Tag: Myuru

  • ಕಾಂಗ್ರೆಸ್‍ನಿಂದಲೇ ಎಲ್ಲರೂ ಸ್ವಾತಂತ್ರ್ಯ ಗಾಳಿ ಸೇವಿಸುತ್ತಿರುವುದು: ಸಿದ್ದರಾಮಯ್ಯ

    ಕಾಂಗ್ರೆಸ್‍ನಿಂದಲೇ ಎಲ್ಲರೂ ಸ್ವಾತಂತ್ರ್ಯ ಗಾಳಿ ಸೇವಿಸುತ್ತಿರುವುದು: ಸಿದ್ದರಾಮಯ್ಯ

    ಮೈಸೂರು: ಕಾಂಗ್ರೆಸ್‍ನಿಂದಲೇ ಎಲ್ಲರೂ ಸ್ವಾತಂತ್ರ್ಯ ಗಾಳಿ ಸೇವಿಸುತ್ತಿರುವುದು. ಮೋದಿ ಪಿಎಂ ಆಗಿದ್ದು ಕೂಡ ಕಾಂಗ್ರೆಸ್ ಕೊಟ್ಟ ಸಂವಿಧಾನದಿಂದ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಮೈಸೂರಿನ ವರುಣಾ ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಸ್ವಾತಂತ್ರ್ಯ ಹೋರಾಟಕ್ಕೆ ಆರ್ ಎಸ್ ಎಸ್ ಕೊಡುಗೆ ಏನು..?, ಬ್ರಿಟಿಷರಿಗೆ ಕ್ಷಮದಾನ ಪತ್ರ ಬರೆದ ಸವಾರ್ಕರ್ ಈಗ ಆರ್ ಎಸ್ ಎಸ್ ಬಿಜೆಪಿ ಪಾಲಿಗೆ ವೀರ ಸಾವರ್ಕರ್. ತ್ರಿವರ್ಣ ಧ್ವಜಕ್ಕೆ ವಿರೋಧ ಮಾಡಿದ್ದು ಆರ್‍ಎಸ್‍ಎಸ್. ಈಗ ಬಿಜೆಪಿ ಯವರು ಹರ್ ಘರ್ ತಿರಂಗಾ ಅಂತಾ ನಾಟಕ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಆರ್ ಎಸ್ ಎಸ್ ನವರಿಗೆ ರಾಷ್ಟ್ರ ಧ್ಚಜದ ಮೇಲೆ ಗೌರವವಿದೆಯಾ?. ನಾಚಿಕೆ ಆಗಲ್ವಾ ಮೋದಿ? ಹರ್ ಘರ್ ತಿರಂಗಾ ಅನ್ನೋಕೆ. ಬಿಜೆಪಿ ಗೆ ಕನಸು ಮನಸ್ಸಿನಲ್ಲೂ ಮತ ಹಾಕಬೇಕಾ?. ಬಿಜೆಪಿ, ಸಂಘ ಪರಿವಾರದವರು ಈ ದೇಶದ ಪರವಾಗಿ ಇರಲ್ಲ. ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರ ಗೀತೆ ಕಾಂಗ್ರೆಸ್ ಕೊಟ್ಟ ಕೊಡುಗೆ ಎಂದು ಸಿದ್ದರಾಮಯ್ಯ ಹೇಳಿದರು. ಇದನ್ನೂ ಓದಿ: ಆರೋಗ್ಯ ಸೇತು ಕಾರ್ಯ ನಿರ್ವಹಿಸುತ್ತಿಲ್ಲ – ವೈಯಕ್ತಿಕ ಮಾಹಿತಿಗಳ ಕತೆಯೇನು?

    ಜೆಡಿಎಸ್ ನವರ ಬಗ್ಗೆ ಮಾತಾಡಲ್ಲ. ಅವರು ಒಂಥಾರ ಗಿರಾಕಿಗಳು. ಬಿಜೆಪಿಯಿಂದ ಸಬ್ ಕಾ ವಿಕಾಸ್ ನಹೀ ಹೇ ಸಬ್ ಕಾ ಸರ್ವನಾಶ್. ನಾನು ಸ್ವಾತಂತ್ರ್ಯ ಬರುವುದಕ್ಕಿಂತಾ 12 ದಿನ ಮುಂಚೆ ಹುಟ್ಟಿದ್ದೇನೆ. ಹಾಗಂತಾ ಮೇಷ್ಟ್ರು ಬರೆದು ಕೊಂಡವ್ವನೇ ಮೋದಿಯೂ ಕೂಡ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಗಿರಾಕಿ ಎಂದು ತಿಳಿಸಿದರು.

    ರಾಜ್ಯದಲ್ಲಿ 20 ಅಣೆಕಟ್ಟು ಕಟ್ಟಿದ್ದು ಕಾಂಗ್ರೆಸ್. ಒಂದು ಅಣೆಕಟ್ಟು ಕಟ್ಟಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್. ಐದು ಅಣೆಕಟ್ಟು ಕಟ್ಟಿದ್ದು ಬ್ರಿಟಿಷರು. ಬಿಜೆಪಿ ಕೊಡುಗೆ ಏನು ಹಾಗಾದರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇದನ್ನೂ ಓದಿ: ಈದ್ಗಾ ಯಾರ ಪಿತ್ರಾರ್ಜಿತ ಆಸ್ತಿಯೂ ಅಲ್ಲ: ಮುತಾಲಿಕ್

    Live Tv
    [brid partner=56869869 player=32851 video=960834 autoplay=true]

  • ಸಿದ್ದು, ಡಿಕೆಶಿಯನ್ನು ತೆಗಳಿ, ಖರ್ಗೆ, ಹರಿಪ್ರಸಾದ್‌ರನ್ನು ಹೊಗಳಿದ  ಈಶ್ವರಪ್ಪ

    ಸಿದ್ದು, ಡಿಕೆಶಿಯನ್ನು ತೆಗಳಿ, ಖರ್ಗೆ, ಹರಿಪ್ರಸಾದ್‌ರನ್ನು ಹೊಗಳಿದ ಈಶ್ವರಪ್ಪ

    ಮೈಸೂರು: ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಇಬ್ಬರೂ ಸೇರಿ ಕಾಂಗ್ರೆಸ್‍ಗೆ ಜಾತಿಯ ಕೆಸರು ಅಂಟಿಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ

    ಇಂದು ಆಷಾಢ ಮಾಸದ ಕೊನೆಯ ಶುಕ್ರವಾರ. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮುಂಜಾನೆಯಿಂದಲೇ ಭಕ್ತಸಾಗರ ಹರಿದು ಬರುತ್ತಿದೆ. ಈ ನಡುವೆ ಕೆ.ಎಸ್.ಈಶ್ವರಪ್ಪ ಅವರು ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಇಬ್ಬರೂ ಸೇರಿ ಕಾಂಗ್ರೆಸ್‍ಗೆ ಜಾತಿ ಪಟ್ಟ ಅಂಟಿಸಿದ್ದಾರೆ. ಡಿ.ಕೆ.ಶಿವಕುಮಾರ್ ಒಬ್ಬ ಒಳ್ಳೆಯ ನಾಯಕ ಅಂದುಕೊಂಡಿದೆ. ತಾನು ಸಿಎಂ ಆಗಲು ತನ್ನ ಸಮುದಾಯ ತನ್ನ ಬೆನ್ನಿಗೆ ಬರಬೇಕು ಎಂದು ಹೇಳುವ ಮೂಲಕ ಡಿಕೆಶಿ ಜಾತಿವಾದಿ ಆಗಿದ್ದಾರೆ. ಸಿದ್ದರಾಮಯ್ಯ ಕುರುಬರ ನಾಯಕ ಎಂದು ಹೇಳುವ ಮೂಲಕ ಅವರು ಸಹ ಜಾತಿವಾದಿಯಾಗಿದ್ದಾರೆ. ಇವರಿಬ್ಬರು ಸೇರಿ ಕಾಂಗ್ರೆಸ್‍ಗೆ ಜಾತಿಯ ಕೆಸರು ಅಂಟಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್ ಈ ವಿಚಾರದಲ್ಲಿನ ಹೇಳಿಕೆಗಳಿಗೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.. ಅವರಿಬ್ಬರು ಮಾತ್ರ ಕಾಂಗ್ರೆಸ್ ಗೌರವ ತರುವ ಮಾತನಾಡಿದ್ದಾರೆ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಈ ಏರಿಯಾದಲ್ಲಿ ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಸಿಕ್ತಿಲ್ಲ

    ಮೂರು ತಲೆಮಾರಿಗೆ ಆಗುವಷ್ಟು ಹಣ ಸಂಪಾದಿಸಿದ್ದೇವೆ ಎಂಬ ರಮೇಶ್ ಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಮೇಶ್ ಕುಮಾರ್ ಹೇಳಿಕೆಯಿಂದ ಕಾಂಗ್ರೆಸ್ ಭ್ರಷ್ಟತನ ಬಯಲಾಗಿದೆ. ರಮೇಶ್ ಕುಮಾರ್ ಸತ್ಯವನ್ನೇ ಹೇಳಿದ್ದಾರೆ. ಇಂತಹ ಕಾಂಗ್ರೆಸ್ ನಮ್ಮ ಸರ್ಕಾರ ಮೇಲೆ 40% ಲಂಚದ ಆರೋಪ ಮಾಡುತ್ತದೆ. ನಮ್ಮ ಸರ್ಕಾರದ ಯಾವ ಸಚಿವರು ಮೇಲೂ ಒಂದೇ ಒಂದು ಲಂಚದ ನಿರ್ದಿಷ್ಟ ಪ್ರಕರಣ ಇಲ್ಲ. 40% ಆರೋಪ ಮಾಡುವ ಕಾಂಗ್ರೆಸ್ ಒಂದೇ ಒಂದು ಕೇಸ್ ಎತ್ತಿ ತೋರಿಸಲಿ. ಯಾರೋ ಹೇಳಿದ ಹೇಳಿಕೆ ಹಿಡಿದುಕೊಂಡು ಆರೋಪ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಜಕೀಯ ಪ್ರವೇಶದ ಸುಳಿವು ಕೊಟ್ಟ ಸೋನಿಯಾ ಅಳಿಯ ರಾಬರ್ಟ್ ವಾದ್ರಾ

    ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ಬಿ ರಿಪೋರ್ಟ್ ವಿಚಾರವಾಗಿ ಮಾತನಾಡಿದ ಅವರು, ನನಗೆ ಮೊದಲ ದಿನವೇ ಈ ಪ್ರಕರಣದಿಂದ ಆರೋಪ ಮುಕ್ತನಾಗಿ ಬರುತ್ತೇನೆಂದು ಗೊತ್ತಿತ್ತು. ನಾನು ಈ ಪ್ರಕರಣದಲ್ಲಿ ಯಾವ ತಪ್ಪು ಮಾಡಿಲ್ಲ. ಪಕ್ಷಕ್ಕೆ ಮುಜುಗರವಾಗಬಾರದು ಎಂದು ರಾಜೀನಾಮೆ ಕೊಟ್ಟಿದೆ. ತನಿಖೆ ಮೂಲಕ ಈಗ ಸಂಪೂರ್ಣ ಆರೋಪ ಮುಕ್ತನಾಗಿದ್ದೇನೆ. ಪ್ರಕರಣದಿಂದ ಪಕ್ಷಕ್ಕೆ ಇದ್ದ ಮುಜುಗರ ನಿವಾರಣೆಯಾಗಿದೆ. ಬಿ ರಿಪೋರ್ಟ್ ಆದರೂ ಕಾಂಗ್ರೆಸ್ ಈ ಪ್ರಕರಣದ ಬಗ್ಗೆ ಟೀಕೆ ಮಾಡುತ್ತಿರುವುದು ಬೇಸರ ತರಿಸಿದೆ. ಸಿಎಂ ಆಗಿದ್ದ ಸಿದ್ದರಾಮಯ್ಯನವರಿಗೆ ಪ್ರಕರಣದ ತನಿಖೆಗಳು ಹೇಗೆ ನಡೆಯುತ್ತದೆ ಎಂದು ಗೊತ್ತಿದ್ದರು ಬಿ ರಿಪೋರ್ಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದು ಬೇಸರ ಮೂಡಿಸಿದೆ. ಸಿದ್ದರಾಮಯ್ಯ ಕಾನೂನು ಪಂಡಿತರ ಆಗಿದ್ದಾರೆ. ಸುಮ್ಮನೆ ಪ್ರಕರಣದ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    Live Tv
    [brid partner=56869869 player=32851 video=960834 autoplay=true]

  • ಎಂ.ಪಿ ಪ್ರಕಾಶ್ ಪುತ್ರಿಗೆ ಮಾಜಿ ಶಾಸಕನಿಂದ ಕೊಲೆ ಬೆದರಿಕೆ

    ಎಂ.ಪಿ ಪ್ರಕಾಶ್ ಪುತ್ರಿಗೆ ಮಾಜಿ ಶಾಸಕನಿಂದ ಕೊಲೆ ಬೆದರಿಕೆ

    ಮೈಸೂರು: ಮಾಜಿ ಮಂತ್ರಿ, ದಿವಂಗತ ಎಂ.ಪಿ ಪ್ರಕಾಶ್ ಪುತ್ರಿಗೆ ಕೊಲೆ ಬೆದರಿಕೆ ಹಾಕಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ.

    ತನಗೆ ಬೆದರಿಕೆ ಹಾಕಿರುವ ಕುರಿತು ಎಂ.ಪಿ ಪ್ರಕಾಶ್ ಪುತ್ರಿ ಸುಮಾ ವಿಜಯ್ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿದ್ದರಾಮಯ್ಯ ಆಪ್ತ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    ದೂರಿನಲ್ಲೇನಿದೆ?
    ನನ್ನ ತಮ್ಮ, ಮಾಜಿ ಶಾಸಕ ಎಂ.ಪಿ ರವೀಂದ್ರ ಹಾಗೂ ಎಚ್.ಪಿ ಮಂಜುನಾಥ್ ಸ್ನೇಹಿತರಾಗಿದ್ದರು. ನನ್ನ ತಮ್ಮ ಮೈಸೂರಿನ ವಿವಿ ಮೊಹಲ್ಲಾದಲ್ಲಿ ಪೆಂಟ್ ಹೌಸ್ ಖರೀದಿಸಿದ್ದನು. ಸ್ನೇಹಿತರಾಗಿದ್ದ ಕಾರಣಕ್ಕೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಮಂಜುನಾಥ್‍ಗೆ ಬಿಟ್ಟುಕೊಟ್ಟಿದ್ದನು. ರವೀಂದ್ರ ಮರಣದ ನಂತರ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದು, ಈಗ ಮನೆ ಖಾಲಿ ಮಾಡುತ್ತಿಲ್ಲ. ಮನೆ ಕೀ ಕೇಳಿದರೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸುಮಾ ಆರೋಪ ಮಾಡಿದ್ದಾರೆ.

    ಈಗಾಗಲೇ ಅತಿಕ್ರಮ ಪ್ರವೇಶ ಸಂಬಂಧ ದೂರು- ಪ್ರತಿದೂರು ದಾಖಲು ಮಾಡಿಕೊಳ್ಳಲಾಗಿದ್ದು, ಸುಮಾ ವಿರುದ್ಧ ಎಚ್.ಪಿ. ಮಂಜುನಾಥ್ ಈಗಾಗಲೇ ಅತಿಕ್ರಮ ಪ್ರವೇಶದ ದೂರು ದಾಖಲಿಸಿದ್ದಾರೆ.

  • ಪ್ರತಾಪ್ ಸಿಂಹ ಕಾರ್ಯ ವೈಖರಿಗೆ ಶಹಬ್ಬಾಸ್ ಎಂದ ಪ್ರಧಾನಿ ಮೋದಿ

    ಪ್ರತಾಪ್ ಸಿಂಹ ಕಾರ್ಯ ವೈಖರಿಗೆ ಶಹಬ್ಬಾಸ್ ಎಂದ ಪ್ರಧಾನಿ ಮೋದಿ

    ಮೈಸೂರು: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಕಾರ್ಯವೈಖರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

    ಮಹಾರಾಜ ಕಾಲೇಜಿನಲ್ಲಿ ಆಯೋಜನೆಗೊಂಡಿದ್ದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ನಿಮ್ಮ ಕ್ಷೇತ್ರದ ಸಂಸದರಾದ ಪ್ರತಾಪ ಸಿಂಹ ನಮ್ಮ ಬಳಿಗೆ ಯಾವಾಗಲೂ ಯಾವುದಾದರೂ ಯೋಜನೆ ಹಿಡಿದು ಬರುತ್ತಾರೆ. ನಮ್ಮನ್ನು ನೆಮ್ಮದಿಯಿಂದ ಕೂರಲು ಬಿಡಲ್ಲ ಎಂದು ಹೇಳಿದರು.

    ಇದೇ ವೇಳೆ ಬೆಂಗಳೂರು ಮೈಸೂರು ನಡುವೆ ಅಷ್ಟಪಥಗಳ ರಾಷ್ಟ್ರೀಯ ಹೆದ್ದಾರಿ ರಚನೆಗೆ ಕೇಂದ್ರ ಸರ್ಕಾರ ಅನುಮತಿಸಿದೆ ನೀಡಿರುವ ಬಗ್ಗೆ ತಿಳಿಸಿದರು. ಅಲ್ಲದೆ ಮೈಸೂರಿಗೆ ಹೊಸ ವಿಶ್ವದರ್ಜೆಯ ಸ್ಯಾಟಲೈಟ್ ರೈಲ್ವೆ ಸ್ಟೇಷನ್ ಅನ್ನು ನಾಗನಹಳ್ಳಿ ಬಳಿ ನಿರ್ಮಾಣ ಮಾಡಲಾಗುತ್ತದೆ. ಇದರಿಂದ 76 ರೈಲುಗಳು ಮೈಸೂರಿಗೆ ಆಗಮಿಸಲು ಹಾಗೂ ನಿರ್ಗಮಿಸಲು ಸಾಧ್ಯವಾಗುತ್ತದೆ ಎಂದರು. ಇದನ್ನೂ ಓದಿ: Commission ಸರ್ಕಾರವನ್ನು ತೊಲಗಿಸಿ Mission ಸರ್ಕಾರವನ್ನು ತನ್ನಿ: ಪ್ರಧಾನಿ ಮೋದಿ

    ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕರ್ನಾಟಕದಲ್ಲಿ ಬಂಡಲ್ ಬಂಡಲ್ ನೋಟುಗಳು ಸಿಗುತ್ತವೆ. ಡೈರಿಗಳು ಸಿಗುತ್ತವೆ. ಅವುಗಳಲ್ಲಿ ಏನೇನು ಬರೆದಿದೆ. ಎಷ್ಟೆಷ್ಟು ಹಂಚಿಕೆಯ ವಿವರಗಳಿವೆ ಎಂಬುವುದು ಯಾರಿಗೆ ಗೊತ್ತು. ಅಂತಹ ವ್ಯಕ್ತಿಗಳಿಗೆ ಬೆಂಬಲ ನೀಡಿದರೆ ಮೈಸೂರಿಗೆ ಕೆಟ್ಟ ಹೆಸರು ಬರುತ್ತದೆ. ಮೈಸೂರಿನಲ್ಲಿ ಹುಟ್ಟಿದ ವ್ಯಕ್ತಿ ಕೆಟ್ಟ ಕೆಲಸ ಮಾಡುವುದಿಲ್ಲ. ಆದರೆ ಆ ವ್ಯಕ್ತಿ ಇಲ್ಲಿ ಹುಟ್ಟಿ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ನೈತಿಕತೆ ಬಿಟ್ಟಿದ್ದಾರೆ. ಹಗರಣಗಳ ಮೇಲೆ ಹಗರಣ ಹೊರ ಬರುತ್ತಿದೆ. ಕೇಂದ್ರ ಸರ್ಕಾರ ಕೊಟ್ಟ ಅನುದಾನವನ್ನು ಬಳಕೆ ಮಾಡಿಕೊಳ್ಳದೇ ರಾಜಕಾರಣಕ್ಕಾಗಿ ಹಾಗೂ ಹೈಕಮಾಂಡ್ ನಾಯಕರನ್ನು ಖುಷಿ ಪಡಿಸಲು, ಅವರಿಗೆ ಕಾಣಿಕೆ ಸಲ್ಲಿಸಲು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.