Tag: Nabipur

  • ಕೃಷಿ ಕಾಯ್ದೆ ವಿರೋಧಿಸಿ, ಕಾಂಗ್ರೆಸ್ ಸೇರಿದ 100 ಬಿಜೆಪಿ ಕಾರ್ಯಕರ್ತರು

    ಕೃಷಿ ಕಾಯ್ದೆ ವಿರೋಧಿಸಿ, ಕಾಂಗ್ರೆಸ್ ಸೇರಿದ 100 ಬಿಜೆಪಿ ಕಾರ್ಯಕರ್ತರು

    ತಿರುವನಂತಪುರ: ನೂತನ ಕೃಷಿಕಾಯ್ದೆ ವಿರುದ್ಧ ರಾಷ್ಟ್ರವ್ಯಾಪ್ತಿ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಇದಕ್ಕೆ ಬೆಂಬಲ ನೀಡಿ ನಭಿಪುರ ಜಿಲ್ಲೆ 9 ಹಳ್ಳಿಯ 100 ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ ಎಂದು ಭರೂಚ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅರುನ್ಸಿನ್ ರಾಣಾ ಶನಿವಾರ ಹೇಳಿದ್ದಾರೆ.

    ನಭೀಪುರ ಜಿಲ್ಲಾ ಪಂಚಾಯತ್ ಸದಸ್ಯ ಶಕೀಲ್ ಅಕುಜಿ ಅವರ ನೇತೃತ್ವದಲ್ಲಿ ಪರಿಮಲ್ಸಿಂಹ ರಾಣಾ ಅವರ ಸಮ್ಮುಖ ಭರೂಚ್‍ನ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಅಧಿಕೃತವಾಗಿ ಶನಿವಾರ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಹೊಸದಾಗಿ ಪಕ್ಷವನ್ನು ಸೇರಿದವರಲ್ಲಿ ಶೇಕಡ 70ಕ್ಕಿಂತ ಜನರು ಸ್ಥಳೀಯ ಪಾಟೀದಾರ್ ಪಟೇಲರು ಉಪ್ರಾಲಿ, ಸ್ಯಾಮ್ಲೋಡ್, ದಭಾಲಿ, ಭರ್ತಾನ, ಕವಿತಾ, ನಂದ್, ಪಿಪಾಲಿಯಾ, ಕರೇಲಾ ಮತ್ತು ಉಮ್ರಾ ಗ್ರಾಮಗಳಿಗೆ ಸೇರಿದ್ದು, ಉಳಿದವರು ಬುಡಕಟ್ಟು ಜನಾಂಗದವರಾಗಿದ್ದಾರೆ ಎಂದು ವರದಿಯಾಗಿದೆ.

    ಹೊಸಬರಿಗೆ ಬಿಜೆಪಿ ಪಕ್ಷದಲ್ಲಿ ಪ್ರಾಮುಖ್ಯತೆ ನೀಡಲಾಗುತ್ತಿಲ್ಲ ಮತ್ತು ಅವರ ಪ್ರದೇಶಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಹೀಗಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತಾರೆ ಎಂದು ಪರಿಮಾಲ್ಸಿಂಗ್ ಹೇಳಿದರು.

    ಉಪ್ರಾಲಿ ಗ್ರಾಮದ ಮಾಜಿ ಸರ್ಪಂಚ್ ಮಹೇಶ್ ಪಾಟೀಲ್(54) ಎಂಬವರು, 35 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಆದ್ರೆ ಬಿಜೆಪಿ ಸರ್ಕಾರ ಜಾರಿಗೆ ತಂದ ಮೂರು ಹೊಸ ಕೃಷಿ ಕಾನೂನುಗಳನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದರು.

    ಈ ವಿಚಾರವಾಗಿ ಮಾತನಾಡಿದ ಬಿಜೆಪಿಯ ಭರೂಚ್ ಜಿಲ್ಲಾ ಘಟಕದ ಮುಖ್ಯಸ್ಥ ಮಾರುತಿ ಸಿನ್ಹ್ ಆಟೋದರಿಯಾ, ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 100 ಜನ ಬಿಜೆಪಿ ಕಾರ್ಯಕರ್ತರು ಸೇರಿಕೊಂಡಿದ್ದಾರೆ ಎಂದು ನನಗೆ ತಿಳಿದಿಲ್ಲ. ಆದ್ರೆ ಬಿಜೆಪಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವರು ಕಾಂಗ್ರೆಸ್ ಪಕ್ಷ ಸೇರಿಕೊಂಡಿಲ್ಲ ಎಂಬುವುದನ್ನು ಮಾತ್ರ ಹೇಳಬಲ್ಲೆ. ಈ ಕುರಿತಂತೆ ನಾನು ಪಕ್ಷದ ಸಾಂಸ್ಥಿಕ ಕಾರ್ಯದರ್ಶಿಯೊಂದಿಗೆ ಮಾತನಾಡಿ ಪರಿಶೀಲಿಸುತ್ತೇನೆ ಎಂದು ಹೇಳಿದರು.