Tag: mykola azarov

  • ಪರಮಾಣು ಘಟಕ ನಾಶಕ್ಕೆ ಉಕ್ರೇನ್‌ ಅಧ್ಯಕ್ಷರಿಂದ ರಷ್ಯಾ ಪ್ರಚೋದನೆ: ಉಕ್ರೇನ್‌ ಮಾಜಿ ಪಿಎಂ ಆರೋಪ

    ಪರಮಾಣು ಘಟಕ ನಾಶಕ್ಕೆ ಉಕ್ರೇನ್‌ ಅಧ್ಯಕ್ಷರಿಂದ ರಷ್ಯಾ ಪ್ರಚೋದನೆ: ಉಕ್ರೇನ್‌ ಮಾಜಿ ಪಿಎಂ ಆರೋಪ

    ಕೀವ್: ಪರಮಾಣು ವಿದ್ಯುತ್‌ ಸ್ಥಾವರ ನಾಶಪಡಿಸಲು ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ, ರಷ್ಯಾವನ್ನು ಪ್ರಚೋದಿಸುತ್ತಿದ್ದಾರೆ ಎಂದು ಉಕ್ರೇನ್‌ ಮಾಜಿ ಪ್ರಧಾನಿ ಮೈಕೋಲಾ ಅಜರೋವ್‌ ಗಂಭೀರ ಆರೋಪ ಮಾಡಿದ್ದಾರೆ.

    ಸಹಜವಾಗಿ ಇದು ಉದ್ದೇಶಪೂರ್ವಕ ಪ್ರಚೋದನೆಯಾಗಿದೆ. ಯೂರೋಪ್‌ನಲ್ಲಿ ಬೃಹತ್‌ ಎನಿಸಿರುವ ಪರಮಾಣು ವಿದ್ಯುತ್‌ ಸ್ಥಾವರ ಘಟಕಗಳು ಉಕ್ರೇನ್‌ನಲ್ಲಿವೆ. ವಿವೇಕಯುತರಾದ ರಷ್ಯಾ ಮತ್ತು ಉಕ್ರೇನ್‌ ಸೈನಿಕರು ಪರಮಾಣು ಸ್ಥಾವರದ ಭೂಪ್ರದೇಶದಲ್ಲಿ ಪ್ರಚೋದನಕಾರಿ ಕ್ರಮಗಳನ್ನು ಕೈಗೊಳ್ಳುವ ಧೈರ್ಯ ಮಾಡುವುದಿಲ್ಲ. ಇದೆಲ್ಲವೂ ಪೂರ್ವನಿರ್ಧರಿತವಾಗಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಮಾಡಬಹುದು: ಎನ್‍ಎಂಸಿ

    ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರು ಅಮೆರಿಕ ಮತ್ತು ಬ್ರಿಟನ್‌ಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಉಕ್ರೇನ್‌ ಮೇಲೆ ವಿಮಾನ ಹಾರಾಟ ನಿಷೇಧ ವಲಯ ರಚಿಸುವಂತೆ ಒತ್ತಾಯಿಸುವ ಮೂಲಕ ಯುದ್ಧಕ್ಕೆ ಮತ್ತಷ್ಟು ಪ್ರಚೋದನೆ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

    ರಷ್ಯಾ ಬಾಂಬ್‌ ದಾಳಿಯನ್ನು ತಡೆಗಟ್ಟಲು ಹಾರಾಟ ನಿಷೇಧ ವಲಯ ರಚಿಸುವಂತೆ ನ್ಯಾಟೋಗೆ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಮನವಿ ಮಾಡಿದ್ದರು. ಆದರೆ ಅವರ ಮನವಿಯನ್ನು ನ್ಯಾಟೋ ಒಕ್ಕೂಟ ತಿರಸ್ಕರಿಸಿತ್ತು. ಇದರಿಂದ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗಬಹುದು ಎಂದು ನ್ಯಾಟೋ ಸ್ಪಷ್ಟಪಡಿಸಿತ್ತು. ಇದನ್ನೂ ಓದಿ: ನಾನು ಕೀವ್‍ನಲ್ಲಿದ್ದೇನೆ, ತಪ್ಪಿಸಿಕೊಂಡು ಹೋಗಿಲ್ಲ: ಉಕ್ರೇನ್ ಅಧ್ಯಕ್ಷ