Tag: N.S. Shankar

  • ಕನ್ನಡದ ‘ಈಗ’ ಸಿನಿಮಾದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ

    ಕನ್ನಡದ ‘ಈಗ’ ಸಿನಿಮಾದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತಿ ಲೇಖಕ ಚಂದ್ರಶೇಖರ್ ಕಂಬಾರ್ ಅವರಿಗೆ ಸಿನಿಮಾ ರಂಗ ಹೊಸದಲ್ಲ. ಈಗಾಗಲೇ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಂಭಾಷಣೆ ಬರೆದಿದ್ದಾರೆ. ಇವರ ಅನೇಕ ಕೃತಿಗಳು ಸಿನಿಮಾಗಳಾಗಿವೆ. ತುಂಬಾ ವರ್ಷಗಳ ನಂತರ ಕಂಬಾರರು ಬಣ್ಣ ಹಚ್ಚಿದ್ದಾರೆ. ಅದು ಅತಿಥಿ ಪಾತ್ರದಲ್ಲಿ ಎನ್ನುವುದು ವಿಶೇಷ. ಎನ್.ಎಸ್. ಶಂಕರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಈ ಚಿತ್ರಕ್ಕೆ ಈಗ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ಚಾರ್ಲಿ 777 ತೆರಿಗೆ ವಿನಾಯತಿ: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಸಮಾಧಾನ ಏಕೆ?

    ರಾಜಮೌಳಿ ನಿರ್ದೇಶನದಲ್ಲಿ ಈ ಹಿಂದೆ ‘ಈಗ’ ಎನ್ನುವ ಸಿನಿಮಾ ಮೂಡಿ ಬಂದಿತ್ತು.  ಈ ಸಿನಿಮಾದಲ್ಲಿ ಸುದೀಪ್ ಪ್ರಮುಖ ಪಾತ್ರ ಮಾಡಿದ್ದರು. ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇರದೇ ಇದ್ದರೂ, ಕನ್ನಡದ ಈಗ ಹೊಸದೊಂದು ಕಥೆಯನ್ನು ಪ್ರೇಕ್ಷಕರು ಮುಂದೆ ತೆರೆದಿಡಲಿದೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಮುಹೂರ್ತವಾಗಿದ್ದು, ಈ ಸಮಾರಂಭದಲ್ಲಿ ಗಿರೀಶ್ ಕಾಸರವಳ್ಳಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

    ಮುಹೂರ್ತದ ದಿನದಂತೆ ಮೊದಲ ದೃಶ್ಯಕ್ಕೆ ಗಿರೀಶ್ ಕಾಸರವಳ್ಳಿ ಕ್ಯಾಮೆರಾಗೆ ಚಾಲನೆ ನೀಡಿದರೆ, ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ, ನಟಿ ಸುಂದರರಾಜ್ ಆರಂಭ ಫಲಕ ತೋರಿದರು. ಡಾ.ಚಂದ್ರಶೇಖರ್ ಕಂಬಾರ ಅವರು ನಾಯಕಿ ಶ್ರುತಿ ಹರಿಹರ್ ಅವರಿಗೆ ಶಾರದಾ ಪುರಸ್ಕಾರ ನೀಡುವ ದೃಶ್ಯದಲ್ಲಿ ಕಾಣಿಸಿಕೊಂಡರು. ಕನ್ನಡ ಉಪನ್ಯಾಸಕ ರಾಜಪ್ಪ ದಳವಾಯಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಪಾತ್ರ ಮಾಡುತ್ತಿದ್ದಾರೆ.

    Live Tv

  • ‘ಉಲ್ಟಾ ಪಲ್ಟಾ’ ನಿರ್ದೇಶಕರ ಹೊಸ ಸಿನಿಮಾದಲ್ಲಿ ಶ್ರುತಿ ಹರಿಹರನ್?

    ‘ಉಲ್ಟಾ ಪಲ್ಟಾ’ ನಿರ್ದೇಶಕರ ಹೊಸ ಸಿನಿಮಾದಲ್ಲಿ ಶ್ರುತಿ ಹರಿಹರನ್?

    ನ್ನಡದ ಹಿರಿಯ ಸಿನಿಮಾ ನಿರ್ದೇಶಕ, ಉಲ್ಟಾ ಪಲ್ಟಾ ಖ್ಯಾತಿಯ ಎನ್.ಎಸ್. ಶಂಕರ್ ಇದೀಗ ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಅದಕ್ಕೆ ‘ಈಗ’ ಎಂದು ಹೆಸರನ್ನೂ ಇಟ್ಟಿದ್ದಾರೆ. ಈ ಸಿನಿಮಾದಲ್ಲಿ ಶ್ರುತಿ ಹರಿಹರನ್ ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಎನ್.ಎಸ್ ಶಂಕರ್ ಅವರೇ ಫೇಸ್ ಬುಕ್ ಖಾತೆಯಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದು, ಆ ಫೋಟೋಗಳಲ್ಲಿ ಶ್ರುತಿ ಹರಿಹರನ್, ಲಕ್ಷ್ಮೀ ಕಬ್ಬೇರಹಳ್ಳಿ ಸೇರಿದಂತೆ ಹಲವು ಕಲಾವಿದರು ಇದ್ದಾರೆ.

    ಜೂನ್.13ರಿಂದ ಈ ಸಿನಿಮಾ ಸೆಟ್ಟೇರಲಿದ್ದು, ತಮ್ಮ ಸಿನಿಮಾ ಕೆಫೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎನ್.ಎಸ್.ಶಂಕರ್. ಇದು ಜನರೇ ಬಂಡವಾಳ ಹೂಡಿ ಮಾಡುತ್ತಿರುವ ಚಿತ್ರವಾಗಿದ್ದು, ಒಂದು ಲಕ್ಷದಿಂದ ಐದು ಲಕ್ಷದವರೆಗೂ ಜನರೇ ಹಣ ಹೂಡಿ ನಿರ್ಮಾಪಕರಾಗುವ ಅವಕಾಶವನ್ನೂ ಅವರು ನೀಡಿದ್ದಾರಂತೆ. ಹಾಗಾಗಿ ಕ್ರೌಡ್ ಫಂಡಿಂಗ್ ನಲ್ಲಿ ಮೂಡಿ ಬರುತ್ತಿರುವ ಕನ್ನಡದ ಎರಡನೇ ಸಿನಿಮಾ ಇದಾಗಲಿದೆ. ಓದಿ : ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ

    ಸಿನಿಮಾದ ವಿಶೇಷ ಅಂದರೆ, ಮೂರು ಕಥೆಗಳನ್ನು ಒಂದಾಗಿಸಿಕೊಂಡು ಚಿತ್ರಕಥೆ ಬರೆಯಲಾಗಿದ್ದು ಪಿ.ಲಂಕೇಶ್ ಅವರ ಮುಟ್ಟಿಸಿಕೊಂಡವನು, ಪಿ.ಮಹಮ್ಮದ್ ಅವರ ಡಿಸೆಂಬರ್ 6 ಹಾಗೂ ಪ್ರತಿಭಾ ನಂದಕುಮಾರ್ ಬರೆದ ಅರುಂಧತಿ ಕಥೆಗಳನ್ನು ಈ ಚಿತ್ರಕ್ಕಾಗಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರಂತೆ. ಕಲಾವಿದರಿಗೆ ಚಿತ್ರಕಥೆ ಮತ್ತು ಪಾತ್ರಗಳ ಹಿನ್ನೆಲೆಯನ್ನು ಮನದಟ್ಟು ಮಾಡಿಸುವಲ್ಲಿ ನಿರ್ದೇಶಕರು ಸದ್ಯ ಬ್ಯುಸಿಯಾಗಿದ್ದು, ಜೂ.13ರ ನಂತರ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ.