Tag: N. H. Shivashankara Reddy

  • 2013ರ ಸಿದ್ದರಾಮಯ್ಯ ಬೇರೆ, 2024 ಸಿದ್ದರಾಮಯ್ಯ ಬೇರೆ: ಎನ್.ಹೆಚ್ ಶಿವಶಂಕರ ರೆಡ್ಡಿ

    2013ರ ಸಿದ್ದರಾಮಯ್ಯ ಬೇರೆ, 2024 ಸಿದ್ದರಾಮಯ್ಯ ಬೇರೆ: ಎನ್.ಹೆಚ್ ಶಿವಶಂಕರ ರೆಡ್ಡಿ

    – ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಸಂದೇಶ?

    ಚಿಕ್ಕಬಳ್ಳಾಪುರ: 2013ರ ಸಿದ್ದರಾಮಯ್ಯನವರೇ ಬೇರೆ, 2024ರ ಈಗಿನ ಸಿದ್ದರಾಮಯ್ಯನವರೇ  (Siddaramaiah) ಬೇರೆ ಎಂದು ಮಾಜಿ ಸಚಿವ ಎನ್.ಹೆಚ್ ಶಿವಶಂಕರ ರೆಡ್ಡಿ (N. H. Shivashankara Reddy) ಅಸಮಾಧಾನ ಹೊರಹಾಕಿದ್ದಾರೆ.

    ಜಿಲ್ಲೆಯ (Chikkaballapur) ಮಂಚೇನಹಳ್ಳಿಯಲ್ಲಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಇಲ್ಲಿನ ಲೋಕಸಭಾ ಕ್ಷೇತ್ರದ (Lok Sabha Election 2024) ಕಾಂಗ್ರೆಸ್ (Congress) ಟಿಕೆಟ್ ಕೈ ತಪ್ಪುವ ಆತಂಕದ ಹಿನ್ನೆಲೆಯಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಬೇಸರ ಹೊರಹಾಕಿದ್ದಾರೆ. ಡಿಕೆಶಿ ಸಹ ಸ್ಟ್ರೈಟ್ ಪೊಲಿಟಿಷಿಯನ್, ಆದರೆ ಸಿದ್ದರಾಮಯ್ಯ ಹಾಗೂ ಡಿಕೆಶಿಯವರನ್ನು ಪರಿಸ್ಥಿತಿಗಳು ಕಟ್ಟಿ ಹಾಕುತ್ತಿವೆ. ಎಲ್ಲೋ ಒಂದು ಕಡೆ ನಾನು ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಹೇಳಿದ್ದ ಹೇಳಿಕೆ ಸಹ ಈಗ ನನಗೆ ಮುಳುವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಕಮಲ್‌ನಾಥ್‌ ಇಂದು, ಎಂದೆಂದಿಗೂ ಕಾಂಗ್ರೆಸ್‌ನಲ್ಲೇ ಇರುತ್ತಾರೆ: ದಿಗ್ವಿಜಯ್‌ ಸಿಂಗ್‌

    ವೀರಪ್ಪ ಮೊಯ್ಲಿ ಹಾಗೂ ರಕ್ಷಾರಾಮಯ್ಯನವರು ಈ ಕ್ಷೇತ್ರದವರಲ್ಲ, ಅವರು ಹೊರಗಿನವರು. ನಾನು ಈ ಕ್ಷೇತ್ರದವನು. ನನಗೆ ಟಕೆಟ್ ಕೊಡಿ ಎಂಬ ಬೇಡಿಕೆ ಇಟ್ಟಿದ್ದೇನೆ. ಈ ಬೇಡಿಕೆಗೆ ಸಿದ್ದರಾಮಯ್ಯ ಹಾಗೂ ಡಿಕೆಶಿಯವರಿಂದ ನನಗೆ ಸಕಾರಾತ್ಮಕಾವಾದ ಸ್ಪಂದನೆ ಸಿಗುತ್ತಿಲ್ಲ. ನನಗೆ ಟಿಕೆಟ್ ಸಿಗತ್ತೋ? ಇಲ್ವೋ? ಎನ್ನುವ ಸಂಶಯ ಮೂಡಿದೆ. ಹಾಗಾಗಿ ನಾನು ಸ್ವಾಭಿಮಾನಕ್ಕೆ ಧಕ್ಕೆಯಾದರೆ ಯುದ್ಧ ಮಾಡಲು ತಯಾರಿದ್ದೇನೆ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಹೋಗುವ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಅಲ್ಲಿ ಆನೆ ತುಳಿದ್ರೆ 15 ಲಕ್ಷ ಕೊಡ್ತೀರಿ, ಇಲ್ಲಿ 5 ಲಕ್ಷ ನೀಡ್ತೀರಿ: ಹೆಚ್‍ಡಿಕೆ ಕೆಂಡಾಮಂಡಲ

  • ರಾಜ್ಯದಲ್ಲಿ ಜೂನ್ 15ರಿಂದ ಮೋಡ ಬಿತ್ತನೆ ಆರಂಭ: ಶಿವಶಂಕರರೆಡ್ಡಿ

    ರಾಜ್ಯದಲ್ಲಿ ಜೂನ್ 15ರಿಂದ ಮೋಡ ಬಿತ್ತನೆ ಆರಂಭ: ಶಿವಶಂಕರರೆಡ್ಡಿ

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಜೂನ್ 15ರಿಂದ ಮೋಡ ಬಿತ್ತನೆ ಕಾರ್ಯ ಆರಂಭವಾಗಲಿದೆ ಎಂದು ಕೃಷಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ವಾಡಿಕೆಗಿಂತಲೂ ಈ ಬಾರಿ ಕಡಿಮೆ ಮಳೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ತೀವ್ರ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಅಂತರ್ಜಲಮಟ್ಟವೂ ಕುಸಿಯುತ್ತಿದ್ದು, ಹಲವು ಕಡೆ ಕೊಳವೆಬಾವಿ ಕೊರೆದರೂ ನೀರು ಸಿಗದೇ ಇರುವ ಪರಿಸ್ಥಿತಿ ಇದೆ. ಮಳೆ ಕೊರತೆಯಿಂದಾಗಿ ದನ ಕರುಗಳಿಗೆ ಮೇವು ಸಿಗುತ್ತಿಲ್ಲ ಎಂದು ತಿಳಿಸಿದರು.

    ವಿಧಾನಸಭಾ ಚುನಾವಣೆ ಹಿನ್ನೆಲೆ ಕಳೆದ ವರ್ಷ ಮೋಡ ಬಿತ್ತನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಮೋಡ ಬಿತ್ತನೆಗೆ ಎಲ್ಲಾ ರೀತಿಯ ತಯಾರಿಗಳು ನಡೆದಿವೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಹುಬ್ಬಳ್ಳಿ ಹಾಗೂ ಬೆಂಗಳೂರು ಕೇಂದ್ರಗಳ ಮೂಲಕ ಮೋಡ ಬಿತ್ತನೆ ಕಾರ್ಯವು ಜೂನ್ 15ರಿಂದ ಆರಂಭವಾಗಲಿದೆ ಎಂದರು.

    ಇದೇ ವೇಳೆ ಸಚಿವರು ಚಿಕ್ಕಬಳ್ಳಾಪುರ ಜಿಲ್ಲೆಯ ಅಧಿಕಾರಿಗಳೊಂದಿಗೆ ಬರ ಸಮಸ್ಯೆಗಳ ಕುರಿತು ಸಭೆ ನಡೆಸಿದರು.

  • ಮಕ್ಕಳ ದಸರಾ ಕಾರ್ಯಕ್ರಮದ ಉದ್ಘಾಟನಾ ವೇದಿಕೆಯಿಂದಲೇ ಹೊರನಡೆದ ಸಚಿವರು!

    ಮಕ್ಕಳ ದಸರಾ ಕಾರ್ಯಕ್ರಮದ ಉದ್ಘಾಟನಾ ವೇದಿಕೆಯಿಂದಲೇ ಹೊರನಡೆದ ಸಚಿವರು!

    ಮೈಸೂರು: ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಕೈ ಮಂತ್ರಿಗಳ ಹೆಸರನ್ನು ಪ್ರಸ್ತಾಪ ಮಾಡದಕ್ಕೆ ಸಮ್ಮಿಶ್ರ ಸರ್ಕಾರದ ಮೂವರು ಮಂತ್ರಿಗಳು ವೇದಿಕೆಯಿಂದಲೇ ಹೊರಡನಡೆದ ಪ್ರಸಂಗ ಇಂದು ನಡೆಯಿತು.

    ಮಕ್ಕಳ ದಸರಾ ಕಾರ್ಯಕ್ರಮ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಸಚಿವರಾದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ ಹಾಗೂ ಶಿವಶಂಕರ್ ರೆಡ್ಡಿ ಭಾಗವಹಿಸಿದ್ದರು. ಈ ವೇಳೆ ಅಧಿಕಾರಿಗಳು ಸಚಿವ ಶಿವಶಂಕರ್ ಅವರ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. ಇದರಿಂದ ಸಿಡಿಮಿಡಿಕೊಂಡ ಸಾ.ರಾ.ಮಹೇಶ್ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡರು. ಅಷ್ಟೇ ಅಲ್ಲದೇ ಉದ್ಘಾಟನೆ ನೆರವೇರುತ್ತಿದ್ದಂತೆ ಕಾರ್ಯಕ್ರಮದಿಂದ ಹೊರ ನಡೆದಿದ್ದಾರೆ.

    ಉದ್ಘಾಟನೆ ನೆರವೇರಿಸಿ, ನೀವೇ ಈ ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಸಾರಾ ಮಹೇಶ್, ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ತಕ್ಷಣವೇ ಕಾರ್ಯಕ್ರಮದಿಂದ ಮೂವರು ಸಚಿವರು ಹೊರ ನಡೆದು. ಸಚಿವರ ದಿಢೀರ್ ನಿರ್ಧಾರದಿಂದ ಕಾರ್ಯಕ್ರಮದಲ್ಲಿ ಕೆಲ ಹೊತ್ತು ಭಾರೀ ಗೊಂದಲ ಉಂಟಾಯಿತು. ಕ್ಷಣಾರ್ಧದಲ್ಲಿಯೇ ಉದ್ಘಾಟನೆ ಕಾರ್ಯಕ್ರಮ ಮುಕ್ತಾಯಗೊಂಡಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv