್ರ ಕುಸ್ತಿಪಟುಗಳು ಬಿಜೆಪಿ ಮಾಜಿ ಸಂಸದ ಮತ್ತು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಬಳಿಕ ನಡೆಸಿದ ಪ್ರತಿಭಟನೆಯಲ್ಲಿ ಭಜರಂಗ್‌ ಪೂನಿಯಾ ಮುಂಚೂಣಿಯಲ್ಲಿದ್ದರು.

    ಪುನಿಯಾ ಅವರಲ್ಲಿ ಮೂತ್ರದ ಮಾದರಿ ನೀಡುವಂತೆ ಕೇಳಿದ್ದರೂ ಅವರು ನಿಗದಿತ ಸಮಯದ ಒಳಗಡೆ ನೀಡಿಲ್ಲ ಎಂದು ನಾಡಾ ತಿಳಿಸಿದೆ. ಇದನ್ನೂ ಓದಿ: 40ಕ್ಕೂ ಹೆಚ್ಚು ಪೊಲೀಸರು ಬಂದು ಹೊಡೆದಿದ್ದಾರೆ – ಏಟಿನ ಭಯಕ್ಕೆ ಸುಳ್ಳು ಹೇಳಿದ್ದೇವೆ

    ಈ ನಾಡಾ ಮೂತ್ರದ ಮಾದರಿಯನ್ನು ನೀಡದ್ದು ಯಾಕೆ ಎನ್ನುವುದರ ಬಗ್ಗೆ ಲಿಖಿತವಾಗಿ ಕಾರಣವನ್ನು ಮೇ 7ರ ಒಳಗಡೆ ತಿಳಿಸಬೇಕು. ಒಂದು ವೇಳೆ ಈ ಅವಧಿಯ ಒಳಗಡೆ ಸರಿಯಾದ ಕಾರಣ ನೀಡದೇ ಇದ್ದರೆ ಮುಂದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

     

  • ಹಠ ಸಡಿಲಿಸಿದ ಬಿಸಿಸಿಐ – 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ?

    ಹಠ ಸಡಿಲಿಸಿದ ಬಿಸಿಸಿಐ – 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ?

    ಲಂಡನ್: 2028ರ ಒಲಿಂಪಿಕ್ಸ್‌ನಲ್ಲಿ  ಕ್ರಿಕೆಟ್ ಸೇರ್ಪಡೆಯಾಗುವ ಸಾಧ್ಯತೆಯಿದೆ. ವಿಶ್ವ ಕ್ರಿಕೆಟ್ ಸಮಿತಿಯ ಅಧ್ಯಕ್ಷ, ಮಾಜಿ ಇಂಗ್ಲೆಂಡ್ ತಂಡದ ಬ್ಯಾಟ್ಸ್ ಮನ್ ಮೈಕ್ ಗ್ಯಾಟಿಂಗ್ ಈ ವಿಚಾರವನ್ನು ಮೊದಲ ಬಾರಿಗೆ ಅಧಿಕೃತವಾಗಿ ತಿಳಿಸಿದ್ದಾರೆ.

    ಮೇರಿಲೆಬೋನ್ ಕ್ರಿಕೆಟ್ ಕ್ಲಬ್(ಎಂಸಿಸಿ) ಕ್ರಿಕೆಟ್ ಸಮಿತಿಯಲ್ಲಿ ನಡೆದ ಸಭೆಯಲ್ಲಿ ಐಸಿಸಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮನು ಸಾಹ್ನಿ ಅವರು ಬಿಸಿಸಿಐ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ದಳ(ನಾಡಾ) ವ್ಯಾಪ್ತಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ಕ್ರೀಡೆಯಲ್ಲಿ ಕ್ರಿಕೆಟ್ ಸೇರ್ಪಡೆಗೊಳಿಸಬೇಕೆಂಬ ಆಗ್ರಹಕ್ಕೆ ಬಲ ಬಂದಿದೆ ಎಂದು ಹೇಳಿದ್ದಾರೆ.

    ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮೈಕ್ ಗ್ಯಾಟಿಂಗ್ ಅವರು, ನಾವು ಮನು ಸಾಹ್ನಿ ಅವರ ಜೊತೆ ಮಾತನಾಡಿದ್ದೇವೆ. ಅವರು 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾಗಬಹುದು ಎನ್ನುವ ಬಲವಾದ ನಂಬಿಕೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿದೆ. ಅವಕಾಶ ಸಿಕ್ಕರೆ ಕ್ರಿಕೆಟಿಗೆ ವಿಶ್ವ ಮಟ್ಟದಲ್ಲಿ ಬೋನಸ್ ಸಿಕ್ಕಿದಂತಾಗುತ್ತದೆ. ಒಲಿಂಪಿಕ್ಸ್ ಕ್ರೀಡಾಕೂಟ ತಿಂಗಳುಗಟ್ಟಲೇ ನಡೆಯುವುದಿಲ್ಲ. 2 ವಾರಗಳ ಕಾಲ ಮಾತ್ರ ನಡೆಯುತ್ತದೆ. ಅಷ್ಟೇ ಅಲ್ಲದೇ 4 ವರ್ಷಕ್ಕೊಮ್ಮೆ ನಡೆಯುತ್ತದೆ. ಒಮ್ಮೆ ಕ್ರೀಡಾಕೂಟದ ಅವಧಿ ಪ್ರಕಟಗೊಂಡರೆ ಎರಡು ವಾರಗಳ ಕಾಲ ಶೆಡ್ಯೂಲ್ ಮಾಡುವುದಕ್ಕೆ ಕ್ರಿಕೆಟ್ ತಂಡಗಳಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಮುಂದಿನ 18 ತಿಂಗಳು ಬಹಳ ಮುಖ್ಯವಾಗಿದ್ದು ಬಿಸಿಸಿಐ ನಾಡಾ ಜೊತೆ ಕೆಲಸ ಮಾಡುತ್ತಿದೆ. ಇದರಿಂದಾಗಿ ನಾವು ಒಲಿಂಪಿಕ್ಸ್‌ ಕ್ರೀಡೆಯಲ್ಲಿ ಕ್ರಿಕೆಟ್ ಸೇರಿಸುವ ದಾರಿ ಸುಗಮವಾಗಿದೆ. ಒಲಿಂಪಿಕ್ಸ್ ಕ್ರೀಡೆಯಲ್ಲಿ  ಅವಕಾಶ ಸಿಕ್ಕರೆ ಪುರುಷರ ಮತ್ತು ಮಹಿಳೆಯರ ಕ್ರಿಕೆಟ್ ತಂಡ ದೇಶವನ್ನು ಪ್ರತಿನಿಧಿಸಬಹುದು ಎಂದು ಮೈಕ್ ಗ್ಯಾಟಿಂಗ್ ತಿಳಿಸಿದರು.

    ಐಸಿಸಿ ಹಿಂದಿನಿಂದಲೂ ಒಲಿಂಪಿಕ್ಸ್ ಕೂಟದಲ್ಲಿ ಕ್ರಿಕೆಟ್ ಆಟ ಸೇರಿಸಲು ಪ್ರಯತ್ನ ನಡೆಸುತಿತ್ತು. 2024ರಲ್ಲಿ ಕ್ರಿಕೆಟ್ ಸೇರಿಸಲೇಬೇಕೆಂಬ ನಿಟ್ಟಿನಲ್ಲಿ ಭಾರೀ ಪ್ರಯತ್ನ ನಡೆಸಿತ್ತು. ಆದರೆ ಐಸಿಸಿಯ ಆಸೆಗೆ ಬಿಸಿಸಿಐ ಸದಸ್ಯರು ಅಡ್ಡಗಾಲು ಹಾಕಿದ್ದರು. ಬಿಸಿಸಿಐ ಸರ್ಕಾರದ ಸಂಸ್ಥೆ ಅಲ್ಲ.  ಹೀಗಾಗಿ ಭಾಗವಹಿಸುವುದಿಲ್ಲ ಎಂದು ವಾದಿಸುತಿತ್ತು. ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಒಪ್ಪಿದರೆ ಎಲ್ಲ ರಾಷ್ಟ್ರಗಳು ಸಹ ಸುಲಭವಾಗಿ ಯಾವುದೇ ನಿರ್ಧಾರಕ್ಕೆ ಒಪ್ಪಿಗೆ ನೀಡುತ್ತವೆ.

    1900ಕ್ಕೂ ಮೊದಲು ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆಗೊಂಡಿತ್ತು. 2028ರ ಒಲಿಂಪಿಕ್ಸ್ ಕ್ರೀಡಾಕೂಟ ಅಮೆರಿಕದ ಲಾಸ್ ಏಂಜಲೀಸ್‍ನಲ್ಲಿ ನಡೆಯಲಿದೆ. 2020ರ ಒಲಿಂಪಿಕ್ಸ್ ಜಪಾನಿನ ಟೋಕಿಯೋದಲ್ಲಿ ನಡೆದರೆ 2024ರ ಕೂಟ ಫ್ರಾನ್ಸಿನ ಪ್ಯಾರಿಸ್ ನಲ್ಲಿ ನಡೆಯಲಿದೆ.

    ಬಿಸಿಸಿಐ ನಾಡಾ ವ್ಯಾಪ್ತಿಗೆ ಬಂದಿದ್ದು ಹೇಗೆ?
    ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾಗಿರುವ ಪೃಥ್ವಿ ಶಾ ಅವರ ಪ್ರಕರಣದಿಂದಾಗಿ ಬಿಸಿಸಿಐ ಕೊನೆಗೂ ನಾಡಾ ವ್ಯಾಪ್ತಿಗೆ ಬಂದಿದೆ. ಕೇಂದ್ರ ಕ್ರೀಡಾ ಸಚಿವಾಲಯ ನಾಡಾ ವ್ಯಾಪ್ತಿಗೆ ಬರುವಂತೆ ಬಿಸಿಸಿಐಗೆ ಹಲವು ಬಾರಿ ಪತ್ರ ಬರೆದಿತ್ತು. ಈ ಪತ್ರಕ್ಕೆ ಬಿಸಿಸಿಐ ನಾವು ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ಬಯಸುವುದಿಲ್ಲ. ನಮ್ಮದು ಸ್ವಾಯತ್ತ ಸಂಸ್ಥೆ. ರಾಷ್ಟ್ರೀಯ ಕ್ರೀಡಾ ಫೆಡರೇಷನ್ ಅಲ್ಲ ಎಂದು ವಾದಿಸಿಕೊಂಡು ಬಂದಿತ್ತು.

    ಉದ್ದೀಪನ ಪರೀಕ್ಷೆಯನ್ನು ಬಿಸಿಸಿಐ ಖಾಸಗಿ ಸಂಸ್ಥೆಯಿಂದ ಮಾಡಿಸಿಕೊಳ್ಳುತಿತ್ತು. ಯುವ ಆಟಗಾರ ಪೃಥ್ವಿ ಶಾ ಅವರ ಪರೀಕ್ಷೆ ಫೆಬ್ರವರಿಯಲ್ಲಿ ನಡೆದು ಬಳಿಕ ಐಪಿಎಲ್ ಪಂದ್ಯ ಆಡಲು ಅನುಮತಿ ನೀಡಿ ಈಗ 8 ತಿಂಗಳು ನಿಷೇಧ ಹೇರಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.

    ಈ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬಿಸಿಸಿಐ ಆಟಗಾರರಿಗೆ ಔಷಧಿ ತೆಗೆದುಕೊಳ್ಳುವ ವಿಚಾರದಲ್ಲಿ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸರಿಯಾದ ಮಾಹಿತಿಗಳನ್ನು ನೀಡಿದ್ದರೆ ಪೃಥ್ವಿ ಶಾ ಕೆಮ್ಮಿಗೆ ಟೆರ್ಬುಟಾಲಿನ್ ಅಂಶ ಇರುವ ಸಿರಾಪ್ ಸೇವಿಸುತ್ತಿರಲಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಅಷ್ಟೇ ಅಲ್ಲದೇ ಪೃಥ್ವಿ ಶಾ ಅವರು, ತಂದೆಯ ಸಲಹೆಯಂತೆ ಹತ್ತಿರ ಮೆಡಿಕಲ್ ಅಂಗಡಿಗೆ ಹೋಗಿ ಸಿರಾಪ್ ತೆಗೆದುಕೊಂಡಿದ್ದೆ. ಉದ್ದೇಶಪೂರ್ವಕವಾಗಿ ನಾನು ಔಷಧಿಯನ್ನು ಸೇವನೆ ಮಾಡಿಲ್ಲ ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು.

    ಇದಾದ ಬಳಿಕ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಅವರಿಗೆ ಕೇಂದ್ರದ ಕ್ರೀಡಾ ಸಚಿವಾಲಯ ಪತ್ರ ಬರೆದಿತ್ತು. ಬಿಸಿಸಿಐಗೆ ಆಟಗಾರರ ಉದ್ದೀಪನ ಮದ್ದು ಸೇವನೆ ಪರೀಕ್ಷೆ ನಡೆಸಲು ಸರ್ಕಾರದ ಹಾಗೂ ವಿಶ್ವ ಉದ್ದೀಪನ ಮದ್ದು ನಿಗ್ರಹ ದಳ (ವಾಡಾ) ಸಂಸ್ಥೆ ಅನುಮತಿ ಇಲ್ಲದ ಕಾರಣ ನಿಮಗೆ ಪರೀಕ್ಷೆ ನಡೆಸಲು ಅನುಮತಿ ಇಲ್ಲ ಎಂದು ಖಾರವಾಗಿ ತಿಳಿಸಿತ್ತು.

    ಕ್ರೀಡೆಯಲ್ಲಿ ಪರೀಕ್ಷೆ ನಡೆಸಲು ಕಡ್ಡಾಯವಾಗಿ ಸ್ವಯತ್ತ ಸಂಸ್ಥೆಯಾದ ನಾಡಾ ದೊಂದಿಗೆ ಬಿಸಿಸಿಐ ಒಪ್ಪಂದ ಮಾಡಿಕೊಂಡಿಲ್ಲ. ಹಲವು ವರ್ಷಗಳಿಂದ ಸರ್ಕಾರ ಒತ್ತಡ ಹಾಕುತ್ತಿದ್ದರು ಬಿಸಿಸಿಐ ಇದಕ್ಕೆ ಮುಂದಾಗಿರಲಿಲ್ಲ. ಇದೇ ಸಂದರ್ಭದಲ್ಲಿ ಉದ್ದೀಪನ ಪರೀಕ್ಷೆಯಲ್ಲಿ ಬಿಸಿಸಿಐ ಅತಿಯಾದ ಪಾಲ್ಗೊಳ್ಳುವಿಕೆನ್ನು ಕೇಂದ್ರ ಕ್ರೀಡಾ ಸಚಿವಾಲಯ ಪ್ರಶ್ನಿಸಿತ್ತು. ನಾಡಾ ಅಂಗೀರಿಸಿದ ನಿಯಮಗಳ ಪ್ರಕಾರ ಬೇರೆ ಸಂಸ್ಥೆಗಳಿಂದ ಉದ್ದೀಪನ ಮದ್ದು ಪರೀಕ್ಷೆ ನಡೆಸುವಂತಿಲ್ಲ. ಆದರೆ ಬಿಸಿಸಿಐ ಕೆಲ ನಿಯಮಗಳನ್ನು ತೋರಿಸಿ ಸ್ವತಃ ವಿಚಾರಣೆ ನೇಮಿಸುತ್ತಿದೆ. ಇದು ನೈಸರ್ಗಿಕ ನ್ಯಾಯ ತತ್ವಗಳಿಗೆ ಅನುಗುಣವಾಗಿಲ್ಲ ಎಂದು ಕ್ರೀಡಾ ಸಚಿವಾಲಯ ತನ್ನ ಪತ್ರದಲ್ಲಿ ಖಾರವಾಗಿ ತಿಳಿಸಿತ್ತು. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಬಿಗಿ ನಿಲುವು ತೋರಿಸುತ್ತಿದ್ದಂತೆ ಆಗಸ್ಟ್ 9 ರಂದು ಬಿಸಿಸಿಐ ನಾಡಾ ವ್ಯಾಪ್ತಿಗೆ ಬರಲು ಒಪ್ಪಿಗೆ ಸೂಚಿಸಿತ್ತು.

    ಬಿಸಿಸಿಐ ಇಲ್ಲಿಯವರಗೆ ಖಾಸಗಿ ಸಂಸ್ಥೆಯ ಮೂಲಕ ಉದ್ದೀಪನ ಮದ್ದು ಪರೀಕ್ಷೆಗಳನ್ನು ನಡೆಸುತಿತ್ತು. ಆ ಬಳಿಕ ಆಟಗಾರರ ವರದಿಯನ್ನು ಐಸಿಸಿ ಹಾಗೂ ವಿಶ್ವ ಉದ್ದೀಪನ ಮದ್ದು ನಿಗ್ರಹ ದಳ (ವಾಡಾ) ಸಂಸ್ಥೆಗೆ ಕಳುಹಿಸುತ್ತದೆ. ಸದ್ಯ ಭಾರತದ ಸಂಸ್ಥೆಯಾಗಿರುವ ನಾಡಾದ ಅಡಿಯಲ್ಲೇ ಉದ್ದೀಪನ ಪರೀಕ್ಷೆ ನಡೆಸಲು 6 ತಿಂಗಳ ಅವಧಿಗೆ ಸಹಿ ಹಾಕಿದೆ. ಅಕ್ಟೋಬರ್ ನಿಂದ ಕ್ರಿಕೆಟ್ ಆಟಗಾರರ ಉದ್ದೀಪನ ಪರೀಕ್ಷೆಗಳನ್ನು ನಾಡಾ ಸಂಸ್ಥೆ ನಿರ್ವಹಿಸಲಿದೆ ಎಂಬ ಮಾಹಿತಿ ಇದೆ.

  • ಉದ್ದೀಪನ ಪರೀಕ್ಷೆ ನಡೆಸಲು ಅನುಮತಿ ಇಲ್ಲ – ಕೇಂದ್ರದಿಂದ ಬಿಸಿಸಿಐಗೆ ಡೋಸ್

    ಉದ್ದೀಪನ ಪರೀಕ್ಷೆ ನಡೆಸಲು ಅನುಮತಿ ಇಲ್ಲ – ಕೇಂದ್ರದಿಂದ ಬಿಸಿಸಿಐಗೆ ಡೋಸ್

    ನವದೆಹಲಿ: ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾಗಿರುವ ಪೃಥ್ವಿ ಶಾ ಅವರ ಪ್ರಕರಣದ ಬೆನ್ನಲ್ಲೇ ಕೇಂದ್ರ ಸರ್ಕಾರ ಬಿಸಿಸಿಐ ಬಿಸಿ ಮುಟ್ಟಿಸಿದೆ.

    ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಅವರಿಗೆ ಕೇಂದ್ರದ ಕ್ರೀಡಾ ಸಚಿವಾಲಯ ಪತ್ರ ಬರೆದಿದೆ. ಈ ಪತ್ರದಲ್ಲಿ ಬಿಸಿಸಿಐಗೆ ಆಟಗಾರರ ಉದ್ದೀಪನ ಮದ್ದು ಸೇವನೆ ಪರೀಕ್ಷೆ ನಡೆಸಲು ಸರ್ಕಾರದ ಹಾಗೂ ವಿಶ್ವ ಉದ್ದೀಪನ ಮದ್ದು ನಿಗ್ರಹ ದಳ (ವಾಡಾ) ಸಂಸ್ಥೆ ಅನುಮತಿ ಇಲ್ಲದ ಕಾರಣ ಬಿಸಿಸಿಐ ಪರೀಕ್ಷೆ ನಡೆಸುವಂತಿಲ್ಲ ಎಂದು ಹೇಳಿದೆ.

    ಕ್ರೀಡೆಯಲ್ಲಿ ಪರೀಕ್ಷೆ ನಡೆಸಲು ಕಡ್ಡಾಯವಾಗಿ ಸ್ವಯತ್ತ ಸಂಸ್ಥೆಯಾದ ನಾಡಾ ದೊಂದಿಗೆ ಬಿಸಿಸಿಐ ಒಪ್ಪಂದ ಮಾಡಿಕೊಂಡಿಲ್ಲ. ಹಲವು ವರ್ಷಗಳಿಂದ ಬಿಸಿಸಿಐ ಮೇಲೆ ಸರ್ಕಾರ ಒತ್ತಡ ಹಾಕುತ್ತಿದ್ದರು ಬಿಸಿಸಿಐ ಇದಕ್ಕೆ ಮುಂದಾಗಿರಲಿಲ್ಲ. ದೇಶದ ಎಲ್ಲಾ ಕ್ರೀಡಾಪಟುಗಳ ಉದ್ದೀಪನ ಮದ್ದು ಪರೀಕ್ಷೆಯನ್ನು ನಾಡಾವೇ ನಡೆಸುತ್ತದೆ. ಆದರೆ ಈ ಸಾಲಿಗೆ ಬದ್ಧವಾಗಲು ಬಿಸಿಸಿಐ ಹಿಂದೇಟು ಹಾಕುತ್ತಿದೆ.

    ಇದೇ ಸಂದರ್ಭದಲ್ಲಿ ಉದ್ದೀಪನ ಪರೀಕ್ಷೆಯಲ್ಲಿ ಬಿಸಿಸಿಐ ಅತಿಯಾದ ಪಾಲ್ಗೊಳ್ಳುವಿಕೆನ್ನು ಕೇಂದ್ರ ಕ್ರೀಡಾ ಸಚಿವಾಲಯ ಪ್ರಶ್ನಿಸಿದೆ. ನಾಡಾ ಅಂಗೀರಿಸಿದ ನಾಡಾ ನಿಯಮಗಳ ಪ್ರಕಾರ ಬೇರೆ ಸಂಸ್ಥೆಗಳಿಂದ ಉದ್ದೀಪನ ಮದ್ದು ಪರೀಕ್ಷೆ ನಡೆಸುವಂತಿಲ್ಲ. ಆದರೆ ಬಿಸಿಸಿಐ ಕೆಲ ನಿಯಮಗಳನ್ನು ತೋರಿಸಿ ಸ್ವತಃ ವಿಚಾರಣೆ ನೇಮಿಸುತ್ತಿದೆ. ಇದು ನೈಸರ್ಗಿಕ ನ್ಯಾಯ ತತ್ವಗಳಿಗೆ ಅನುಗುಣವಾಗಿಲ್ಲ ಎಂದು ಕೇಂದ್ರ ತನ್ನ ಪತ್ರದಲ್ಲಿ ಖಾರವಾಗಿ ತಿಳಿಸಿದೆ.

    ಇತ್ತ ಕೆಲ ಸಮಯದ ಹಿಂದೆಯಷ್ಟೇ ಬಿಸಿಸಿಐ ಉದ್ದೀಪನ ಮದ್ದು ಉಲ್ಲಂಘನೆ ಪ್ರಕರಣದಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ದಳ (ನಾಡಾ) ಸಂಸ್ಥೆಯ ಕೆಳಗೆ ಕಾರ್ಯನಿರ್ವಹಿಸಲು ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದಿತ್ತು. ಇದರ ನಡುವೆಯೂ ಟೀಂ ಇಂಡಿಯಾ ಯುವ ಆಟಗಾರ ಪೃಥ್ವಿ ಶಾ ಮೇಲಿನ ನಿಷೇಧ ವಿಧಿಸಿರುವ ಪ್ರಕರಣದ ಮೇಲೆ ಹಲವು ಪ್ರಶ್ನೆಗಳನ್ನು ಮೂಡಿಸಿದೆ.

    ಬಿಸಿಸಿಐ ಸದ್ಯ ಖಾಸಗಿ ಸಂಸ್ಥೆಯ ಮೂಲಕ ಉದ್ದೀಪನ ಮದ್ದು ಪರೀಕ್ಷೆಗಳನ್ನು ನಡೆಸುತ್ತಿದೆ. ಆ ಬಳಿಕ ಆಟಗಾರರ ವರದಿಯನ್ನು ಐಸಿಸಿ ಹಾಗೂ ವಿಶ್ವ ಉದ್ದೀಪನ ಮದ್ದು ನಿಗ್ರಹ ದಳ (ವಾಡಾ) ಸಂಸ್ಥೆಗೆ ಕಳುಹಿಸುತ್ತದೆ. ಸದ್ಯ ಭಾರತದ ಸಂಸ್ಥೆಯಾಗಿರುವ ನಾಡಾ ಅಡಿಯೇ ಉದ್ದೀಪನ ಪರೀಕ್ಷೆ ನಡೆಸಲು 6 ತಿಂಗಳ ಅವಧಿಗೆ ಸಹಿ ಹಾಕಿದೆ. ಅಕ್ಟೋಬರ್ ನಿಂದ ಕ್ರಿಕೆಟ್ ಆಟಗಾರರ ಉದ್ದೀಪನ ಪರೀಕ್ಷೆಗಳನ್ನು ನಾಡಾ ಸಂಸ್ಥೆ ನಿರ್ವಹಿಸಲಿದೆ ಎಂಬ ಮಾಹಿತಿ ಇದೆ. ಪೃಥ್ವಿ ಶಾ ರೊಂದಿಗೆ ಮತ್ತಿಬ್ಬರು ಆಟಗಾರರು ಕೂಡ ಮಂಗಳವಾರ ಆಟಗಾರರು ನಿಷೇಧಕ್ಕೆ ಒಳಗಾಗಿದ್ದಾರೆ.

    ನಿಷೇಧ ಯಾಕೆ?
    ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ ಗಾಯಗೊಂಡಿದ್ದ ಪೃಥ್ವಿ ಶಾ ಹಿಂದಿರುಗಿದ ಬಳಿಕ ಬಿಸಿಸಿಐ ಕ್ಯಾಂಪ್ ನಲ್ಲಿಯೇ ಚೇತರಿಸಿಕೊಳ್ಳುತ್ತಿದ್ದರು. ಆ ಬಳಿಕ ಫೆಬ್ರವರಿ ಅಂತ್ಯದಲ್ಲಿ ಸೈಯ್ಯದ್ ಮುಷ್ತಾಕ್ ಟಿ20 ಟ್ರೋಫಿಯಲ್ಲಿ ಭಾಗವಹಿಸಲು ಪೃಥ್ವಿ ಶಾ ಇಂದೋರಿಗೆ ತೆರಳಿದಾಗ ಕೆಮ್ಮು ಕಾಣಿಸಿಕೊಂಡಿತ್ತು. ಈ ವೇಳೆ ತಂದೆಯ ಸಲಹೆಯಂತೆ ತಾನು ಉಳಿದುಕೊಂಡಿದ್ದ ಹೋಟೆಲ್ ಸಮೀಪದ ಮೆಡಿಕಲ್ ಸ್ಟೋರಿಗೆ ತೆರಳಿ ಕೆಮ್ಮಿಗೆ ಸಿರಾಪ್ ತೆಗೆದುಕೊಂಡಿದ್ದರು. ಫೆ.21ರಂದು ಸಿಕ್ಕಿಂ ವಿರುದ್ಧ ಪೃಥ್ವಿ ಮೊದಲ ಪಂದ್ಯವನ್ನಾಡಿದ್ದರು. ಮರು ದಿನ ನಡೆದ ಡೋಪಿಂಗ್ ಪರೀಕ್ಷೆಯಲ್ಲಿ ಕಳೆದ 7 ದಿನಗಳಲ್ಲಿ ನಾನು ಔಷಧಿ ಸೇವಿಸಿದ್ದ ವಿಚಾರವನ್ನು ತಿಳಿಸಿದ್ದರು.

    ಪರೀಕ್ಷೆಯಲ್ಲಿ ಟೆರ್ಬುಟಾಲಿನ್ ಸೇವಿಸಿದ ಅಂಶ ಪತ್ತೆಯಾಗಿತ್ತು. ಟೆರ್ಬುಟಾಲಿನ್ ಅನ್ನು ವಿಶ್ವ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ (ವಾಡಾ) ನಿಷೇಧಿತ ಮದ್ದುಗಳ ಪಟ್ಟಿಗೆ ಸೇರಿಸಿದೆ. ಈ ವಿಚಾರ ಪೃಥ್ವಿ ಶಾ ಅವರಿಗೆ ತಿಳಿಯದ ಕಾರಣ ಎಲ್ಲ ಔಷಧಿಯಂತೆ ಸಿರಾಪ್ ತೆಗೆದುಕೊಂಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಪೃಥ್ವಿ ಶಾ ಈ ಬಗ್ಗೆ ಸ್ಪಷ್ಟನೆ ನೀಡಿ ತನ್ನ ಅರಿವಿಲ್ಲದೆ ಔಷಧಿಯನ್ನು ಸೇವನೆ ಮಾಡಿದ ಸಂದರ್ಭದಲ್ಲಿ ಘಟನೆ ನಡೆದಿದೆ ಎಂದು ಒಪ್ಪಿಕೊಂಡಿದ್ದರು.

    ಉದೇಶಪೂರ್ವಕವಾಗಿ ಸೇವಿಸದ ಕಾರಣ ಕೇವಲ 8 ತಿಂಗಳ ನಿಷೇಧ ಹೇರಲಾಗಿದೆ. ಒಂದೊಮ್ಮೆ ಉದ್ದೇಶಪೂರ್ವಕವಾಗಿ ಸೇವಿಸಿದ್ದರೆ ಪೃಥ್ವಿ ಶಾ 2ರಿಂದ 4 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇತ್ತು.