Tag: Mysuru-Bengaluru

  • ಪ್ರಧಾನಿ ಉದ್ಘಾಟಿಸಿದ ಮೈಸೂರು-ಬೆಂಗಳೂರು ಹೈವೇ ಈಗಾಗ್ಲೇ ಕಿತ್ತು ಹೋಗಿದೆ: ಬಿ.ಕೆ ಹರಿಪ್ರಸಾದ್

    ಪ್ರಧಾನಿ ಉದ್ಘಾಟಿಸಿದ ಮೈಸೂರು-ಬೆಂಗಳೂರು ಹೈವೇ ಈಗಾಗ್ಲೇ ಕಿತ್ತು ಹೋಗಿದೆ: ಬಿ.ಕೆ ಹರಿಪ್ರಸಾದ್

    ಗದಗ: ಮೈಸೂರು-ಬೆಂಗಳೂರು ಹೈವೆ (Mysuru-Bengaluru Highway) ಯನ್ನು ಪ್ರಧಾನಮಂತ್ರಿಗಳೇ ಬಂದು ರಸ್ತೆ ಉದ್ಘಾಟನೆ ಮಾಡಿದ್ರು. ಆದರೆ ಆ ರಸ್ತೆ ಈಗಾಗಲೇ ಕಿತ್ತು ಹೋಗಿದೆ. ಇದು 40% ಸರ್ಕಾರವಲ್ಲ 60% ಆಗಿದೆ. ಕರ್ನಾಟಕದ ಹಣವನ್ನು ಎಷ್ಟು ಲೂಟಿ ಮಾಡಲು ಸಾಧ್ಯವೋ ಅಷ್ಟು ಮಾಡ್ತಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ (B.K Hariprasad) ಆರೋಪಿಸಿದರು.

    ನಗರದಲ್ಲಿ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ನಡೆದ ಕೆ.ಎಚ್. ಪಾಟೀಲ್‍ರ 98ನೇ ಜಯಂತಿ ಆಚರಣೆ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದರು. ಕೆಲವು ಹಾಲಿ ಶಾಸಕರಿಗೆ ಟಿಕೆಟ್ ಬೇಡ ಎಂದು ಹಿರಿಯ ಕಾಂಗ್ರೆಸ್ ನಾಯಕರು, ಎಐಸಿಸಿ ಅಧ್ಯಕ್ಷರ ಬಳಿ ಮನವಿ ಮಾಡಿರೋ ವಿಚಾರವಾಗಿ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದರು. ಬಿಜೆಪಿಯಲ್ಲಿ ಏನು ಮಾಡ್ತಾರೆ ಅದನ್ನ ನಾವೂ ಮಾಡಬೇಕು ಅಂತ ಏನಿಲ್ಲ. ಕಾಂಗ್ರೆಸ್ (Congress) ಪಕ್ಷ ಮಾಡಿದ್ದನ್ನು ಬಿಜೆಪಿನವರೇ ಕಾಪಿ ಮಾಡ್ತಿದೆ. ನಾವು ಮಾಡಿರೋ ಕೆಲಸಕ್ಕೆ ಬಿಜೆಪಿಯವರು ಲೇಬಲ್ ಹಾಕಿಕೊಳ್ತಿದ್ದಾರೆ ಎಂದರು.

    ಎಚ್.ಕೆ.ಪಾಟೀಲ್, ಮುನಿಯಪ್ಪ ಹಾಗೂ ದಿನೇಶ್ ಗುಂಡುರಾವ್ ಭೇಟಿ ಮಾಡಿದ್ದಾರೆ. ಪಕ್ಷದಲ್ಲಿ ಎಲ್ಲರಿಗೂ ಅವಕಾಶ ಮಾಡಿಕೊಡಿ ಎಂದು ಕೇಳಿದ್ದಾರೆ. ಕೆಲವು ಶಾಸಕರಿಗೆ ಟಿಕೆಟ್ ಬೇಡ ಅನ್ನೋ ವಿಚಾರ ಕೇವಲ ಊಹಾಪೋಹ. ಕಾಂಗ್ರೆಸ್ ಪಕ್ಷ ಒಂದು ಜಾತಿ, ಧರ್ಮ, ಭಾಷೆ ಅಂತ ಹೋಗೋದಿಲ್ಲ. ಎಲ್ಲರಿಗೂ ಅವರ ಅವರ ಶಕ್ತಿಯನುಸಾರವಾಗಿ ಟಿಕೆಟ್ ಸಿಗುತ್ತೆ ಎಂದರು. ಇದನ್ನೂ ಓದಿ: 2024ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ದೀಪ‌ ಹಚ್ಚುವುದಕ್ಕೂ ಯಾರೂ ಸಿಗುವುದಿಲ್ಲ: ಕಾರಜೋಳ

    ಮಹಾರಾಷ್ಟ್ರ ಗಡಿ ಭಾಗದಲ್ಲಿ ಕರ್ನಾಟಕದವರಿಗೆ ಸೌಲಭ್ಯ ನೀಡಿರೋ ವಿಚಾರವಾಗಿ, ಇದು ರಾಷ್ಟ್ರದ ಒಕ್ಕೂಟದ ವಿರುದ್ಧ ಮಾಡುವ ಕೆಲಸವಿದು. ಇದನ್ನ ನಾವು ತೀವ್ರವಾಗಿ ಖಂಡಿಸುತ್ತೇವೆ. ಇದಕ್ಕೆ ಪ್ರಧಾನ ಮಂತ್ರಿಗಳೇ ನೇರ ಹೊಣೆ. ಇದು ಸಂವಿಧಾನ ವಿರೋಧದ ಚಟುವಟಿಕೆಯಾಗಿದೆ. ಸರ್ಕಾರವನ್ನೇ ಬರ್ಕಾಸ್ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ರಸ್ತೆ ಮಧ್ಯೆಯೇ ಯಡಿಯೂರಪ್ಪರನ್ನ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು

    ವಿ. ಸೋಮಣ್ಣ (V Somanna) ಕಾಂಗ್ರೆಸ್ ಬರೋ ವಿಚಾರ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿ ಯಾರಾದರೂ ಬರಬಹುದು ಎಂದು ಆಹ್ವಾನ ನೀಡಿದರು. ಈ ವೇಳೆ ಶಾಸಕ ಎಚ್.ಕೆ ಪಾಟೀಲ್, ಮಾಜಿ ಶಾಸಕ ಡಿ.ಆರ್ ಪಾಟೀಲ್, ಜಿ.ಎಸ್ ಪಾಟೀಲ್, ರಾಮಕೃಷ್ಣ ದೊಡ್ಡಮನಿ, ಬಿ.ಆರ್ ಯಾವಗಲ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

  • ದಶಪಥ ಹೆದ್ದಾರಿ ತಡೆದು ಪ್ರತಿಭಟನೆ – ಲಾಠಿ ಬೀಸಿದ ಪೊಲೀಸರು

    ದಶಪಥ ಹೆದ್ದಾರಿ ತಡೆದು ಪ್ರತಿಭಟನೆ – ಲಾಠಿ ಬೀಸಿದ ಪೊಲೀಸರು

    ಮಂಡ್ಯ: ಮೈಸೂರು-ಬೆಂಗಳೂರು (Mysuru-Bengaluru) ಹೆದ್ದಾರಿಯಲ್ಲಿ ಅಂಡರ್ ಪಾಸ್‌ ನಿರ್ಮಾಣ ಮಾಡದ್ದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿಚಾರ್ಜ್ (Lathi charge) ಮಾಡಿದ ಘಟನೆ ಜಿಲ್ಲೆಯ ಹನಕೆರೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮಸ್ಥರು ಅಂಡರ್ ಪಾಸ್‍ನ್ನು ತಮ್ಮೂರ ಬಳಿಯೇ ನಿರ್ಮಿಸಬೇಕು ಎಂದು ಈ ಹಿಂದೆ ಸಹ ಪ್ರತಿಭಟನೆ ಮಾಡಿದ್ದರು. ಆದರೆ ಗ್ರಾಮದ ಹೊರಗೆ ಅಂಡರ್ ಪಾಸ್ (Underpass) ನಿರ್ಮಾಣವಾಗಿತ್ತು. ಇದರ ವಿರುದ್ಧ ತಿರುಗಿಬಿದ್ದ ಊರಿನ ಗ್ರಾಮಸ್ಥರು ಇಂದು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಡರ್ ಪಾಸ್ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರದಿಂದ (National Highways Authority) ಅನುಮತಿ ಕೊಡಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.  ಇದನ್ನೂ ಓದಿ: ನನ್ನ ವಿರುದ್ಧ ಡಿಕೆ ಸಹೋದರರಿಬ್ಬರು ಸ್ಪರ್ಧಿಸಲಿ: ಮುನಿರತ್ನ

    ಗ್ರಾಮಸ್ಥರು ರಸ್ತೆಗಳಿಗೆ ಎತ್ತಿನಗಾಡಿಗಳನ್ನು ನುಗ್ಗಿಸಿ, ಬೈಕ್, ಕಾರು, ಆಟೋಗಳನ್ನು ನಿಲ್ಲಿಸಿ ರಸ್ತೆ ವಾಹನಗಳನ್ನು ತಡೆದಿದ್ದಾರೆ. ಪ್ರತಿಭಟನೆಗೆ ರೈತ ಸಂಘ ಸಹ ಬೆಂಬಲ ಕೊಟ್ಟಿದ್ದು ಪ್ರತಿಭಟನೆ ಕಾವು ಹೆಚ್ಚಾಗಿತ್ತು. ಪ್ರತಿಭಟನೆಯಿಂದ ಕಿಲೋ ಮೀಟರ್‍ಗಟ್ಟಲೇ ಎರಡು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಪ್ರತಿಭಟನಾ ನಿರತರು ಹಾಗೂ ಪೊಲೀಸರ ನಡುವೆ ತಳ್ಳಾಟ ನಡೆದು, ಸರ್ಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆದ್ದಾರಿ ತೆರವುಗೊಳಿಸುವಂತೆ ಪೊಲೀಸರು ಮನವಿ ಮಾಡಿಕೊಂಡರು ಬಗ್ಗದ ಗ್ರಾಮಸ್ಥರ ಮೇಲೆ ಲಾಠಿ ಬೀಸಿ ಗ್ರಾಮಸ್ಥರನ್ನು ಚದುರಿಸಿ ರಸ್ತೆಗೆ ಅಡ್ಡಲಾಗಿರಿಸಿದ್ದ ವಾಹನಗಳು ಹಾಗೂ ಶಾಮಿಯಾನವನ್ನು ತೆರುವುಗೊಳಿಸಿದ್ದಾರೆ. ಗ್ರಾಮಸ್ಥರ ಬೇಡಿಕೆಯನ್ನು ಅಧಿಕಾರಿಗಳ ಗಮನಕ್ಕೆ ತರುವ ಭರವಸೆಯನ್ನು ಎಸ್ಪಿ ಎನ್.ಯತೀಶ್ ನೀಡಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ರೈತ (Farmers) ಮುಖಂಡ ಮಧುಚಂದನ್ ಅವರನ್ನು ಬಲವಂತವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ: ಕೆಸಿ ವೇಣುಗೋಪಾಲ್

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಮಗಾರಿ ವೀಡಿಯೋ ಇಷ್ಟು ಜನರ ಹೊಟ್ಟೆಗೆ ಬೆಂಕಿ ಬೀಳಿಸುತ್ತೆ ಅಂತಾ ಗೊತ್ತಿರಲಿಲ್ಲ: ಪ್ರತಾಪ್ ಸಿಂಹ ತಿರುಗೇಟು

    ಕಾಮಗಾರಿ ವೀಡಿಯೋ ಇಷ್ಟು ಜನರ ಹೊಟ್ಟೆಗೆ ಬೆಂಕಿ ಬೀಳಿಸುತ್ತೆ ಅಂತಾ ಗೊತ್ತಿರಲಿಲ್ಲ: ಪ್ರತಾಪ್ ಸಿಂಹ ತಿರುಗೇಟು

    – ಪ್ರತಾಪ್ ಸಿಂಹ ಸವಾಲು ಸ್ವೀಕರಿಸ್ತಾರಾ ಹೆಚ್.ವಿಶ್ವನಾಥ್?

    ಮೈಸೂರು: ದಶಪಥ ರಸ್ತೆ ಕಾಮಗಾರಿ ವೀಡಿಯೋ ಮಾಡಿದ್ದು ಇಷ್ಟು ಜನರ ಹೊಟ್ಟೆಗೆ ಬೆಂಕಿ ಬೀಳಿಸುತ್ತೆ ಅಂತ ಗೊತ್ತಿರಲಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಎಂಎಲ್‍ಸಿ ಹೆಚ್.ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ವಿಶ್ವನಾಥ್ ಅವರ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದರು, ಮೋದಿ ಸರ್ಕಾರ ಈ ಯೋಜನೆಗೆ ಹಣ ಬಿಡುಗಡೆ ಮಾಡಿ ಕಾಮಗಾರಿ ಚಾಲನೆ ನೀಡಲಾಗಿದೆ. 8,666 ಕೋಟಿ ರೂ. ಪ್ರಾಜೆಕ್ಟ್ ನಲ್ಲಿ 8 ಪೈಸೆನಾದರೂ ವಿಶ್ವನಾಥ್ ಅವರು ಬಿಡುಗಡೆ ಮಾಡಿಸಿದ್ರಾ? ಅಥವಾ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ರಾ? ಒಂದು ವೇಳೆ ಈ ಯೋಜನೆ ನೀವೇ ತಂದಿದ್ರೆ ಚುನಾವಣೆ ವೇಳೆ ಯಾಕೆ ಹೇಳಿಕೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದರು.

    ವಿಶ್ವನಾಥ್ ಅವರು ಟೀಕೆ ಮಾಡದ ವ್ಯಕ್ತಿಯೇ ಇಲ್ಲ. ಟ್ರಂಪ್, ಬೈಡೆನ್ ಅವರನ್ನೇ ಅವರು ಬಿಟ್ಟಿಲ್ಲ. ದೇವೇಗೌಡರು, ಯಡಿಯೂರಪ್ಪ, ವಿಜಯೇಂದ್ರ, ಎಸ್.ಟಿ.ಸೋಮಶೇಖರ್ ಎಲ್ಲರನ್ನೂ ವಿಶ್ವನಾಥ್ ಬೈಯ್ದಿದ್ದು ಆಯ್ತು. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಟೀಕೆ ಮಾಡುವ ಗ್ಯಾಪ್ ನಲ್ಲಿ ನನ್ನ ಬಗ್ಗೆ ಮಾತನಾಡಿದ್ದಾರೆ. ಈ ಯೋಜನೆಗೆ ಡೇ ಟು ಡೇ ಬಗ್ಗೆ ಮಾಧ್ಯಮಗಳ ಮುಂದೆ ಚರ್ಚೆ ಮಾಡೋಣ ಬನ್ನಿ ಎಂದು ಪ್ರತಾಪ್ ಸಿಂಹ ಸವಾಲು ಹಾಕಿದರು.

    ಹಳೆ ಉಂಡುವಾಡಿ ಕುಡಿಯುವ ನೀರು ಯೋಜನೆಗೂ ವಿಶ್ವನಾಥ್ ಐದು ಪೈಸೆ ಕೊಡಿಸಿಲ್ಲ. ನೀವು ಸತ್ಯಸಂಧರ ರೀತಿ ಮಾತಾಡಬೇಡಿ ವಿಶ್ವನಾಥ್ ಅವರೇ. ಮಾಜಿ ಸಚಿವ ಮಹದೇವಪ್ಪ ಅವರೇ ನೀವು ನಿಮ್ಮ ಅವಧಿಯಲ್ಲಿ ಮಾಡಿದ ಒಂದು ರಸ್ತೆ ನೆಟ್ಟಗಿದ್ದಿಯಾ ಸರ್? ನಿಮಗೆ ದಶಪಥ ರಸ್ತೆಯ ಕ್ರೆಡಿಟ್ ಬೇಕಾ? ನೀವು ಹಿರಿಯರು. ನೀವು ಮಾರ್ಗದರ್ಶನ ಮಾಡಿ ಸರ್. ಬೀದಿ ಜಗಳಕ್ಕೆ ಇಳಿಯಬೇಡಿ ಎಂದು ಟಾಂಗ್ ಕೊಟ್ಟರು.

    ಹೆಚ್.ವಿಶ್ವನಾಥ್ ಹೇಳಿದ್ದೇನು?:
    ಈ ಹಿಂದೆ ಆಸ್ಕರ್ ಫರ್ನಾಂಡೀಸ್ ಕೇಂದ್ರ ಸಚಿವರಾಗಿದ್ದಾಗ ಸುಮಾರು ಸಭೆಗಳನ್ನು ನಡೆಸಿ 1,882 ಕಿಲೋ ಮೀಟರ್ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸುವ ಬಗ್ಗೆ ತೀರ್ಮಾನವಾಯ್ತು. ಧೃವ ನಾರಾಯಣ್, ರಮ್ಯಾ, ಡಿ.ಕೆ.ಸುರೇಶ್ ಸೇರಿದಂತೆ ನಾವೆಲ್ಲರೂ ಸುಮಾರು ಸಭೆಗಳಲ್ಲಿ ಭಾಗಿಯಾಗಿದ್ದೇವೆ. ಆನಂತರ ಕೇಂದ್ರದಲ್ಲಿ ಯುಪಿಎ ಸರ್ಕಾರ ಹೋಗಿ ಎನ್‍ಡಿಎ ಅಧಿಕಾರಕ್ಕೆ ಬಂತು. ಆದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಅಂದಿನ ಸಿಎಂ ಸಿದ್ದರಾಮಯ್ಯ, ಸಚಿವರಾಗಿದ್ದ ಮಹದೇವ ಪ್ರಸಾದ್ ಹೆದ್ದಾರಿ ನಿರ್ಮಾಣದ ಕೆಲಸ ಆರಂಭಿಸಿದ್ದರು. ಇದನ್ನೂ ಓದಿ: ದಶಪಥದ ರಸ್ತೆ ಇರೋದು ಮೈಸೂರಿಗಾಗಿ, ಇದಕ್ಕಾಗಿ ಹೆಚ್ಚು ಆಸಕ್ತಿವಹಿಸಿದ್ದೇನೆ: ಪ್ರತಾಪ್ ಸಿಂಹ

    ಹೊಸದಾಗಿ ಬಂದವರು ನಾನು ಈ ಯೋಜನೆ ತಂದೆ ಅಂತ ಹೇಳೋದು ಸರಿಯಲ್ಲ. ನೀವು ಸಂಸದರಾಗಿ ಏನು ಮಾಡಿದ್ದೀರಿ ಅದನ್ನ ಜನರ ಮುಂದೆ ಹೇಳಿ. ಅದನ್ನು ಬಿಟ್ಟು, ನಾನೇ ಎಲ್ಲ ಮಾಡಿದೆ ಅಂತ ಹೇಳುವುದು ತಪ್ಪು ಎಂದು ಹೇಳಿದ್ದರು. ಇದನ್ನೂ ಓದಿ: ಇದನ್ನೂ ಓದಿ: ನನ್ನ ಆತ್ಮಸ್ಥೈರ್ಯ ಕುಗ್ಗಿಸಲು 10 ಜನ್ಮ ಎತ್ತಿ ಬಂದ್ರೂ ಆಗಲ್ಲ: ಪ್ರತಾಪ್ ಸಿಂಹ ವಿರುದ್ಧ ಸುಮಲತಾ ವಾಗ್ದಾಳಿ

  • ನಾನೇ ಮಾಡಿದೇ, ನಾನೇ ಕಟ್ಟಿದೆ ಅಂತ ಪ್ರತಾಪ್ ಸಿಂಹ ಹೇಳೋದು ತಪ್ಪು: ವಿಶ್ವನಾಥ್

    ನಾನೇ ಮಾಡಿದೇ, ನಾನೇ ಕಟ್ಟಿದೆ ಅಂತ ಪ್ರತಾಪ್ ಸಿಂಹ ಹೇಳೋದು ತಪ್ಪು: ವಿಶ್ವನಾಥ್

    – ಸಂಸದರಾಗಿ ನೀವೇನು ಮಾಡಿದ್ದೀರಿ ಅನ್ನೋದನ್ನ ಹೇಳಿ

    ಮೈಸೂರು: ನಾನೇ ಮಾಡಿದೇ, ನಾನೇ ಕಟ್ಟಿದೆ ಅಂತ ಹೇಳುವುದು ತಪ್ಪು ಎಂದು ತಮ್ಮದೇ ಪಕ್ಷದ ಸಂಸದ ಪ್ರತಾಪ್ ಸಿಂಹ ಅವರನ್ನ ಎಂಎಲ್‍ಸಿ ಹೆಚ್.ವಿಶ್ವನಾಥ್ ಕುಟುಕಿದ್ದಾರೆ. ಬೆಂಗಳೂರು-ಮೈಸೂರ ದಶಪಥದ ರಸ್ತೆಗೆ ಈ ಹಿಂದೆಯೇ ಚಾಲನೆ ನೀಡಲಾಗಿತ್ತು ಎಂದು ಹೇಳಿದ್ದಾರೆ.

    ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ಈ ಹಿಂದೆ ಆಸ್ಕರ್ ಫರ್ನಾಂಡೀಸ್ ಕೇಂದ್ರ ಸಚಿವರಾಗಿದ್ದಾಗ ಸುಮಾರು ಸಭೆಗಳನ್ನು ನಡೆಸಿ 1,882 ಕಿಲೋ ಮೀಟರ್ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸುವ ಬಗ್ಗೆ ತೀರ್ಮಾನವಾಯ್ತು. ಧೃವ ನಾರಾಯಣ್, ರಮ್ಯಾ, ಡಿ.ಕೆ.ಸುರೇಶ್ ಸೇರಿದಂತೆ ನಾವೆಲ್ಲರೂ ಸುಮಾರು ಸಭೆಗಳಲ್ಲಿ ಭಾಗಿಯಾಗಿದ್ದೇವೆ. ಆನಂತರ ಕೇಂದ್ರದಲ್ಲಿ ಯುಪಿಎ ಸರ್ಕಾರ ಹೋಗಿ ಎನ್‍ಡಿಎ ಅಧಿಕಾರಕ್ಕೆ ಬಂತು. ಆದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಅಂದಿನ ಸಿಎಂ ಸಿದ್ದರಾಮಯ್ಯ, ಸಚಿವರಾಗಿದ್ದ ಮಹದೇವ ಪ್ರಸಾದ್ ಹೆದ್ದಾರಿ ನಿರ್ಮಾಣದ ಕೆಲಸ ಆರಂಭಿಸಿದ್ದರು.

    ಹೊಸದಾಗಿ ಬಂದವರು ನಾನು ಈ ಯೋಜನೆ ತಂದೆ ಅಂತ ಹೇಳೋದು ಸರಿಯಲ್ಲ. ನೀವು ಸಂಸದರಾಗಿ ಏನು ಮಾಡಿದ್ದೀರಿ ಅದನ್ನ ಜನರ ಮುಂದೆ ಹೇಳಿ. ಅದನ್ನು ಬಿಟ್ಟು, ನಾನೇ ಎಲ್ಲ ಮಾಡಿದೆ ಅಂತ ಹೇಳುವುದು ತಪ್ಪು. ಕೆಲ ದಿನಗಳ ಮಂಡ್ಯ ಸಂಸದರಾದ ಸುಮಲತಾ ಅಂಬರೀಶ್ ಸಹ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರೋದು ಗಮನಿಸಿದ್ದೇನೆ ಎಂದರು.

    ಬೆಂಗಳೂರಿನಿಂದ ಮೈಸೂರು, ಮೈಸೂರಿನಿಂದ ಮಡಿಕೇರಿ ಮತ್ತು ಮಡಿಕೇರಿಯಿಂದ ಮಂಗಳೂರು ರಸ್ತೆಗಳ ಬಗ್ಗೆ ಆ ಕಾಲದಲ್ಲಿಯೇ ತೀರ್ಮಾನಗೊಂಡು ಕೆಲಸಗಳು ಪ್ರಾರಂಭವಾಯ್ತು. ಹಾಗಾಗಿ ಅನಾವಶ್ಯಕವಾಗಿ ನಾನೇ ಮಾಡಿದೆ, ನಾನೇ ಕಟ್ಟಿದೆ ಎಂದು ತಪ್ಪು ಎಂದು ಹೇಳಿದರು. ಇದನ್ನೂ ಓದಿ: ನನ್ನ ಆತ್ಮಸ್ಥೈರ್ಯ ಕುಗ್ಗಿಸಲು 10 ಜನ್ಮ ಎತ್ತಿ ಬಂದ್ರೂ ಆಗಲ್ಲ: ಪ್ರತಾಪ್ ಸಿಂಹ ವಿರುದ್ಧ ಸುಮಲತಾ

    ಪ್ರತಾಪ್ ಸಿಂಹ ಹೇಳಿದ್ದೇನು?:
    ಹತ್ತು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತಂದಿರುವುದು ಮೈಸೂರಿಗೋಸ್ಕರ ಮಾತ್ರ. ಮೈಸೂರು ಡೆಸ್ಟಿನೇಷನ್ ಎಂಬ ಕಾರಣಕ್ಕಾಗಿ ನಾನು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ಮಂಡ್ಯದ ಮೇಲೆ ಹೋಗುತ್ತೆ ಅಂತಾ ಮಂಡ್ಯದವರು, ರಾಮನಗರದ ಮೇಲೆ ಹೋಗುತ್ತೆ ಅಂತಾ ರಾಮನಗರದವರು. ಈ ಕಾಮಗಾರಿ ನನ್ನದು ಅಂತಾ ಹೇಳಿಕೊಂಡರೇ ಅದಕ್ಕೆ ಅರ್ಥ ಇದೆಯಾ? ಎಂದು ಪ್ರಶ್ನಿಸಿದ ಅವರು ಇದು ಮೋದಿ ಸರ್ಕಾರದ ಯೋಜನೆ. ಈ ಯೋಜನೆಗೆ ಕಾಂಗ್ರೆಸ್ ನವರಿಂದ ಬಿಡಿಗಾಸು ಕೂಡ ಸಿಕ್ಕಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದರು. ಇದನ್ನೂ ಓದಿ: ದಶಪಥದ ರಸ್ತೆ ಇರೋದು ಮೈಸೂರಿಗಾಗಿ, ಇದಕ್ಕಾಗಿ ಹೆಚ್ಚು ಆಸಕ್ತಿವಹಿಸಿದ್ದೇನೆ: ಪ್ರತಾಪ್ ಸಿಂಹ