Tag: Mylara lingheshwara Temple

  • ಮೈಲಾರಲಿಂಗೇಶ್ವರ ದರ್ಶನ ಪಡೆದ ರವಿ ಚನ್ನಣ್ಣನವರ್

    ಮೈಲಾರಲಿಂಗೇಶ್ವರ ದರ್ಶನ ಪಡೆದ ರವಿ ಚನ್ನಣ್ಣನವರ್

    ವಿಜಯನಗರ: ಎಸ್.ಪಿ ಸಿಐಡಿ ರವಿ.ಡಿ.ಚನ್ನಣ್ಣನವರ್ ಹಾಗೂ ಆದಾಯ ತೆರೆಗೆ ಅಧಿಕಾರಿ ಅಶೋಕ್ ಮಿರ್ಜಿ ಅವರು ಭಾನುವಾರ ಸಂಜೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಧಾರ್ಮಿಕ ಕ್ಷೇತ್ರ ಮೈಲಾರಕ್ಕೆ ಭೇಟಿ ನೀಡಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ದರ್ಶನ ಪಡೆದರು.

    ಈ ವೇಳೆ ಧರ್ಮಾಧಿಕಾರಿ ಶ್ರೀಗುರು ವೆಂಕಪ್ಪಯ್ಯ ಒಡೆಯರ್ ಅವರು ಸ್ವಾಗತಿಸಿ, ಕ್ಷೇತ್ರದ ಮಹಿಮೆಯನ್ನು ತಿಳಿಸಿದರು. ಅಲ್ಲದೆ ದಕ್ಷ ಅಧಿಕಾರಿ ತಾವಾಗಿದ್ದು, ಹುದ್ದೆಯಲ್ಲಿ ಮತ್ತಷ್ಟು ಪದೋನ್ನತಿ ಹೊಂದಿ ರಾಜ್ಯದ ಜನತೆಗೆ ಹೆಚ್ಚಿನ ಸೇವೆ ನೀಡುವಂತಾಗಲಿ ಎಂದು ಆಶೀರ್ವದಿಸಿದರು. ನೂತನ ನಮ್ಮ ವಿಜಯನಗರ ಜಿಲ್ಲೆಗೆ ಬಂದು, ನಮಗೂ ನಿಮ್ಮ ಸೇವಾ ಭಾಗ್ಯ ಸಿಗುವಂತಾಲಿ ಎಂದರು.

    ಪ್ರಧಾನ ಅರ್ಚಕ ವೆ.ಬ್ರ.ಪ್ರಮೋದ ಭಟ್ ಅವರು ಅರ್ಚನೆ ಮಾಡಿ ಮಂಗಳಾರತಿ ನೀಡಿದರು. ದೇವಸ್ಥಾನದ ಇಒ ಹೆಚ್.ಗಂಗಾಧರ, ಕಾರ್ಣಿಕದ ಗೊರವಯ್ಯ ರಾಮಣ್ಣ ಹಾಗೂ ಬಾಬುದಾರರು ಹಾಜರಿದ್ದರು.

    ಇದಕ್ಕೂ ಮೊದಲು ಕ್ಷೇತ್ರದ ಕನಕ ಗುರುಪೀಠಕ್ಕೆ ಭೇಟಿ ನೀಡಿ, ಶ್ರೀ ನಿರಂಜನಾನಂದಪುರಿ ಶ್ರೀಗಳ ಆಶೀರ್ವಾದ ಪಡೆದರು. ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದ ಹಾಗೆಯೇ ಯುವ ಅಭಿಮಾನಿಗಳು ಅವರ ಜೊತೆ ನಿಂತು ಪೋಟೋ ತೆಗೆಸಿಕೊಂಡರು.