Tag: Mutton Stall

  • ಇಂದು ಯುಗಾದಿ ಹಬ್ಬದ ಹೊಸತೊಡಕು – ಮಟನ್ ಸ್ಟಾಲ್‍ಗಳಿಗೆ ಬೆಳ್ಳಂಬೆಳಗ್ಗೆ ಜನರ ಲಗ್ಗೆ

    ಇಂದು ಯುಗಾದಿ ಹಬ್ಬದ ಹೊಸತೊಡಕು – ಮಟನ್ ಸ್ಟಾಲ್‍ಗಳಿಗೆ ಬೆಳ್ಳಂಬೆಳಗ್ಗೆ ಜನರ ಲಗ್ಗೆ

    – ಮಟನ್ ಅಂಗಡಿ ಮುಂದೆ ಸರತಿ ಸಾಲು

    ಬೆಂಗಳೂರು: ಇಂದು ಯುಗಾದಿ ಹೊಸತೊಡಕು. ಹೀಗಾಗಿ ಬೆಳಗ್ಗೆಯಿಂದಲೇ ಎಲ್ಲಾ ಕಡೆ ಮಟನ್ ಸ್ಟಾಲ್‍ಗಳತ್ತ ಜನ ಮುಖ ಮಾಡಿದ್ದಾರೆ. ಬೆಂಗಳೂರಿನ ಪಾಪಣ್ಣ ಮಟನ್ ಸ್ಟಾಲ್ ಮುಂದೆ ಅಂತೂ ಸಾವಿರಾರು ಜನ ಸೇರಿದ್ದಾರೆ. ಮಟನ್‍ಗಾಗಿ ಕಿಲೋಮೀಟರ್ ಗಟ್ಟಲೇ ಕ್ಯೂ ಕಂಡುಬರುತ್ತಿದೆ.

    ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅನಾವಶ್ಯಕವಾಗಿ ಮನೆಯಿಂದ ಹೊರ ಬರದಂತೆ ಸರ್ಕಾರ ಸೂಚಿಸಿದೆ. ಸರ್ಕಾರದ ಕೊರೊನಾ ನಿಯಮಗಳು ಕಾಗದಗಳಿಗೆ ಮಾತ್ರ ಸೀಮಿತವಾದಂತೆ ಕಾಣಿಸುತ್ತಿದೆ. ಬೆಳಗಿನ ಜಾವ 5 ಗಂಟೆಗೆ ನೈಟ್ ಕಫ್ರ್ಯೂ ಮುಗಿಯುತ್ತಿದ್ದಂತೆ ಜನ ರಸ್ತೆಗೆ ಇಳಿಯುತ್ತಿದ್ದಾರೆ. ಕಳೆದರಡು ದಿನಗಳಿಂದ ಯುಗಾದಿ ಹಿನ್ನೆಲೆ ಮಾರುಕಟ್ಟೆಗಳು ಗಿಜಿಗುಡುತ್ತಿವೆ. ಇಂದು ಹೊಸ ತೊಡಕು ಹಿನ್ನೆಲೆ ಮಟನ್ ಸ್ಟಾಲ್ ಗಳ ಮುಂದೆ ಕ್ಯೂ ಕಾಣಿಸುತ್ತಿವೆ.

    ಹಾಸನದಲ್ಲಿ ಜನ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ಮಟನ್ ಖರೀದಿಯಲ್ಲಿ ತೊಡಗಿದ್ದಾರೆ. ಹಾಸನದಲ್ಲಿ ಪ್ರತಿದಿನ ಸುಮಾರು 100 ರಿಂದ 150 ಜನರಿಗೆ ಕೊರೊನಾ ಪಾಸಿಟಿವ್ ಬರುತ್ತಿದೆ. ಆದರೂ ಕೂಡ ಮಟನ್ ಮಾರುಕಟ್ಟೆಗೆ ಬರುವ ಜನ ಯಾವುದೇ ಸಾಮಾಜಿಕ ಅಂತರ ಇಲ್ಲದೆ, ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ.

  • ಮಂಗಳೂರಿನಲ್ಲಿ ಕುರಿ ಮಾಂಸದ ಜೊತೆ ಗೋಮಾಂಸ ಮಿಶ್ರಣ ಆರೋಪ

    ಮಂಗಳೂರಿನಲ್ಲಿ ಕುರಿ ಮಾಂಸದ ಜೊತೆ ಗೋಮಾಂಸ ಮಿಶ್ರಣ ಆರೋಪ

    – ಮಟನ್ ಸ್ಟಾಲ್‍ಗಳಿಗೆ ಮೇಯರ್ ದಾಳಿ

    ಮಂಗಳೂರು: ನಗರದ ಕೆಲವು ಕುರಿ ಮಾಂಸದ ಅಂಗಡಿಯಲ್ಲಿ ಗೋಮಾಂಸ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದಾರೆ ಅನ್ನೋ ಆರೋಪ ಹಿನ್ನೆಲೆಯಲ್ಲಿ ಇಂದು ಮೇಯರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

    ಇತ್ತೀಚೆಗೆ ಕೆಲವು ಮಟನ್ ಅಂಗಡಿಗಳಲ್ಲಿ ಕುರಿ ಮಾಂಸದ ಜೊತೆಗೆ ಗೋಮಾಂಸ ಮಿಶ್ರಣ ಮಾಡಿ ಕೊಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇಂದು ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ ಅವರ ನೇತೃತ್ವದಲ್ಲಿ ಅಧಿಕಾರಿಗಳು ನಗರದ ಕಸಾಯಿಖಾನೆ, ಉರ್ವಾ ಮಾರ್ಕೆಟ್, ಉರ್ವಾ ಸ್ಟೋರ್ ಮಾರ್ಕೆಟ್‍ಗಳಿಗೆ ದಾಳಿ ನಡೆಸಿದ್ದಾರೆ.

    ಈ ವೇಳೆ ಮಳಿಗೆಗಳ ಪರವಾನಗಿ ಮತ್ತು ಬಿಲ್‍ಗಳ ಪರಿಶೀಲನೆ ನಡೆಸಿದ ಮೇಯರ್, ಅಕ್ರಮ ಮಾರಾಟ ಮತ್ತು ವಧೆಗಳ ಬಗ್ಗೆ ನಿಗಾ ಇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಮಾಂಸದಲ್ಲಿ ಕಡ್ಡಾಯ ಸೀಲ್ ಮತ್ತು ಬಿಲ್ ನೀಡಲು ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಅಕ್ರಮ ಮಾಂಸ ಮಾರಾಟ ನಡೆಸಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ಈ ಸಂದರ್ಭ ನೀಡಲಾಯಿತು.

  • ಬಫರ್ ಝೋನ್‍ನಲ್ಲಿ ಭರ್ಜರಿಯಾಗಿ ಮಟನ್ ಮಾರಾಟ

    ಬಫರ್ ಝೋನ್‍ನಲ್ಲಿ ಭರ್ಜರಿಯಾಗಿ ಮಟನ್ ಮಾರಾಟ

    ಹಾವೇರಿ: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚು ವ್ಯಾಪಿಸುತ್ತಿದೆ. ಅದರೆ ಇಷ್ಟೆಲ್ಲ ಭಯ ಇದ್ದರೂ ಬಫರ್ ಝೋನ್‍ನಲ್ಲಿ ಭರ್ಜರಿಯಾಗಿ ಮಟನ್ ಮಾರಾಟ ಮಾಡಲಾಗಿದೆ.

    ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದ ಬಫರ್ ಝೋನ್‍ನಲ್ಲಿ ಎಗ್ಗಿಲ್ಲದೆ ಮಟನ್ ಮಾರಾಟ ಮಾಡಲಾಗಿದೆ. ಹಾನಗಲ್ ತಾಲೂಕಿನಲ್ಲಿ 30 ಪ್ರಕರಣಗಳು ಪತ್ತೆಯಾಗಿದ್ದು, ಇಷ್ಟಾದರೂ ಜನ ಎಚ್ಚೆತ್ತುಕೊಂಡಿಲ್ಲ. ಮಾತ್ರವಲ್ಲದೆ ಇದೇ ಗ್ರಾಮದ ಕೆಸಳಗಿನ ಓಣಿಯಲ್ಲಿ ಸೋಮವಾರ ರಾತ್ರಿ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತೆ ವಾಸವಾಗಿದ್ದ ಪ್ರದೇಶವನ್ನು ಈಗಾಗಲೇ ಸೀಲ್‍ಡೌನ್ ಮಾಡಲಾಗಿದ್ದು, ಸುತ್ತಲಿನ 200 ಮೀಟರ್ ಪ್ರದೇಶವನ್ನು ಬಫರ್ ಝೋನ್ ಎಂದು ಜಿಲ್ಲಾಡಳಿತ ಗುರುತಿಸಿದೆ.

    ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್ ಕೇರ್ ಎಂದು ಭರ್ಜರಿಯಾಗಿ ಮಟನ್ ಮಾರಾಟ ಮಾಡಲಾಗಿದೆ. ಮಟನ್ ಮಾರಾಟ ಬಂದ್ ಮಾಡುವಂತೆ ಸ್ಥಳೀಯರು ಹೇಳಿದ್ದಾರೆ. ಇಷ್ಟಾದರೂ ಕೇಳದ ಅಂಗಡಿ ಮಾಲೀಕ ಸ್ಥಳೀಯರ ಜೊತೆ ಜಟಾಪಟಿ ನಡೆಸಿದ್ದಾನೆ. ಮಟನ್ ಮಾರಾಟ ಬಂದ್ ಮಾಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.