Tag: My Hero

  • ಅಮೆರಿಕಾದಲ್ಲಿ ‘ಮೈ ಹೀರೋ’ ಶೂಟಿಂಗ್ : ಹಾಲಿವುಡ್ ನಟ ಎರಿಕ್ ಭಾಗಿ

    ಅಮೆರಿಕಾದಲ್ಲಿ ‘ಮೈ ಹೀರೋ’ ಶೂಟಿಂಗ್ : ಹಾಲಿವುಡ್ ನಟ ಎರಿಕ್ ಭಾಗಿ

    ವಿನಾಶ್ ವಿಜಯಕುಮಾರ್ (Avinash Vijayakumar) ನಿರ್ಮಿಸಿ, ನಿರ್ದೇಶಿಸುತ್ತಿರುವ ‘ಮೈ ಹೀರೋ’ (My Hero) ಚಿತ್ರದ ಚಿತ್ರೀಕರಣ  ಅಮೆರಿಕಾದ (America) ಸ್ಯಾನ್ ಫ್ರಾನ್ಸಿಸ್ಕೋ, ಲಾಸ್ ಎಂಜಲೀಸ್, ಬಿಗ್ ಸರ್ ಇನ್ನು ಮುಂತಾದ ಕಡೆ ಸುಮಾರು ಹದಿನೈದು ದಿನಗಳ ಕಾಲ ನಡೆದಿದೆ‌. ಇದರೊಂದಿಗೆ ಮೂರನೇ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

    ಹಾಲಿವುಡ್ ಖ್ಯಾತ ತಂತ್ರಜ್ಞರು ಕೂಡ ಈ ಚಿತ್ರದಲ್ಲಿ ಕೆಲಸ ಮಾಡಿರುವುದು ಚಿತ್ರದ ವಿಶೇಷಗಳೊಲದಲ್ಲೊಂದು. ಜೊತೆಗೆ ಹಾಲಿವುಡ್‍ನ ಖ್ಯಾತ ನಟರಾದ ಎರಿಕ್ ರಾಬರ್ಟ್ಸ್ (Eric Roberts) ಹಾಗೂ ಹಾಲಿವುಡ್‍ನ ಮತ್ತಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.  ಅಷ್ಟೇ ಅಲ್ಲದೆ ಈ ಚಿತ್ರದ ಮತ್ತೊಂದು ವಿಶೇಷತೆಯ ಬಗ್ಗೆ ನಿರ್ದೇಶಕರಾದ ಅವಿನಾಶ್ ವಿಜಯಕುಮಾರ್ ಅವರು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.

    ಎರಿಕ್ ರಾಬರ್ಟ್ಸ್,  ಮಿಸ್ಸಿಸ್ಸಿಪ್ಪಿಯ ಬಿಲೋಕ್ಸಿಯಲ್ಲಿ ಜನಿಸಿದರು‌.  ಅಟ್ಲಾಂಟಾ ಪ್ರದೇಶದ ಸುತ್ತಮುತ್ತ ಬೆಳೆದರು. ಅವರು ನ್ಯೂಯಾರ್ಕ್ ನಗರದಲ್ಲಿ ರಂಗಭೂಮಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅಲ್ಲಿ ಅವರು ಬರ್ನ್ ದಿಸ್‍ನಲ್ಲಿ ಬ್ರಾಡ್‍ವೇಯಲ್ಲಿನ ಪಾತ್ರಕ್ಕಾಗಿ ಥಿಯೇಟರ್ ವಲ್ಡ್ ಪ್ರಶಸ್ತಿಯನ್ನು ಗೆದ್ದರು. ರನ್‍ ಅವೇ ಟ್ರೈನ್ ಚಿತ್ರದಲ್ಲಿನ ಪಾತ್ರಕ್ಕಾಗಿ ಎರಿಕ್ ರಾಬರ್ಟ್ಸ್ ಅಕಾಡೆಮಿ ಪ್ರಶಸ್ತಿ ಮತ್ತು ಸ್ಟಾರ್ 80 ಮತ್ತು ಕಿಂಗ್ ಆಫ್ ದಿ ಜಿಪ್ಸಿ ಚಿತ್ರದಲ್ಲಿನ ಪಾತ್ರಕ್ಕಾಗಿ ಮೂರು ಬಾರಿ ಗೋಲ್ಡನ್ ಗ್ಲೋಬ್ ನಾಮಿನಿಯಾಗಿದ್ದಾರೆ. ಇದನ್ನೂ ಓದಿ:ಅಕ್ಷಯ್ ನಟನೆಯ ‘ವೆಲ್‌ಕಮ್ 3’ ಸಿನಿಮಾದಲ್ಲಿ ಸ್ಟಾರ್ ಕಲಾವಿದರ ದಂಡು

    ದಿ ಡಾರ್ಕ್ ನೈಟ್, ಫೈನಲ್ ಅನಾಲಿಸಿಸ್, ಮತ್ತು ಪಾಲ್ ಥೋಮನ್ ಆಂಡರ್ಸನ್ ಅವರ ಇನ್ಹೆರೆಂಟ್ ವೈಸ್ ಫಾರ್ ವಾರ್ನರ್ ಬ್ರದರ್ಸ್, ಮಿಲೇನಿಯಮ್ ಫಿಲ್ಮ್ಸ್ ಲವ್ಲೇಸ್ ಮತ್ತು ದಿ ಎಕ್ಸ್‍ಪೆಂಡಬಲ್ಸ್ ಫಾರ್ ಲಯನ್ಸ್‍ಗೇಟ್‍ನಲ್ಲಿನ ಅವರ ಪಾತ್ರಗಳು ಇತರ ಗಮನಾರ್ಹ ಪ್ರದರ್ಶನಗಳನ್ನು ಒಳಗೊಂಡಿವೆ. ವಾರ್ನರ್ ಬ್ರದರ್ಸ್ ಜರ್ಮನಿ ನಿರ್ಮಾಣದ ಹೆಡ್ ಫುಲ್ ಆಫ್ ಹನಿಯಲ್ಲಿ ರಾಬರ್ಟ್ಸ್, ಮ್ಯಾಟ್ ದಿಲ್ಲನ್ ಅವರ ವೈದ್ಯರ ಪಾತ್ರ ಮಾಡಿದ್ದಾರೆ.

    ಮೈ ಹೀರೋ ಚಿತ್ರಕ್ಕೆ ಅವಿನಾಶ್ ವಿಜಯಕುಮಾರ್ ಹಾಗೂ ಮುತ್ತುರಾಜ್ ಟಿ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ಗಗನ್ ಬಡೇರಿಯಾ ಸಂಗೀತ ನಿರ್ದೇಶನ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹಾಗೂ ಮುತ್ತುರಾಜ್ ಟಿ ಅವರ ಸಂಕಲನ ಚಿತ್ರಕ್ಕಿದೆ. ಜಿಲಾಲಿ ರೆಜ್ ಕಲ್ಲಾಹ್, ಮಾಸ್ಟರ್ ವೇದಿಕ್, ಎರಿಕ್ ರಾಬರ್ಟ್ಸ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಮೈ ಹೀರೋ’ ಚಿತ್ರೀಕರಣಕ್ಕಾಗಿ ‘ಯು.ಎಸ್.ಎ’ಗೆ ಹಾರಲಿದೆ ಚಿತ್ರತಂಡ

    ‘ಮೈ ಹೀರೋ’ ಚಿತ್ರೀಕರಣಕ್ಕಾಗಿ ‘ಯು.ಎಸ್.ಎ’ಗೆ ಹಾರಲಿದೆ ಚಿತ್ರತಂಡ

    ಎ.ವಿ .ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಮೈ ಹೀರೊ’ (My Hero) ಚಿತ್ರದ ದ್ವಿತೀಯ ಹಂತದ  ಚಿತ್ರೀಕರಣ ಮುಕ್ತಾಯವಾಗಿದೆ. ಮಧ್ಯಪ್ರದೇಶದ ಮಹೇಶ್ವರ ಎಂಬ ಸ್ಥಳದಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಒಂದು ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣ ಅಲ್ಲಿ ನಡೆದಿದೆ.  ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್ (Jilali Rez Kallah), ಬಾಲನಟ ವೇದಿಕ್ ಕೌಶಿಕ್ (Vedik Kaushik), ದತ್ತಣ್ಣ (Duttanna), ಅಂಕಿತ ಅಮರ್ ಹಾಗೂ ಅಲ್ಲಿನ ಸ್ಥಳೀಯ ಕಲಾವಿದರು ಈ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

    ಮುಂದಿನ ದಿನಗಳಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆಯಲಿದ್ದು, ಚಿತ್ರತಂಡ ಯು.ಎಸ್.ಎ ಗೆ ಹಾರಲಿದೆ.  ಇಡೀ ವಿಶ್ವದಲ್ಲೇ ಇರುವ ಸಾಮಾಜಿಕ ಸಮಸ್ಯೆಯೊಂದರ ಕುರಿತಾದ ಚಿತ್ರವಿದು.  ಅವಿನಾಶ್ ವಿಜಯಕುಮಾರ್ (Avinash Vijayakumar) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.  ಎ.ವಿ.ಸ್ಟುಡಿಯೋಸ್ ಮೂಲಕ ಈ ಚಿತ್ರವನ್ನು ಅವಿನಾಶ್ ವಿಜಯಕುಮಾರ್ ಅವರೆ ನಿರ್ಮಿಸುತ್ತಿದ್ದಾರೆ. ಇದನ್ನೂ ಓದಿ:ಜುಲೈನಲ್ಲಿ ಹೆರಿಗೆ : ಗುಟ್ಟು ಬಿಟ್ಟುಕೊಟ್ಟ ರಾಮ್ ಚರಣ್ ಪತ್ನಿ ಉಪಾಸನಾ

    ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಈ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ದತ್ತಣ್ಣ, ಪ್ರಕಾಶ್ ಬೆಳವಾಡಿ, ನಿರಂಜನ್ ದೇಶಪಾಂಡೆ, ಅಂಕಿತ ಅಮರ್, ತನುಜಾ ಕೃಷ್ಣಪ್ಪ, ನವೀನ್ ಬೊಂದೇಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಗಗನ್ ಬಡೇರಿಯಾ ಸಂಗೀತ ನಿರ್ದೇಶನ ಹಾಗೂ ವೀನಸ್ ನಾಗರಾಜ್ ಅವರ ಛಾಯಾಗ್ರಹಣ ಮೈ ಹೀರೊ ಚತ್ರಕ್ಕಿದ್ದು, ಎ.ವಿ.ಸ್ಟುಡಿಯೋಸ್ ಸಂಭಾಷಣೆ ಬರೆದಿದ್ದಾರೆ.

  • ಮಧ್ಯಪ್ರದೇಶದ ಕಡೆಗೆ ‘ಮೈ ಹೀರೋ’ ಪಯಣ : ಹಾಲಿವುಡ್ ನಟ ಭಾಗಿ

    ಮಧ್ಯಪ್ರದೇಶದ ಕಡೆಗೆ ‘ಮೈ ಹೀರೋ’ ಪಯಣ : ಹಾಲಿವುಡ್ ನಟ ಭಾಗಿ

    ಎ.ವಿ .ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಮೈ ಹೀರೊ’ (My Hero) ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಹತ್ತುದಿನಗಳ  ಚಿತ್ರೀಕರಣ ನಡೆದಿದೆ. ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್ (Jilali Rej Kallah), ಬಾಲನಟ ವೇದಿಕ್ ಕೌಶಿಕ್ (Vedic Kaushik), ದತ್ತಣ್ಣ, ಪ್ರಕಾಶ್ ಬೆಳವಾಡಿ (Prakash Belawadi) , ನಿರಂಜನ್ ದೇಶಪಾಂಡೆ, ತನುಜಾ ಕೃಷ್ಣಪ್ಪ, “ಕಾಂತಾರ” ಖ್ಯಾತಿಯ ನವೀನ್ ಬೊಂದೇಲ್ ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

    ಈ ತಿಂಗಳ ಕೊನೆಗೆ ದ್ವಿತೀಯ ಹಂತದ ಚಿತ್ರೀಕರಣ ಮಧ್ಯಪ್ರದೇಶದಲ್ಲಿ ಆರಂಭವಾಗಲಿದೆ. ಗಗನ್ ಬಡೇರಿಯಾ ಸಂಗೀತ ನಿರ್ದೇಶನ ಹಾಗೂ ವೀನಸ್ ನಾಗರಾಜ ಮೂರ್ತಿ ಅವರ ಛಾಯಾಗ್ರಹಣ “ಮೈ ಹೀರೊ” ಚತ್ರಕ್ಕಿದ್ದು, ಎ.ವಿ.ಸ್ಟುಡಿಯೋಸ್ ಮತ್ತು ಜಿಮ್ ಶಿವು ಸಂಭಾಷಣೆ ಬರೆಯುತ್ತಿದ್ದಾರೆ. ಇದನ್ನೂ ಓದಿ: ಸಾಲುಮರದ ತಿಮ್ಮಕ್ಕನ ಆಶೀರ್ವಾದ ಪಡೆದ ಹಿಂದಿ ನಟಿ

    ವಿಶ್ವದಾದ್ಯಂತ ಇರುವ ಸಾಮಾಜಿಕ ಸಮಸ್ಯೆಯೊಂದನ್ನು ಕೇಂದ್ರವಾಗಿಟ್ಟುಕೊಂಡು ಅವಿನಾಶ್ ವಿಜಯಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಅವರಿಗೆ ಚೊಚ್ಚಲ ನಿರ್ದೇಶನದ ಚಿತ್ರ. ಎ.ವಿ.ಸ್ಟುಡಿಯೋಸ್ ಮೂಲಕ ಈ ಚಿತ್ರವನ್ನು ಅವಿನಾಶ್ ವಿಜಯ ಕುಮಾರ್ ಅವರೆ ನಿರ್ಮಿಸುತ್ತಿದ್ದಾರೆ.

    ಅಮೆರಿಕಾದಿಂದ ಬಂದ ಅಧಿಕಾರಿಯೊಬ್ಬರು ಭಾರತದ ಹುಡುಗನೊಬ್ಬನನ್ನು ಭೇಟಿಯಾಗುತ್ತಾರೆ‌‌. ಇವರಿಬ್ಬರ ನಡುವೆ ಹೆಚ್ಚಿನ ಕಥೆ ಸಾಗುತ್ತದೆ.  ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಈ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

  • ಹಲವು ಅಚ್ಚರಿಗಳೊಂದಿಗೆ ತಯಾರಾಗಲಿದೆ ‘ಮೈ ಹೀರೋ’ ಸಿನಿಮಾ

    ಹಲವು ಅಚ್ಚರಿಗಳೊಂದಿಗೆ ತಯಾರಾಗಲಿದೆ ‘ಮೈ ಹೀರೋ’ ಸಿನಿಮಾ

    ನ್ನಡದಲ್ಲಿ ಈಗ ಉತ್ತಮ ಕಂಟೆಂಟ್ ವುಳ್ಳ ಸಿನಿಮಾಗಳು ಹೆಚ್ಚು ಬರುತ್ತಿದೆ. ಅದೇ ಸಾಲಿಗೆ ಸೇರುವ ಮತ್ತೊಂದು ಒಳ್ಳೆಯ ಕಂಟೆಂಟ್ ಓರಿಯಂಟೆಡ್ ಸಿನಿಮಾ ‘ಮೈ ಹೀರೋ’ . ಇತ್ತೀಚಿಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಸವನಗುಡಿಯ ರೇಣುಕಾದೇವಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ಮಹಾಲಕ್ಷ್ಮಿ ಆರಂಭಫಲಕ ತೋರಿದರು. ನಟ ದತ್ತಣ್ಣ ಕ್ಯಾಮೆರಾ ಚಾಲನೆ ಮಾಡಿದರು.

    ನಾನು ಮೂಲತಃ ರಂಗಭೂಮಿ ಕಲಾವಿದ . ಸ್ಯಾನ್ ಫ್ರಾನ್ಸಿಸ್ಕೊ ಫಿಲಂ ಸ್ಕೂಲ್ ನಲ್ಲಿ ನಿರ್ದೇಶನದ ಕುರಿತು ಹಾಗೂ ಬಾಂಬೆ ಅನುಪಮ್ ಖೇರ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯ ತರಭೇತಿ ಪಡೆದಿದ್ದೇನೆ. ನಮ್ಮದೇ ಆದ ಎ ವಿ ಸ್ಟುಡಿಯೋಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಇದು ಬರೀ ಕರ್ನಾಟಕ, ಭಾರತ ಮಾತ್ರವಲ್ಲ. ಇಡೀ ಪ್ರಪಂಚದಲ್ಲಿರುವ ಸಾಮಾಜಿಕ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಹೆಣೆದಿರುವ ಕಥೆ. ಅಮೇರಿಕಾದಿಂದ ಬಂದ ಅಧಿಕಾರಿಯೊಬ್ಬರು ಭಾರತಕ್ಕೆ ಬಂದಾಗ ಹುಡುಗನೊಬ್ಬನ ಪರಿಚಯವಾಗುತ್ತದೆ. ಇವರಿಬ್ಬರ ನಡುವೆ ಹೆಚ್ಚಿನ ಕಥೆ ಸಾಗುತ್ತದೆ. ಕೆಲವು ಚಿತ್ರದಲ್ಲಿ ಭಾರತವನ್ನು ಬಡ ರಾಷ್ಟ್ರ ಎಂದು ಬಿಂಬಿಸಿ ತೋರಿಸಲಾಗುತ್ತದೆ. ಆದರೆ ನಮ್ಮ ಚಿತ್ರದಲ್ಲಿ ಭಾರತವನ್ನು ಬೇರೆಯದೇ ರೀತಿಯಲ್ಲಿ ತೋರಿಸುತ್ತಿದ್ದೇವೆ‌. ಚಿತ್ರ ನೋಡಿದ ಮೇಲೆ ಭಾರತವನ್ನು ನೋಡುವ ರೀತಿ ಬದಲಾಗಬಹುದು ಎಂಬುದು ನನ್ನ ಅನಿಸಿಕೆ‌. ಹಾಲಿವುಡ್ ನಟ ಜಿಲಾಲಿ  ರೆಜ್ ಕಲ್ಲಾಹ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಕಾಶ್ ಬೆಳವಾಡಿ ಅವರು ಜಿಲ್ಲಾಧಿಕಾರಿಯಾಗಿ, ದತ್ತಣ್ಣ ಪುರೋಹಿತರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.  ನಿರಂಜನ್ ದೇಶಪಾಂಡೆ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಆರಂಭವಾಗುತ್ತದೆ. ಮಧ್ಯಪ್ರದೇಶ ಹಾಗೂ ಯು ಎಸ್ ಎ ನಲ್ಲೂ ಚಿತ್ರೀಕರಣ ನಡೆಯುತ್ತದೆ. ಕನ್ನಡ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಈ ಚಿತ್ರ ಬರಲಿದೆ‌. ಮುಂದೆ ಬೇರೆ ಭಾಷೆಗಳಲ್ಲೂ ಬಿಡುಗಡೆ ಮಾಡುವ ಸಾಧ್ಯತೆಯಿದೆ.  ಮೂರು ಹಾಡುಗಳಿರುವ ಈ ಚಿತ್ರಕ್ಕೆ ಗಗನ್ ಬಧಾರಿಯಾ ಸಂಗೀತ ನೀಡಲಿದ್ದಾರೆ. ಎರಡು ಕನ್ನಡ ಹಾಗೂ ಒಂದು ಇಂಗ್ಲಿಷ್ ಹಾಡು ಚಿತ್ರದಲ್ಲಿರುತ್ತದೆ. ಕುಮಾರಗೌಡ ಈ ಚಿತ್ರದ ಛಾಯಾಗ್ರಾಹಕರು. ಚಿತ್ರಕಥೆಯನ್ನು ನಾನು  ಮುತ್ತುರಾಜ್ ಬರೆದಿದ್ದೇವೆ. ಜೆಮ್ ಶಿವು ಸಂಭಾಷಣೆ ಬರೆದಿದ್ದಾರೆ. ಇದು ಇಲ್ಲಿನ ತಂತ್ರಜ್ಞರ ಮಾಹಿತಿ. ಹಾಲಿವುಡ್ ನ ತಂತ್ರಜ್ಞರು ಸಹ ನಮ್ಮ ಚಿತ್ರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಅವಿನಾಶ್ ವಿಜಯಕುಮಾರ್ “ಮೈ ಹೀರೋ” ಬಗ್ಗೆ ಮಾಹಿತಿ ನೀಡಿದರು. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ನಾನು ಕೂಡ ರಂಗಭೂಮಿ ಕಲಾವಿದ. ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಕೆಲವು ವೆಬ್ ಸೀರೀಸ್ ಗಳಲ್ಲಿ ನಟಿಸಿದ್ದೇನೆ‌. ಈ ಚಿತ್ರದ ಕಥೆ ಇಷ್ಟವಾಯಿತು ಎಂದು ಹಾಲಿವುಡ್ ನಟ ಜಿಲಾಲಿ ಹೇಳಿದರು. ಕಲಾವಿದರಾದ ಪ್ರಕಾಶ್ ಬೆಳವಾಡಿ, ದತ್ತಣ್ಣ, ನಿರಂಜನ್ ದೇಶಪಾಂಡೆ ಹಾಗೂ ಸಂಗೀತ ನಿರ್ದೇಶಕ ಗಗನ್ ಬಧಾರಿಯಾ ಪತ್ರಿಕಾಗೋಷ್ಠಿಯಲ್ಲಿ “ಮೈ ಹೀರೋ” ಚಿತ್ರದ ಬಗ್ಗೆ ಮಾತನಾಡಿದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k