Tag: mynaa

  • ಫಸ್ಟ್‌ ಟೈಂ ಸೆಟ್‌ಗೆ ಬಂದಾಗ ದಪ್ಪಗಿದ್ದೇನೆ, ಕುಳ್ಳಗಿದ್ದೇನೆಂದು ಅಪಹಾಸ್ಯ ಮಾಡಿದ್ದರು: ನಿತ್ಯಾ ಮೆನನ್‌

    ಫಸ್ಟ್‌ ಟೈಂ ಸೆಟ್‌ಗೆ ಬಂದಾಗ ದಪ್ಪಗಿದ್ದೇನೆ, ಕುಳ್ಳಗಿದ್ದೇನೆಂದು ಅಪಹಾಸ್ಯ ಮಾಡಿದ್ದರು: ನಿತ್ಯಾ ಮೆನನ್‌

    ಜೋಶ್, ಮೈನಾ (Mynaa) ಸಿನಿಮಾಗಳ ಮನೆಗೆದ್ದಿರೋ ನಿತ್ಯಾ ಮೆನನ್‌ಗೆ (Nithya Menen) ಪರಭಾಷೆಯಲ್ಲಿ ಭಾರೀ ಬೇಡಿಕೆ ಇದೆ. ಇದೀಗ ಸಂದರ್ಶನವೊಂದರಲ್ಲಿ ತಮ್ಮ ದೇಹದ ಅಂಗಾಂಗಗಳ (Body Shaming) ಬಗ್ಗೆ ತಾವು ಎದುರಿಸಿದ ಟೀಕೆಯ ಬಗ್ಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಿತ್ಯಾ ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:5 ತಿಂಗಳ ಹಸುಗೂಸಿನ ಜೊತೆ ಅಮಲಾ ದಂಪತಿ ಬಾಲಿ ವೆಕೇಷನ್

    ತೆಲುಗು ಸಿನಿಮಾವೊಂದರಲ್ಲಿ ನಿತ್ಯಾ ನಟಿಸುವಾಗ ಅವರ ಗುಂಗುರು ಕೂದಲನ್ನು ಯಾರು ಇಷ್ಟಪಡಲಿಲ್ಲವಂತೆ. ನಾನು ಫಸ್ಟ್ ಟೈಮ್ ಸೆಟ್‌ಗೆ ಬಂದಾಗ ಎಲ್ಲರೂ ವಿಚಿತ್ರವಾಗಿ ನೋಡುತ್ತಿದ್ದರು. ನಾಯಕಿ ಅಂದ್ಮೇಲೆ ದೇಹದ ತೂಕದ ಬಗ್ಗೆ ಮಾತನಾಡಿದರು. ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳಲಿಲ್ಲ ಎಂದಿದ್ದಾರೆ.

    ನಾನು ದಪ್ಪ ಮತ್ತು ಕುಳ್ಳಗೆ ಇದ್ದೇನೆ ಎಂದು ಎಲ್ಲರೂ ಅಪಹಾಸ್ಯ ಮಾಡಿದರು. ನನಗೆ ಗುಂಗುರು ಕೂದಲು ಮತ್ತು ದೊಡ್ಡ ಹುಬ್ಬು ಇದೆ ಎಂದು ಅನೇಕರು ಟೀಕೆ ಮಾಡಿದರು. ಯಾರನ್ನಾದರೂ ಅವರ ರೂಪದ ಆಧಾರದ ಮೇಲೆ ನೀವು ಹೇಗೆ ಟೀಕಿಸುತ್ತೀರಿ? ಎಂದಿದ್ದಾರೆ. ಅದು ಅವರ ಕೀಳು ಮಟ್ಟದ ಮನಸ್ಥಿತಿ ಎಂದು ಖಡಕ್ ಆಗಿ ನಿತ್ಯಾ ಮಾತನಾಡಿದ್ದಾರೆ. ಸವಾಲುಗಳನ್ನು ಎದುರಿಸಿ ಉತ್ತಮ ವ್ಯಕ್ತಿಯಾಗಲು ಪ್ರಯತ್ನಿಸಬೇಕು ಎಂದು ನಟಿ ಹೇಳಿದ್ದಾರೆ.

  • ‘ಮೈನಾ’ ನಿರ್ದೇಶಕ ನಾಗಶೇಖರ್ ಕಾರು ಅಪಘಾತ- ಮಹಿಳೆಗೆ ಗಾಯ

    ‘ಮೈನಾ’ ನಿರ್ದೇಶಕ ನಾಗಶೇಖರ್ ಕಾರು ಅಪಘಾತ- ಮಹಿಳೆಗೆ ಗಾಯ

    ಸ್ಯಾಂಡಲ್‌ವುಡ್ ನಿರ್ದೇಶಕ ನಾಗಶೇಖರ್ (Director Nagashekar) ಕಾರು ಅಪಘಾತವಾಗಿದ್ದು, ಓರ್ವ ಮಹಿಳೆಗೆ ಗಾಯವಾಗಿದೆ. ಈ ಘಟನೆ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ನಡೆದಿದೆ. ಇದನ್ನೂ ಓದಿ:‘ಮಿಸ್ಟರ್ ಬಚ್ಚನ್’ ಸೋತಿದ್ದಕ್ಕೆ 4 ಕೋಟಿ ಸಂಭಾವನೆ ಹಿಂದಿರುಗಿಸಿದ ರವಿತೇಜ

    nagashekar

    ಇಂದು ಮಧ್ಯಾಹ್ನ 1:30ಕ್ಕೆ ನಿರ್ದೇಶಕ ನಾಗಶೇಖರ್‌ ಬೆಂಜ್ ಕಾರು ಡ್ರೈವ್ ಮಾಡಿಕೊಂಡು ಬರುವಾಗ ರಭಸವಾಗಿ ಬಂದು ಮರಕ್ಕೆ ಗುದ್ದಿದ್ದ ಪರಿಣಾಮ, ಓರ್ವ ಮಹಿಳೆಗೆ ಗಾಯವಾಗಿದೆ. ಅಪಘಾತದ (Car Accident) ನಂತರ ಮಹಿಳೆಯನ್ನು ಆಸ್ಪತ್ರೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಸ್ಥಳಕ್ಕೆ ಜ್ಞಾನಭಾರತಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ.

    ಅಂದಹಾಗೆ, ಮೈನಾ, ಸಂಜು ವೆಡ್ಸ್ ಗೀತಾ, ಅಮರ್ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ `ಸಂಜು ವೆಡ್ಸ್ ಗೀತಾ 2′ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ ನಾಗಶೇಖರ್.

  • ಸಾವರ್ಕರ್ ಮಾತ್ರವಲ್ಲ, ಗಾಂಧಿ ಫೋಟೋವನ್ನು ತೆಗೆಯಬೇಕು: ಚೇತನ್

    ಸಾವರ್ಕರ್ ಮಾತ್ರವಲ್ಲ, ಗಾಂಧಿ ಫೋಟೋವನ್ನು ತೆಗೆಯಬೇಕು: ಚೇತನ್

    ಸ್ಯಾಂಡಲ್‌ವುಡ್ (Sandalwood) ನಟ ಚೇತನ್ ಅಹಿಂಸಾ (Chethan Ahimsa) ವಿವಾದಾತ್ಮಕ ಹೇಳಿಕೆ ಮೂಲಕ ಸದ್ದು ಮಾಡುತ್ತಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ವಿ.ಡಿ ಸಾವರ್ಕರ್ ಜೊತೆಗೆ ಮಹಾತ್ಮಾ ಗಾಂಧೀಜಿ ಫೋಟೋ ಕೂಡ ತೆರವು ಮಾಡಬೇಕು ಎಂದು ಹೇಳಿಕೆ ನೀಡುವ ಮೂಲಕ ಚೇತನ್ ವಿವಾದಕ್ಕೆ ನಾಂದಿ ಹಾಡಿದ್ದಾರೆ.

    ಸಚಿವ ಪ್ರಿಯಾಂಕ್ ಖರ್ಗೆ (Priyanka Karge) ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ನಟ ಚೇತನ್, ಸಾವರ್ಕರ್ ಮತ್ತು ಗಾಂಧೀಜಿ ಇಬ್ಬರ ಫೋಟೋ ತೆಗೆಯಬೇಕು ಎಂದು ಹೇಳಿದ್ದರು. ಸುವರ್ಣ ಸೌಧದಿಂದ ಸಾವರ್ಕರ್ ಫೋಟೋ ತೆಗೆದರೆ ಸೂಕ್ತ. ಅದನ್ನು ನನಗೆ ಬಿಟ್ಟರೆ ಇವತ್ತೇ ತೆಗೆಯುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಖರ್ಗೆಯವರಿಗೆ ಸಾವರ್ಕರ್ ಸೈದ್ಧಾಂತಿಕ ಶತ್ರುವಾಗಿರಬಹುದು. ನಮ್ಮಂತ ಸಮಾನತಾವಾದಿಗಳಿಗೆ, ಸಾವರ್ಕರ್ ಮತ್ತು ಗಾಂಧಿ ಇಬ್ಬರೂ ನಮ್ಮ ಸೈದ್ಧಾಂತಿಕ ಶತ್ರುಗಳು ಎಂದು ಚೇತನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಅಕ್ಕತಂಗಿಯರ ನಡುವಿನ ವಿಭಿನ್ನ ಕಥೆ ‘ಗಂಗೆ ಗೌರಿ’

    ನೀವು ಸಾವರ್ಕರ್ ಮತ್ತು ಗಾಂಧಿ ಇಬ್ಬರ ಫೋಟೋಗಳನ್ನು ತೆಗೆದುಹಾಕುವುದು ಸೂಕ್ತ ಎಂದು ಚೇತನ್ ಪ್ರತಿಕ್ರಿಯಿಸಿದ್ದಾರೆ. ಇಲ್ಲವಾದರೆ, ಇಬ್ಬರನ್ನೂ ಇಟ್ಟುಕೊಳ್ಳಿ ಮತ್ತು ಸುವರ್ಣ ಸೌಧದಲ್ಲಿ ಕನ್ನಡಿಗ ತಂದೆ ಪೆರಿಯಾರ್ ಅವರ ಭಾವಚಿತ್ರವನ್ನು ಸೇರಿಸಿ ಎಂದು ಚೇತನ್ ಹೇಳಿದ್ದಾರೆ. ನಟ ಚೇತನ್ ಹೇಳಿಕೆ ಮತ್ತೊಂದು ವಿವಾದ ಹಾಗೂ ಚರ್ಚಗೆ ಗ್ರಾಸವಾಗಿದೆ.

  • ಸೆ.28ಕ್ಕೆ ಕುಮಾರಿ ಶ್ರೀಮತಿ, ಕನ್ನಡದಲ್ಲಿ ರಿಲೀಸ್‌ ಯಾಕಿಲ್ಲ ಎಂದು ನೆಟ್ಟಿಗರಿಂದ ಕ್ಲಾಸ್

    ಸೆ.28ಕ್ಕೆ ಕುಮಾರಿ ಶ್ರೀಮತಿ, ಕನ್ನಡದಲ್ಲಿ ರಿಲೀಸ್‌ ಯಾಕಿಲ್ಲ ಎಂದು ನೆಟ್ಟಿಗರಿಂದ ಕ್ಲಾಸ್

    ನ್ನಡದ ಮೈನಾ (Mynaa) ನಟಿ ನಿತ್ಯಾ ಮೆನನ್ (Nithya Menen) ಇದೀಗ ‘ಕುಮಾರಿ ಶ್ರೀಮತಿ’ (Kumari Srimathi) ಆಗಿ ಬರುತ್ತಿದ್ದಾರೆ. ಹೊಸ ಸಿರೀಸ್ ಮೂಲಕ ಬಹುಭಾಷೆಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಸೆ.28ಕ್ಕೆ ಕುಮಾರಿ ಶ್ರೀಮತಿ ಒಟಿಟಿಯಲ್ಲಿ ಬರಲಿದೆ. ಆದರೆ ಕನ್ನಡದ ನಟಿ ನಿತ್ಯಾ ನಟಿಸುತ್ತಿರೋ ಈ ಪ್ರಾಜೆಕ್ಟ್ ಕನ್ನಡದಲ್ಲಿ ಲಭ್ಯವಿಲ್ಲ. ಕನ್ನಡದಲ್ಲಿ ಯಾಕೆ ಇಲ್ಲ ಎಂದು ನೆಟ್ಟಿಗರು ಗರಂ ಆಗಿದ್ದಾರೆ.

    ಬಹುಭಾಷಾ ನಟಿ ನಿತ್ಯಾ ಮೆನನ್ ಅವರು ಕುಮಾರಿ ಶ್ರೀಮತಿ ವೆಬ್ ಸಿರೀಸ್‌ನಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಗೋಮಟೇಶ್ ಉಪಾಧ್ಯೆ ನಿರ್ದೇಶಿಸಿದ್ದಾರೆ. ವೆಬ್ ಸರಣಿ ಟೀಸರ್‌ನ ಖ್ಯಾತ ನಟಿ ಕೀರ್ತಿ ಸುರೇಶ್ ಆನ್‌ಲೈನ್‌ನಲ್ಲಿ ರಿಲೀಸ್ ಮಾಡುವ ಮೂಲಕ ತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ಚಿತ್ರಕ್ಕೆ ಸಮಂತಾ ನಾಯಕಿನಾ? ಸ್ಯಾಮ್ ಕಡೆಯಿಂದ ಸಿಕ್ತು ಉತ್ತರ

    7 ಸಂಚಿಕೆಗಳಲ್ಲಿ ‘ಕುಮಾರಿ ಶ್ರೀಮತಿ’ ಸೆ.28ಕ್ಕೆ ಪ್ರಸಾರವಾಗಲಿದ್ದು, ತೆಲುಗು, ತಮಿಳು, ಮಲಯಾಳಂ, ಮತ್ತು ಹಿಂದಿಯಲ್ಲಿ ಪ್ರಸಾರವಾಗಲಿದೆ. ಆದರೆ ಕನ್ನಡದಲ್ಲಿ ಬಿಡುಗಡೆ ಆಗದೇ ಇರೋದಕ್ಕೆ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ತಂಡಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಕನ್ನಡದ ಮೈನಾ, ವಿಷ್ಣುವರ್ಧನ್, ಐದು ಒಂದ್ಲಾ ಐದು, ಜೋಶ್ ಸಿನಿಮಾಗಳಲ್ಲಿ ನಿತ್ಯಾ ಮೆನನ್ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಮಿಳಿನ ಆ ನಟ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ- ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ನಿತ್ಯಾ

    ತಮಿಳಿನ ಆ ನಟ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ- ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ನಿತ್ಯಾ

    ಕಾಸ್ಟಿಂಗ್ ಕೌಚ್ (Casting Couch) ಎಂಬುದು ಚಿತ್ರರಂಗದಲ್ಲಿರುವ ಕೆಟ್ಟ ಪಿಡುಗು. ಅವಕಾಶಕ್ಕಾಗಿ ಪಲ್ಲಂಗ ಏರುವ ಬಗ್ಗೆ ಈಗಾಗಲೇ ಅನೇಕ ನಟ-ನಟಿಯರು ಸಿಡಿದೆದಿದ್ದಾರೆ. ಕಾಸ್ಟಿಂಗ್ ಕೌಚ್ ಬಗ್ಗೆ ಅನೇಕ ನಟಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ತಾವು ಎದುರಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಮೈನಾ ನಟಿ ನಿತ್ಯಾ ಮೆನನ್ (Nithya Menon) ಮಾತನಾಡಿದ್ದಾರೆ. ಕರಾಳ ಅನುಭವದ ಬಗ್ಗೆ ಬಿಚ್ಚಿದ್ದಾರೆ.

    ಕೋಟಿಗೊಬ್ಬ 2 (Kotigobba 2), ಮೈನಾ (Mynaa) ಕನ್ನಡದ ಹಲವು ಸಿನಿಮಾಗಳಲ್ಲಿ ನಿತ್ಯಾ ಮೆನನ್ ಗಮನ ಸೆಳೆದಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲಿಷ್ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಕಾಸ್ಟಿಂಗ್ ಕೌಚ್ ಬಗ್ಗೆ ಮೈನಾ ಬ್ಯೂಟಿ ನಿತ್ಯಾ ಮೆನನ್ ಬಾಯ್ಬಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿ, ಎಲ್ಲಾ ಭಾಷೆಯಲ್ಲಿ ನಟಿಸಿದ್ದೀನಿ, ಆದರೆ ಟಾಲಿವುಡ್‌ನಲ್ಲಿ ಯಾವುದೇ ಸಮಸ್ಯೆಯಾಗಿಲ್ಲ, ತೆಲುಗು ಚಿತ್ರರಂಗದಲ್ಲಿ ತನಗೆ ಯಾರೂ ತೊಂದರೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಆದರೆ ತಮಿಳು ಸಿನಿಮಾರಂಗದಲ್ಲಿ ಕೆಲವು ತೊಂದರೆಗಳನ್ನು ಎದುರಿಸಿದ್ದೇನೆ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ. ಇದನ್ನೂ ಓದಿ:ಅಪ್ಪಂದಿರ ದಿನಾಚರಣೆಗೆ ವಿಶೇಷ ಪೋಸ್ಟ್ ಹಂಚಿಕೊಂಡ ರಾಧಿಕಾ ಪಂಡಿತ್

    ಕಾಲಿವುಡ್‌ನ (Kollywood) ನಾಯಕನೊಬ್ಬ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಶೂಟಿಂಗ್ ಸಮಯದಲ್ಲಿ ಅವರು ತನ್ನನ್ನು ಸ್ಪರ್ಶಿಸುವ ಮೂಲಕ ತುಂಬಾ ಹಿಂಸೆ ನೀಡಿದ್ದರು ಎಂದು ನಿತ್ಯಾ ಹೇಳಿದರು. ಆದರೆ ಆ ನಾಯಕ ಯಾರು ಎನ್ನುವ ಬಗ್ಗೆ ನಿತ್ಯಾ ಬಹಿರಂಗಪಡಿಸಿಲ್ಲ. ನಾಯಕನ ಹುಚ್ಚು ವರ್ತನೆಯಿಂದ ಸರಿಯಾಗಿ ಶೂಟಿಂಗ್‌ನಲ್ಲಿ ಭಾಗವಹಿಸಲು ಆಗುತ್ತಿರಲಿಲ್ಲ ಎಂದು ನಿತ್ಯಾ ಮೆನನ್ ಹೇಳಿದ್ದಾರೆ. ಮಹಿಳೆಯರಿಗೆ ಆ ರೀತಿ ತೊಂದರೆ ಕೊಟ್ಟರೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ. ಹಾಗಾಗಿಯೇ ಈಗ ಎಷ್ಟೋ ಮಹಿಳೆಯರು ಹೊರಗೆ ಹೋಗಿ ಕೆಲಸ ಮಾಡಲು ಹೆದರುತ್ತಿದ್ದಾರೆ ಎಂದು ನಿತ್ಯಾ ಹೇಳಿದ್ದಾರೆ.

    ಇದೀಗ ನಿತ್ಯಾ ಮೆನನ್ ಹೋರಾಟಕ್ಕೆ ಬೆಂಬಲ ಸಿಕ್ಕಿದೆ. ಆದರೆ ನಿತ್ಯಾ ಮೆನನ್‌ಗೆ ಇಷ್ಟೊಂದು ಕಿರುಕುಳ ನೀಡಿದ ತಮಿಳಿನ ಹೀರೋ ಯಾರು ಎಂಬ ಬಗ್ಗೆ ಜನರಲ್ಲಿ ಭಾರೀ ಕುತೂಹಲ ಹೆಚ್ಚಾಗಿದೆ. ಯಾರೆಂದು ತಲೆಕೆಡಿಸಿಕೊಂಡಿದ್ದಾರೆ. ತಮಿಳಿನ ಅನೇಕ ಸಿನಿಮಾಗಳಲ್ಲಿ ನಿತ್ಯಾ ನಟಿಸಿದ್ದಾರೆ. ಹಾಗಾಗಿ ಯಾರೆಂದು ಗುರುತಿಸುವುದು ಕಷ್ಟವಾಗಿದೆ.

  • ರಶ್ಮಿಕಾ ಮಂದಣ್ಣ ಬ್ಯಾನ್ ಬಗ್ಗೆ `ಮೈನಾ’ ನಿರ್ದೇಶಕ ನಾಗಶೇಖರ್ ಪ್ರತಿಕ್ರಿಯೆ

    ರಶ್ಮಿಕಾ ಮಂದಣ್ಣ ಬ್ಯಾನ್ ಬಗ್ಗೆ `ಮೈನಾ’ ನಿರ್ದೇಶಕ ನಾಗಶೇಖರ್ ಪ್ರತಿಕ್ರಿಯೆ

    ದಾ ಕಾಲ ಸುದ್ದಿಯಲ್ಲಿರುವ ನಟಿ ಎಂದರೆ ರಶ್ಮಿಕಾ ಮಂದಣ್ಣ,(Rashmika Mandanna) ಇದೀಗ ಮತ್ತೆ ಚಾಲ್ತಿಯಲ್ಲಿದ್ದಾರೆ. ಕರ್ನಾಟಕದಲ್ಲಿ ಬ್ಯಾನ್ ಆಕ್ರೋಶದ ಬೆನ್ನಲ್ಲೇ ʻಮೈನಾʼ ನಿರ್ದೇಶಕ ನಾಗಶೇಖರ್(Nagashekar) ಈ ಬಗ್ಗೆ ಮಾತನಾಡಿದ್ದಾರೆ. ರಶ್ಮಿಕಾನ ಬ್ಯಾನ್ ಮಾಡಿದ್ರೆ ಕನ್ನಡ ಚಿತ್ರರಂಗಕ್ಕೆ ನಷ್ಟ ಎಂಬ ಹೇಳಿಕೆಯನ್ನ ನೀಡಿದ್ದಾರೆ.

    ಸದ್ಯ ಸೌತ್ ಮತ್ತು ಬಾಲಿವುಡ್‌ನಲ್ಲಿ (Bollywood) ಬ್ಯುಸಿಯಿರುವ ನಟಿ ರಶ್ಮಿಕಾ (Rashmika Mandanna) ಇತ್ತೀಚೆಗೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಸಂದರ್ಶನವೊಂದರಲ್ಲಿ ನಟಿ ತಮ್ಮ ಚೊಚ್ಚಲ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರು ಹೇಳಿಲ್ಲ ಎಂದು ಕನ್ನಡಿಗರ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ರಿಷಬ್ ಶೆಟ್ಟಿ ಕೂಡ ತಮ್ಮದೇ ಶೈಲಿಯಲ್ಲಿ ನಟಿಗೆ ಟಾಂಗ್ ಕೊಟ್ಟಿದ್ದರು. ನಂತರ ರಶ್ಮಿಕಾ ಬ್ಯಾನ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಇದೀಗ ವಿಷ್ಯವಾಗಿ ನಿರ್ದೇಶಕ ನಾಗಶೇಖರ್ ಕೂಡ ರಿಯಾಕ್ಟ್ ಮಾಡಿದ್ದಾರೆ.

    `ಸಂಜು ವೆಡ್ಸ್ ಗೀತಾ’, `ಮೈನಾ; ಖ್ಯಾತಿಯ ನಾಗಶೇಖರ್ ತೆಲುಗಿನ ತಮ್ಮ ಮುಂದಿನ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ರಶ್ಮಿಕಾ ಬ್ಯಾನ್ ಮತ್ತು ಮೊದಲ ಚಿತ್ರದ ಅವಕಾಶದ ಬಗ್ಗೆ ನಿರ್ದೇಶಕ ನಾಗಶೇಖರ್ ಅವರಿಗೆ ಪ್ರಶ್ನೆ ಕೇಳಲಾಗಿದೆ. ಅವಕಾಶ ಕೊಟ್ಟವರನ್ನು ನೆನಪು ಇಟ್ಟುಕೊಳ್ಳಬೇಕು ಎಂದು ನಿರೀಕ್ಷೆ ಮಾಡುವುದೇ ತಪ್ಪು. ಅದನ್ನೆಲ್ಲಾ ನಿರೀಕ್ಷಿಸಬಾರದು ಎಂದಿದ್ದಾರೆ. ಇದನ್ನೂ ಓದಿ:  ಹಿರಿಯ ನಿರ್ದೇಶಕ ಭಗವಾನ್ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆಗೆ ದಾಖಲು

    ಇನ್ನೂ ನನಗೆ ಈ ಬಗ್ಗೆ ಗೊತ್ತಿಲ್ಲ. ಒಂದು ವೇಳೆ ರಶ್ಮಿಕಾ ಅವರನ್ನು ಚಿತ್ರರಂಗ ಬ್ಯಾನ್ ಮಾಡಿದರೆ ಚಿತ್ರರಂಗಕ್ಕೆ ನಷ್ಟ ಎಂದಿದ್ದಾರೆ. ಒಬ್ಬ ಒಳ್ಳೆಯ ಕಲಾವಿದೆಯನ್ನ ಬ್ಯಾನ್ ಮಾಡುವುದು ಸರಿಯಲ್ಲ. ಉದಾಹರಣೆಗೆ ಮುಂದಿನ ದಿನಗಳಲ್ಲಿ ನನ್ನ ಕನ್ನಡದ ಸಿನಿಮಾಗೆ ರಶ್ಮಿಕಾ ರೀತಿಯ ನಟಿ ಬೇಕು ಎಂದುಕೊಳ್ಳುತ್ತೇವೆ. ನೀವು ಆಕೆಯನ್ನು ಬ್ಯಾನ್ ಮಾಡಿದರೆ, ಫಿಲ್ಮ್ ಮೇಕರ್ಸ್‌ಗೆ ತೊಂದರೆಯಾಗುತ್ತದೆ ಎಂದು ನಾಗಶೇಖರ್ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]