Tag: N. A. Haris

  • ಅಲ್ಲಿ ಪ್ರವಾಹ ಆಗಿಲ್ಲ, ಆ ಮೋರಿ ಎಲ್ಲಿದೆ, ಎಲ್ಲಿಗೆ ಹೋಗಿ ತಲುಪುತ್ತೆ ಗೊತ್ತಿಲ್ಲ: ಹ್ಯಾರಿಸ್

    ಅಲ್ಲಿ ಪ್ರವಾಹ ಆಗಿಲ್ಲ, ಆ ಮೋರಿ ಎಲ್ಲಿದೆ, ಎಲ್ಲಿಗೆ ಹೋಗಿ ತಲುಪುತ್ತೆ ಗೊತ್ತಿಲ್ಲ: ಹ್ಯಾರಿಸ್

    ಬೆಂಗಳೂರು: ನಮಗೆ ನೋಟಿಸ್ ಕೊಡದೇ ನಲಪಾಡ್ ಅಕಾಡೆಮಿ(Nalapad Academy)  ಒತ್ತುವರಿ ತೆರವು ಮಾಡುತ್ತಿದ್ದಾರೆ. ಆ ಜಾಗದಲ್ಲಿ ಮೋರಿ ಎಲ್ಲಿದೆ, ಎಲ್ಲಿಗೆ ಹೋಗಿ ತಲುಪುತ್ತೆ ಎನ್ನುವುದು ಗೊತ್ತಿಲ್ಲ ಎಂದು ಶಾಂತಿನಗರದ ಕಾಂಗ್ರೆಸ್‌ ಶಾಸಕ ಎನ್.ಎ.ಹ್ಯಾರಿಸ್(N A Haris) ಕಿಡಿಕಾರಿದರು.

    ಬಿಬಿಎಂಪಿ(BBMP) ನಲಪಾಡ್ ಅಕಾಡೆಮಿ ಒತ್ತುವರಿ ತೆರವು ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮಗೆ ನೋಟಿಸ್ ಕೊಡದೆ ಬಂದಿದ್ದಾರೆ. ಕಟ್ಟಡವನ್ನು ಕೆಡಗದಿರಲು ಅಡ್ಡ ನಿಂತರೆ ಅಡ್ಡ ನಿಂತ್ವಿ ಅಂತೀರ. ನಿಂತಿಲ್ಲ ಎಂದರೂ ಪ್ರಶ್ನೆ ಮಾಡುತ್ತೀರಿ ಎಂದ ಅವರು, ಈ ದೇಶದಲ್ಲಿ ಕಾನೂನು ಇದೆ. ನೋಡೋಣ ಅವರು ಏನು ಮಾಡುತ್ತಾರೆ ಅಂತ ಅವರು ನೋಟಿಸ್ ಕೊಡಬಹುದಿತ್ತು. ಜಂಟಿ ಸರ್ವೇ ಮಾಡಬಹುದುದಿತ್ತು. ಅಲ್ಲೇನು ಪ್ರವಾಹ ಬಂದಿಲ್ಲ. ಆದರೆ ಮುಂದೆ ಬರಬಹುದು ತೆರವಿಗೆ ಮುಂದಾಗಿರಬಹುದು ಎಂದರು.

    ಆ ಮೋರಿ ಎಲ್ಲಿದೆ, ಎಲ್ಲಿಗೆ ಹೋಗಿ ತಲುಪುತ್ತೆ ಗೊತ್ತಿಲ್ಲ. ನಮಗೆ ನೋಟಿಸ್ ಕೂಡ ಕೊಡದೇ ತೆರವು ಮಾಡ್ತಿದ್ದಾರೆ. ಕಾನೂನು ಇದೆ ದೇಶದಲ್ಲಿ. ಇದು ನನ್ನ ಪ್ರಾಪರ್ಟಿ, ಸರ್ಕಾರದ ಆಸ್ತಿ ಅಲ್ಲ. ಇಲ್ಲಿ ಪ್ರವಾಹ ಆಗಿಲ್ಲ, ಪ್ರವಾಹ ಆಗಿರೋ ಕಡೆ ತೆರವು ಮಾಡ್ತಿಲ್ಲ. ದಾಖಲೆ ಕೊಡಬೇಕಲ್ವಾ? ನಾನು ಒಬ್ಬ ಶಾಸಕ. ಅದರ ಬಗ್ಗೆ ಮಾತನಾಡಲ್ಲ. ಆದರೆ ನಾನೊಬ್ಬ ಸಾಮಾನ್ಯ ಪ್ರಜೆ ಆಗಿ ಮಾತಾಡುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

    ಚಲ್ಲಘಟ್ಟದಲ್ಲಿ ರಾಜಕಾಲುವೆ ಮೇಲೆ ಶಾಸಕ ಎನ್.ಎ. ಹ್ಯಾರೀಸ್ ಮಾಲಿಕತ್ವದ ನಲ್ಪಾಡ್ ಅಕಾಡೆಮಿ ನಿರ್ಮಾಣ ಮಾಡಲಾಗಿದೆ. ಇದರ ತೆರವಿಗೆ ಇಂದು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದರು. ಆದರೆ ಆಳುವ ಮಂದಿಯ ಒತ್ತಡದ ಕಾರಣ ಹಿಡಿದ ಕೆಲಸ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಆಗಲಿಲ್ಲ. ಮೂರ್ಮೂರು ಬಾರಿ ಅಡ್ಡಿ, ಅಡೆತಡೆ ಉಂಟಾಯಿತು. ಮೊದಲು ಹ್ಯಾರಿಸ್‌ ಪಿಎ ಬಂದು ಅಧಿಕಾರಿಗಳಿಗೆ ಅವಾಜ್ ಹಾಕಿದರು. ನಂತರ ಯುವ ಕಾಂಗ್ರೆಸ್ ಅಧ್ಯಕ್ಷ ನಲ್ಪಾಡ್ ಬಂದು ಅಧಿಕಾರಿಗಳ ಮೇಲೆ ಒತ್ತಡ ಹೇರಿದರು. ಹೀಗಾಗಿ ಇವತ್ತು ಅರ್ಧ ತೆರವಷ್ಟೇ ಆಯಿತು. ಇದನ್ನೂ ಓದಿ: ಮೊಟ್ಟೆ ಎಸೆದ್ರೆ ನೀವೇನು ವೀರರಾ ಶೂರರಾ? ಇದಕ್ಕೆಲ್ಲಾ ಹೆದರೋ ಮಕ್ಕಳಲ್ಲ: ಸಿದ್ದು ಸಿಡಿಮಿಡಿ

    Live Tv
    [brid partner=56869869 player=32851 video=960834 autoplay=true]

  • ಯಾವುದೇ ಕಾಯಿನ್ ವಿಚಾರಕ್ಕೂ, ನನ್ನ ಮಗನಿಗೂ ಸಂಬಂಧ ಇಲ್ಲ: ಎನ್.ಎ.ಹ್ಯಾರಿಸ್

    ಯಾವುದೇ ಕಾಯಿನ್ ವಿಚಾರಕ್ಕೂ, ನನ್ನ ಮಗನಿಗೂ ಸಂಬಂಧ ಇಲ್ಲ: ಎನ್.ಎ.ಹ್ಯಾರಿಸ್

    ಬೆಂಗಳೂರು: ಯಾವುದೇ ಕಾಯಿನ್ ವಿಚಾರಕ್ಕೂ ನನ್ನ ಮಗ ಉಮರ್ ನಲಪಾಡ್‍ಗೂ ಸಂಬಂಧ ಇಲ್ಲ ಎಂದು ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಹೇಳಿದ್ದಾರೆ.

    ಬಿಟ್ ಕಾಯಿನ್ ವಿಚಾರದಲ್ಲಿ ನಲಪಾಡ್ ಶಾಮೀಲಾಗಿದ್ದು ಈ ವಿಚಾರವಾಗಿ ನಲಪಾಡ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯ ಈ ಕುರಿತಂತೆ ಮಾಧುಮದವರೊಂದಿಗೆ ಮಾತನಾಡಿದ ಹ್ಯಾರಿಸ್ ಅವರು, ಇದೆಲ್ಲಾ ಸುಳ್ಳು ಸುದ್ದಿಯಾಗಿದೆ. ನಮಗೆ ಆಗದೇ ಇರುವವರು ನಲಪಾಡ್ ವಿರೋಧಿಗಳು ಬೇಕಂತಲೇ ಈ ರೀತಿಯ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಜನವರಿಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನಲಪಾಡ್ ವಹಿಸಿಕೊಳ್ಳುತ್ತಿದ್ದಾನೆ. ಇದಕ್ಕಾಗಿ ವಿರೋಧ ಪಕ್ಷದವರು ಮಾಡಿರುವ ತಂತ್ರ ಇರಬಹುದು. ಇಲ್ಲ ನಮ್ಮ ಪಕ್ಷದವರೇ ಷಡ್ಯಂತ್ರ್ಯ ಮಾಡಿರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೆಲ್ಫಿ ತೆಗೆದುಕೊಳ್ಳುವಾಗ ಬಂಡೆಯಿಂದ‌ ಜಾರಿ‌ ನದಿಗೆ ಬಿದ್ದ ಯುವಕ ಕಣ್ಮರೆ!

    ಯಾವುದೋ ಒಂದು ಕೇಸ್ ಆಯಿತು ಅಂತ ಎಲ್ಲದಕ್ಕೂ ಅವನ ಹೆಸರನ್ನು ಜೋಡಿಸಲಾಗುತ್ತಿದೆ. ನಲಪಾಡ್ ಈಗ ಸಾಮಾಜಿಕ ಕೆಲಸದಲ್ಲಿ ತೊಡಗಿದ್ದಾನೆ. ಯಾವುದೇ ಕಾಯಿನ್ ವಿಚಾರಕ್ಕೂ ನಲಪಾಡ್‍ಗೂ ಸಂಬಂಧ ಇಲ್ಲ. ನಾವು ನಮ್ಮ ಬ್ಯುಸಿನೆಸ್ ನೋಡಿಕೊಂಡು ಇದ್ದೇವೆ. ಈ ತರ ತುಳಿಯುವ ಯತ್ನ ಮಾಡಬಾರದು. ಇಡಿ ನೋಟಿಸ್ ಕೊಡುವುದು ಯಾವತ್ತು ಯಾರಿಗೂ ಗೊತ್ತಾಗುವುದಿಲ್ಲ. ಮಾಧ್ಯಮದವರಿಗೆ ಯಾರೋ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – ಹ್ಯಾರಿಸ್, ಲಮಾಣಿ ಪುತ್ರರ ಹೆಸರು ಹೇಳಿರೋ ಹ್ಯಾಕರ್ ಶ್ರೀಕಿ

    ಶ್ರೀಕಿ ನಲಪಾಡ್‍ಗೆ ಫ್ರೆಂಡೋ ಇಲ್ಲವೂ ಎಂಬುವುದು ಗೊತ್ತಿಲ್ಲ. ನಲಪಾಡ್ ಎಲ್ಲಾ ಸ್ನೇಹಿತರು ನನಗೆ ಗೊತ್ತಿಲ್ಲ. ನನಗೆ ಗೊತ್ತಿರುವ ಪ್ರಕಾರ ನನ್ನ ಮಗ ಯಾವುದೇ ಕಾಯಿನ್ ವ್ಯವಹಾರ ಮಾಡಿಲ್ಲ. ನಲಪಾಡ್ ವಿರುದ್ಧ ಕುತಂತ್ರ ಮಾಡಲಾಗುತ್ತಿದೆ. ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಿಚಾರಕ್ಕೆ ಇದೆಲ್ಲಾ ನಡೆಯುತ್ತಿದೆ. ಸಿಎಲ್‍ಪಿ ಲೀಡರ್ ಮತ್ತು ನಮ್ಮ ನಾಯಕರಿಗೆ ಷಡ್ಯಂತ್ರ ವಿಚಾರ ಗೊತ್ತು ಎಂದು ತಿಳಿಸಿದ್ದಾರೆ.

  • ಶಾಸಕನ ಮಗನ ಬರ್ತ್‍ಡೇಗೆ ಹೆಲಿಕಾಪ್ಟರ್ ತರಿಸ್ತಾರಂತೆ!

    ಶಾಸಕನ ಮಗನ ಬರ್ತ್‍ಡೇಗೆ ಹೆಲಿಕಾಪ್ಟರ್ ತರಿಸ್ತಾರಂತೆ!

    – ಇದು ಚರಿತ್ರೆ ಸೃಷ್ಟಿಸುವ ಹುಟ್ದಬ್ಬ

    ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಮಗನ ಹುಟ್ಟುಹಬ್ಬ ಅದ್ಧೂರಿಯಾಗಿ ನಡೆಯಲಿದ್ದು, ಮೊಹಮದ್ ನಲಪಾಡ್ ಬರ್ತ್ ಡೇಗೆ ಹೆಲಿಕಾಪ್ಟರ್ ತರಲಾಗುತ್ತಿದೆ.

    ಹೌದು, ಆಗಸದಲ್ಲಿ ಹೆಲಿಕಾಪ್ಟರ್ ನಲ್ಲಿ ಹಂಗೆ ಹೂವಿನ ಮಳೆ ಬರುತ್ತಿರಬೇಕು. ಹಾಗೆಯೇ ನಮ್ಮಣ್ಣ ಕೇಕ್ ಕಟ್ ಮಾಡಬೇಕು ಅನ್ನೋ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಇದು ಚರಿತ್ರೆ ಸೃಷ್ಟಿಸೋ ಅವತಾರ ಎಂದು ಬರುತ್ತದೆ. ಹಾಗೆಯೇ ಇದು ಚರಿತ್ರೆ ಸೃಷ್ಟಿಸೋ ಹುಟ್ದಬ್ಬ ಆಗಬೇಕು ಅಂತ ಶಾಸಕರ ಪುತ್ರನ ಗೆಳೆಯರೆಲ್ಲ ಸೇರಿ ತೀರ್ಮಾನ ಮಾಡಿದ್ದಾರೆ.

    ನಲಪಾಡ್ ಹುಟ್ಟುಹಬ್ಬ ಆಚರಣೆಗೆ ಈ ರೀತಿ ಅದ್ಧೂರಿಯಾಗಿ ಪ್ಲಾನ್ ಮಾಡಲಾಗಿದೆ. ಜನವರಿ 31ರಂದು ಮೋಟಪ್ಪನ ಪಾಳ್ಯದಲ್ಲಿ ಹಿಂಗೆ ಹೆಲಿಕಾಪ್ಟರ್‍ನಲ್ಲಿ ಹೂವಿನ ಮಳೆಗೈದು, ಹುಟ್ಟುಹಬ್ಬ ಆಚರಣೆಗೆ ಸಜ್ಜಾಗಿದ್ದಾರೆ. ಇದಕ್ಕಾಗಿ ಆಮಂತ್ರಣ ಪತ್ರಿಕೆ ಕೂಡ ರೆಡಿ ಮಾಡಿದ್ದು ಇದನ್ನು ಆಯೋಜನೆ ಮಾಡಿದ್ದಾರೆ.