Tag: Mysuru City Corporation

  • ಇನ್ನೆರಡು ತಿಂಗಳಲ್ಲಿ ಸಿಎಂ ಮನೆ ಗೃಹಪ್ರವೇಶ – ಮನೆಗೆ 100 ಮೀ ದೂರದಲ್ಲಿದ್ದ ತರಕಾರಿ, ಫಾಸ್ಟ್‌ಫುಡ್‌ ಅಂಗಡಿ ತೆರವು

    ಇನ್ನೆರಡು ತಿಂಗಳಲ್ಲಿ ಸಿಎಂ ಮನೆ ಗೃಹಪ್ರವೇಶ – ಮನೆಗೆ 100 ಮೀ ದೂರದಲ್ಲಿದ್ದ ತರಕಾರಿ, ಫಾಸ್ಟ್‌ಫುಡ್‌ ಅಂಗಡಿ ತೆರವು

    ಮೈಸೂರು: ಮೈಸೂರಿನ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಮನೆ ಕಟ್ಟಿಸುತ್ತಿದ್ದು, ಒಂದೆರಡು ತಿಂಗಳಲ್ಲಿ ಮನೆ ಗೃಹ ಪ್ರವೇಶ ಆಗಲಿದೆ. ಈ ಹೊತ್ತಿನಲ್ಲೇ ಮನೆಗೆ ಕೂಗಳತೆ ದೂರದಲ್ಲಿರುವ ತರಕಾರಿ, ಟೀ, ಫಾಸ್ಟ್‌ಫುಡ್‌ ಅಂಗಡಿಗಳ ತೆರವಿಗೆ ನಗರ ಪಾಲಿಕೆ ಮುಂದಾಗಿದೆ.

    ಮೈಸೂರು ಪಾಲಿಕೆಯು ವಿಶ್ವಮಾನವ ಜೋಡಿ ರಸ್ತೆಯ ಬೀದಿಬದಿ ವ್ಯಾಪಾರಸ್ಥರ ಅಂಗಡಿ ತೆರವಿಗೆ ನೋಟಿಸ್ ನೀಡಿದೆ. ಪಾಲಿಕೆಯ ಈ ನಿರ್ಧಾರಕ್ಕೆ ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಗುರುವೈಭವೋತ್ಸವ ಸಂಭ್ರಮ – ಇಂದು ರಾಯರ 404ನೇ ಪಟ್ಟಾಭಿಷೇಕ ಮಹೋತ್ಸವ

    ಸಿಎಂ ಸಿದ್ದರಾಮಯ್ಯ ಮೈಸೂರಿನ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಮನೆ ಕಟ್ಟಿಸುತ್ತಿದ್ದಾರೆ. ಇನ್ನೂ ಒಂದೆರಡು ತಿಂಗಳಲ್ಲಿ ಮನೆ ಗೃಹಪ್ರವೇಶ ಮಾಡಲಾಗುತ್ತಿರುವ ಬೆನ್ನಲ್ಲೇ, ನಗರ ಪಾಲಿಕೆಯಿಂದ ದಿಢೀರ್ ಫುಟ್‌ಪಾತ್ ತೆರವು ಹೆಸರಲ್ಲಿ ಮನೆಯ ಕೂಗಾಳತೆ ದೂರದಲ್ಲಿರುವ 20 ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಸ್ಥರನ್ನು ಎತ್ತಂಗಡಿ ಮಾಡಿಸಲಾಗುತ್ತಿದೆ. ಇದನ್ನೂ ಓದಿ: ವಿವಿಗಳಿಂದ ಲಾಭವಿಲ್ಲ ಎಂದಿದೆ ಕಾಂಗ್ರೆಸ್ ಸರ್ಕಾರ.. ಶಿಕ್ಷಣವೆಂದರೆ ವ್ಯಾಪಾರವಲ್ಲ: ಅಶೋಕ್ ಕಿಡಿ

    ಸಿಎಂ ಮನೆಯಿಂದ 100 ಮೀಟರ್ ಅಂತರದಲ್ಲಿ 20ಕ್ಕೂ ಜನರು ತರಕಾರಿ, ಟೀ, ಫಾಸ್ಟ್‌ಫುಡ್‌ ಅಂಗಡಿ ಇಟ್ಟುಕೊಂಡಿದ್ದಾರೆ. ಕಳೆದ 35 ವರ್ಷಗಳಿಂದ ಅಲ್ಲೇ ವ್ಯಾಪಾರ ಮಾಡುತ್ತಿದ್ದರು. ಇದೀಗ ಮೈಸೂರು ಪಾಲಿಕೆ, ಬೆಂಗಳೂರು ಮೂಲದ ವಕೀಲರೊಬ್ಬರು ದೂರು ಕೊಟ್ಟಿದ್ದಾರೆ ಎಂದು ಹೇಳಿ ವ್ಯಾಪಾರಸ್ಥರಿಗೆ ಅಂಗಡಿ ಹಾಕದಂತೆ ನೋಟಿಸ್ ನೀಡಿದ್ದಾರೆ.

    ಮೈಸೂರಿನಲ್ಲಿ ಅತಿ ಹೆಚ್ಚು ಜನ ಓಡಾಡುವ ಸಯ್ಯಾಜಿರಾವ್ ರಸ್ತೆಯಲ್ಲೇ ಫುಟ್‌ಪಾತ್‌ನಲ್ಲಿ ತೆರವು ಮಾಡುತ್ತಿಲ್ಲ. ಮೈಸೂರಿನ ದೇವರಾಜ ಮಾರ್ಕೆಟ್, ಬಂಬೂ ಬಜಾರ್ ರಸ್ತೆ, ಬಸ್ ನಿಲ್ದಾಣ ಸುತ್ತಮುತ್ತಾ ಫುಟ್‌ಪಾತ್‌ನಲ್ಲಿ ವ್ಯಾಪಾರ ಜೋರಿದೆ. ಯಾವ ರಸ್ತೆಯ ಮೇಲೂ ಪ್ರಯೋಗ ಆಗದ ತೆರವಿನ ಕಾರ್ಯ ವಿಶ್ವಮಾನವ ಜೋಡಿ ರಸ್ತೆ ಮೇಲೆ ಮಾಡಲಾಗುತ್ತಿದೆ. ಸಿಎಂ ಮನೆ ಕಟ್ಟುತ್ತಿದ್ದಾರೆ ಎಂಬ ಕಾರಣಕ್ಕೆ ಇಲ್ಲದ ನೆಪ ಹೇಳಿ ಅಂಗಡಿ ತೆರವು ಮಾಡುತ್ತಿದ್ದಾರೆ ಎಂದು ವ್ಯಾಪಾರಸ್ಥರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ| ತಂದೆ, ಮಗಳು ನೇಣಿಗೆ ಶರಣು – ಮಗಳ ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ ಶಂಕೆ

  • MUDA Scam; ಇ.ಡಿ ವಿಚಾರಣೆ ಬೆನ್ನಲ್ಲೇ ಪಾಲಿಕೆ ನೌಕರ ವಜಾ

    MUDA Scam; ಇ.ಡಿ ವಿಚಾರಣೆ ಬೆನ್ನಲ್ಲೇ ಪಾಲಿಕೆ ನೌಕರ ವಜಾ

    – ಮುಡಾ ಹಗರಣದ ಕಿಂಗ್‌ಪಿನ್ ಆಗಿದ್ದ ಎಸ್‌ಡಿಎ ಬಿ.ಕೆ.ಕುಮಾರ್

    ಮೈಸೂರು: ಮುಡಾ ಹಗರಣದ (MUDA Scam Case) ತನಿಖೆ ನಡೆಸುತ್ತಿರುವ ಇ.ಡಿ ವಿಚಾರಣೆಗೆ ಹಾಜರಾಗಿದ್ದ ಮೈಸೂರು ಮಹಾನಗರ ಪಾಲಿಕೆಯ ನೌಕರನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

    ಇ.ಡಿ (ED) ಅಧಿಕಾರಿಗಳು ಮುಡಾ ಹಗರಣದ ಕಿಂಗ್‌ಪಿನ್ ದ್ವಿತೀಯ ದರ್ಜೆ ಸಹಾಯಕ ಬಿ.ಕೆ.ಕುಮಾರ್‌ನನ್ನು ವಿಚಾರಣೆಗೆ ಒಳಪಡಿಸಿದ್ದರು. ಇ.ಡಿ ವಿಚಾರಣೆ ಬೆನ್ನಲ್ಲೇ ಕುಮಾರ್‌ನನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಇಬ್ಬರು ಸಚಿವರಿಂದಲೇ ಮುಡಾ ಅಕ್ರಮಕ್ಕೆ ಸಹಕಾರ!

    ಕುಮಾರ್ ಪಾಲಿಕೆ ನೌಕರನಾಗಿ ಕೆಲಸ ಆರಂಭಿಸಿದ್ದ. ಹೆಚ್ಚುವರಿ ಕೆಲಸಕ್ಕಾಗಿ ಮುಡಾಗೆ ನೇಮಕವಾಗಿದ್ದ. ಆದರೆ, ಈ ಆಸಾಮಿ ಮುಡಾದಲ್ಲಿ ಕೆಲಸ ಮಾಡುತ್ತಾ ಮಹಾನಗರ ಪಾಲಿಕೆಯಿಂದಲೂ ಸಂಬಳ ಪಡೆಯುತ್ತಿದ್ದ. ಎರಡೂ ಸರ್ಕಾರಿ ಕಚೇರಿಗಳಲ್ಲಿ ಏಕಕಾಲದಲ್ಲಿ ಕರ್ತವ್ಯ ನಿರ್ವಹಿಸಿ ಎರಡೆರಡು ವೇತನ ಪಡೆದು ಕಾನೂನು ಉಲ್ಲಂಘನೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಸೇವೆಯಿಂದ ವಜಾ ಮಾಡಲಾಗಿದೆ.

    ನಾಲ್ಕು ದಿನಗಳ ಹಿಂದೆ ಬಿ.ಕೆ.ಕುಮಾರ್‌ಗೆ ಜಾರಿ ನಿರ್ದೇಶನಾಲಯ ಡ್ರಿಲ್ ಮಾಡಿತ್ತು. ಮುಡಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹಲವು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪ ಈತನ ಮೇಲಿದೆ. ಹಿಂದಿನ ಕಮಿಷನರ್‌ಗಳಿಗೆ ಖಾಲಿ ನಿವೇಶನಗಳ ಬಗ್ಗೆ ಮಾಹಿತಿ ಹಾಗೂ ಮಂಜೂರಾತಿ ಮಾಡಲು ಅಗತ್ಯವಿದ್ದ ದಾಖಲೆಗಳನ್ನು ತಂದು ಕೊಡುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮುಡಾ ಕೇಸಲ್ಲಿ ಆಪ್ತರಿಗೆ ಸತತ 9 ಗಂಟೆ ಇಡಿ ಡ್ರಿಲ್; ಸಿಎಂಗೂ ಸಮನ್ಸ್ ಸಾಧ್ಯತೆ

    ಮುಡಾದಲ್ಲಿ ಸಂರಕ್ಷಿಸಿ ಇಡಲಾಗಿದ್ದ 8 ಸಾವಿರ ಸೈಟ್‌ಗಳ ಬಗ್ಗೆ ಅಧಿಕಾರಿ ಕುಮಾರ್ ಮಾಹಿತಿ ನೀಡಿದ್ದ. ಈ ಸೈಟ್‌ಗಳನ್ನು 50-50 ನಿಯಮದಲ್ಲಿ ಆಯುಕ್ತರು ಮಂಜೂರು ಮಾಡಿದ್ದರು. ಹಿಂದಿನ ಆಯುಕ್ತರಾದ ನಟೇಶ್ ಹಾಗೂ ದಿನೇಶ್‌ಕುಮಾರ್‌ಗೆ ಅಕ್ರಮದಲ್ಲಿ ಸಹಾಯ ಮಾಡಿದ ಆರೋಪ ಈ ಅಧಿಕಾರಿ ಮೇಲಿದೆ.

  • ಮೈಸೂರು ಮೇಯರ್, ಉಪ ಮೇಯರ್ ಎಲೆಕ್ಷನ್: ಬಿಜೆಪಿ ಬಾಯಿಗೆ ಬಿತ್ತು ಡಬಲ್ ಲಡ್ಡು!

    ಮೈಸೂರು ಮೇಯರ್, ಉಪ ಮೇಯರ್ ಎಲೆಕ್ಷನ್: ಬಿಜೆಪಿ ಬಾಯಿಗೆ ಬಿತ್ತು ಡಬಲ್ ಲಡ್ಡು!

    ಮೈಸೂರು: ಜೆಡಿಎಸ್ ಜೊತೆ ಮೈತ್ರಿ ಇಲ್ಲ ಇಲ್ಲ ಎಂದು ಹೇಳುತ್ತಲೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಬಿಜೆಪಿ ಮೈಸೂರು ಮಹಾ ನಗರ ಪಾಲಿಕೆಯ ಗದ್ದುಗೆ ಏರಿದೆ. ಮೈಸೂರು ಪಾಲಿಕೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಜೆಪಿ ಮೇಯರ್ ಹಾಗೂ ಉಪ ಮೇಯರ್ ಎರಡು ಗದ್ದುಗೆ ಅಲಂಕರಿಸಿದೆ. ಜೆಡಿಎಸ್ ಜಾತಿ ಕೆಟ್ಟರು ಸುಖ ಇಲ್ಲ ಎಂಬ ಸ್ಥಿತಿಗೆ ತಲುಪಿದೆ.

    ಮೈಸೂರು ಮಹಾ ನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ಶಿವಕುಮಾರ್ ಹಾಗೂ ಉಪ ಮೇಯರ್ ಆಗಿ ರೂಪ ಆಯ್ಕೆಯಾಗಿದ್ದಾರೆ. ಇಂದು ಮೈಸೂರು ಮಹಾ ನಗರ ಪಾಲಿಕೆಯಲ್ಲಿ ನಡೆದ ಮೇಯರ್ – ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಡಬಲ್ ಧಮಾಕ ಸಿಕ್ಕಿದೆ. ಇದನ್ನೂ ಓದಿ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗದಿದ್ದರೇ ಕೊಲೆ ಮಾಡುವುದಾಗಿ ಬೆದರಿಕೆ- ಇಬ್ಬರ ವಿರುದ್ಧ ಎಫ್‍ಐಆರ್

    ಮೈಸೂರು ಪಾಲಿಕೆಯ ಅಧಿಕಾರದ ಗದ್ದುಗೆ ಏರಲು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲ. ಹೀಗಾಗಿ ಕಳೆದ ಬಾರಿ ಚುನಾವಣಾ ಕಲಾಪದ ಹಾಜರಾತಿಯ ಅಧಾರದ ಮೇಲೆ ಬಿಜೆಪಿಗೆ ಮೇಯರ್ ಪಟ್ಟ ಸಿಕ್ಕಿತ್ತು. ಕಾಂಗ್ರೆಸ್ ಜೊತೆ ಕೈ ಜೋಡಿಸದೆ ಬಿಜೆಪಿಗೆ ಜೆಡಿಎಸ್ ಸಹಾಯ ಮಾಡಿತ್ತು. ಹೀಗಾಗಿ ಈ ಬಾರಿ ಬಿಜೆಪಿ ತಮ್ಮನ್ನು ಬೆಂಬಲಿಸುತ್ತೆ ಎಂಬ ಲೆಕ್ಕಾಚಾರದಲ್ಲಿ ಜೆಡಿಎಸ್ ಇತ್ತು. ಆದರೆ ಬಿಜೆಪಿ ಮೈತ್ರಿ ಸಾಧ್ಯವೇ ಇಲ್ಲ. ನಾವು ಏಕಾಂಗಿಯಾಗಿ ಸ್ಪರ್ಧೆಗೆ ಇಳಿಯುತ್ತೇವೆ ಎಂದು ಘೋಷಿಸಿ ಅದೇ ಪ್ರಕಾರ ನಾಮಪತ್ರ ಕೂಡ ಸಲ್ಲಿಸಿತ್ತು. ಜೆಡಿಎಸ್ – ಬಿಜೆಪಿ ಮೈತ್ರಿ ಆಗದ ಕಾರಣ ಕಾಂಗ್ರೆಸ್ ಒಂದೆರಡು ಜೆಡಿಎಸ್ ಸದಸ್ಯರ ಸೆಳೆಯುವ ಮೂಲಕ ಅಧಿಕಾರದ ಗದ್ದುಗೆ ಹಿಡಿಯುವ ಪ್ಲಾನ್ ಮಾಡಿತ್ತು.

    ಕಾಂಗ್ರೆಸ್ ಜೆಡಿಎಸ್ ಅನ್ನು ಇಬ್ಭಾಗ ಮಾಡುವ ಸೂಚನೆ ಕಾಣುತ್ತಿದ್ದಂತೆ ಅಲರ್ಟ್ ಆದ ಜೆಡಿಎಸ್, ಚುನಾವಣೆಗೆ ಒಂದು ತಾಸು ಇರುವಂತೆ ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿ ಮೇಯರ್ ಸ್ಥಾನ ಬಿಜೆಪಿಗೆ ಉಪ ಮೇಯರ್ ಸ್ಥಾನ ಜೆಡಿಎಸ್‌ಗೆ ಎಂಬ ಒಪ್ಪಂದ ಆಯ್ತು. ಇದು ಕಾಂಗ್ರೆಸ್‌ಗೆ ಆದ ದೊಡ್ಡ ಆಘಾತ ನೀಡಿತು. ಇದನ್ನೂ ಓದಿ: ಸ್ವಾತಂತ್ರ್ಯ ಕೊಡಿಸಿದ್ದು ಕಾಂಗ್ರೆಸ್: ಎಂ.ಬಿ ಪಾಟೀಲ್

    ಕೊನೆಯ ಕ್ಷಣದ ಪ್ಲಾನ್‌ನಂತೆ ಜೆಡಿಎಸ್ ಮೇಯರ್ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ವಾಪಾಸ್ ಪಡೆದು ಬಿಜೆಪಿಯ ಅಭ್ಯರ್ಥಿಗೆ ಮತ ಹಾಕಿತು. ಇದರಿಂದ ಬಿಜೆಪಿ ಅಭ್ಯರ್ಥಿ ಶಿವಕುಮಾರ್ 47 ಮತ ಪಡೆದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸೈಯದ್ ಹಸ್ರತ್ 28 ಮತ ಪಡೆದರು. ಇದರ ನಂತರ ನಡೆದ ಉಪ ಮೇಯರ್ ಚುನಾವಣೆ ಪ್ರಕ್ರಿಯೆಯ ಆರಂಭದಲ್ಲೇ ಜೆಡಿಎಸ್‌ಗೆ ದೊಡ್ಡ ಮರ್ಮಾಘಾತ ಉಂಟಾಯಿತು. ಜೆಡಿಎಸ್‌ನ ರೇಷ್ಮಾ ಬಾನು ಅನಾಯಸವಾಗಿ ಉಪ ಮೇಯರ್ ಆಗುತ್ತಾರೆ ಎಂದು ಜೆಡಿಎಸ್ ಅಂದುಕೊಂಡಿತ್ತು. ಆದರೆ ಬಿಸಿಎ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ರೇಷ್ಮಾ ಬಾನು ಬಿಸಿಎ ಜಾತಿ ಪ್ರಮಾಣ ಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳು ರೇಷ್ಮಾ ಬಾನು ನಾಮಪತ್ರ ತಿರಸ್ಕರಿಸಿದರು. ಇದು ಜೆಡಿಎಸ್‌ಗೆ ಆಘಾತ ಉಂಟು ಮಾಡಿತು.

    ಬಿಜೆಪಿ ಜೊತೆ ಸೇರಿದರು ಜೆಡಿಎಸ್‌ಗೆ ಉಪ ಮೇಯರ್ ಸ್ಥಾನ ಕೈತಪ್ಪಿದ ಕಾರಣ ಕಾಂಗ್ರೆಸ್ ಕಲಾಪದ ಒಳಗೆಯೆ ಸಂಭ್ರಮಿಸಿತು. ಜೆಡಿಎಸ್ ಅನ್ನು ಬಿಜೆಪಿ ಬಿ ಟೀಂ ಎನ್ನುತ್ತಾ ಶೇಮ್ ಶೇಮ್ ಘೋಷಣೆ ಕೂಗಿ ಜೆಡಿಎಸ್ ಸದಸ್ಯರನ್ನು ಹಂಗಿಸಿದರು. ಕಾಂಗ್ರೆಸ್ ಸದಸ್ಯರ ವ್ಯಂಗ್ಯಕ್ಕೆ ಉತ್ತರ ಕೊಡಲಾಗದೆ ಜೆಡಿಎಸ್ ಸದಸ್ಯರು ಪೇಚು ಮೊರೆ ಹಾಕಿಕೊಂಡರು. ಇದನ್ನೂ ಓದಿ: ಸ್ವಚ್ಛ ಭಾರತ್ ಬೆಂಗಳೂರು ಎಲ್ಲಿಗೆ ಹೋಗಿದೆ? ಬೀದಿಯಲ್ಲಿ ಕಸ ಬಿದ್ದು ಕೊಳೆಯುತ್ತಿದೆ: ಡಿಕೆ ಸುರೇಶ್‌

    ಯಾವಾಗ ಜೆಡಿಎಸ್ ಉಪ ಮೇಯರ್ ಅಭ್ಯರ್ಥಿ ನಾಮಪತ್ರ ತಿರಸ್ಕೃತವಾಯ್ತೋ ಆಗಲೆ ಬಿಜೆಪಿಗೆ ಎರಡನೇ ಲಡ್ಡು ಬಾಯಿಗೆ ಬಿದ್ದಂತಾಯ್ತು. ಬಿಜೆಪಿಯಿಂದ ಉಪ ಮೇಯರ್ ಸ್ಥಾನಕ್ಕೆ ನೆಪ ಮಾತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಸದಸ್ಯೆ ರೂಪಾಗೆ ಅನಾಯಾಸವಾಗಿ ಉಪ ಮೇಯರ್ ಸ್ಥಾನ ಒಲಿದು ಬಂತು.

    Live Tv
    [brid partner=56869869 player=32851 video=960834 autoplay=true]

  • ಪ್ರಕಟವಾಯ್ತು ಮೀಸಲಾತಿ – ಶುರುವಾಯ್ತು ಮೈತ್ರಿ ಪಾಲಿಟಿಕ್ಸ್

    ಪ್ರಕಟವಾಯ್ತು ಮೀಸಲಾತಿ – ಶುರುವಾಯ್ತು ಮೈತ್ರಿ ಪಾಲಿಟಿಕ್ಸ್

    ಮೈಸೂರು: ಮಹಾನಗರ ಪಾಲಿಕೆ ಎರಡನೇ ಅವಧಿಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಸರಕಾರ ಮೀಸಲಾತಿ ನಿಗದಿಪಡಿಸಿದ ಬೆನ್ನಲ್ಲೇ ಮೈಸೂರು ಪಾಲಿಕೆಯಲ್ಲಿ ರಾಜಕಾರಣ ಬಿರುಸು ಪಡೆದಿದೆ.

    ಮೇಯರ್ ಸ್ಥಾನ ಬಿಸಿಎಂ (ಎ-ಮಹಿಳೆ) ಹಾಗೂ ಉಪಮೇಯರ್ ಸ್ಥಾನ ಎಸ್‍ಸಿ ಗೆ ಮೀಸಲಾಗಿದೆ. ಮೈಸೂರು ಪಾಲಿಕೆಯಲ್ಲಿ ಈಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಧಿಕಾರದಲ್ಲಿದೆ. ಮೊದಲ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಪುಷ್ಪ ಅಮರನಾಥ್ ಮೇಯರ್ ಆಗಿದ್ದರು. ಜೆಡಿಎಸ್‍ನ ಷಫಿ ಮಹಮದ್ ಉಪಮೇಯರ್ ಆಗಿದ್ದರು. ಈ ಬಾರಿ ಇದೇ ಮೈತ್ರಿ ಮುಂದುವರಿಯುವುದು ಬಹುತೇಕ ಖಚಿತವಾಗಿದ್ದು ಕಾಂಗ್ರೆಸ್-ಜೆಡಿಎಸ್‍ನ ಒಪ್ಪಂದದಂತೆ ಎರಡನೇ ಅವಧಿಯಲ್ಲಿ ಮೇಯರ್ ಸ್ಥಾನ ಜೆಡಿಎಸ್‍ಗೆ ಹಾಗೂ ಉಪಮೇಯರ್ ಸ್ಥಾನ ಕಾಂಗ್ರೆಸ್ಸಿಗೆ ಸಿಗಲಿದೆ.

    ಜೆಡಿಎಸ್ ನಿಂದ ಮೇಯರ್ ಸ್ಥಾನಕ್ಕೆ ಆಕಾಂಕ್ಷಿಗಳ ದೊಡ್ಡ ಪಟ್ಟಿ ಇದೆ. ರೇಷ್ಮಾಬಾನು, ನಮ್ರತಾ ರಮೇಶ್, ತಸ್ನೀಂ ಮತ್ತು ನಿರ್ಮಲಾ ಹರೀಶ್ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿಗಳು. ಇನ್ನೂ ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ಸಿನಿಂದ ಪ್ರದೀಪ್ ಚಂದ್ರ, ಶ್ರೀಧರ್, ಸತ್ಯರಾಜ್ ಪ್ರಬಲ ಆಕಾಂಕ್ಷಿ ಗಳು. ಎರಡು ಪಕ್ಷದ ನಾಯಕರು ಸಭೆ ಸೇರಿ ಅಂತಿಮವಾಗಿ ಅಭ್ಯರ್ಥಿ ಹೆಸರು ಪ್ರಕಟಿಸಲಿದ್ದಾರೆ.

    65 ಸದಸ್ಯ ಬಲದ ಪಾಲಿಕೆಯಲ್ಲಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಕೂಡ ಸಹ ಸದಸ್ಯರಾಗಿದ್ದಾರೆ. ಹೀಗಾಗಿ ಒಟ್ಟಾರೆ ಸದಸ್ಯ ಬಲ ಹೀಗಿದೆ, ಬಿಜೆಪಿ 25, ಜೆಡಿಎಸ್ 23, ಕಾಂಗ್ರೆಸ್ 21, ಬಿಎಸ್‍ಪಿ 1 ಹಾಗೂ ಐವರು ಪಕ್ಷೇತರ ಸದಸ್ಯರು ಇದ್ದಾರೆ. ಇಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲ. ಹೀಗಾಗಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಆಡಳಿತ ಇದೆ.