Tag: Mysore Zoo

  • ಮೈಸೂರು ಮೃಗಾಲಯದ ನೀರು ಕುದುರೆ ಶಿವಮೊಗ್ಗಕ್ಕೆ ಶಿಫ್ಟ್‌!

    ಮೈಸೂರು ಮೃಗಾಲಯದ ನೀರು ಕುದುರೆ ಶಿವಮೊಗ್ಗಕ್ಕೆ ಶಿಫ್ಟ್‌!

    ಮೈಸೂರು: ಶ್ರೀಚಾಮರಾಜೇಂದ್ರ ಒಡೆಯರ್‌ ಮೃಗಾಲಯದಿಂದ ಶಿವಮೊಗ್ಗ ಮೃಗಾಲಯಕ್ಕೆ ನೀರು ಕುದುರೆಯನ್ನು ರವಾನಿಸಲಾಯಿತು.

    ದಿವಾ ಎಂಬ ಹೆಸರಿನ ನೀರು ಕುದುರೆಯನ್ನು ಮೈಸೂರು ಮೃಗಾಲಯದಿಂದ ರವಾನೆ ಮಾಡಲಾಯಿತು. ಶಿವಮೊಗ್ಗ ಸಫಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಣಿ ರವಾನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪುಗೆ ಇಸಿಜಿ ಟೆಸ್ಟ್‌ನಲ್ಲಿ ಹಾರ್ಟ್ ಅಟ್ಯಾಕ್ ಸುಳಿವು: ಡಾ. ರಮಣ ರಾವ್

    ಮೃಗಾಲಯ ಸಿಬ್ಬಂದಿಯು ಟ್ರಕ್ ಮೂಲಕ ಯಶಸ್ವಿಯಾಗಿ ಪ್ರಾಣಿ ರವಾನೆ ಮಾಡಿದ್ದಾರೆ. ಇದನ್ನೂ ಓದಿ: ಪತಿ, ಪತ್ನಿ ನಡುವೆ ಒಡವೆ ವಿಚಾರಕ್ಕೆ ಕಿರಿಕ್ – ಕೊಲೆಯಲ್ಲಿ ಅಂತ್ಯ

  • ವಿದೇಶಿ ಒರಾಂಗೂಟಾನ್‍ಗಳಿಗೆ ಮೈಸೂರು ZOOನಲ್ಲಿ 1.2 ಕೋಟಿ ರೂ. ವೆಚ್ಚದ ಹೊಸ ಮನೆ!

    ವಿದೇಶಿ ಒರಾಂಗೂಟಾನ್‍ಗಳಿಗೆ ಮೈಸೂರು ZOOನಲ್ಲಿ 1.2 ಕೋಟಿ ರೂ. ವೆಚ್ಚದ ಹೊಸ ಮನೆ!

    ಮೈಸೂರು: ಚಾಮರಾಜೇಂದ್ರ ಮೃಗಾಲಯದಲ್ಲಿರುವ ವಿದೇಶಿ ಒರಾಂಗೂಟಾನ್‍ಗಳಿಗೆ ಹೊಸದಾಗಿ ಮನೆಯನ್ನು ನಿರ್ಮಿಸಲಾಗಿದೆ.

    ORANGUTAN MYSORE ZOO

    ಬ್ಯಾಂಕ್ ನೋಟ್ ಪೇಪರ್ ಇಂಡಿಯಾ ವತಿಯಿಂದ ಸಿಎಸ್‍ಆರ್ ನಿಧಿಯಡಿ 70 ಲಕ್ಷ ರೂ. ನೆರವು ನೀಡಲಾಗಿತ್ತು. ಸುಮಾರು 1.2 ಕೋಟಿ ರೂ. ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದೆ. ಇದನ್ನೂ ಓದಿ: ಕೋತಿಗಳಿಗೆ ಬಾಳೆಹಣ್ಣು ತಿನ್ನಿಸಿದ ಸಾರಿಗೆ ಸಚಿವ ಶ್ರೀರಾಮುಲು

    ಬ್ಯಾಂಕ್ ನೋಟ್ ಪೇಪರ್ ಇಂಡಿಯಾದ ಅಧ್ಯಕ್ಷೆ ತೃಪ್ತಿ ಪಾತ್ರ ಘೋಷ್ ಅವರು ಈ ನೂತನ ಮನೆಯನ್ನು ಉದ್ಘಾಟಿಸಿದರು.

    ORANGUTAN

    ಮಲೇಶಿಯಾ, ಸಿಂಗಾಪುರ್‍ನಿಂದ ತಂದಿರುವ 2 ಜೊತೆ ಒರಾಂಗೂಟಾನ್‍ಗಳಿಗೆ ಮನೆ ನಿರ್ಮಿಸಿಕೊಡಲಾಗಿದೆ. ಮೃಗಾಲಯದಲ್ಲಿ ಅವುಗಳಿಗೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: 75 ಕೆಜಿಯ ಮೀನು 36 ಲಕ್ಷ ರೂಪಾಯಿಗೆ ಮಾರಾಟ

    ಮನೆ ಉದ್ಘಾಟನೆ ವೇಳೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೃಗಾಲಯ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಉಪಸ್ಥಿತರಿದ್ದರು.

  • ಹುಲಿ ಹುಡುಕೋ ಕಾರ್ಯಾಚರಣೆ ವೇಳೆ ಸಿಕ್ತು ಕಾಡುಕೋಣ..!

    ಹುಲಿ ಹುಡುಕೋ ಕಾರ್ಯಾಚರಣೆ ವೇಳೆ ಸಿಕ್ತು ಕಾಡುಕೋಣ..!

    ಚಿಕ್ಕೋಡಿ: ಹುಲಿ ಬಂದಿದೆ ಎಂಬ ಶಂಕೆಯಿಂದ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳಿಗೆ ಕಾಡುಕೋಣ ಸಿಕ್ಕಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಕಾಡುಕೋಣವನ್ನು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.

    ಗ್ರಾಮದಲ್ಲಿ ಇತ್ತೀಚಿಗೆ ಹುಲಿ ಬಂದಿದೆಯೆಂದು ಶಂಕೆ ವ್ಯಕ್ತವಾಗಿದ್ದು, ಹುಲಿ ಹುಡುಕಾಟದಲ್ಲಿ ಕಾಡುಕೋಣ ಪತ್ತೆಯಾಗಿದೆ. ಗ್ರಾಮದಲ್ಲಿ ಕಾಡುಕೋಣ ಕಾಣಿಸಿಕೊಂಡು ಜನರಲ್ಲಿ ಭಯ ಉಂಟು ಮಾಡಿತ್ತು. ಕೊನೆಗೆ ಹರಸಾಹಸಪಟ್ಟು ಗ್ರಾಮಸ್ಥರು ಅರಣ್ಯ ಸಿಬ್ಬಂದಿ ನೇತೃತ್ವದಲ್ಲಿ ಕಾಡುಕೋಣವನ್ನು ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ ಪತ್ರ

    ಬೃಹದಾಕಾರದ ಕಾಡುಕೋಣ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು. ಹಲವಾರು ಬೆಳೆಗಳನ್ನು ನಾಶ ಪಡಿಸುತ್ತಿರುವ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನ ಮೃಗಾಲಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಬೆಳಗಾವಿ ಅರಣ್ಯ ಇಲಾಖೆ ಅರಣ್ಯಾಧಿಕಾರಿ ಅಂಥೋನಿ ಮರಿಯಪ್ಪ ಮತ್ತು ಪ್ರಶಾಂತ್ ಗಾಣಿಗೇರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಸತತ ನಾಲ್ಕು ದಿನ ಕಾರ್ಯಾಚರಣೆ ನಡೆಸಿ ಕಾಡುಕೋಣವನ್ನು ಹಿಡಿದಿದ್ದಾರೆ. ಇದನ್ನೂ ಓದಿ: ಸರಕು, ಸೇವೆಗಳ ಬೇಡಿಕೆ ಹೆಚ್ಚಿಸಲು ಗುಣಮಟ್ಟದ ರಫ್ತು ಅವಶ್ಯಕ – ವಸಂತ ಲದ್ವಾ

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅಥಣಿ ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ್ ಗಾಣಿಗೇರ್, ಈ ಭಾಗದಲ್ಲಿ ಕಾಡುಕೋಣ ಕಾಣಿಸಿಕೊಳ್ಳುವುದು ಅಪರೂಪ. ಸುತ್ತಮುತ್ತ ನೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾಡುಕೋಣ ಕಾಣಿಸುವುದಿಲ್ಲ. ಖಾನಾಪುರ ಕಾಡಿನಲ್ಲಿ ಕಾಡು ಕೋಣಗಳಿವೆ. ಆದರೂ ಅಥಣಿ ತಾಲೂಕಿನ ಬಯಲುಸೀಮೆಯಲ್ಲಿ ಕಾಡುಕೋಣ ಬಂದಿರೋದು ಅಪರೂಪದ ಘಟನೆಯೆಂದು ಮಾಹಿತಿ ಹಂಚಿಕೊಂಡರು. ಸದ್ಯ ಕಾಡುಕೋಣ ಆರೋಗ್ಯದಿಂದಿದ್ದು, ಮೈಸೂರು ಮೃಗಾಲಯಕ್ಕೆ ರವಾನೆ ಮಾಡಲಾಗಿದೆ ಎಂದು ತಿಳಿಸಿದರು.

  • ಆದಾಯದಲ್ಲಿ ಏರಿಕೆ ಕಂಡ ಮೈಸೂರು ಮೃಗಾಲಯ

    ಆದಾಯದಲ್ಲಿ ಏರಿಕೆ ಕಂಡ ಮೈಸೂರು ಮೃಗಾಲಯ

    ಮೈಸೂರು: ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವುದರ ಜೊತೆ ಮೈಸೂರು ಮೃಗಾಲಯದ ಆದಾಯ ಕಳೆದ ಹಣಕಾಸು ವರ್ಷದಲ್ಲಿ ಏರಿಕೆ ಕಂಡಿದೆ.

    ಮೈಸೂರು ಮೃಗಾಲಯದ ಪ್ರವೇಶದ್ವಾರ ಶುಲ್ಕವನ್ನು ಈ ಬಾರಿ ಏರಿಸಲಾಗಿದೆ. ಅಷ್ಟೇ ಅಲ್ಲದೇ ಪ್ರಾಣಿ ದತ್ತು ಯೋಜನೆಯಲ್ಲಿ ಭಾರೀ ಏರಿಕೆ ಕಂಡಿದೆ. ಎಲ್ಲದರ ಪರಿಣಾಮ ಮೃಗಾಲಯದ ಆದಾಯದಲ್ಲಿ ಏರಿಕೆ ಕಂಡಿದೆ.

    2016-17 ಸಾಲಿನ ಹಣಕಾಸು ವರ್ಷದಲ್ಲಿ ಮೃಗಾಲಯ 19 ಕೋಟಿ ರೂ. ಆದಾಯ ಗಳಿಸಿತ್ತು. 2017-18 ಸಾಲಿನ ಹಣಕಾಸು ವರ್ಷದಲ್ಲಿ 23.10 ಕೋಟಿ ರೂ. ಆದಾಯ ಗಳಿಸಿದೆ. ಒಂದೇ ವರ್ಷದಲ್ಲಿ ಒಟ್ಟು 3 ಕೋಟಿ ರೂ. ಆದಾಯದಲ್ಲಿ ಏರಿಕೆ ಕಂಡಿದೆ.

    ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 1 ಲಕ್ಷದ 30 ಸಾವಿರ ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದರೆ ಈ ವರ್ಷ ಮಾರ್ಚ್ ತಿಂಗಳಲ್ಲಿ 1 ಲಕ್ಷದ 60 ಸಾವಿರ ಮಂದಿ ಭೇಟಿ ನೀಡಿದ್ದಾರೆ. ಮೇ ತಿಂಗಳ ಪ್ರವಾಸಿಗರ ಸಂಖ್ಯೆಯಲ್ಲೂ ಕಳೆದ ವರ್ಷಕ್ಕಿಂತ 60 ಸಾವಿರ ಹೆಚ್ಚಳವಾಗಿದೆ. 2017-18 ಸಾಲಿನಲ್ಲಿ 35 ಲಕ್ಷ ಮಂದಿ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ.

    ಮೃಗಾಲಯಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಸಿಗದ ಕಾರಣ 17 ವರ್ಷಗಳಲ್ಲಿ 4,041 ಪ್ರಾಣಿಗಳನ್ನು 3,149 ವ್ಯಕ್ತಿಗಳು ದತ್ತು ಸ್ವೀಕರಿಸಿದ್ದಾರೆ. 17 ವರ್ಷಗಳ ಹಿಂದೆ ಆರ್ಥಿಕ ನಷ್ಟದಿಂದಾಗಿ ಮೈಸೂರು ಮೃಗಾಲಯ ಮುಚ್ಚುವ ಹಂತ ತಲುಪಿತ್ತು. ಹೀಗಾಗಿ, ಅಂದಿನ ಕಾರ್ಯನಿರ್ವಾಹಕ ನಿರ್ದೇಶಕ ಕುಮಾರ ಪುಷ್ಕರ್ ಅವರು ಪ್ರಾಣಿಗಳ ದತ್ತು ಯೋಜನೆ ಆರಂಭಿಸಿದ್ದರು. ಈ ಯೋಜನೆ ಅಸ್ತಿತ್ವಕ್ಕೆ ಬಂದ 2001-02ನೇ ಸಾಲಿನಲ್ಲಿ 40 ಸಾವಿರ ಲಭಿಸಿತ್ತು. ಅಲ್ಲಿಂದ ದತ್ತು ಪಡೆಯುವವರ ಸಂಖ್ಯೆ ಹಾಗೂ ಆದಾಯ ಹೆಚ್ಚಾಗುತ್ತಿದೆ. ಒಂದು ಹುಲಿ ನಿರ್ವಹಣೆಗೆ ವರ್ಷಕ್ಕೆ 4 ಲಕ್ಷ ರೂ. ಖರ್ಚಾಗುತ್ತದೆ.