Tag: My Name Is kirataka

  • ಮೈ ನೇಮ್ ಈಸ್ ಕಿರಾತಕ ಸದ್ಯಕ್ಕಿಲ್ಲ!

    ಮೈ ನೇಮ್ ಈಸ್ ಕಿರಾತಕ ಸದ್ಯಕ್ಕಿಲ್ಲ!

    ಬೆಂಗಳೂರು: ಕೆ.ಜಿ.ಎಫ್. ಸಿನಿಮಾ ರಿಲೀಸಿಗೆ ರೆಡಿಯಾಗುತ್ತಿದ್ದಂತೇ ಯಶ್ ಸೈಲೆಂಟಾಗಿ ಒಂದು ಸಿನಿಮಾದಲ್ಲಿ ನಟಿಸಲು ಆರಂಭಿಸಿದ್ದರು. ಅದರ ಹೆಸರು ಮೈ ನೇಮ್ ಈಸ್ ಕಿರಾತಕ. ಈ ಚಿತ್ರಕ್ಕಾಗಿ ಹತ್ತು ದಿನಗಳ ಶೂಟಿಂಗ್ ಕೂಡಾ ನೆರವೇರಿತ್ತು. ಅಷ್ಟರಲ್ಲಿ ಕೆ.ಜಿ.ಎಫ್. ಪಬ್ಲಿಸಿಟಿ ಶುರುವಾಯ್ತು. ಕೆಜಿಎಫ್ ಭಾರತೀಯ ಚಿತ್ರರಂಗದಲ್ಲಿ ಬೇರೆ ರೀತಿಯಲ್ಲಿ ಹೆಸರು ಮಾಡಿತು. ಅಲ್ಲಿಗೆ ಮೈ ನೇಮ್ ಈಸ್ ಕಿರಾತಕ ಸ್ಥಗಿತಗೊಂಡಿತ್ತು.

    ಕೆ.ಜಿ.ಎಫ್. ಹಿಟ್ ಅನ್ನಿಸಿಕೊಳ್ಳುತ್ತಿದ್ದಂತೇ ಯಶ್ ಕೆ.ಜಿ.ಎಫ್. ಚಾಪ್ಟರ್-2 ಗೆ ತಯಾರಾಗಲು ಶುರು ಮಾಡಿದರು. ಮೈ ನೇಮ್ ಈಸ್ ಕಿರಾತಕ ಸಿನಿಮಾಗಾಗಿ ಕತ್ತರಿಸಿದ್ದ ಕೂದಲು ಗಡ್ಡವನ್ನೆಲ್ಲಾ ಮತ್ತೆ ಬಿಡಲಾರಂಭಿಸಿದರು. ಅಷ್ಟೊತ್ತಿಗೆಲ್ಲಾ ಕಿರಾತಕ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಧೀರೇನ್ ರಾಮ್ ಕುಮಾರ್ ಗಾಗಿ ದಾರಿ ತಪ್ಪಿದ ಮಗ ಸಿನಿಮಾವನ್ನು ಆರಂಭಿಸಿದರು. ಅಲ್ಲಿಗೆ ಮೈ ನೇಮ್ ಈಸ್ ಕಿರಾತಕ ಸಿನಿಮಾ ನಿಂತೇ ಹೋಯಿತು ಅನ್ನುವಷ್ಟರ ಮಟ್ಟಿಗೆ ಗಾಳಿ ಸುದ್ದಿ ಹರಡಿತ್ತು. ಈಗ ಸ್ವತಃ ಮೈ ನೇಮ್ ಈಸ್ ಕಿರಾತಕ ಚಿತ್ರದ ನಿರ್ದೇಶಕ ಅನಿಲ್ ಯಶ್ ಅವರನ್ನು ಭೇಟಿ ಮಾಡಿ ಬಂದಿದ್ದಾಗಿಯೂ, ಕೆ.ಜಿ.ಎಫ್.-2 ಮುಗಿದ ನಂತರ ತಮ್ಮ ಚಿತ್ರವನ್ನು ಆರಂಭಿಸುವುದಾಗಿ ಯಶ್ ಹೇಳಿದ್ದಾಗಿಯೂ ತಿಳಿಸಿದ್ದಾರೆ. ಅಲ್ಲಿಗೆ ಕಿರಾತಕ ಆರಂಭವಾಗಲು ಏನಿಲ್ಲವೆಂದರೂ ವರ್ಷ ಕಾಲ ಬೇಕೇಬೇಕು.

  • ಯಶ್ ಅಭಿನಯದ ‘ಮೈ ನೇಮ್ ಈಸ್ ಕಿರಾತಕ’ ಫಸ್ಟ್ ಲುಕ್ ರಿವೀಲ್

    ಯಶ್ ಅಭಿನಯದ ‘ಮೈ ನೇಮ್ ಈಸ್ ಕಿರಾತಕ’ ಫಸ್ಟ್ ಲುಕ್ ರಿವೀಲ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಮೈ ನೇಮ್ ಈಸ್ ಕಿರಾತಕ’ ಚಿತ್ರದ ಚಿತ್ರೀಕರಣ ಈಗಾಗಲೇ ಶುರು ಆಗಿದ್ದು, ಸದ್ಯ ಈ ಚಿತ್ರದ ಫಸ್ಟ್ ಲುಕ್ ಈಗ ರಿವೀಲ್ ಆಗಿದೆ.

    ಮೈ ನೇಮ್ ಈಸ್ ಕಿರಾತಕ ಚಿತ್ರದಲ್ಲಿ ಯಶ್ ಮಂಡ್ಯದ ಸ್ಟೈಲ್‍ನಲ್ಲಿ ಮಿಂಚಿದ್ದಾರೆ. ಸದ್ಯ ಈ ಚಿತ್ರದ ಪೋಸ್ಟರ್ ನಲ್ಲಿ ಯಶ್ ಮಂಡ್ಯ ಸ್ಟೈಲ್‍ನಲ್ಲಿ ಬಿಳಿ ಪಂಚೆಯನ್ನು ಮೇಲಕ್ಕೆ ಎತ್ತಿಕೊಂಡು ಕಟ್ಟಿಕೊಂಡಿದ್ದಾರೆ. ಬಿಳಿ ಪಂಚೆಗೆ ನೀಲಿ ಬಣ್ಣದ ಕಲರ್‍ಫುಲ್ ಶರ್ಟ್ ಧರಿಸಿ, ಗಾಗಲ್ಸ್ ಹಾಕಿಕೊಂಡಿದ್ದಾರೆ.

    ಈ ಫಸ್ಟ್ ಲುಕ್‍ನಲ್ಲಿ ಯಶ್ ಜೊತೆ ಇಬ್ಬರು ಅಣ್ತಮ್ಮಂದಿರು ಕಾಣಿಸಿಕೊಂಡಿದ್ದಾರೆ. ಇಬ್ಬರು ಹಾಸ್ಯಕಲಾವಿದರಾದ ಚಿಕ್ಕಣ್ಣ ಹಾಗೂ ಕುರಿ ಪ್ರತಾಪ್ ಈ ಚಿತ್ರದಲ್ಲಿ ಯಶ್ ಜೊತೆಯಲ್ಲಿ ಮಿಂಚಲಿದ್ದಾರೆ. ಸದ್ಯ ಈ ಚಿತ್ರ ಹಳ್ಳಿ ಸ್ಟೈಲ್‍ನಲ್ಲಿದ್ದು, ಚಿಕ್ಕಣ್ಣ ಹಾಗೂ ಕುರಿ ಪ್ರತಾಪ್ ಇಬ್ಬರು ಹಳ್ಳಿ ಹುಡುಗರಾಗಿ ಯಶ್‍ಗೆ ಸಾಥ್ ನೀಡಲಿದ್ದಾರೆ.

    ಈ ಚಿತ್ರ ಆಗಸ್ಟ್ 25ರಂದು ಸೆಟ್ಟೇರಿದ್ದು, ಇಂದಿನಿಂದ ಚಿತ್ರೀಕರಣ ಪ್ರಾರಂಭಿಸಿದೆ. ಮಂಡ್ಯದ ಸುತ್ತಮುತ್ತ ಹಾಗೂ ದುಬೈನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ. ಈ ಹಿಂದೆ ಬಿಡುಗಡೆಯಾಗಿದ್ದ ‘ಕಿರಾತಕ’ ಚಿತ್ರದ ಮುಂದುವರಿದ ಭಾಗ ಈ ಚಿತ್ರವಾಗಿದ್ದು, ಅನಿಲ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

    ಈ ಚಿತ್ರ ಜಯಣ್ಣ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದ್ದು, ಯಶ್‍ಗೆ ನಾಯಕಿಯಾಗಿ ಶ್ವೇತಾ ನಂದಿತಾ ಕಾಣಿಸಿಕೊಳ್ಳಲಿದ್ದಾರೆ. ಕಿರಾತಕ ಚಿತ್ರದಲ್ಲಿ ಇದ್ದ ಕಲಾವಿದರು ಮೈ ನೇಮ್ ಈಸ್ ಕಿರಾತಕ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಿರಾತಕನಿಗೆ ಸಾಥ್ ನೀಡಲಿದ್ದಾರೆ ನಂದಿತಾ ಶ್ವೇತ!

    ಕಿರಾತಕನಿಗೆ ಸಾಥ್ ನೀಡಲಿದ್ದಾರೆ ನಂದಿತಾ ಶ್ವೇತ!

    ಬೆಂಗಳೂರು: ಬಹು ನಿರೀಕ್ಷಿತ ಕೆಜಿಎಫ್ ಚಿತ್ರ ಮುಕ್ತಾಯದ ಹಂತ ತಲುಪುತ್ತಲೇ ರಾಕಿಂಗ್ ಸ್ಟಾರ್ ಯಶ್ ಸಂತಸದ ಸುದ್ದಿ ಕೊಟ್ಟಿದ್ದಾರೆ. ಅವರ ಮುಂದಿನ ಚಿತ್ರ ಮೈ ನೇಮ್ ಈಸ್ ಕಿರಾತಕ ಅನೌನ್ಸ್ ಆಗಿದೆ. ಇದೀಗ ಈ ಚಿತ್ರಕ್ಕೆ ನಾಯಕಿಯ ಆಯ್ಕೆ ಕೂಡಾ ನಡೆದಿದೆ!

    ನಂದಿತಾ ಶ್ವೇತ ‘ಮೈ ನೇಮ್ ಈಸ್ ಕಿರಾತಕ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಂದಿತಾ ಶ್ವೇತಾ ಅಂದಾಕ್ಷಣ ಕನ್ನಡ ಪ್ರೇಕ್ಷಕರು ಈಕೆಯ ಗುರುತು ಹಿಡಿಯೋದು ಕಷ್ಟ. ಯಾಕೆಂದರೆ ದಶಕಗಳ ಹಿಂದೆ ಗುರುತಿಟ್ಟುಕೊಳ್ಳುವಂಥಾ ಒಂದು ಚಿತ್ರದಲ್ಲಿ ನಟಿಸಿದ್ದ ನಂದಿತಾ ವರ್ಷಗಳ ಹಿಂದೆ ಮತ್ತೆ ಬಂದರೂ ಸೌಂಡು ಮಾಡಿರಲೇ ಇಲ್ಲ.

    ಅಂದಹಾಗೆ ಈ ನಂದಿತಾ 2008ರಲ್ಲಿ ತೆರೆ ಕಂಡಿದ್ದ ಲೂಸ್ ಮಾದ ಯೋಗಿ ನಾಯಕನಾಗಿದ್ದ ನಂದ ಲವ್ಸ್ ನಂದಿತಾ ಚಿತ್ರದ ನಾಯಕಿಯಾಗಿ ನಟಿಸಿದ್ದವರು. ಆ ಚಿತ್ರ ಒಂದು ಮಟ್ಟಕ್ಕೆ ಗೆಲುವು ದಾಖಲಿಸಿದರೂ ಅದಾದ ನಂತರ ನಂದಿತಾ ನಾಪತ್ತೆಯಾಗಿದ್ದರು. ಅವರು ತಮಿಳು ತೆಲುಗಿನಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿ ಬಂದಿತ್ತಷ್ಟೆ. ಆ ನಂತರ 2015ರಲ್ಲಿ ತೆರೆ ಕಂಡ ಚಾಮರಾಜಪೇಟೆ ಎಂಬ ಚಿತ್ರಕ್ಕೆ ನಾಯಕಿಯಾಗಿ ಮತ್ತೆ ಬಂದರಾದರೂ ಆ ಚಿತ್ರವಾಗಲಿ, ನಂದಿತಾ ಆಗಲಿ ಸುದ್ದಿಯಾಗಲಿಲ್ಲ.

    ಆದರೆ ನಟನೆಯಿಂದ ಗಮನ ಸೆಳೆದಿದ್ದ ನಂದಿತಾ ಇದೀಗ ಯಶ್ ಅವರಂಥಾ ಸ್ಟಾರ್ ಚಿತ್ರದ ಮೂಲಕ ಮರಳಿದ್ದಾರೆ. ಈ ಚಿತ್ರದ ನಂತರ ನಂದಿತಾ ಭರಪೂರವಾದ ಅವಕಾಶಗಳನ್ನು ತನ್ನದಾಗಿಸಿಕೊಳ್ಳುವ ನಿರೀಕ್ಷೆ ಹೊಂದಿದ್ದಾರೆ.

    https://www.youtube.com/watch?v=Z46GQ9fpPQE