Tag: N.M. Suresh

  • ಚಿತ್ರರಂಗದಿಂದ ದರ್ಶನ್ ಬ್ಯಾನ್? – ಫಿಲ್ಮ್ ಚೇಂಬರ್ ಹೇಳಿದ್ದೇನು?

    ಚಿತ್ರರಂಗದಿಂದ ದರ್ಶನ್ ಬ್ಯಾನ್? – ಫಿಲ್ಮ್ ಚೇಂಬರ್ ಹೇಳಿದ್ದೇನು?

    – ಆರೋಪ ಸಾಬೀತಾದರೇ ಮುಂದಿನ ಕ್ರಮ – ಎನ್.ಎಂ ಸುರೇಶ್

    ಬೆಂಗಳೂರು: ಆರೋಪಿ ನಟ ದರ್ಶನ್ (Darshan) ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವುದು ಹಾಗೂ ಅಸಹಕಾರ ನೀಡುವುದರ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಆರೋಪ ಸಾಬೀತಾದರೆ ಅಸಹಕಾರ ನೀಡುವ ವಿಚಾರಾಗಿ ನಿರ್ಧಾರ ಮಾಡಲಾಗುತ್ತದೆ ಎಂದು ಫಿಲ್ಮ್ ಚೇಂಬರ್ (Kannada Films Chamber ) ಅಧ್ಯಕ್ಷ್ಯ ಎನ್.ಎಂ ಸುರೇಶ್ (N.M Suresh) ತಿಳಿಸಿದ್ದಾರೆ.

    ಫಿಲ್ಮ್ ಚೇಂಬರ್‍ನಲ್ಲಿ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ. ಈ ಪ್ರಕರಣವನ್ನು ನಾವು ಖಂಡಿಸುತ್ತೇವೆ. ಅವರನ್ನು ತಕ್ಷಣಕ್ಕೆ ಬ್ಯಾನ್ ಮಾಡಲು ಆಗುವುದಿಲ್ಲ. ಬ್ಯಾನ್ ಮಾಡಲು, ಕಲಾವಿದರ ಸಂಘ ಹಾಗೂ ಇತರ ಅಂಗ ಸಂಸ್ಥೆಗಳು ಭಾಗಿಯಾಗಬೇಕು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ದರ್ಶನ್ ಕೊಲೆ ಮಾಡಿದ್ದರೆ ದೊಡ್ಡ ತಪ್ಪು – ರೇಣುಕಾಸ್ವಾಮಿ ಕುಟುಂಬಕ್ಕೆ ಸರ್ಕಾರ ನೆರವಾಗಲಿ: ಅಶೋಕ್

    ಈ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಕೊಲೆ ಪ್ರಕರಣ ಇದ್ದಾಗ ನಾವು ಎಂಟ್ರಿ ಆಗಲು ಆಗುವುದಿಲ್ಲ. 2011 ರಲ್ಲಿ ಸರಿದೂಗಿಸಿದ್ದೆವು. ಅದು ಕುಟುಂಬದ ವಿಚಾರವಾಗಿತ್ತು. ಈಗ ನಾವು ಎಂಟ್ರಿಯಾಗಲು ಸಾಧ್ಯವಿಲ್ಲ. ಕಾನೂನಿನ ತೀರ್ಪು ಬಂದಾಗ ಕೂಡಲೇ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

    ದರ್ಶನ್ ಅವರ ಒಂದು ಸಿನಿಮಾ ಅರ್ಧಕ್ಕೆ ನಿಂತಿದೆ. ಐದಾರು ತಿಂಗಳು ದರ್ಶನ್ ಪ್ರಕರಣದಿಂದ ಹೊರ ಬರಲು ಸಾಧ್ಯವಿಲ್ಲ. ಮುಂದೆ ಸಿನಿಮಾಗಳೂ ಘೋಷಣೆ ಆಗಿದೆ. ಕೆಲವರು ಅಡ್ವಾನ್ಸ್ ಕೊಟ್ಟಿದ್ದಾರೆ. ಹೀಗಾಗಿ ಬ್ಯಾನ್ ಅಷ್ಟು ಸುಲಭವಲ್ಲ. ನಾವು ರಕ್ಷಿಸುವ ಕೆಲಸ ಮಾಡುತ್ತಿಲ್ಲ. ಆದ್ರೆ ಪ್ರಕರಣ ತನಿಖೆ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ.

    ದರ್ಶನ್ ಫ್ಯಾನ್ಸ್‍ಗೆ ಕೋರಿಕೆ:
    ಅಭಿಮಾನಿಗಳು ಪ್ರಚೋದನೆಗೊಳಿಸುವ ಕಾಮೆಂಟ್ಸ್ ಹಾಗೂ ಸ್ಟೇಟಸ್ ಹಾಕೋದನ್ನ ನಿಲ್ಲಿಸಬೇಕು. ಇದರಿಂದ ಏನಾಗುತ್ತೆ ನೋಡ್ತಿದ್ದೀರಿ. ಫ್ಯಾನ್ಸ್‌ಗಳು ಇಂತಹ ವಿಚಾರಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ದರ್ಶನ್ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

    ಇದೇ ವೇಳೆ, ಹತ್ಯೆಗೀಡಾದ ರೇಣುಕಾಸ್ವಾಮಿ ಮನೆಗೆ ಜೂ.14 ರಂದು ಫಿಲ್ಮ್ ಚೇಂಬರ್‌ನ ಸದಸ್ಯರು ಭೇಟಿ ನೀಡಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಟ್ರೇಲರ್‌ನಲ್ಲಿ ಆಕ್ಷೇಪಾರ್ಹ ಸಂಭಾಷಣೆಗಳಿವೆ: ‘ಹಮಾರೆ ಬಾರಹ್‌’ ಸಿನಿಮಾ ಬಿಡುಗಡೆಗೆ ಸುಪ್ರೀಂ ತಡೆ

  • ಗೋವಾದಲ್ಲಿ ಹರಿದ ಕನ್ನಡ ನಿರ್ಮಾಪಕರ ರಕ್ತ: ಇಂಚಿಂಚು ಮಾಹಿತಿ

    ಗೋವಾದಲ್ಲಿ ಹರಿದ ಕನ್ನಡ ನಿರ್ಮಾಪಕರ ರಕ್ತ: ಇಂಚಿಂಚು ಮಾಹಿತಿ

    ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Film Chamber) ಕಾರ್ಯಕಾರಣಿ ಸಭೆ ಮಾಡಲು ಸರ್ವ ಸದಸ್ಯರು ಗೋವಾ (Goa) ಟ್ರಿಪ್ ಮಾಡಿದ್ದರು. ರಾತ್ರಿ ಹೋಟೆಲ್‍ ನಲ್ಲಿ ಮೋಜು ಮಸ್ತಿ ಮಾಡುವಾಗ ನಿರ್ಮಾಪಕರ ಮಧ್ಯ ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ಇಬ್ಬರು ನಿರ್ಮಾಪಕರು ತೀವ್ರ ಗಾಯಗೊಂಡಿದ್ದಾರೆ. ಇವರು ಗೋವಾಗೆ ಹೋಗಿದ್ದು ಕನ್ನಡ ಚಿತ್ರೋದ್ಯಮದ ಉದ್ದಾರಕ್ಕೆ. ಸಿನಿ ರಂಗವನ್ನು ಮತ್ತಷ್ಟು ಬಲಿಷ್ಠವಾಗಿ ಬೆಳೆಸೋಕೆ. ಹೋದವರ‍್ಯಾರು ಕಾಂಜಿಪಿಂಜಿಗಳಲ್ಲ. ಪುಡಿರೌಡಿಗಳೂ ಅಲ್ಲವೇ ಅಲ್ಲ. ಕನ್ನಡ ಸಿನಿರಂಗಕ್ಕೆ ಅಪರೂಪದ ಸಿನಿಮಾ ಕೊಟ್ಟವರು. ಸ್ಯಾಂಡಲ್‌ವುಡ್ಡನ್ನು ಹುಲುಸಾಗಿ ಬೆಳೆಸಿದವರು. ಗಟ್ಟಿಯಾಗಿ ನಿಲ್ಲಿಸಿದವರು. ಆದ್ರೆ, ಈ ಗುಂಪಿನಲ್ಲಿದ್ದ ಕೆಲವರು ಮಾಡಿದ್ದೇನು? ಎಣ್ಣೆ ಏಟಲ್ಲಿ ಬಡಿದಾಡ್ಕೊಂಡಿದ್ದಾರೆ. ಕನ್ನಡ ಚಿತ್ರೋದ್ಯಮದ ಮಾನ ಮರ‍್ಯಾದೇನ ಮೂರುಕಾಸಿಗೆ ಹರಾಜಾಕಿದ್ದಾರೆ. ಬಡಿದಾಡ್ಕೊಂಡವ್ರ ಮುಖದಿಂದ ರಕ್ತ ಸೋರಿದೆ, ತಲೆಬುರುಡೆ ಒಡೆದಿದೆ. ಮಾರಣಾಂತಿಕ ಹಲ್ಲೆ ನಡೆದಿದೆ.

    ಕನ್ನಡ ಸಿನಿಮಾ ರಂಗಕ್ಕೀಗ ಬರೋಬ್ಬರಿ 90 ವರ್ಷ. ಈ ಹಾದಿ ಸುಗಮವಾದುದಲ್ಲ. ಮದ್ರಾಸ್‌ನಿಂದ ಬಿಡಿಸಿಕೊಂಡು ಕರ್ನಾಟಕದಲ್ಲೇ ಚಿತ್ರರಂಗ ಕಟ್ಟಿದ ಇತಿಹಾಸವಿದೆಯಲ್ಲ ಅದು ರೋಚಕ. `ಮದ್ರಾಸ್’ ಎಂಬ ನಮ್ಮದಲ್ಲದ ನೆಲದಲ್ಲಿ ನೆಲೆನಿಂತು, ಕಷ್ಟಪಟ್ಟು, ಅವರು ಕೊಟ್ಟ ಸಮಯಕ್ಕೆ ಚಿತ್ರೀಕರಣ ಮಾಡಿ, ಹಗಲು ರಾತ್ರಿ ಲೆಕ್ಕಿಸದೇ ಕಟ್ಟಿದ ಚಿತ್ರರಂಗ ನಮ್ಮದು. ನಾವೀಗ 90ರ ಸಂಭ್ರಮದಲ್ಲಿದ್ದೇವೆ. ಇಡೀ ರಾಷ್ಟ್ರವೇ ಕನ್ನಡ ಸಿನಿಮಾ ರಂಗದತ್ತ ನೋಡುವಂತಾಗಿದೆ. ಮೂಕಿ ಯುಗದಿಂದ ಇಲ್ಲೀತನಕ ಮಾಡಿದ ಪ್ರಯೋಗಗಳು ಇತರ ಚಿತ್ರರಂಗಕ್ಕೆ ಮಾದರಿ ಆಗಿವೆ. ಈ ಮಾದರಿ ಇವರಿಂದಾಗಿ ಮಣ್ಣುಪಾಲಾಗಿದೆ. 90ರ ಸಂಭ್ರಮವನ್ನು ಸೆಲೆಬ್ರೇಟ್ ಮಾಡೋದು ಹೇಗೆ? ಅಂತ ಪ್ಲ್ಯಾನ್ ಮಾಡೋಕೆ ಹೋದವರು ಮಾನ ಕಳೆದು ಬಂದಿದ್ದಾರೆ.

    ಚಿತ್ರರಂಗದ ಮಾತೃಸಂಸ್ಥೆ ಈ ಫಿಲ್ಮ್ ಚೇಂಬರ್. ಚಿತ್ರೋದ್ಯಮದ ಪುಣ್ಯಾತ್ಮರು ನಡೆದಾಡಿದ ಕರ್ಮಭೂಮಿ ಅದು. ಅದಕ್ಕೆ ಅದರದ್ದೇ ಆದ ಗೌರವವಿದೆ. ಈಗದು ತನ್ನ ಖದರ್ ಕಳೆದುಕೊಳ್ಳುತ್ತಿದ್ದರೂ, ಈಗಲೂ ಈ ಸಂಸ್ಥೆಯ ಮೇಲೆ ಅಪಾರ ವಿಶ್ವಾಸ, ನಂಬಿಕೆ ಚಿತ್ರಕರ್ಮಿಗಳದ್ದು. ಇಂಥದ್ದೊಂದು ಜವಾಬ್ದಾರಿಯ ಅರಿವು ಈಗಿರುವವರಿಗೆ ಇರಬೇಕಿತ್ತು ಅಲ್ಲವಾ?.. ಗೋವಾಗೆ ಹೋಗಿದ್ದು ಯಾಕೆ? ಅಲ್ಲಿಗೇ ಯಾಕೆ ಹೋಗಬೇಕಿತ್ತು? ಅಷ್ಟೂ ಜನರನ್ನು ಕರೆದುಕೊಂಡು ಹೋಗಿದ್ದು ಯಾರು? ಹಣ ಎಲ್ಲಿಂದ ಬಂತು? ಈ ಯಾವ ಪ್ರಶ್ನೆಯನ್ನೂ ಜನರು ಕೇಳ್ತಿಲ್ಲ.. ಗೋವಾಗೆ ಹೋಗಿದ್ದು ತಪ್ಪು ಅಂತಾನೂ ಹೇಳ್ತಿಲ್ಲ. ಮಾತೃಸಂಸ್ಥೆಯ ಹೆಸರಿನಲ್ಲಿ ಹೋದರು ಮರ್ಯಾದೆ ಕಳೆಯುವಂಥ ಕೆಲಸ ಮಾಡ್ಬೋದಾ ಅಂತಿದ್ದಾರೆ ಜನರು. ಗೋವಾಗೆ ಹೋದವರೇ ಹೇಳ್ತಿರೋ ಪ್ರಕಾರ.. ಇವರೆಲ್ಲ ಹೋಗಿದ್ದು ಜಾಲಿಟ್ರಿಪ್‌ಗೆ ಅಲ್ಲವಂತೆ. ಸಿನಿಮಾ ರಂಗಕ್ಕೆ 90 ವರ್ಷ ತುಂಬಿರೋ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗ್ತಿದೆ. ಈ ಕಾರ್ಯಕ್ರಮದ ರೂಪರೇಷೆ ಚರ್ಚೆ ಮಾಡೋಕೆ ಗೋವಾಗೆ ಹೋಗಿದ್ದರಂತೆ. ಇದರ ಜೊತೆಗೆ ಫಿಲ್ಮ್ ಚೇಂಬರ್‌ನ ಕಾರ್ಯಕಾರಿಣಿ ಸಭೆ ಕೂಡ ಪ್ಲ್ಯಾನ್ ಆಗಿತ್ತಂತೆ. ಇಷ್ಟೊಂದು ಮಹತ್ವದ ಕೆಲಸ ಇಟ್ಕೊಂಡು ಹೋದವರು ಬಡಿದಾಡಿಕೊಂಡಿದ್ದು ಯಾಕೆ?.. ಉಳಿದುಕೊಂಡ ಹೋಟೆಲ್‌ನಲ್ಲಿ ನೆತ್ತರು ಹರಿಸಿದ್ದು ಯಾಕೆ?.. ಅಷ್ಟಕ್ಕೂ ಇವರೇನು ಸಣ್ಣ ಮಕ್ಕಳಾ? ಫಿಲ್ಮ್ ಚೇಂಬರ್ ಸದಸ್ಯರಾಗಿದ್ದವರಿಗೆ ಕಾಮನ್‌ಸೆನ್ಸ್ ಬೇಡವಾ?.

    ಫಿಲ್ಮ್ ಚೇಂಬರ್‌ನಲ್ಲಿ ಈ ರೀತಿ ಗಲಾಟೆ ಆಗೋದು ಹೊಸದೇನೂ ಅಲ್ಲ. ಚುನಾವಣೆ ಟೈಮ್‌ನಲ್ಲಿ ಒಬ್ಬರಿಗೊಬ್ಬರು ತೊಡೆ ತಟ್ಟಿದ್ದಾರೆ.. ಕೂಗಾಡಿದ್ದಾರೆ.. ಕೈಕೈ ಮಿಲಾಯಿಸೋ ಹಂತಕ್ಕೂ ಹೋಗಿದ್ದಾರೆ. ಆದರೆ, ಈ ಪ್ರಮಾಣದಲ್ಲಿ ಯಾವತ್ತೂ ಜಗಳ ಆಗಿರಲಿಲ್ಲ. ಹಾಗಂತ ಈಗ ಯಾವ ಚುನಾವಣೆನೂ ನಡೆದಿಲ್ಲ. ಗೋವಾದಲ್ಲಿ ನಡೆದಿರೋ ಮಾರಣಾಂತಿಕ ಹಲ್ಲೇಲಿ ನಿರ್ಮಾಪಕ ಎ.ಗಣೇಶ್ ಹಣೆಯಿಂದ ರಕ್ತ ಚಿಮ್ಮಿದೆ. ದೇಹದ ತುಂಬಾ ಗಾಯಗಳಾಗಿವೆ. ಮತ್ತೋರ್ವ ನಿರ್ಮಾಪಕ ರಥಾವರ ಚಂದ್ರು ಕೂಡ ಗಂಭೀರ ಗಾಯದಿಂದ ನೆರಳ್ತಾ ಇದ್ದಾರೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಸೂಕ್ತ ಸಮಯದಲ್ಲಿ ಅಂಬುಲೆನ್ಸ್ ಬಾರದೇ ಇದ್ದರೆ, ಅನಾಹುತಾನೇ ಆಗಿರೋದು ಅಂತಿದ್ದಾರೆ ನಿರ್ಮಾಪಕ ಗಣೇಶ್.

     

    ಅಂಬುಲೆನ್ಸ್ ತಡವಾಗಿದ್ದರೆ ಅನಾಹುತನೇ ಆಗಿರೋದು ಅಂತಿದ್ದಾರೆ ಅಂದ್ಮೇಲೆ.. ಹಲ್ಲೆ ಯಾವ ಪ್ರಮಾಣದಲ್ಲಿ ಆಗಿರೋದು ಅಂತ ನೀವೇ ಅಂದಾಜಿಸಿಕೊಳ್ಳಿ.. ಅಷ್ಟಕ್ಕೂ ಈ ಗಲಾಟೆ ನಡೆದಿದ್ದು ಯಾಕೆ? ವೈಯಕ್ತಿಕ ಕಾರಣ ಏನಾದ್ರೂ ಇತ್ತಾ? ದ್ವೇಷ ತುಂಬಿಕೊಂಡೆ ಇವರು ಗೋವಾಗೆ ಹೋಗಿದ್ದಾರೆ? ದ್ವೇಷದಲ್ಲಿ ಹಲ್ಲು ಮಸೀತಾ ಇದ್ದೋರ್‌ನ ಗೋವಾಗೆ ಕರ‍್ಕೊಂಡು ಹೋಗಿದ್ದು ಯಾರು? ಸತೀಶ್ ಅನ್ನೋರು ಫೋರ್ಕ್ ಸ್ಪೂನ್‌ನಿಂದ ಹಲ್ಲೆ ಮಾಡಿದ್ದು ಯಾಕೆ? ಅಲ್ಲಿದ್ದವರಿಗೆ ಈ ಕಾಳಗವನ್ನು ತಪ್ಪಿಸೋಕೆ ಆಗ್‌ಲಿಲ್ಲವಾ? ಅಬ್ಬಬ್ಬಾ.. ಎಷ್ಟೊಂದು ಪ್ರಶ್ನೆಗಳು.. ಇದಕ್ಕೆ ಉತ್ತರಿಸೋರು ಯಾರು? ನಿರ್ಮಾಪಕ ಗಣೇಶ್ ಅವರೇ ಹೇಳಿದಂತೆ ಹಲ್ಲೆ ಮಾಡಿದ ವ್ಯಕ್ತಿ ಕಂಠಪೂರ್ತಿ ಕುಡಿದಿದ್ನಂತೆ.. ಅದು ಬರೀ ಕುಡಿತದ ಹಾರಾಟ ಮಾತ್ರ ಆಗಿರಲಿಲ್ಲವಂತೆ.. `ಬೇರೆ ಇನ್ನೇನಾದ್ರೂ ತಗೊಂಡಿದ್ನಾ?.’ ಅಂತ ಅನುಮಾನ ಹೊರ ಹಾಕಿದ್ದಾರೆ. `ಬೇರೆದು ಅಂದ್ರೇನು..?’ ಈ ಮಾತು ನಾನಾ ಅನುಮಾನಕ್ಕೆ ಕಾರಣವಾಗಿದೆ. `ಬೇರೆದು ಅಂದ್ರೇನು..?’ ಅಂತ ಗಣೇಶ್ ಅವರೇ ಬಿಡಿಸಿ ಹೇಳಬೇಕಿದೆ. ಒಟ್ನಲ್ಲಿ.. ಗೋವಾ ಟ್ರಿಪ್ ಸುಖಾಂತ್ಯ ಕಾಣದೆ.. ಹೊಡೆದಾಟದಲ್ಲಿ ಕೊನೆಗೊಂಡಿದೆ. ಹೋದ ಕೆಲ್ಸ ಆಯ್ತಾ ಅಂತ ಚೇಂಬರ್ ಅಧ್ಯಕ್ಷರೇ ಹೇಳ್ಬೇಕಿದೆ. ಅಂದಹಾಗೆ ಈ ಘಟನೆಯಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ ಸುರೇಶ್ ತುಟಿಗೂ ಗಾಯ ಆಗಿದೆ ಅನ್ನೋದು ವಿಪರ್ಯಾಸ.

  • ಸಿನಿಮಾ ಇಂಡಸ್ಟ್ರಿ ಜೊತೆಗೆ ಚಿತ್ರಮಂದಿರ ಬಂದ್ ಮಾಡುವುದಿಲ್ಲ: ಫಿಲ್ಮ್‌ ಚೇಂಬರ್ ಅಧ್ಯಕ್ಷ ಸ್ಪಷ್ಟನೆ

    ಸಿನಿಮಾ ಇಂಡಸ್ಟ್ರಿ ಜೊತೆಗೆ ಚಿತ್ರಮಂದಿರ ಬಂದ್ ಮಾಡುವುದಿಲ್ಲ: ಫಿಲ್ಮ್‌ ಚೇಂಬರ್ ಅಧ್ಯಕ್ಷ ಸ್ಪಷ್ಟನೆ

    ತೆಲಂಗಾಣದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಕೆಲ ದಿನಗಳ ಕಾಲ ಬಂದ್ ಮಾಡಲಾಗಿದೆ. ಕ್ರಿಕೆಟ್, ಎಲೆಕ್ಷನ್ ಸ್ಟಾರ್ ಸಿನಿಮಾಗಳ ಕೊರತೆ ಇನ್ನಿತರೆ ಕಾರಣಗಳಿಂದ ಚಿತ್ರಮಂದಿರಗಳಿಗೆ ಜನ ಬರುವುದು ಕಮ್ಮಿಯಾಗಿದೆ. ಇದರಿಂದ ಚಿತ್ರಮಂದಿರಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಹಾಗಾಗಿ ತೆಲಂಗಾಣದಂತೆ ಕರ್ನಾಟಕದಲ್ಲಿಯೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಬಂದ್ ಮಾಡಬೇಕು ಎಂಬ ಚರ್ಚೆ ಜೋರಾಗಿತ್ತು. ಈ ವಿಚಾರವಾಗಿ ಚಿತ್ರರಂಗದ ಪ್ರಮುಖರ ಸಭೆ ನಡೆದಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ ಸುರೇಶ್‌ (N.M Suresh) ಚಿತ್ರಮಂದಿರ ಬಂದ್‌ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಮತ್ತೆ ಡೈರೆಕ್ಟರ್‌ ಶಶಾಂಕ್‌ ಜೊತೆ ಕೈಜೋಡಿಸಿದ ಡಾರ್ಲಿಂಗ್ ಕೃಷ್ಣ

    ಕನ್ನಡ ಚಿತ್ರರಂಗ ಹಾಗೂ ಚಿತ್ರಮಂದಿರ ಬಂದ್ ಮಾಡುವುದಿಲ್ಲ ಎಂದು ಎನ್.ಎಂ ಸುರೇಶ್ ಮಾತನಾಡಿದ್ದರು. ಚಿತ್ರಮಂದಿರಗಳ ಸಮಸ್ಯೆ ಹಾಗೂ ಚಿತ್ರರಂಗದ ಸಮಸ್ಯೆ ಬಗ್ಗೆ ಕುಲಂಕುಶವಾಗಿ ಚರ್ಚೆ ನಡೆಯಿತು. ಹಲವು ನಿರ್ಮಾಪಕರು ಸಭೆಯಲ್ಲಿ ಭಾಗಿಯಾಗಿದ್ದರು. ಚಿತ್ರಮಂದಿರಗಳನ್ನು ಬಂದ್ ಮಾಡುತ್ತೀವಿ ಎಂದು ಈ ಹಿಂದೆಯೂ ನಾವು ಹೇಳಿರಲಿಲ್ಲ. ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದೆವು, ಪ್ರದರ್ಶಕರನ್ನು ಹೇಗೆ ಉಳಿಸಿಕೊಳ್ಳಬೇಕು ಅನ್ನುವ ಬಗ್ಗೆ ಚರ್ಚೆಯಾಯಿತು. ಈ ವಿಷಯದ ಬಗ್ಗೆ ಸರ್ಕಾರದ ಜೊತೆ ಚರ್ಚೆ ಮಾಡ್ತಿವಿ ಎಂದು ತಿಳಿಸಿದ್ದಾರೆ. ಬಂದ್ ಅಂತ ಅನೌನ್ಸ್ ಮಾಡದೇ ಇದ್ದರು. ಆ ಸುದ್ದಿ ಹರಿದಾಡಿರೋದಕ್ಕೆ ಚಿತ್ರರಂಗದ ವ್ಯವಹಾರಕ್ಕೆ ತೊಂದರೆ ಆಗಿದೆ. ಓಟಿಟಿ ರೈಟ್ಸ್‌ಗೆ ಜೊತೆಗೆ ಬೇರೆ ಭಾಷೆಗಳಲ್ಲಿ ಸಿನಿಮಾಗಳ ಮಾರ್ಕೆಟ್‌ಗೆ ಸಮಸ್ಯೆ ಆಗುತ್ತಿದೆ ಎಂದು ತಿಳಿಸಿದರು. ಈ ಎಲ್ಲಾ ವಿಚಾರವನ್ನು ಸರ್ಕಾರದ ಗಮನಕ್ಕೆ ತರೋದಾಗಿ ಎನ್‌.ಎಂ ಸುರೇಶ್‌ ತಿಳಿಸಿದ್ದಾರೆ.

    ಸಿಜಿ ವರ್ಕ್, ಪೋಸ್ಟ್ ಪ್ರೋಡಕ್ಷನ್‌ನಿಂದ ಸಿನಿಮಾಗಳು ಲೇಟ್ ಆಗೋದಕ್ಕೆ ತೊಂದರೆ ಆಗುತ್ತಿದೆ. ಹೀಗಾಗಿ ಸ್ಟಾರ್ ನಟರ ಸಿನಿಮಾಗಳು ರಿಲೀಸ್‌ಗೆ ಲೇಟ್ ಆಗುತ್ತಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಕೇರಳ ರಾಜ್ಯದಲ್ಲಿ ಮಾಡಿರುವ ರೀತಿ ನಮ್ಮಲ್ಲಿ ಅಭಿವೃದ್ಧಿ ಮಾಡುತ್ತೇವೆ. ಇದೀಗ ಕೇರಳ ಸರ್ಕಾರ ಅವರದ್ದೇ ಓಟಿಟಿ ಮಾಡಿದೆ. ಯುಎಫ್ ಓ, ಕ್ಯೂಬ್ ಅವರದ್ದೇ ಇದೇ ಕಡಿಮೆ ಬೆಲೆಗೆ ಪ್ರೊಸೆಸ್ ಮಾಡುತ್ತಿದ್ದಾರೆ. ಕರ್ನಾಟಕದಲ್ಲೂ ಇದೇ ರೀತಿ ವ್ಯವಸ್ಥೆ ಆಗುವ ಹಾಗೇ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಎನ್.ಎಂ ಸುರೇಶ್ ಮಾತನಾಡಿದ್ದಾರೆ.

    ಅಂದಹಾಗೆ, ಈ ಸಭೆಯಲ್ಲಿ ಫಿಲ್ಮ್‌ ಚೇಂಬರ್ (Film Chamber) ಅಧ್ಯಕ್ಷ ಎನ್.ಎಮ್ ಸುರೇಶ್ ನೇತೃತ್ವದಲ್ಲಿ ನಡೆದಿದೆ. ಈ ವೇಳೆ, ಚಿತ್ರರಂಗದ ಸದ್ಯದ ಆ್ಯಕ್ಟೀವ್ ನಿರ್ಮಾಪಕರು, ಹಿರಿಯ ನಿರ್ಮಾಪಕರನ್ನು ಸಭೆಗೆ ಕರೆಯಲಾಗಿತ್ತು. ಈ ಮಾತುಕತೆಯಲ್ಲಿ ವಿತರಕ ಜಯಣ್ಣ, ನಿರ್ಮಾಪಕ, ನಿರ್ದೇಶಕ ಆರ್ ಚಂದ್ರು, ಕೆ ಮಂಜು, ಹೊಂಬಾಳೆ ನಿರ್ಮಾಣ ಸಂಸ್ಥೆಯ ಪ್ರತಿನಿಧಿ ಚಿದಾನಂದ್, ಲಹರಿ ವೇಲು, ಕೆಪಿ ಶ್ರೀಕಾಂತ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

  • ಸುದೀಪ್ ದಾಖಲಿಸಿದ್ದ ಕೇಸ್: ರದ್ದತಿಗೆ ಕೋರ್ಟ್ ನಕಾರ

    ಸುದೀಪ್ ದಾಖಲಿಸಿದ್ದ ಕೇಸ್: ರದ್ದತಿಗೆ ಕೋರ್ಟ್ ನಕಾರ

    ಕಿಚ್ಚ ಸುದೀಪ್ (Sudeep) ತಮ್ಮ ಮೇಲೆ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ನಿರ್ಮಾಪಕ ಎನ್.ಎಂ.ಸುರೇಶ್ (N.M. Suresh) ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಸುದೀಪ್ ವಿರುದ್ಧ ಸುಳ್ಳು ಆಸ್ತಿ ಸಂಪಾದನೆ ಮತ್ತು ವಂಚನೆಯ ಆರೋಪವನ್ನು ಸುರೇಶ್ ಮಾಡಿದ್ದರು.

    ಸುದೀಪ್ ಅವರ ವಿರುದ್ಧ ಮಾನಹಾನಿಕರ ಮತ್ತು ಸಮಾಜದಲ್ಲಿ ಅವರ ಹೆಸರನ್ನು ಕೆಡಿಸುವಂತಹ ಆರೋಪದ ಪ್ರಕರಣವನ್ನು ದಾಖಲಿಸಲಾಗಿದೆ. ಸಮನ್ಸ್ ಜಾರಿ ಮಾಡುವ ಕ್ರಮದಲ್ಲಿ ಯಾವುದೇ ಅಕ್ರಮ ಕಂಡು ಬಂದಿಲ್ಲ. ಹಾಗಾಗಿ ರದ್ದು ಮಾಡಲಾಗದು ಎಂದು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣ ಸಂಬಂಧ ಐಪಿಸಿ 499 ಮತ್ತು 500 ಅಡಿಯಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಸುರೇಶ್ ಅರ್ಜಿ ಸಲ್ಲಿಸಿದ್ದರು.

    ಈ ಹಿಂದೆ ಸುದೀಪ್ ಈ ವಿಚಾರವಾಗಿ ಕೋರ್ಟಿಗೆ ಹಾಜರಾಗಿದ್ದರು. ಸುದೀಪ್ ಅವರ ಹೇಳಿಕೆಯನ್ನು ಆಲಿಸಿದ್ದ 13ನೇ ಎಸಿಎಂಎಂ ಕೋರ್ಟನ ನ್ಯಾ.ವೆಂಕಣ್ಣ ಬಸಪ್ಪ ಹೊಸಮನಿ ಅವರು ಸುದೀಪ್ ಸಲ್ಲಿಸಿದ್ದ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ‌ ಅಂಗೀಕಾರ ಮಾಡಿದ್ದರು. ಜೊತೆಗೆ ನಿರ್ಮಾಪಕರಾದ ಎಂ.ಎನ್.ಕುಮಾರ್ ಹಾಗೂ ಸುರೇಶ್‌ಗೆ ಸಮನ್ಸ್  ಜಾರಿಯಾಗಿತ್ತು.

     

    ನಿರ್ಮಾಪಕ ಎಂ.ಎನ್‌. ಕುಮಾರ್‌ (M.n Kumar) ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಿ ನಟ ಸುದೀಪ್‌ (Sudeep) ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ಹಲವು ಫೋಟೋಗಳೊಂದಿಗೆ ಕೋರ್ಟ್‌ ಮುಂದೆ ದಾಖಲೆಗಳನ್ನೂ ಅವರು ಸಲ್ಲಿಸಿದ್ದರು.

  • ರೈತರ ಪರವಾಗಿ ಯಾವತ್ತಿಗೂ ಚಿತ್ರರಂಗವಿದೆ: ಎನ್.ಎಂ. ಸುರೇಶ್

    ರೈತರ ಪರವಾಗಿ ಯಾವತ್ತಿಗೂ ಚಿತ್ರರಂಗವಿದೆ: ಎನ್.ಎಂ. ಸುರೇಶ್

    ಕಾವೇರಿ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಸಿನಿಮಾ ರಂಗದವರು ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನುವ ಕೂಗು ಎದ್ದಿದೆ. ಈ ಬೆನ್ನಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Film Chamber) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎನ್‍.ಎಂ ಸುರೇಶ್ (N.M Suresh) ಕಾವೇರಿ ಹೋರಾಟದ ಕುರಿತು ಮಾತನಾಡಿದ್ದಾರೆ.

    ಕನ್ನಡ ಸಿನಿಮಾ ರಂಗ ಯಾವತ್ತಿಗೂ ರೈತರ ಪರವಾಗಿ ಇದೆ. ಕಾವೇರಿ ಹೋರಾಟ (Cauvery Protest) ಸೇರಿದಂತೆ ನಾಡು, ನುಡಿಗೆ ಸಂಬಂಧಿಸಿದ ಎಲ್ಲ ಹೋರಾಟಗಳಲ್ಲೂ ಚಿತ್ರರಂಗ ಭಾಗಿಯಾಗಿದೆ. ರೈತರ ಪರವಾಗಿ ನಿಂತು, ಅವರಿಗೆ ಸಪೋರ್ಟ್ ಮಾಡಲಿಲ್ಲ ಎಂದು ನಮ್ಮ ಜನ್ಮ ಸಾರ್ಥವಾಗಲ್ಲ ಎಂದಿದ್ದಾರೆ. ಶೀಘ್ರದಲ್ಲೇ ಈ ಕುರಿತು ಚರ್ಚೆ ಮಾಡಿ, ಒಂದು ನಿರ್ಧಾರಕ್ಕೆ ಬರುವುದಾಗಿಯೂ ಅವರು ತಿಳಿಸಿದ್ದಾರೆ.

     

    ತಮ್ಮ ಗೆಲುವಿನ ಕುರಿತು ಮಾತನಾಡದ ಸುರೇಶ್, ‘ಈಗ ತಾನೇ ಗೆದ್ದು ಆಯ್ಕೆ ಆಗಿದ್ದೇನೆ  ಸಂತೋಷವಾಗಿದೆ. ಇದು ವಾಣಿಜ್ಯ ಮಂಡಳಿಯ ಚರಿತ್ರೆಯಲ್ಲಿ ಬರೆಯೋ ಚುನಾವಣೆ. ನಾನು ನಾಲ್ಕು ಅಭ್ಯರ್ಥಿಗಳ ಮಧ್ಯೆ ಹೆಚ್ಚು ಮತ ಪಡೆಯೋಕೆ ಕಾರಣ ನನ್ನ ಗುರುಗಳಾದ ಸಾ.ರಾ ಗೋವಿಂದು ಅವರು. ಅವರ ಮಾರ್ಗದರ್ಶನದಲ್ಲಿ ಗೆದ್ದಿದ್ದೀನಿ. ಅವ್ರಿಗೆ ಭಾರಿ ಸಂತೋಷವಾಗಿದೆ. ನನ್ನ ಗೆಲುವಿಗೆ ಕಾರಣವಾದ ಎಲ್ಲಾ ನಿರ್ಮಾಪಕರಿಗೆ, ವಿತರಕರಿಗೆ ಹಾಗೂ ಪ್ರದರ್ಶಕರಿಗೆ ಧನ್ಯವಾದಗಳು ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫಿಲ್ಮ್ ಚೇಂಬರ್ ಚುನಾವಣೆ ಫಲಿತಾಂಶ ಪ್ರಕಟ: ಅಧ್ಯಕ್ಷರಾಗಿ ಎನ್.ಎಮ್. ಸುರೇಶ್ ಆಯ್ಕೆ

    ಫಿಲ್ಮ್ ಚೇಂಬರ್ ಚುನಾವಣೆ ಫಲಿತಾಂಶ ಪ್ರಕಟ: ಅಧ್ಯಕ್ಷರಾಗಿ ಎನ್.ಎಮ್. ಸುರೇಶ್ ಆಯ್ಕೆ

    ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು (ಶನಿವಾರ) ನಡೆದ ಚುನಾವಣೆಯಲ್ಲಿ 2023ನೇ ಸಾಲಿಗೆ ಅಧ್ಯಕ್ಷರಾಗಿ ನಿರ್ಮಾಪಕ, ವಿತರಕ ಎನ್.ಎಮ್. ಸುರೇಶ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಎನ್.ಎಮ್‌.ಸುರೇಶ್, ಮಾರ್ಸ್ ಸುರೇಶ್, ಶಿಲ್ಪಾ ಶ್ರೀನಿವಾಸ್ ಮತ್ತು ಎ.ಗಣೇಶ್ ಆಯ್ಕೆ ಬಯಸಿದ್ದರು. ಕೊನೆಗೂ ಅಧ್ಯಕ್ಷ ಸ್ಥಾನದ ಗೆಲುವು ಎನ್.ಎಮ್‌. ಸುರೇಶ್ ಅವರ ಪಾಲಾಗಿದೆ.

    ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿದ್ದ ಶಿಲ್ಪಾ ಶ್ರೀನಿವಾಸ್ 217 ಮತಗಳು, ವಿ.ಹೆಚ್.ಸುರೇಶ್ ( ಮಾರ್ಸ್ ಸುರೇಶ್) 181 ಮತಗಳು, ಎನ್.ಎಮ್. ಸುರೇಶ್ 337 ಹಾಗೂ ಎ.ಗಣೇಶ್ 204 ಮತಗಳನ್ನು ಪಡೆದಿದ್ದಾರೆ. ಅಂತಿಮವಾಗಿ ಎನ್.ಎಮ್. ಸುರೇಶ್ 120 ಮತಗಳ ಅಂತರದ ಗೆಲುವು ಕಂಡಿದ್ದಾರೆ. ಇದನ್ನೂ ಓದಿ: ಕಾವೇರಿಗಾಗಿ ಜೀವ ಕೊಡಲು ಸಿದ್ಧ: ನಟ ರಾಘವೇಂದ್ರ ರಾಜ್ ಕುಮಾರ್

    ಎನ್.ಎಮ್. ಸುರೇಶ್ ನೂತನ ಫಿಲಂ ಚೇಂಬರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಮಿಳಾ ಜೋಶಾಯಿ, ಕಾರ್ಯದರ್ಶಿಯಾಗಿ ಭಾ.ಮಾ. ಗಿರೀಶ್, ಖಜಾಂಚಿಯಾಗಿ ಜಯಸಿಂಹ ಮಸೂರಿ ಆಯ್ಕೆಯಾಗಿದ್ದಾರೆ.

    ಬೆಳಗ್ಗೆ 65ನೇ ಸರ್ವ ಸದಸ್ಯರ ಸಭೆ ನಡೆಯಿತು. ಈ ಸಭೆಯಲ್ಲಿ ಚುನಾವಣೆ ಮತ್ತು ಈವರೆಗೂ ವಾಣಿಜ್ಯ ಮಂಡಳಿ ನಡೆದುಕೊಂಡು ಬಂದ ಹಾದಿಯ ಕುರಿತು ಚರ್ಚೆ ನಡೆಯಿತು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ಮಾಡಲಾಯಿತು. ಒಟ್ಟು ಮತಗಳು ಸಂಖ್ಯೆ 1,599. ಚಲಾವಣೆ ಆದ ಮತಗಳು ಸಂಖ್ಯೆ 967 ಆಗಿದ್ದವು. ಇದನ್ನೂ ಓದಿ: ತೆಲುಗು ಸಿನಿಮಾ ಒಪ್ಪಿಕೊಂಡ ಬಾಲಿವುಡ್ ನಟಿ ಐಶ್ವರ್ಯ ರೈ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖುದ್ದು ಕೋರ್ಟಿಗೆ ಹಾಜರಾಗುವಂತೆ ನಿರ್ಮಾಪಕ ಕುಮಾರ್, ಸುರೇಶ್ ಗೆ ಸಮನ್ಸ್

    ಖುದ್ದು ಕೋರ್ಟಿಗೆ ಹಾಜರಾಗುವಂತೆ ನಿರ್ಮಾಪಕ ಕುಮಾರ್, ಸುರೇಶ್ ಗೆ ಸಮನ್ಸ್

    ಕಿಚ್ಚ ಸುದೀಪ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯವು ನಿರ್ಮಾಪಕರಾದ ಎನ್.ಎಂ. ಸುರೇಶ್ (N.M. Suresh) ಮತ್ತು ಎಂ.ಎನ್. ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಮೊನ್ನೆಯಷ್ಟೇ ನಟ ಸುದೀಪ್ ಖುದ್ದು ಕೋರ್ಟಿಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.

    ಸುದೀಪ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ 13ನೇ ಎಸಿಎಂಎಂ ಕೋರ್ಟ್ ಆರೋಪಿಗಳ ವಿರುದ್ಧ ಕ್ರಿಮಿನಲ್ ಮಾನನಷ್ಟ ಕೇಸ್ ದಾಖಲಿಸುವುದರ ಜೊತೆಗೆ ಆಗಸ್ಟ್ 26ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ (Summons) ಜಾರಿ ಮಾಡಿದೆ.

    ಈವರೆಗೂ ಆಗಿದ್ದೇನು?

    ನಿರ್ಮಾಪಕ ಕುಮಾರ್ ಮತ್ತು ನಟ ಸುದೀಪ್‌ ನಡುವೆ ಜಟಾಪಟಿ ಮತ್ತೊಂದು ಹಂತ ತಲುಪಿದೆ. ಮೊನ್ನೆಯಷ್ಟೇ ಸುದೀಪ್ ಈ ವಿಚಾರವಾಗಿ ಕೋರ್ಟಿಗೆ ಹಾಜರಾಗಿದ್ದರು. ಸುದೀಪ್ ಅವರ ಹೇಳಿಕೆಯನ್ನು ಆಲಿಸಿದ್ದ 13ನೇ ಎಸಿಎಂಎಂ ಕೋರ್ಟನ ನ್ಯಾ.ವೆಂಕಣ್ಣ ಬಸಪ್ಪ ಹೊಸಮನಿ ಅವರು ತೀರ್ಪು ಕಾಯ್ದಿರಿಸಿದ್ದರು. ನಿನ್ನೆಯಷ್ಟೇ ತೀರ್ಪು ಪ್ರಕಟವಾಗಿದ್ದು, ಸುದೀಪ್ ಸಲ್ಲಿಸಿದ್ದ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ‌ ಅಂಗೀಕಾರವಾಗಿದೆ. ಜೊತೆಗೆ ನಿರ್ಮಾಪಕರಾದ ಎಂ.ಎನ್.ಕುಮಾರ್ ಹಾಗೂ ಸುರೇಶ್‌ಗೆ ಸಮನ್ಸ್  ಜಾರಿಯಾಗಿದೆ.

    ನಿರ್ಮಾಪಕ ಎಂ.ಎನ್‌. ಕುಮಾರ್‌ (M.n Kumar) ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಿ ನಟ ಸುದೀಪ್‌ (Sudeep) ತಮ್ಮ ಹೇಳಿಕೆಯನ್ನು ನಿನ್ನೆ ದಾಖಲಿಸಿದ್ದರು. ಹಲವು ಫೋಟೋಗಳೊಂದಿಗೆ ಕೋರ್ಟ್‌ ಮುಂದೆ ದಾಖಲೆಗಳನ್ನೂ ಅವರು ಸಲ್ಲಿಸಿದ್ದರು.

    13ನೇ ಎಸಿಎಂಎಂ ಕೋರ್ಟ್‌ ಮುಂದೆ ಗುರುವಾರ ಹಾಜರಾದ ನಟ ಸುದೀಪ್‌, ತಾವು ಹೂಡಿದ್ದ ಮಾನನಷ್ಟ ಮೊಕದ್ದಮೆ ಬಗ್ಗೆ ಹೇಳಿಕೆ ದಾಖಲಿಸಿದ್ದರು. ನ್ಯಾ. ವೆಂಕಣ್ಣ ಬಸಪ್ಪ ಹೊಸಮನಿ ಎದುರು ಹೇಳಿಕೆ ದಾಖಲಿಸಿದ ನಟ, ಪ್ರಕರಣ ಸಂಬಂಧ ರಾಜೀ ಆಗುವ ಪ್ರಮೇಯ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

    ಸುದೀಪ್‌ (Sudeep) ಹೇಳಿಕೆ ದಾಖಲಿಸಿಕೊಳ್ಳುವ ವೇಳೆ ನ್ಯಾಯಾಧೀಶರು, ನಿರ್ಮಾಪಕರು ಕ್ಷಮಾಪಣೆ ಕೇಳಿದರೆ ಕ್ಷಮಿಸುತ್ತೀರಾ? ರಾಜೀ ಸಂಧಾನ ಮಾಡಿಕೊಂಡು ಕಕ್ಷಿದಾರರಿಗೆ ಮಾದರಿಯಾಗುತ್ತೀರಾ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಸುದೀಪ್‌, ಅವರ ಹೇಳಿಕೆಯಿಂದ ನಾನು ಇಷ್ಟು ವರ್ಷ ಕಷ್ಟಪಟ್ಟು ಗಳಿಸಿದ ವರ್ಚಸ್ಸಿಗೆ ಹಾನಿಯಾಗಿದೆ. ಒಬ್ಬ ಸುದೀಪ್‌ನನ್ನು ಬಗ್ಗಿಸಿದರೆ ಹಲವರನ್ನು ಬಗ್ಗಿಸಬಹುದೆಂದು ತಿಳಿದಿದ್ದಾರೆ ಎನ್ನುವ ಮೂಲಕ ತಾವು ರಾಜೀ ಸಂಧಾನಕ್ಕೆ ಸಿದ್ಧರಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು.

    ಎಂ.ಎನ್.ಕುಮಾರ್ (M.n Kumar) ಹೇಳಿಕೆಯನ್ನು ಎಂ.ಎನ್.ಸುರೇಶ್ ಬೆಂಬಲಿಸಿದ್ದಾರೆ. ಇವರ ಸುದ್ದಿಗೋಷ್ಠಿಯಿಂದ ಮಾನಹಾನಿಯಾಗಿದೆ. ಹಲವರು ನನ್ನನ್ನು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಂ.ಎನ್.ಕುಮಾರ್ ಮಾಡಿದ ಆರೋಪಗಳೆಲ್ಲ ಸುಳ್ಳು. ರಾಜರಾಜೇಶ್ವರಿ ನಗರದಲ್ಲಿ ಮನೆ ಕಟ್ಟಲು ಹಣದ ನೆರವಿನ ಆರೋಪವೂ ಸುಳ್ಳು. ಮನೆ ದುರಸ್ತಿಗೆ ಹಣ ನೀಡಿದ್ದಾಗಿ ಮಾಡಿದ ಆರೋಪ ಸುಳ್ಳು ಎಂದು ಪ್ರಾಮಾಣಿಕ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ಸುದೀಪ್‌ ದಾಖಲಿಸಿದ್ದರು.

     

    ವಕೀಲ ಅಜಯ್ ಕಡಕೋಳ್ ಅವರೊಡನೆ ನಟ ಸುದೀಪ್‌ ಕೋರ್ಟ್‌ಗೆ ಹಾಜರಾಗಿದ್ದರು. ಸುದೀಪ್‌ಗೆ ಆಪ್ತ ಚಂದ್ರಚೂಡ್, ನಿರ್ಮಾಪಕ ಜಾಕ್ ಮಂಜು (Jack Manju) ಸಾಥ್‌ ನೀಡಿದರು. ಸುದೀಪ್ ಪರ ವಕೀಲ ಅಜಯ್ ಮಾತನಾಡಿ, ಸೆಕ್ಷನ್ 300 ಅಡಿಯಲ್ಲಿ ಕೇಸ್ ಫೈಲ್ ಮಾಡಿದ್ದರು. ಕುಮಾರ್ ಮತ್ತು ಸುರೇಶ್ ವಿರುದ್ಧ ಕೇಸ್ ಫೈಲ್ ಮಾಡಿದ್ದರು. ಕುಮಾರ್ ಮತ್ತು ಸುರೇಶ್ ಮಾತನಾಡಿರೋ ದಾಖಲೆಗಳು ಹಾಗೂ ಪೋಟೋಗಳನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]