Tag: Mysuru Mayor

  • ಬಿಜೆಪಿ ಮೇಯರ್ ಕೊನೆ ಕೌನ್ಸಿಲ್ ಸಭೆ ಮಾಡದಂತೆ ನೋಡಿಕೊಂಡ ಸಿಎಂ

    ಬಿಜೆಪಿ ಮೇಯರ್ ಕೊನೆ ಕೌನ್ಸಿಲ್ ಸಭೆ ಮಾಡದಂತೆ ನೋಡಿಕೊಂಡ ಸಿಎಂ

    ಮೈಸೂರು: ಮೈಸೂರು ಮಹಾನಗರ ಪಾಲಿಕೆ (Mysuru City Corporation) ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ಗೆ ಸಿಎಂ ಸಿದ್ದರಾಮಯ್ಯ (Siddaramaiah) ಶಾಕ್ ಕೊಟ್ಟಿದ್ದಾರೆ. ಬಿಜೆಪಿ ಮೇಯರ್ ತಮ್ಮ ಕೊನೆಯ ಕೌನ್ಸಿಲ್ ಸಭೆ ನಡೆಸದಂತೆ ಸಿಎಂ‌‌ ಮಾಸ್ಟರ್ ಪ್ಲಾನ್ ಮಾಡಿ ಅದರಲ್ಲಿ ಯಶಸ್ವಿ ಕೂಡ ಆಗಿದ್ದಾರೆ.

    ಮೊನ್ನೆಯಷ್ಟೆ ಮೈಸೂರಿಗೆ (Mysuru) ಬಂದಾಗ ಕಾಂಗ್ರೆಸ್ ಪಾಲಿಕೆ ಸದಸ್ಯರು ಸಿಎಂ ಭೇಟಿ ಮಾಡಿ ಸಭೆ ನಡೆಸಿದ್ದ‌ರು. ಈ ಸಭೆಯಲ್ಲಿ ಪಾಲಿಕೆ ಆಯುಕ್ತ, ನಗರಾಭಿವೃದ್ಧಿ ಸಚಿವರು ಕೂಡ ಭಾಗಿಯಾಗಿದ್ದರು. ಜೆಡಿಎಸ್ ಸಹಾಯದಿಂದ ಮೇಯರ್ ಸ್ಥಾನದಲ್ಲಿರುವ ಬಿಜೆಪಿ ಅಧಿಕಾರ ಅವಧಿ ಇದೇ ತಿಂಗಳು 5 ರಂದು ಮುಕ್ತಾಯವಾಗಲಿದೆ. ಇದನ್ನೂ ಓದಿ: ತಮಿಳುನಾಡಿಗೆ ನೀರು – KRS ಡ್ಯಾಂನಲ್ಲಿ 5 ದಿನಕ್ಕೆ 2 TMC ನೀರು ಖಾಲಿ

    ಕೊನೆಯ ಕೌನ್ಸಿಲ್ ಸಭೆಯಲ್ಲಿ ಗ್ರೇಟರ್ ಮೈಸೂರು, ಪೆರಿಪೆರಿ ರಿಂಗ್ ರಸ್ತೆ ಸೇರಿದಂತೆ ಅನೇಕ ವಿಚಾರಗಳನ್ನ ಮಂಡಿಸಲು ಬಿಜೆಪಿ ಮತ್ತು ಜೆಡಿಎಸ್ ಪ್ಲಾನ್ ಮಾಡಿತ್ತು. ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪ್ಲಾನ್ ಮಾಡಿತ್ತು. ಇದೇ ತಿಂಗಳು 1 ರಂದು ನಡೆಸಬೇಕಿದ್ದ‌ ಕೌನ್ಸಿಲ್ ಸಭೆಯನ್ನೇ ಪಾಲಿಕೆ ಆಯುಕ್ತರು ರದ್ದು ಮಾಡಿದ್ದಾರೆ.

    ಅಂದೇ ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವರ ನೇತೃತ್ವದಲ್ಲಿ ಪಾಲಿಕೆ ಎಲ್ಲಾ ಅಧಿಕಾರಿಗಳ ಸಭೆ ಆಯೋಜಿಸಿ ಕೌನ್ಸಿಲ್ ಸಭೆ ರದ್ದಾಗುವಂತೆ ಪ್ಲಾನ್ ಮಾಡಿದ್ದರು. ಸದ್ಯ ಸರ್ಕಾರದ ನಡೆ ಬಗ್ಗೆ ಬಿಜೆಪಿ‌ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ: ಬೆಳಗಾವಿ ಸಚಿವರ ಮಧ್ಯೆ ಶೀತಲ ಸಮರ – ಮಕ್ಕಳಿಗೆ ಎಂಪಿ ಟಿಕೆಟ್ ಕೊಡಿಸಲು ಹೆಬ್ಬಾಳ್ಕರ್-ಜಾರಕಿಹೊಳಿ ಫೈಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೈಸೂರು ಮೇಯರ್ ಸ್ಥಾನ ಬಿಟ್ಕೊಡುವಂತೆ ಸಾ.ರಾ.ಮಹೇಶ್ ಜೊತೆ ಮಾತನಾಡಿದ್ದೇನೆ: ಸೋಮಶೇಖರ್

    ಮೈಸೂರು ಮೇಯರ್ ಸ್ಥಾನ ಬಿಟ್ಕೊಡುವಂತೆ ಸಾ.ರಾ.ಮಹೇಶ್ ಜೊತೆ ಮಾತನಾಡಿದ್ದೇನೆ: ಸೋಮಶೇಖರ್

    – ಮೈಸೂರು ಮೇಯರ್ ಪಟ್ಟಕ್ಕೆ ಜೆಡಿಎಸ್ ಜೊತೆ ಬಿಜೆಪಿ ‘ಷರತ್ತು’ ಒಪ್ಪಂದ!

    ಚಾಮರಾಜನಗರ: ಮೇಯರ್ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡುವಂತೆ ಜೆಡಿಎಸ್ ನ ಮಾಜಿ ಸಚಿವ ಸಾ.ರಾ.ಮಹೇಶ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಯರ್ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟು ಕೊಡುವಂತೆ ಸಾ.ರಾ.ಮಹೇಶ್ ಅವರು ಕೇಳಿದ್ದಾರೆ. ನಾನು 3 ಷರತ್ತು ಹಾಕಿದ್ದೇನೆ, ಅವರು ಸಹ ಷರತ್ತು ಹಾಕಿದ್ದಾರೆ. ಸಾ.ರಾ. ಮಹೇಶ್ ಅವರು ಅವರ ಹೈಕಮಾಂಡ್ ಜೊತೆ ಮಾತನಾಡಲಿದ್ದಾರೆ. ಈ ವಿಚಾರವಾಗಿ ನಾನು ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಮಾತನಾಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಪಿಕ್ಚರ್ ಅಭೀ ಬಾಕಿ ಹೈ ಎಂದ ಆನಂದ್ ಸಿಂಗ್‍ಗೆ ಥಿಯೇಟರ್ ಬಂದ್ ಹೈ ಎಂದ ರಾಜೂ ಗೌಡ

    ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ, ಹಾಗೂ ಮೈಸೂರು ಬಿಜೆಪಿ ನಗರಾಧ್ಯಕ್ಷ ಅವರು ಸಹ ಹೆಚ್.ಡಿ.ಕುಮಾರಸ್ವಾಮಿ ಜೊತೆ ಮಾತನಾಡಲಿದ್ದಾರೆ. ನಾಳೆ ಸಂಜೆ ಅಥವಾ ನಾಳಿದ್ದು ಮೈಸೂರು ಮೇಯರ್ ಯಾರೆಂದು ತಿಳಿಯಲಿದೆ ಎಂದಿದ್ದಾರೆ. ಅಲ್ಲದೇ ಸಚಿವ ಆನಂದ್ ಸಿಂಗ್ ವಿಚಾರವಾಗಿ, ಅವರಿಗೆ ಸಿಎಂ ಅವರು ಏನೆಲ್ಲಾ ಹೇಳಬೇಕೊ ಅದೆಲ್ಲವನ್ನೂ ಎರಡು ದಿನಗಳ ಹಿಂದೆಯೇ ಹೇಳಿದ್ದಾರೆ. ಇನ್ನೊಂದು ವಾರದ ಒಳಗೆ ಎಲ್ಲವೂ ಸರಿಹೋಗಲಿದೆ ಎಂದು ಹೇಳಿದ್ದಾರೆ.

    ಮತ್ತೊಂದೆಡೆ ಕೇರಳ ರಾಜ್ಯದಿಂದ ಇತ್ತೀಚಿನ ದಿನಗಳಲ್ಲಿ ಕೆಲವು ಮಂದಿ ಕರ್ನಾಟಕ ರಾಜ್ಯದೊಳಗೆ ಪ್ರವೇಶಿಸಲು ನಕಲಿ ಆರ್‌ಟಿಪಿಸಿಆರ್ ವರದಿಗಳನ್ನು ತರುತ್ತಿರುವುದು ಚೆಕ್ ಪೋಸ್ಟ್ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಅವರನ್ನು ಹಿಂತಿರುಗಿಸಿ ಕಳುಹಿಸುತ್ತಿದ್ದಾರೆ. ಇದನ್ನು ರಾಜ್ಯ ಸರ್ಕಾರವು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಇಂತಹ ನಕಲಿ ಆರ್‌ಟಿಪಿಸಿಆರ್ ವರದಿ ಹೊಂದಿರುವವರ ವಿರುದ್ಧ ಕೂಡಲೇ ಕ್ರಮ ಕೂಡಲೇ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುವ ಜೊತೆಗೆ ಸ್ಥಳದಲ್ಲೇ ಜಪ್ತಿ ಮಾಡುವಂತೆ ಸ್ಥಳದಲ್ಲಿದ್ದ ಚೆಕ್ ಪೋಸ್ಟ್ ಅಧಿಕಾರಿಗಳು ಹಾಗೂ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ:ಅಕ್ಕೈ ಪದ್ಮಶಾಲಿ ಆಸೆ ನೆರವೇರಿಸಿದ ನಟ ಧನಂಜಯ್