Tag: Mythri Movie Makers

  • ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ಪ್ರಶಾಂತ್ ನೀಲ್ ಜೊತೆಗಿನ ಚಿತ್ರದಿಂದ ಅಪ್‌ಡೇಟ್ ಸಿಗಲ್ಲ, ಯಾಕೆ?

    ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ಪ್ರಶಾಂತ್ ನೀಲ್ ಜೊತೆಗಿನ ಚಿತ್ರದಿಂದ ಅಪ್‌ಡೇಟ್ ಸಿಗಲ್ಲ, ಯಾಕೆ?

    ‘ದೇವರ’ ಸಿನಿಮಾ (Devara) ಬಳಿಕ ಜ್ಯೂ.ಎನ್‌ಟಿಆರ್ ಅವರು ಪ್ರಶಾಂತ್ ನೀಲ್ ಜೊತೆ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಮೇ 20ರಂದು ತಾರಕ್ ಹುಟ್ಟುಹಬ್ಬದ ಹಿನ್ನೆಲೆ ಈ ಚಿತ್ರದ ಬಗ್ಗೆ ಅಪ್‌ಡೇಟ್ ಸಿಗುತ್ತಾ ಎಂದು ನಿರೀಕ್ಷಿಸಿದವರಿಗೆ ಕಹಿ ಸುದ್ದಿ ಸಿಕ್ಕಿದೆ. ನಟನ ಹುಟ್ಟುಹಬ್ಬದಂದು ಸಿನಿಮಾ ಬಗ್ಗೆ ಅಪ್‌ಡೇಟ್ ಸಿಗಲ್ಲ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ:‘ಸಿಕಂದರ್’ ಸೋಲಿನ ಬಳಿಕ ಆರ್ಮಿ ಆಫೀಸರ್ ಪಾತ್ರದಲ್ಲಿ ಸಲ್ಮಾನ್ ಖಾನ್?

    ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್‌ಟಿಆರ್ (JR NTR) ಕಾಂಬಿನೇಷನ್ ಸಿನಿಮಾಗೆ ‘ಪುಷ್ಪ 2’ ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಂಡವಾಳ ಹೂಡಿದೆ. ಈ ಚಿತ್ರದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು, ಮೇ 20ರಂದು ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬ. ಆ ದಿನ ‘ವಾರ್ 2’ (War 2) ಚಿತ್ರದಿಂದ ಅಪ್‌ಡೇಟ್ ಸಿಗಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ಚಿತ್ರದ ಗ್ಲಿಂಪ್ಸ್ ಬಿಡುಗಡೆ ಮಾಡೋದನ್ನು ಮುಂದಕ್ಕೆ ಹಾಕಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ರಶ್ಮಿಕಾರಲ್ಲಿ ದೇವರಕೊಂಡಗೆ ಪತ್ನಿಯಾಗುವ ಗುಣವಿದ್ಯಾ?- ನಟ ಹೇಳೋದೇನು?

     

    View this post on Instagram

     

    A post shared by Mythri Movie Makers (@mythriofficial)

    ಸದ್ಯ ಈ ಸುದ್ದಿ ಫ್ಯಾನ್ಸ್‌ಗೆ ಬೇಸರ ಆಗಿದ್ರೂ ‘ವಾರ್ 2’ ಚಿತ್ರದ ತುಣುಕನ್ನು ನೋಡಿ ಸಂಭ್ರಮಿಸಬಹುದಲ್ವಾ ಎಂದು ಖುಷಿಪಡ್ತಿದ್ದಾರೆ. ನಟನ ಮೊದಲ ಬಾಲಿವುಡ್ ಚಿತ್ರವಾಗಿರೋದ್ರಿಂದ ಈ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

    ‘ವಾರ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಜೊತೆ ತಾರಕ್ ತೆರೆಹಂಚಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ, ಜಾನ್ ಅಬ್ರಹಾಂ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಬ್ರಹ್ಮಾಸ್ತ್ರ’ ಚಿತ್ರದ ನಿರ್ದೇಶಕ ಅಯಾನ್ ಮುಖರ್ಜಿ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

  • ಮತ್ತೆ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಜೋಡಿ?

    ಮತ್ತೆ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಜೋಡಿ?

    ತೆಲುಗು ಸಿನಿಮಾಗಳ ಮೂಲಕ ಸಕ್ಸಸ್‌ಫುಲ್ ಜೋಡಿ ಎನಿಸಿಕೊಂಡಿರುವ ವಿಜಯ್ ದೇವರಕೊಂಡ (Vijay Devarakonda) ಮತ್ತು ರಶ್ಮಿಕಾ ಬಗ್ಗೆ ಬಿಗ್ ನ್ಯೂಸ್‌ವೊಂದು ಸಿಕ್ಕಿದೆ. ವಿಜಯ್ ಹೊಸ ಸಿನಿಮಾಗೆ ರಶ್ಮಿಕಾ ನಾಯಕಿಯಾಗಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ‘ಶ್ಯಾಮ್ ಸಿಂಗ್ ರಾಯ್’ ನಿರ್ದೇಶಕ ರಾಹುಲ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅವರ ನಿರ್ದೇಶನದಲ್ಲಿ ಅರ್ಜುನ್‌ ರೆಡ್ಡಿ ಖ್ಯಾತಿಯ ವಿಜಯ್‌ ನಟಿಸಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಸಿನಿಮಾಗೆ ರಶ್ಮಿಕಾ ನಾಯಕಿ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಪೂರಕವೆಂಬಂತೆ ನಿರ್ಮಾಣ ಸಂಸ್ಥೆ ಜೊತೆಗಿನ ರಶ್ಮಿಕಾ ಪೋಸ್ಟ್ ಸದ್ದು ಮಾಡ್ತಿದೆ.

    ‘ಪುಷ್ಪ 2’ ಸಿನಿಮಾ ಮಾಡಿ ಗೆದ್ದಿರುವ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಮತ್ತೊಮ್ಮೆ ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ಸಿನಿಮಾ ಮಾಡುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದೆ. ಹೌದು ನೋಡೋಣ (#Hmmletssee) ಎಂದು ಬರೆದುಕೊಂಡು ರಶ್ಮಿಕಾಗೆ ನಿರ್ಮಾಣ ಸಂಸ್ಥೆ ಟ್ಯಾಗ್ ಮಾಡಿದೆ. ಅದಕ್ಕೆ ನಟಿ, ಹೌದು ಎಂಬಂತೆ (#Hmmletsseeguys) ಎಂದು ರಿಯಾಕ್ಟ್ ಮಾಡಿದ್ದಾರೆ. ಈ ಸಂಭಾಷಣೆ ಫ್ಯಾನ್ಸ್‌ ತಲೆಗೆ ಹುಳ ಬಿಟ್ಟಂತಾಗಿದೆ. ವಿಜಯ್ ಜೊತೆಗಿನ ನಟಿಯ ಸಿನಿಮಾ ಸುದ್ದಿಗೆ ಪುಷ್ಠಿ ನೀಡಿದಂತಿದೆ. ಎಲ್ಲದ್ದಕ್ಕೂ ಚಿತ್ರತಂಡದ ಕಡೆಯಿಂದ ಅಫಿಷಿಯಲ್ ಅಪ್‌ಡೇಟ್ ಹೊರಬೀಳುವವರೆಗೂ ಕಾದುನೋಡಬೇಕಿದೆ.

    ಅಂದಹಾಗೆ, ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಸಿನಿಮಾಗಳಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಜೋಡಿಯಾಗಿ ನಟಿಸಿ ಸಕ್ಸಸ್ ಕಂಡಿದ್ದಾರೆ.

  • ‘ಗುಡ್ ಬ್ಯಾಡ್ ಅಗ್ಲಿ’ ಅವತಾರವೆತ್ತಿದ ಅಜಿತ್ ಕುಮಾರ್- ಟೀಸರ್‌ಗೆ ಫ್ಯಾನ್ಸ್ ಮೆಚ್ಚುಗೆ

    ‘ಗುಡ್ ಬ್ಯಾಡ್ ಅಗ್ಲಿ’ ಅವತಾರವೆತ್ತಿದ ಅಜಿತ್ ಕುಮಾರ್- ಟೀಸರ್‌ಗೆ ಫ್ಯಾನ್ಸ್ ಮೆಚ್ಚುಗೆ

    ಕಾಲಿವುಡ್ ನಟ ಅಜಿತ್ ಕುಮಾರ್ (Ajith Kumar) ಅವರು ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ಕಥೆ ಹೇಳೋಕೆ ರೆಡಿಯಾಗಿದ್ದಾರೆ. ಸದ್ಯ ರಿಲೀಸ್ ಆಗಿರೋ ಟೀಸರ್‌ನಲ್ಲಿ ಹಲವು ಗೆಟಪ್‌ನಲ್ಲಿ ಅಜಿತ್ ಮಿಂಚಿದ್ದಾರೆ. ನಟನ ನಯಾ ಅವತಾರವನ್ನು ಟೀಸರ್‌ನಲ್ಲಿ ನೋಡಿ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ತಂಗಿ ಬಗ್ಗೆ ರಶ್ಮಿಕಾ ಮಂದಣ್ಣ ಶಾಕಿಂಗ್ ಕಾಮೆಂಟ್: ಹೀಗ್ಯಾಕಂದ್ರು ಶ್ರೀವಲ್ಲಿ?

    ಅಜಿತ್ ಸ್ಟೈಲೀಶ್ ಲುಕ್, ಕಾರ್ ರೇಸ್, ಕಲರ್‌ಫುಲ್ ಸೆಟ್, ಮಸ್ತ್ ಡ್ಯಾನ್ಸ್ ಜೊತೆಗೆ ಗನ್ ಹಿಡಿದು ನಟ ಖಡಕ್ ಎಂಟ್ರಿ ಕೊಟ್ಟಿರೋದು ಟೀಸರ್‌ನಲ್ಲಿ ತೋರಿಸಲಾಗಿದೆ. ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿರೋದು ಟೀಸರ್ ಝಲಕ್‌ನಿಂದಲೇ ಎದ್ದು ಕಾಣುತ್ತಿದೆ. ಇದೇ ಏಪ್ರಿಲ್ 10ಕ್ಕೆ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

     

    View this post on Instagram

     

    A post shared by Mythri Movie Makers (@mythriofficial)

    ಅಜಿತ್ ಕುಮಾರ್‌ಗೆ ಜೋಡಿಯಾಗಿ ಮತ್ತೊಮ್ಮೆ ತ್ರಿಶಾ (Trisha Krishnan) ನಟಿಸಿದ್ದಾರೆ. ಈ ಚಿತ್ರವನ್ನು ‘ಪುಷ್ಪ 2’ ನಿರ್ಮಿಸಿದ್ದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದೆ. ಒಟ್ನಲ್ಲಿ ಸಾಕಷ್ಟು ವಿಚಾರಗಳಿಂದ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಸಿನಿಮಾಗಾಗಿ ಫ್ಯಾನ್ಸ್‌ ಕಾಯ್ತಿದ್ದಾರೆ.

  • ‘ಪುಷ್ಪ’ ಟೀಮ್ ಗೆ ED ಶಾಕ್: ನಿರ್ದೇಶಕ, ನಿರ್ಮಾಪಕರ ಕಚೇರಿ ಮೇಲೆ ಅಧಿಕಾರಿಗಳು ದಾಳಿ

    ‘ಪುಷ್ಪ’ ಟೀಮ್ ಗೆ ED ಶಾಕ್: ನಿರ್ದೇಶಕ, ನಿರ್ಮಾಪಕರ ಕಚೇರಿ ಮೇಲೆ ಅಧಿಕಾರಿಗಳು ದಾಳಿ

    ಲ್ಲು ಅರ್ಜುನ್ ನಟನೆಯ ‘ಪುಷ್ಪ’ (Pushpa) ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಸಾವಿರಾರು ಕೋಟಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿತ್ತು. ಈ ಗೆಲುವಿನ ಖುಷಿಯಲ್ಲೇ ನಿರ್ದೇಶಕ ಸುಕುಮಾರನ್ (Sukumaran) ‘ಪುಷ್ಪ 2’ ಸಿನಿಮಾವನ್ನು ಶುರು ಮಾಡಿದ್ದರು. ಈಗಾಗಲೇ ಹಲವು ಹಂತದ ಚಿತ್ರೀಕರಣ ಕೂಡ ಮುಗಿದಿದೆ. ಈ ಸಮಯದಲ್ಲಿ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳು ನಿರ್ಮಾಪಕರ ಮತ್ತು ನಿರ್ದೇಶಕರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.

    ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ (Mythri Movie Makers)ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ನವೀನ್ ಯೆರ್ನೇನಿ ಹಾಗೂ ಯಲಮಂಚಿಲಿ ರವಿಶಂಕರ್ ಈ ಸಂಸ್ಥೆಯ ನಿರ್ಮಾಪಕರು. ಬೆಳಗಿನ ಜಾವ ಇವರ ಮನೆ ಹಾಗೂ ಕಚೇರಿಯಲ್ಲಿ ಇಡಿ (ED) ಅಧಿಕಾರಿಗಳು ಶೋಧ ಕಾರ್ಯ ಶುರು ಮಾಡಿದ್ದಾರೆ. ಇನ್ನೂ ಪರಿಶೀಲನೆ ನಡೆಯುತ್ತಿದೆ ಎಂದು ವರದಿ ಆಗಿದೆ. ಇದನ್ನೂ ಓದಿ:‘ಎಂದೆಂದಿಗೂ ಆರ್‌ಸಿಬಿ’ ಎಂದ ನಟಿ ದಿವ್ಯಾ ಉರುಡುಗ

    ವಾಲ್ತೇರು ವೀರಯ್ಯ, ವೀರಸಿಂಹ ರೆಡ್ಡಿ ಅಂತ ಬಹುಕೋಟಿ ವೆಚ್ಚದ ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಾಣ ಮಾಡಿದ್ದು ವಿದೇಶಗಳಲ್ಲಿ ದೊಡ್ಡಬಜೆಟ್ ನ ಚಿತ್ರಗಳನ್ನು ವಿತರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಲಾ ಮಾರ್ಗದಲ್ಲಿ ಹಣದ ಸಂಗ್ರಹಣೆ ಮೂಲಕ ಪ್ರಮೋಟರ್ಸ್ ಮನಿ ಲ್ಯಾಂಡರಿಂಗ್ ಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.

    ಇಷ್ಟೇ ಅಲ್ಲದೇ ಆದಾಯ ತೆರಿಗೆ (IT) ಪಾವತಿಯಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು ಇಡಿ ಅಧಿಕಾರಿಗಳ ಜೊತೆ ಐಟಿ ಅಧಿಕಾರಿಗಳು ಕೂಡ ಜೊತೆಯಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಸಿನಿಮಾ ನಿರ್ಮಾಣ ಸಂಸ್ಥೆಯ ಜೊತೆಗೆ ಪುಷ್ಪ ಚಿತ್ರದ ಸುಕುಮಾರನ್ ಮನೆಯಲ್ಲೂ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರಂತೆ.

  • ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಮೈತ್ರಿ ಮೂವೀಸ್‍ನಿಂದ ಸರ್ಪ್ರೈಸ್

    ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಮೈತ್ರಿ ಮೂವೀಸ್‍ನಿಂದ ಸರ್ಪ್ರೈಸ್

    ಬೆಂಗಳೂರು: ಚಂದನವನದಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡು ಸಾಧನೆಗೈದ ಅಪರೂಪದ ನಿರ್ದೇಶಕ, ಕೆಜಿಎಫ್ ಸಿನಿಮಾ ಸೃಷ್ಟಿಕರ್ತ ಪ್ರಶಾಂತ್ ನೀಲ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಅಭಿಮಾನಿಗಳು ಸಾಗರೋಪಾದಿಯಲ್ಲಿ ಶುಭ ಕೋರುತ್ತಿದ್ದಾರೆ.

    ಪ್ರಶಾಂತ್ ನೀಲ್ ಅವರು 40ನೇ ವಸಂತಕ್ಕೆ ಕಾಲಿಟ್ಟಿದ್ದು, ಲಾಕ್‍ಡೌನ್ ಹಿನ್ನೆಲೆ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿನ ಸಂಭ್ರಮಕ್ಕೆ ಮಾತ್ರ ಮಿತಿ ಇಲ್ಲದಂತಾಗಿದ್ದು, ಟ್ವಿಟ್ಟರ್‍ನಲ್ಲಿ ಸಾವಿರಾರು ಜನ ಶುಭ ಕೋರುತ್ತಿದ್ದಾರೆ. ಈ ಮೂಲಕ ಹ್ಯಾಷ್ ಟ್ಯಾಗ್‍ನೊಂದಿಗೆ ಹ್ಯಾಪಿ ಬರ್ತ್‍ಡೇ ಪ್ರಶಾಂತ್ ನೀಲ್ ಎಂಬುದು ಟ್ರೆಂಡಿಂಗ್‍ನಲ್ಲಿದೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬದ ರೀತಿಯಲ್ಲೇ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

    ಮಾಡಿದ್ದು ಕೇವಲ ಮೂರೇ ಚಿತ್ರಗಳಾದರೂ ತಮ್ಮ ಖದರ್ ಚಿತ್ರಗಳ ಮೂಲಕವೇ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಇದೀಗ ಟಾಲಿವುಡ್‍ಗೆ ಕಾಲಿಡಲು ಸಹ ಸಿದ್ಧತೆ ನಡೆಸಿದ್ದಾರೆ. ಉಗ್ರಂ ಸಿನಿಮಾ ಮೂಲಕ ಶ್ರೀಮುರಳಿಯವರಿಗೆ ದೊಡ್ಡ ಬ್ರೇಕ್ ನೀಡಿದ್ದರು. ಇದಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಜೊತೆ ಸೇರಿ ಕೆಜಿಎಫ್ ಹಾಗೂ ಕೆಜಿಎಫ್-2 ಸಿನಿಮಾಗಳ ಮೂಲಕ ತಮ್ಮದೇಯಾದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.

    ಪ್ರಶಾಂತ್ ನೀಲ್ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದವರಲ್ಲ. ಯಾವುದೇ ಸಂಸ್ಥೆಯಲ್ಲಿ ತರಬೇತಿ ಪಡೆದವರೂ ಅಲ್ಲ. ಅಸಲಿಗೆ ಸಿನಿಮಾ ಬಗ್ಗೆ ಅಷ್ಟೇನು ಗೊತ್ತಿರಲಿಲ್ಲ. ಶ್ರೀ ಮುರಳಿ ನಟನೆಯ ಉಗ್ರಂ ಸಿನಿಮಾ ಸೆಟ್‍ಗೆ ಆಗಾಗ ಹೋಗಿ ಬಂದಿದ್ದರಷ್ಟೆ. ಉಗ್ರಂ ಸಿನಿಮಾ ಮಾಡುವಾಗ ಸಿನಿಮಾ ವ್ಯಾಕರಣ ಗೊತ್ತಿರಲಿಲ್ಲ. ಚಿತ್ರ ಮುಗಿಸುವ ಹೊತ್ತಿಗೆ ನಿರ್ದೇಶನ, ಸಿನಿಮಾ ತಯಾರಿ, ಇಡೀ ಸಿನಿಮಾ ಮಾಧ್ಯಮವನ್ನು ಪ್ರಯೋಗಾತ್ಮಕವಾಗಿ ಕಲಿತರು.

    ನಟಿಸುವುದು ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವುದೆಂದರೆ ಪ್ರಶಾಂತ್ ನೀಲ್ ಅವರಿಗೆ ಭಯ. ಅವರ ಕೆಲಸವೇನಿದ್ದರೂ ಕ್ಯಾಮೆರಾ ಹಿಂದೆ. ಉಗ್ರಂ ಬಳಿಕ ಕೆಜಿಎಫ್ ಚಿತ್ರಕ್ಕೆ ಕೈ ಹಾಕಿದರು. ನಂತರ ಕೆಜಿಎಫ್ ಚಿತ್ರ ಬಹುಭಾಷೆಗಳಲ್ಲಿ ತಯಾರಾಗಲಿದೆಯೇ ಎಂದು ಪದೇ ಪದೆ ನಟ ಯಶ್ ಅವರನ್ನು ಕೇಳುತ್ತಿದ್ದರಂತೆ. ಆದರೆ ಯಶ್ ಅವರಿಗೆ ಇವರ ಮೇಲೆ ನಂಬಿಕೆ ಇತ್ತಂತೆ. ಹೀಗೆ ಸೂಪರ್ ಹಿಟ್ ಚಿತ್ರಗಳನ್ನು ನೀಡುವ ಮೂಲಕ ತೆಲುಗು, ತಮಿಳು ಮಲಯಾಳಂ, ಹಿಂದಿ ಪ್ರೇಕ್ಷಕರನ್ನು ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

    ಈಗಲೂ ಹಲವು ದೊಡ್ಡ ನಟರು ಪ್ರಶಾಂತ್ ನೀಲ್ ಅವರ ಕಾಲ್ ಶೀಟ್‍ಗಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಆ ಮಟ್ಟಕ್ಕೆ ಪ್ರಶಾಂತ್ ನೀಲ್ ತಮ್ಮ ಸಿನಿಮಾಗಳ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ತೆಲುಗಿನ ಜೂನಿಯರ್ ಎನ್‍ಟಿಆರ್ ಜೊತೆ ಸಿನಿಮಾ ಮಾಡುವ ಕುರಿತು ಅವರೇ ಸುಳಿವು ನೀಡಿದ್ದರು. ಈ ಕುರಿತು ಸಹ ನಿರೀಕ್ಷೆ ಹೆಚ್ಚಿದೆ.

    ಸಿನಿಮಾ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಜೂ.ಎನ್‍ಟಿಆರ್ ಹುಟ್ಟಹಬ್ಬದಂದು ಪ್ರಶಾಂತ್ ನೀಲ್ ಟ್ವೀಟ್ ಮಾಡಿ ಈ ಕುರಿತು ಖಚಿತಪಡಿಸಿದ್ದರು. ಇದೀಗ ತೆಲುಗು ಸಿನಿಮಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಸಹ ಪ್ರಶಾಂತ್ ನೀಲ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿ ಟ್ವೀಟ್ ಮಾಡಿದೆ. ಇದರ ಜೊತೆಗೆ ರೇಡಿಯೇಷನ್ ಶೂಟ್‍ನಲ್ಲಿ ಶೀಘ್ರವೇ ಭೇಟಿಯಾಗೋಣ ಎಂದು ತಿಳಿಸಿದೆ. ವಿಶೇಷವೆಂದರೆ ಪ್ರಶಾಂತ್ ನೀಲ್ ಜೂ.ಎನ್‍ಟಿಆರ್ ಅವರಿಗೆ ಬರ್ತ್ ಡೇ ವಿಶ್ ತಿಳಿಸಿದಾಗಲೂ ರೇಡಿಯೇಷನ್ ಶೂಟ್ ಎಂದು ಹೇಳಿದ್ದರು. ಇದೀಗ ಮೈತ್ರಿ ಸಂಸ್ಥೆ ಸಹ ಅದೇ ರೀತಿ ಹೇಳಿದೆ. ಈ ಮೂಲಕ ಮತ್ತೊಂದು ಅದ್ಭುತ ಸಿನಿಮಾ ತಯಾರಾಗಲಿದೆ ಎಂಬ ಸುಳಿವು ನೀಡಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ಕೆಜಿಎಫ್ ಅಭಿಮಾನಿಗಳು ವೇಟಿಂಗ್ ಫಾರ್ ಕೆಜಿಎಫ್-2 ಎಂದು ಬರೆದುಕೊಂಡರೆ, ಜೂನಿಯರ್ ಎನ್‍ಟಿಆರ್ ಅಭಿಮಾನಿಗಳು ವೇಟಿಂಗ್ ಫಾರ್ ಎನ್‍ಟಿಆರ್31 ಎಂದು ಬರೆದುಕೊಂಡಿದ್ದಾರೆ.