Tag: Myositis

  • ಕ್ರಯೋಥೆರಪಿ ಚಿಕಿತ್ಸೆಗೆ ಒಳಗಾದ ನಟಿ ಸಮಂತಾ

    ಕ್ರಯೋಥೆರಪಿ ಚಿಕಿತ್ಸೆಗೆ ಒಳಗಾದ ನಟಿ ಸಮಂತಾ

    ಕ್ಷಿಣದ ಖ್ಯಾತ ನಟಿ ಸಮಂತಾ ಮಯೋಸೈಟಿಸ್ (Myositis) ಕಾಯಿಲೆಯಿಂದ ಬಳಲುತ್ತಿರುವ ವಿಷಯ ಗೊತ್ತೇ ಇದೆ. ಪದೇ ಪದೇ ಈ ಕಾಯಿಲೆಗಾಗಿ ನಾನಾ ಥೆರಪಿ ಪಡೆಯುತ್ತಿದ್ದಾರೆ ನಟಿ. ಖುಷಿ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ನಾನಾ ದೇಶಗಳನ್ನು ಸುತ್ತುವುದರಲ್ಲಿ ಬ್ಯುಸಿಯಾಗಿದ್ದ ನಟಿ ಇದೀಗ ಕ್ರಯೋಥೆರಪಿ (Cryotherally) ಚಿಕಿತ್ಸೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ತಿಳಿಸಿದ್ದರು, ಆ ಕುರಿತಾದ ವಿಡಿಯೋ ಕೂಡ ಶೇರ್ ಮಾಡಿದ್ದಾರೆ.

    ಈ ಹಿಂದೆ ಸಮಂತಾ(Samantha) ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದರು. ತಮಗಿರುವ ಖಾಯಿಲೆಗಾಗಿ ಸ್ಟಿರಾಯ್ಡ್ (Steroid) ತೆಗೆದುಕೊಂಡಿದ್ದರಿಂದ ತಮ್ಮ ದೇಹದ ಚರ್ಮ ಹಾಳಾಗಿದೆ ಎಂದು ಅವರು ಹೇಳಿಕೊಂಡಿದ್ದರು. ತಾವು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಯಾವುದೇ ಫೋಟೋ ಹಾಕಲಿ, ಅದಕ್ಕೆ ಫಿಲ್ಟರ್ ಹಾಕುವುದಾಗಿ ತಿಳಿಸಿದ್ದರು.

    ವೈದ್ಯರ ಸಲಹೆ ಮೇರೆಗೆ ದೇಹದಲ್ಲಿ ಕಾಣಿಸಿಕೊಳ್ಳುತ್ತಿದ್ದ ನೋವಿಗಾಗಿ ಸ್ಟಿರಾಯ್ಡ್ ತೆಗೆದುಕೊಳ್ಳುತ್ತಿದ್ದೆ. ಅದು ಅತೀಯಾಗಿ ದೇಹ ಸೇರಿಕೊಂಡಿದ್ದರಿಂದ ಚರ್ಮಕ್ಕೆ ತೊಂದರೆ ಮಾಡಿದೆ. ವೈದ್ಯರಾದ ಚಿನ್ಮಯಿ ಶ್ರೀಪಾದ ಅವರು ಚರ್ಮವನ್ನು ಸರಿ ಮಾಡುವುದಾಗಿ ಹೇಳಿದ್ದಾರೆ. ಎಲ್ಲವೂ ಅವರ ಕೈಯಲ್ಲಿದೆ ಎಂದು ಸಮಂತಾ ಹೇಳಿಕೊಂಡಿದ್ದರು.

     

    ಪ್ರತಿ ದಿನವೂ ಸಮಂತಾ ಲಕಲಕ ಹೊಳೆಯುವಂತಹ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದರು. ಅಭಿಮಾನಿಯೊಬ್ಬ ನೀವು ಇಷ್ಟೊಂದು ಹೊಳೆಯಲು ಮತ್ತು ಸುಂದರವಾಗಿರಲು ಕಾರಣವೇನು? ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದೀರಿ ಮತ್ತು ವೃದ್ಧಿಸಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸಮಂತಾ ನಿಜ ಉತ್ತರವನ್ನೇ ಕೊಟ್ಟಿದ್ದಾರೆ. ಎಲ್ಲ ಫೋಟೋಗಳಿಗೆ ಫಿಲ್ಟರ್ ಹಾಕುವೆ ಎಂದು ಹೇಳುವ ಮೂಲಕ ಸ್ಟಿರಾಯ್ಡ್ ಕಥೆಯನ್ನು ಹಂಚಿಕೊಂಡಿದ್ದರು.

  • ಸಾಲ ಮಾಡಿ ಚಿಕಿತ್ಸೆ ಪಡೆಯುವಂಥ ಸ್ಥಿತಿ ನನಗಿಲ್ಲ: ಸಮಂತಾ ಪೋಸ್ಟ್

    ಸಾಲ ಮಾಡಿ ಚಿಕಿತ್ಸೆ ಪಡೆಯುವಂಥ ಸ್ಥಿತಿ ನನಗಿಲ್ಲ: ಸಮಂತಾ ಪೋಸ್ಟ್

    ಲವು ದಿನಗಳಿಂದ ಸಮಂತಾ  ಬಗ್ಗೆ ಹಣಕಾಸಿನ ವಿಚಾರವೊಂದು ಭಾರೀ ಸದ್ದು ಮಾಡುತ್ತಿತ್ತು. ಅವರು ತಮಗಿರೋ ಮೈಯೋಸಿಟಿಸ್ (Myositis) ಖಾಯಿಲೆ ಚಿಕಿತ್ಸೆಗಾಗಿ ಬರೋಬ್ಬರಿ 25 ಕೋಟಿ ರೂಪಾಯಿ ಸಾಲ ಮಾಡಿದ್ದಾರೆಂದು, ಆ ಸಾಲವನ್ನು ನಟನೊಬ್ಬನಿಂದ ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಸುಳ್ಳು ಸುದ್ದಿಗೆ ಸಮಂತ ಸ್ಪಷ್ಟನೆಯನ್ನು ನೀಡಿದ್ದಾರೆ. ಸಾಲ ಮಾಡಿ ಚಿಕಿತ್ಸೆ ಪಡೆಯುವಂತಹ ದುಸ್ಥಿತಿಯಲ್ಲಿ ನಾನಿನಲ್ಲ ಎಂದಿದ್ದಾರೆ.

    ‘ನನಗಿರೋ ಕಾಯಿಲೆಗೆ ಚಿಕಿತ್ಸೆ ಪಡೆಯಲು 25 ಕೋಟಿ ರೂಪಾಯಿ ಸಾಲ ಮಾಡಿದ್ದೇನೆ ಎನ್ನುವುದು ಶುದ್ದ ಸುಳ್ಳು. ಚಿಕಿತ್ಸೆಗೆ ಅಷ್ಟು ಹಣದ ಅವಶ್ಯಕತೆಯಿಲ್ಲ. ನಾನು ದುಡಿದ ಹಣದಲ್ಲೇ ಸ್ವಲ್ಪ ಖರ್ಚು ಮಾಡುತ್ತಿದ್ದೇನೆ. ನನಗಿರೊ ಕಾಯಿಲೆ ದೊಡ್ಡದೇನೂ ಅಲ್ಲ. ಸಾವಿರಾರು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೇಕಾಬಿಟ್ಟಿ ಪೋಸ್ಟ್ ಮಾಡುವ ಬದಲು ಆಲೋಚಿಸಿ’ ಎಂದು ಸ್ಯಾಮ್ ಬರೆದುಕೊಂಡಿದ್ದಾರೆ.

    ಏನಿದು ಸುದ್ದಿ?

    ಸಮಂತಾ (Samantha) ಅನಾರೋಗ್ಯದಿಂದ ದೂರದ ದೇಶಕ್ಕೆ ಚಿಕಿತ್ಸೆಗಾಗಿ (Treatment) ಹೋಗಿರುವುದು, ಕೆಲವು ತಿಂಗಳಲ್ಲಿ ಅಮೆರಿಕಾಕ್ಕೆ (America) ಹಾರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ಹೊರ ಬಿದ್ದಿರುವ ಸತ್ಯ ದೇವುಡಾ ಎನ್ನುವಂತಿದೆ. ಕಾರಣ ಅದೊಬ್ಬ ಸ್ಟಾರ್ ಭರ್ತಿ 25 ಕೋಟಿ ರೂಪಾಯಿ ಕೊಟ್ಟಿದ್ದಾನೆಂದು ಹೇಳಲಾಗಿತ್ತು.

    ಸಮಂತಾ ಈಗ ಬಾಲಿ (Bali) ದ್ವೀಪದಲ್ಲಿದ್ದಾರೆ. ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೆನ್ನೈನ ಸದ್ಗುರು ಬಳಿ ಯೋಗ-ಧ್ಯಾನದಲ್ಲಿ ತೊಡಗಿದ್ದ ಸ್ಯಾಮ್ ಈಗ ಬಾಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿಂದ ನೇರವಾಗಿ ಅಮೆರಿಕಾಕ್ಕೆ ಹಾರಲಿದ್ದಾರೆ. ಅಲ್ಲಿ ಎಷ್ಟು ತಿಂಗಳು ಬೇಕು? ಅದ್ಯಾವ ರೀತಿಯ ಟ್ರೀಟ್‌ಮೆಂಟ್? ಒಂದೂ ಗೊತ್ತಿಲ್ಲ. ಅಷ್ಟರಲ್ಲಿ ಬಡಾ ಖಬರ್ ಸಮಂತಾ ಬ್ಯಾಂಕ್ ಅಕೌಂಟ್‌ನಿಂದ ಹೊರ ಬಿದ್ದಿದೆ. ಬರೋಬ್ಬರಿ 25 ಕೋಟಿ ರೂಪಾಯಿ ಸಾಲ ಪಡೆದಿದ್ದಾರಂತೆ ಕ್ವೀನ್ ಬಿ. ಅದನ್ನು ಸ್ಟಾರ್ ನಟ ಕೊಟ್ಟಿದ್ದಾನಂತೆ ಎನ್ನುವ ಸುದ್ದಿ ಗಿರಕಿ ಹೊಡೆಯುತ್ತಿತ್ತು. ಇದನ್ನೂ ಓದಿ:2ನೇ ಮಗುವಿನ ಹೆಸರನ್ನ ರಿವೀಲ್‌ ಮಾಡಿದ ‘ಯೇ ಜವಾನಿ ಹೇ ದಿವಾನಿ’ ನಟಿ

    ಖುಷಿ ಹಾಗೂ ಸಿಟಾಡೆಲ್ ಸಿನಿಮಾ ಮುಗಿಸಿ ಒಂದು ವರ್ಷ ಬಣ್ಣದ ಲೋಕದಿಂದ ದೂರ ಎಂದು ಘೋಷಿಸಿದ್ದರು. ಮೈಯೋಸಿಟಿಸ್ ಖಾಯಿಲೆ ಚಿಕಿತ್ಸೆಯೇ ಮೂಲ ಕಾರಣ. ಈ ನಡುವೆ ಒಪ್ಪಿಕೊಂಡಿದ್ದ ಕೆಲವು ಕಮಿಟ್‌ಮೆಂಟ್ ಮುಗಿಸಲು ಆಗಲಿಲ್ಲ. ಹೀಗಾಗಿ ನಂಬಿಕೆ ದ್ರೋಹ ಮಾಡಬಾರದೆಂದು ನಿರ್ಮಾಪಕರಿಂದ ಪಡೆದ ಅಡ್ವಾನ್ಸ್ ಮರಳಿಸಿದ್ದರು ಸಮಂತಾ. ನಿಜಕ್ಕೂ ಎಲ್ಲರೂ ಶಹಬ್ಬಾಶ್ ಎಂದಿದ್ದರು.

     

    ಸಮಂತಾಗೆ ಇಷ್ಟು ಕೋಟಿ ಕೊಟ್ಟಿದ್ಯಾರು? ಅಷ್ಟೊಂದು ಹಣ ಪಡೆದಿದ್ದು ನಿಜವಾದರೆ ಚಿಕಿತ್ಸೆಗೆ ಎಷ್ಟು ಹಣ ಬೇಕಾಗುತ್ತದೆ? ಇವೆಲ್ಲ ಬರೀ ಪ್ರಶ್ನೆಗಳು. ಉತ್ತರ ಹೇಳಬೇಕಾದ ಸ್ಯಾಮ್ ದೂರದ ಬಾಲಿಯಲ್ಲಿದ್ದಾರೆ. ಹೈದ್ರಾಬಾದ್‌ನಲ್ಲಿ ಸದ್ಯಕ್ಕೆ ಸಾಲ ಪಡೆದ ಹಣದ್ದೇ ಬೆಂಕಿ ಚರ್ಚೆ. ಹಾಗಿದ್ದರೆ ಸಮಂತಾ ಇಷ್ಟು ವರ್ಷ ಚಿತ್ರರಂಗದಲ್ಲಿ ದುಡಿದ ಹಣ ಏನಾಯಿತು? ನಾಗ್‌ಚೈತನ್ಯ ಈಕೆ ಹಣ ನುಂಗಿ ನೀರು ಕುಡಿದರೆ? ಏನಾಗಲಿದೆ ಸ್ಯಾಮ್ ಭವಿಷ್ಯ? ಹೀಗೆ ಸಾವಿರ ಸಾವಿರ ಪ್ರಶ್ನೆಗಳು ಮೂಡಿದ್ದವು. ಎಲ್ಲದಕ್ಕೂ ಸಮಂತಾ ಉತ್ತರಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐಸ್ ಥೆರಪಿಗೆ ಒಳಗಾದ ಸಮಂತಾ: ಮಯೋಸೈಟೀಸ್ ನಿಂದ ಬಳಲುತ್ತಿರುವ ನಟಿ

    ಐಸ್ ಥೆರಪಿಗೆ ಒಳಗಾದ ಸಮಂತಾ: ಮಯೋಸೈಟೀಸ್ ನಿಂದ ಬಳಲುತ್ತಿರುವ ನಟಿ

    ತೆಲುಗಿನ ಹೆಸರಾಂತ ನಟಿ ಸಮಂತಾ (Samantha) ಮಯೋಸೈಟೀಸ್ (Myositis) ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಅವರು ಅನೇಕ ರೀತಿಯ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಇದೀಗ ಮತ್ತೊಂದು ಥೆರಪಿಗೆ ಒಳಗಾಗಿರುವ ಸಮಂತಾ ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ಯಾತನೆ ಥೆರಪಿ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ, ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಕುರಿತು ತಿಳಿಸಿದ್ದಾರೆ.

    ಕೆಲ ವರ್ಷಗಳಿಂದ ಅವರು ಮಯೋಸೈಟೀಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ಅದರ ಭಾಗವಾಗಿ ಈಗ ಐಸ್ ಥೆರಪಿ (Ice Bath Therapy) ಮಾಡಿಸಿಕೊಂಡಿದ್ದಾರೆ. ಈ ಐಸ್ ಬಾತ್ ಥೆರಪಿಯು ಚಿತ್ರಹಿಂಸೆಯಿಂದ ಕೂಡಿರುವಂಥದ್ದು. ಆದರೂ, ಅನಿವಾರ್ಯ ಎಂದು ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಹಿಂಸೆ ಅನಿಸಿದರೂ ದೇಹಕ್ಕೆ ಚೈತನ್ಯವನ್ನು ನೀಡುವಂಥದ್ದು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹೆಣ್ಮಕ್ಕಳ ಬಟ್ಟೆಯ ಬಗ್ಗೆ ಸಲ್ಮಾನ್‌ ಮಾತು ವ್ಯಂಗ್ಯವಾಗಿ ಕಾಣುತ್ತಿದೆ- ಚೇತನ್‌ ಸಿಡಿಮಿಡಿ

    ದೇಹಕ್ಕೆ ಚೈತನ್ಯ ಬರುವುದಕ್ಕಾಗಿ ಕನಿಷ್ಠ 15 ನಿಮಿಷಗಳ ಕಾಲ ಐಸ್ ಬಾತ್ ಥೆರಪಿಗೆ ಒಳಗಾಗಬೇಕಂತೆ. ಇದರಿಂದಾಗಿ ಸಾಕಷ್ಟು ಪ್ರಯೋಜನೆಗಳು ಇವೆ ಎನ್ನುತ್ತದೆ ವೈದ್ಯಲೋಕ. ಸದ್ಯ ಸಮಂತಾ ಸಿಟಾಡೆಲ್ (Citadel) ಹಿಂದಿ ವೆಬ್ ಸರಣಿಯಲ್ಲಿ ನಟಿಸುತ್ತಿದ್ದು, ಅದೊಂದು ಸಾಹಸಮ ಸರಣಿಯಾಗಿದೆ. ಸಮಂತಾ ನಾಯಕಿಯಾಗಿ ನಟಿಸುತ್ತಿದ್ದರೆ, ವರುಣ್ ಧವನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

  • ಸಮಂತಾ ಆರೋಗ್ಯದಲ್ಲಿ ಮತ್ತೆ ಏರುಪೇರು: ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಗೆ ಪಯಣ

    ಸಮಂತಾ ಆರೋಗ್ಯದಲ್ಲಿ ಮತ್ತೆ ಏರುಪೇರು: ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಗೆ ಪಯಣ

    ತೆಲುಗು ಸಿನಿಮಾ ರಂಗದ ಖ್ಯಾತ ನಟಿ ಸಮಂತಾ ಆರೋಗ್ಯದ ಬಗ್ಗೆ ಆಗಾಗ್ಗೆ ಹೊಸ ಹೊಸ ಸುದ್ದಿಗಳು ಬರುತ್ತಲೇ ಇವೆ. ಸಮಂತಾ ಅವರು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಮೊದಲು ಸುದ್ದಿ ಆಯಿತು. ಅದನ್ನು ಅವರ ಮ್ಯಾನೇಜರ್ ಅಲ್ಲಗಳೆದರು. ನಂತರ ಸ್ವತಃ ಸಮಂತಾ ಅವರೇ ತಮಗಿರುವ ಮಯೋಸಿಟಿಸ್ ಕಾಯಿಲೆ ಕುರಿತಂತೆ ಬರೆದುಕೊಂಡರು. ಫೋಟೋ ಸಮೇತ ಹಾಕಿ, ಚಿಕಿತ್ಸೆ ಪಡೆಯುತ್ತಿರುವ ಕುರಿತು ಹೇಳಿಕೊಂಡರು.

    ಇದಾದ ನಂತರ ಅವರು ಯಶೋದಾ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡರು. ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಮತ್ತೆ ಅವರ ಆರೋಗ್ಯದ ಬಗ್ಗೆಯೇ ಮತ್ತೊಂದು ಸುತ್ತಿನ ಚರ್ಚೆ ಶುರುವಾಯಿತು. ಅವರ ಮ್ಯಾನೇಜರ್ ಈ ಕುರಿತು ಮತ್ತೆ ಸ್ಪಷ್ಟಪಡಿಸಿ ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದರು. ಆದರೆ, ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅವರು ಯಾವುದೇ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಕ್ಯಾಮೆರಾ ಮುಂದೆಯೂ ಬರಲಿಲ್ಲ. ಹೀಗಾಗಿ ಕಾಯಿಲೆಯಿಂದ ಅವರು ಗುಣಮುಖರಾಗಿಲ್ಲ ಎಂದಾಯಿತು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಬಯೋಪಿಕ್‌ನಲ್ಲಿ ತಮಿಳು ನಟ ವಿಜಯ್ ಸೇತುಪತಿ

    ಈಗ ಟಾಲಿವುಡ್ ಅಂಗಳದಲ್ಲಿ ಸುಮಂತಾ ಅವರ ಕಾಯಿಲೆ ಬಗ್ಗೆ ಮತ್ತೆ ಚರ್ಚೆ ಆಗುತ್ತಿದೆ. ಇದೀಗ ಮಯೋಸಿಟಿಸ್ ಕಾಯಿಲೆ ಉಲ್ಬಣವಾಗಿದ್ದು, ಅವರನ್ನು ದಕ್ಷಿಣ ಕೊರಿಯಾಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ. ಮೊದಲು ಅವರು ಅಮೆರಿಕಾದಲ್ಲಿ ಚಿಕಿತ್ಸೆ ಪಡೆದರು ಎಂದು ಹೇಳಲಾಗಿತ್ತು. ಅಲ್ಲಿಂದ ಬಂದ ನಂತರ ಅವರು ಭಾರತದಲ್ಲೇ ಅದಕ್ಕೆ ಔಷಧಿ ಪಡೆದರು. ಇದೀಗ ದಕ್ಷಿಣ ಕೊರಿಯಾಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಯಾವುದೇ ಸ್ಪಷ್ಟನೆ ಬಂದಿಲ್ಲ.

    Live Tv
    [brid partner=56869869 player=32851 video=960834 autoplay=true]