Tag: muzrai department

  • ಕಾಶಿ ಯಾತ್ರೆಗೆ ಮುಜರಾಯಿ ಇಲಾಖೆಯಿಂದ ವಿಶೇಷ ರೈಲು

    ಕಾಶಿ ಯಾತ್ರೆಗೆ ಮುಜರಾಯಿ ಇಲಾಖೆಯಿಂದ ವಿಶೇಷ ರೈಲು

    – ಕರ್ನಾಟಕ ಭಾರತ್ ಗೌರವ್ ಕಾಶಿಯಾತ್ರೆಯ 4ನೇ ರೈಲಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

    ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯಿಂದ (Muzrai Department) ಕಾಶಿ ಯಾತ್ರೆಗೆ (Kashi Darshan) ವಿಶೇಷ ರೈಲು (Train) ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ ಭಾರತ್ ಗೌರವ್ ಕಾಶಿಯಾತ್ರೆಯ ನಾಲ್ಕನೇ ರೈಲಿಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.

    ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಟಿರುವ ಕರ್ನಾಟಕ ಭಾರತ್ ಗೌರವ್ ಕಾಶಿಯಾತ್ರೆ ರೈಲು ವಾರಣಾಸಿ, ಅಯೋಧ್ಯೆ, ಪ್ರಯಾಗ್ ರಾಜ್ ದರ್ಶನ ಮಾಡಲಿರುವ ಯಾತ್ರ್ರಿಗಳನ್ನು ಕರೆದೊಯ್ಯಲಿದೆ. ಒಟ್ಟು 8 ದಿನಗಳ ಕಾಶಿ ಪ್ರವಾಸಕ್ಕೆ ಒಬ್ಬರಿಗೆ 20 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಇದರಲ್ಲಿ ಸಬ್ಸಿಡಿ 5 ಸಾವಿರ ರೂ. ಸರ್ಕಾರದಿಂದ ಸಿಗಲಿದೆ. ಅಂದರೆ ಒಬ್ಬರಿಗೆ 15 ಸಾವಿರ ರೂ. ಖರ್ಚು ಪ್ರಯಾಣಿಕರಿಗೆ ಬರಲಿದೆ. ಊಟ, ವಸತಿ ವ್ಯವಸ್ಥೆ ಸಹ ಇರಲಿದೆ. 700 ಸೀಟ್ ಸಾಮಥ್ರ್ಯ ಹೊಂದಿರುವ ರೈಲಿನಲ್ಲಿ ಸದ್ಯ 403 ಸೀಟ್ ಬುಕ್ಕಿಂಗ್ ಆಗಿವೆ. ಇದನ್ನೂ ಓದಿ: ಸರ್ಕಾರಿ ಕಾರ್ಯಕ್ರಮದಲ್ಲಿ ಯತೀಂದ್ರ ಸಿದ್ದರಾಮಯ್ಯ ಭಾಗಿ – ಅಹವಾಲು ಕೊಡಲು ಮುಗಿಬಿದ್ದ ಜನ

    ಯಶವಂತಪುರ ರೈಲು ನಿಲ್ದಾಣದಿಂದ ಕಾಶಿಗೆ ತಲುಪಲು ಎರಡು ದಿನ ಆಗಲಿದೆ. ವಾರಣಾಸಿಗೆ ತಲುಪಿದ ಬಳಿಕ ಗಂಗಾ ಸ್ನಾನ, ತುಳಸಿ ಮಂದಿರ ದರ್ಶನ, ಶ್ರೀ ಹನ್ಮಾನ್ ದರ್ಶನ, ಕಾಶಿ ವಿಶ್ವನಾಥ ದರ್ಶನ ಪಡೆದ ಬಳಿಕ ಒಂದು ದಿನ ಕಾಶಿಯಲ್ಲಿ ತಂಗುವುದು. ಬಳಿಕ 5ನೇ ದಿನ ವಾರಣಾಸಿಯಿಂದ ಆಯೋಧ್ಯೆಗೆ ತೆರಳುವುದು. ಇಲ್ಲಿ ಶ್ರೀರಾಮ ಭೂಮಿ ದರ್ಶನ ಮಾಡಿ, ಸಂಜೆ ಸರಾಯು ಆರತಿ ವೀಕ್ಷಣೆ ಮಾಡುವುದು. ಸಂಜೆಯ ಬಳಿಕ ಪ್ರಯಾಗ್ ರಾಜ್‍ಗೆ ಪ್ರಯಾಣ, 6ನೇ ದಿನ ಪ್ರಯಾಗ್ ರಾಜ್ ತಲುಪುವ ರೈಲು ತಲುಪಲಿದೆ. ಬಳಿಕ ತ್ರಿವೇಣಿ ಸಂಗಮ ಸ್ನಾನ, ಶ್ರೀ ಹನುಮಾನ್ ಮಂದಿರ ದರ್ಶನ ಇರಲಿದೆ. ಬಳಿಕ ಅದೇ ದಿನ ಪ್ರಯಾಗ್ ರಾಜ್‍ನಿಂದ ಬೆಂಗಳೂರಿಗೆ ರೈಲು ಹೊರಡಲಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಮುಜರಾಯಿ ಸಚಿವ ರಾಮಲಿಂಗರೆಡ್ಡಿಯವರು, ಹಿಂದೆ ಮೂರು ಟ್ರಿಪ್ ಆಗಿದೆ. ಇದು ನಾಲ್ಕನೇ ಟ್ರಿಪ್, ಈ ಬೋಗಿಗಳು ರಾಜ್ಯ ಸರ್ಕಾರದ್ದಾಗಿದ್ದು, ರಾಜ್ಯ ಸರ್ಕಾರವೇ ಹಣ ಕೊಟ್ಟು ಮಾಡಿಸಿದೆ. ಮುಂದೆ ಬೇರೆ ಭಾಗಗಳಿಗೂ ಈ ಬೋಗಿಗಳನ್ನು ಬಳಕೆ ಮಾಡಲಾಗುತ್ತದೆ. ಪ್ರವಾಸದ ವೇಳೆ ಊಟದ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳಾಗಿವೆ. ರೈಲಿನಲ್ಲಿ ರಾಜ್ಯ ಆರೋಗ್ಯ ಇಲಾಖೆಯ ಇಬ್ಬರು ವೈದ್ಯರು ಇರಲಿದ್ದಾರೆ. ಆಗಸ್ಟ್ 15ಕ್ಕೆ ಮತ್ತೆ 5ನೇ ಕಾಶಿಯಾತ್ರೆ ಆರಂಭವಾಗಲಿದೆ ಎಂದಿದ್ದಾರೆ.

    ರಾಜ್ಯದಲ್ಲಿ ಎಲ್ಲೆಲ್ಲಿ ನಿಲ್ದಾಣಗಳಿವೆ: ಯಶವಂತಪುರ, ದಾವಣಗೆರೆ, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗದಲ್ಲಿ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಸಿ.ಟಿ.ರವಿಗೆ ಕೊಕ್ – ಒಲಿಯುತ್ತಾ ರಾಜ್ಯಾಧ್ಯಕ್ಷ ಪಟ್ಟ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹರ್ಷವರ್ಧನ್ ಪ್ರಸ್ತಾವನೆ ತಡೆ ಹಿಡಿಯಲಾಗಿದೆ- ಶಶಿಕಲಾ ಜೊಲ್ಲೆ ಸ್ಪಷ್ಟನೆ

    ಹರ್ಷವರ್ಧನ್ ಪ್ರಸ್ತಾವನೆ ತಡೆ ಹಿಡಿಯಲಾಗಿದೆ- ಶಶಿಕಲಾ ಜೊಲ್ಲೆ ಸ್ಪಷ್ಟನೆ

    ಚಿಕ್ಕೋಡಿ: ಶಾಸಕ ಹರ್ಷವರ್ಧನ್ (B.Harshavardhan) ಅವರ ಪ್ರಸ್ತಾವನೆ ಯಾವ ರೀತಿ ಕ್ಲೀಯರ್ (Clear) ಆಗಿದೆ ಎಂದು ಗೊತ್ತಿಲ್ಲ. ನಮ್ಮ ಕಡೆಯಿಂದ ಅದು ಬೇಡ ಎಂದು ಆಗಿತ್ತು. ಈ ವಿಚಾರವನ್ನು ಸಿಎಂ ಅವರ ಗಮನಕ್ಕೆ ತಂದು ಪ್ರಸ್ತಾವನೆಯನ್ನು ತಡೆ ಹಿಡಿಯಲಾಗಿದೆ ಎಂದು ಮುಜರಾಯಿ ಇಲಾಖೆ (Muzrai Department) ಸಚಿವೆ ಶಶಿಕಲಾ ಜೊಲ್ಲೆ (Shashikala Annasaheb Jolle) ಸ್ಪಷ್ಟನೆ ನೀಡಿದರು.

    ಶ್ರೀಕಂಠೇಶ್ವರ ದೇವಸ್ಥಾನದ (Srikanteshwara Temple, Nanjangud) ನಿಧಿಯಲ್ಲಿರುವ ಹಣ ಬಳಕೆ ಕುರಿತು ಹರ್ಷವರ್ಧನ್ ಅವರ ಪ್ರಸ್ತಾವನೆ ಬಗ್ಗೆ ಚಿಕ್ಕೋಡಿ (Chikkodi) ತಾಲೂಕಿನ ಅಂಕಲಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡು ಶಾಸಕ ಹರ್ಷವರ್ಧನ್ ಶ್ರೀಕಂಠೇಶ್ವರ ದೇವಸ್ಥಾನದ ನಿಧಿಯಲ್ಲಿರುವ ಹಣ ಬಳಕೆ ಬಗ್ಗೆ ನನ್ನ ಬಳಿ ಪ್ರಸ್ತಾವನೆ ತಂದಿದ್ದರು. ದೇವಸ್ಥಾನದ ದುಡ್ಡಿನಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಆಗುವುದಿಲ್ಲ ಎಂದು ನಾನು ತಿರಸ್ಕಾರ ಮಾಡಿದ್ದೆ. ಸಿಎಂ ಅವರಿಗೆ ತಪ್ಪು ಮಾಹಿತಿಯಿಂದ ಈ ರೀತಿ ಆಗಿರಬಹುದು. ಈ ಬಗ್ಗೆ ಸಿಎಂ ಅವರಿಗೆ ಕರೆ ಮಾಡಿದ್ದೆ. ಆದರೆ ಅವರು ಮಹಿಳಾ ದಿನಾಚರಣೆಯಲ್ಲಿದ್ದರು. ಈ ಕುರಿತು ಸಿಎಂ ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: EXCLUSIVE: ದೇವರ ದುಡ್ಡನ್ನೂ ಬಿಡದ ನಾಯಕರು- ಮುಜರಾಯಿ ಹಣದ ಮೇಲೆ ಬಿಜೆಪಿ ಶಾಸಕನ ಕಣ್ಣು

    ಶಾಸಕ ಹರ್ಷವರ್ಧನ್ ಮಾಡಿದ್ದು ತಪ್ಪು. ಈ ರೀತಿ ಹಣ ಬಳಕೆ ಮಾಡುವುದಕ್ಕೆ ಆಗುವುದಿಲ್ಲ. ಆದರೆ ಶಾಸಕರು ಮಾಡಿರುವ ಪ್ರಸ್ತಾವನೆಯನ್ನು ತಡೆ ಹಿಡಿಯಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜನಲ್ಲ, ದೊರೆ ರಾಮಭೋಜ ನೀಡಿದ್ದು- ಪೇಜಾವರ ಶ್ರೀ ಸ್ಪಷ್ಟನೆ

  • ಧಾರ್ಮಿಕ ದತ್ತಿ ಇಲಾಖೆ ಬ್ರಾಹ್ಮಣರ ನಡುವೆ ಹುಳಿ ಹಿಂಡುವ ಕೆಲಸ ಮಾಡುತ್ತಿದೆ – ಮಾಧ್ವ ವಿದ್ವಾಂಸರು ಗರಂ

    ಧಾರ್ಮಿಕ ದತ್ತಿ ಇಲಾಖೆ ಬ್ರಾಹ್ಮಣರ ನಡುವೆ ಹುಳಿ ಹಿಂಡುವ ಕೆಲಸ ಮಾಡುತ್ತಿದೆ – ಮಾಧ್ವ ವಿದ್ವಾಂಸರು ಗರಂ

    ಉಡುಪಿ: ಧಾರ್ಮಿಕ ದತ್ತಿ ಇಲಾಖೆಯ (Muzrai Department) ದೇಗುಲದಲ್ಲಿ (Temple) ವೈಷ್ಣವರು ತಪ್ತ ಮುದ್ರಾಧಾರಣೆ (Tapta Mudra Dharana), ಫೋಟೋ ಇಟ್ಟು ಸಾರ್ವಜನಿಕ ಪೂಜೆ ಮಾಡಬಾರದು ಎಂಬ ಆದೇಶಕ್ಕೆ ಉಡುಪಿಯ (Udupi) ಮಾಧ್ವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂದ್ರೆ ಇದೇನಾ ಅಂತ ವಿದ್ವಾಂಸರು ಇಲಾಖೆಯ ಆದೇಶವನ್ನು ಕಟುವಾಗಿ ಟೀಕಿಸಿದ್ದಾರೆ.

    ಉಡುಪಿ ಕೃಷ್ಣಮಠ (Udupi Mutt) ಸೇರಿದಂತೆ ಅಷ್ಟಮಠಗಳಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಮಾಧ್ವ ಪಂಡಿತರು ಆದೇಶಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜನಪ್ರತಿನಿಧಿಗಳ ಜೊತೆ ಮಾತನಾಡಿ ವಿವರಿಸಿದ್ದಾರೆ. ಒಂದಿಬ್ಬರು ಸಂಕುಚಿತ ಮನಸ್ಸಿನವರು ತ್ರಿಮತಸ್ಥರ ನಡುವೆ ಹುಳಿ ಹಿಂಡುವ ಕೆಲಸ ಮಾಡಿದ್ದಾರೆ. ಕ್ಷುಲ್ಲಕ ಮಾತುಗಳಿಗೆ ಕಿವಿ ಕೊಟ್ಟರೆ ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗಲು ಸಾಧ್ಯವೇ? ದೇವಸ್ಥಾನದ ಚಾವಡಿ 10 ಮನಸ್ಸಿನ ಸದ್ವಿಚಾರಗಳನ್ನು ಇಡೀ ಸಮಾಜಕ್ಕೆ ಕೊಡಬೇಕು. ಆಚಾರ ವಿಚಾರದಲ್ಲಿ ತಪ್ಪು ಹುಡುಕಿ ಹುಡುಕಿ ಹುಡುಕಿ ರಾಡಿ ಎಬ್ಬಿಸುವ ಕೆಲಸವನ್ನು ಬಿಟ್ಟುಬಿಡಿ ಎಂದು ಧಾರ್ಮಿಕ ವಿದ್ವಾಂಸ ವಾಸುದೇವ ಭಟ್ ಪೆರಂಪಳ್ಳಿ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಸರ್ಕಾರಿ ದೇಗುಲದಲ್ಲಿ ತಪ್ತಮುದ್ರಾಧಾರಣೆಗೆ ಬ್ರೇಕ್ – ಸತ್ಯನಾರಾಯಣ ಪೂಜೆ, ಶನಿಕಥೆಗೆ ಅಡ್ಡಿ

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಾಸುದೇವ ಭಟ್, ಸುತ್ತೋಲೆಯನ್ನು ತಂದಿರುವ ರಾಜ್ಯ ಸರ್ಕಾರದ ನಡೆಯ ಬಗ್ಗೆ ನಮಗೆ ಆಶ್ಚರ್ಯವಾಗಿದೆ. ಸರ್ಕಾರದ ಸುತ್ತೋಲೆ ಬಹಳ ಅಸಂಗತವಾಗಿದೆ. ಧಾರ್ಮಿಕ ವಿದ್ವಾಂಸರು ವಿಮರ್ಶೆ ಮಾಡಬೇಕಾದ ಸ್ಥಿತಿಯಿದೆ. ಆದೇಶ ಹೊರಡಿಸುವ ಮೊದಲು ಅವಲೋಕಿಸುವ ಕೆಲಸವನ್ನು ಮಾಡಿಲ್ಲ. ಯಾರದೋ ಒತ್ತಾಯ ಮತ್ತು ವೈಯಕ್ತಿಕ ಹಿತಾಸಕ್ತಿಯಿಂದ ಈ ಆದೇಶ ಹೊರಡಿಸುವ ರೀತಿಯಲ್ಲಿ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಸುತ್ತೋಲೆಯನ್ನು ತರಾತುರಿಯಿಂದ ತಂದ ಹಾಗೆ ಕಾಣಿಸುತ್ತಿದೆ. ಕೆಲವು ಸಂಪ್ರದಾಯಗಳನ್ನು ಉದಾಹರಣೆಗೆ ತಪ್ತ ಮುದ್ರಾಧಾರಣೆಯನ್ನು ಸರ್ಕಾರಿ ದೇವಸ್ಥಾನಗಳಲ್ಲಿ ಮಾಡಬಾರದು ತಪ್ತ ಮುತ್ರಧಾರಣೆ ಮಾಡುವುದರಿಂದ ಒಂದು ದೇವಸ್ಥಾನದ ಆಚಾರ ವಿಚಾರಕ್ಕೆ ಯಾವುದೇ ಸಮಸ್ಯೆಗಳು ಬರುವುದಿಲ್ಲ. ತಪ್ತ ಮುದ್ರಾಧಾರಣೆಯನ್ನು ಮಠಾಧೀಶರುಗಳು ಮನೆ ಮನೆಗಳಲ್ಲಿ ಮಾಡುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಠಾಧೀಶರುಗಳು ಈ ವಿಧಿ ನೆರವೇರಿಸಬೇಕು. ಮುದ್ರಾಧಾರಣೆ ಯಾರಿಗೆ ಆಸಕ್ತಿ ಇದೆ ಅವರು ಅದರಲ್ಲಿ ಭಾಗವಹಿಸಬಹುದು. ಯಾರಿಗೂ ಒತ್ತಾಯ ಮಾಡಿ ಮುದ್ರೆ ಹಾಕುವುದಿಲ್ಲ. ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ ಎಂದು ಹೇಳಿದರು.

    ಆಷಾಢ ಶುದ್ಧ ಏಕಾದಶಿ ಮತ್ತು ಕಾರ್ತಿಕ ಶುದ್ಧ ಏಕಾದಶಿಯ ದಿನ ಮುದ್ರಾಧಾರಣೆಗೆ ಮಹತ್ವವಿದೆ. ಮಾಧ್ವ ಸಂಪ್ರದಾಯದ ಮಠಾಧೀಶರುಗಳು ಮುದ್ರಾಧಾರಣೆ ಮಾಡುತ್ತಾರೆ. ಆ ದಿನಗಳಲ್ಲಿ ತಪ್ತ ಮುತ್ರಾಧಾರಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಭಕ್ತರಿಗೆ ಗ್ರಾಮದ ದೇವಸ್ಥಾನ ಅಥವಾ ಊರಿನ ದೇವಸ್ಥಾನದಲ್ಲಿ ಮುದ್ರೆ ಹಾಕಲಾಗುತ್ತದೆ. ಈಶ್ವರ ದೇವಸ್ಥಾನ, ದುರ್ಗಾದೇವಿ ದೇವಸ್ಥಾನಗಳು ಸುಬ್ರಮಣ್ಯ ದೇವಸ್ಥಾನಗಳಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹೀಗೆ ಮುಜರಾಯಿ ವ್ಯಾಪ್ತಿಯ ಹಲವಾರು ದೇವಸ್ಥಾನಗಳಲ್ಲಿ ಅನುಕೂಲಕ್ಕೆ ತಕ್ಕಂತೆ ಮುದ್ರಾಧಾರಣೆ, ಸತ್ಯನಾರಾಯಣ ಕಥೆ ಮಾಡಿಕೊಂಡು ಹೋಗಲಾಗುತ್ತಿದೆ. ದೇವಸ್ಥಾನಗಳು ಇರುವುದೇ ಆಧ್ಯಾತ್ಮಿಕವಾದ ಧಾರ್ಮಿಕವಾದ ಕಾರ್ಯಕ್ರಮಗಳನ್ನು ಮಾಡಲು. ಹಲವಾರು ವರ್ಷಗಳಿಂದ ಸರ್ಕಾರಿ ದೇವಸ್ಥಾನಗಳಲ್ಲಿ ನಡೆದುಕೊಂಡು ಹೋಗ್ತಾ ಇದೆ. ಏಕಾಏಕಿ ಇದಕ್ಕೆ ಯಾಕೆ ವಿರೋಧ ಬಂತು ಎಂಬುದು ಅರ್ಥವಾಗುತ್ತಿಲ್ಲ. ಸರ್ಕಾರ ಸುತ್ತೋಲೆಯನ್ನು ವಾಪಸ್ ತೆಗೆದುಕೊಳ್ಳಬೇಕು. ಶತಮಾನಗಳಿಂದ ನಡೆದುಕೊಂಡು ಬಂದ ಆಗಮೊಕ್ತ ವಿಧಿ ವಿಧಾನಗಳು ಪರಂಪರೆಗಳು ಕಾಲಾವಧಿ ಪ್ರಕ್ರಿಯೆಗಳು ಪೂರಕವಾಗಿ ನಡೆಯುತ್ತಿದೆ. ಇದನ್ನೂ ಓದಿ: ಕೆಂಪೇಗೌಡ ಪೇಟದಲ್ಲಿ ಕಂಗೊಳಿಸಿದ ಪ್ರಧಾನಿ ಮೋದಿ

    ದೇವಸ್ಥಾನಗಳ ಭಕ್ತರಿಂದ ದೂರುಗಳು ಬಂದರೆ ವಿರೋಧಗಳು ವ್ಯಕ್ತವಾದರೆ ಸರ್ಕಾರ ಪರಾಮರ್ಶೆ ನಡೆಸಿ ಈ ಆದೇಶವನ್ನು ಹೊರಡಿಸಬೇಕಿತ್ತು. ದೂರೆಲ್ಲಿದೆ ಯಾರಿಂದ ಬಂದಿದೆ ಎಂಬುದೀಗ ಇರುವ ಪ್ರಶ್ನೆ. ಏಕಾಏಕಿ ಇಂತಹ ಎಡವಟ್ಟುಗಳನ್ನು ಯಾಕೆ ಮಾಡುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ತ್ರಿಮತಸ್ಥ ಬ್ರಾಹ್ಮಣರ ನಡುವೆ ಒಡಕು ತಂದಿಡುವ ಕೆಲಸವನ್ನು ಯಾರೋ ಮಾಡುತ್ತಿದ್ದಾರೆ. ಹಿಂದೂ ಸಮುದಾಯದ ನಡುವೆ ಕೆಲವು ಕ್ಷುಲ್ಲಕ ಕಾರಣಗಳನ್ನು ತಂದಿಟ್ಟು ಚಂದ ನೋಡುತ್ತಿದ್ದಾರೆ. ಯಾರ ಮೇಲೆಯೂ ಹಾನಿ ಮಾಡದ ಯಾರ ಮೇಲೆಯೂ ಸವಾರಿ ಮಾಡದ ಆಚರಣೆಗಳನ್ನು ದೇವಸ್ಥಾನಗಳಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ನಡೆಸಿದರೆ ತಪ್ಪೇನು? ದುರುದ್ದೇಶ ಇಲ್ಲದ ಆಚರಣೆಗಳು ಧಾರ್ಮಿಕ ಕೇಂದ್ರಗಳಲ್ಲಿ ನಡೆದರೆ ತಪ್ಪೇನು? ಮುದ್ರಾಧಾರಣೆಯಲ್ಲಿ ಪಾಲ್ಗೊಳ್ಳುವುದು ವೈಷ್ಣವ ಭಕ್ತರು ಮಾತ್ರ. ಹಲವಾರು ದೇವಸ್ಥಾನಗಳಲ್ಲಿ ವೈಷ್ಣವರೇ ಪೂಜೆಯನ್ನು ನೆರವೇರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಗೊಂದಲಗಳು ಆಗಿಲ್ಲ. ಅತಿ ಹೆಚ್ಚು ಸಂಖ್ಯೆಯಲ್ಲಿ ಶೈವರಿರುವ ಪ್ರದೇಶಗಳಲ್ಲಿ ಯಾವ ವೈಷ್ಣವರು ಕೂಡ ತಪ್ತ ಮುದ್ರಾಧಾರಣೆಯನ್ನು ಮಾಡುವುದಿಲ್ಲ. ಅಲ್ಲಿ ಯಾವುದೇ ಗೊಂದಲಗಳು ಆಗಿಲ್ಲ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆ ಈ ಸಂಪ್ರದಾಯ ಆಚರಣೆಯಲ್ಲಿ ಇದೆ ಎಂದು ವಾಸುದೇವ ಭಟ್ ವಿವರಿಸಿದರು. ಇದನ್ನೂ ಓದಿ: ಮೋದಿಯಿಂದಾಗಿ ನಳಿನ್ ಕುಮಾರ್ ಕಟೀಲ್ ಡಾಲರ್ ಪದ ಕೇಳಿದರೆ ಬೆಚ್ಚಿ ಬೀಳುತ್ತಾರೆ: ಕಾಂಗ್ರೆಸ್

    ಹಲವಾರು ಶೈವ ದೇವಸ್ಥಾನಗಳಲ್ಲಿ ವೈಷ್ಣವರೇ ಪೂಜೆ ಮಾಡಿಕೊಂಡು ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈಶ್ವರ ದೇವಸ್ಥಾನಗಳಲ್ಲಿ ವಿಷ್ಣು ಸಹಸ್ರನಾಮ ಬಹಳ ಕಾಲಗಳಿಂದ ನಡೆದುಕೊಂಡು ಬರುತ್ತಿದೆ. ದೇವಸ್ಥಾನದ ಚಾವಡಿಗಳಲ್ಲಿ ಧಾರ್ಮಿಕ ಕಾರ್ಯಗಳು ನಡೀತಾ ಇರಬೇಕು. ವಿಷ್ಣು ದೇವಸ್ಥಾನಗಳಲ್ಲಿ ರುದ್ರಯಾಗ ನಡೆಯುತ್ತದೆ. ದುರ್ಗಾ ದೇವಸ್ಥಾನಗಳಲ್ಲಿ ಸತ್ಯನಾರಾಯಣ ಪೂಜೆ, ಶನಿ ಪೂಜೆಗಳು ನಡೆದುಕೊಂಡು ಬರುತ್ತಿವೆ. ಯಾವುದೇ ದೇವರ ಭಾವಚಿತ್ರಗಳನ್ನು ದೇವಸ್ಥಾನದಲ್ಲಿ ಇಟ್ಟು ಪೂಜೆ ಮಾಡುತ್ತಿದ್ದೀರಿ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಶಿವ ದುರ್ಗೆ ವಿಷ್ಣುವಿನ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಇದು ತಪ್ಪು ಅಂತ ನೀವು ಹೇಳ್ತೀರಾ? ವರಮಹಾಲಕ್ಷ್ಮಿ, ಶನಿ ಪೂಜೆಗಳು ದೇವಸ್ಥಾನಗಳಲ್ಲಿ ನಡೆಯುತ್ತದೆ ಇದು ತಪ್ಪಾ ಎಂದು ಧಾರ್ಮಿಕ ದತ್ತಿ ಇಲಾಖೆಗೆ ಪ್ರಶ್ನೆ ಮಾಡಿದರು.

    ದೇವಸ್ಥಾನದ ಪದ್ಧತಿಗಳಿಗೆ ಇಂತಹ ಬೆಳವಣಿಗೆಗಳಿಂದ ಯಾವ ತೊಂದರೆ ಆಗಿದೆ ಎಂದು ಸ್ಪಷ್ಟಪಡಿಸಬೇಕು. ಅನಗತ್ಯವಾದ ಚರ್ಚೆಗೆ ಸರ್ಕಾರ ಎಡೆ ಮಾಡಿಕೊಟ್ಟಿದೆ. ಯಾವುದೋ ಕಲ್ಯಾಣ ಮಂಟಪಗಳು ಯುವಕ ಮಂಡಲ ಸಾರ್ವಜನಿಕ ಸಭಾಂಗಣದಲ್ಲಿ ನಡೆಯುವ ಬದಲು ಧಾರ್ಮಿಕ ಕೆಲಸಗಳು ದೇವಸ್ಥಾನಗಳಲ್ಲಿ ನಡೆದರೆ ಏನು ತಪ್ಪು? ದೇವಸ್ಥಾನಗಳಲ್ಲಿ ಋಷಿಮುನಿಗಳು ಆಚಾರತ್ರಯರ ಜಯಂತಿ ಮಾಡದೆ ಹೋದರೆ ಇದನ್ನೆಲ್ಲಾ ಸಾರ್ವಜನಿಕ ಕಟ್ಟೆಗಳಲ್ಲಿ ರಸ್ತೆ ಬದಿಗಳಲ್ಲಿ ಮಾಡಲು ಸಾಧ್ಯವೇ? ಧಾರ್ಮಿಕ ಸನಾತನ ಧರ್ಮದ ಚೌಕಟ್ಟಿನಲ್ಲಿ ಇಂಥ ಆಚರಣೆಗಳು ಆಗದಿದ್ದರೆ ಏನು ಪ್ರಯೋಜನ? ರಾಮಾನುಜಾಚಾರ್ಯರು ಶಂಕರಾಚಾರ್ಯರು ಮಧ್ವಾಚಾರ್ಯ ಜಯಂತಿ ಜಯಂತಿಗಳು ಒಂದು ದೇವಸ್ಥಾನಗಳಲ್ಲಿ ನಡೆಯುತ್ತಿದೆ ಎಂದರೆ ಖುಷಿ ಪಡಬೇಕು ಅದಕ್ಕೆ ವಿರೋಧ ವ್ಯಕ್ತಪಡಿಸುವುದಲ್ಲ. ಸನಾತನ ಧರ್ಮಕ್ಕೆ ಯಾರೆಲ್ಲ ಕೊಡುಗೆಗಳನ್ನು ಕೊಟ್ಟಿದ್ದಾರೆ ಅವರನ್ನು ದೇವಸ್ಥಾನಗಳಲ್ಲಿ ಆಚರಣೆ ಮಾಡಿದರೆ ಏನು ನಷ್ಟ. ಯಾರಿಗೆ ಏನು ಸಮಸ್ಯೆ. ಹಾಗಾದರೆ ಸಮಾಜಕ್ಕೆ ಕೊಡುವ ಸಂದೇಶಗಳಾದರೂ ಏನು ಸಮಾಜವನ್ನು ಒಗ್ಗೂಡಿಸುವ ಕೆಲಸ ಬಿಟ್ಟು ಅದರಲ್ಲಿ ಹುಳಿ ಹಿಂಡುವ ಕೆಲಸವನ್ನು ಮಾಡಬೇಡಿ. ಕೆಲಸದಲ್ಲಿ ಹುಳುಕು ಅನ್ನು ಹುಡುಕುವ ಪ್ರಯತ್ನ ಮಾಡಬಾರದು. ತಪ್ತ ಮುದ್ರಾಧಾರಣೆಯಿಂದ ದೈಹಿಕ ಕ್ಷಮತೆ. ವೈಜ್ಞಾನಿಕವಾಗಿ ದೇಹಕ್ಕೆ ಬೇಕಾಗುವಂತಹ ಕ್ಷಮತೆಯನ್ನು ತಪ್ತ ಮುದ್ರಾಧಾರಣೆ ಕೊಡುತ್ತದೆ. ಎಲ್ಲಾ ಸಮುದಾಯದವರು ಮುದ್ರಾಧಾರಣೆಯನ್ನು ಮಾಡಿಸಿಕೊಂಡು ಬರುತ್ತಾರೆ. ದೇಹದಲ್ಲಿ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ. ಚೆನ್ನೈನಲ್ಲಿ ಅನೇಕ ಸಂಖ್ಯೆಯಲ್ಲಿ ಬ್ರಾಹ್ಮಣರೇತರರು ಮುದ್ರಾ ಆಧಾರಣೆಯನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೇವಾಲಯಗಳಲ್ಲಿ ಮುದ್ರಾಧಾರಣೆ ಮಾಡುವಂತಿಲ್ಲ: ವಿವಾದಕ್ಕೆ ಕಾರಣವಾಯ್ತು ಮುಜರಾಯಿ ಇಲಾಖೆ ಆದೇಶ

    ದೇವಾಲಯಗಳಲ್ಲಿ ಮುದ್ರಾಧಾರಣೆ ಮಾಡುವಂತಿಲ್ಲ: ವಿವಾದಕ್ಕೆ ಕಾರಣವಾಯ್ತು ಮುಜರಾಯಿ ಇಲಾಖೆ ಆದೇಶ

    ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ ಆದೇಶವೊಂದು ಈಗ ವಿವಾದಕ್ಕೆ ಕಾರಣವಾಗಿದೆ.

    ಇಲಾಖಾ ವ್ಯಾಪ್ತಿಯ ದೇವಾಲಯಗಳಲ್ಲಿ ಮುದ್ರಾಧಾರಣೆ, ಜಯಂತಿ ಆಚರಣೆ ಮಾಡುವುದು, ಭಾವಚಿತ್ರಗಳನ್ನು ಅಳವಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿ ನವೆಂಬರ್ 2ರಂದು ಆದೇಶ ಹೊರಡಿಸಲಾಗಿದೆ.

    ಇವುಗಳೆಲ್ಲಾ ಆಗಮ ಶಾಸ್ತ್ರಕ್ಕೆ ವಿರುದ್ಧವಾಗಿದ್ದು, ಇವುಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ತಪ್ಪಿದಲ್ಲಿ ಅಂಥವರ ವಿರುದ್ಧ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

    ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಈ ಆದೇಶಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದು ಅಸಂಬದ್ಧ ಆದೇಶ. ಇದನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಮಾಧ್ವ ತತ್ವದ ಅನುಯಾಯಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮೋದಿ ಬೆಂಗಳೂರು ಡೈರಿ: ಎಷ್ಟು ಗಂಟೆಗೆ ಏನು ಕಾರ್ಯಕ್ರಮ? ಯಾವೆಲ್ಲ ರಸ್ತೆಗಳು ಬಂದ್‌?

     

     

    ತ್ರಿಮತಸ್ಥ ಬ್ರಾಹ್ಮಣ ಪಂಗಡಗಳ ನಡುವೆ ಒಡಕು ಮೂಡಿಸುವ ಪಿತೂರಿ ನಡೆಯುತ್ತಿದೆ. ದೇಗುಲಗಳಲ್ಲಿ ಆಚಾರ್ಯರ ಜಯಂತಿ ನಡೆಸಿದರೆ ತಪ್ಪೇನು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ವಿಶೇಷವಾಗಿ ಕರಾವಳಿ ಭಾಗದ ದೇವಾಲಯಗಳಲ್ಲಿ ಈ ಆದೇಶದಿಂದ ಸಮಸ್ಯೆ ಆಗುತ್ತದೆ. ಕೂಡಲೇ ಇದನ್ನು ಹಿಂಪಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳನ್ನು ಈ ಬಗ್ಗೆ ಕೇಳಿದರೆ ನನಗೆ ಈ ಆದೇಶದ ಬಗ್ಗೆ ಗೊತ್ತಿಲ್ಲ. ತಿಳಿದುಕೊಂಡು ಮಾತನಾಡುತ್ತೇನೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

    ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

    ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ ಒಂದು ತಿಂಗಳಿಂದ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಹರಿದುಬಂದಿದೆ. ಆಗಸ್ಟ್ ತಿಂಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಒಟ್ಟು 2,78,80,586 ರೂಪಾಯಿ ಸಂಗ್ರಹವಾಗಿದೆ.

    ಸಂಗ್ರಹವಾದ ಕಾಣಿಕೆಯಲ್ಲಿ 5,89,300 ರೂ.ಗಳಷ್ಟು ನಾಣ್ಯಗಳು ಹಾಗೂ 2,72,91,286 ರೂ.ನಷ್ಟು ನೋಟುಗಳಿವೆ. 65 ಗ್ರಾಂ. ಬಂಗಾರ, 1.15 ಕೆ.ಜಿ ಬೆಳ್ಳಿಯಿದೆ. ಜುಲೈ ತಿಂಗಳಲ್ಲಿ ಒಟ್ಟು 1,97,21,825 ರೂ. ಸಂಗ್ರಹವಾಗಿತ್ತು, ಜೂನ್‌ನಲ್ಲಿ 2,52,33,205 ರೂಪಾಯಿ ಹಾಗೂ ಮೇ ತಿಂಗಳಲ್ಲಿ 2,27,42,499 ರೂಪಾಯಿ ಸಂಗ್ರಹವಾಗಿತ್ತು. ಇದನ್ನೂ ಓದಿ: ಕೋಲಾರ ಗಣೇಶೋತ್ಸವ – ರಾತ್ರಿ 10 ಗಂಟೆ ಬಳಿಕ ಮನರಂಜನಾ ಕಾರ್ಯಕ್ರಮಕ್ಕೆ ಅವಕಾಶವಿಲ್ಲ

    ಈ ಬಾರಿ ಭಕ್ತರೊಬ್ಬರು 10 ರೂ. ನೋಟುಗಳಿಂದ ಮಾಡಿದ ಮಾಲೆಯನ್ನು ಕಾಣಿಕೆ ಹುಂಡಿಯಲ್ಲಿ ಹಾಕಿದ್ದು ವಿಶೇಷ ಕಾಣಿಕೆ ಎನಿಸಿದೆ ಎಂದು ಹುಂಡಿ ಎಣಿಕೆ ಕಾರ್ಯ ಮುಕ್ತಾಯದ ನಂತರ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ.

    ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ನೂರಾರು ಜನ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಲಬುರಗಿ ದೇವಸ್ಥಾನದಲ್ಲಿ ತಟ್ಟೆ ಹಣಕ್ಕೆ ಅರ್ಚಕರ ಫೈಟ್

    ಕಲಬುರಗಿ ದೇವಸ್ಥಾನದಲ್ಲಿ ತಟ್ಟೆ ಹಣಕ್ಕೆ ಅರ್ಚಕರ ಫೈಟ್

    ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಶ್ರೀ ರಟಕಲ್ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಸಂಸ್ಥಾನಿಕರು ಮತ್ತು ಮುಜರಾಯಿ ಅರ್ಚಕರು ತಟ್ಟೆ ಹಣಕ್ಕಾಗಿ ಕಚ್ಚಾಡಿಕೊಂಡಿದ್ದಾರೆ.

    ದೇವಸ್ಥಾನದಲ್ಲಿ ರೇವಣಸಿದ್ದೇಶ್ವರನ ಸಂಸ್ಥಾನಿಕರು ನಾವೇ ಅಂತ ಚನ್ನಬಸಪ್ಪ, ಮಲ್ಲಿಕಾರ್ಜುನ, ಸೋಮನಾಥ, ರೇವಣಸಿದ್ದಪ್ಪ ಹಾಗೂ ಗಿರೀಶ್ ಹೇಳ್ತಿದ್ದಾರೆ. ಆದರೆ ಇತ್ತೀಚೆಗೆ ಮುಜರಾಯಿ ಇಲಾಖೆ ನೇಮಿಸಿದ ಕೆಲ ಅರ್ಚಕರು ನಮ್ಮಿಂದ ಕಲಿತು ನಮಗೆ ತಿರುಗಿ ಬಿದ್ದಿದ್ದಾರೆ ಅಂತಾ ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಗೊಟಬಯ ರಾಜಪಕ್ಸೆಗೆ ಶಾಕ್ ಕೊಟ್ಟ ಸಿಂಗಾಪುರ – ದೇಶ ಬಿಟ್ಟು ಹೊರಡಿ ಎಂದು ಖಡಕ್ ಸೂಚನೆ

    ಈ ಅರ್ಚಕರ ಗಲಾಟೆ ಕಂಡು ಸೇಡಂ ಸಹಾಯಕ ಆಯುಕ್ತರು ತನಿಖೆಯನ್ನು ನಡೆಸಿದಾಗ, ಸಾಂಸ್ಥಾನಿಕ ಅರ್ಚಕರು ಎನ್ನುವುದಕ್ಕೆ ನಕಲಿ ದಾಖಲಾತಿ ನೀಡಿರುವುದು ಸ್ಪಷ್ಟವಾಗಿದೆ. ಜೊತೆಗೆ, ದೇವಸ್ಥಾನದಿಂದ ತೆಗೆದುಕೊಂಡು ಹೋದ ವಸ್ತುಗಳು ಮರಳಿ ಕೊಟ್ಟಿಲ್ಲ. ಈ ಬಗ್ಗೆ ದೂರು ದಾಖಲು ಮಾಡುವುದ್ದಾಗಿ ಚನ್ನಬಸಪ್ಪಗೆ ಎಚ್ಚರಿಕೆ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸೆ.7ರಿಂದ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಸೇವೆಗಳು ಆರಂಭ

    ಸೆ.7ರಿಂದ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಸೇವೆಗಳು ಆರಂಭ

    ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ದೇವಿ ದೇವಸ್ಥಾನ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಸರ್ವ ಸೇವೆಗಳು ಸೋಮವಾರದಿಂದ ಆರಂಭವಾಗಲಿದೆ. ಮುಜರಾಯಿ ಇಲಾಖೆಯ ಕಮಿಷನರ್ ಮೂಕಾಂಬಿಕ ದೇವಸ್ಥಾನಕ್ಕೆ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ನಿಂದ ದೇವಾಲಯದ ಆದಾಯಕ್ಕೆ ಭಾರೀ ಹೊಡೆತ- ಕಳೆದ ವರ್ಷ ಎಷ್ಟು? ಈ ವರ್ಷ ಎಷ್ಟು ಬಂದಿದೆ?

    ಸೋಮವಾರದಿಂದ ಎಲ್ಲಾ ಸೇವೆಗಳನ್ನು ಆರಂಭಿಸಲು ದೇಗುಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲೆಯ ಬೈಂದೂರು ತಾಲೂಕಿನ ಮೂಕಾಂಬಿಕೆ ಸನ್ನಿಧಿ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ವರಮಾನ ಇರುವ ದೇವಸ್ಥಾನ. ಲಾಕ್‍ಡೌನ್ ಆಗಿರೋದರಿಂದ ದೇವಸ್ಥಾನದಲ್ಲಿ ಯಾವುದೇ ಸೇವೆಗಳು ಭಕ್ತರಿಗೆ ಲಭ್ಯವಿರಲಿಲ್ಲ. ಹೀಗಾಗಿ ಕಳೆದ 5 ತಿಂಗಳಿಂದ ಕಾತುರರಾಗಿದ್ದ ಮೂಕಾಂಬಿಕಾ ಭಕ್ತರಿಗೆ ಈ ಆದೇಶ ಹರ್ಷ ತಂದಿದೆ.

    ಮೂಕಾಂಬಿಕಾ ಸನ್ನಿಧಾನದಲ್ಲಿ ಕುಂಕುಮಾರ್ಚನೆ, ಲಡ್ಡು ಪ್ರಸಾದ ತುಲಾಭಾರ ಸೇವೆಗಳು ಆರಂಭವಾಗಲಿದೆ. ಕೋವಿಡ್ 19 ನಿಯಮ ಪ್ರಕಾರ ಚಂಡಿಕಾಹೋಮ, ಬೆಳ್ಳಿ ರಥ, ಬಂಗಾರದ ರಥ ಸೇವೆ ನಡೆಸುವುದು ದೇವಸ್ಥಾನಕ್ಕೆ ಸವಾಲಾಗಿದೆ. ಈ ಸೇವೆಗಳಲ್ಲಿ ಎಷ್ಟು ಜನರಿಗೆ ಅವಕಾಶ ಕೊಡಬೇಕು ಎಂಬ ಬಗ್ಗೆ ದೇವಸ್ಥಾನಕ್ಕೆ ಸಾಕಷ್ಟು ಗೊಂದಲ ಇದೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಅರ್ಚಕರು ಜಿಲ್ಲಾಡಳಿತ ಚರ್ಚೆ ನಡೆಸಿ ನಿಯಮಗಳನ್ನು ರೂಪಿಸಲಿದ್ದಾರೆ.

    ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಮಧ್ಯಾಹ್ನ ಬರುವ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಇದೆ. ರಾತ್ರಿ ಊಟದ ವ್ಯವಸ್ಥೆ ಸದ್ಯಕ್ಕೆ ಇಲ್ಲ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಸುತಗುಂಡಿ ಮಾಹಿತಿ ನೀಡಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಎಲ್ಲಾ ಸೇವೆಗಳು ಆರಂಭವಾದರೂ ಕೇರಳ, ತಮಿಳುನಾಡು ಭಕ್ತರು ಸದ್ಯಕ್ಕೆ ಬರುವ ಲಕ್ಷಣ ಕಾಣಿಸುತ್ತಿಲ್ಲ.

    ನಾನು ತಿಂಗಳಿಗೆ ಒಂದು ಬಾರಿಯಾದರೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನವನ್ನು ಮಾಡುತ್ತೇನೆ. ಆದರೆ ಕಳೆದ 5 ತಿಂಗಳಿಂದ ದೂರದಲ್ಲಿ ನಿಂತು ದೇವರ ದರ್ಶನ ಮಾಡುತ್ತಿದ್ದೆ. ಇದರಿಂದ ಮನಸ್ಸಿಗೆ ಬಹಳ ಬೇಸರವಾಗುತ್ತಿತ್ತು. ದೇವಸ್ಥಾನದಲ್ಲಿ ಅಪ್ರದಕ್ಷಿಣೆ ಮಾಡುವುದು ಮನಸ್ಸಿಗೆ ಕಿರಿಕಿರಿ ಮಾಡುತ್ತಿತ್ತು. ಇದೀಗ ದೇವಸ್ಥಾನದಲ್ಲಿ ದೇವರ ಸೇವೆಗಳು ಆರಂಭವಾಗುತ್ತದೆ ಎಂದು ಕೇಳಿ ಖುಷಿಯಾಗಿದೆ. ದೇವರನ್ನು ಹತ್ತಿರದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. ಅದರಲ್ಲೂ ಆಷಾಢ, ಶ್ರಾವಣ ಮಾಸದಲ್ಲಿ ದೇವಿ ದೇವಸ್ಥಾನಗಳಿಗೆ ಹಲವಾರು ವರ್ಷಗಳಿಂದ ಭೇಟಿ ಕೊಡುತ್ತಿದ್ದೇನೆ. ಮೂಕಾಂಬಿಕೆ ಸನ್ನಿಧಿಯಲ್ಲಿ ಸೇವೆಗಳು ಆರಂಭವಾಗಿದೆ ಎಂದು ತಿಳಿದು ಬಹಳ ಸಂತೋಷವಾಗುತ್ತಿದೆ ಎಂದು ಮೂಕಾಂಬಿಕೆಯ ಭಕ್ತೆ ಸಂಧ್ಯಾ ರಮೇಶ್ ಹೇಳಿದ್ದಾರೆ.

  • ಮುಜರಾಯಿ ಇಲಾಖೆಯ ಸಪ್ತಪದಿ ವಿವಾಹಕ್ಕೂ ಶೀಘ್ರದಲ್ಲೇ ದಿನ ನಿಗದಿ- ಸಚಿವ ಕೋಟಾ

    ಮುಜರಾಯಿ ಇಲಾಖೆಯ ಸಪ್ತಪದಿ ವಿವಾಹಕ್ಕೂ ಶೀಘ್ರದಲ್ಲೇ ದಿನ ನಿಗದಿ- ಸಚಿವ ಕೋಟಾ

    ಮಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಮುಜರಾಯಿ ಇಲಾಖೆಯ ಒಟ್ಟು ಆದಾಯದಲ್ಲಿ ಶೇ.30 ರಿಂದ 35ರಷ್ಟು ಕಡಿಮೆ ಆಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಸಚಿವರು, ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಿಂದ ಪ್ರತಿವರ್ಷ ಅಂದಾಜು 600 ಕೋಟಿ ರೂ. ಆದಾಯ ಬರುತಿತ್ತು. ಆದ್ರೆ ಲಾಕ್‍ಡೌನ್‍ನಿಂದ ಒಟ್ಟು ಆದಾಯದ ಪ್ರಮಾಣವು ಕಡಿಮೆಯಾಗಿದೆ ಎಂದು ತಿಳಿಸಿದರು.

    ಲಾಕ್‍ಡೌನ್‍ನಿಂದಾಗಿ ಮುಜರಾಯಿ ಇಲಾಖೆಯಿಂದ ನಡೆಯಬೇಕಿದ್ದ ಸಪ್ತಪದಿ ವಿವಾಹವೂ ಮುಂದೂಡಲಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಯಯೋಜನೆ ಅನುಷ್ಠಾನ ಮಾಡುತ್ತೇವೆ. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಸಪ್ತಪದಿಯನ್ನು ನಿಶ್ಚಯವಾಗಿ ನಮ್ಮ ಇಲಾಖೆ ಮಾಡುತ್ತೆ. ಯಾವ ರೀತಿ ಮಾಡಬೇಕು ಎಂದು ನಮ್ಮ ತಂಡ ಚಿಂತನೆ ನಡೆಸಿದೆ ಎಂದು ತಿಳಿಸಿದರು.

  • ದೇವಸ್ಥಾನದಲ್ಲಿ ಮಾತೆಯರಿಗೆ ಮಾರ್ಷಲ್ ಆರ್ಟ್ಸ್

    ದೇವಸ್ಥಾನದಲ್ಲಿ ಮಾತೆಯರಿಗೆ ಮಾರ್ಷಲ್ ಆರ್ಟ್ಸ್

    ಬೆಂಗಳೂರು: ಮುಜರಾಯಿ ಇಲಾಖೆ ಮಾತೆಯರಿಗೆ ಮಾರ್ಷಲ್ ಆರ್ಟ್ಸ್ ಅನ್ನೋ ಹೊಸ ಯೋಜನೆಯ ಜಾರಿಗೆ ಚಿಂತನೆ ನಡೆಸಿದೆ.

    ರಾಜ್ಯ ಮುಜರಾಯಿ ಇಲಾಖೆಯ ವ್ಯಾಪ್ತಿಯ ಆಯ್ದ ಪ್ರಮುಖ 10 ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಸ್ವ ರಕ್ಷಣೆಗೆ ಮಾರ್ಷಲ್ ಆರ್ಟ್ಸ್ ಕಲಿಸುವ ಯೋಜನೆ ಜಾರಿಗೆ ಚಿಂತಿಸಲಾಗುತ್ತಿದೆ. ದೇವಸ್ಥಾನದಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ಸೆಲ್ಫ್ ಡಿಫೆನ್ಸ್ ಹೇಳಿ ಕೊಡುವ ಬಗ್ಗೆ ಕಾರ್ಯ ಯೋಜನೆ ರೂಪಿಸುವ ಸಂಬಂಧ ಮುಜರಾಯಿ ಸಚಿವರು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಗೆ ಸಿಕ್ಕ ಮಾಹಿತಿ ಪ್ರಕಾರ, ಹಿಂದೂ ಮಹಿಳೆಯರ ರಕ್ಷಣೆಗೆ ದೇವಸ್ಥಾನಗಳಲ್ಲೇ ಆತ್ಮ ರಕ್ಷಣಾ ಕಲೆ ಕಲಿಸಬೇಕು, ಅದಕ್ಕೆ ರಾಜ್ಯದ ಆಯ್ದ 10 ದೇವಸ್ಥಾನಗಳಲ್ಲಿ ಆತ್ಮರಕ್ಷಣಾ ಕಲೆಯ ಅಭ್ಯಾಸ ಆರಂಭಿಸುವ ಬಗ್ಗೆ ಕಾರ್ಯಸೂಚಿ ಸಿದ್ಧಪಡಿಸುವಂತೆ ಮುಜರಾಯಿ ಸಚಿವರು ತಮ್ಮ ಇಲಾಖಾ ಸಿಬ್ಬಂಧಿಗೆ ಸೂಚಿಸಿದ್ದಾರೆ.

    ಸಂಘಟನೆಯೊಂದರ ಮನವಿ ಮೇರೆಗೆ ಸಚಿವರು ಈ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಮುಜರಾಯಿ ಇಲಾಖೆಗೂ ಮಾರ್ಷಲ್ ಆರ್ಟ್ಸ್‌ಗೂ  ಏನು ಸಂಬಂಧವಿದೆ ಗೊತ್ತಿಲ್ಲ. ಆದರೆ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಇಂತದೊಂದು ಯೋಜನೆ ಜಾರಿಗೆ ಚಿಂತನೆ ನಡೆದಿದೆ.