Tag: Mysore Road

  • ಬೆಂಗ್ಳೂರು ಸಂಪೂರ್ಣ ಸ್ತಬ್ಧ- ರಸ್ತೆಗಳು ಖಾಲಿ ಖಾಲಿ

    ಬೆಂಗ್ಳೂರು ಸಂಪೂರ್ಣ ಸ್ತಬ್ಧ- ರಸ್ತೆಗಳು ಖಾಲಿ ಖಾಲಿ

    ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸ್ಫೋಟವಾಗುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಇದೇ ಮೊದಲ ಸಂಡೇ ಲಾಕ್‍ಡೌನ್ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮೆಜೆಸ್ಟಿಕ್, ಮಲ್ಲೇಶ್ವರಂ, ತುಮಕೂರು, ಮೈಸೂರು ರಸ್ತೆ ಸೇರಿದಂತೆ ಬೆಂಗಳೂರಿನ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿವೆ.

    ಬಳ್ಳಾರಿ ರೋಡ್ ಮತ್ತು ಮೇಕ್ರಿ ಸರ್ಕಲ್ ಸುತ್ತಮುತ್ತ ರಸ್ತೆಗಳು ಫುಲ್ ಖಾಲಿ ಖಾಲಿಯಾಗಿವೆ. ಪ್ರಮುಖ ಪ್ಲೈಓವರ್‌ಗೆ ಬ್ಯಾರಿಕೇಡ್ ಹಾಕಿ ಪೊಲೀಸರು ಮುಚ್ಚಿದ್ದಾರೆ. ಹೀಗಾಗಿ ರಸ್ತೆಗಳು ಖಾಲಿ ಖಾಲಿ ಇರುವುದರಿಂದ ಹೆಬ್ಬಾಳದ ರಸ್ತೆ ಬದಿಯಲ್ಲಿ ಜನರು ವಾಕಿಂಗ್ ಮಾಡುತ್ತಿದ್ದಾರೆ.

    ಇನ್ನೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಸಂಪೂರ್ಣ ನಿಶಬ್ಧವಾಗಿದೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳು ಫುಲ್ ಖಾಲಿ ಖಾಲಿಯಾಗಿವೆ. ಮೆಜೆಸ್ಟಿಕ್‍ನಲ್ಲಿ ಆಟೋಗಳ ಸಂಚಾರ ಹೊರತು ಪಡಿಸಿದರೆ ಬೇರೆ ವಾಹನಗಳ ಓಡಾಟ ಸಂಪೂರ್ಣ ಬಂದ್ ಆಗಿದೆ. ಇಂದಿನಿಂದ ನಾಳೆ ಬೆಳಗ್ಗೆಯ ತನಕ ಲಾಕ್‍ಡೌನ್ ವಿಚಾರ ತಿಳಿದು ಮೆಜೆಸ್ಟಿಕ್ ಕಡೆ ಪ್ರಯಾಣಿಕರು ಬರುತ್ತಿಲ್ಲ.

    ಮಲ್ಲೇಶ್ವರಂನಲ್ಲಿ ಹಾಲು ಮಾರಾಟಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಮಲ್ಲೇಶ್ವರಂ ಮುಖ್ಯ ರಸ್ತೆಗಳು ಖಾಲಿ ಖಾಲಿಯಾಗಿವೆ. ಆದರೆ ದ್ವಿಚಕ್ರ ವಾಹನದಲ್ಲಿ ಜನರು ಓಡಾಡುತ್ತಿದ್ದಾರೆ. ಸಂಡೇ ಕರ್ಫ್ಯೂ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಆದೇಶ ಹೊರಡಿಸಿದ್ದು, ನಗರದ ದೇವಾಲಯಗಳು ಕೂಡ ಬಂದ್ ಆಗಿದೆ. ಮಲ್ಲೇಶ್ವರಂನ ಸಾಯಿ ಬಾಬಾ ದೇವಾಲಯ ಬಂದ್ ಆಗಿದೆ. ಆದರೆ ಗುರು ಪೂರ್ಣಮಿ ಹಿನ್ನೆಲೆಯಲ್ಲಿ ಸಾಯಿ ಬಾಬಾ ದರ್ಶನಕ್ಕೆ ಬಂದ ಭಕ್ತಾಧಿಗಳು ರಸ್ತೆಯಲ್ಲೇ ನಮಸ್ಕಾರ ಮಾಡಿ ವಾಪಸ್ ಹೋಗುತ್ತಿದ್ದಾರೆ.

    ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‍ಗಳ ಸಂಚಾರ ನಿಷೇಧ ಹಿನ್ನೆಲೆಯಲ್ಲಿ ಮೈಸೂರು ರಸ್ತೆಯ ಸೆಟಲೈಟ್ ಫುಲ್ ಖಾಲಿ ಖಾಲಿಯಗಿದೆ. ನಿಲ್ದಾಣದಲ್ಲಿ ಬ್ಯಾರಿಕೇಡ್‍ನಿಂದ ಕ್ಲೋಸ್ ಮಾಡಲಾಗಿದೆ. ಇತ್ತ ಮೈಸೂರು ರಸ್ತೆ ಕೂಡ ಫುಲ್ ಖಾಲಿ ಖಾಲಿಯಾಗಿದೆ. ಮಾಗಡಿ ರೋಡ್ ಕೂಡ ಸಂಪೂರ್ಣ ಸ್ತಬ್ಧವಾಗಿದೆ.

    ಸದಾ ವಾಹನ ಸಂಚಾರದಿಂದ ಟ್ರಾಫಿಕ್ ಜಾಮ್ ಆಗುತ್ತಿದ್ದ ತುಮಕೂರು ರಸ್ತೆ ಭಾನುವಾರ ಲಾಕ್‍ಡೌನ್ ಹಿನ್ನೆಲೆಯಲ್ಲಿ ಖಾಲಿ ಖಾಲಿಯಾಗಿದೆ. ಬೆರೆಳೆಣಿಕೆಯಷ್ಟು ವಾಹನಗಳು ಸಂಚಾರ ಬಿಟ್ಟರೆ ಬಹುತೇಕ ರಸ್ತೆ ಖಾಲಿ ಇದೆ. ಗೊರಗೊಂಟೆಪಾಳ್ಯದ ಫ್ಲೈ ಓವರ್ ಕ್ಲೋಸ್ ಮಾಡಲಾಗಿದೆ.

  • ಮೈಸೂರು ರಸ್ತೆ ಫ್ಲೈಓವರ್ ಮೇಲೆ ಓಡಾಡುವ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್

    ಮೈಸೂರು ರಸ್ತೆ ಫ್ಲೈಓವರ್ ಮೇಲೆ ಓಡಾಡುವ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್

    ಬೆಂಗಳೂರು: ಗುಂಡಿ ಮುಚ್ಚುವ ಕಾಮಗಾರಿ ಹಿನ್ನೆಲೆಯಲ್ಲಿ ಇದೇ ತಿಂಗಳ 26 ರಿಂದ ಮೈಸೂರು ರಸ್ತೆ ಫ್ಲೈಓವರ್ (ಸಿರ್ಸಿ ಸರ್ಕಲ್) ಮುಚ್ಚಲಿದ್ದು, ವಾಹನ ಸವಾರರು ಮುಂದಿನ 4 ತಿಂಗಳು ಪರ್ಯಾಯ ಮಾರ್ಗ ನೋಡಿಕೊಳ್ಳಬೇಕಿದೆ.

    ಮೈಸೂರು ರಸ್ತೆ, ಬಸವನಗುಡಿ, ಮೆಜೆಸ್ಟಿಕ್, ಗೋರಿಪಾಳ್ಯ ಮಾರ್ಗವಾಗಿ ಸಂಚರಿಸಲು ಬೆಂಗಳೂರಿನ ಸಿರ್ಸಿ ಫ್ಲೈಓವರ್ ಬಳಸುತ್ತಿದ್ದ ವಾಹನ ಸವಾರರು ನೋಡಲೇಬೇಕಾದ ಸುದ್ದಿ ಇದಾಗಿದೆ. ಫ್ಲೈಓವರ್ ಮೇಲೆ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಹಿನ್ನೆಲೆಯಲ್ಲಿ ಇದೇ ತಿಂಗಳ 27 ರಂದು ಫ್ಲೈಓವರ್ ಬಂದ್ ಆಗಲಿದೆ. ಈ ಮೂಲಕ ವಾಹನ ಸಂಚಾರಕ್ಕೆ ಬ್ರೇಕ್ ಬೀಳಲಿದೆ.

    ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಟೆಕ್ಕಿ ಟಾರ್ ಶೀಟ್ ಅಳವಡಿಸಲಾಗುತ್ತದೆ. ಮೂರು ಮಿಲಿ ಮೀಟರ್ ಗಾತ್ರದ ಸಣ್ಣ ಡಾಂಬಾರ್ ಶೀಟ್ ಹಾಕಿ ಕಾಂಕ್ರಿಟ್ ಮೇಲ್ಭಾಗದಲ್ಲಿ ಡಾಂಬರೀಕರಣ ಮಾಡಲಾಗುತ್ತದೆ. ಇನ್ನು ಈ ಕಾಮಗಾರಿಗೆ 4 ತಿಂಗಳ ಸಮಯ ಕೇಳಿದ್ದು, 2 ತಿಂಗಳಲ್ಲಿ ಮುಗಿಸುವ ವಿಶ್ವಾಸವಿದೆ ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

    ಕಳೆದ 4 ವರ್ಷಗಳ ಹಿಂದೆ ಫ್ಲೈಓವರ್ ಡಾಂಬರೀಕರಣ ಮಾಡಲಾಗಿತ್ತು. ಗುಂಡಿ ಬಿದ್ದಿದೆ ಎಂದು 3 ತಿಂಗಳ ಹಿಂದೆಯಷ್ಟೇ ಗುಂಡಿ ಮುಚ್ಚುವ ಕೆಲಸವೂ ಆಗಿದೆ. ಈಗ ಮತ್ತೆ 4 ಕೋಟಿ 50 ಲಕ್ಷ ವೆಚ್ಚದಲ್ಲಿ ಮತ್ತೆ ಕಾಮಗಾರಿ ಕೈಗೆತ್ತಿಕೊಂಡಿದೆ.

    4 ಹಂತದಲ್ಲಿ ಫ್ಲೈಓವರ್ ಬಂದ್ ಆಗಲಿದೆ. ಮೊದಲು ರಾಯನ್ ಸರ್ಕಲ್ ನಿಂದ ಮೈಸೂರು ರಸ್ತೆವರೆಗೂ ಬಂದ್ ಮಾಡಲಾಗುತ್ತದೆ. ಮತ್ತೆ ಟೌನ್‍ಹಾಲ್ ಭಾಗದಿಂದ ರಾಯನ್ ಸರ್ಕಲ್‍ವರೆಗೂ ಕಾಮಗಾರಿ ಮಾಡಲಾಗುತ್ತದೆ. ಇತ್ತ ಮೂರನೇ ಹಂತದಲ್ಲಿ ಮೈಸೂರು ರಸ್ತೆಯಿಂದ ಮಾರುಕಟ್ಟೆವರೆಗೂ ಬಂದ್ ಮಾಡಲಾಗುತ್ತದೆ. ಕಡೆಯದಾಗಿ ಕೆ.ಆರ್.ಮಾರುಕಟ್ಟೆಯಿಂದ ಟೌನ್ ಹಾಲ್ ತಲುಪುವ ಫ್ಲೈಓವರ್ ತಲುಪುವ ಕಡೆಯ ಭಾಗದವರೆಗೂ ಡಾಂಬರೀಕರಣ ಕಾಮಗಾರಿ ನಡೆಯಲಿದೆ. ಹೀಗಾಗಿ ವಾಹನ ಸವಾರರು ಮುಂದಿನ 4 ತಿಂಗಳೂ ಪರ್ಯಾಯ ಮಾರ್ಗ ನೋಡಿಕೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಲಿಕಾನ್ ಸಿಟಿಯಲ್ಲಿ ವರುಣನ ಅರ್ಭಟ: ಕೆರೆಗಳಂತಾದ ರಸ್ತೆಗಳು

    ಸಿಲಿಕಾನ್ ಸಿಟಿಯಲ್ಲಿ ವರುಣನ ಅರ್ಭಟ: ಕೆರೆಗಳಂತಾದ ರಸ್ತೆಗಳು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ವರುಣನ ಅರ್ಭಟ ಮುಂದುವರೆದಿದ್ದು ತಡರಾತ್ರಿವರೆಗೂ ಸುರಿದ ಮಳೆಗೆ ರಸ್ತೆಗಳೆಲ್ಲಾ ಕೆರೆಗಳಂತಾಗಿದೆ. ಶಾಂತಿನಗರ, ಡಬ್ಬಲ್ ರೋಡ್, ಮೆಜೆಸ್ಟಿಕ್, ರಾಜಾಜಿನಗರ, ಯಶವಂತಪುರ, ಪೀಣ್ಯ ಸೇರಿದಂತೆ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗಿದೆ. ವರುಣನ ಅಬ್ಬರಕ್ಕೆ ನಗರದ ಬಹುತೇಕ ರಸ್ತೆಗಳು ಕೆರೆಗಳಾಂತಾಗಿದೆ. ಕೋರಮಂಗಲದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು ವಾಹನ ಸವಾರರು ಪರದಾಡುವಂತಾಯಿತು.

    ನಗರದಲ್ಲಿ ಮತ್ತೊಮೆ ಮಳೆ ತನ್ನ ಆರ್ಭಟ ತೋರಿಸಿದೆ. ಮೊನ್ನೆಯಷ್ಟೆ ನಾಲ್ವರನ್ನು ಬಲಿ ಪಡೆದ ಮಳೆ ಶನಿವಾರ ತಡರಾತ್ರಿ ಹಾಗೂ ಭಾನುವಾರ ಬೆಳಗಿನ ಜಾವದವರೆಗೂ ಎಡಬಿಡದೆ ಸುರಿದಿದೆ. ಇನ್ನೂ ನಾಯಂಡಹಳ್ಳಿ ಬಳಿ ವಿಪರೀತ ಮಳೆ ಬಂದ ಕಾರಣ ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರಿಯಿಡೀ ಜಾಗರಣೆ ನಡೆಸುವಂತಾಗಿತ್ತು. ತಗ್ಗು ಪ್ರದೇಶವಾದ ಕಾರಣ ನೀರು ಮನೆಗೆ ನುಗ್ಗಿದ್ದು ಮನೆಯಲ್ಲಿದ್ದ ವಸ್ತುಗಳೆಲ್ಲವೂ ನಾಶವಾಗಿದೆ. ಇನ್ನು ಈ ಸಂಬಂಧದ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಬೆಂಗಳೂರಲ್ಲಿ ಮುಂದುವರೆದ ವರುಣನ ಆರ್ಭಟ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಮುಳುಗಿದೆ. ನೆಲಮಂಗಲ ರಸ್ತೆ, ಮೈಸೂರು ರೋಡ್ ಸಂಪೂರ್ಣ ಜಲಾವೃತಗೊಂಡಿದ್ದು ಮೈಸೂರು ರೋಡ್ ಫ್ಲೆಓವರ್ ಬಳಿ ಸಾರಿಗೆ ಬಸ್ ಹಾಗೂ ಲಾರಿ ಮುಳುಗಿತ್ತು. ಮೈಸೂರು ರಸ್ತೆಯ ಕೆಂಗೇರಿ ಬಸ್ ನಿಲ್ದಾಣದ ಬಳಿ ಹೆದ್ದಾರಿ ಕೆರೆಗಳಂತೆ ಆಗಿದೆ. ಎರಡು ಬಸ್‍ಗಳು ಅರ್ಧಭಾಗ ಮುಳುಗಿತ್ತು. ರಾಜರಾಜೇಶ್ವರಿ ನಗರದ ಆರ್ಚ್ ವರೆಗೂ ಟ್ರಾಫಿಕ್ ಜಾಮ್ ಹಾಗೂ ವಾಹನಗಳು ನಿಂತಲ್ಲೇ ನಿಂತಿತ್ತು. ಎರಡೂ ಬದಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.

    ಮೈಸೂರು ರಸ್ತೆ ಸಂಪೂರ್ಣ ಜಲಾವೃತ ಆಗಿದ್ದು ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ರಸ್ತೆಗೆ ರಾಜಕಾಲುವೆ ನೀರು ನುಗಿತ್ತು. ಮೈಸೂರ್ ರೋಡ್, ಆರ್ ಆರ್ ನಗರ, ಆರ್‍ಟಿಓ ರೋಡ್‍ಗಳಲ್ಲಿ ಬಿಎಂಟಿಸಿ ಬಸ್‍ಗಳು ನೀರಿನಲ್ಲಿ ಮುಳುಗಿತ್ತು. ಮೈಸೂರು ರೋಡ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು ಹಾಗೂ ಕೋರಮಂಗಲ ಮುಖ್ಯರಸ್ತೆಯಲ್ಲಿ ಸಂಪೂರ್ಣ ಜಲಾವೃತ ಆಗಿತ್ತು.