Tag: Mylaralingeshwar

  • ನ್ಯಾಯದ ತಕ್ಕಡಿ ಜರುಗಿತು, ಜೀವರಾಶಿ ಸಂಪಾದಲೆ ಪರಾಕ್ – ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ

    ನ್ಯಾಯದ ತಕ್ಕಡಿ ಜರುಗಿತು, ಜೀವರಾಶಿ ಸಂಪಾದಲೆ ಪರಾಕ್ – ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ

    ಚಿಕ್ಕಮಗಳೂರು: ಜಿಲ್ಲೆಯ (Chikkamagaluru) ಕಡೂರು ತಾಲೂಕಿನ ಬೀರೂರಿನ ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕದ (Mylaralingeshwar Karnika)ನುಡಿಮುತ್ತು ಹೊರಬಿದ್ದಿದೆ. ಕಾರ್ಣಿಕದ ನುಡಿಯಲ್ಲಿ, ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ನ್ಯಾಯದ ತಕ್ಕಡಿ ಜರುಗಿತು, ಜ್ಞಾನದ ಹಣತೆ ಹಚ್ಚಿದರು, ಜೀವರಾಶಿ ಸಂಪಾದಲೆ ಪರಾಕ್ ಎಂಬ ಭವಿಷ್ಯ ಹೊರಬಿದ್ದಿದೆ.

    ಮಹಾನವಮಿ ಬಯಲಿನಲ್ಲಿ ದಶರಥ ಪೂಜಾರ್ ಅವರಿಂದ ಮುಂಜಾನೆ ಕಾರ್ಣಿಕದ ನುಡಿ ಹೊರಬಿದ್ದಿದೆ. ಬೀರೂರು ಪಟ್ಟಣದಲ್ಲಿರುವ ಮೈಲಾರಲಿಂಗ ಸ್ವಾಮಿ ದೇವಸ್ಥಾನದಲ್ಲಿ ರಾತ್ರಿಯಿಂದ ಹೂವಿನ ಪಲಕ್ಕಿಯೊಂದಿಗೆ ಮೈಲಾರಲಿಂಗ ಸ್ವಾಮಿಯ ಮೆರವಣಿಗೆ ನಡೆಯಿತು.

    ಮೈಲಾರಲಿಂಗೇಶ್ವರ ದರ್ಶನಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಅಗಮಿಸಿರುವ ಭಕ್ತರು. ಹಲವು ಬಾರಿ ಕಾರ್ಣಿಕದ ನುಡಿಯಂತೆ ನಡೆದಿರುವ ಉದಾಹರಣೆ ಇದೆ. ಕಾರ್ಣಿಕ ಕೇಳಲು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.

    ಕಾರ್ಣಿಕ ನುಡಿದಿರುವ ಭವಷ್ಯವಾಣಿ ಬಗ್ಗೆ ಭಕ್ತರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

  • ಅಂಬಲಿ ಹಳಿಸಿತು, ಕಂಬಳಿ ಬೀಸಿತಲೆ ಪರಾಕ್ – ಮೈಲಾರಲಿಂಗೇಶ್ವರ ವರ್ಷದ ದೈವವಾಣಿ

    ಅಂಬಲಿ ಹಳಿಸಿತು, ಕಂಬಳಿ ಬೀಸಿತಲೆ ಪರಾಕ್ – ಮೈಲಾರಲಿಂಗೇಶ್ವರ ವರ್ಷದ ದೈವವಾಣಿ

    ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ವರ್ಷದ ಭವಿಷ್ಯವಾಣಿ ಮೈಲಾರಲಿಂಗೇಶ್ವರನ (Mylaralingeshwar) ಕಾರ್ಣಿಕೋತ್ಸವ ನಡೆಯಿತು. 15 ಅಡಿ ಬಿಲ್ಲನ್ನೇರಿದ ರಾಮಪ್ಪ ಗೊರವಯ್ಯ ಸದ್ದಲೇ ಎನ್ನುತ್ತಲೆ ಅಂಬಲಿ ಹಳಿಸಿತು, ಕಂಬಳಿ ಬೀಸಿತಲೆ ಪರಾಕ್ ಎಂದು ಈ ವರ್ಷದ ಕಾರ್ಣಿಕ (prediction) ನುಡಿದಿದ್ದಾರೆ.

    ಸುಮಾರು ವರ್ಷಗಳಿಂದ ವರ್ಷಕ್ಕೊಮ್ಮೆ ನಡೆಯುವ ಕಾರ್ಣಿಕವನ್ನು ಕೇಳಲು ಲಕ್ಷಾಂತರ ಜನ ಭಕ್ತರು ಜಮಾಯಿಸುತ್ತಾರೆ. ಭಾರತ ಹುಣ್ಣಿಮೆಯ ಸಮಯದಲ್ಲಿ ನಡೆಯುವ ಜಾತ್ರೆಯ ವೇಳೆ ರಾಮಪ್ಪ ಗೊರವಯ್ಯ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಿಲ್ಲನ್ನೇರಿ ಡೆಂಕನಮರಡಿಯಲ್ಲಿ ಸದ್ದಲೇ ಅನ್ನುತ್ತ ಕಾರ್ಣಿಕ ನುಡಿಯುತ್ತಾರೆ.

    ಗೊರವಯ್ಯ ನುಡಿಯುವ ಕಾರ್ಣಿಕವನ್ನು ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಣೆ ಮಾಡುತ್ತಾರೆ. ಈ ವರ್ಷ ಗೊರವಯ್ಯ ನುಡಿದ ಕಾರ್ಣಿಕವಾಣಿ ಅಂಬಲಿ ಹಳಸಿತು ಕಂಬಳಿ ಬೀಸಿತಲೆ ಪರಾಕ್ ಎನ್ನುವುದನ್ನು ದೇಶದ ಅನ್ನದಾತರು ಹಾಗೂ ರಾಜಕಾರಣದ ದೈವನುಡಿಯನ್ನು ವಿಶ್ಲೇಷಣೆ ಮಾಡಿದರು. ರೈತರಿಗೆ ರಾಜ್ಯದಲ್ಲಿ ಮಳೆ ಬೆಳೆ ಜಾಸ್ತಿ ಆಗಿ, ಸಮೃದ್ಧಿಯಾಗಲಿದೆ. ಇದರ ಜೊತೆಗೆ ಮಳೆ ಜಾಸ್ತಿಯಾಗಿ ಬೆಳೆ ಹಾನಿಯಾಗಲಿದೆ. ರೈತರಿಗೆ ಬೆಳೆದ ಬೆಳೆ ಸಿಗುತ್ತದೆ. ಈ ಸೂಚನೆ ಮೈಲಾರಲಿಂಗೇಶ್ವರನ ವಾಣಿಯಿಂದ ಸಿಕ್ಕಿದೆ.

    ರಾಜಕೀಯವಾಗಿ 2023ರಲ್ಲಿ ನ್ಯಾಯಯುತವಾಗಿರುವ ನಾಯಕ ಮುಖ್ಯಮಂತ್ರಿ ಆಗಲಿದ್ದಾರೆ. ಪ್ರಾಮಾಣಿಕವಾಗಿ ನಿಷ್ಠೆಯಿಂದ ಇರುವ ವ್ಯಕ್ತಿ ರಾಜ್ಯ ಹಾಗೂ ರಾಷ್ಟ್ರವನ್ನು ಆಳುತ್ತಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ನಿಷ್ಠೆಯಿಂದ ಇರುವ ನಾಯಕರಿಗೆ ರಾಜ್ಯದ ಪಟ್ಟ ಸಿಗಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರ್ಣಿಕ ವಿಶ್ಲೇಷಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k