Tag: mysuru dasara 2022

  • ಜಂಬೂ ಸವಾರಿ ಭದ್ರತೆಗೆ ವಿಶೇಷ ಆದ್ಯತೆ- 5000 ಪೊಲೀಸರ ನಿಯೋಜನೆ

    ಜಂಬೂ ಸವಾರಿ ಭದ್ರತೆಗೆ ವಿಶೇಷ ಆದ್ಯತೆ- 5000 ಪೊಲೀಸರ ನಿಯೋಜನೆ

    ಮೈಸೂರು: ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಜಂಬೂಸವಾರಿ ವೇಳೆ ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಸುಮಾರು 5 ಸಾವಿರ ಪೊಲೀಸರನ್ನು ಈಗಾಗಲೇ ನಿಯೋಜಿಸಲಾಗಿದೆ.

    ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜಂಬೂ ಸವಾರಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಿಗಾ ವಹಿಸಲಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ- ಅಂಬಾರಿ ಹೊರಲು ಕ್ಯಾಪ್ಟನ್ ಅಭಿಮನ್ಯು ರೆಡಿ

    ಮೆರವಣಿಗೆಯ ಭದ್ರತೆಗಾಗಿ ಮೈಸೂರು ನಗರದ 1,255 ಪೊಲೀಸರು, ಹೊರ ಜಿಲ್ಲೆಯಿಂದ 3,580, ಗೃಹ ರಕ್ಷಕ ದಳದ 650 ಸಿಬ್ಬಂದಿ ಇರಲಿದ್ದಾರೆ. ಹೀಗೆ ಒಟ್ಟು 5,485 ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮನೆ, ಖಾಸಗಿ ಸಂಸ್ಥೆಗಳು ಸೇರಿ 13 ಸಾವಿರ ಸಿಸಿ ಟಿವಿ ಕ್ಯಾಮೆರಾಗಳು ಹಾಗೂ ಅಂಬಾರಿ ಮಾರ್ಗಕ್ಕೆ ಪೊಲೀಸ್ ಇಲಾಖೆಯಿಂದ ಹೆಚ್ಚುವರಿ 59 ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.

    ಹೆಚ್ಚುವರಿಯಾಗಿ ಮೆರವಣಿಗೆ ನಡೆಯುವ ಜಾಗದಲ್ಲಿ 110 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅನುಚಿತವಾಗಿ ವರ್ತಿಸುವವರ ವಿರುದ್ಧ ಸಿಸಿಟಿವಿ ಜೊತೆ ಮೊಬೈಲ್ ಕಮಾಂಡಿಂಗ್ ವಾಹನದ ಮೂಲಕ ಹದ್ದಿನ ಕಣ್ಣು ಇಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ- ಅಂಬಾರಿ ಹೊರಲು ಕ್ಯಾಪ್ಟನ್ ಅಭಿಮನ್ಯು ರೆಡಿ

    ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ- ಅಂಬಾರಿ ಹೊರಲು ಕ್ಯಾಪ್ಟನ್ ಅಭಿಮನ್ಯು ರೆಡಿ

    ಮೈಸೂರು: ವಿಶ್ವ ವಿಖ್ಯಾತ ದಸರಾ (Mysuru Dasara 2022) ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಜಂಬೂ ಸವಾರಿಯ ಪ್ರಮುಖ ಆಕರ್ಷಣೆ ಗಜ ಪಡೆಯ ಕ್ಯಾಪ್ಟನ್ ಅಭಿಮನ್ಯು (Abhimanyu) ಕೂಡ ಅಂಬಾರಿ ಹೊರಲು ಫಿಟ್ ಆಗಿ ಸಿದ್ಧನಾಗಿದ್ದಾನೆ.

    ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಅಂಬಾರಿ ಹೊತ್ತು ರಾಜಮಾರ್ಗದಲ್ಲಿ ಸಾಗಲು ಗಜಪಡೆ ಸಿದ್ಧವಾಗಿದೆ. ಅರಮನೆ (Mysuru Palace) ಗೆ ಆಗಮಿಸಿದ್ದ ಗಜ ತಂಡದಲ್ಲಿ ಜಂಬೂ ಸವಾರಿಯಲ್ಲಿ ಭಾಗಿಯಾಗುತ್ತಿರೋದು 9 ಆನೆಗಳು ಮಾತ್ರ. ಈ ಬಾರಿ ಜಾನಪದ ತಂಡ, ಸ್ತಬ್ಧ ಚಿತ್ರಗಳು ಹೆಚ್ಚು ಇರುವ ಕಾರಣ ಮೆರವಣಿಗೆಯಲ್ಲಿ ಹೆಚ್ಚು ಆನೆಗಳು (Elephant) ಭಾಗಿಯಾಗಲು ಕಷ್ಟವಾಗುವ ಹಿನ್ನೆಲೆ 9 ಆನೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

    ಜಂಬೂ ಸವಾರಿ ಆನೆಗಳು:
    * ಕ್ಯಾಪ್ಟನ್ – ಅಭಿಮನ್ಯು
    * ನಿಶಾನೆ ಆನೆ – ಅರ್ಜುನ
    * ನೌಫತ್ ಆನೆ- ಗೋಪಿ
    * ಕುಮ್ಕಿ ಆನೆಗಳು – ಕಾವೇರಿ ಮತ್ತು ಚೈತ್ರ
    * ಧನಂಜಯ, ಮಹೇಂದ್ರ
    * ಭೀಮ, ಗೋಪಾಲಸ್ವಾಮಿ ಆನೆಗಳು ಭಾಗಿ ಆಗಲಿವೆ. ಗಜಪಡೆ ಯಶಸ್ವಿಯಾಗಿ ಜಂಬೂ ಸವಾರಿ ಮುಗಿಸುವ ಬಗ್ಗೆ ಡಿಸಿಎಫ್ ಕರಿಕಾಳನ್ ಕೂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ – ಕಾರ್ಣಿಕ ನುಡಿದ ಗೊರವಯ್ಯ

    ಜಂಬೂ ಸವಾರಿ ಪ್ರಮುಖ ಆಕರ್ಷಣೆ ಕ್ಯಾಪ್ಟನ್ ಕೂಲ್ ಅಭಿಮನ್ಯು ಮೂರನೇ ಬಾರಿಗೆ ಅಂಬಾರಿ ಹೊರಲಿದ್ದಾನೆ. ಜಂಬೂ ಸವಾರಿ ವೇಳೆ ಆನೆಗಳ ಆರೋಗ್ಯ ಸುರಕ್ಷತೆ ದೃಷ್ಠಿಯಿಂದ ನಾಲ್ಕು ವೈದ್ಯರ ತಂಡಗಳ ನಿಯೋಜಿಸಲಾಗಿದೆ. ರಾಜ ಮಾರ್ಗದಲ್ಲಿ ಜಂಬೂ ಸವಾರಿ ಹಾದು ಹೋಗುವ ಸರ್ಕಲ್‍ಗಳಾದ ಕೆ.ಆರ್ ಸರ್ಕಲ್, ಆರ್.ಎಂ.ಸಿ ಸರ್ಕಲ್ ಹಾಗೂ ಹೈವೆ ಸರ್ಕಲ್ ಗಳಲ್ಲಿ ವೈದ್ಯರ ತಂಡ ಇರಲಿದೆ. ಮತ್ತೊಂದು ತಂಡ ಗಜಪಡೆ ಜೊತೆಯಲ್ಲೆ ಹೆಜ್ಜೆ ಹಾಕಲಿದೆ. ಬೆಳಗ್ಗೆ 9 ಗಂಟೆ ವೇಳೆಗೆ ಎಲ್ಲಾ ತಂಡಗಳು ನಿಗದಿತ ಸರ್ಕಲ್‍ಗಳಲ್ಲಿ ನಿಯೋಜನೆ ಗೊಳ್ಳಲಿವೆ.

    ಒಟ್ಟಾರೆ ಇದೇ ಮೊದಲ ಬಾರಿಗೆ ದೀಪಾಲಂಕಾರಗಳ ನಡುವೆ ಜಂಬೂ ಸವಾರಿ ಸಾಗಲಿದ್ದು, ವಿದ್ಯುತ್ ದೀಪಾಲಂಕಾರಗಳ ನಡುವೆ ಅಭಿಮನ್ಯುವಿನ ಗಾಂಭೀರ್ಯದ ಹೆಜ್ಜೆ ಹಾಕುತ್ತಾ ಹೇಗೆ ನಾಡದೇವತೆಯನ್ನು ಮೆರವಣಿಗೆ ಮಾಡ್ತಾನೆ ಅನ್ನೋದನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನವರಾತ್ರಿ ಪೂಜಾ ಕೈಂಕರ್ಯಗಳು ಸಂಪನ್ನ- ನಾಳೆ ಆಯುಧಗಳಿಗೆ ಪೂಜೆ

    ನವರಾತ್ರಿ ಪೂಜಾ ಕೈಂಕರ್ಯಗಳು ಸಂಪನ್ನ- ನಾಳೆ ಆಯುಧಗಳಿಗೆ ಪೂಜೆ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಳೆ ನವರಾತ್ರಿಯ 9ನೇ ದಿನದ ಸಂಭ್ರಮ ಮನೆ ಮಾಡಲಿದೆ. ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ಆಯುಧ ಪೂಜೆ ನೆರವೇರಿಸಿ, ಖಾಸಾ ಆಯುಧಗಳಿಗೆ ಯದುವೀರ್ ಪೂಜೆ ಸಲ್ಲಿಸಲಿದ್ದಾರೆ.

    ಮೈಸೂರು (Mysuru Dasara 2022) ಅರಮನೆ ಅಂಗಳದಲ್ಲಿ ನಾಳೆ ಆಯುಧ ಪೂಜೆ (Ayudha Pooja) ಯ ಕೈಂಕರ್ಯಗಳು ನಡೆಯಲಿವೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸತತ 7ನೇ ಬಾರಿ ನವರಾತ್ರಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ. ಆಯುಧ ಪೂಜೆ ಹಿನ್ನೆಲೆಯಲ್ಲಿ ಮುಂಜಾನೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಮತ್ತು ಪಟ್ಟದ ಕತ್ತಿ ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ಆಗಮಿಸಲಿದ್ದು, ಪೂಜೆ ಬಳಿಕ ಖಾಸಾ ಆಯುಧಗಳನ್ನು ಮೆರವಣಿಗೆಯಲ್ಲಿ ಅರಮನೆಗೆ ಕೊಂಡೊಯ್ಯಲಾಗುತ್ತದೆ. ಪೂಜೆ ಬಳಿಕ ಖಾಸಾ ಆಯುಧಗಳನ್ನು ಮೆರವಣಿಗೆಯಲ್ಲಿ ತರಲಾಗುತ್ತದೆ.

    ಪ್ರತಿ ವರ್ಷದಂತೆ ಅರಮನೆಯ ಕಲ್ಯಾಣ ಮಂಟಪದಲ್ಲಿ ಚಂಡಿಕಾ ಹೋಮ ನಡೆಯಲಿದ್ದು, ಮುಂಜಾನೆಯಿಂದಲೇ ಅರಮನೆಯಲ್ಲಿ ಪೂಜಾ ವಿಧಾನಗಳು ಆರಂಭಗೊಳ್ಳಲಿವೆ. ಯದುವೀರ್ ಅವರು ಖಾಸಾ ಆಯುಧಗಳಿಗೆ ಪೂಜೆ ಮುಗಿಸಿ ಕಲ್ಯಾಣ ಮಂಟಪದಿಂದ ಸವಾರಿ ತೊಟ್ಟಿಗೆ ಆಗಮಿಸಲಿದ್ದಾರೆ. ಈ ವೇಳೆ ಕಾಯೋ ಶ್ರೀ ಗೌರಿ ಎನ್ನುವ ಮೈಸೂರು ಸಂಸ್ಥಾನ ಗೀತೆಯನ್ನು ಪೊಲೀಸ್ ಬ್ಯಾಂಡ್‍ನವರು ನುಡಿಸಲಿದ್ದು, ಯದುವೀರ್ ಅವರು ಈ ವೇಳೆ ಗೌರವ ವಂದನೆ ಸ್ವೀಕರಿಸಲಿದ್ದಾರೆ.

    ಪಟ್ಟದ ಆನೆ ಧನಂಜಯ, ನಿಶಾನೆ ಆನೆ ಅಶ್ವಥಾಮ, ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಒಂಟೆ, ರಾಜವಂಶಸ್ಥರು ಬಳಸುವ ವಾಹನಗಳು ಸಾಲಾಗಿ ನಿಲ್ಲಿಸಲಿದ್ದು, ಯದುವೀರ್ ಅವರು ಸಾಂಕೇತಿಕವಾಗಿ ಪುಷ್ಪಾರ್ಚನೆ ಮಾಡುವ ಮೂಲಕ ಪೂಜಾ ವಿಧಿವಿಧಾನ ಮುಗಿಸಿಲಿದ್ದಾರೆ. ಈ ವೇಳೆ ಪತ್ನಿ ತ್ರಿಷಿಕಾ ಕುಮಾರಿ ಸಿಂಗ್ (Trishika Kumari Singh) ಹಾಗೂ ತಾಯಿ ಪ್ರಮೋದಾ ದೇವಿ ಒಡೆಯರ್ (Pramoda Devi wadeyar) ಸಹ ಆಯುಧಾ ಪೂಜಾ ವಿಧಿ ವಿಧಾನಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ. ಸಂಜೆ ಪ್ರಸಕ್ತ ಸಾಲಿನ ಖಾಸಗಿ ದರ್ಬಾರ್ ಕೂಡ ಮುಕ್ತಾಯವಾಗಲಿದ್ದು, ಸಿಂಹಾಸನ ಮತ್ತು ಕಂಕಣ ವಿಸರ್ಜನೆ ನಡೆಯಲಿದೆ.

    ಒಟ್ಟಿನಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ನಾಳೆ ಆಯುಧಪೂಜೆಯ ಸಂಭ್ರಮ ಮನೆ ಮಾಡಿದ್ದು, ಅಂಬಾವಿಲಾಸ ಅರಮನೆಯಲ್ಲಿ ಗತಕಲಾದ ವೈಭವ ಮರುಕಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಮೈಸೂರಿನಲ್ಲಿ ಮೇಳೈಸಿದ ದಸರಾ ವೈಭವ – ರಂಗೋಲಿ ಸ್ಪರ್ಧೆಯಲ್ಲಿ ಮಿಂಚಿದ ನಾರಿಯರು

    ಮೈಸೂರಿನಲ್ಲಿ ಮೇಳೈಸಿದ ದಸರಾ ವೈಭವ – ರಂಗೋಲಿ ಸ್ಪರ್ಧೆಯಲ್ಲಿ ಮಿಂಚಿದ ನಾರಿಯರು

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara 2022) ಮಹೋತ್ಸವದ ಸಂಭ್ರಮ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕೂಡಾ ಹತ್ತು-ಹಲವು ಕಾರ್ಯಕ್ರಮಗಳು ಮೇಳೈಸಿವೆ. ಮಹಿಳಾ ಮತ್ತು ಮಕ್ಕಳ ದಸರಾ, ಯೋಗ ದಸರಾ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ.

    ಹೌದು. ಮೈಸೂರಿನಲ್ಲಿ ನವರಾತ್ರಿ (Navaratri) ಯ ಸಂಭ್ರಮ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಶರನ್ನವರಾತ್ರಿಯ ಎರಡನೇ ದಿನವಾದ ಇಂದು ಅರಮನೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿವೆ. ಜೊತೆಗೆ ಮಹಿಳಾ ಮತ್ತು ಮಕ್ಕಳ ದಸರಾ, ಯೋಗ (Yoga) ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಇಂದು ಚಾಲನೆ ದೊರತಿದೆ. ದಸರಾ ರಂಗೋಲಿ ಸ್ಪರ್ಧೆ, ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ವಸ್ತು ಪ್ರದರ್ಶನಗಳು ಪ್ರಮುಖ ಆಕರ್ಷಣೆ ಆಗಿತ್ತು. ಇದನ್ನೂ ಓದಿ: ದಸರಾ ಕವಿಗೋಷ್ಠಿಯಲ್ಲಿ ಮೃತಪಟ್ಟ ಕವಿಯ ಹೆಸರು – ಆಮಂತ್ರಣ ಪತ್ರಿಕೆಯಲ್ಲಿ ಎಡವಟ್ಟು

    ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಇಂದು ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಅರಮನೆ ಅಂಗಳದಲ್ಲಿ ನೂರಾರು ಸ್ಪರ್ಧಿಗಳು ರಂಗೋಲಿ ಚಿತ್ತಾರ ಬಿಡಿಸಿ ಸಂಭ್ರಮಿಸಿದರು. ಸಾಂಪ್ರದಾಯಿಕ, ಕಲಾತ್ಮಕ, ಆಧುನಿಕ ಶೈಲಿಯಲ್ಲಿ ರಂಗೋಲಿ ಅರಮನೆ ಆವರಣದಲ್ಲಿ ಮೇಳೈಸಿದವು. ರಂಗೋಲಿ ಸ್ಪರ್ಧೆಗೆ ಶಾಸಕ ಎಸ್. ಎ.ರಾಮದಾಸ್ ಚಾಲನೆ ನೀಡಿ ಸ್ಪರ್ಧಿಗಳಿಗೆ ಶುಭ ಹಾರೈಸಿದ್ರು. ಅಲ್ಲದೇ 86 ವರ್ಷದ ವೃದ್ಧೆಯೋರ್ವರು ರಂಗೋಲಿ ಬಿಡಿಸಿ ಎಲ್ಲರ ಗಮನ ಸೆಳೆದರು.

    ಆರೋಗ್ಯ ವೃದ್ಧಿಗಾಗಿ ಯೋಗ ದಸರಾ ಉಪಸಮಿತಿ ವತಿಯಿಂದ ಯೋಗ ವಾಹಿನಿ ಕಾರ್ಯಕ್ರಮವನ್ನ ಹಮ್ಕಿಕೊಳ್ಳಲಾಗಿತ್ತು. ನಗರದ ಜವರೇಗೌಡ ಪಾರ್ಕ್‍ನಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿದರು. ನೂರಾರು ಯೋಗ ಪಟುಗಳು ಸಾಮೂಹಿಕ ಯೋಗಾಭ್ಯಾಸ ಮಾಡಿ ಸಂಭ್ರಮಿಸಿದರು. ಅಲ್ಲದೇ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಜೆ.ಕೆ.ಮೈದಾನದಲ್ಲಿ ಮಹಿಳೆಯರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನ ಆಯೋಜನೆ ಮಾಡಲಾಗಿತ್ತು. 40ಕ್ಕೂ ಹೆಚ್ಚು ಮಳಿಗೆಗಳಲ್ಲಿ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

    ಒಟ್ಟಾರೆ ದಸರಾ ಮಹೋತ್ಸವದ ಎರಡನೇ ದಿನದ ಹಲವು ಕಾರ್ಯಕ್ರಮಗಳಿಗೆ ಇಂದು ಚಾಲನೆ ದೊರೆತಿದ್ದು ಇನ್ನೂ ಎಂಟು ದಿನಗಳ ಕಾಲ ದಸರಾ ವೈಭವ ಕಳೆಗಟ್ಟಲಿದೆ. ಇದನ್ನೂ ಓದಿ: ಪ್ರಮೋದಾ ದೇವಿ ಮುಂದೆ ಮಂಡಿಯೂರಿ ನಮಸ್ಕರಿಸಿದ ಸುಧಾಮೂರ್ತಿ – ಫೋಟೋ ವೈರಲ್

    Live Tv
    [brid partner=56869869 player=32851 video=960834 autoplay=true]

  • ಪ್ರಮೋದಾ ದೇವಿ ಮುಂದೆ ಮಂಡಿಯೂರಿ ನಮಸ್ಕರಿಸಿದ ಸುಧಾಮೂರ್ತಿ – ಫೋಟೋ ವೈರಲ್

    ಪ್ರಮೋದಾ ದೇವಿ ಮುಂದೆ ಮಂಡಿಯೂರಿ ನಮಸ್ಕರಿಸಿದ ಸುಧಾಮೂರ್ತಿ – ಫೋಟೋ ವೈರಲ್

    ಮೈಸೂರು: ಅರಮನೆ ನಗರಿಯಲ್ಲಿ ದಸರಾ (Mysuru Dasara 2022) ಸಂಭ್ರಮ ಕಳೆಗಟ್ಟಿದೆ. ಈ ಮಧ್ಯೆ ಸಾಕಷ್ಟು ಗಮನಸೆಳೆಯುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಖತ್ ಚರ್ಚೆ ಕೂಡ ಆಗುತ್ತಿದೆ.

    ಹೌದು. ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ (Pramoda Devi) ಯ ಮುಂದೆ ಮಂಡಿಯೂರಿ (Bow) ಇನ್ಫೋಸಿಸ್ (Infosys) ಅಧ್ಯಕ್ಷೆ ಸುಧಾಮೂರ್ತಿ (Sudhamurthy) ನಮಸ್ಕರಿಸಿದ್ದಾರೆ. ಈ ಫೋಟೋ (Viral Photo) ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಜೊತೆಗೆ ಸುಧಾಮೂರ್ತಿಯ ಸರಳತೆಗೆ ಜನ ಮತ್ತೊಮ್ಮೆ ಕ್ಲೀನ್ ಬೋಲ್ಡ್ ಆಗಿದ್ದಾರೆ.

    ಚರ್ಚೆ ಆರಂಭವಾಗಿದ್ದು ಹೇಗೆ..?: ಮಗುವಿನ ಮನೆಕೆಲಸಕ್ಕಾಗಿ ವರ್ಕ್‍ಶೀಟ್ ಅನ್ನು ತೋರಿಸುವ ಟ್ವಿಟ್ಟರ್ ಪೋಸ್ಟ್ ನೊಂದಿಗೆ ಇದು ಪ್ರಾರಂಭವಾಯಿತು. “ನಾನು ____ ರಾಜನಿಗೆ,” ಬಿಟ್ಟ ಸ್ಥಳ ತುಂಬುವಂತೆ ಒಂದು ವಾಕ್ಯವನ್ನು ನೀಡಲಾಗಿದ್ದು, ಅದಕ್ಕೆ ‘ತಲೆಬಾಗು’ ಎಂಬ ಆಯ್ಕೆ ನೀಡಲಾಗುತ್ತದೆ. ಇದನ್ನೂ ಓದಿ: ರಾಷ್ಟ್ರಪತಿ ಮುರ್ಮುಗೆ ಕೌದಿ, ರೇಷ್ಮೆ ಸೀರೆ ಗಿಫ್ಟ್ ಕೊಟ್ರು ಸುಧಾ ಮೂರ್ತಿ

    ಮಗುವಿನ ಹೋಂ ವರ್ಕ್ (Home Work) ನಿಂದ ಕಳವಳಗೊಂಡ ತಂದೆ, ನನ್ನ ಮಗುವಿಗೆ ಈ ರೀತಿಯ ಹೋಂ ವರ್ಕ್ ಗಳನ್ನು ಕೊಡಬೇಡಿ. ಇಂತಹ ಪ್ರಜಾಸತ್ತಾತ್ಮಕವಲ್ಲದ ಬೋಧನೆಗಳ ಬಗ್ಗೆ ಶಾಲೆಗಳು ಸ್ವಲ್ಪ ಜಾಗರೂಕರಾಗಿರಬೇಕು. ಅವು ಮಕ್ಕಳ ಮನಸ್ಸಿನಲ್ಲಿ ತಪ್ಪು ಅಭಿಪ್ರಾಯಗಳನ್ನು ತುಂಬಬಹುದು ಎಂದು ಆಕ್ರೋಶ ಹೊರಹಾಕಿ ಗುರುಪ್ರಸಾದ್ ಡಿ.ಎನ್ ಎಂಬವರು ಟ್ವೀಟ್ ಮಾಡಿದ್ದರು.

    ಈ ಟ್ವೀಟ್‍ (Tweet) ಗೆ ಮತ್ತೊಬ್ಬ ಬಳಕೆದಾರ, ಮೈಸೂರು ರಾಜಮನೆತನದ ಸದಸ್ಯರ ಮುಂದೆ ಸುಧಾ ಮೂರ್ತಿಯವರು ಪ್ರಮೋದಾ ದೇವಿಗೆ ನಮಸ್ಕರಿಸುತ್ತಿರುವ ಫೋಟೋ ರಿಟ್ವೀಟ್ ಮಾಡಿದ್ದಾರೆ. ಇದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗಿದೆ. ಹಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ರಾಜಪ್ರಭುತ್ವ ಅಂತ್ಯಗೊಂಡ ದಶಕಗಳ ನಂತರ ರಾಜಮನೆತನದ ಸಂಸ್ಕೃತಿಯನ್ನು ಗೌರವಿಸುವ ಬಗ್ಗೆ ಚರ್ಚೆ ಮಾಡಿದ್ದಾರೆ. ರಾಜಮನೆತನದವರು ಇನ್ನೂ ಸಾಮಾನ್ಯ ಜನರ ಗೌರವಕ್ಕೆ ಅರ್ಹರೇ ಎಂಬ ಅಭಿಪ್ರಾಯದಲ್ಲಿ ಈ ಚರ್ಚೆ ನಡೆದಿದೆ.

    ಹಲವರು ಸುಧಾಮೂರ್ತಿಯವರ ನಡತೆಯನ್ನು ಸಮರ್ಥಿಸಿಕೊಂಡರು. ಫೋಟೋ ನೋಡಿದ ಒಬ್ಬರು, ಅವರು ರೋಲ್ ಮಾಡೆಲ್ (Role Model) ಆಗಿರಬೇಕು ಎಂದು ಬರೆದುಕೊಂಡಿದ್ದಾರೆ. ಅದು ನಮ್ಮ ಸಂಸ್ಕೃತಿ. ವಯಸ್ಸು, ಅಂತಸ್ತು, ಸ್ಥಾನಮಾನಗಳ ಭೇದವಿಲ್ಲದೆ ಎಲ್ಲರೂ ರಾಜಮನೆತನವನ್ನು ಗೌರವಿಸುತ್ತಾರೆ. ಅವಳ ಸಂಸ್ಕೃತಿ ಅವಳಿಗೆ ಇದನ್ನು ಕಲಿಸಿದೆ. ಮತ್ತೊಬ್ಬರು, ಗುಲಾಮಗಿರಿಯು ಆಳವಾಗಿ ಬೇರೂರಿದೆ ಎಂದು ಪೋಸ್ಟ್ ಮಾಡಿದ್ದಾರೆ. ಹಳೆಯ ಮೈಸೂರು ರಾಜ್ಯದ ಜನರು ಯಾವಾಗಲೂ ರಾಜಮನೆತನದ ಬಗ್ಗೆ ಅಪಾರ ಗೌರವವನ್ನು ಹೊಂದಿರುತ್ತಾರೆ. ರಾಣಿಗೆ ನಮಸ್ಕರಿಸುವುದು ಸಾಮಾನ್ಯ ವಿಚಾರವಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಹೀಗೆ ಹಲವಾರು ಚರ್ಚೆಗಳು ನಡೆದಿವೆ. ಸದ್ಯ ಚರ್ಚೆ ಗೀಡಾದ ಫೋಟೋ ಹಳೆಯ ಫೋಟೋವೆಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನೋಡ ಬನ್ನಿ ಬೊಂಬೆ ಸೊಬಗ – ಬೆಂಗ್ಳೂರಿನ ಶ್ರೀವಿದ್ಯಾಮಾನ್ಯ ವಿದ್ಯಾ ಕೇಂದ್ರದಲ್ಲಿ ದಸರಾ ವೈಭವ

    ನೋಡ ಬನ್ನಿ ಬೊಂಬೆ ಸೊಬಗ – ಬೆಂಗ್ಳೂರಿನ ಶ್ರೀವಿದ್ಯಾಮಾನ್ಯ ವಿದ್ಯಾ ಕೇಂದ್ರದಲ್ಲಿ ದಸರಾ ವೈಭವ

    ಬೆಂಗಳೂರು: ಇಲ್ಲಿನ ಶ್ರೀ ವಿದ್ಯಾಮಾನ್ಯ ವಿದ್ಯಾ ಕೇಂದ್ರದಲ್ಲಿ (Sri Vidyamanya Vidya Kendra) ದಸರಾ ಹಬ್ಬದ (Dasara Festival) ಸೊಬಗು ಕಳೆಗಟ್ಟಿದ್ದು, ಭಾರತೀಯ ಸಂಸ್ಕೃತಿಯೇ ಅಲ್ಲಿ ಅನಾವರಣಗೊಂಡಿದೆ.

    ಆಡಳಿತ ಮಂಡಳಿ ಸಹಯೋಗದೊಂದಿಗೆ ಬೋಧಕ ಸಿಬ್ಬಂದಿಯೇ ಆಯೋಜಿಸಿರುವ ಈ ಬೊಂಬೆ ಪ್ರದರ್ಶನದಲ್ಲಿ (Doll Festival) ರಾಮಾಯಣದ ಗತವೈಭವದೊಂದಿಗೆ ಮೈಸೂರಿನ ದಸರಾ (Mysuru Dasara) ಸೊಬಗೇ ಬೊಂಬೆ ಲೋಕದಲ್ಲಿ ಅನಾವರಣಗೊಳಿಸಿದೆ. ಇದನ್ನೂ ಓದಿ: ಕಾಜಿರಂಗ ಉದ್ಯಾನವನದಲ್ಲಿ ಜೀಪ್ ಚಾಲನೆ – ಸದ್ಗುರು, ಹಿಮಂತ ಬಿಸ್ವಾ ಶರ್ಮಾ ವಿರುದ್ಧ FIR

    ಏನೇನು ವಿಶೇಷತೆ?
    ಸಂಪೂರ್ಣ ರಾಮಾಯಣ ದೃಶ್ಯಗಳಾದ ರಾಮನ ಹುಟ್ಟು, ವನವಾಸ, ಶ್ರೀರಾಮನ ಪಟ್ಟಾಭಿಷೇಕ, ಲವಕುಶರ ಜನನ, ಲವಕುಶರ ಪಟ್ಟಾಭೀಷೇಕ, ಮೈಸೂರು ದಸರಾ ಜಂಬೂ ಸವಾರಿ ಗೊಂಬೆಗಳು, ಶ್ರೀ ಕೃಷ್ಣ ಲೀಲಾ, ನವದುರ್ಗೆಯರು, ಮದುವೆ ಮಂಟಪ, ಚೆನ್ನಪಟ್ಟಣದ ಬೊಂಬೆಗಳು, ಪಟ್ಟದ ಬೊಂಬೆಗಳು, ತೋಪುಗಳು, ಕಾಮದೇನು, ಹಳ್ಳಿಗಾಡು ಸೇರಿದಂತೆ ಅನೇಕ ಪ್ರಕಾರದ ಬೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದು, ನೋಡುಗರನ್ನು ಕೈಬೀಸಿ ಕರೆಯುತ್ತಿದೆ. ಇದನ್ನೂ ಓದಿ: ರಷ್ಯಾದ ಶಾಲೆಯಲ್ಲಿ ಮನಸ್ಸೋಇಚ್ಛೆ ಗುಂಡು ಹಾರಿಸಿದ ಬಂದೂಕುಧಾರಿ- 5 ಮಕ್ಕಳು ಸೇರಿ 9 ಮಂದಿ ದುರ್ಮರಣ

    ಕಳೆದ 7 ವರ್ಷಗಳಿಂದಲೂ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ದಸರಾ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಹಾಗೆಯೇ ಈ ಬಾರಿ ಸಂಪೂರ್ಣ ರಾಮಾಯಣ (Sri Ramayana), ಕೃಷ್ಣ ಲೀಲೆ, ಮಹಾಭಾರತದ ಸನ್ನಿವೇಷಗಳು, ಪೂರಿ ಜಗನ್ನಾಥ ರಥಯಾತ್ರೆ, ಮೈಸೂರು ದಸರಾ ಪ್ರದರ್ಶನದ ದೃಶ್ಯಗಳನ್ನು ಬೊಂಬೆ ಲೋಕದಲ್ಲಿ ಕಟ್ಟಿಕೊಟ್ಟಿದ್ದೇವೆ. ನಾಡ ಹಬ್ಬವನ್ನು ಉಳಿಸುವುದು ನಮ್ಮ ಸಂಸ್ಕೃತಿ ಹಾಗೂ ಜವಾಬ್ದಾರಿಯಾಗಿದೆ. ನಾವೆಲ್ಲರೂ ಒಟ್ಟಾಗಿ ದಸರಾ ಸಂಭ್ರಮಿಸೋಣ ಎಂದು ಪ್ರಾಂಶುಪಾಲರಾದ ಶಾರದಾ ಮನವಿ ಮಾಡಿದ್ದಾರೆ.

    ಬೊಂಬೆ ಪ್ರರ್ದಶನ ಇಂದಿನಿಂದ ಶುರುವಾಗಿದ್ದು, ಅಕ್ಟೋಬರ್‌ 5ರ ವರೆಗೂ ನಡೆಯಲಿದೆ. ಪ್ರತಿದಿನ ಬೆಳಗ್ಗೆ 9.30 ರಿಂದ ಸಂಜೆ 6.30ರ ವರೆಗೆ ವೀಕ್ಷಿಸಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮೈಸೂರಿನಲ್ಲಿ ದಸರಾ ಸಂಭ್ರಮ- ಚಿನ್ನದ ಅಂಬಾರಿಯ ಉತ್ಸವ ಮೂರ್ತಿಗೆ ಪೂಜೆ

    ಮೈಸೂರಿನಲ್ಲಿ ದಸರಾ ಸಂಭ್ರಮ- ಚಿನ್ನದ ಅಂಬಾರಿಯ ಉತ್ಸವ ಮೂರ್ತಿಗೆ ಪೂಜೆ

    ಮೈಸೂರು: ನಾಡಹಬ್ಬ ದಸರಾ (Mysuru Dasara 2022) ಗೆ ಕ್ಷಣಗಣನೆ ಶುರುವಾಗಿದೆ. ಚಿನ್ನದ ಅಂಬಾರಿಯಲ್ಲಿ ಕೂರುವ ತಾಯಿ ಚಾಮುಂಡಿ (Chamundi) ಯ ಉತ್ಸವ ಮೂರ್ತಿ ನೋಡಲು ಕೋಟ್ಯಂತರ ಜನ ಕಾಯುತ್ತಿದ್ದಾರೆ. ದಸರಾದ ಪ್ರಮುಖ ಆಕರ್ಷಣೆಯಾದ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯ ಸ್ವಚ್ಛತಾ ಕಾರ್ಯ ಚಾಮುಂಡಿ ಬೆಟ್ಟದಲ್ಲಿ ಶುರುವಾಗಿದೆ.

    ದಸರಾ ಮುಗಿದ ಮೇಲೆ ಈ ಉತ್ಸವ ಮೂರ್ತಿ ಅರಮನೆ (Mysuru palace) ಮಂಡಳಿಯ ಖಜಾನೆಯಲ್ಲಿ ಇರುತ್ತದೆ. ದಸರೆಗೆ ಎರಡು ದಿನ ಮುಂಚಿತವಾಗಿ ಚಾಮುಂಡಿ ಬೆಟ್ಟಕ್ಕೆ ಉತ್ಸವ ಮೂರ್ತಿ ತಂದು ಸ್ವಚ್ಛತಾ ಕಾರ್ಯ ನೆರವೇರಿಸಿ ಪೂಜೆ ಆರಂಭಿಸಲಾಗುತ್ತದೆ. ನವರಾತ್ರಿಯ 9 ದಿನವೂ ಈ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಮೂರ್ತಿಗೆ ಶಕ್ತಿ ತುಂಬಲಾಗುತ್ತದೆ.

    ನಾಳೆ (ಸೋಮವಾರ) ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮ (Droupadi Murmu) ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯ್ಲಲಿ ಇಂದು ಚಾಮುಂಡಿ ಬೆಟ್ಟಕ್ಕೆ ಸಚಿವ ಎಸ್.ಟಿ.ಸೋಮಶೇಖರ್ (S.T Somashekhar) ಹಾಗೂ ಸಂಸದ ಪ್ರತಾಪ್ ಸಿಂಹ (Pratap Simha) ಭೇಟಿ ನೀಡಿ ಸಿದ್ಧತೆ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ನಾಳೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿನ ಪೂಜಾ ಕೈಂಕರ್ಯಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

    ಚಾಮುಂಡಿ ಬೆಟ್ಟದಲ್ಲಿ ಬೃಹತ್ ವೇದಿಕೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದ್ದು, ಸಂಪೂರ್ಣ ಸಿಸಿಟಿವಿ ಕಣ್ಗಾವಲಿನಲ್ಲಿ ವೇದಿಕೆ ಇರಲಿದೆ. ವೇದಿಕೆ ಹಿಂಭಾಗದಲ್ಲಿ ಎಲ್‍ಇಡಿ ಪರದೆ ಇರಲಿದೆ. ವೇದಿಕೆಯಲ್ಲಿ ರಾಷ್ಟ್ರಪತಿ (President), ರಾಜ್ಯಪಾಲರು (Governor), ಸಿಎಂ (Chief Minister), ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೇಂದ್ರ 6 ಸಚಿವರು ಸೇರಿದಂತೆ 13 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.  ಇದನ್ನೂ ಓದಿ: ಕೊರೋನಾ ಬಳಿಕ ಅದ್ದೂರಿ ದಸರಾ- ವಿದ್ಯುತ್ ದೀಪಾಲಂಕಾರದ ಬೆಳಕಲ್ಲಿ ಸಾಗಲಿದೆ ಅಂಬಾರಿ

    ಸಾರ್ವಜನಿಕರಿಗೂ ದಸರಾ ಉದ್ಘಾಟನೆ ವೀಕ್ಷಣೆಗೆ ಅವಕಾಶ ನೀಡಲಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗುತ್ತಿದೆ. ತಾವರೆಕಟ್ಟೆ ಬಳಿ ಪೊಲೀಸರಿಂದ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಬೆಟ್ಟಕ್ಕೆ ಹೋಗುವ ಪ್ರತಿಯೊಂದು ವಾಹನಗಳನ್ನು 20 ಕ್ಕೂ ಹೆಚ್ಚು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊರೋನಾ ಬಳಿಕ ಅದ್ದೂರಿ ದಸರಾ- ವಿದ್ಯುತ್ ದೀಪಾಲಂಕಾರದ ಬೆಳಕಲ್ಲಿ ಸಾಗಲಿದೆ ಅಂಬಾರಿ

    ಕೊರೋನಾ ಬಳಿಕ ಅದ್ದೂರಿ ದಸರಾ- ವಿದ್ಯುತ್ ದೀಪಾಲಂಕಾರದ ಬೆಳಕಲ್ಲಿ ಸಾಗಲಿದೆ ಅಂಬಾರಿ

    ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ (Mysuru Dasara-2022) ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಗೆ ದಿನ ಗಣನೆ ಆರಂಭವಾಗಿದೆ. ಈ ಬಾರಿ ಜಂಬೂ ಸವಾರಿ ಮೆರವಣಿಗೆ ವಿದ್ಯುತ್ ದೀಪಾಲಂಕಾರದ ನಡುವೆ ಸಾಗಲಿರುವುದು ವಿಶೇಷ. ಮೆರವಣಿಗೆಗಾಗಿ ಕ್ಯಾಪ್ಟನ್ ಅಭಿಮನ್ಯು (Abhimanyu) ಮತ್ತು ಟೀಂ ಭರ್ಜರಿ ತಾಲೀಮು ನಡೆಸುತ್ತಿವೆ.

    ಹೌದು. ಕಳೆದ 2 ವರ್ಷಗಳ ಹಿಂದೆ ಇಡೀ ರಾಷ್ಟ್ರವನ್ನು ಬಿಟ್ಟು ಬಿಡದೇ ಕಾಡುತ್ತಿದ್ದ ಕೊರೋನಾದಿಂದ ದಸರಾ ಮಹೋತ್ಸವದ ಸಂಭ್ರಮ ಮಂಕಾಗಿ ಹೋಗಿತ್ತು. ದಸರಾ ಮಹೋತ್ಸವದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದಾಗಿದ್ದವು. ಅಲ್ಲದೇ ದಸರಾ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆ ಕೇವಲ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಬಾರಿ ಕೊರೋನಾ (Corona Virus) ಮಹಾಮಾರಿಯಿಂದ ನಾವುಗಳು ದೂರವಾಗಿರುವ ಕಾರಣ ದಸರಾ ಮಹೋತ್ಸವ ಎಂದಿನಂತೆ ವಿಜೃಂಭಣೆಯಿಂದ ಜರುಗಲಿದೆ.

    ಪ್ರತಿ ವರ್ಷದಂತೆ ಈ ಬಾರಿಯೂ ಅರಮನೆಯ ಆವರಣದಿಂದ ಬನ್ನಿಮಂಟಪದವರೆಗೆ ಸಾಗಲಿದೆ. ಮೂರನೇ ಬಾರಿಗೆ ಅಂಬಾರಿ ಹೊರುತ್ತಿರುವ ಅಭಿಮನ್ಯು 6.30 ಕಿಲೋಮೀಟರ್ ಜಂಬೂಸವಾರಿ ಮೆರವಣಿಗೆಯಲ್ಲಿ ಗಾಂಭೀರ್ಯದ ರಾಜನಡಿಗೆ ಹಾಕಲಿದ್ದಾನೆ. ಇದನ್ನೂ ಓದಿ: ಸೆ.26ರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ

    ಅಕ್ಟೋಬರ್ 5ರಂದು ಇಡೀ ವಿಶ್ವವೇ ಸಾಂಸ್ಕೃತಿಕ ನಗರಿ ಮೈಸೂರಿನ ಕಡೆಗೆ ತಿರುಗಿ ನೋಡಲಿದೆ. ಯಾಕಂದ್ರೆ ಅಂದು ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆ ಜರುಗಲಿದೆ. ಅಂದು ಸಂಜೆ 5 ಗಂಟೆ 7ನಿಮಿಷದಿಂದ 5.18ರ ವರೆಗೆ ಸಲ್ಲುವ ಶುಭ ಮೀನಾ ಲಗ್ನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಗಣ್ಯರು ಅಂಬಾರಿಯಲ್ಲಿ ಕೂತ ನಾಡದೇವತೆ ಚಾಮುಂಡೇಶ್ವರಿ (Chamundeshwari)ಗೆ ಪುಷ್ಪಾರ್ಚಾನೆ ಸಲ್ಲಿಸಿ, ಜಂಬೂ ಸವಾರಿ ಮೆರವಣಿಗೆ ಚಾಲನೆ ನೀಡಲಿದ್ದಾರೆ.

    6.30 ಕಿಲೋಮೀಟರ್ ದೂರವನ್ನು ಕ್ರಮಿಸಲು ಅಭಿಮನ್ಯು & ಟೀಮ್‍ಗೆ 2 ಗಂಟೆಗಳು ಬೇಕಾಗುತ್ತದೆ. ಅಂದ್ರೆ 5.20 ರಿಂದ 7.30ರ ವರೆಗೆ ಜಂಬೂ ಸವಾರಿ ಮೆರವಣಿಗೆ ಜರುಗಲಿದೆ. ಅಷ್ಟೊತ್ತಿಗೆ ಸೂರ್ಯ ಮುಳುಗಿದ ಕಾರಣ ಕತ್ತಲು ಆವರಿಸಿರುತ್ತದೆ. ಹೀಗಾಗಿ ಜಂಬೂ ಸವಾರಿ ಮೆರವಣಿಗೆ ವಿದ್ಯುತ್ ದೀಪಾಲಂಕಾರದ ನಡುವೆ ಸಾಗಬೇಕಾಗಿದೆ. ಅಂದು ದಸರಾ ಗಜಪಡೆಗೆ ವಿದ್ಯುತ್ ದೀಪಾಲಂಕಾರಕ್ಕೆ ಬೆದರಬಾರದೆಂದು ಸದ್ಯ ವಿದ್ಯುತ್ ದೀಪಾಲಂಕಾರದ ನಡುವೆ ತಾಲೀಮು ಮಾಡಿಸಲಾಗುತ್ತಿದೆ.

    ಒಟ್ಟಾರೆ ಕೊರೋನಾ ರಣಕೇಕೆಯಿಂದ ಮಂಕಾಗಿದ್ದ ಕಳೆದ ಎರಡು ವರ್ಷದ ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ಈ ಬಾರಿ ವಿದ್ಯುತ್ ದೀಪಾಲಂಕಾರದ ನಡುವೆ ಇಡೀ ವಿಶ್ವವನ್ನೇ ತನ್ನತ್ತ ಸೆಳೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿಗಳಿಗೆ ಅಧಿಕೃತ ಆಹ್ವಾನ

    ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿಗಳಿಗೆ ಅಧಿಕೃತ ಆಹ್ವಾನ

    ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022ರ (Mysuru Dasara- 2022) ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ (S T Somashekhar) ಅವರು ಗುರುವಾರ ಆಹ್ವಾನ ನೀಡಿದರು.

    ಈ ಸಂದರ್ಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ (Shashikala Jolle), ಸಂಸದ ಪ್ರತಾಪ್ ಸಿಂಹ (Pratap Simha), ಅಣ್ಣಸಾಹೇಬ ಶಂಕರ ಜೊಲ್ಲೆ ಮತ್ತು ಮೈಸೂರು ಮೇಯರ್ ಶಿವಕುಮಾರ್ ( Mysuru Mayor Shivakumar) ಅವರು ಉಪಸ್ಥಿತರಿದ್ದರು. ಇದನ್ನೂ ಓದಿ: ಮೈಸೂರು ಜಿಲ್ಲೆ ಶಾಲೆಗಳಿಗೆ ಸೆ.26 ರಿಂದ ಅ.9ರವರೆಗೂ ದಸರಾ ರಜೆ ಘೋಷಣೆ

    ಸೆ.26ರಂದು ನಾಡದೇವತೆ ಚಾಮುಂಡೇಶ್ವರಿ ದೇವಿ (Chamundeshwari) ಯ ಅಗ್ರಪೂಜೆಯೊಂದಿಗೆ ನಾಡಹಬ್ಬ ಮೈಸೂರು ದಸರಾ ಆರಂಭವಾಗಲಿದೆ. ಅಂದು ಬೆಳಗ್ಗೆ 9.45ರಿಂದ 10.05ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ರಾಷ್ಟ್ರಪತಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

    ಇದೇ ಪ್ರಥಮಬಾರಿಗೆ ರಾಷ್ಟ್ರಪತಿಗಳು ದಸರಾ ಮಹೋತ್ಸವ ಉದ್ಘಾಟನೆ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.  ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿ ಪುಷ್ಪಾರ್ಚನೆಗೆ ಪ್ರಧಾನಿ ಬರಲ್ಲ: ಎಸ್.ಟಿ.ಸೋಮಶೇಖರ್

    ರಾಜ್ಯ ಹೈಕೋರ್ಟ್ ನ ಹಂಗಾಮಿ ಮುಖ್ಯನ್ಯಾಯಮೂರ್ತಿ ಅಲೋಕ್ ಆರಾಧೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಹಾಗೂ ಸಚಿವರು, ಶಾಸಕರು ಸೇರಿದಂತೆ ಗಣ್ಯಾತಿಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕಳೆಗಟ್ಟಿದ ಸಾಂಸ್ಕೃತಿಕ ನಗರಿ ಮೈಸೂರು- ಇಂದಿನಿಂದ ದಸರಾ ಆನೆಗಳಿಗೆ ತಾಲೀಮು

    ಕಳೆಗಟ್ಟಿದ ಸಾಂಸ್ಕೃತಿಕ ನಗರಿ ಮೈಸೂರು- ಇಂದಿನಿಂದ ದಸರಾ ಆನೆಗಳಿಗೆ ತಾಲೀಮು

    ಮೈಸೂರು: ಅರಮನೆಯ ಆವರಣದಲ್ಲಿರುವ ದಸರಾ ಗಜಪಡೆಗೆ ಇಂದಿನಿಂದ ತಾಲೀಮು ಶುರುವಾಗಿದೆ. ಅರಮನೆಯಿಂದ ಬನ್ನಿಮಂಟಪದವರೆಗೂ ಈ ತಾಲೀಮು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ನಡೆಯಲಿದೆ.

    ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ತಾಲೀಮು ಶುರುವಾಗಲಿದೆ. ಮೊದಲ ವಾರ ಆನೆಗಳಿಗೆ ತಾವು ಸಾಗಬೇಕಾದ ಹಾದಿಯ ಪರಿಚಯ ಮಾಡಿಸುವ ಕೆಲಸ ನಡೆಯುತ್ತದೆ. ನಂತರ ಹಂತ ಹಂತವಾಗಿ ಆನೆಗಳಿಗೆ ಭಾರ ಹಾಕಿ ತಾಲೀಮು ನಡೆಸಲಾಗುತ್ತದೆ.

    ಎರಡು ವರ್ಷ ಕರೋನಾ ಹಿನ್ನೆಲೆಯಲ್ಲಿ ದಸರಾ ನಡೆಯದ ಕಾರಣ ಈ ಮಾರ್ಗವನ್ನು ಆನೆಗಳು ಮರೆತಿರುತ್ತವೆ. ಈ ದೃಷ್ಟಿಯಿಂದ ಈ ಬಾರಿ ಒಂದು ವಾರ ಕಾಲ ಕೇವಲ ಹಾದಿ ಪರಿಚಿಯಿಸುಚ ತಾಲೀಮು ನಡೆಸಲಾಗುತ್ತಿದೆ. ಇದನ್ನೂ ಓದಿ: ಬೆಂಗ್ಳೂರಿನ ಖಾಸಗಿ ಶಾಲೆಗಳಲ್ಲಿ ರಾಷ್ಟ್ರಗೀತೆಗೆ ಅಪಮಾನ

    57 ವರ್ಷದ ಅಭಿಮನ್ಯು, 22 ವರ್ಷದ ಭೀಮ, 38 ವರ್ಷದ ಮಹೇಂದ್ರ ಹಾಗೂ 39 ವರ್ಷದ ಗೋಪಲಸ್ವಾಮಿ, 63 ವರ್ಷದ ಅರ್ಜುನ, 59 ವರ್ಷದ ವಿಕ್ರಮ, 44 ವರ್ಷದ ಧನಂಜಯ, 45 ವರ್ಷದ ಕಾವೇರಿ, 41 ವರ್ಷದ ಗೋಪಿ, 40 ವರ್ಷದ ಶ್ರೀರಾಮ ಹಾಗೂ 63 ವರ್ಷದ ವಿಜಯಾ, 49 ವರ್ಷದ ಚೈತ್ರಾ, 21 ವರ್ಷದ ಲಕ್ಷ್ಮಿ ಹಾಗೂ 18 ವರ್ಷದ ಪಾರ್ಥಸಾರಥಿ ಆನೆಗಳ ಆಗಮನವಾಗಿದೆ.

    Live Tv
    [brid partner=56869869 player=32851 video=960834 autoplay=true]