Tag: MVA

  • ಮಹಾರಾಷ್ಟ್ರದಲ್ಲಿ ಎನ್‌ಡಿಎ ‘ಮಹಾ’ ಸುನಾಮಿ- ಕಾಂಗ್ರೆಸ್ ‘ಆಘಾಡಿ’ ಕೂಟ ಛಿದ್ರ ಛಿದ್ರ – ಯಾರಿಗೆ ಎಷ್ಟು ಸ್ಥಾನ?

    ಮಹಾರಾಷ್ಟ್ರದಲ್ಲಿ ಎನ್‌ಡಿಎ ‘ಮಹಾ’ ಸುನಾಮಿ- ಕಾಂಗ್ರೆಸ್ ‘ಆಘಾಡಿ’ ಕೂಟ ಛಿದ್ರ ಛಿದ್ರ – ಯಾರಿಗೆ ಎಷ್ಟು ಸ್ಥಾನ?

    – ದೆಹಲಿ ಬಿಜೆಪಿ ಕಚೇರಿಯಲ್ಲಿ ಮಹಾ ಸಂಭ್ರಮ

    ಮುಂಬೈ: ಮಹಾರಾಷ್ಟçದಲ್ಲಿ ಆಡಳಿತಾರೂಢ ಬಿಜೆಪಿ ಮೈತ್ರಿಕೂಟ ‘ಮಹಾಯುತಿ’ ಎದುರಾಳಿ ಕೂಟವನ್ನು ಇಡಿಯಾಗಿ ಆಹುತಿ ಪಡೆದಿದೆ. ಒನ್ ಸೈಡ್ ಮ್ಯಾಚ್‌ನಲ್ಲಿ ಕಾಂಗ್ರೆಸ್-ಉದ್ಧವ್ ಸೇನೆ-ಶರದ್ ಪವಾರ್ ಎನ್‌ಸಿಪಿ ಉಡೀಸ್ ಆಗಿವೆ. ಮತಗಟ್ಟೆ ಸಮೀಕ್ಷೆಗಳ ಲೆಕ್ಕಚಾರವನ್ನು ಮೀರಿ ಮೋದಿ ಟೀಂ ಇದೇ ಮೊದಲ ಬಾರಿಗೆ ಡಬ್ಬಲ್ ಸೆಂಚುರಿ ಕ್ರಾಸ್ ಮಾಡಿದೆ.

    ಬಿಜೆಪಿಯೊಂದೇ ಮತ್ತೊಮ್ಮೆ ಸೆಂಚುರಿ ಬಾರಿಸಿದೆ. ಬಿಜೆಪಿ ಸ್ಪರ್ಧೆ ಮಾಡಿದ್ದ 145 ಕ್ಷೇತ್ರಗಳಲ್ಲಿ 80% ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮಿತ್ರ ಪಕ್ಷಗಳಾದ ಶಿಂಧೆ ಶಿವಸೇನೆ ಸ್ಟ್ರೈಕ್ ರೇಟ್ 71% ರಷ್ಟಿದೆ. ಅಜಿತ್ ಪವಾರ್ ಎನ್‌ಸಿಪಿ ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ 62% ರಷ್ಟು ಯಶಸ್ಸು ಕಂಡಿದೆ.

    ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ಗೆಲುವಿನ ಸ್ಟ್ರೈಕ್‌ರೇಟ್‌ 20ಕ್ಕೆ ಕುಸಿದಿದೆ. ಇಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯತಂತ್ರ ಸಫಲವಾಗಿದೆ. ಹಿಂದುತ್ವ ಮಂತ್ರ ಕೆಲಸ ಮಾಡಿದೆ. ಇದೇ ಮೊದಲ ಬಾರಿಗೆ ಮರಾಠಿ ಆಸ್ಮಿತೆಯ ಅಂಶ ಕೆಲಸ ಮಾಡಿಲ್ಲ. ಮಹಾ ಫಲಿತಾಂಶ ಬೆನ್ನಲ್ಲೇ ಮುಂದಿನ ಸಿಎಂ ಯಾರೆಂಬ ಚರ್ಚೆ ನಡೆದಿದೆ.

    ಬಿಜೆಪಿ ಅತೀ ಹೆಚ್ಚು ಸ್ಥಾನ ಗಳಿಸಿದ ಕಾರಣ ಫಡ್ನವಿಸ್ ಮತ್ತೆ ಸಿಎಂ ಆಗಬಹುದು ಎಂಬ ಚರ್ಚೆ ನಡೆದಿದೆ. ಆದರೆ, ಸಿಎಂ ಹುದ್ದೆಗೆ ಮತ್ತೊಮ್ಮೆ ಏಕನಾಥ ಶಿಂಧೆ ಪಟ್ಟು ಹಿಡಿದಿದ್ದಾರೆ. ಅಂದ ಹಾಗೇ, ಈ ಜನಾದೇಶವನ್ನು ಉದ್ಧವ್ ಶಿವಸೇನೆ ಒಪ್ಪೋಕೆ ತಯಾರಿಲ್ಲ. ಇದು ಮೋದಿ-ಅದಾನಿ ಕೈವಾಡದ ಫಲಿತಾಂಶ ಎಂದು ಸಂಜಯ್ ರಾವತ್ ವ್ಯಾಖ್ಯಾನಿಸಿದ್ದಾರೆ. ಈ ಸೋಲು ಆಘಾತ ತಂದಿದೆ ಎಂದಿರುವ ಕಾಂಗ್ರೆಸ್, ಆತ್ಮಾವಲೋಕನ ಮಾಡಿಕೊಳ್ಳಲು ಮುಂದಾಗಿದೆ. ಮಹಾಯುತಿ ಮಹಾ ಸಂಭ್ರಮದಲ್ಲಿ ಮುಳುಗಿದೆ.

    ಮಹಾರಾಷ್ಟ್ರ ಫಲಿತಾಂಶ
    * ಎನ್‌ಡಿಎ – 231
    * ಐಎನ್‌ಡಿಐಎ – 45
    * ಇತರೆ – 12

    ಪಕ್ಷವಾರು ಫಲಿತಾಂಶ
    ಪಕ್ಷ                         ಸ್ಥಾನ                                    ವೋಟ್ ಶೇರ್                  ಹಿಂದಿನ ಫಲಿತಾಂಶ
    * ಬಿಜೆಪಿ –                  133 (149 ರಲ್ಲಿ ಸ್ಪರ್ಧೆ)            26.74%                         105
    * ಶಿಂಧೆ ಸೇನೆ –          57 (81 ರಲ್ಲಿ ಸ್ಪರ್ಧೆ)                 12.55% –
    * ಎನ್‌ಸಿಪಿ –              41 (59 ರಲ್ಲಿ ಸ್ಪರ್ಧೆ)                 9.06% –
    * ಕಾಂಗ್ರೆಸ್ –              15 (101 ರಲ್ಲಿ ಸ್ಪರ್ಧೆ)               12.29%                         44
    * ಉದ್ಧವ್ ಸೇನೆ –        20 (95 ರಲ್ಲಿ ಸ್ಪರ್ಧೆ)                10.02%                         56
    * ಎನ್‌ಸಿಪಿ(ಎಸ್‌ಪಿ) –   10 (86 ರಲ್ಲಿ ಸ್ಪರ್ಧೆ)                11.19%                           54
    * ಇತರೆ – 12 07.35

    ಸಮುದಾಯವಾರು ರಿಸಲ್ಟ್ ಲೆಕ್ಕ
    ಎನ್‌ಡಿಎ ಐಎನ್‌ಡಿಐಎ
    * ಮರಾಠ – 68 18
    * ಓಬಿಸಿ – 61 25
    * ದಲಿತ – 19 10
    * ರೈತ – 36 20
    * ಮಹಿಳೆ – 29 11
    ಮಾಹಿತಿ – ವಿಧರ್ಭದಲ್ಲಿ ಬಿಜೆಪಿ ಹವಾ.. 62ರ ಪೈಕಿ 40ರಲ್ಲಿ ಗೆಲುವು.

    `ಮಹಾ’ ಫಲಿತಾಂಶ ವಿಶ್ಲೇಷಣೆ
    ಎನ್‌ಡಿಎ ಗೆಲುವಿಗೆ ಕಾರಣಗಳು
    * ಏಕ್ ಹೈ ತೋ ಸೇಫ್ ಹೈ ನಿನಾದ
    * ಓಬಿಸಿ ಮತ ಬುಟ್ಟಿಗಾಗಿ ಮಾ.ಧ.ವ ಸೂತ್ರ (ಮಾಲಿ,ಧಂಗರ್, ವಂಜರಿ)
    * ಲಾಡ್ಲಿ ಬೆಹನ್ ಯೋಜನೆಗೆ ಜೈ ಎಂದ ನಾರಿಶಕ್ತಿ
    * ಮಹಿಳೆಯರಿಗೆ 2100 ರೂ. ಆರ್ಥಿಕ ನೆರವಿನ ಭರವಸೆ
    * ಶರದ್ ಪವಾರ್, ಉದ್ಧವ್ ಠಾಕ್ರೆ ಹಿಡಿತ ಸಡಿಲ (ಶರದ್ ಪವಾರ್ ಶಕೆ ಮುಗಿಯಿತಾ)
    * ಮಹಾಯುತಿಗೆ `ಶಿಂಧೆ’ಯ ಮರಾಠ ನಾಯಕತ್ವ
    * ಮರಾಠ ಮೀಸಲಾತಿ ವಿಚಾರಕ್ಕೆ ಆಘಾಡಿ ಹೆಚ್ಚು ಆದ್ಯತೆ ನೀಡಿದ್ದು
    * ಗ್ಯಾರಂಟಿಗಳು ಸುಳ್ಳೆಂದು ಮೋದಿ ಪ್ರಚಾರ
    * 76 ಕಡೆ ಬಿಜೆಪಿ-ಕಾಂಗ್ರೆಸ್ ಮುಖಾಮುಖಿ.. ಕೈಗೆ ಹೊಡೆತ

  • ಮಹಾರಾಷ್ಟ್ರ ಮತ ಎಣಿಕೆ: ಎನ್‌ಡಿಎಗೆ ಆರಂಭಿಕ ಮುನ್ನಡೆ

    ಮಹಾರಾಷ್ಟ್ರ ಮತ ಎಣಿಕೆ: ಎನ್‌ಡಿಎಗೆ ಆರಂಭಿಕ ಮುನ್ನಡೆ

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ (Maharashtra Election) ಮತ ಎಣಿಕೆಯಲ್ಲಿ ಎನ್‌ಡಿಎಗೆ (NDA) ಆರಂಭಿಕ ಮುನ್ನಡೆ ಸಿಕ್ಕಿದೆ.

    ಅಂಚೆ ಮತಗಳಲ್ಲಿ ಎನ್‌ಡಿಎ 84  ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಮಹಾವಿಕಾಸ್‌ ಅಘಾಡಿ 61 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಇತರರು 5 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.

    ಒಟ್ಟು 288 ಕ್ಷೇತ್ರಗಳು ಮಹಾರಾಷ್ಟ್ರದಲ್ಲಿದ್ದು ಸರಳ ಬಹುಮತ 145 ಸ್ಥಾನಗಳ ಅಗತ್ಯವಿದೆ. ಈ ಬಾರಿ 62.05% ಮತದಾನ ನಡೆದಿದೆ.

    ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರವೇ ಮತ್ತೆ ಬರಲಿದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳ್ತಿವೆ. ಆದರೆ, ಕಾಂಗ್ರೆಸ್ ಇದನ್ನು ನಂಬುತ್ತಿಲ್ಲ. ಫೋಟೋ ಫಿನಿಷ್ ಫಲಿತಾಂಶ ಹೊರಬರುವ ನಿರೀಕ್ಷೆಯನ್ನು ಹೊಂದಿದೆ.

  • ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣಾ ಮತ ಎಣಿಕೆ ಆರಂಭ

    ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣಾ ಮತ ಎಣಿಕೆ ಆರಂಭ

    ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶದ ಮತ ಎಣಿಕೆ ಆರಂಭವಾಗಿದೆ.

    ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರವೇ ಮತ್ತೆ ಬರಲಿದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳ್ತಿವೆ. ಆದರೆ, ಕಾಂಗ್ರೆಸ್ ಇದನ್ನು ನಂಬ್ತಿಲ್ಲ. ಫೋಟೋ ಫಿನಿಷ್ ಫಲಿತಾಂಶ ಹೊರಬರುವ ನಿರೀಕ್ಷೆಯನ್ನು ಹೊಂದಿದೆ. ಇಂದು ಬೆಳಗ್ಗೆ ಟ್ರೆಂಡ್ ನೋಡಿಕೊಂಡು ಗೆಲ್ಲುವ ಅಭ್ಯರ್ಥಿಗಳನ್ನು ರಕ್ಷಿಸಿಕೊಳ್ಳಲು ಹೈಕಮಾಂಡ್ ಪ್ಲಾನ್ ಮಾಡಿದೆ. ಅಗತ್ಯಬಿದ್ರೆ ಕಾಂಗ್ರೆಸ್ ವಿಜೇತರನ್ನು ಕರ್ನಾಟಕಕ್ಕೆ ಕಳಿಸ್ತೇವೆ. ರೆಸಾರ್ಟ್ ರೆಡಿ ಮಾಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ -ಡಿಸಿಎಂ ಸಿದ್ದರಾಮಯ್ಯನವರಿಗೆ ಸೂಚಿಸಿದೆ ಎನ್ನಲಾಗಿದೆ.

    ಅಂಥಾದ್ದೇನಿಲ್ಲ ಎಂದು ಡಿಸಿಎಂ ಹೇಳಿದ್ದಾರೆ. ಕಾಂಗ್ರೆಸ್ ಪೆಚ್ಚು ಮೊರೆ ಹಾಕೋದು ನಿಶ್ಚಿತ ಎಂದು ಬಿಜೆಪಿ ಲೇವಡಿ ಮಾಡಿದೆ. ಮತದಾನೋತ್ತರ ಪರಿಸ್ಥಿತಿಗಳನ್ನ ನಿಭಾಯಿಸಲು 2 ರಾಜ್ಯಗಳಿಗೆ ಉಸ್ತುವಾರಿಗಳನ್ನು ನೇಮಿಸಿದೆ. ಮಹಾರಾಷ್ಟ್ರಕ್ಕೆ ಜಿ.ಪರಮೇಶ್ವರ್ ನಿಯುಕ್ತರಾಗಿದ್ದಾರೆ. ಈ ಹೊತ್ತಲ್ಲೇ, ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲು ಉದ್ಧವ್ ಶಿವಸೇನೆಗೆ ಬಾಗಿಲು ತೆರೆದಿದೆ ಎಂಬ ಸಂದೇಶವನ್ನು ಬಿಜೆಪಿ ನೀಡಿದೆ. ಇದು ಕಾಂಗ್ರೆಸ್‌ಗೆ ಇನ್ನಷ್ಟು ದಿಗಿಲು ತಂದಿದೆ. ಡಿಸಿಎಂ ಫಡ್ನಾವೀಸ್ ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ.

    ಉದ್ಧವ್ ಠಾಕ್ರೆ ಕೂಡ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಇನ್ನು, ಜಾರ್ಖಂಡ್‌ನಲ್ಲಿ ಯಾರೂ ಬೇಕಿದ್ರೂ ಗೆಲ್ಲಬಹುದು ಎಂದು ಎಕ್ಸಿಟ್ ಪೋಲ್‌ಗಳ ಸಮೀಕ್ಷೆಗಳು ಹೇಳ್ತಿವೆ.

    ಮಹಾರಾಷ್ಟ್ರ ಎಲೆಕ್ಷನ್
    ಒಟ್ಟು ಕ್ಷೇತ್ರ – 288
    * ಸರಳ ಬಹುಮತ – 145
    * ಮತದಾನ ಪ್ರಮಾಣ – 62.05%

    ಮಹಾರಾಷ್ಟ್ರ ಎಲೆಕ್ಷನ್.. ಪ್ರಮುಖಾಂಶ
    * ಮಹಾಯುತಿ ಒಕ್ಕೂಟದ ಮಾ.ಧ.ವ ಸೂತ್ರ
    (ಮರಾಠೇತರ ಒಬಿಸಿ ಮತಗಳ ಗುರಿಯಾಗಿಸಿದ್ದ ಬಿಜೆಪಿ. ಮಾಧವ ಫಾರ್ಮುಲಾ – ಮಾ-ಮಾಲಿ, ಧ-ಧಂಗರ್, ವ-ವಂಜಾರಿ ಸಮುದಾಯ. ಇವು ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿತ್ತು)
    * ಮರಾಠವಾಡ ಪ್ರಾಂತ್ಯದ ಮೇಲೆ ಎಂವಿಎ ಕಣ್ಣು
    (ಲೋಕಸಭೆಯಲ್ಲಿ ಕಾಂಗ್ರೆಸ್-ಎನ್‌ಸಿಪಿ ಕೈ ಹಿಡಿದಿದ್ದ ಮರಾಠವಾಡ ಪ್ರಾಂತ್ಯ)
    * 76 ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ನೇರಾನೇರ ಫೈಟ್
    * ನಿರ್ಣಾಯಕವಾದ ವಿದರ್ಭ ಪ್ರಾಂತ್ಯ(62 ಸೀಟ್)ದ ಮೇಲೆ ಬಿಜೆಪಿ ಕಣ್ಣು
    (ಸರ್ಕಾರ ರಚನೆಗೆ ನಿರ್ಣಾಯಕ. ಬಿಜೆಪಿಯ ಹಿಡಿತ ಮುಂದುವರಿಯುತ್ತಾ..)
    * ಕಾಂಗ್ರೆಸ್‌ನ ಗ್ಯಾರಂಟಿಗಳು ವರ್ಸಸ್ ಬಿಜೆಪಿಯ ಲಾಡ್ಲಿ ಬಹೆನ್ ಯೋಜನೆ
    * ರೈತರು, ಗ್ರಾಮಾಂತರ ಪ್ರದೇಶದ ಮತದಾರರು..
    * ಕಣದಲ್ಲಿ ಬಿವಿಎ.. ಯಾವ ಕೂಟಕ್ಕೆ ಲಾಭ.. ಯಾವ ಕೂಟಕ್ಕೆ ನಷ್ಟ?

    ಜಾರ್ಖಂಡ್ ಎಲೆಕ್ಷನ್ – ಇಂದು ಫಲಿತಾಂಶ
    * ಒಟ್ಟು ಸ್ಥಾನ – 81
    * ಮ್ಯಾಜಿಕ್ ನಂಬರ್ – 41
    * ಮತದಾನ ಪ್ರಮಾಣ – 68.01%

    ಜಾರ್ಖಂಡ್ ಎಲೆಕ್ಷನ್.. ಪ್ರಮುಖಾಂಶ
    * ಬುಡಕಟ್ಟು ಸಮುದಾಯದವರೇ ಹೆಚ್ಚಿರುವ ಜಾರ್ಖಂಡ್
    * ಇಂಡಿ ಒಕ್ಕೂಟದ ಗ್ಯಾರಂಟಿ ವರ್ಸಸ್ ಬಿಜೆಪಿ ಸಂಕಲ್ಪ
    * ಜೆಎಂಎಂಗೆ ಕಾಂಗ್ರೆಸ್, ಆರ್‌ಜೆಡಿ, ಎಡಪಕ್ಷಗಳು ಸಾಥ್
    * ಇಡಿಯಿಂದ ಸೋರೆನ್ ಬಂಧನ ಪ್ರಕರಣ.. ಅನುಕಂಪದ ಅಲೆ ನಿರೀಕ್ಷೆ
    * ಪ್ರಧಾನಿ ನರೇಂದ್ರ ಮೋದಿಯನ್ನೇ ನೆಚ್ಚಿಕೊಂಡಿರುವ ಬಿಜೆಪಿ
    * ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದ ಹುಮ್ಮಸ್ಸು
    * ಅದೇ ಫಲಿತಾಂಶ ವಿಧಾನಸಭೆ ಚುಣಾವಣೆಯಲ್ಲಿ ಬರುವ ವಿಶ್ವಾಸ

  • axis MY INDIA Exit Poll: ಮಹಾರಾಷ್ಟ್ರದಲ್ಲಿ ಮಹಾಯುತಿಗೆ ಅಧಿಕಾರ

    axis MY INDIA Exit Poll: ಮಹಾರಾಷ್ಟ್ರದಲ್ಲಿ ಮಹಾಯುತಿಗೆ ಅಧಿಕಾರ

    ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟವು ಬಹುಮತದೊಂದಿಗೆ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಆಕ್ಸಿಸ್‌ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆ ಭವಿಷ್ಯ ನುಡಿದಿದೆ.

    ಆಕ್ಸಿಸ್‌ ಮೈ ಇಂಡಿಯಾ
    ಮಹಾಯುತಿ 178-200, ಎಂವಿಎ 82-102, ವಿಬಿಎ 0, ಇತರೆ 6-12

    ಟುಡೇಸ್‌ ಚಾಣಕ್ಯ
    ಬಿಜೆಪಿ+ 175 (11 ಪ್ಲಸ್‌ or ಮೈನಸ್‌), ಕಾಂಗ್ರೆಸ್‌+ 100 (11 ಪ್ಲಸ್‌ or ಮೈನಸ್‌), ಇತರೆ 13 (5 ಪ್ಲಸ್‌ or ಮೈನಸ್‌)

    288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಬಹುಮತಕ್ಕೆ 145 ಸ್ಥಾನಗಳು ಬೇಕು. 2019 ರ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗೆದ್ದಿತ್ತು. ಅವಿಭಜಿತ ಶಿವಸೇನೆ 62, ಕಾಂಗ್ರೆಸ್‌ 39 ಮತ್ತು ಎನ್‌ಸಿಪಿ 50 ಸ್ಥಾನಗಳನ್ನು ಗೆದ್ದಿದ್ದವು. ಆಗ ಶಿವಸೇನೆ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆ ಸೇರಿಕೊಂಡು ಸರ್ಕಾರ ರಚಿಸಿತ್ತು. ಬಳಿಕ ಶಿವಸೇನೆ ವಿಭಜನೆಗೊಂಡು (ಉದ್ಧವ್‌ ಠಾಕ್ರೆ ಬಣ ಮತ್ತು ಏಕನಾಥ್‌ ಶಿಂಧೆ ಬಣ) ಶಿಂಧೆ ಬಣ ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸಿತ್ತು.

  • ಮಹಿಳೆಯರಿಗೆ 3,000 ರೂ., ನಿರುದ್ಯೋಗ ಯುವಕ, ಯುವತಿಯರಿಗೆ 4,000 ರೂ. ಭತ್ಯೆ; ಕಾಂಗ್ರೆಸ್‌ ʻಮಹಾʼ ಗ್ಯಾರಂಟಿ!

    ಮಹಿಳೆಯರಿಗೆ 3,000 ರೂ., ನಿರುದ್ಯೋಗ ಯುವಕ, ಯುವತಿಯರಿಗೆ 4,000 ರೂ. ಭತ್ಯೆ; ಕಾಂಗ್ರೆಸ್‌ ʻಮಹಾʼ ಗ್ಯಾರಂಟಿ!

    ಮುಂಬೈ: ಇದೇ ನವೆಂಬರ್‌ 20ರಂದು ನಡೆಯಲಿರುವ ಮಹಾರಾಷ್ಟ್ರ ಚುನಾವಣೆಗಾಗಿ (Maharashtra Poll) ಹಿನ್ನೆಲೆ ಕಾಂಗ್ರೆಸ್‌, ಶಿವಸೇನಾ (Shiv Sena) (ಉದ್ಧವ್‌ ಠಾಕ್ರೆ ಬಣ), NCP (ಶರದ್‌ ಪವಾರ್‌ ಬಣ) ಮಹಾ ವಿಕಾಸ್‌ ಅಘಾಡಿ (MVA) ಮೈತ್ರಿ ಕೂಟವೂ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

    ಮೈತ್ರಿಕೂಟವು ಕರ್ನಾಟಕದ ಮಾದರಿಯಲ್ಲೇ ಹಲವು ಗ್ಯಾರಂಟಿಗಳನ್ನ ಘೋಷಣೆ ಮಾಡಿದೆ. ಮಹಾರಾಷ್ಟ್ರದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಪ್ರಣಾಳಿಕೆಯನ್ನು (Manifesto) ಬಿಡುಗಡೆಗೊಳಿಸಿದ್ದಾರೆ. ಮಹಾ ವಿಕಾಸ್‌ ಅಘಾಡಿ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಮೊದಲ 100 ದಿನಗಳ ಕಾರ್ಯಸೂಚಿಯನ್ನು ಹಾಕಿಕೊಂಡಿದೆ. ಇದನ್ನೂ ಓದಿ: ನರೇಂದ್ರ ಮೋದಿ ಸುಳ್ಳಿನ ಸರದಾರ – ಮಲ್ಲಿಕಾರ್ಜುನ ಖರ್ಗೆ ತೀವ್ರ ತರಾಟೆ

    ಏನೇನು ಗ್ಯಾರಂಟಿ?
    ಈ ಬಾರಿ ಮಹಾ ವಿಕಾಸ್‌ ಅಘಾಡಿ ಸರ್ಕಾರ ಅಧಿಕಾರಕ್ಕೆ ಬಂದರೆ ʻಮಹಾಲಕ್ಷ್ಮಿʼ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 3,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ. ಮಹಿಳೆಯರಿಗೆ ಕರ್ನಾಟಕದ ಮಾದರಿಯಲ್ಲೇ ಉಚಿತ ಬಸ್‌ ಸೇವೆ, 500 ರೂ. ದರದಲ್ಲಿ ವಾರ್ಷಿಕ 6 ಸಿಲಿಂಡರ್‌ ವಿತರಣೆ ಮಾಡಲಾಗುವುದು. ಅಲ್ಲದೇ ಮಹಿಳೆಯರ ಸುರಕ್ಷತೆಗಾಗಿ ಬಲವಾದ ಕಾನೂನುಗಳನ್ನು ರೂಪಿಸುವುದು, 9 ರಿಂದ 16 ವರ್ಷ ವಯಸ್ಸಿನ ಹುಡುಗಿಉರಿಗೆ ಉಚಿತ ಗರ್ಭಕಂಠದ ಕ್ಯಾನ್ಸರ್‌ ಲಸಿಕೆ, ಪ್ರತಿ ತಿಂಗಳು 2 ದಿನಗಳ ರಜೆ ನೀಡಲಾಗುವುದು ಎಂದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.

    ರೈತರಿಗೆ ʻಮಹಾʼ ಭರವಸೆ:
    ರಾಜ್ಯದಲ್ಲಿ ರೈತರ ಆತ್ಮಹತ್ಯೆ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ಸಿಗುವಂತೆ ಯೋಜನೆ ಜಾರಿಗೆ ತರಲಾಗುವು. ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನ ನೇಮಕ ಮಾಡಲಾಗುವುದು. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಲಾಗುವುದು, ಬೆಳೆ ವಿಮೆ ಯೋಜನೆಯನ್ನೂ ಜಾರಿಗೆ ತರಲಾಗುವುದು ಎಂದು ಕೂಟವು ಭರವಸೆ ನೀಡಿದೆ. ಇದನ್ನೂ ಓದಿ: ಹಿಂದೂಗಳ ಮೇಲೆ ದಾಳಿ – ಕೆನಡಾ ರಾಯಭಾರ ಕಚೇರಿ ಎದುರು ಹಿಂದೂ ಸಿಖ್ ಗ್ಲೋಬಲ್ ಫೋರಂ ಪ್ರತಿಭಟನೆ

    ಅಲ್ಲದೇ ನಿರುದ್ಯೋಗಿ ಯುವಕರಿಗೆ ಮಾಸಿಕ 4,000 ರೂ. ಭತ್ಯೆ ನೀಡಲಾಗುವುದು, ರಾಜ್ಯ ವಿದ್ಯಾರ್ಥಿವೇತನ ಯೋಜನೆಗಳನ್ನು ವಿಸ್ತರಿಸಲಾಗುವುದು. ಆರೋಗ್ಯ ವಿಮಾ ಪಾಲಿಸಿಯನ್ನು ವಿಸ್ತರಿಸಲಾಗುವುದು. ಸಾಮಾಜಿಕ ನ್ಯಾಯದ ಅಡಿಯಲ್ಲಿ ಜಾತಿ ಜನಗಣತಿ ಅನುಷ್ಠಾನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

    ಇದೇ ವೇಳೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಳೆದ 10 ವರ್ಷಗಳಿಂದ ಬಿಜೆಪಿ ಮತ್ತು ಮಹಾಯುತಿ ಮೈತ್ರಿಕೂಟ ಈ ರಾಜ್ಯಕ್ಕೆ ದ್ರೋಹ ಬಗೆದಿದೆ. ಚುನಾವಣೆ ಬಂದಿದೆ ಅಂತ ರೈತರ ಸಾಲ ಮನ್ನಾ ಮಾಡುವುದಾಗಿ ಡೋಂಗಿ ಬಿಡುತ್ತಿದೆ. ಅಧಿಕಾರದಲ್ಲಿದ್ದಾಗ ಏಕೆ ಮಾಡಲಿಲ್ಲ? ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಚನ್ನಪಟ್ಟಣದ ಅಕಿಲ್ ಷಾ ಖಾದ್ರಿ ದರ್ಗಾ ಗುರುಗಳ ಭೇಟಿಯಾದ ಹೆಚ್‌ಡಿಡಿ – ಮೊಮ್ಮಗನ ಗೆಲ್ಲಿಸುವಂತೆ ಮುಸ್ಲಿಂ ಸಮುದಾಯಕ್ಕೆ ಮನವಿ

  • ಮಹಾರಾಷ್ಟ್ರ ಚುನಾವಣೆ – ಭಾರಿ ಹೈಡ್ರಾಮಾ ಬಳಿಕ ಎನ್‌ಸಿಪಿ ಅಭ್ಯರ್ಥಿಯಾಗಿ ನವಾಬ್‌ ಮಲಿಕ್‌ ಅಖಾಡಕ್ಕೆ

    ಮಹಾರಾಷ್ಟ್ರ ಚುನಾವಣೆ – ಭಾರಿ ಹೈಡ್ರಾಮಾ ಬಳಿಕ ಎನ್‌ಸಿಪಿ ಅಭ್ಯರ್ಥಿಯಾಗಿ ನವಾಬ್‌ ಮಲಿಕ್‌ ಅಖಾಡಕ್ಕೆ

    ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಮಂಗಳವಾರ ನಾಮಪತ್ರ ಸಲ್ಲಿಕೆಗೆ 5 ನಿಮಿಷ ಬಾಕಿಯಿರುವ ವೇಳೆ ಅಜಿತ್‌ ಪವಾರ್‌ ಬಣದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ನಾಯಕ ನವಾಬ್ ಮಲಿಕ್ (Nawab Malik) ಅವರು ಪಕ್ಷದ `ಬಿ’ ಫಾರಂ ಅನ್ನು ಪಡೆದುಕೊಂಡರು.

    ಇದೇ ನವೆಂಬರ್‌ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ (Maharashtra Assembly Poll) ಮನ್‌ಖುರ್ದ್‌ ಶಿವಾಜಿ ನಗರ ಕ್ಷೇತ್ರದಿಂದ ಅಧಿಕೃತವಾಗಿ ಸ್ಪರ್ಧಿಸಲು ಪಕ್ಷ ಅವಕಾಶ ಕಲ್ಪಿಸಿದೆ. ಅಜಿತ್‌ ಪವಾರ್‌ ಎನ್‌ಸಿಪಿ ಬಣದ ಪ್ರಮುಖ ನಾಯನಾಗಿರುವ ನವಾಬ್‌ ಮಲಿಕ್‌, ಸಮಾಜವಾದಿ ಪಕ್ಷದ ಪ್ರಭಾವಿ ಅಬು ಅಜ್ಮಿ ವಿರುದ್ಧ ಮುಖಾಮುಖಿಯಾಗಿದ್ದಾರೆ.

    ಈ ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನವಾಬ್‌ ಮಲಿಕ್‌, ಮಂಗಳವಾರ ಕೊನೇಕ್ಷಣದಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಬಳಿಕ ನಾನು ಮನ್‌ಖುರ್ದ್‌ ಶಿವಾಜಿ ನಗರದಿಂದ ಅಧಿಕೃತವಾಗಿ ಎನ್‌ಸಿಪಿ ಅಭ್ಯರ್ಥಿಯಾಗಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ವಕ್ಫ್ ಕ್ಯಾತೆ ವಿರೋಧಿಸಿ ರೈತರ ಹೋರಾಟ – ರಾತ್ರೋರಾತ್ರಿ ಪ್ರತಿಭಟನೆಗೆ ಧುಮುಕಿದ ರೈತರು

    ನವಾಬ್‌ ಸ್ಪರ್ಧೆಗೆ ಬಿಜೆಪಿ ಆಕ್ಷೇಪ:
    ಮಹಾಯುತಿಯಲ್ಲಿನ ಪಾಲುದಾರರು ತಮ್ಮ ಅಭ್ಯರ್ಥಿಗಳನ್ನಾಗಿ ಯಾರನ್ನ ಬೇಕದರೂ ಘೋಷಣೆ ಮಾಡಬಹುದು. ಆದ್ರೆ ನವಾಬ್‌ ಮಲಿಕ್‌ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ರೆ, ಪಕ್ಷದ ಕಾರ್ಯಕರ್ತರು ಅವರ ಪರ ಪ್ರಚಾರ ನಡೆಸುವುದಿಲ್ಲ. ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಪರ್ಕ ಹೊಂದಿದವರ ಬಗ್ಗೆ ಅವರ ನಿಲುವು ಸ್ಪಷ್ಟವಾಗಿದೆ ಎಂದು ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಶ್ ಶೆಲಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಸತತ 35 ಗಂಟೆಗಳ ಇಡಿ ದಾಳಿ ಅಂತ್ಯ – 2 ದಿನ, 5 ಅಧಿಕಾರಿಗಳಿಂದ ಮಹತ್ವದ ದಾಖಲೆ ಸಂಗ್ರಹ!

    ಸದ್ಯ 288 ಕ್ಷೇತ್ರದ ಸದಸ್ಯ ಬಲದ ಮಹಾರಾಷ್ಟ್ರದಲ್ಲಿ ಬಿಜೆಪಿ 152, ಎನ್‌ಸಿಪಿ ಅಜಿತ್ ಪವಾರ್ ಬಣದ 52 ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆ 80 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನೂ ಮಹಾವಿಕಾಸ್‌ ಅಘಾಡಿ ಮೈತ್ರಿಕೂಟದಿಂದ ಕಾಂಗ್ರೆಸ್ 103 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಶಿವಸೇನೆಯ ಉದ್ಧವ್ ಠಾಕ್ರೆ ಬಣ ಮತ್ತು ಎನ್‌ಸಿಪಿ ಶರದ್ ಪವಾರ್ ಬಣದಿಂದ 87 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಹಾರಾಷ್ಟ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 20 ರಂದು ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಭಾರತದಲ್ಲಿ ವಾಯು ಮಾಲಿನ್ಯದಿಂದ ವರ್ಷಕ್ಕೆ 33,000 ಸಾವು – ಬೆಂಗ್ಳೂರಿನ ಸ್ಥಿತಿ ಏನು? 

  • ರಘುರಾಮ್‌ ರಾಜನ್‌ ಕಾಂಗ್ರೆಸ್‌ ರಾಜ್ಯಸಭಾ ಅಭ್ಯರ್ಥಿ- ಮಹಾರಾಷ್ಟ್ರದಿಂದ ಆಯ್ಕೆ?

    ರಘುರಾಮ್‌ ರಾಜನ್‌ ಕಾಂಗ್ರೆಸ್‌ ರಾಜ್ಯಸಭಾ ಅಭ್ಯರ್ಥಿ- ಮಹಾರಾಷ್ಟ್ರದಿಂದ ಆಯ್ಕೆ?

    ನವದೆಹಲಿ: ನಿವೃತ್ತ ರಿಸರ್ವ್‌ ಬ್ಯಾಂಕ್‌ ಗವರ್ನರ್‌ (RBI) ಜನರಲ್‌ ರಘುರಾಮ್‌ ರಾಜನ್‌ (Raghuram Rajan) ರಾಜ್ಯಸಭೆಗೆ ಮಹಾರಾಷ್ಟ್ರದಿಂದ (Maharashtra) ಆಯ್ಕೆ ಆಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

    ಜನವರಿ 31 ರಂದು ರಾಜನ್‌ ಅವರು ಶಿವಸೇನೆ(ಯುಬಿಟಿ) ಬಣದ ಮುಖ್ಯಸ್ಥ ಉದ್ಧವ್‌ ಠಾಕ್ರೆ (Uddhav Thackeray) ಅವರ ಮಂಬೈ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ.

    ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿ ಮಹಾರಾಷ್ಟ್ರ ವಿಕಾಸ್‌ ಅಘಾಡಿ (MVA) ಹೆಸರಿನಲ್ಲಿ ಮೈತ್ರಿ ಮಾಡಿಕೊಂಡಿದೆ. ಎಂವಿಎ ಮೂಲಕ ರಾಜನ್‌ ಅವರನ್ನು ರಾಜ್ಯಸಭೆಗೆ ಕಳುಹಿಸಲು ಮಾತುಕತೆ ನಡೆದಿದೆ ಎಂಬ ವಿಚಾರ ಈಗ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬಿಜೆಪಿಯಿಂದ ಕೋಟಿ ಕೋಟಿ ಆಫರ್‌ – ಆರೋಪ ಮಾಡಿದ್ದ ಕೇಜ್ರಿವಾಲ್‌ಗೆ ಕಂಟಕ – ದೆಹಲಿ ಕ್ರೈಂಬ್ರ್ಯಾಂಚ್‌ ನೋಟಿಸ್‌

    ಕಾಂಗ್ರೆಸ್‌ ರಘುರಾಮ್‌ ರಾಜನ್‌ ಅವರನ್ನು ರಾಜ್ಯಸಭೆಗೆ ಕಳುಹಿಸಲು ಮುಂದಾಗಿದೆ. ಇದರ ಭಾಗವಾಗಿ ಬೆಂಬಲ ಕೇಳಲು ರಾಜನ್‌ ಉದ್ಧವ್‌ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತದೆ.

    ಮಹಾರಾಷ್ಟ್ರದಿಂದ ಒಟ್ಟು 6 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಬಿಜೆಪಿ 3 ಸ್ಥಾನಗಳನ್ನು ಗೆಲ್ಲಲಿದೆ. ರಾಜ್ಯಸಭೆಗೆ ಆಯ್ಕೆಯಾಗಲು ಓರ್ವ ಅಭ್ಯರ್ಥಿಗೆ ಕನಿಷ್ಠ 42 ಮತಗಳ ಅಗತ್ಯವಿದೆ. ಪ್ರಸ್ತುತ ಕಾಂಗ್ರೆಸ್‌ 45 ಶಾಸಕರನ್ನು ಹೊಂದಿದೆ.

    ರಘುರಾಮ್‌ ರಾಜನ್‌ ಅವರು ಯುಪಿಎ ಅವಧಿಯಲ್ಲಿ ಆರ್‌ಬಿಐ ಗವರ್ನರ್‌ ಆಗಿ ನೇಮಕಗೊಂಡಿದ್ದರು. 2013 ರಲ್ಲಿ ಅಧಿಕಾರ ಸ್ವೀಕರಿಸಿದ್ದ ಅವರು 2016ರಲ್ಲಿ ನಿವೃತ್ತರಾಗಿದ್ದರು.

    ಈ ಹಿಂದೆ ಭಾರತವು ಹಿಂದೂ ಬೆಳವಣಿಗೆ ದರದ ಅಪಾಯಕ್ಕೆ ಹತ್ತಿರದಲ್ಲಿದೆ ಎಂದು ಹೇಳಿಕೆ ನೀಡುವ ಮೂಲಕ ರಾಜನ್‌ ಚರ್ಚೆಗೆ ಗ್ರಾಸವಾಗಿದ್ದರು.

     

  • 2.5 ವರ್ಷಗಳ ಹಿಂದೆಯೇ ಸೇನಾ ನಾಯಕನಿಗೆ ಬಿಜೆಪಿ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದರೆ MVA ಹುಟ್ಟುತ್ತಿರಲಿಲ್ಲ: ಠಾಕ್ರೆ

    2.5 ವರ್ಷಗಳ ಹಿಂದೆಯೇ ಸೇನಾ ನಾಯಕನಿಗೆ ಬಿಜೆಪಿ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದರೆ MVA ಹುಟ್ಟುತ್ತಿರಲಿಲ್ಲ: ಠಾಕ್ರೆ

    ಮುಂಬೈ: ಎರಡೂವರೆ ವರ್ಷಗಳ ಹಿಂದೆಯೇ ಶಿವಸೇನಾ ನಾಯಕನಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ಬಿಜೆಪಿ ತೀರ್ಮಾನಿಸಿದ್ದರೆ, ಮಹಾ ವಿಕಾಸ್‌ ಅಘಾಡಿ (ಎಂವಿಎ) ಸೃಷ್ಟಿಯಾಗುತ್ತಿರಲೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ರಾಜ್ಯದಲ್ಲಿ 2019ರ ವಿಧಾನಸಭಾ ಚುನಾವಣೆಯ ನಂತರ ಶಿವಸೇನಾ ಮತ್ತು ಬಿಜೆಪಿ ಪಕ್ಷಗಳು ಬೇರ್ಪಟ್ಟವು. ಐದು ವರ್ಷಗಳ ಅವಧಿಯಲ್ಲಿ ಎರಡೂ ಪಕ್ಷಗಳಿಗೆ ತಲಾ ಎರಡೂವರೆ ವರ್ಷಗಳ ಮುಖ್ಯಮಂತ್ರಿ ಸ್ಥಾನ ನೀಡುವ ಒಪ್ಪಂದದ ಕುರಿತು ಶಿವಸೇನಾ ಪ್ರಸ್ತಾಪಿಸಿತ್ತು. ಆದರೆ ಬಿಜೆಪಿ ಅದನ್ನು ಒಪ್ಪಲಿಲ್ಲ. ಆಗ ಶಿವಸೇನಾ ಸರ್ಕಾರ ರಚಿಸಲು ಪ್ರತಿಸ್ಪರ್ಧಿ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಇದನ್ನೂ ಓದಿ: ನೂತನ ಸರ್ಕಾರಕ್ಕೆ ನಾವು ತೊಂದರೆ ಕೊಡುವುದಿಲ್ಲ: ಸಂಜಯ್‌ ರಾವತ್‌

    ನಿನ್ನೆ ಏನಾಯಿತು? ನಾನು ಅಮಿತ್ ಶಾಗೆ ಈ ಹಿಂದೆಯೂ ಎರಡೂವರೆ ವರ್ಷ ಅವಧಿಗೆ (ಶಿವಸೇನಾ-ಬಿಜೆಪಿ ಮೈತ್ರಿಯ ಸಂದರ್ಭದಲ್ಲಿ) ಶಿವಸೇನಾ ನಾಯಕ ಸಿಎಂ ಆಗಬೇಕು ಎಂದು ಹೇಳಿದ್ದೆ. ಅವರು ಇದನ್ನು ಮೊದಲೇ ಮಾಡಿದ್ದರೆ, ಮಹಾ ವಿಕಾಸ್ ಅಘಾಡಿ ಇರುತ್ತಿರಲಿಲ್ಲ ಎಂದು ಉದ್ಧವ್‌ ತಿಳಿಸಿದ್ದಾರೆ.

    ಸರ್ಕಾರ ರಚನೆಯಾದ ರೀತಿ ಮತ್ತು ಶಿವಸೇನಾ ಕಾರ್ಯಕರ್ತ ಎಂದು ಕರೆಸಿಕೊಳ್ಳುವವರನ್ನು ಸಿಎಂ ಮಾಡಿದ್ದನ್ನು ನೋಡಿದೆವು. ಅಮಿತ್ ಶಾ ಅವರಿಗೂ ಹಿಂದೆ ಅದನ್ನೇ ಹೇಳಿದ್ದೆ. ಇದನ್ನು ಗೌರವಯುತವಾಗಿ ಮಾಡಬಹುದಿತ್ತು. ಆ ಸಮಯದಲ್ಲಿ ಶಿವಸೇನಾ ಅಧಿಕೃತವಾಗಿ ನಿಮ್ಮೊಂದಿಗಿತ್ತು. ಏಕನಾಥ್ ಶಿಂಧೆ ಶಿವಸೇನಾ ಸಿಎಂ ಅಲ್ಲ ಎಂದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಪ್ರೊಫೈಲ್ ಚೇಂಜ್ ಮಾಡಿದ ಶಿಂಧೆ – ಬಾಳ್ ಠಾಕ್ರೆ ಫೋಟೋ ಜೊತೆಗೆ ಕೊಟ್ಟ ಸಂದೇಶವೇನು?

    Live Tv

  • ಕೊನೇ ಕ್ಷಣದಲ್ಲಿ ಔರಂಗಾಬಾದ್, ಉಸ್ಮಾನಾಬಾದ್‌ ನಗರದ ಹೆಸರನ್ನೇ ಬದಲಿಸಿದ ಎಂವಿಎ ಸರ್ಕಾರ

    ಕೊನೇ ಕ್ಷಣದಲ್ಲಿ ಔರಂಗಾಬಾದ್, ಉಸ್ಮಾನಾಬಾದ್‌ ನಗರದ ಹೆಸರನ್ನೇ ಬದಲಿಸಿದ ಎಂವಿಎ ಸರ್ಕಾರ

    ಮುಂಬೈ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಕೈಗೊಂಡಂತೆ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ನಗರಗಳ ಹೆಸರನ್ನು ಬದಲಾಯಿಸಿ ತೀರ್ಮಾನ ಕೈಗೊಂಡಿದೆ.

    ಮಹಾರಾಷ್ಟ್ರದ ಸರ್ಕಾರ ಪತನದ ಅಂಚಿನಲ್ಲಿದ್ದು, ಬುಧವಾರ ಉದ್ಧವ್ ಠಾಕ್ರೆ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಹಠಾತ್ತನೆ ಪ್ರಮುಖ ನಗರಗಳ ಹೆಸರನ್ನು ಬದಲಿಸಲಾಗಿದೆ. ಇದನ್ನೂ ಓದಿ: ಮದರಸಾಗಳಲ್ಲಿ ಮಕ್ಕಳಿಗೆ ರುಂಡ ಕತ್ತರಿಸುವ ಕಾನೂನನ್ನೇ ಬೋಧಿಸಲಾಗುತ್ತಿದೆ – ಆರಿಫ್ ಖಾನ್ ಕಿಡಿ

    ಔರಂಗಬಾದ್ ಅನ್ನು ‘ಸಂಭಾಜಿನಗರ’ ಹಾಗೂ ಉಸ್ಮಾನಾಬಾದ್ ಅನ್ನು ‘ಧಾರಶಿವ್’ ಎಂದು ಮರುನಾಮಕರಣ ಮಾಡಲು ಸಂಪುಟ ಅನುಮೋದಿಸಿದೆ. ಇದರೊಂದಿಗೆ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(ಎನ್‌ಎಂಐಎ) ಸ್ಥಳೀಯ ನಾಯಕ ಡಿಬಿ ಪಾಟೀಲ್ ಹೆಸರನ್ನು ಮರುನಾಮಕರಣಗೊಳಿಸಲು ಅನುಮೋದನೆ ನೀಡಿದೆ. ಇದನ್ನೂ ಓದಿ: ರಿಲಯನ್ಸ್ ರಿಟೇಲ್ ಅಧ್ಯಕ್ಷೆಯಾಗಲಿದ್ದಾರೆ ಅಂಬಾನಿ ಪುತ್ರಿ ಇಶಾ

    ಸಭೆ ಮುಕ್ತಾಯದ ಬಳಿಕ ಮಾತನಾಡಿದ ಠಾಕ್ರೆ, ನೀವು ನನ್ನೊಂದಿಗೆ ಇರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ನನ್ನವರೇ ನನಗೆ ದ್ರೋಹ ಮಾಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

    ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗುರುವಾರ ವಿಶ್ವಾಸಮತ ಯಾಚನೆಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಸೂಚಿಸಿದ್ದಾರೆ.

    Live Tv

  • ಶಿವಸೇನಾ ಬಾಳಾಸಾಹೇಬ್ ಎಂದು ಹೆಸರಿಟ್ಟುಕೊಂಡ ರೆಬೆಲ್ ಶಾಸಕರ ಗುಂಪು

    ಶಿವಸೇನಾ ಬಾಳಾಸಾಹೇಬ್ ಎಂದು ಹೆಸರಿಟ್ಟುಕೊಂಡ ರೆಬೆಲ್ ಶಾಸಕರ ಗುಂಪು

    ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಏಕನಾಥ್ ಶಿಂಧೆ ಬಣದ ಶಿವಸೇನೆ ಬಂಡಾಯ ಶಾಸಕರು ತಮ್ಮ ಗುಂಪಿಗೆ ಶಿವಸೇನಾ ಬಾಳಾಸಾಹೇಬ್ ಎಂದು ಹೆಸರಿಟ್ಟಿದ್ದಾರೆ.

    ಏಕನಾಥ್ ಶಿಂಧೆ ನೇತೃತ್ವದ ಶಾಸಕರು ಶಿವಸೇನಾ ಬಾಳಾಸಾಹೇಬ್ ಎಂಬ ಹೊಸ ಗುಂಪನ್ನು ರಚಿಸಿದ್ದಾರೆ ಎಂದು ಮಾಜಿ ಗೃಹ ಖಾತೆ ರಾಜ್ಯ ಸಚಿವ ಮತ್ತು ಬಂಡಾಯ ಶಾಸಕ ದೀಪಕ್ ಕೇಸರ್ಕರ್ ತಿಳಿಸಿದರು.

    ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶಿವಸೇನಾ ಕಾರ್ಯಕಾರಿಣಿ ಸಭೆ ನಡೆಸುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶಿವಸೇನಾ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಅದರ 38 ಬಂಡಾಯ ಶಾಸಕರು ಗುವಾಹಟಿಯಲ್ಲಿ ಬೀಡುಬಿಟ್ಟಿದ್ದಾರೆ.ಇದನ್ನೂ ಓದಿ: ಸೇಡಿಗಾಗಿ ರೆಬೆಲ್ ಶಾಸಕರ ಕುಟುಂಬದ ಭದ್ರತೆಯನ್ನು ಸರ್ಕಾರ ಹಿಂಪಡೆದಿದೆ- ಶಿಂಧೆ ಆರೋಪ

    ಮಹಾರಾಷ್ಟ್ರ ಬಿಕ್ಕಟ್ಟಿನಿಂದಾಗಿ ಶಿವಸೇನಾ ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಶಿವಸೈನಿಕರು ಬಂಡಾಯ ಶಾಸಕರ ಕಚೇರಿಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದ್ದಾರೆ. ಶಿವಸೇನಾ ಕಾರ್ಯಕರ್ತರು ಪುಣೆಯಲ್ಲಿರುವ ಬಂಡಾಯ ಪಕ್ಷದ ಶಾಸಕ ತಾನಾಜಿ ಸಾವಂತ್ ಅವರ ಕಚೇರಿಗೆ ದಾಳಿ ನಡೆಸಿದ್ದಾರೆ. ಸಾವಂತ್ ಅವರು ಏಕನಾಥ್ ಶಿಂಧೆ ಬಣದ ಬಂಡಾಯ ಶಿವಸೇನಾ ಶಾಸಕರಲ್ಲಿ ಒಬ್ಬರಾಗಿದ್ದು, ಪ್ರಸ್ತುತ ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿದ್ದಾರೆ.

    ಇದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರೋಧ ವ್ಯಕ್ತಪಡಿಸಿದ್ದು, ಕೆಲವರು ಏನನ್ನಾದರೂ ಹೇಳಲು ನನ್ನನ್ನು ಕೇಳುತ್ತಿದ್ದಾರೆ ಆದರೆ ಬಂಡಾಯ ಶಾಸಕರು ಏನು ಬೇಕಾದರೂ ಮಾಡಬಹುದು. ಅವರ ವಿಷಯಗಳಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ. ಅವರು ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ಯಾರೂ ಬಾಳಾಸಾಹೇಬ್ ಠಾಕ್ರೆ ಹೆಸರನ್ನು ಬಳಸಬಾರದು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮುಂಬೈಯಲ್ಲಿ ಜೂನ್ 30ರವರೆಗೂ 144 ಸೆಕ್ಷನ್ ಜಾರಿ

    Live Tv