Tag: N chaluvaraya Swamy

  • ಪಾಪ ನಿಖಿಲ್ ಇನ್ನೂ ಯುವಕ, ಅವನಿಗೆ ವಿಚಾರ ಗೊತ್ತಿದ್ಯೋ, ಗೊತ್ತಿಲ್ವೋ?: ಚಲುವರಾಯಸ್ವಾಮಿ

    ಪಾಪ ನಿಖಿಲ್ ಇನ್ನೂ ಯುವಕ, ಅವನಿಗೆ ವಿಚಾರ ಗೊತ್ತಿದ್ಯೋ, ಗೊತ್ತಿಲ್ವೋ?: ಚಲುವರಾಯಸ್ವಾಮಿ

    ಮಂಡ್ಯ: `ಕಾಂಗ್ರೆಸ್ (Congress) ಕುಮಾರಣ್ಣಗೆ ನಾಲ್ಕು ಕಾಲುಗಳಿಲ್ಲದ ಕುದುರೆ ಕೊಟ್ರು’ ಎಂಬ ನಿಖಿಲ್ (Nikhil Kumaraswamy) ಹೇಳಿಕೆಗೆ ವ್ಯಂಗ್ಯವಾಡಿದ ಮಾಜಿ ಸಚಿವ ಚಲುವರಾಯಸ್ವಾಮಿ (N. Chaluvaraya Swamy), `ಪಾಪ ನಿಖಿಲ್ ಇನ್ನೂ ಯುವಕ, ಅವನಿಗೆ ವಿಚಾರ ಗೊತ್ತಿದ್ಯೋ, ಗೊತ್ತಿಲ್ವೋ? ಎಂದು ಕುಟುಕಿದ್ದಾರೆ.

    ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲೂಕಿನ ಡಿ.ಕೋಡಿಹಳ್ಳಿಯಲ್ಲಿ ಮಾತನಾಡಿದ ಅವರು, 37 ಸೀಟು ಗೆದ್ದ ಕುಮಾರಸ್ವಾಮಿ (HD Kumaraswamy) ಅವರನ್ನ ನಾವು ಮುಖ್ಯಮಂತ್ರಿ ಮಾಡಿದ್ದೆವು. 37 ಸೀಟ್ ಗೆದ್ದರೂ ಅದೇ ಸಿಎಂ ಸೀಟು, 120 ಸೀಟ್ ಗೆದ್ದರೂ ಅದೇ ಸಿಎಂ ಸೀಟು. ಕಾಂಗ್ರೆಸ್‌ಗೆ ಬೇಕಾಗಿದ್ದು ಬಿಜೆಪಿಯನ್ನು (BJP) ದೂರವಿಡುವುದಷ್ಟೇ ಅದಕ್ಕಾಗಿ ಕುಮಾರಸ್ವಾಮಿ ಅವರನ್ನ ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕುರಿತ ಹೇಳಿಕೆಗೆ ಅಶ್ವಥ್ ನಾರಾಯಣ್ ವಿಷಾದ

    5 ವರ್ಷಗಳೂ ಕುಮಾರಸ್ವಾಮಿ ಅವರೇ ಸಿಎಂ ಆಗಿ ಇರಬಹುದಿತ್ತು, ಒಳ್ಳೆಯ ಕೆಲಸ ಮಾಡಬಹುದಿತ್ತು. ಆದರೆ ಅವರ ಪಕ್ಷದ ಅಧ್ಯಕ್ಷರೇ ಪಕ್ಷ ಬಿಟ್ಟು ಹೋದರೆ ಅದಕ್ಕಿಂತ ಇನ್ನೇನು ಹೇಳೋಕೆ ಆಗುತ್ತೆ. ಚುನಾವಣೆ ಬಂದಿದೆ ಅಂತಾ ಹೀಗೆ ಹೇಳ್ತಾರೆ. ಆದರೆ ಹೆಚ್‌ಡಿಕೆಗೆ ಕಾಂಗ್ರೆಸ್ ನಿಂದ ಯಾವುದೇ ಅಡಚಣೆ ಆಗಿರಲಿಲ್ಲ, ಅದರ ಚರ್ಚೆಗೆ ಇದು ಸಂದರ್ಭವೂ ಅಲ್ಲ ಎಂದು ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತವರು ಜಿಲ್ಲೆಯಲ್ಲೇ ಸಿದ್ದರಾಮಯ್ಯಗೆ ಭಾರೀ ಅಪಮಾನ!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಒಕ್ಕಲಿಗ ಮತ ಸೆಳೆಯಲು JDS ಮೇಲೆ ಚೆಲುವರಾಯಸ್ವಾಮಿ ಸಾಫ್ಟ್ ಕಾರ್ನರ್

    ಒಕ್ಕಲಿಗ ಮತ ಸೆಳೆಯಲು JDS ಮೇಲೆ ಚೆಲುವರಾಯಸ್ವಾಮಿ ಸಾಫ್ಟ್ ಕಾರ್ನರ್

    ಮಂಡ್ಯ: ಒಂದು ಕಡೆ ರಾಹುಲ್ ಗಾಂಧಿಯ (Rahul Gandhi) ಭಾರತ್ ಜೋಡೋ ಯಾತ್ರೆಯಿಂದ (Bharat Jodo Yatra) ಮಂಡ್ಯ (Mandya) ಜಿಲ್ಲಾ ಕಾಂಗ್ರೆಸ್‍ಗೆ  (Congress) ಹೊಸ ಹುಮ್ಮಸ್ಸು ಮೂಡಿದ್ದು, ಒಕ್ಕಲಿಗ ಮತ ಬ್ಯಾಂಕ್ ಅನ್ನು ತನ್ನತ್ತ ಸೆಳೆದು ಜೆಡಿಎಸ್ (JDS) ಕೋಟೆಯನ್ನು ಛಿದ್ರ ಮಾಡುವ ತಂತ್ರವನ್ನು ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ (N. Chaluvaraya Swamy) ಹೆಣೆಯಲು ಮುಂದಾಗಿದ್ದಾರೆ.

    ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸಕ್ಕರೆ ನಾಡಿನಲ್ಲಿ ಮೂರು ದಿನ ಸಂಚರಿಸಿದ್ದು, ಹೋದ ಕಡೆಯಲೆಲ್ಲ ಅಭೂತ ಪೂರ್ವ ಬೆಂಬಲ ಸಿಕ್ಕಿದೆ. ಯಾತ್ರೆಯಲ್ಲಿ ಜನಸಾಗರಕ್ಕೆ ರಾಹುಲ್ ಸೇರಿದಂತೆ ರಾಜ್ಯ ನಾಯಕರ ದಂಗಾಗಿದ್ದಾರೆ. ಇದೇ ಬೆನ್ನಲ್ಲೇ ಇದೀಗ ಮಂಡ್ಯ ಜಿಲ್ಲಾ ಕಾಂಗ್ರೆಸ್ ಹೊಸ ಹುಮ್ಮಸ್ಸು ಮೂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಹೀನಾಯವಾಗಿ ಸೋತಿದ್ದ ಕಾಂಗ್ರೆಸ್‍ಗೆ ಮತ್ತೆ ಪುಟಿದೇಳುವ ಆತ್ಮವಿಶ್ವಾಸ ಮೂಡಿದೆ. ಇದನ್ನೂ ಓದಿ: ನಾನು ನಿಷ್ಠಾವಂತ ಭಕ್ತ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಕೇಜ್ರಿವಾಲ್

    ಈ ಯಾತ್ರೆಯಿಂದ ಒಂದು ರೀತಿ ಕಾಂಗ್ರೆಸ್‍ಗೆ ಬೂಸ್ಟರ್ ಡೋಸ್ ಲಸಿಕೆ ಸಿಕ್ಕಂತಾಗಿದ್ದು, ಮುಂದಿನ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕೈದು ಸ್ಥಾನ ಗೆಲ್ಲುವ ವಿಶ್ವಾಸ ಕಾಂಗ್ರೆಸ್ ನಾಯಕರಲ್ಲಿ ಮೂಡಿದೆ. ಇದರ ಪ್ಲಾನ್ ವರ್ಕೌಟ್ ಆಗಬೇಕು ಅಂದ್ರೆ ಒಕ್ಕಲಿಗರ ಮತಗಳನ್ನು ತನ್ನತ್ತ ಸೆಳೆಯಲೇ ಬೇಕಿರುವ ಅನಿವಾರ್ಯತೆ ಕೂಡ ಕಾಂಗ್ರೆಸ್‍ಗೆ ಇದೆ. ಇದನ್ನೂ ಓದಿ: ಕಾಂಡೋಮ್‍ಗಳನ್ನು ಹೆಚ್ಚಾಗಿ ಬಳಸ್ತಿರೋದು ನಾವು – ಭಾಗವತ್‍ಗೆ ಓವೈಸಿ ತಿರುಗೇಟು

    ಹಾಗಾಗಿ ಚೆಲುವರಾಯಸ್ವಾಮಿ ಸದಾ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡ (DeveGowda) ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ (H.D Kumaraswamy) ಮೇಲೆ ಫುಲ್ ಸಾಫ್ಟ್‌ ಕಾರ್ನರ್ ಹೊಂದಿದ್ದಾರೆ. ಮಂಡ್ಯದಲ್ಲಿ ಒಕ್ಕಲಿಗರು ದೇವೇಗೌಡರನ್ನು ಮರೆಯಲ್ಲ ಎಂಬ ಮಾಜಿ ಸಿಎಂ ಹೆಚ್‍ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೆಲುವರಾಯಸ್ವಾಮಿ, ದೇವೇಗೌಡರು ನಮ್ಮ ನಾಯಕರೇ, ನಾನು ಅವರ ಬಗ್ಗೆ ಲಘುವಾಗಿ ಮಾತನಾಡಲ್ಲ. ಕುಮಾರಸ್ವಾಮಿಯವರು ಮಾಜಿ ಮುಖ್ಯಮಂತ್ರಿಗಳು. ಅವರು ಕೂಡ ದೊಡ್ಡವರು. ಅವರ ಬಗ್ಗೆ ಮಾತಾಡೋದು ಬೇಡ ಎನ್ನುವ ಜೆಡಿಎಸ್ ನಾಯಕರ ವಿರುದ್ಧ ಮಾತನಾಡಲು ಹಿಂದೇಟು ಹಾಕ್ತಿದ್ದಾರೆ. ಅಲ್ಲದೇ ನಮ್ಮ ಜಿಲ್ಲೆಯ ಜನರ ಮೇಲೆ ನಂಬಿಕೆ ಇದೆ. ತಮ್ಮ ಮಕ್ಕಳನ್ನು ಜಿಲ್ಲೆಯ ಜನರು ಪ್ರೀತಿಸುತ್ತಾರೆ ಎನ್ನುವ ಮೂಲಕ ಜಿಲ್ಲೆಯ ಒಕ್ಕಲಿಗರು ನನ್ನ ನಾಯಕತ್ವದ ಪಕ್ಷವನ್ನು ಬೆಂಬಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಸಾಫ್ಟ್‌ ಮಾತುಗಳಿಂದ ಇದ್ದರಷ್ಟೇ ಒಕ್ಕಲಿಗರು ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂಬ ಸೂಕ್ಷ್ಮತೆ ಅರಿತಿದ್ದಾರೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಹೊಸ ಯೋಚನೆಗಳು ಬಜೆಟ್‌ನಲ್ಲಿ ಇಲ್ಲ: ಚಲುವರಾಯಸ್ವಾಮಿ

    ಹೊಸ ಯೋಚನೆಗಳು ಬಜೆಟ್‌ನಲ್ಲಿ ಇಲ್ಲ: ಚಲುವರಾಯಸ್ವಾಮಿ

    ಮಂಡ್ಯ: ರಾಜ್ಯಸರ್ಕಾರದ ಬಜೆಟ್ ನೀರಸ ಬಜೆಟ್ ಆಗಿದ್ದು, ಯಾವುದೇ ಹೊಸ ಯೋಚನೆಗಳು, ಆಲೋಚನೆಗಳು ಇದರಲ್ಲಿ ಕಾಣುತ್ತಿಲ್ಲ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಇಂದಿನ ಬಜೆಟ್ ಮೇಲೆ ರೈತರು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಅವೆಲ್ಲವೂ ಈ ಸರ್ಕಾರ ಹುಸಿಗೊಳಿಸಿದೆ. ಮಂಡ್ಯ ಜಿಲ್ಲೆಗೆ ಈ ಬಜೆಟ್‍ನಿಂದ ಯಾವುದೇ ರೀತಿಯಾದ ಉಪಯೋಗವಾಗಿಲ್ಲ ಎಂದು ಟೀಕಿಸಿದರು.

    ಮೈಸೂರು ಸಕ್ಕರೆ ಕಾರ್ಖಾನೆಗೆ ನೀಡಿರುವ 50 ಕೋಟಿ ರೂ. ಅನುದಾನ ಸಾಲದು, ಮುಖ್ಯಮಂತ್ರಿಗಳು ಇದರ ಬಗ್ಗೆ ಪರಾಮರ್ಶಿಸಿ ಅನುದಾನವನ್ನು ಹೆಚ್ಚಿಸಬೇಕು. ರೈತರ ಆರ್ಥಿಕ ಪರಿಸ್ಥಿತಿ ಹಾಗೂ ಜೀವನಮಟ್ಟವನ್ನು ಸುಧಾರಿಸವಂತಹ ಯಾವುದೇ ಯೋಜನೆಗಳನ್ನೂ ಘೋಷಿಸದೇ ಇರುವುದು ನಿರಾಸೆ ತಂದಿದೆ. ಬೆಂಬಲ ಬೆಲೆ ಬಗ್ಗೆಯೂ ಯಾವುದೇ ಪ್ರಸ್ತಾಪ ಮಾಡಿಲ್ಲ. ನಮ್ಮದು ರೈತಪರ ಸರ್ಕಾರ ಎಂದು ಹೇಳಿದರೆ ಸಾಲದು ಅದರಂತೆ ನಡೆಯಬೇಕು ಎಂದು ವಾಗ್ದಾಳಿ ನಡೆಸಿದರು.  ಇದನ್ನೂ ಓದಿ: ಸರ್ವ ವ್ಯಾಪಿ ಸರ್ವ ಸ್ಪರ್ಶಿ ಬಜೆಟ್: ಆರ್. ಅಶೋಕ್

    ಹವಾಮಾನ ವೈಪರೀತ್ಯ, ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಂದರ್ಭದಲ್ಲಿ ಬೆಳೆ ನಷ್ಟಕ್ಕೆ ಒಳಗಾಗುವ ರೈತರಿಗೆ ಕೆಲವು ಸಂದರ್ಭದಲ್ಲಿ ತಾವು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುವುದಿಲ್ಲ. ಹೀಗೆ ಬೆಲೆ ಕುಸಿತವಾದ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಇದಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು. ಹೀಗಾಗಿ ಸರ್ಕಾರ ಬೆಂಬಲ ಬೆಲೆಗೆ ಹಣವನ್ನು ಘೋಷಣೆ ಮಾಡಬೇಕಿದೆ. ಅಲ್ಲದೆ ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಪಟ್ಟಂತೆ ನಡೆಯುವ ಅವಘಡಗಳಿಗೆ ನಿಧಿ ಸ್ಥಾಪನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಆದರೂ ಗಮನ ಹರಿಸಲಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಬರೀ ಪುಸ್ತಕದ ಲೆಕ್ಕಾಚಾರದ ಜೊಳ್ಳು ಬಜೆಟ್: ಶರವಣ

  • ಮಂಡ್ಯ ಕ್ಷೇತ್ರವನ್ನ ಜೆಡಿಎಸ್‍ಗೆ ಕೊಡಬೇಕು ಅನ್ನೋದು ಕಾನೂನೇನು ಆಗಿಲ್ಲ: ಚಲುವರಾಯಸ್ವಾಮಿ

    ಮಂಡ್ಯ ಕ್ಷೇತ್ರವನ್ನ ಜೆಡಿಎಸ್‍ಗೆ ಕೊಡಬೇಕು ಅನ್ನೋದು ಕಾನೂನೇನು ಆಗಿಲ್ಲ: ಚಲುವರಾಯಸ್ವಾಮಿ

    ಮಂಡ್ಯ: ಲೋಕಸಭೆಗೆ ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಪಕ್ಷ ಹಾಗೂ ಕಾರ್ಯಕರ್ತರ ಹಿತ ದೃಷ್ಟಿಯಿಂದ ಜಿಲ್ಲೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳದಿರುವುದು ಒಳ್ಳೆಯದು ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

    ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಅಭ್ಯರ್ಥಿಯಾಗಲ್ಲ. ಆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಚುನಾವಣಾ ಆಯೋಗ ನಿನ್ನೆಯಷ್ಟೇ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ನಮ್ಮ ಪಕ್ಷದ ಮುಖಂಡರು ಇನ್ನು ಸಭೆ ಕರೆದಿಲ್ಲ. ಪಕ್ಷದ ಮುಖಂಡರು ಈ ಕುರಿತು ತೀರ್ಮಾನ ಮಾಡುತ್ತಾರೆ. ಆದರೆ ಕ್ಷೇತ್ರದ ಜನರ ಅಭಿಪ್ರಾಯವನ್ನು ನಾನು ಮುಖಂಡರಿಗೆ ತಿಳಿಸುತ್ತೇನೆ ಎಂದರು.

    ದೇವೇಗೌಡರೇ ಹೇಳಿರುವಂತೆ ಹೊಂದಾಣಿಕೆ ಅನ್ನುವುದು ವಿಧಾನಸೌಧಕ್ಕೆ ಮಾತ್ರ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೇ ಈ ಹಿಂದೆ ನಡೆದ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಅವರೇ ಮುಂದೆ ನಿಂತು ಪ್ರಚಾರ ಮಾಡಿದ್ದಾರೆ. ಅಲ್ಲದೇ ಸ್ನೇಹಯುತ ಸ್ಪರ್ಧೆ ಮಾಡುವುದರಿಂದ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ. ಜಿಲ್ಲೆಯಲ್ಲಿ 7 ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇದ್ದರೂ ಕೂಡ ಕಾಂಗ್ರೆಸ್ ಪಕ್ಷ ಹೋರಾಟ ಮಾಡಲಿದೆ. ಚುನಾವಣೆಯಲ್ಲಿ ಯಾರೇ ಗೆದ್ದರೂ 5 ರಿಂದ 10 ಸಾವಿರ ಮತಗಳ ಅಂತರದಿಂದ ಗೆಲ್ಲಬಹುದು ಅಷ್ಟೇ ಎಂದು ತಿಳಿಸಿದರು.

    ಜೆಡಿಎಸ್ ಮುಖಂಡರ ವಿರುದ್ಧ ಅಕ್ರೋಶ: ಕಾಂಗ್ರೆಸ್ ಅವರು 80 ಜನ ಇಟ್ಟುಕೊಂಡು ನಮಗೆ ಮುಖ್ಯಮಂತ್ರಿ ಕೊಟ್ಟಿದ್ದಾರೆ ಎಂಬ ನಡವಳಿಕೆ ವಿಧಾನಸೌಧದಲ್ಲೂ ನಡೆಯುತ್ತಿಲ್ಲ, ರಾಜ್ಯದಲ್ಲೂ ನಡೆಯುತ್ತಿಲ್ಲ. ಪಕ್ಷ ತೀರ್ಮಾನ ಮಾಡಿದೆ ಎಂದು ನಾವು ಎಲ್ಲೂ ಮಾತನಾಡುತ್ತಿಲ್ಲ ಎಂದು ಜೆಡಿಎಸ್ ಪಕ್ಷದ ನಡವಳಿಕೆ ವಿರುದ್ಧ ಆಕ್ರೋಶ ಹೊರಹಾಕಿದರು.

    ಕ್ಷೇತ್ರದ ಜನ ಮತ್ತು ಕಾರ್ಯಕರ್ತರು ಹೊಂದಾಣಿಕೆ ಬೇಡ ಎನ್ನುತ್ತಿದ್ದಾರೆ. ಆದರೆ ಮೈತ್ರಿ ಬಗ್ಗೆ ಅಂತಿಮವಾಗಿ ಪಕ್ಷದ ವರಿಷ್ಠರು ನಿರ್ಧಾರ ಮಾಡಲಿದ್ದಾರೆ. ಮಂಡ್ಯ ಕ್ಷೇತ್ರವನ್ನ ಜೆಡಿಎಸ್‍ಗೆ ಕೊಡಬೇಕು ಎಂಬ ಕಾನೂನು ಆಗಿಲ್ಲ. ಜೆಡಿಎಸ್ ಅವರು ಕೇಳುವುದು ಮಾಮೂಲಿ ಕೇಳುತ್ತಾರೆ. ಪಕ್ಷ ಹಾಗೂ ಕಾರ್ಯಕರ್ತರ ಹಿತ ದೃಷ್ಟಿಯಿಂದ ಹೊಂದಾಣಿಕೆ ಅಗತ್ಯವಿಲ್ಲ ಎಂಬುವುದು ನನ್ನ ಅಭಿಪ್ರಾಯ.

    ಇದೇ ವೇಳೆ ಚುನಾವಣಾ ಆಯೋಗದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸಂವಿಧಾನ ಪೀಠದಲ್ಲಿರುವವರು ನೈಸರ್ಗಿಕ ನ್ಯಾಯದ ಬಗ್ಗೆಯೂ ಚಿಂತನೆ ಮಾಡಬೇಕು. ಚುನಾವಣೆ 6 ತಿಂಗಳಿಗಿಂತ ಹೆಚ್ಚು ದಿನ ಖಾಲಿ ಇರಬಾರದು ಎಂದಿದೆ. ಈಗಿನ ಚುನಾವಣೆ ಘೋಷಣೆ ಪ್ರಕಾರ ಡಿಸೆಂಬರ್ 12 ಕ್ಕೆ ಫಲಿತಾಂಶ ಬರುತ್ತದೆ. ಆಗಿನಿಂದ ಮಾರ್ಚ್ ವರೆಗೆ ಮಾತ್ರ ಸಂಸದರಾಗಿರುತ್ತಾರೆ. ಆದ್ದರಿಂದ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಇದ್ದಾಗ ಮತ್ತು ಅಗತ್ಯ ಇರುವ ಕಡೆ ಮಾತ್ರ ಚುನಾವಣೆ ನಡೆಸುವ ಬಗೆಗೆ ಸಂವಿಧಾನ ತಿದ್ದುಪಡಿ ಮಾಡಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv