Tag: Muzaffarpur

  • ಕುಂಭಮೇಳದಲ್ಲಿ ಪಾಲ್ಗೊಂಡು ವಾಪಸ್‌ ಬರುವಾಗ ಅಪಘಾತ – ಐವರು ನೇಪಾಳಿ ಪ್ರಜೆಗಳು ದುರ್ಮರಣ

    ಕುಂಭಮೇಳದಲ್ಲಿ ಪಾಲ್ಗೊಂಡು ವಾಪಸ್‌ ಬರುವಾಗ ಅಪಘಾತ – ಐವರು ನೇಪಾಳಿ ಪ್ರಜೆಗಳು ದುರ್ಮರಣ

    ಪಾಟ್ನಾ: ಕುಂಭಮೇಳದಲ್ಲಿ (Kumbh Mela) ಪಾಲ್ಗೊಂಡು ವಾಪಸ್‌ ಆಗುತ್ತಿದ್ದಾಗ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಐವರು ನೇಪಾಳಿ (Nepalese) ಪ್ರಜೆಗಳು ಸಾವಿಗೀಡಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಕಾರಿನಲ್ಲಿ ಒಂಬತ್ತು ಜನರಿದ್ದರು. ಅವರಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರ್ಚನಾ ಠಾಕೂರ್, ಇಂದು ದೇವಿ, ಮಂತರ್ಣಿ ದೇವಿ, ಬಾಲ ಕೃಷ್ಣ ಝಾ ಮತ್ತು ಚಾಲಕ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಮನೋಹರ್ ಠಾಕೂರ್, ಸೃಷ್ಟಿ ಠಾಕೂರ್, ಕಮ್ನಿ ಝಾ ಮತ್ತು ದೇವತರಣ್ ದೇವಿ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಬಂಡುಕೋರರ ಜೊತೆ ಗುಂಡಿನ ದಾಳಿ; 18 ಪಾಕ್‌ ಸೈನಿಕರು ಸಾವು – 23 ಉಗ್ರರ ಹತ್ಯೆ

    ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಶನಿವಾರ ಅಪಘಾತ ಸಂಭವಿಸಿದೆ. ಎಲ್ಲರೂ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಪ್ರಯಾಗ್‌ರಾಜ್‌ನಿಂದ ಹಿಂತಿರುಗುತ್ತಿದ್ದರು. ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಮೃತಪಟ್ಟಿದ್ದಾರೆ. ಮಧುಬನಿ ಚತುಷ್ಪಥ ಬೈಪಾಸ್‌ನಲ್ಲಿ ವೇಗವಾಗಿ ಬಂದ ಎಸ್‌ಯುವಿ, ಬೈಕರ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ಅವಗಢ ಸಂಭವಿಸಿದೆ.

    ವಾಹನದ ಏರ್‌ಬ್ಯಾಗ್‌ಗಳು ತೆರೆದಿಲ್ಲ. ಇದರಿಂದಾಗಿ ಸ್ಥಳದಲ್ಲೇ ಐವರು ಮೃತಪದ್ದಾರೆ. ನಾವು ಇತರ ನಾಲ್ವರನ್ನು ವಾಹನದಿಂದ ರಕ್ಷಿಸಿದ್ದೇವೆ. ಸ್ಥಳೀಯರು ಗಾಯಾಳುಗಳನ್ನು ಕಾರಿನಿಂದ ಹೊರತೆಗೆದು ಹತ್ತಿರದ ಆಸ್ಪತ್ರೆಗೆ ಕಳುಹಿಸುವಲ್ಲಿ ಸಹಾಯ ಮಾಡಿದ್ದಾರೆ. ಇದನ್ನೂ ಓದಿ: ಕಾರ್ ಡೋರ್‌ಗೆ ಬೈಕ್ ಡಿಕ್ಕಿ – ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್!

  • ಚಲಿಸುತ್ತಿದ್ದ ರೈಲಿನಲ್ಲೇ ಹೆರಿಗೆ – ಸಹಾಯ ಮಾಡಿ ಮಾನವೀಯತೆ ಮೆರೆದ RPF ತಂಡ

    ಚಲಿಸುತ್ತಿದ್ದ ರೈಲಿನಲ್ಲೇ ಹೆರಿಗೆ – ಸಹಾಯ ಮಾಡಿ ಮಾನವೀಯತೆ ಮೆರೆದ RPF ತಂಡ

    ಗಾಂಧೀನಗರ: ಅಹಮದಾಬಾದ್-ಬರೌನಿ ಎಕ್ಸ್‌ಪ್ರೆಸ್‍ನಲ್ಲಿ ಮುಜಾಫರ್‍ಪುರಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯ ಸಹಾಯದಿಂದ ಬುಧವಾರ ಮಗುವಿಗೆ ಜನ್ಮ ನೀಡಿದ್ದಾರೆ.

    ಸೂರತ್‍ನಿಂದ ಮುಜಾಫರ್‌ಪುರಕ್ಕೆ ಪ್ರಯಾಣಿಸುತ್ತಿದ್ದಾಗ ಶಕೀಲಾ ಅವರಿಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನಂತರ ಮಹಿಳೆ ಇದ್ದ ಬೋಗಿಗೆ ಬಂದ ಇಡೀ ಆರ್‌ಪಿಎಫ್ ತಂಡ ಆಗಮಿಸಿ ಗರ್ಭಿಣಿಯನ್ನು ಆವರಿಸಿ ಸಹಾಯ ಮಾಡಿದೆ ಎಂದು ಮಹಿಳೆ ಪತಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಯುದ್ಧದ ನಡುವೆ ಫೋಟೋಶೂಟ್ ಮಾಡಿಸಿಕೊಂಡ ಝೆಲೆನ್ಸ್ಕಿ ದಂಪತಿ – ಸೈನಿಕರ ಸಾವಿನ ನಡುವೆ ಶೋಕಿ ಎಂದ ನೆಟ್ಟಿಗರು

    ರೈಲು ಮುಜಾಫರ್‌ಪುರ ಜಂಕ್ಷನ್‍ಗೆ ಬಂದ ಬಳಿಕ ತಾಯಿ ಮತ್ತು ಮಗು ಇಬ್ಬರನ್ನೂ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದೀಗ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಮುಂದಿನ ಜೀವನ ಏನು ಎಂದು ಗೊತ್ತಿಲ್ಲ: ಪ್ರವೀಣ್ ಪತ್ನಿ ನೂತನ ಕಣ್ಣೀರು

    Live Tv
    [brid partner=56869869 player=32851 video=960834 autoplay=true]

  • ಮಾಟಗಾತಿಯರೆಂದು ಮೂವರು ಮಹಿಳೆಯರ ತಲೆ ಬೋಳಿಸಿದ ಜನ

    ಮಾಟಗಾತಿಯರೆಂದು ಮೂವರು ಮಹಿಳೆಯರ ತಲೆ ಬೋಳಿಸಿದ ಜನ

    – ಗ್ರಾಮದಲ್ಲಿ ಅರೆಬೆತ್ತಲಾಗಿ ಮಹಿಳೆಯರ ಮೆರವಣಿಗೆ
    – 9 ಜನರನ್ನ ಬಂಧಿಸಿದ ಪೊಲೀಸ್

    ಪಾಟ್ನಾ: ಮಾಟಗಾತಿಯರೆಂದು ತಿಳಿದು ಒಂದೇ ಕುಟುಂಬದ ಮೂವರು ಮಹಿಳೆಯರ ತಲೆ ಬೋಳಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.

    ಪಾಟ್ನಾದಿಂದ 80 ಕಿ.ಮೀ ದೂರದಲ್ಲಿರುವ ಮುಜಾಫರ್ಪುರ್ ಜಿಲ್ಲೆಯ ಹಮ್ಮರಿ ಸಮೀಪ ಡಕ್ರಾಮ ಎಂಬ ಹಳ್ಳಿಯಲ್ಲಿ ಘಟನೆ ನಡೆಸಿದೆ. ಮಹಿಳೆಯರನ್ನು ಮಾಟಗಾತಿಯರೆಂದು ತಿಳಿದ ಜನರು ಅವರ ಕೂದಲನ್ನು ಕತ್ತರಿಸಿದ್ದಾರೆ. ನಂತರ ಅರೆಬೆತ್ತಲಾಗಿ ಮಹಿಳೆಯರನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ಕೆಲವು ದಿನಗಳ ಹಿಂದೆ ಗ್ರಾಮದಲ್ಲಿ ಎರಡು ನವಜಾತ ಶಿಶುಗಳು ಸಾವನ್ನಪ್ಪಿದ್ದವು. ಈ ಮೂವರು ಮಹಿಳೆಯರೇ ಶಿಶುಗಳ ಸಾವಿಗೆ ಕಾರಣ ಎಂದು ಗ್ರಾಮಸ್ಥರು ತಿಳಿದಿದ್ದರು. ಹೀಗಾಗಿ ಕೆಲವರು ಅವರನ್ನು ಮಾಟಗಾತಿ ಎಂದು ಕರೆದರು. ಗ್ರಾಮದ ಕೆಲ ಮುಖಂಡರು ಸೇರಿ ಮಹಿಳೆಯರಿಗೆ ಪಾಠ ಕಲಿಸುವ ಚರ್ಚೆ ನಡೆಸಿದರು. ಸೋಮವಾರ ಮಹಿಳೆಯರನ್ನು ಹಿಡಿದು ಎಳೆದಾಡಿದ ಗ್ರಾಮಸ್ಥರು ಸಾರ್ವಜನಿಕ ಪ್ರದೇಶದಲ್ಲಿ ಅವರನ್ನು ಕೂರಿಸಿ ತಲೆ ಬೋಳಿಸಿದ್ದಾರೆ.

    ಈ ದೃಶ್ಯವನ್ನು ಸ್ಥಳದಲ್ಲಿ ಕೆಲವರು ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವಿಡಿಯೋ ವೈರಲ್ ಆದ ನಂತರ ಆ ಪ್ರದೇಶದಲ್ಲಿ ಕೋಲಾಹಲ ಉಂಟಾಯಿತು. ಇತ್ತ ಘಟನೆಯಿಂದ ಭಯಗೊಂದ ಮೂವರು ಮಹಿಳೆಯರು ಕುಟುಂಬದವರೊಂದಿಗೆ ಗ್ರಾಮವನ್ನು ತೊರೆದಿದ್ದರು. ಹೀಗಾಗಿ ಸಂತ್ರಸ್ತರು ನೀಡದೆ ಪ್ರಕರಣ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಮ್ಮರಿ ಪೊಲೀಸ್ ಠಾಣೆಯ ಅಧಿಕಾರಿ ಜಿತೇಂದ್ರ ದೇವ್ ದೀಪಕ್ ಹೇಳಿದರು.

    ಈ ವಿಷಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆರಂಭವಾಗುತ್ತಿದ್ದಂತೆ ಎಡಿಜಿ ಜಿತೇಂದ್ರ ಕುಮಾರ್ ಎಚ್ಚೆತ್ತುಕೊಂಡರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಬೇಕು ಎಂದು ಸಿಬ್ಬಂದಿಗೆ ಸೂಚನೆ ನೀಡಿದರು. ಅದರಂತೆ 15 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈ ಪೈಕಿ 9 ಜನರನ್ನು ಬಂಧಿಸಲಾಗಿದೆ.