Tag: Mysuru Airport

  • ಮೈಸೂರು ಏರ್‌ಪೋರ್ಟ್‌ ರನ್‌ವೇ ವಿಸ್ತರಣೆಗೆ ಅನುದಾನ ಘೋಷಣೆ – ತವರು ಜಿಲ್ಲೆಗೆ ಸಿಎಂ ಕೊಡುಗೆ ಏನು?

    ಮೈಸೂರು ಏರ್‌ಪೋರ್ಟ್‌ ರನ್‌ವೇ ವಿಸ್ತರಣೆಗೆ ಅನುದಾನ ಘೋಷಣೆ – ತವರು ಜಿಲ್ಲೆಗೆ ಸಿಎಂ ಕೊಡುಗೆ ಏನು?

    ಬೆಂಗಳೂರು: ಮೈಸೂರು ವಿಮಾನ ನಿಲ್ದಾಣ ರನ್‌ವೇ (Mysuru Airport Runway) ವಿಸ್ತರಣೆ ಹಾಗೂ ವಿಜಯಪುರ ಹಾಗೂ ಹಾಸನ ವಿಮಾನ ನಿಲ್ದಾಣ ಕಾಮಗಾರಿ, ರಾಯಚೂರು ಮತ್ತು ಕಾರವಾರ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ 1,600 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: Karnataka Budget 2024- ಸಿದ್ದರಾಮಯ್ಯ ಹಿಡಿದ ಬಜೆಟ್ ‘ಬ್ಯಾಗ್’ಗೆ ನಟ ಧನಂಜಯ್ ಮೆಚ್ಚುಗೆ

    2024-25ನೇ ಸಾಲಿನ ತಮ್ಮ ಬಜೆಟ್‌ನಲ್ಲಿ (Karnataka Budget) ತವರು ಜಿಲ್ಲೆಗೆ ಹಲವು ಕೊಡುಗೆ ನೀಡಿದ್ದು, ಜನರು ಸಂತಸಗೊಂಡಿದ್ದಾರೆ. ಇದನ್ನೂ ಓದಿ: ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವನ್ನು ಆಯುಕ್ತಾಲಯವನ್ನಾಗಿ ಉನ್ನತೀಕರಣ – ಸಿಎಂಗೆ ಅಭಿನಂದನೆ ಸಲ್ಲಿಸಿದ ಡಾ.ಶರಣಪ್ರಕಾಶ್ ಪಾಟೀಲ್

    ತವರು ಜಿಲ್ಲೆ ಮೈಸೂರಿಗೆ ಸಿಎಂ ಕೊಡುಗೆ ಏನು?
    * ಮೈಸೂರಿನಲ್ಲಿರುವ 40 ಹಾಸಿಗೆ ಸಾಮರ್ಥ್ಯದ Nephro-Urology ಆಸ್ಪತ್ರೆಯ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಉನ್ನತೀಕರಣ.
    * ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಶತಮಾನೋತ್ಸವ ಸವಿನೆನಪಿಗಾಗಿ ಕೆ.ಆರ್‌ ಆಸ್ಪತ್ರೆ ಆವರಣದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣಕ್ಕೆ ಕ್ರಮ.
    * ಮೈಸೂರಿನ ಜೊತೆಗೆ ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ತುಮಕೂರು, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿ ರಸ್ತೆಯಲ್ಲಿ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್‌ಶಿಪ್‌ ಅಭಿವೃದ್ಧಿ.
    * ಮೈಸೂರಿನಲ್ಲಿ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಿಸಲು ಕಾರ್ಯ ಸಾಧ್ಯತಾ ವರದಿ.
    * ಮೈಸೂರು ಸೇರಿದಂತೆ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ನೂತನ ಜವಳಿ ಪಾರ್ಕ್‌ಗಳ ಪ್ರಾರಂಭ, ಜೊತೆಗೆ 10,000 ಉದ್ಯೋಗ ಸೃಷ್ಟಿ
    * ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಖಾದಿ ಪ್ರೋತ್ಸಾಹಕ್ಕೆ ಕ್ರಮ.

  • ಮೇಲುಕೋಟೆಯಲ್ಲಿ ಟಿಪ್ಪು ಬ್ರಾಹ್ಮಣರನ್ನು ಕತ್ತರಿಸಿದ್ದ ಇತಿಹಾಸವಿದೆ – ಅಶೋಕ್‌ ಕೆಂಡಾಮಂಡಲ

    ಮೇಲುಕೋಟೆಯಲ್ಲಿ ಟಿಪ್ಪು ಬ್ರಾಹ್ಮಣರನ್ನು ಕತ್ತರಿಸಿದ್ದ ಇತಿಹಾಸವಿದೆ – ಅಶೋಕ್‌ ಕೆಂಡಾಮಂಡಲ

    – ಕೊಡಗಿನಲ್ಲಿ ಹಿಂದೂಗಳ ಹತ್ಯೆ ಮಾಡಿದ ಚರಿತ್ರೆ ಟಿಪ್ಪು ಹೆಸರಲ್ಲಿದೆ ಎಂದ ಶಾಸಕ

    ಮಂಡ್ಯ: ಮೈಸೂರು ವಿಮಾನ ನಿಲ್ದಾಣಕ್ಕೆ (Mysuru Airport) ಟಿಪ್ಪು ಸುಲ್ತಾನ್‌ ಹೆಸರು ನಾಮಕಾರಣ ಮಾಡುವಂತೆ ಒತ್ತಾಯ ಮಾಡುತ್ತಿರುವ ಕಾಂಗ್ರೆಸ್ ಶಾಸಕರಿಗೆ ಆಯಾ ಕ್ಷೇತ್ರದ ಜನರೇ ಬುದ್ದಿ ಕಲಿಸುತ್ತಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashoka) ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಪ್ಪು (Tipu Sultan) ಒಬ್ಬ ಮತಾಂಧ, ಮಂಡ್ಯದಲ್ಲಿ ಅವನ ಚರಿತ್ರೆ ಇದೆ. ಕೊಡಗಿನಲ್ಲಿ ಹಿಂದೂಗಳ ಹತ್ಯೆ ಮಾಡಿದ್ದ ಚರಿತ್ರೆ ಇದೆ. ಮೇಲುಕೋಟೆಯಲ್ಲಿ ಬ್ರಾಹ್ಮಣರನ್ನ ಕಟ್ಟಾಕಿ ಕತ್ತರಿಸಿ ಹಾಕಿದ್ದ ಎಲ್ಲಾ ಇತಿಹಾಸವಿದೆ. ಟಿಪ್ಪು ಸ್ವತಂತ್ರ ಹೋರಾಟಗಾರ ಅಲ್ಲ. ಆಗ ಮೈಸೂರು ಆಡಳಿತ ನಡೆಸುತ್ತಿದ್ದವರು ಒಡೆಯರ್ ವಂಶಸ್ಥರು. ಹೈದರಾಲಿ ಚಾಕ್ರಿ, ಕೂಲಿಗೆ ಬಂದು ಒಡೆಯರ್‌ಗೆ ಮೋಸ ಮಾಡಿ ಸಿಂಹಾಸನ ಏರೋಕೆ ಬಂದಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕ್ರೀಡಾ ವಿದ್ಯಾರ್ಥಿಯೊಂದಿಗೆ ಕಾರಿನಲ್ಲಿ ಸೆಕ್ಸ್‌ – ಶಿಕ್ಷಕಿಯನ್ನ ರೆಡ್‌ಹ್ಯಾಂಡಾಗಿ ಹಿಡಿದು ಪೊಲೀಸರಿಗೊಪ್ಪಿಸಿದ ತಾಯಿ

    ಟಿಪ್ಪು ಸುಲ್ತಾನ್‌ನನ್ನ ಹೋರಾಟಗಾರ ಅಂತಾರಲ್ಲ ನಾಚಿಕೆ ಆಗಲ್ವ? ಟಿಪ್ಪು, ಹೈದರಾಲಿ ಡ್ಯಾಂ ಕಟ್ಟಿಸಿದ್ರಾ? ಒಂದು ಕೆರೆನಾದ್ರೂ ಕಟ್ಟಿಸಿದ್ರಾ? ಆಸ್ಪತ್ರೆ, ಶಿಕ್ಷಣ ಸಂಸ್ಥೆ ಕಟ್ಟಿಸಿದ್ರಾ? ಎಲ್ಲವನ್ನು ಕಟ್ಟಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್. ವೋಟಿಗೋಸ್ಕರ ಕಾಂಗ್ರೆಸ್‌ನವರು ಹೋರಾಟಗಾರ ಅಂತಾರೆ. ವೋಟಿಗೋಸ್ಕರ ಎಂತಹ‌ ಕೀಳು ಮಟ್ಟಕ್ಕೆ ಕಾಂಗ್ರೆಸ್‌ನವರು ಹೋಗ್ತಾರೆ. ಕಾಂಗ್ರೆಸ್ ಟಿಪ್ಪು ಸಿದ್ಧಾಂತದ ಮೇಲೆ ಬಂದಿದ್ದಾರೆ, ನಾವೂ ಹಿಂದುತ್ವದ ಸಿದ್ಧಾಂತದ ಮೇಲೆ ಬಂದಿದ್ದೇವೆ. ಜನರು ಅದರ ಬಗ್ಗೆ ಮುಂದೆ ತೀರ್ಮಾನ ಮಾಡ್ತಾರೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಭೀತಿ ಮತ್ತೆ ಶುರು; ಕೇರಳದ ಮಹಿಳೆಯಲ್ಲಿ ಕೋವಿಡ್ ಉಪತಳಿ ಜೆಎನ್.1 ಪತ್ತೆ 

  • ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಟ್ಟರೇ ತಪ್ಪೇನಿದೆ – ನಾಗೇಂದ್ರ ಪ್ರಶ್ನೆ

    ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಟ್ಟರೇ ತಪ್ಪೇನಿದೆ – ನಾಗೇಂದ್ರ ಪ್ರಶ್ನೆ

    ಬಳ್ಳಾರಿ: ಮೈಸೂರು ವಿಮಾನ ನಿಲ್ದಾಣಕ್ಕೆ (Mysuru Airport) ಟಿಪ್ಪು ಹೆಸರನ್ನು ಇಟ್ಟರೇ ತಪ್ಪೇನಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆಯ ಸಚಿವ ನಾಗೇಂದ್ರ (Nagendra) ಪ್ರಶ್ನಿಸಿದ್ದಾರೆ.

    ಟಿಪ್ಪು ಸುಲ್ತಾನ್ (Tipu Sultan) ಕೂಡ ಬ್ರಿಟಿಷರ (British) ವಿರುದ್ಧ ಹೋರಾಟ ಮಾಡಿದ್ದಾರೆ. ಒಂದೊಂದು ಕಡೆ ಒಬ್ಬೊಬ್ಬ ಮಹನೀಯರ ಹೆಸರು ಇಟ್ಟಂತೆ ಇಲ್ಲಿಯೂ ಇಡಬಹುದು. ಆದರೆ ಅಂತಿಮ ನಿರ್ಣಯ ಸರ್ಕಾರಕ್ಕೆ ಬಿಟ್ಟದ್ದು. ಯಾರು ಬೇಕಾದರೂ ಅವರ ಅಭಿಪ್ರಾಯ ಮತ್ತು ಭಾವನೆ ತಿಳಿಸಬಹುದು ಎಂದರು. ಇದನ್ನೂ ಓದಿ: ಗೆಳತಿ ಕಾಲಿನ ಮೇಲೆ ಕಾರು ಹರಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ!

    ನಮ್ಮ ಶಾಸಕ ಪ್ರಸಾದ್ ಅಬ್ಯಯ್ಯ ಅವರು ಟಿಪ್ಪು ಹೆಸರನ್ನು ಇಡಬೇಕೆಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರನ್ನು ಇಟ್ಟರೇ ತಪ್ಪೇನಿದೆ? ನೀವೇ ಹೇಳಿ ಎಂದು ಹೇಳಿದರು.

    ಬೆಳಗಾವಿಯಲ್ಲಿ (Belagavi) ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೆಳಗಾವಿ ಘಟನೆ ಮಣಿಪುರ ಘಟನೆ ಬಹುತೇಕ ಬೇರೆ ಬೇರೆಯಾದರೂ ಅಲ್ಲಿ ಇಲ್ಲಿ ಎರಡು ಕಡೆ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಅಲ್ಲಿಗೆ ಯಾವ ಕೇಂದ್ರದ ತಂಡ ಹೋಗೊದಿಲ್ಲ ಇಲ್ಲಿಗೆ ಬರುತ್ತಾರೆ ಅಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.

    ಕೇಂದ್ರ ಸರ್ಕಾರ ಎಲ್ಲದರಲ್ಲೂ ರಾಜಕೀಯ ಮಾಡಲು ಮುಂದಾಗುತ್ತಿದೆ. ರಾಜ್ಯಾದ್ಯಂತ ಬಿಜೆಪಿಯವರು (BJP) ಡೋಂಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಈಗಾಗಲೇ ಸಿಎಂ ಸೇರಿದಂತೆ ಎಲ್ಲರೂ ಸಂತ್ರಸ್ತೆಯನ್ನು ಭೇಟಿ ಮಾಡಿ ಪರಿಹಾರ ನೀಡಿದ್ದೇವೆ. ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

     

  • ಮೈಸೂರು ಏರ್ಪೋರ್ಟ್‌ಗೆ ಟಿಪ್ಪು ಹೆಸರಿಡಲು ಚಿಂತನೆ – ಟಿಪ್ಪು ಹೆಸರು ಶೌಚಾಲಯಕ್ಕೆ ಇಡಲಿ ಎಂದ ಯತ್ನಾಳ್

    ಮೈಸೂರು ಏರ್ಪೋರ್ಟ್‌ಗೆ ಟಿಪ್ಪು ಹೆಸರಿಡಲು ಚಿಂತನೆ – ಟಿಪ್ಪು ಹೆಸರು ಶೌಚಾಲಯಕ್ಕೆ ಇಡಲಿ ಎಂದ ಯತ್ನಾಳ್

    ಬೆಂಗಳೂರು: 2024ರ ಲೋಕಸಭಾ ಚುನಾವಣೆ (Lok Sabha Elections) ಸನಿಹದಲ್ಲಿ ರಾಜ್ಯದಲ್ಲಿ ಮತ್ತೆ ಟಿಪ್ಪು ಸುಲ್ತಾನ್ (Tipu Sultan) ಹೆಸರಲ್ಲಿ ರಾಜಕೀಯ ಕೆಸರೆರಚಾಟ ಶುರುವಾಗಿದೆ.

    ಮೈಸೂರು ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ (Mysuru Airport) ಟಿಪ್ಪು ಸುಲ್ತಾನ್ ಹೆಸರಿಡಬೇಕು ಎಂಬ ಕೂಗು ಕಾಂಗ್ರೆಸ್‌ನಲ್ಲಿ ಎದ್ದಿದೆ. ಇದಕ್ಕೆ ಸಹಜವಾಗಿಯೇ ಬಿಜೆಪಿ ಗರಂ ಆಗಿದೆ. ಬಿಜೆಪಿ ಅವಧಿಯಲ್ಲಿ ಟಿಪ್ಪು ಎಕ್ಸ್‌ಪ್ರೆಸ್‌ ಹೆಸರನ್ನು ಒಡೆಯರ್ ಎಕ್ಸ್‌ಪ್ರೆಸ್‌ ಎಂದು ಬದಲಾಯಿಸಲಾಗಿತ್ತು. ಇದಕ್ಕೆ ಕೌಂಟರ್ ಕೊಡಲೆಂದೇ ಇದೀಗ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದ್ಯಾ? ಟಿಪ್ಪು ಹೆಸರಿಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಲು ಮುಂದಾಗಿದ್ಯಾ ಎಂಬ ಪ್ರಶ್ನೆಗಳು ಎದ್ದಿದೆ.

    ಟಿಪ್ಪು ಹೆಸರಿಡುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಾಗಲಿ, ಡಿಸಿಎಂ ಆಗಲಿ ಈವರೆಗೂ ಯಾವುದೇ ನಿಲುವನ್ನು ಪ್ರಕಟಿಸಿಲ್ಲ. ಆದ್ರೆ ಬೆಳಗಾವಿ ಅಧಿವೇಶನದ ಕಲಾಪದಲ್ಲಿ ಪ್ರಸಾದ್ ಅಬ್ಬಯ್ಯ ಮಾಡಿದ್ದ ಪ್ರಸ್ತಾಪವನ್ನು ಸಚಿವ ಜಮೀರ್ (Zameer Ahmed Khan) ಸೇರಿ ಹಲವರು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಲೆನಾಡಿಗರನ್ನೂ ಬಿಟ್ಟೂ ಬಿಡದೇ ಕಾಡ್ತಿದೆ ಮಂಗನ ಕಾಯಿಲೆ – ವರ್ಷದ ಮೊದಲ ಕೇಸ್‌ ಪತ್ತೆ, ಹೆಚ್ಚಿದ ಆತಂಕ

    ಅಷ್ಟೇ ಅಲ್ಲ, ಟಿಪ್ಪು ಜಯಂತಿಗೂ ಒತ್ತಾಯಿಸಿದ್ದಾರೆ. ಇದಕ್ಕೆ ಕೇಸರಿ ಕಲಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಟಿಪ್ಪು ಪರ ಮಾತಾಡೋರೆಲ್ಲಾ ಪಾಕಿಸ್ತಾನದಲ್ಲಿ ಹುಟ್ಟಬೇಕಿತ್ತು ಎಂದು ಈಶ್ವರಪ್ಪ ಗುಡುಗಿದ್ದಾರೆ. ರಾಜ್ಯದಲ್ಲಿ ಹಿಂದೂಗಳನ್ನು 2ನೇ ದರ್ಜೆ ಪ್ರಜೆಗಳ ರೀತಿ ನೋಡಲಾಗ್ತಿದೆ ಎಂದು ಅಶೋಕ್ ದೂಷಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಯತ್ನಾಳ್, ಟಿಪ್ಪು ಹೆಸರನ್ನ ಬೇಕಿದ್ರೆ ಶೌಚಾಲಯಕ್ಕೆ ಇಡಲಿ. ಮೈಸೂರಿನ ವಿಮಾನ ನಿಲ್ದಾಣಕ್ಕೆ ಮಹಾಪ್ರಭುಗಳಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಕರ್ನಾಟಕ ಸರ್ಕಾರ ಶಿಫಾರಸ್ಸು ಮಾಡಬೇಕು. ಅವರ ಕೊಡುಗೆ ಕರ್ನಾಟಕ ಹಾಗು ಭಾರತಕ್ಕೆ ಅಪಾರವಾದದ್ದು ಎಂದು ಆಗ್ರಹಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಇದಕ್ಕೆ ಬಿ.ಕೆ ಹರಿಪ್ರಸಾದ್ ಕೌಂಟರ್ ಕೂಡ ನೀಡಿದ್ದಾರೆ.

    ಈ ಹಿಂದೆ ರಾಜ್ಯದಲೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜವಂಶಸ್ಥ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಜಯಚಾಮರಾಜೇಂದ್ರ ಒಡೆಯರ್ ಅವರ ಹೆಸರನ್ನಿಡುವಂತೆ ಸಲಹೆ ನೀಡಿದ್ದರು. ಇದನ್ನೂ ಓದಿ: ಗಂಡ ಹೆಂಡತಿ ಮಧ್ಯೆ ಮಗುವಿಗಾಗಿ ಜಗಳ – ಸಮಸ್ಯೆ ಬಗೆಹರಿಸಲು ಬಂದ ಪೊಲೀಸರನ್ನೇ ಕೂಡಿ ಹಾಕಿದ ಗ್ರಾಮಸ್ಥರು

  • ಮಂಗಳೂರಿನಿಂದ ಮೈಸೂರಿಗೆ ವಿಮಾನದಲ್ಲಿ ೧ ಗಂಟೆಯಲ್ಲಿ ತಲುಪಿ!

    ಮಂಗಳೂರಿನಿಂದ ಮೈಸೂರಿಗೆ ವಿಮಾನದಲ್ಲಿ ೧ ಗಂಟೆಯಲ್ಲಿ ತಲುಪಿ!

    – ಮಂಗಳೂರು – ಮೈಸೂರು ಅಲಯನ್ಸ್‌ ಏರ್‌ ವಿಮಾನ ಸೇವೆ ಆರಂಭ

    ಮಂಗಳೂರು: ಮಂಗಳೂರು – ಮೈಸೂರು ನಡುವಿನ ವಿಮಾನಯಾನ ಇಂದು ಆರಂಭವಾಗಿದೆ. ಮೈಸೂರಿನಿಂದ ಅಲಯನ್ಸ್ ಏರ್‌ನ ಮೊದಲ ವಿಮಾನ ಶುಕ್ರವಾರ ಮಂಗಳೂರು ಏರ್‌ಪೋರ್ಟ್‌ಗೆ ಬಂದಿಳಿಯಿತು.

    ಅಲಯನ್ಸ್ ಏರ್‌ನ ವಿಮಾನ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು ವಾಟರ್‌ ಸೆಲ್ಯೂಟ್ ಮೂಲಕ ವಿಮಾನಕ್ಕೆ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕರಾದ ವಿ.ವಿ.ರಾವ್‌, ಅದಾನಿ ಸಂಸ್ಥೆಯ ಅಧಿಕಾರಿಗಳು ಹಾಜರಿದ್ದರು.

    ಉಡಾನ್‌ ಯೋಜನೆಯಡಿ ಅಲಯನ್ಸ್‌ ಏರ್‌ ವಿಮಾನ ವಾರದಲ್ಲಿ ನಾಲ್ಕು ದಿನ ಮೈಸೂರು-ಮಂಗಳೂರು ನಡುವೆ ಸಂಚರಿಸಲಿದೆ. ಬುಧವಾರ, ಶುಕ್ರವಾರ, ಶನಿವಾರ, ರವಿವಾರ ಈ ಸೇವೆ ಲಭ್ಯವಾಗಲಿದೆ.

    ಮೈಸೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಸದ ಪ್ರತಾಪ್‌ ಸಿಂಹ ಅವರು ವಿಮಾನ ಸೇವೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಖ ಆರ್‌. ಮಂಜುನಾಥ್‌ ಅವರು, ಹಲವು ತಿಂಗಳ ಹಿಂದೆಯೇ ಈ ಸೇವೆ ಆರಂಭಿಸಲು ಬೇಡಿಕೆ ಇತ್ತು. ಆದರೆ ಕೋವಿಡ್‌ 19 ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸೇವೆ ಆರಂಭವಾಗಿರಲಿಲ್ಲ. ಈಗ ಸೋಂಕು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಆರಂಭವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಈ ವಿಮಾನ ಸೇವೆಯ ಸವಿನೆನಪಿಗಾಗಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಲಾಯಿತು.

    ಮಂಗಳೂರು- ಮೈಸೂರು ನಡುವೆ 255 ಕಿ.ಮೀ ದೂರವಿದ್ದು, ಬಸ್ ಮೂಲಕ ಸಂಚಾರಕ್ಕೆ ಸುಮಾರು ಆರರಿಂದ ಏಳು ಗಂಟೆ ಕಾಲ ಬೇಕಾಗುತ್ತದೆ. ಕಾರಲ್ಲಿ ಸಂಚರಿಸುವುದಿದ್ದರೂ 5 ಗಂಟೆ ಬೇಕಾಗುತ್ತದೆ.

    ಆದರೆ ಇದೀಗ ವಿಮಾನಯಾನ ಆರಂಭವಾದ ಕಾರಣ ಕೇವಲ ಒಂದು ಗಂಟೆಯಲ್ಲಿ ಬಂದರು ನಗರಿ ಮಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರನ್ನು ತಲುಪಬಹುದಾಗಿದೆ. 11.20ಕ್ಕೆ ಮೈಸೂರಿನಿಂದ ಹೊರಟು ಮಧ್ಯಾಹ್ನ 12.30 ಕ್ಕೆ‌ ತಲುಪಿದೆ. ಅದೇ ವಿಮಾನ 12.55ಕ್ಕೆ ಹೊರಟು ಮಧ್ಯಾಹ್ನ 1.55ಕ್ಕೆ‌ಮೈಸೂರು ತಲುಪಲಿದೆ.