Tag: naagin

  • 8 ವರ್ಷಗಳ ಬಳಿಕ ಟಾಲಿವುಡ್‌ಗೆ ಕಮ್‌ಬ್ಯಾಕ್ ಆದ ‘ವೀರಕನ್ನಡಿಗ’ ನಟಿ

    8 ವರ್ಷಗಳ ಬಳಿಕ ಟಾಲಿವುಡ್‌ಗೆ ಕಮ್‌ಬ್ಯಾಕ್ ಆದ ‘ವೀರಕನ್ನಡಿಗ’ ನಟಿ

    ಬಾಲಿವುಡ್ ನಟಿ ಅನಿತಾ ಹಸ್ಸನಂದನಿ (Anita Hassanandani) ಇದೀಗ ಬರೋಬ್ಬರಿ 8 ವರ್ಷಗಳ ನಂತರ ತೆಲುಗಿಗೆ ಕಮ್‌ಬ್ಯಾಕ್ ಆಗುತ್ತಿದ್ದಾರೆ. ತೆಲುಗಿನ (Tollywood) ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುವ ಮೂಲಕ ಮತ್ತೆ ದಕ್ಷಿಣ ಭಾರತಕ್ಕೆ ‘ವೀರಕನ್ನಡಿಗ’ ನಟಿ ಅನಿತಾ ಲಗ್ಗೆ ಇಡುತ್ತಿದ್ದಾರೆ.

    ‘ಓ ಭಾಮಾ ಅಯ್ಯೋ ರಾಮ’ (Oh Bhama Ayyo Rama Film) ಚಿತ್ರದ ಮೂಲಕ ಅನಿತಾ ಟಾಲಿವುಡ್ ಅಂಗಳಕ್ಕೆ ರೀಎಂಟ್ರಿ ಕೊಡುತ್ತಿದ್ದಾರೆ. ತೆಲುಗು ನಟ ಸುಹಾಸ್ (Actor Suhas) ಮತ್ತು ಮಾಳವಿಕಾ ಮನೋಜ್ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಕಾರ್ಯಕ್ರಮವು ಹೈದರಾಬಾದ್ ಸರಳವಾಗಿ ಜರುಗಿದೆ.

    ಇನ್ನೂ ನಟಿ ಅನಿತಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಪಕ್ಕಾ ಲವ್ ಸ್ಟೋರಿಯಾಗಿದ್ದು, ಅನಿತಾ ಪಾತ್ರದಿಂದ ಚಿತ್ರದಲ್ಲಿ ಟ್ವಿಸ್ಟ್ ಸಿಗಲಿದೆಯಂತೆ. ಚಿತ್ರದ ಕಥೆ ಮತ್ತು ಪಾತ್ರಕ್ಕೆ ಇರುವ ಪ್ರಾಮುಖ್ಯತೆ ನೋಡಿ ಇಷ್ಟವಾಗಿ ಸಿನಿಮಾಗೆ ಓಕೆ ಹೇಳಿದ್ರಂತೆ ಅನಿತಾ. ಇನ್ನೂ ಈ ಚಿತ್ರವನ್ನು ರಾಮ್ ಗೋಧಾಲ ನಿರ್ದೇಶನ ಮಾಡುತ್ತಿದ್ದಾರೆ. ಹರೀಶ್ ನಲ್ಲ ಮತ್ತು ಪ್ರದೀಪ್ ತಲ್ಲಪು ರೆಡ್ಡಿ ಚಿತ್ರವನ್ನು ನಿರ್ಮಾಣ ಹೊಣೆ ಹೊತ್ತಿದ್ದಾರೆ.

    ಕನ್ನಡದ ‘ವೀರಕನ್ನಡಿಗ’ (Veerakandiga) ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್‌ಗೆ (Puneethrajkumar) ಅನಿತಾ ನಾಯಕಿಯಾಗಿದ್ದರು. ಗಂಡುಗಲಿ ಕುಮಾರರಾಮ, ಹುಡುಗ ಹುಡುಗಿ ಸಿನಿಮಾದಲ್ಲಿ ಅನಿತಾ ನಟಿಸಿದ್ದಾರೆ.

  • ಬಹುಕಾಲದ ಗೆಳೆಯನ ಜೊತೆ ನಟಿ ಸುರಭಿ ಚಂದ್ನಾ ಮದುವೆ

    ಬಹುಕಾಲದ ಗೆಳೆಯನ ಜೊತೆ ನಟಿ ಸುರಭಿ ಚಂದ್ನಾ ಮದುವೆ

    ಬಾಲಿವುಡ್‌ನಲ್ಲಿ ಮೋಡಿ ಮಾಡಿದ ಮುದ್ದು ಮುಖದ ಸುಂದರಿ ಸುರಭಿ ಚಂದ್ನಾ (Surabhi Chandna) ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಕರಣ್ ಶರ್ಮಾ (Karan Sharma) ಜೊತೆ ಜೈಪುರನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್ ಸಿನಿಮಾಗೆ ಸಂಜಯ್ ದತ್ ಎಂಟ್ರಿ

    ನಾಗಿನ್ 5, ಬಿಗ್ ಬಾಸ್ ಸೀಸನ್ 15 ಸೇರಿದಂತೆ ಹಲವು ಟಿವಿ ಶೋಗಳಲ್ಲಿ ಜನಪ್ರಿಯತೆ ಗಳಿಸಿದ್ದ ನಟಿ ಸುರಭಿ ಅವರು ಉದ್ಯಮಿ ಕರಣ್ ಶರ್ಮಾ ಜೊತೆ ಕಳೆದ 13 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. ಈಗ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಮಾರ್ಚ್ 2ರಂದು ಮದುವೆ ಆಗಿದ್ದಾರೆ. ಮದುವೆಯ (Wedding) ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.‌

    ತಮ್ಮ ಮದುವೆಯ ವಿಶೇಷ ದಿನಕ್ಕಾಗಿ ಸುರಭಿ ವಿಭಿನ್ನವೆನಿಸಿದ ಭಾರಿ ಅಂಬ್ರಾಯಿಡರಿ ಹಾಗೂ ಸ್ಟೋನ್ ವರ್ಕ್ ಇರುವ ಮಿಶ್ರ ಬಣ್ಣದ ಲೆಹೆಂಗಾ ಧರಿಸಿದ್ದಾರೆ. ಅದಕ್ಕೆ ಮ್ಯಾಚ್ ಆಗುವಂತೆ ಬೂದಿ ಕಲರ್ ಬಣ್ಣದ ಗ್ರ್ಯಾಂಡ್ ಶೆರ್ವಾನಿಯಲ್ಲಿ ಕರಣ್ ಶರ್ಮಾ ಮಿಂಚಿದ್ದಾರೆ. ನವಜೋಡಿಯ ಸುಂದರ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ.

    ನಟಿ ಸುರಭಿ ಮದುವೆಗೆ ನಟಿ ಶ್ರೇನು, ಮಾನಸಿ ಶ್ರೀವಾಸ್ತವ್, ಶಿವಾಂಗಿ ಜೋಶಿ, ಸೇರಿದಂತೆ ಅನೇಕರು ಭಾಗಿಯಾಗಿ ಹಾರೈಸಿದ್ದಾರೆ. ಈ ಮದುವೆ ಸುದ್ದಿ ಕೇಳಿ ನಾಗಿನ್ ನಟಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

  • ಬಳಕುವ ಬಳ್ಳಿಯಂತೆ ಹಾಟ್‌ ಆಗಿ ಕಾಣಿಸಿಕೊಂಡ ‘ಕೆಜಿಎಫ್’ ನಟಿ

    ಬಳಕುವ ಬಳ್ಳಿಯಂತೆ ಹಾಟ್‌ ಆಗಿ ಕಾಣಿಸಿಕೊಂಡ ‘ಕೆಜಿಎಫ್’ ನಟಿ

    ಲಿ ಗಲಿ ಎಂದು ಯಶ್ (Yash) ಜೊತೆ ಸೊಂಟ ಬಳುಕಿಸಿದ್ದ ನಟಿ ಮೌನಿ ರಾಯ್ (Mouni Roy) ಅವರು ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಇದೀಗ ಮತ್ತೆ ಹಾಟ್ & ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಸುಂದರ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.

    ಗಿಳಿ ಹಸಿರು ಬಣ್ಣದ ಗೌನ್ ಧರಿಸಿ ಮಸ್ತ್ ಆಗಿ ಕ್ಯಾಮೆರಾ ಕಣ್ಣಿಗೆ ಮೌನಿ ಪೋಸ್ ಕೊಟ್ಟಿದ್ದಾರೆ. ಆರೆಂಜ್ ಬ್ಯಾಕ್ ಗ್ರೌಂಡ್‌ನಲ್ಲಿ ನಟಿ ಹೈಲೆಟ್ ಆಗಿದ್ದಾರೆ. ಮೌನಿ ಫೋಟೋಶೂಟ್ ನೋಡಿ, ನೆಟ್ಟಿಗರು ಅಯ್ಯೋ ಡ್ರೆಸ್ ಬೀಳುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ಆಸ್ಪತ್ರೆಗೆ ದಾಖಲಾದ ನಟಿ ಸಮಂತಾ

    ‘ನಾಗಿನ್’ (Naagin) ಸೀರಿಯಲ್ ಸೇರಿದಂತೆ ಹಿಂದಿ ಕಿರುತೆರೆಯಲ್ಲಿ ಸಾಕಷ್ಟು ಸೀರಿಯಲ್ ಮೂಲಕ ನಟಿ ಮನೆ ಮಾತಾದರು. ಅಕ್ಷಯ್ ಕುಮಾರ್ ನಟನೆಯ ಗೋಲ್ಡ್ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದರು. ರಣ್‌ಬೀರ್, ಆಲಿಯಾ ಭಟ್ (Alia Bhatt) ನಟನೆಯ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ವಿಲನ್ ಆಗಿ ಮೌನಿ ನಟಿಸಿದ್ದರು.

    ಬೆಂಗಳೂರು ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ಮೌನಿ ರಾಯ್, 2022ರಲ್ಲಿ ಮದುವೆಯಾದರು. 3 ವರ್ಷಗಳ ಡೇಟಿಂಗ್ ನಂತರ ಗುರುಹಿರಿಯರ ಸಮ್ಮತಿಯ ಮೇರಿಗೆ ಹೊಸ ಬಾಳಿಗೆ ಕಾಲಿಟ್ಟರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಸ್‌ಪೋರ್ಟ್ ಇಲ್ಲದೇ ವಿಮಾನ ನಿಲ್ದಾಣಕ್ಕೆ ಬಂದ ‘ಕೆಜಿಎಫ್’ ನಟಿಗೆ ಗೇಟ್ ಪಾಸ್

    ಪಾಸ್‌ಪೋರ್ಟ್ ಇಲ್ಲದೇ ವಿಮಾನ ನಿಲ್ದಾಣಕ್ಕೆ ಬಂದ ‘ಕೆಜಿಎಫ್’ ನಟಿಗೆ ಗೇಟ್ ಪಾಸ್

    ಕೆಜಿಎಫ್ (KGF) ಬ್ಯೂಟಿ ಮೌನಿ ರಾಯ್ (Mouni Roy) ಅವರು ಬಾಲಿವುಡ್ ರಂಗದಲ್ಲಿ ನಾಯಕಿ, ಐಟಂ ಡ್ಯಾನ್ಸ್ ಅಂತಾ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ವಿಚಾರದ ಬದಲು ವೈಯಕ್ತಿಕ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಪಾಸ್‌ಪೋರ್ಟ್ ಇಲ್ಲದೇ ವಿಮಾನ ನಿಲ್ದಾಣ ಪ್ರವೇಶಿಸಿದ ಮೌನಿಗೆ ಅಧಿಕಾರಿಗಳು ಮನೆಗೆ ಕಳುಹಿಸಿದ್ದಾರೆ. ಇದೀಗ ಅವರ ಸಾಮಾಜಿಕ ಜಾಲತಾಣ ತುಂಬೆಲ್ಲಾ ಸದ್ದು ಮಾಡುತ್ತಿದೆ.

    ಯಶ್ (Yash) ಜೊತೆ ಗಲಿ ಗಲಿ ಮೇ ಸಾಂಗ್‌ನಲ್ಲಿ ಸೊಂಟ ಬಳುಕಿಸಿದ್ದ ನಾಗಿನ್ (Naagin) ಬ್ಯೂಟಿ ಮೌನಿ ರಾಯ್ ಅವರು ಅಕ್ಷಯ್ ಕುಮಾರ್ (Akshay Kumar) ನಟನೆಯ ಗೋಲ್ಡ್ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೆಂಗಳೂರು (Bangalore) ಮೂಲದ ಉದ್ಯಮಿ ಸೂರಜ್ ಮದುವೆಯಾಗಿ ಖುಷಿಯಿಂದ ಸಂಸಾರ ಸಾಗಿಸುತ್ತಿದ್ದಾರೆ. ಆಗಾಗ ವೇಕೆಷನ್ ಅಂತಾ ದೂರದ ದೇಶಕ್ಕೆ ಹೋಗಿ ಬರುತ್ತಾರೆ.


    ಜುಲೈ 12ರಂದು (ಇಂದು) ಮೌನಿ ರಾಯ್ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ಅವರ ಫೋಟೋ ಮತ್ತು ವೀಡಿಯೋಗಾಗಿ ಪಾಪರಾಜಿಗಳು ಮುತ್ತಿಗೆ ಹಾಕುತ್ತಾರೆ. ಇತ್ತೀಚೆಗೆ ಅದೇ ರೀತಿ ಆಯಿತು. ಪಾಪರಾಜಿಗಳ ಕಡೆಗೆ ಕೈ ಬೀಸಿ, ನಂತರ ಅವರು ವಿಮಾನ ನಿಲ್ದಾಣ ಪ್ರವೇಶಿಸಲು ಮುಂದಾದರು. ಆಗ ಅಲ್ಲಿದ್ದ ಅಧಿಕಾರಿಯು ಪಾಸ್‌ಪೋರ್ಟ್ ತೋರಿಸುವಂತೆ ಸೂಚಿಸಿದ್ದಾರೆ. ಬ್ಯಾಗ್ ಪೂರ್ತಿ ಹುಡುಕಾಡಿದರೂ ಮೌನಿ ರಾಯ್‌ಗೆ ಪಾಸ್ ಪೋರ್ಟ್ ಸಿಕ್ಕಿಲ್ಲ. ಹಾಗಾಗಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರ್ಬಂಧಿಸಲಾಯಿತು. ಬೇರೆ ಆಯ್ಕೆ ಇಲ್ಲದೇ ಮೌನಿ ರಾಯ್ ವಾಪಸ್ ಮನೆ ಕಡೆ ಹೊರಟರು. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

    ಈ ವಿಡಿಯೋ ವೈರಲ್ ಆದ ಬಳಿಕ ಮೌನಿ ರಾಯ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಶೂಟಿಂಗ್, ಟ್ರಿಪ್ ಅಂತಾ ಬ್ಯುಸಿಯಿರುವ ಈ ನಟಿ ಪಾಸ್‌ಪೋರ್ಟ್ ಇಟ್ಟುಕೊಳ್ಳುವುದನ್ನೇ ಮೌನಿ ರಾಯ್ ಮರೆತಿದ್ದಾರೆ ಎಂದು ಅನೇಕರು ಕಾಲೆಳೆದಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • KGF ನಟಿಯ ಬಿಕಿನಿ ಫೋಟೋ ನೋಡಿದ್ದಕ್ಕೆ ಹೆಂಡ್ತಿ ರಿಯಾಕ್ಷನ್ ಬಗ್ಗೆ ಬಾಯ್ಬಿಟ್ಟ ಅಶ್ನೀರ್ ಗ್ರೋವರ್

    KGF ನಟಿಯ ಬಿಕಿನಿ ಫೋಟೋ ನೋಡಿದ್ದಕ್ಕೆ ಹೆಂಡ್ತಿ ರಿಯಾಕ್ಷನ್ ಬಗ್ಗೆ ಬಾಯ್ಬಿಟ್ಟ ಅಶ್ನೀರ್ ಗ್ರೋವರ್

    ಶಾರ್ಕ್ ಟ್ಯಾಂಕ್ ಇಂಡಿಯಾ ಖ್ಯಾತಿಯ ಉದ್ಯಮಿ ಅಶ್ನೀರ್ ಗ್ರೋವರ್ (Ashneer Grover) ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಖಾಸಗಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ‘ಕೆಜಿಎಫ್’ (KGF) ಬ್ಯೂಟಿ ಮೌನಿ ರಾಯ್ (Mouni Roy) ಅವರನ್ನ ಸೋಷಿಯಲ್ ಮೀಡಿಯಾದಲ್ಲಿ ಅನ್ ಫಾಲೋವ್ ಮಾಡಿದ್ಯಾಕೆ ಎಂದು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

     

    View this post on Instagram

     

    A post shared by Ashneer Grover (@ashneer.grover)

    ಉದ್ಯಮಿ ಅಶ್ನೀರ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಉದ್ಯಮದ ಜೊತೆ ಕುಟುಂಬಕ್ಕೂ ಹೆಚ್ಚು ಆದ್ಯತೆ ನೀಡುತ್ತಾರೆ. ಇತ್ತೀಚೆಗೆ ಅವರು ಪತ್ನಿ ಮಾಧುರಿ ಜೊತೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಮೌನಿ ರಾಯ್ ಬಿಕಿನಿ ಫೋಟೋಗೆ ಲೈಕ್ ಮಾಡಿದ್ದಕ್ಕೆ ಪತ್ನಿಯ ಖಡಕ್ ಕ್ಲಾಸ್ ಬಗ್ಗೆ ಬಾಯ್ಬಿಟ್ಟಿದ್ದಾರೆ.

    ದಾಂಪತ್ಯ ಜೀವನದ ಬಗ್ಗೆ ಅಶ್ನೀರ್‌ಗೆ ಪ್ರಶ್ನೆ ಕೇಳಲಾಯಿತು. ಈ ವೇಳೆ ಅಶ್ನೀರ್ ಅವರು ಪತ್ನಿ ಬಗ್ಗೆ ಭಯ ಇದೆ ಎಂಬುದನ್ನು ಹೇಳಿಕೊಂಡರು. ನನಗೆ ಪತ್ನಿ ಬಗ್ಗೆ ಭಾರೀ ಭಯ ಇದೆ. ಒಂದು ಘಟನೆ ಹೇಳುತ್ತೇನೆ. ನಾನು ಇನ್ಸ್ಟಾಗ್ರಾಂನಲ್ಲಿ ತುಂಬಾನೇ ಕಡಿಮೆ ಜನರನ್ನು ಫಾಲೋ ಮಾಡುತ್ತೇನೆ. ಮೌನಿ ರಾಯ್ ಅವರನ್ನು ಕೂಡ ಹಿಂಬಾಲಿಸುತ್ತಿದ್ದೆ. ಅವರು ಬಿಕಿನಿಯಲ್ಲಿ ಫೋಟೋ ಹಾಕಿದ್ದರು. ನಾನು ಅದಕ್ಕೆ ಲೈಕ್ ಒತ್ತಿದೆ ಎಂದು ಅಶ್ನೀರ್ ಹೇಳುತ್ತಿದ್ದಂತೆ ಅವರ ಪತ್ನಿ ಮಾಧುರಿ, ಲೈಕ್ ಒತ್ತುವ ಅವಶ್ಯಕತೆ ಇತ್ತೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ವಿಚಾರವಾಗಿ ನಮ್ಮಿಬ್ಬರ ನಡುವೆ ಜಗಳ ಆಯಿತು. ಇದನ್ನೂ ಓದಿ:ಮಂಗಳೂರಿನ ಕಾಡಿನಲ್ಲಿ ನಟಿ ಪೂಜಾ ಹೆಗ್ಡೆ ಸುತ್ತಾಟ

    ನಮ್ಮ ಜಗಳ ಆದಮೇಲೆ ಮೌನಿ ರಾಯ್ ಅವರನ್ನ ಅನ್‌ಫಾಲೋ ಮಾಡಿದೆ. ಬಳಿಕ ದಿಶಾ ಪಠಾಣಿ (Disha Patani)  ಸೇರಿದಂತೆ 15-20 ಹೀರೋಯಿನ್‌ಗಳನ್ನ ಅಶ್ನೀರ್ ಅನ್ ಫಾಲೋವ್ ಮಾಡಿದ್ರಂತೆ. ಈ ಬಗ್ಗೆ ಪತ್ನಿ ಮುಂದೆಯೇ ಅಶ್ನೀರ್ ಸಂದರ್ಶನದಲ್ಲಿ ಹೇಳಿದ್ದಾರೆ.