Tag: mysuru vv

  • ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ- ಪ್ರೊ. ನಾಗರಾಜು ಸಸ್ಪೆಂಡ್ ಮಾಡಿ ಮೈಸೂರು ವಿವಿ ಆದೇಶ

    ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ- ಪ್ರೊ. ನಾಗರಾಜು ಸಸ್ಪೆಂಡ್ ಮಾಡಿ ಮೈಸೂರು ವಿವಿ ಆದೇಶ

    ಬೆಂಗಳೂರು: ಅಸಿಸ್ಟೆಂಟ್ ಪ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣದ ಆರೋಪಿ, ಪ್ರಾಧ್ಯಾಪಕ ಪ್ರೊ.ನಾಗರಾಜು ಅವರನ್ನು ಅಮಾನತುಗೊಳಿಸಿ ಮೈಸೂರು ವಿವಿ ಆದೇಶ ಹೊರಡಿಸಿದೆ.

    ನಾಗರಾಜು ಅವರು ಜಿಯಾಗ್ರಫಿ ಪ್ರೊಫೆಸರ್ ಆಗಿದ್ದು, ಪ್ರಶ್ನೆ ಪತ್ರಿಕೆ ಲೀಕ್ ಸಂಬಂಧ ಮಲ್ಲೇಶ್ವರಂ ಪೊಲೀಸರಿಂದ ಬಂಧಿತರಾಗಿದ್ದರು. ಇದನ್ನೂ ಓದಿ: ಅಸಿಸ್ಟೆಂಟ್ ಪ್ರೊಫೆಸರ್ ಎಕ್ಸಾಮ್‍ನಲ್ಲೂ ಗೋಲ್ಮಾಲ್- ಕಾಸು ಕೊಟ್ರೆ ಸರ್ಕಾರಿ ಹುದ್ದೆ..?

    ಧಾರವಾಡ ಕರ್ನಾಟಕ ಯೂನಿವರ್ಸಿಟಿಯ ಮೌಲ್ಯಮಾಪನ ರಿಜಿಸ್ಟ್ರಾರ್ ಆಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಅರೆಸ್ಟ್ ಮಾಡಲಾಗಿತ್ತು. ಪ್ರಶ್ನೆಪತ್ರಿಕೆ ಲೀಕ್ ನಲ್ಲಿ ಭಾಗಿ ಹಿನ್ನೆಲೆ ನಾಗರಾಜ್ ತಂಗಿ ಮಗಳು ಕುಸುಮಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದರು.

    ಭೂಗೋಳ ಶಾಸ್ತ್ರ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ತಂಡದಲ್ಲಿದ್ದ ನಾಗರಾಜ್ ಮನೆಗೆ ಆಗಾಗ ಹೋಗುತ್ತಿದ್ದಾಗಿ ಆರೋಪಿ ಸೌಮ್ಯ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಳು. ನಾಗರಾಜ್ ಬಳಿ ಇದ್ದ ಬುಕ್ಸ್ ಗಳನ್ನ ಓದುವುದು ಮಾಡ್ತಿದ್ದೆ. ಅವರು ಪ್ರಶ್ನೆ ಪೇಪರ್ ತಯಾರು ಮಾಡುವ ಕಮಿಟಿಯಲ್ಲಿರೋದು ಗೊತ್ತಿತ್ತು ಎಂದಿದ್ದಳು.

    ನಾಗರಾಜ್ ಟೇಬಲ್ ಮೇಲೆ ಕ್ವೆಶ್ಚೆನ್ ಪೇಪರ್ ನ ಎನ್ವಲಪ್ ಇತ್ತು. ನಾನು ಯಾರಿಗೂ ಗೊತ್ತಾಗದ ಹಾಗೆ ಫೋಟೋ ತೆಗೆದುಕೊಂಡು ಬಂದಿದ್ದೆ. ಮರುದಿನ ಕಾಲೇಜಿನ ಬಳಿ ಪ್ರೊಫೆಸರ್ ತಂಗಿ ಮಗಳು ಕುಸುಮಾಗೆ ಪ್ರಶ್ನೆ ಪತ್ರಿಕೆ ಫೋಟೋ ಕಾಪಿ ಕಳಿಸುವಂತೆ ಹೇಳಿದ್ದೆ. ಆಕೆ ಕೂಡ ಕೆಲವೊಂದು ಪ್ರಶ್ನೆಗಳ ಫೋಟೋ ಕಳುಹಿಸಿದ್ದಳು. ಹೀಗೆ ಕ್ವೆಶ್ಚೆನ್ ಪೇಪರ್ ಲೀಕ್ ಹಿಂದಿನ ಇಂಚಿಂಚು ಮಾಹಿತಿಯನ್ನ ಎಳೆ ಎಳೆಯಾಗಿ ಪೊಲೀಸರ ಮುಂದೆ ಸೌಮ್ಯ ಬಿಚ್ಚಿಟ್ಟಿದ್ದಳು.

  • ತಾಳೆಗರಿಗಳಿಗೆ ಡಿಜಿಟಲ್ ಟಚ್ ನೀಡಲು ಮೈಸೂರು ವಿವಿ ಚಿಂತನೆ

    ತಾಳೆಗರಿಗಳಿಗೆ ಡಿಜಿಟಲ್ ಟಚ್ ನೀಡಲು ಮೈಸೂರು ವಿವಿ ಚಿಂತನೆ

    ಮೈಸೂರು: ಜಿಲ್ಲೆಯ ಪ್ರಾಚ್ಯ ವಿದ್ಯಾ ಸಂಶೋಧನಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಅಲ್ಲಿರುವ ಹಸ್ತಪ್ರತಿಗಳ ಸಂರಕ್ಷಣೆ ಮಾಡುವ ಸಂಬಂಧ ತಜ್ಞರ ಜೊತೆ ಮಾತುಕತೆ ನಡೆಸಿದರು.

    ತಾಳೆ ಗರಿಯ ಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡುವ ಕುರಿತು ಪ್ರತಾಪ್ ಸಿಂಹ ಅವರು ಪ್ರೊಫೆಸರ್ ಮುಕುಂದ್ ಅವರ ಜೊತೆ ಚರ್ಚೆ ನಡೆಸಿದರು. ಮುಕುಂದ್ ಅವರು ಬೆಂಗಳೂರಿನ ತಾರಾ ಪ್ರಕಾಶನದ ಸಂಸ್ಥಾಪಕ ಹಾಗೂ ಅಮೇರಿಕದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಪ್ರೊಫೆಸರ್ ಆಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಶಿವಪ್ಪ, ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಪ್ರೊಫೆಸರ್ ಎಸ್. ಶಿವರಾಜಪ್ಪ ಈ ವೇಳೆ ಉಪಸ್ಥಿತರಿದ್ದರು.

    ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಾಳೆಗರಿಯ ಹಸ್ತಪ್ರತಿಗಳನ್ನು ಮುಂದಿನ ಪೀಳಿಗೆಗೂ ಉಳಿಸಲು ಹಾಗೂ ಡಿಜಿಟಲ್ ಟಚ್ ನೀಡಿ ಹಸ್ತಪ್ರತಿಗಳನ್ನು ಪುಸ್ತಕ ರೂಪದಲ್ಲಿ ಹೊರತರಲು ಚಿಂತನೆ ನಡೆಸಲಾಗಿದೆ. ಮೈಸೂರಿನ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿರುವ ಅತ್ಯಮೂಲ್ಯವಾದ ತಾಳೆಗರಿಯ ಹಸ್ತಪ್ರತಿಗಳನ್ನು ಯಥಾವತ್ತಾಗಿ ಪುಸ್ತಕ ರೂಪದಲ್ಲಿ ಹೊರತರುವ ಮೂಲಕ ಅವುಗಳ ಮಹತ್ವವನ್ನು ಎಲ್ಲರಿಗೂ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ಮೈಸೂರು ವಿವಿ ಮುಂದಾಗಿದ್ದು, ಇದಕ್ಕಾಗಿ ತಜ್ಞರ ಜೊತೆ ಮಾತುಕತೆ ಆರಂಭಿಸಿದೆ.

  • ಗೌರವ ಡಾಕ್ಟರೇಟ್ ಪದವಿಯನ್ನು ನಿರಾಕರಿಸಿದ ಸಿಎಂ

    ಗೌರವ ಡಾಕ್ಟರೇಟ್ ಪದವಿಯನ್ನು ನಿರಾಕರಿಸಿದ ಸಿಎಂ

    ಬೆಂಗಳೂರು: ಮೈಸೂರು ವಿಶ್ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಬೇಕೆಂಬ ಶಿಫಾರಸ್ಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.

    ಸಿಎಂ ಸಿದ್ದರಾಮಯ್ಯಗೆ ಮೈಸೂರು ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡುವ ಪ್ರಸ್ತಾಪವನ್ನ ಸಿದ್ದರಾಮಯ್ಯ ಅವರು ತಿರಸ್ಕರಿಸಿದ್ದಾರೆ ಎಂದು ಕಚೇರಿ ಮೂಲಗಳು ತಿಳಿಸಿವೆ.

    2018ನೇ ಸಾಲಿನ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸಿದ್ದರಾಮಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡುವಂತೆ ವಿವಿಯ ಸಿಂಡಿಕೇಟ್ ಸದಸ್ಯ ಎಂಎಸ್‍ಎಸ್ ಕುಮಾರ್ ಅವರು ವಿವಿ ಕುಲಪತಿಗೆ ಮನವಿ ಮಾಡಿದ್ದರು.

    ಸಮಾಜದಲ್ಲಿ ಗಣ್ಯವ್ಯಕ್ತಿಗಳಿಗೆ ನೀಡುವ ಗೌರವ ಡಾಕ್ಟರೇಟ್ ಪದವಿಗೆ ಸಿದ್ದರಾಮಯ್ಯ ಅವರು ಅರ್ಹರಿದ್ದಾರೆ. ಅವರು ಇದೇ ವಿವಿಯಲ್ಲಿ ಪದವಿ ಕೂಡ ಪಡೆದಿದ್ದಾರೆ. ಮೈಸೂರಿನಿಂದ ಹೋಗಿ ರಾಜ್ಯದ ಚುಕ್ಕಾಣಿ ಹಿಡಿದು ಉತ್ತಮ ಆಡಳಿತ ನಡೆಸಿದ್ದಾರೆ. ಇಂಥವರಿಗೆ ಡಾಕ್ಟರೇಟ್ ನೀಡಿದರೆ ಮೈಸೂರು ವಿವಿಯ ಘನತೆ ಹೆಚ್ಚಲಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯನವರಿಗೆ ಈ ಸಾಲಿನ ಗೌರವ ಡಾಕ್ಟರೇಟ್ ನೀಡುವಂತೆ ಶಿಫಾರಸ್ಸು ಮಾಡುತ್ತಿದ್ದೇನೆ ಎಂದು ಸಿಂಡಿಕೇಟ್ ಸದಸ್ಯ ಕುಮಾರ್ ಪತ್ರದಲ್ಲಿ ವಿವರಿಸಿದ್ದರು.

    ಇದರ ಜೊತೆಗೆ ಇತರೆ ಸಿಂಡಿಕೇಟ್ ಸದಸ್ಯರು ಸುತ್ತೂರು ಶ್ರೀ, ಸಾಲು ಮರದ ತಿಮ್ಮಕ್ಕ, ಇಸ್ರೋ ಅಧ್ಯಕ್ಷ ಕಿರಣ್‍ಕುಮಾರ್ ಅವರಿಗೆ ಕೂಡ ಗೌರವ ಡಾಕ್ಟರೇಟ್ ನೀಡುವಂತೆ ಶಿಫಾರಸ್ಸು ಮಾಡಿದ್ದರು.