Tag: Muzaffarnagar

  • ಹೋಟೆಲ್‌ಗೆ ಕರೆಸಿ ಪ್ರಿಯಕರನ ಮರ್ಮಾಂಗ ಕಟ್ ಮಾಡಿದ್ಳು ಪ್ರಿಯತಮೆ!

    ಹೋಟೆಲ್‌ಗೆ ಕರೆಸಿ ಪ್ರಿಯಕರನ ಮರ್ಮಾಂಗ ಕಟ್ ಮಾಡಿದ್ಳು ಪ್ರಿಯತಮೆ!

    – ಬೇರೆ ಹುಡುಗಿಯನ್ನು ಮದುವೆಯಾಗಲು ಮುಂದಾಗಿದ್ದಕ್ಕೆ ಕೃತ್ಯ

    ಲಕ್ನೋ: ಪ್ರೀತಿಯಿಂದ ಹಿಂದೆ ಸರಿದಿದ್ದಕ್ಕೆ 22 ವರ್ಷದ ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಹೋಟೆಲ್ ರೂಮ್‌ಗೆ ಕರೆಸಿ ಆತನ ಗುಪ್ತಾಂಗವನ್ನು ಕತ್ತರಿಸಿದ್ದಾಳೆ. ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಈ ಘಟನೆ ನಡೆದಿದೆ. 24 ವರ್ಷದ ತನ್ನ ಪ್ರಿಯಕರನಿಗೆ ಬೇರೊಬ್ಬ ಹುಡುಗಿಯ ಜೊತೆ ಮದುವೆ ನಿಶ್ಚಯವಾಗಿರುವುದು ಗೊತ್ತಾದ ಬಳಿಕ ಪ್ರಿಯತಮೆ ಈ ಕ್ರೂರ ಕೃತ್ಯ ಎಸಗಿದ್ದಾಳೆ. ಇವರಿಬ್ಬರೂ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು.

    ಆತ್ಮಹತ್ಯೆಗೆ ಯತ್ನ!:
    ಹಲ್ಲೆಯ ನಂತರ ಯುವತಿ ತನ್ನ ಕೈಯ ನರವನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತನ್ನ ಮರ್ಮಾಂಗಕ್ಕೆ ಕತ್ತರಿಸುತ್ತಿದ್ದಂತೆಯೇ ಯುವಕ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಆಸಿಡ್ ದಾಳಿ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನಿರಾಕರಿಸುವಂತಿಲ್ಲ: ದೆಹಲಿ ಹೈಕೋರ್ಟ್‌

    ಯುವತಿಗೆ ಸಿಟ್ಯಾಕೆ..?
    ಯುವಕ ಮದುವೆಗೆ ತಯಾರಿ ನಡೆಸುತ್ತಿರುವ ವಿಷಯ ಯುವತಿಗೆ ಗೊತ್ತಾಗಿದೆ. ಹೀಗಾಗಿ ಆತನನ್ನು ಕೊನೆಯ ಬಾರಿ ನೋಡಬೇಕು ಎಂದು ಹೇಳಿ ಹೋಟೆಲ್ ಕೊಠಡಿಗೆ ಕರೆಸಿಕೊಂಡಿದ್ದಾಳೆ. ಬಳಿಕ ಯುವತಿ ಯುವಕನ ಗುಪ್ತಾಂಗವನ್ನು ಕತ್ತರಿಸಿದ್ದಾಳೆ. ಪೊಲೀಸರು ತಕ್ಷಣ ಬಂದು ಆಸ್ಪತ್ರೆಗೆ ಸೇರಿಸಿದ ಕಾರಣ ಯುವತಿ ಹಾಗೂ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ತಡರಾತ್ರಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ

    ಗೊಂದಲದ ಹೇಳಿಕೆಗಳು!
    ಕಾರಿನಲ್ಲಿಯೇ ಪ್ರಿಯತಮೆ ಈ ಕೃತ್ಯವೆಸಗಿದ್ದಾಳೆ ಎಂದು ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ ಘಟನೆ ನಡೆದಿರುವುದು ಹೋಟೆಲ್‌ನಲ್ಲಿ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದು, ಇಬ್ಬರ ಮೊಬೈಲ್ ಫೋನ್‌ಗಳನ್ನೂ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ರೇಪ್ & ಮರ್ಡರ್ ಕೇಸ್ | ಘಟನಾ ಸ್ಥಳದಲ್ಲಿ ಪ್ರತಿರೋಧದ ಪುರಾವೆ ಇಲ್ಲ – ಸಿಬಿಐಗೆ CFSL ವರದಿ ಸಲ್ಲಿಕೆ

  • ಅಕ್ರಮ ಮದರಸಾಗಳಿಗೆ ದಿನಕ್ಕೆ 10 ಸಾವಿರ ದಂಡ: ಯೋಗಿ ಸರ್ಕಾರದಿಂದ ನೋಟಿಸ್

    ಅಕ್ರಮ ಮದರಸಾಗಳಿಗೆ ದಿನಕ್ಕೆ 10 ಸಾವಿರ ದಂಡ: ಯೋಗಿ ಸರ್ಕಾರದಿಂದ ನೋಟಿಸ್

    ಲಕ್ನೋ: ಮುಜಾಫರ್‌ನಗರದಲ್ಲಿ (Muzaffarnagar) ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಮದರಸಾಗಳು (Madras) ದಿನಕ್ಕೆ 10,000 ರೂ ದಂಡ (Penalty) ತೆರಬೇಕಾಗುತ್ತದೆ ಎಂದು ಉತ್ತರ ಪ್ರದೇಶದ (Uttar Pradesh) ಮೂಲ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ.

    ಸರಿಯಾದ ದಾಖಲಾತಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ 10ಕ್ಕೂ ಹೆಚ್ಚು ಮದರಸಾಗಳಿಗೆ ಮೂಲ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ನೋಟಿಸ್ ಜಾರಿ ಮಾಡಿದ್ದು, ಸೂಕ್ತ ದಾಖಲೆಗಳನ್ನು ನೀಡುವಂತೆ ಸೂಚಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಸುಮಾರು 24,000 ಮದರಸಾಗಳಿವೆ. ಅವುಗಳಲ್ಲಿ 16,000 ಮದರಸಾಗಳು ಮಾನ್ಯತೆ ಪಡೆದಿದ್ದು, 8,000 ಮದರಸಾಗಳು ಮಾನ್ಯತೆ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮದರಸಾದಲ್ಲಿ 10 ವಿದ್ಯಾರ್ಥಿಗಳಿಗೆ ಲೈಂಗಿಕ ದೌರ್ಜನ್ಯ – ಶಿಕ್ಷಕ ಅರೆಸ್ಟ್

    ನೋಟಿಸ್ (Notice) ನೀಡಿರುವ ಮದರಸಾಗಳಿಗೆ ಆದೇಶ ಬಂದ ಮೂರು ದಿನಗಳೊಳಗೆ ಸೂಕ್ತ ದಾಖಲೆಗಳನ್ನು ನೀಡುವಂತೆ ಅಥವಾ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮದರಸಾಗಳು ಮಾನ್ಯತೆ ಇಲ್ಲದೇ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದರೆ ದಿನಕ್ಕೆ 10,000 ರೂ. ದಂಡ ವಿಧಿಸಲಾಗುವುದು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಭಾರತ ಅಭಿವೃದ್ಧಿಯಾದರೆ ಕೆಲವರ ಆಟ ನಡೆಯಲ್ಲ: ಮೋಹನ್ ಭಾಗವತ್

    ಇಲ್ಲಿ ನಡೆಯುತ್ತಿರುವ ನೂರಕ್ಕೂ ಹೆಚ್ಚು ಮದರಸಾಗಳು ಜಿಲ್ಲೆಯಲ್ಲಿ ನೋಂದಣಿ ಅಥವಾ ಮಾನ್ಯತೆ ಹೊಂದಿಲ್ಲ ಮತ್ತು ನಿಯಮಾವಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ತಮ್ಮ ಕಚೇರಿಗೆ ಮಾಹಿತಿ ನೀಡಿದೆ ಎಂದು ಮುಜಾಫರ್‌ನಗರ ಮೂಲ ಶಿಕ್ಷಾ ಅಧಿಕಾರಿ (BSA) ಶುಭಂ ಶುಕ್ಲಾ ಹೇಳಿದರು. ಇದನ್ನೂ ಓದಿ: ಮಣಿಪುರದಲ್ಲಿ ಓರ್ವ ಉಗ್ರ ಅರೆಸ್ಟ್ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

    ಮದರಸಾಗಳಿಗೆ ನೀಡಿದ ನೋಟಿಸ್‌ಗೆ ಸಂಬಂಧಿಸಿದಂತೆ ಭಾರತೀಯ ಮುಸ್ಲಿಮ್ ಸಂಘಟನೆಯಾದ ಜಮಿಯತ್ ಉಲಾಮಾ-ಇ-ಹಿಂದ್, ಶಿಕ್ಷಣ ಇಲಾಖೆಯ ಆದೇಶವನ್ನು ‘ಕಾನೂನುಬಾಹಿರ’ ಎಂದು ಕರೆದಿದೆ. ಮದರಸಾಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದು, ದಿನಕ್ಕೆ 10,000 ರೂ. ದಂಡವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದೆ. ಇದನ್ನೂ ಓದಿ: 25 ವರ್ಷಗಳ ಒಡನಾಟಕ್ಕೆ ಬ್ರೇಕ್‌ – BJPಗೆ ನಟಿ ಗೌತಮಿ ತಡಿಮಲ್ಲ ಗುಡ್‍ಬೈ

    ಲಕ್ನೋದ ಹಿರಿಯ ಅಧಿಕಾರಿಯ ಪ್ರಕಾರ, ರಾಜ್ಯದ ಸುಮಾರು 4,000 ಮದರಸಾಗಳು ವಿದೇಶಿ ಹಣವನ್ನು ಸ್ವೀಕರಿಸುವ ಸ್ಕ್ಯಾನರ್ ಅಡಿಯಲ್ಲಿವೆ. ಈ 4,000 ಮದರಸಾಗಳನ್ನು ತನಿಖೆ ಮಾಡಲು ರಾಜ್ಯ ಸರ್ಕಾರವು ಮೂರು ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಅವುಗಳಲ್ಲಿ ಹೆಚ್ಚಿನವು ಇಂಡೋ-ನೇಪಾಳ ಗಡಿಯಲ್ಲಿ ನಡೆಯುತ್ತಿವೆ. ಅವುಗಳು ವಿದೇಶದಿಂದ ಹಣವನ್ನು ಪಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಶಾಲೆಯಲ್ಲಿ ನಮಾಜ್‌ ಮಾಡಿದ ವಿದ್ಯಾರ್ಥಿಗಳು – ಪ್ರಾಂಶುಪಾಲೆ ಅಮಾನತು

    ಮದರಸಾಗಳು ಪಡೆದ ಹಣವನ್ನು ಭಯೋತ್ಪಾದನೆ ಅಥವಾ ಬಲವಂತದ ಧಾರ್ಮಿಕ ಮತಾಂತರದಂತಹ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗಿದೆಯೇ ಎಂದು ಎಸ್‌ಐಟಿ ಪರಿಶೀಲಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಸ್, ಕಾರಿನ ನಡುವೆ ಮುಖಾಮುಖಿ ಡಿಕ್ಕಿ – 6 ಜನ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಗಳಿಂದ ಕಪಾಳಮೋಕ್ಷ – ಘಟನೆ ರಾಜ್ಯದ ಆತ್ಮಸಾಕ್ಷಿ ಅಲ್ಲಾಡಿಸುತ್ತದೆ: ಸುಪ್ರೀಂ

    ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಗಳಿಂದ ಕಪಾಳಮೋಕ್ಷ – ಘಟನೆ ರಾಜ್ಯದ ಆತ್ಮಸಾಕ್ಷಿ ಅಲ್ಲಾಡಿಸುತ್ತದೆ: ಸುಪ್ರೀಂ

    ನವದೆಹಲಿ: ಉತ್ತರ ಪ್ರದೇಶದ (Uttar Pradesh) ಮುಜಾಫರ್ ನಗರದ (Muzaffarnagar) ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ವಿದ್ಯಾರ್ಥಿಗೆ (Student) ತನ್ನ ಸಹಪಾಠಿಗೆ ಕಪಾಳಮೋಕ್ಷ ಮಾಡುವಂತೆ ಆದೇಶಿಸಿದ ಘಟನೆಯ ಹೊಣೆಗಾರಿಕೆಯನ್ನು ರಾಜ್ಯವೇ ಹೊರಬೇಕು ಎಂದು ಸುಪ್ರೀಂಕೋರ್ಟ್ (Supreme Court) ಸೋಮವಾರ ಹೇಳಿದೆ.

    ಘಟನೆಯ ವೀಡಿಯೋ ಕಳೆದ ತಿಂಗಳು ವೈರಲ್ ಆಗಿ, ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ನಂತರ ಶಿಕ್ಷಕಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿಥಾಲ್ ಅವರ ಪೀಠವು ಮೌಖಿಕ ಅವಲೋಕನವನ್ನು ಮಾಡಿತು.

    ಶಿಕ್ಷಕರ ಸೂಚನೆಯ ಮೇರೆಗೆ ಶಾಲಾ ಮಕ್ಕಳು ಅಳುತ್ತಿರುವ, ಮುಸ್ಲಿಂ ವಿದ್ಯಾರ್ಥಿಯನ್ನು ಸರದಿಯಲ್ಲಿ ಹೊಡೆಯುವ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಎಫ್‌ಐಆರ್ ದಾಖಲಿಸಿದ ರೀತಿಗೆ ಗಂಭೀರ ಆಕ್ಷೇಪವಿದೆ ಎಂದು ಹೇಳಿದೆ. ಇಂತಹ ಘಟನೆಗಳಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಹೇಳಿತು. ಇದನ್ನೂ ಓದಿ: ಬಂದ್ ಬಿಸಿ ನಡುವೆ ಮಂಗಳವಾರ CWRC ಸಭೆ – ಮತ್ತೆ ನೀರು ಹರಿಸಲು ಸೂಚಿಸುತ್ತಾ ನಿಯಂತ್ರಣ ಸಮಿತಿ?

    ಶಿಕ್ಷಕರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸುವ ವಿಧಾನ, ಇದು ಗುಣಮಟ್ಟದ ಶಿಕ್ಷಣವೇ? ಈ ಘಟನೆಗೆ ರಾಜ್ಯವು ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕು. ಶಾಲೆಯು ಮಗುವಿಗೆ ಕೆಲವು ಸಲಹೆಗಾರರನ್ನು ನೇಮಿಸಿದೆಯೇ? ಈ ಘಟನೆ ರಾಜ್ಯದ ಆತ್ಮಸಾಕ್ಷಿಯನ್ನು ಅಲ್ಲಾಡಿಸುತ್ತದೆ. ಇದು ಗಂಭೀರ ವಿಷಯ ಎಂದು ಪೀಠ ಹೇಳಿದೆ. ಇದನ್ನೂ ಓದಿ: ಶಾಂತಿಯುತ ಬಂದ್‌ಗೆ ಸರ್ಕಾರ ಅಡಚಣೆ ಮಾಡಲ್ಲ: ಡಿಕೆಶಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದುವೆ ನಿರಾಕರಿಸಿದ್ದಕ್ಕೆ ನೆರೆಮನೆಯವನಿಂದಲೇ 14ರ ಬಾಲಕಿಯ ಕತ್ತು ಹಿಸುಕಿ ಕೊಲೆ

    ಮದುವೆ ನಿರಾಕರಿಸಿದ್ದಕ್ಕೆ ನೆರೆಮನೆಯವನಿಂದಲೇ 14ರ ಬಾಲಕಿಯ ಕತ್ತು ಹಿಸುಕಿ ಕೊಲೆ

    ಲಕ್ನೋ: ಮದುವೆ ಪ್ರಸ್ತಾಪವನ್ನು (marriage proposal) ನಿರಾಕರಿಸಿದ 14 ವರ್ಷದ ಬಾಲಕಿಯ (Girl) ಕತ್ತು ಹಿಸುಕಿ ನೆರೆಮನೆಯವನೇ (Neighbor) ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಮುಜಾಫರ್‌ನಗರದಲ್ಲಿ (Muzaffarnagar) ನಡೆದಿದೆ. ಕೃತ್ಯ ಎಸಗಿದ ಬಳಿಕ ಬಾಲಕಿಯ ಶವವನ್ನು ಕಬ್ಬಿನ ಗದ್ದೆಯಲ್ಲಿ ಎಸೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಆರೋಪಿಯನ್ನು ಸೋನು ಬಂಜಾರ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ನವೆಂಬರ್ 5 ರಂದು ತನ್ನ ಮನೆಯಿಂದ ನಾಪತ್ತೆಯಾಗಿದ್ದು, ಮರುದಿನ ಹಾಜಿಪುರ ಗ್ರಾಮದ ಹೊಲದಲ್ಲಿ ಆಕೆಯ ಶವ ಪತ್ತೆಯಾಗಿದೆ. ಇದನ್ನೂ ಓದಿ: ನ್ಯೂಸ್ ಪೇಪರ್ ಓದುತ್ತಿದ್ದಂತೆಯೇ ವ್ಯಕ್ತಿ ಸಾವು

    CRIME COURT

    ತನ್ನ ಮಗಳನ್ನು ಮದುವೆಯಾಗುವಂತೆ ಆರೋಪಿ ಪೀಡಿಸುತ್ತಿದ್ದು, ತನ್ನ ಕುಟುಂಬಕ್ಕೂ ಬೆದರಿಕೆ ಹಾಕಿರುವುದಾಗಿ ಬಾಲಕಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ವಿನಿತ್ ಜೈಸ್ವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಯುವತಿ ವಿಚಾರಕ್ಕೆ ಗಲಾಟೆ – ರೌಡಿ ಕಾರ್ಪೊರೇಟರ್‌ನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

    ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವಿನಿತ್ ಜೈಸ್ವಾಲ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಲಿತನಿಗೆ ಚಪ್ಪಲಿಯಿಂದ ಥಳಿಸಿದ ಗ್ರಾಮದ ಮುಖ್ಯಸ್ಥ – ಬಂಧನ

    ದಲಿತನಿಗೆ ಚಪ್ಪಲಿಯಿಂದ ಥಳಿಸಿದ ಗ್ರಾಮದ ಮುಖ್ಯಸ್ಥ – ಬಂಧನ

    ಲಕ್ನೋ: ದಲಿತ ವ್ಯಕ್ತಿಗೆ ಗ್ರಾಮದ ಮುಖ್ಯಸ್ಥ ಚಪ್ಪಲಿಯಿಂದ ಥಳಿಸಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ. ಮುಖ್ಯಸ್ಥ ವ್ಯಕ್ತಿಗೆ ಥಳಿಸುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಲಾರಂಭಿಸಿದಂತೆ ಪೊಲೀಸರು ಎಚ್ಚೆತ್ತುಕೊಂಡು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ದಲಿತ ವ್ಯಕ್ತಿ ಕುಮಾರ್ ತಾಜ್‌ಪುರದ ಗ್ರಾಮದ ಮುಖ್ಯಸ್ಥ ಮೋಹನ್ ಗುರ್ಜರ್ ಅವರನ್ನು ಟೀಕಿಸಿದ ವಾಟ್ಸಪ್ ಸಂದೇಶವನ್ನು ಹಂಚಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಮೋಹನ್ ಚಪ್ಪಲಿಯಿಂದ ಥಳಿಸಿದ್ದು, ರೆಟಾ ನಾಗ್ಲಾ ಗ್ರಾಮದ ಮಾಜಿ ಮುಖಂಡ ಗಜೆ ಸಿಂಗ್ ಕೂಡಾ ಇದಕ್ಕೆ ಸಾಥ್ ನೀಡಿದ್ದಾನೆ. ಇದರೊಂದಿಗೆ ಕುಮಾರ್‌ಗೆ ಕೊಲೆ ಬೆದರಿಕೆ ಹಾಕಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಇದೀಗ ಇಬ್ಬರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅರ್ಪಿತ್ ವಿಜಯವರ್ಗಿಯ ಹೇಳಿದ್ದಾರೆ. ಇದನ್ನೂ ಓದಿ: ಗೋಕಾಕ್‍ನಲ್ಲಿ ಸಂಗೊಳ್ಳಿ ರಾಯಣ್ಣ ಫೋಟೋ ಹರಿದು ಹಾಕಿದ್ದ ಆರೋಪಿ ಅರೆಸ್ಟ್

    ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಭೀಮ್ ಆರ್ಮಿ ಕಾರ್ಯಕರ್ತರು ಹಾಗೂ ದಲಿತ ಸಮುದಾಯದ ಸದಸ್ಯರು ಘಟನೆಯ ವಿರುದ್ಧ ಛಾಪರ್ ಪೊಲೀಸ್ ಠಾಣೆಯ ಹೊರಗೆ ಧರಣಿ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈಗಾಗಲೇ ಪೊಲೀಸರು ಗ್ರಾಮದ ಮುಖಂಡ ಶಕ್ತಿ ಮೋಹನ್‌ನನ್ನು ಬಂಧಿಸಿದ್ದು, ಇನ್ನೊಬ್ಬ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪಂಡಿತ್‌ ಕುಟುಂಬದ ಭೇಟಿ ತಡೆಯಲು ನನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ: ಮುಫ್ತಿ

    ಘಟನಾ ವ್ಯಾಪ್ತಿಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತಿಯ ಕಣ್ಣೆದುರೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ- ಹತ್ತು ಮಂದಿ ಬಂಧನ

    ಲಕ್ನೋ: ಅಪರಾಧ ಪ್ರಕರಣಗಳಲ್ಲಿ ಆಗಾಗ್ಗೆ ಸದ್ದು ಮಾಡುತ್ತಿರುವ ಉತ್ತರಪ್ರದೇಶದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಇಲ್ಲಿನ ಮುಜಾಫರ್‌ನಗರದಲ್ಲಿ ಬೆಳಕಿಗೆ ಬಂದಿದೆ.

    ಮಹಿಳೆಯ ಗಂಡನನ್ನು ಹಿಡಿದು, ಮರಕ್ಕೆ ಕಟ್ಟಿಹಾಕಿ ಆತನ ಕಣ್ಣೆದುರೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಮಂಗಳವಾರ ಹೊಸ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರಕರಣವು ಈಚೆಗಷ್ಟೇ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಯ ಮೇಲೆಯೇ ಐವರಿಂದ ರೇಪ್

    STOP RAPE

    ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಪೊಲೀಸರು, ವ್ಯಕ್ತಿ ತನ್ನ ಪತ್ನಿಯನ್ನು ಆಕೆಯ ತಾಯಿಯ ಮನೆಯಿಂದ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಮಹಿಳೆಯನ್ನು ಮಾವಿನ ತೋಟಕ್ಕೆ ಎಳೆದೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಾಲ್ವರು ಪುರುಷರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಉಳಿದ ಆರೋಪಿಗಳು ಆಕೆಯ ಗಂಡನ ಬಳಿ ನಿಂತಿದ್ದರು. ಇದಾದ ಬಳಿಕ ಯಾರಿಗೂ ಈ ವಿಷಯ ತಿಳಿಸದಂತೆ ದಂಪತಿಗೆ ಬೆದರಿಕೆ ಹಾಕಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾಯಿಯನ್ನೇ ಅತ್ಯಾಚಾರಗೈದ 23 ವರ್ಷದ ಮಗ

    ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ 10 ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ದೆಹಲಿಯಲ್ಲಿ ನನ್ನ ಹೆಲಿಕಾಪ್ಟರ್ ತಡೆಯಲಾಗಿದೆ, ಇದು ಬಿಜೆಪಿ ಪಿತೂರಿ: ಅಖಿಲೇಶ್ ಯಾದವ್

    ದೆಹಲಿಯಲ್ಲಿ ನನ್ನ ಹೆಲಿಕಾಪ್ಟರ್ ತಡೆಯಲಾಗಿದೆ, ಇದು ಬಿಜೆಪಿ ಪಿತೂರಿ: ಅಖಿಲೇಶ್ ಯಾದವ್

    ಲಕ್ನೋ: ನನ್ನ ಹೆಲಿಕಾಪ್ಟರ್‌ಗೆ  ಅನುಮತಿ ನೀಡುತ್ತಿಲ್ಲ. ಉತ್ತರ ಪ್ರದೇಶದ ಮುಜಾಫರ್‍ನಗರಕ್ಕೆ ತೆರಳದಂತೆ ತಡೆಯಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

    ನನ್ನ ಹೆಲಿಕಾಪ್ಟರ್ ಟೇಕ್ ಆಫ್ ಆಗಲು ಅನುಮತಿ ನೀಡದ ಕಾರಣ ನಾನು ದೆಹಲಿಯಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಬರೆದುಕೊಂಡು ಹೆಲಿಕಾಪ್ಟರ್ ಜೊತೆ ಇರುವ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ  ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೂಗಿನ ಮೂಲಕ ನೀಡಲಾಗುವ ಕೋವ್ಯಾಕ್ಸಿನ್‌ನ ಬೂಸ್ಟರ್ ಡೋಸ್ ಪ್ರಯೋಗಕ್ಕೆ ಒಪ್ಪಿಗೆ

    ಟ್ವೀಟ್‍ನಲ್ಲಿ ಏನಿದೆ?: ಯಾವುದೇ ಕಾರಣ ನೀಡದೆ ನನ್ನ ಹೆಲಿಕಾಪ್ಟರ್ ಮುಜಾಫರ್‍ನಗರಕ್ಕೆ ಹೋಗಲು ಅನುಮತಿ ನೀಡದೆ ದೆಹಲಿಯಲ್ಲಿ ತಡೆಯಲಾಗಿದೆ. ಆದರೆ ಬಿಜೆಪಿಯ ಉನ್ನತ ನಾಯಕರೊಬ್ಬರು ಇಲ್ಲಿಂದ ಹೆಲಿಕಾಪ್ಟರ್‍ನಲ್ಲಿ ಉತ್ತರಪ್ರದೇಶಕ್ಕೆ ತೆರಳಿದ್ದಾರೆ. ಇದು ಸೋತ ಬಿಜೆಪಿಯ ಹತಾಶೆಯ ಪಿತೂರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಖಿಲೇಶ್ ಯಾದವ್ ಮತ್ತು ಆರ್‌ಎಲ್‍ಡಿ ಮುಖ್ಯಸ್ಥ ಜಯಂತ್ ಚೌಧರಿ ಇಂದು ಮುಜಾಫರ್‌ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವುದರ ಜೊತೆಗೆ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿತ್ತು. ಉತ್ತರ ಪ್ರದೇಶ ವಿಧಾನ ಸಭೆಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ಬಿಜೆಪಿ ಹಾಗೂ ಎಸ್‍ಪಿ ನಡುವೆ ಪೈಪೋಟಿ ಏರ್ಪಟ್ಟಿದೆ.

  • ಪಕ್ಕದ ಮನೆಯ ಯುವತಿ ಮೇಲೆ ಅತ್ಯಾಚಾರ ಎಸಗಿದ ಯುವಕ

    ಪಕ್ಕದ ಮನೆಯ ಯುವತಿ ಮೇಲೆ ಅತ್ಯಾಚಾರ ಎಸಗಿದ ಯುವಕ

    ಲಕ್ನೋ: ಯುವಕನೊಬ್ಬ ತನ್ನ ಪಕ್ಕದ ಮನೆಯ 22 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ನಡೆದಿದೆ.

    ಸಂತ್ರಸ್ತೆ ಹಾಗೂ ಆರೋಪಿ ಯುವಕ ಮುಜಾಫರ್‌ನಗರ ಜಿಲ್ಲೆಯ ಸಂಜಾಕ್ ಗ್ರಾಮದ ಸಂಜಾಕ್ ಗ್ರಾಮದ ನಿವಾಸಿಗಳಾಗಿದ್ದಾರೆ. ಘಟನೆ ನಡೆದು ತಿಂಗಳು ಕಳೆದಿದ್ದರೂ ಯುವತಿ ಯಾರ ಮುಂದೆ ಹೇಳಿಕೊಂಡಿರಲಿಲ್ಲ. ಆದರೆ ಆರೋಪಿಯ ಕಿರುಕುಳ ಹೆಚ್ಚಾಗಿದ್ದರಿಂದ ಯುವತಿ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದರಿಂದ ಪ್ರಕರಣ ಬೆಳೆಕಿಗೆ ಬಂದಿದೆ.

    ಕಳೆದ ತಿಂಗಳು ಯುವತಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವಕ ಬಂದಿದ್ದ. ಬಳಿಕ ಯುವತಿಯ ಮೇಲೆ ಅತ್ಯಾಚಾರ ಎಸಗಿ, ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲದೆ ಆಗಾಗ ಕಿರಕುಳ ಕೊಡಲು ಆರಂಭಿಸಿದ್ದ. ಇದರಿಂದ ಭಯಗೊಂಡ ಸಂತ್ರಸ್ತೆ ಪೋಷಕರ ಬಳಿ ತನ್ನ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಹೇಳಿಕೊಂಡಿದ್ದಳು.

    ಈ ಸಂಬಂಧ ಯುವತಿಯ ತಂದೆ ಶಾಹಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಬಸ್ ಟಾಪ್ ಮೇಲೆ ವಿದ್ಯಾರ್ಥಿಗಳು – ಮಾಲೀಕ, ಚಾಲಕನ ಮೇಲೆ ಎಫ್‍ಐಆರ್

    ಬಸ್ ಟಾಪ್ ಮೇಲೆ ವಿದ್ಯಾರ್ಥಿಗಳು – ಮಾಲೀಕ, ಚಾಲಕನ ಮೇಲೆ ಎಫ್‍ಐಆರ್

    ಲಕ್ನೋ: ಬಸ್ಸಲ್ಲಿ ಜನ ತುಂಬಿ ತುಳುಕುತ್ತಿದ್ದರೂ, ಅಪಾಯವಿದೆ ಎಂದು ಗೊತ್ತಿದ್ದರೂ ಟಾಪ್, ಹಿಂಬದಿಯ ಏಣಿಯ ಮೇಲೆ, ಬಾಗಿಲ ಫುಟ್ ರೆಸ್ಟ್ ಮೇಲೆ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋಗಿದ್ದಕ್ಕೆ ಬಸ್ ಮಾಲೀಕ, ಚಾಲಕನ ಮೇಲೆ ಎಫ್‍ಐಆರ್ ದಾಖಲಾಗಿದೆ.

    ವಸ್ತುಗಳನ್ನು ತುರುಕಿ ವಾಹನದಲ್ಲಿ ಲೋಡ್ ಮಾಡುವ ರೀತಿ ವಿದ್ಯಾರ್ಥಿಗಳು ಬಸ್ ಮೇಲೆ, ಬಾಗಿಲ ಬಳಿ ನೇತಾಡಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ. ಪ್ರತಿ ನಿತ್ಯ ಮುಜಾಫರ್‌ನಗರದಿಂದ ಮೀರಾಪುರ ಮಾರ್ಗವಾಗಿ ಹೋಗುವ ಬಸ್ಸಿನಲ್ಲಿ ಹೀಗೆ ವಿದ್ಯಾರ್ಥಿಗಳು ನೇತಾಡುತ್ತಾ ಹೋಗಿದ್ದಾರೆ. ಪ್ರತಿನಿತ್ಯ ಈ ಭಾಗದಲ್ಲಿ ಹೀಗೆ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಚಾಲಕ, ನಿರ್ವಾಹಕ ಹೋಗುತ್ತಾರೆ.

    ಆದರೆ ಶುಕ್ರವಾರದಂದು ಹೀಗೆ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಬಸ್ ಸಾಗುತ್ತಿದ್ದ ವೇಳೆ ಹಿಂದಿನಿಂದ ಬರುತ್ತಿದ್ದ ವಾಹನದ್ದಲ್ಲಿದ್ದವರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಜವಾಬ್ದಾರಿಯಿಲ್ಲದೆ ವಿದ್ಯಾರ್ಥಿಗಳನ್ನು ಬೇಕಾಬಿಟ್ಟಿ ಬಸ್ಸಿನಲ್ಲಿ ತುಂಬಿಸಿಕೊಂಡು ಅವರ ಜೀವದೊಂದಿಗೆ ಚೆಲ್ಲಾಟ ಆಡಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

    ಈ ವಿಡಿಯೋಗೆ ನೆಟ್ಟಿಗರು ಭಾರಿ ವಿರೋಧ ವ್ಯಕ್ತಪಡಿಸಿ, ಪೊಲೀಸರು ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಕೇಳಿಬಂದಿತ್ತು. ಈ ವಿಡಿಯೋ ನೋಡಿ ಎಚ್ಚೆತ್ತ ಪೊಲೀಸರು ಕೊನೆಗೆ ಆ ಬಸ್ ಯಾವುದು? ಯಾವ ಮಾರ್ಗದಿಂದ ಸಂಚರಿಸುತ್ತೆ? ಹೀಗೆ ಎಲ್ಲಾ ಮಾಹಿತಿಗಳನ್ನು ಪತ್ತೆ ಮಾಡಿ, ಬಸ್ ಮಾಲೀಕ ಹಾಗೂ ಚಾಲಕನ ಮೇಲೆ ಕೇಸ್ ಹಾಕಿದ್ದಾರೆ.

    ಇನ್ನಾದರೂ ಬಸ್ ಮಾಲೀಕರು ಹಾಗೂ ಚಾಲಕರು ಎಚ್ಚೆತ್ತುಕೊಂಡು ದುಡ್ಡಿನ ಆಸೆಗೆ ಹೀಗೆ ಪ್ರಯಾಣಿಕರನ್ನು ಬೇಕಾಬಿಟ್ಟಿ ಹತ್ತಿಸಿಕೊಳ್ಳುವುದನ್ನು ಬಿಡಬೇಕು. ಈ ರೀತಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಅವರ ಜೀವಕ್ಕೆ ಕುತ್ತು ಬಾರದಂತೆ ನೋಡಿಕೊಂಡು ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದು ಜನ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  • ಅರೆ ಪ್ರಜ್ಞಾವಸ್ಥೆಯಲ್ಲಿದ್ದ ರೋಗಿಯನ್ನು ಕೂಡಿ ಹಾಕಿ ತೆರಳಿದ ಸಿಬ್ಬಂದಿ

    ಅರೆ ಪ್ರಜ್ಞಾವಸ್ಥೆಯಲ್ಲಿದ್ದ ರೋಗಿಯನ್ನು ಕೂಡಿ ಹಾಕಿ ತೆರಳಿದ ಸಿಬ್ಬಂದಿ

    ಲಕ್ನೋ: ಸಿಬ್ಬಂದಿಯೊಬ್ಬ ಶಿಫ್ಟ್ ಮುಗಿಯಿತು ಎಂದು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ರೋಗಿಯನ್ನು ಆಸ್ಪತ್ರೆಯಲ್ಲೇ ಬಿಟ್ಟು ಗೇಟ್ ಲಾಕ್ ಮಾಡಿಕೊಂಡು ಹೊರ ನಡೆದಿರುವ ಘಟನೆ ಉತ್ತರಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಸರ್ಕಾರಿ ಅರೋಗ್ಯ ಕೇಂದ್ರದಲ್ಲಿ ನಡೆದಿದೆ.

    ಸಾನಿಯಾ(30) ಎಂಬುವರನ್ನು ಶುಕ್ರವಾರ ಮುಜಾಫರ್ ನಗರ ಜಿಲ್ಲೆಯ ಪುರ್ಕಾಜಿ ಬ್ಲಾಕ್‍ನ ಫಲೋಡಾ ಗ್ರಾಮದ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ರೋಗಿಗಳ ಕೋಣೆಯಲ್ಲಿ ಹಾಸಿಗೆಯ ಮೇಲೆ ಸಾನಿಯಾ ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿದ್ದಾಗ ವೈದ್ಯರೂ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ರೋಗಿಯನ್ನು ಕೂಡಿ ಹಾಕಿ ಹೊರಟು ಹೋಗಿದ್ದಾರೆ.

    ಕೆಲ ಗಂಟೆಗಳ ನಂತರ ರೋಗಿಗೆ ಪ್ರಜ್ಞೆ ಬಂದಿದ್ದು, ತನ್ನನ್ನು ಕೂಡಿ ಹಾಕಿರುವುದನ್ನು ಕಂಡು ಭಯವಾಗಿ ಸಹಾಯ ಮಾಡುವಂತೆ ಕೂಗಿಕೊಂಡಿದ್ದಾರೆ. ಮಹಿಳೆಯ ಕೂಗನ್ನು ಕೇಳಿದ ಸ್ಥಳೀಯರು ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿ, ನಂತರ ಆಕೆಯನ್ನು ಹೊರಗಡೆ ಕರೆ ತಂದಿದ್ದಾರೆ.

    ಸಿಬ್ಬಂದಿ ಅಮಾನತು
    ಘಟನೆ ನಡೆಯುತ್ತಿದ್ದಂತೆ ಆಸ್ಪತ್ರೆಯ ಗ್ರೂಪ್-ಡಿ ನೌಕರನನ್ನು ಅಮಾನತುಗೊಳಿಸಲಾಗಿದೆ. ವೈದ್ಯಕೀಯ ಅಧಿಕಾರಿ ಡಾ.ಮೋಹಿತ್ ಕುಮಾರ್ ಹಾಗೂ ಮುಖ್ಯ ಫಾರ್ಮಾ ಅಧಿಕಾರಿ ಪ್ರವೀಣ್ ಕುಮಾರ್ ಅವರನ್ನು ವರ್ಗಾಯಿಸಲಾಗಿದೆ ಎಂದು ಪ್ರಧಾನ ವೈದ್ಯಾಧಿಕಾರಿ ಡಾ.ಪಿ.ಎಸ್.ಮಿಶ್ರಾ ತಿಳಿಸಿದ್ದಾರೆ.

    ಉಪ ಪ್ರಧಾನ ವೈದ್ಯಾಧಿಕಾರಿ ಡಾ.ಬಿ.ಕೆ.ಓಝಾ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದು, ಘಟನೆ ಕುರಿತು ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಿಶ್ರಾ ತಿಳಿಸಿದ್ದಾರೆ. ಸ್ಥಳೀಯರೂ ಸಹ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]