Tag: mutton

  • ಹೊಸತೊಡಕು ಆಚರಿಸಲು ಖುಷಿಯಲ್ಲಿದ್ದ ಜನರಿಗೆ ಶಾಕ್

    ಹೊಸತೊಡಕು ಆಚರಿಸಲು ಖುಷಿಯಲ್ಲಿದ್ದ ಜನರಿಗೆ ಶಾಕ್

    ಬೆಂಗಳೂರು/ಮಂಡ್ಯ: ಶನಿವಾರ, ಒಬ್ಬಟ್ಟು ತಿಂದು ಭರ್ಜರಿಯಾಗಿಯೇ ಯುಗಾದಿ ಹಬ್ಬ ಆಚರಿಸಿದ್ದ ಸಿಲಿಕಾನ್ ಸಿಟಿ ಜನರು ಇಂದು ಹೊಸತೊಡಕು ಆಚರಿಸಲು ಸಜ್ಜಾಗಿದ್ದಾರೆ. ಆದರೆ ಹಬ್ಬದ ಖುಷಿಯಲ್ಲಿದ್ದ ಜನರಿಗೆ ನಾನ್ ವೆಜ್ ಖಾದ್ಯಗಳ ಬೆಲೆ ಏರಿಕೆಯ ಕಹಿ ಅನುಭವವಾಗುತ್ತಿದೆ.

    ಇಂದು ಮಾರ್ಕೆಟ್ ಹೋಗಿ ಚಿಕನ್, ಮಟನ್ ರೇಟ್ ಕೇಳಿದರೆ ಜನರು ಶಾಕ್ ಆಗುತ್ತಾರೆ. ಏಕೆಂದರೆ ಚಿಕನ್ ಒಂದು ಕೆಜಿಗೆ 250 ರೂ. ಆಗಿದೆ. ಅಲ್ಲದೆ ಮಟನ್ ಒಂದು ಕೆಜಿಗೆ 550 ಆಗಿದೆ.

    ಹೀಗಾಗಿ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಚಿಲ್ಲಿ ಚಿಕನ್, ಪೆಪ್ಪರ್ ಚಿಕನ್, ಫಿಶ್ ಕರಿ, ಫಿಶ್ ಫ್ರೈ, ತಲೆ ಕಾಲ್ ಮಾಂಸ, ಕಾಲ್ ಸೂಪ್ ಹೇಗಪ್ಪಾ ಮಾಡುವುದು ಎಂದು ನಾನ್ ವೆಜ್ ಪ್ರಿಯರು ಯೋಚನೆ ಮಾಡತ್ತಿದ್ದರೆ, ಇತ್ತ ವ್ಯಾಪಾರಿಗಳು ಫುಲ್ ಖುಷಿಯಾಗಿದ್ದಾರೆ. ಇದನ್ನೂ ಓದಿ: ಯುಗಾದಿ ನೆಪದಲ್ಲಿ ಮತದಾರರಿಗೆ ಭರ್ಜರಿ ಗಿಫ್ಟ್-‘ಹೊಸತೊಡಕು’ ರೂಪದಲ್ಲಿ ಮಟನ್-ಚಿಕನ್ ಭಾಗ್ಯ!

    ಮಂಡ್ಯದಲ್ಲೂ ಇಂದು ಮಟನ್‍ಗೆ ಭಾರೀ ಬೇಡಿಕೆಯಾಗಿದೆ. ಯುಗಾದಿ ಹಬ್ಬದ ಮಾಂಸದಡುಗೆಗೆ ಮಂಡ್ಯದಲ್ಲಿ ಭರ್ಜರಿ ಬೇಡಿಕೆಯಿದೆ. ಇಷ್ಟು ದಿನ ಲೋಕಸಭಾ ಚುನಾವಣಾ ಕಾವಿನಿಂದ ರಂಗೇರಿದ್ದ ಮಂಡ್ಯ, ಶನಿವಾರ ಯುಗಾದಿ ಹಬ್ಬ ಮುಗಿಸಿ ಇಂದು ವರ್ಷ ತೊಡಕಿನ ಖುಷಿಯಲ್ಲಿ ಇದ್ದಾರೆ.

    ಹಬ್ಬಕ್ಕೆ ಮಾಂಸದಡುಗೆ ಮಾಡಲು ಮಂಡ್ಯದ ಎಲ್ಲ ಮಾಂಸದಂಗಡಿಗಳ ಮುಂದೆ ಜನರು ಕ್ಯೂ ನಿಂತಿದ್ದಾರೆ. ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನೂರಾರು ಜನ ನಿಂತು ಮಟನ್ ಖರೀದಿಸುತ್ತಿದ್ದಾರೆ. ಸದ್ಯ ಜನರು ಚುನಾವಣೆಯ ಯೋಚನೆ ಬಿಟ್ಟು ಮಾಂಸದಡುಗೆ ತಯಾರಿಯಲ್ಲಿ ಬ್ಯುಸಿ ಆಗಿದ್ದಾರೆ.

  • ಪತ್ನಿ ಮೇಲಿನ ಸಿಟ್ಟಿನಿಂದ 4ರ ಮಗಳನ್ನೇ ನೆಲಕ್ಕೆ ಬಡಿದು ಕೊಂದ..!

    ಪತ್ನಿ ಮೇಲಿನ ಸಿಟ್ಟಿನಿಂದ 4ರ ಮಗಳನ್ನೇ ನೆಲಕ್ಕೆ ಬಡಿದು ಕೊಂದ..!

    ಪಾಟ್ನಾ: ಪತ್ನಿ ಮಟನ್ ಸಾಂಬಾರ್ ಮಾಡಲು ತಡಮಾಡಿದ್ದಕ್ಕೆ ಕೋಪಗೊಂಡ ಪತಿ ತನ್ನ 4 ವರ್ಷದ ಮಗಳನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.

    ಶಾಲು ಕುಮಾರಿ ಕೊಲೆಯಾದ ದುರ್ದೈವಿ. ಪುರ್ನಿಯಾ ಜಿಲ್ಲೆಯ ಅಮೌರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಫಕ್ರಿಟೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಶಂಬು ಲಾಲ್ ಶರ್ಮಾ ಎಂದು ಗುರುತಿಸಲಾಗಿದೆ. ಈತ ನಾಲ್ಕು ವರ್ಷದ ಮಗಳನ್ನು ನೆಲಕ್ಕೆ ಬಡಿದು ಕೊಲೆ ಮಾಡಿದ್ದಾನೆ.

    ನೆಲಕ್ಕೆ ಬಡಿದಿದ್ದರಿಂದ ಗಾಯಗೊಂಡಿದ್ದ ಶಾಲು ಕುಮಾರಿಯನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಷ್ಟರಲ್ಲಿಯೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗು ಮೃತಪಟ್ಟ ಕೆಲವು ಗಂಟೆಯಲ್ಲಿಯೇ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಶರ್ಮಾ ತನ್ನ ಪತ್ನಿ ರಾಜ್‍ಕುಮಾರಿ ದೇವಿ ಜೊತೆ ಮಟನ್ ಸಾರು ಬೇಗ ಮಾಡು ಎಂದು ಜಗಳವಾಡುತ್ತಿದ್ದನು. ಇಬ್ಬರ ನಡುವೆ ವಾದ ನಡೆಯುತ್ತಿತ್ತು. ಈ ವೇಳೆ ಮಗು ಪಕ್ಕದಲ್ಲೇ ಆಟವಾಡುತ್ತಾ ಕುಳಿತಿದ್ದಳು. ಈ ವೇಳೆ ಪತ್ನಿಯ ಮೇಲಿನ ಕೋಪದಿಂದ ಶರ್ಮಾ ಮಗಳ ಕುತ್ತಿಗೆ ಹಿಡಿದುಕೊಂಡು ನಾಲ್ಕೈದು ಬಾರಿ ನೆಲಕ್ಕೆ ಬಡಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಯ ಬಳಿಕ ಮಗು ಗಾಯಗೊಂಡಿದ್ದು, ಪ್ರಜ್ಞಾಹೀನ ಸ್ಥಿತಿಗೆ ತಲುಪಿತ್ತು. ತಕ್ಷಣ ಆರೋಪಿ ಶರ್ಮಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಮಾರ್ಗ ಮಧ್ಯೆಯೇ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ.

    ಆರೋಪಿ ಶರ್ಮಾ ಮದ್ಯವ್ಯಸನಿಯಾಗಿದ್ದು, ಮಟನ್‍ಗಾಗಿ ಗಲಾಟೆ ಮಾಡಿಕೊಂಡು ಕೊಲೆ ಮಾಡಿದ್ದಾನೆ ಅಂತ ಪತ್ನಿ ಹೇಳಿಕೆ ಕೊಟ್ಟಿದ್ದಾರೆ. ಈ ದಂಪತಿ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು. ಸದ್ಯಕ್ಕೆ ಆರೋಪಿ ಶರ್ಮಾನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರೇಷನ್‍ಗೆ ಕ್ಯೂ ನಿಲ್ಲುವಂತೆ ಮಂಡ್ಯದಲ್ಲಿ ಮಟನ್‍ಗೂ ಸಾಲು ನಿಂತ್ರು!

    ರೇಷನ್‍ಗೆ ಕ್ಯೂ ನಿಲ್ಲುವಂತೆ ಮಂಡ್ಯದಲ್ಲಿ ಮಟನ್‍ಗೂ ಸಾಲು ನಿಂತ್ರು!

    ಮಂಡ್ಯ: ರೇಷನ್‍ಗೆ ಕ್ಯೂ ನಿಲ್ಲುವಂತೆ ಮಟನ್‍ಗಾಗಿ ಮಂಡ್ಯದ ಜನರು ಕ್ಯೂ ನಿಂತುಕೊಂಡಿದ್ದಾರೆ.

    ಶನಿವಾರ ಎಲೆಕ್ಷನ್ ಕಳೆಯುತ್ತಲೇ ರಿಲಾಕ್ಸ್ ಮೂಡಲ್ಲಿದ್ದ ಮಂಡ್ಯದ ಜನ ಇಂದು ಆರಾಮವಾಗಿ ಫ್ಯಾಮಿಲಿ, ಫ್ರೆಂಡ್ ಜೊತೆ ಬಾಡೂಟ ಮಾಡಲು ಮಟನ್ ಅಂಗಡಿಗೆ ಧಾವಿಸಿದ್ದಾರೆ. ಅಂಗಡಿಯ ಮಾಲೀಕ ಜನರ ಗುಂಪು ನೋಡಿ ಮಟನ್‍ಗಾಗಿ ಸರದಿ ಸಾಲಲ್ಲಿ ಬರುವಂತೆ ಸೂಚಿಸಿದ್ದಾರೆ.

    ಮಂಡ್ಯದ ಚಿಕ್ಕಮಂಡ್ಯ ರಸ್ತೆಯಲ್ಲಿ ಇರುವ ಗೋಪಾಲ್ ಮಟನ್ ಸ್ಟಾಲ್ ಮುಂದೆ ಈ ರೀತಿ ಕ್ಯೂ ಕಾಣುತ್ತಿದ್ದು, ಅಂಗಡಿ ಮಾಲೀಕ ಇಂದು ಸುಮಾರು 20 ಮರಿಗಳನ್ನು ಕಡಿದಿದ್ದಾರೆ. ಪ್ರತಿ ಕೆಜಿಗೆ 420 ರಂತೆ ಮಾರಾಟ ಮಾಡುತ್ತಿದ್ದು, ಇವತ್ತು ಒಂದು ದಿನ ಡಿಮ್ಯಾಂಡ್ ಜಾಸ್ತಿಯಾಗಿದೆ. ಇನ್ನೆರೆಡು ಗಂಟೆ ಹೋದರೆ ಮಟನ್ ಸಿಗೋದು ಡೌಟು ಎಂದು ಹೇಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾನ್ ವೆಜ್ ತಿಂತೀರಾ? ಎಚ್ಚರ.. ಮಟನ್, ಜಿಂಕೆ, ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಕೊಡ್ತಾರೆ!

    ನಾನ್ ವೆಜ್ ತಿಂತೀರಾ? ಎಚ್ಚರ.. ಮಟನ್, ಜಿಂಕೆ, ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಕೊಡ್ತಾರೆ!

    ವಿಜಯವಾಡ: ನಿಮಗೆ ಮಟನ್ ಅಂದ್ರೆ ತುಂಬಾ ಇಷ್ಟಾನಾ..? ವೀಕೆಂಡಲ್ಲಿ ಯಾಕೆ ಮಟನ್ ಹೆಸರೇಳಿ ಬಾಯಲ್ಲಿ ನೀರೂರಿಸ್ತಿದೀರಿ ಅಂದ್ಕೋತಿದೀರಾ.. ಕಾರಣವಿದೆ, ಇನ್ಮುಂದೆ ಹೋಟೆಲ್ ಗೆ ಹೋಗಿ ನಾನ್ ವೆಜ್ ತಿನ್ನಬೇಕಾದರೆ ಸ್ವಲ್ಪ ಜಾಗರೂಕರಾಗಿರಿ. ಯಾಕೆಂದರೆ ನಿಮಗೆ ಮಟನ್ ಅಂತಾ ನಾಯಿ ಮಾಂಸವನ್ನು ಕೊಟ್ಟರೂ ಕೊಡಬಹುದು. ಅದರಲ್ಲೂ ಆಂಧ್ರದ ಮೈಲಾವರಂಗೆ ಹೋದರೆ ಮಾತ್ರ ಯಾವ ಕಾರಣಕ್ಕೂ ನಾನ್ ವೆಜ್ ತಿನ್ನಲೇಬೇಡಿ.

    ಬೀದಿ ನಾಯಿಗಳನ್ನು ಹಿಡಿದು ಹಣಕ್ಕಾಗಿ ನಾಯಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೃಷ್ಣಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಜಿ.ಕೊಂಡೂರಿನ ಕೋಡೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

    ಏನಿದು ಘಟನೆ?: ಕೋಡೂರು ಗ್ರಾಮದ ಕಟ್ಟಾ ಆದಿನಾರಾಯಣ ಹಾಘೂ ದೇಗು ಲಕ್ಷ್ಮಣ ರಾವ್ ಎಂಬಿಬ್ಬರು ಕೆಲ ತಿಂಗಳಿಂದ ಬೀದಿ ನಾಯಿಗಳನ್ನು ಹಿಡಿಯೋದನ್ನೇ ಕಾಯಕ ಮಾಡಿದ್ದರು. ಆದರೆ ಕಳೆದ ಶುಕ್ರವಾರ ಇವರ ನಸೀಬು ಕೆಟ್ಟಿತ್ತು. ಅಂದು ಇವರು ನಾಯಿ ಹಿಡಿದು ಮಾಂಸವನ್ನು ಮಾರಾಟ ಮಾಡಿ ನಾಯಿಯ ಚರ್ಮವನ್ನು ಎಸೆಯಲು ಹೋಗುತ್ತಿದ್ದಾಗ ಗ್ರಾಮಸ್ಥರು ರೆಡ್ ಹ್ಯಾಂಡಾಗಿ ಇವರನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಈ ವೇಳೆ ಇಬ್ಬರು ಖತರ್ನಾಕ್ ಗಳು ತಾವು ಇದುವರೆಗೆ 20ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹಿಡಿದು ಅದರ ಮಾಂಸ ಮಾರಾಟ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

    ನಾಯಿ ಮಾಂಸವನ್ನೇ ಇವರು ಜಿಂಕೆ ಹಾಗೂ ಕುರಿ ಮಾಂಸ ಎಂದು ನಂಬಿಸಿ ಕೆಲವು ವ್ಯಕ್ತಿಗಳಿಗೆ ಹಾಗೂ ಹೋಟೆಲ್ ಗಳಿಗೆ ಮಾರಾಟ ಮಾಡುತ್ತಿದ್ದರು. ನಾಯಿ ಮಾಂಸದ ರುಚಿ ಹಿಡಿದ ಕೆಲವರು ಜಿಂಕೆ ಮಾಂಸವೆಂದು ಇವರ ಬಳಿ ಪದೇ ಪದೇ ಮಾಂಸಕ್ಕಾಗಿ ಬೇಡಿಕೆ ಇಡುತ್ತಿದ್ದರು. ಪ್ರತಿ ಕೆಜಿ ನಾಯಿ ಮಾಂಸಕ್ಕೆ ಇವರು 300 ರಿಂದ 400 ರೂ. ಪಡೆಯುತ್ತಿದ್ದರು. ಈ ಮೂಲಕ ಪ್ರತಿ ನಾಯಿಯನ್ನು ಕೊಂದು ಸರಾಸರಿ 3000 ರೂ. ಆದಾಯ ಗಳಿಸುತ್ತಿದ್ದರು. ಪ್ರಾಣಿ ಕಾಯ್ದೆ ಪ್ರಕಾರ ಇವರ ವಿರುದ್ಧ ದೂರು ದಾಖಲಿಸಿ ಪೊಲಿಸರು ತನಿಖೆ ಮುಂದುವರಿಸಿದ್ದಾರೆ. ಜೊತೆಗೆ ಇವರಿಂದ ಮಾಂಸ ಖರೀದಿ ಮಾಡುತ್ತಿದ್ದವರ ವಿವರವನ್ನೂ ಪಡೆದುಕೊಂಡಿದ್ದು ಅವರ ವಿಚಾರಣೆಯೂ ನಡೆಯಲಿದೆ ಎನ್ನಲಾಗಿದೆ. ಇವರಿಬ್ಬರೂ ಮೈಲಾವರಂ ಮತ್ತು ಅಕ್ಕಪಕ್ಕದ ಹಳ್ಳಿಗಳಿಗೆ ಮಾಂಸ ಪೂರೈಸುತ್ತಿದ್ದರು.

    ಪ್ರಕರಣದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿ.ಕೊಂಡೂರು ಎಸ್‍ಐ ಜಿ.ರಾಜೇಶ್ ನಾಯಿಗಳನ್ನು ಕೊಂದಿದ್ದಕ್ಕೆ ಹಾಗೂ ಪ್ರಾಣಿ ಹಿಂಸೆಗೆ ಕನಿಷ್ಠ 7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಸದ್ಯ ಪಶುವೈದ್ಯರು ಮಾಂಸದ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿ ಬಂದ ನಂತರ ಕ್ರಮಕೈಗೊಳ್ಳೋದಾಗಿ ಹೇಳಿದ್ದಾರೆ.

    https://www.youtube.com/watch?v=i-BbqCr-Org