Tag: mysterious whistle

  • ಕೆಆರ್‌ಎಸ್‌ ಬಳಿ ನಿಗೂಢ ಶಬ್ಧ- ಆತಂಕದಲ್ಲಿ ಸ್ಥಳೀಯರು

    ಕೆಆರ್‌ಎಸ್‌ ಬಳಿ ನಿಗೂಢ ಶಬ್ಧ- ಆತಂಕದಲ್ಲಿ ಸ್ಥಳೀಯರು

    ಮಂಡ್ಯ: ಕೆಆರ್‌ಎಸ್‌ಗೆ ಭಾರೀ ಅಪಾಯ ಕಾದಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ. ಯಾಕೆಂದರೆ ಕೆಆರ್‌ಎಸ್‌ ಸುತ್ತಮುತ್ತ ನಿಗೂಢ ಶಬ್ಧ ಕೇಳಿಬರುತ್ತಿದೆ ಎಂದು ಸ್ಥಳೀಯರು ಅತಂಕ ವ್ಯಕ್ತಪಡಿಸಿದ್ದಾರೆ.

    ಶುಕ್ರವಾರ ಸಂಜೆಯಿಂದ ಏಳೆಂಟು ಬಾರಿ ಭಾರೀ ಶಬ್ಧವಾಗಿದ್ದು, ರಾತ್ರಿ 7.25 ರಿಂದ 7.35ರ ಅವಧಿಯಲ್ಲಿ ಮತ್ತೆ ಸೌಂಡ್ ಆಗಿದೆ. ಈ ರೀತಿ ಆಗುತ್ತಿರುವುದು ಅಧಿಕಾರಿಗಳು ಮತ್ತು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

    ಡ್ಯಾಂ ಬಳಿ ಆಗುತ್ತಿರುವ ಆ ನಿಗೂಢ ಶಬ್ಧದ ಮೂಲ ತಿಳಿಯಲು ಅಧಿಕಾರಿಗಳು ಶೋಧಕಾರ್ಯ ಮುಂದುವರಿಸಿದ್ದಾರೆ. ಕಳೆದ 2 ವರ್ಷಗಳಿಂದ ಹಲವು ಬಾರಿ ಇದೇ ರೀತಿ ನಿಗೂಢ ಶಬ್ಧ ಕೇಳಿ ಬಂದಿದೆ. ಆದರೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.