Tag: n.v.ramana

  • ಜ್ಞಾನವಾಪಿ ಮಸೀದಿ ವಿವಾದ – ಇಂದು ಸುಪ್ರೀಂ ಕೋರ್ಟ್ ವಿಚಾರಣೆ

    ಜ್ಞಾನವಾಪಿ ಮಸೀದಿ ವಿವಾದ – ಇಂದು ಸುಪ್ರೀಂ ಕೋರ್ಟ್ ವಿಚಾರಣೆ

    ಲಕ್ನೋ: ಉತ್ತರಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿ (ಆಡಳಿತ ಮಂಡಳಿ) ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.

    ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ನೀಡಿದ ಲಿಖಿತ ಆದೇಶದಂತೆ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಜ್ಞಾನವ್ಯಾಪಿ ಮಸೀದಿಯ ಆಡಳಿತ ಮಂಡಳಿಯ ಅರ್ಜಿಯನ್ನು ವಿಚಾರಣೆ ನಡೆಸಲಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ

    GYANVAPI MOSQUE (1)

    ಹಲವು ಮಹತ್ವದ ಬೆಳವಣಿಗೆಯ ನಡುವೆ ವಾರಣಾಸಿ ನ್ಯಾಯಾಲಯವು ಅರ್ಜಿ ವಿಚಾರಣೆ ನಡೆಸಿದೆ. ಈಗಾಗಲೇ ಸಮೀಕ್ಷಾ ತಂಡವು ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗಿರುವ ಸ್ಥಳವನ್ನು ಬಂದ್ ಮಾಡುವಂತೆ ಅಲ್ಲಿನ ಜಿಲ್ಲಾಡಳಿತಕ್ಕೆ ಸೂಚಿಸಿದೆ.

    ಕಳೆದ ವಾರ, ಮುಸ್ಲಿಂ ಮುಖಂಡ ಮನವಿಯಂತೆ ಸಮೀಕ್ಷೆ ವಿರುದ್ಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ರವಾನಿಸಲು ಸುಪ್ರೀಂ ನಿರಾಕರಿಸಿತ್ತು. ಆದರೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಪರಿಗಣಿಸಲು ಒಪ್ಪಿಕೊಂಡಿತು. ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಅರ್ಜಿಯನ್ನು ಪಟ್ಟಿ ಮಾಡಲು ಸೂಚಿಸಿತ್ತು. ಇದನ್ನೂ ಓದಿ: ಅಲ್ಪಸಂಖ್ಯಾತರ ಮೀಸಲಾತಿ ನಿಲ್ಲಿಸುತ್ತೇವೆ – ತೆಲಂಗಾಣ ಸರ್ಕಾರದ ವಿರುದ್ಧ ಶಾ ಗುಡುಗು

    Gyanvapi Masjid 1

    ಅರ್ಜಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಹುಝೆಫಾ ಅಹ್ಮದಿ, ವಾರಣಾಸಿ ಆಸ್ತಿ ವಿಚಾರವಾಗಿ ಸಮೀಕ್ಷೆಗೆ ಸಂಬಂಧಿಸಿದಂತೆ ನಾವು ಅರ್ಜಿ ಸಲ್ಲಿಸಿದ್ದೇವೆ. ಇದು (ಜ್ಞಾನವಾಪಿ) ಅನಾದಿ ಕಾಲದಿಂದಲೂ ಮಸೀದಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಯಲಿದೆ.

  • ಈ ನಡುವೆ ಸರ್ಕಾರಗಳು ನ್ಯಾಯಾಂಗವನ್ನು ನಿಂದಿಸುವ ಪ್ರವೃತ್ತಿ ಆರಂಭಿಸಿವೆ: ಸಿಜೆಐ ಆಕ್ರೋಶ

    ಈ ನಡುವೆ ಸರ್ಕಾರಗಳು ನ್ಯಾಯಾಂಗವನ್ನು ನಿಂದಿಸುವ ಪ್ರವೃತ್ತಿ ಆರಂಭಿಸಿವೆ: ಸಿಜೆಐ ಆಕ್ರೋಶ

    ನವದೆಹಲಿ: ಈ ಹಿಂದೆ ನ್ಯಾಯಂಗ ಮತ್ತು ನ್ಯಾಯಾಧೀಶರನ್ನು ಖಾಸಗಿ ವ್ಯಕ್ತಿಗಳು ನಿಂದಿಸುತ್ತಿದ್ದರು. ಈ ನಡುವೆ ಈ ಪ್ರವೃತ್ತಿಯನ್ನು ಸರ್ಕಾರಗಳು ಆರಂಭಿಸಿವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಬೇಸರ ವ್ಯಕ್ತಪಡಿಸಿದ್ದಾರೆ.

    ಭ್ರಷ್ಟಾಚಾರ ಕಾಯಿದೆಯಡಿ ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿದ ಛತ್ತೀಸ್‌ಗಢ ಹೈಕೋರ್ಟ್ ತೀರ್ಪಿನ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ನ್ಯಾ. ಎನ್‌.ವಿ.ರಮಣ ಕೆಲವು ಸರ್ಕಾರಗಳ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಸುಪ್ರಿಯಾ ಮೆಲು ಧ್ವನಿಯಲ್ಲಿ ಮಾತನಾಡುತ್ತಿದ್ದರು, ಕೇಳಿಸಿಕೊಳ್ಳಲು ನಾನು ಡೆಸ್ಕ್ ಮೇಲೆ ಒರಗಿದೆ

    SUPREME COURT

    ʻಹಿಂದೆ ನ್ಯಾಯಾಧೀಶರ ವಿರುದ್ಧ ಖಾಸಗಿ ವ್ಯಕ್ತಿಗಳು ಅಪಪ್ರಚಾರ ಮಾಡುತ್ತಿದ್ದರು. ಈ ನಡುವೆ ಇದರಲ್ಲಿ ಸರ್ಕಾರವೂ ಸೇರಿಕೊಂಡಿದೆ. ಇದೊಂದು ಟ್ರೆಂಡ್ ಆಗಿದ್ದು ದುರದೃಷ್ಟಕರ ಬೆಳವಣಿಗೆಯಾಗಿದೆʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

  • ಯುದ್ಧ ನಿಲ್ಲಿಸಿ ಅಂತ ಪುಟಿನ್‌ಗೆ ನಾವು ಹೇಳಬಹುದೇ: ಸಿಜೆಐ ಪ್ರಶ್ನೆ

    ಯುದ್ಧ ನಿಲ್ಲಿಸಿ ಅಂತ ಪುಟಿನ್‌ಗೆ ನಾವು ಹೇಳಬಹುದೇ: ಸಿಜೆಐ ಪ್ರಶ್ನೆ

    ನವದೆಹಲಿ: ಉಕ್ರೇನ್‌ ಗಡಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ ಕುರಿತ ಮನವಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ವಿಚಾರಣೆ ನಡೆಸುತ್ತಿದ್ದಾರೆ.

    ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಕೇಳಿಬಂದಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಮಾಡಿದ್ದ ಆರೋಪ ನಿರಾಕರಿಸಿದ ಭಾರತ!

    SUPREME COURT

    ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿರುದ್ಧ ವ್ಯಕ್ತವಾಗಿರುವ ಪ್ರಶ್ನೆ ಕುರಿತು ಅಚ್ಚರಿ ವ್ಯಕ್ತಪಡಿಸಿರುವ ಸಿಜೆಐ, ಯುದ್ಧವನ್ನು ನಿಲ್ಲಿಸುವಂತೆ ನಾನು ರಷ್ಯಾ ಅಧ್ಯಕ್ಷ ಪುಟಿನ್‌ ಅವರಿಗೆ ಹೇಳಬಹುದೇ ಎಂದು ಪ್ರಶ್ನಿಸಿದ್ದಾರೆ.

    ಸೋಶಿಯಲ್‌ ಮೀಡಿಯಾದಲ್ಲಿ ವೀಡಿಯೋವೊಂದನ್ನು ನೋಡಿದೆ. ಸಿಜೆಐ ಏನು ಮಾಡುತ್ತಿದ್ದಾರೆ ಎಂದು ಅದರಲ್ಲಿ ಪ್ರಶ್ನಿಸಿದ್ದಾರೆ. ಯುದ್ಧವನ್ನು ನಿಲ್ಲಿಸಿ ಅಂತ ಪುಟಿನ್‌ ಅವರಿಗೆ ನಾನು ನಿರ್ದೇಶನ ನೀಡಬಹುದೇ ಎಂದು ಸಿಜೆಐ ಎನ್‌.ವಿ.ರಮಣ ಕೇಳಿದ್ದಾರೆ. ಇದನ್ನೂ ಓದಿ: ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ

    ಉಕ್ರೇನ್ ಗಡಿಯಲ್ಲಿ ಸಿಲುಕಿರುವ 200ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವ ಮನವಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಈ ಹೇಳಿಕೆ ನೀಡಿದ್ದಾರೆ.

    ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮೇಲೆ ನಮಗೆ ಸಹಾನುಭೂತಿ ಇದೆ. ಅವರನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ತನ್ನ ಕೆಲಸವನ್ನು ಮಾಡುತ್ತಿದೆ. ನಾವು ಏನು ಮಾಡಬಹುದು ಎಂದು ಅಟಾರ್ನಿ ಜನರಲ್‌ ಅವರನ್ನು ಕೇಳಿದ್ದೇವೆ ಎಂದು ಸಿಜೆಐ ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ

    ಉಕ್ರೇನ್‌ನ ಪಶ್ಚಿಮ ಭಾಗದ ನೆರೆರಾಷ್ಟ್ರಗಳಾದ ರೊಮೇನಿಯಾ, ಹಂಗೇರಿ, ಪೋಲ್ಯಾಂಡ್‌ ಮೂಲಕ ಭಾರತ ತನ್ನ ಪ್ರಜೆಗಳನ್ನು ವಿಶೇಷ ವಿಮಾನಗಳ ಮೂಲಕ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸುತ್ತಿದೆ. ಫೆ.24ರಿಂದ ಉಕ್ರೇನ್‌ ವಾಯುಮಾರ್ಗ ಸ್ಥಗಿತಗೊಂಡಿರುವ ಕಾರಣ ಈ ಕ್ರಮವಹಿಸಲಾಗಿದೆ.

  • ಓಮಿಕ್ರಾನ್‌ ಸೈಲೆಂಟ್‌ ಕಿಲ್ಲರ್‌: ಸೋಂಕಿಗೆ ತುತ್ತಾಗಿ ಅನುಭವ ಹಂಚಿಕೊಂಡ ಸುಪ್ರೀಂ ಕೋರ್ಟ್‌ ಸಿಜೆಐ

    ಓಮಿಕ್ರಾನ್‌ ಸೈಲೆಂಟ್‌ ಕಿಲ್ಲರ್‌: ಸೋಂಕಿಗೆ ತುತ್ತಾಗಿ ಅನುಭವ ಹಂಚಿಕೊಂಡ ಸುಪ್ರೀಂ ಕೋರ್ಟ್‌ ಸಿಜೆಐ

    ನವದೆಹಲಿ: ಕೊರೊನಾ ರೂಪಾಂತರ ತಳಿ ಓಮಿಕ್ರಾನ್‌, ಡೆಲ್ಟಾಗಿಂತ ಅಪಾಯಕಾರಿ ಅಲ್ಲದಿದ್ದರೂ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ. ಸ್ವತಃ ಓಮಿಕ್ರಾನ್‌ ಸೋಂಕಿಗೆ ತುತ್ತಾಗಿದ್ದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಓಮಿಕ್ರಾನ್‌ ಪರಿಣಾಮದ ಕುರಿತು ಅನುಭವ ಹಂಚಿಕೊಂಡಿದ್ದಾರೆ.

    ನಿಮಗೆ ಗೊತ್ತೆ? ಓಮಿಕ್ರಾನ್‌ ಸೈಲೆಂಟ್‌ ಕಿಲ್ಲರ್‌ ಇದ್ದಂತೆ. ನಾನು ಕೋವಿಡ್‌ ಮೊದಲ ಅಲೆಯಲ್ಲಿ ಸೋಂಕಿಗೆ ತುತ್ತಾಗಿದ್ದಾಗ ಕೇವಲ ನಾಲ್ಕು ದಿನಗಳಲ್ಲಿ ಗುಣಮುಖನಾಗಿದ್ದೆ. ಆದರೆ ಮೂರನೇ ಅಲೆಯಲ್ಲಿ ಸೋಂಕು ಪೀಡಿತನಾದಾಗಿನಿಂದ 25 ದಿನಗಳವರೆಗೂ ತೊಂದರೆ ಅನುಭವಿಸಿದ್ದೇನೆ. ಈಗಲೂ ಅದು ನನ್ನ ದೇಹದಲ್ಲಿ ಪರಿಣಾಮ ಬೀರುತ್ತಿದೆ ಎಂದು ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೋರ್ಟ್ ತೀರ್ಪು ಬರೋವರೆಗೂ ಪರೀಕ್ಷೆ ಮುಂದೂಡಿ – ಹಿಜಬ್ ಹೋರಾಟಗಾರ್ತಿಯರು

    ಇದು ಓಮಿಕ್ರಾನ್‌, ಪರಿಣಾಮ ಸೌಮ್ಯವಾಗಿರುತ್ತದೆ ಎಂದು ಹಿರಿಯ ವಕೀಲ ವಿಕಾಸ್‌ ಸಿಂಗ್‌, ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ದುರಾದೃಷ್ಟದ ಕಾರಣ ನೀವು ಸಮಸ್ಯೆ ಎದುರಿಸುತ್ತಿದ್ದೀರಿ. ಆದರೆ ಜನರು ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ ಎಂದು ಸಿಂಗ್‌ ಹೇಳಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯ ನ್ಯಾಯಮೂರ್ತಿ ರಮಣ, ಅದನ್ನು ಗಮನಿಸಿದ್ದೇನೆ ಎಂದಿದ್ದಾರೆ. ಜನವರಿ ತಿಂಗಳಲ್ಲಿ ಕೋವಿಡ್‌ ಮೂರನೇ ಅಲೆಯು ಸುಪ್ರೀಂ ಕೋರ್ಟ್‌ನ್ನೂ ಬಾಧಿಸಿದೆ. ಕೋರ್ಟ್‌ನ 10 ನ್ಯಾಯಾಧೀಶರು ಸೋಂಕಿಗೆ ತುತ್ತಾಗಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಶೇ.30ರಷ್ಟು ಸಿಬ್ಬಂದಿಯನ್ನು ಸೋಂಕು ಬಾಧಿಸುತ್ತಿದೆ. ಇದನ್ನೂ ಓದಿ: ಬಿಯರ್ ಪ್ರಿಯರಿಗೆ ಕಹಿ ಸುದ್ದಿ