Tag: Mutton curry

  • ರುಚಿ ರುಚಿಯಾದ ಹರಿಯಾಲಿ ಮಟನ್ ಗ್ರೇವಿ ಮಾಡಿ ಬಾಯಿ ಚಪ್ಪರಿಸಿ

    ರುಚಿ ರುಚಿಯಾದ ಹರಿಯಾಲಿ ಮಟನ್ ಗ್ರೇವಿ ಮಾಡಿ ಬಾಯಿ ಚಪ್ಪರಿಸಿ

    ರುಚಿಯಾದ ಆಹಾರ (Food) ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ.. ಪ್ರತಿದಿನ ಚಿಕನ್‌ ಕಬಾಬ್‌, ಫಿಶ್‌ ಇವುಗಳನ್ನೇ ತಿಂದು ಬೇಸರ ಅನಿಸಿದ್ರೆ ಹೊಸದೇನಾದ್ರೂ ಟ್ರೈ ಮಾಡ್ಲೇಬೇಕಲ್ವಾ? ಅದ್ರಲ್ಲೂ ಮಾಂಸಾಹಾರ (Nonveg) ಪ್ರಿಯರಿಗೆ ಬಾಡೂಟ ಅಂದ್ರೆ ಬಾಯಲ್ಲಿ ನೀರೂರಿಸುತ್ತೆ. ಅತಿಥಿಗಳು ಬಂದಾಗ ಅಥವಾ ನಾಲಿಗೆ ರುಚಿಯಾದ ಆಹಾರ ತಿನ್ನಲು ಬಯಸಿದಾಗ, ನೀವೂ ಮನೆಯಲ್ಲಿ ಸುಲಭ ವಿಧಾನಗಳ ಮೂಲಕ ಹರಿಯಾಲಿ ಮಟನ್ ಗ್ರೇವಿ (Hariyali Mutton Recipe) ತಯಾರಿಸಬಹುದಾಗಿದೆ. ಅದರ ಸಿಂಪಲ್‌ ಟಿಪ್ಸ್‌ ಇಲ್ಲಿದೆ…

    ಬೇಕಾಗುವ ಸಾಮಗ್ರಿಗಳು:
    * ಮಟನ್- 1 ಕೆಜಿ
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಹಸಿ ಮೆಣಸಿನಕಾಯಿ- 3
    * ಈರುಳ್ಳಿ- 1
    * ಶುಂಠಿ-ಬೆಳ್ಳುಳ್ಳಿ- ಪೇಸ್ಟ್
    * ಗೋಡಂಬಿ- 6-7
    * ಚಕ್ಕೆ-1
    * ಜೀರಿಗೆ ಪುಡಿ- 1 ಚಮಚ
    * ದನಿಯಾ ಪೌಡರ್-2 ಚಮಚ
    * ರುಚಿಗೆ ತಕ್ಕ ಉಪ್ಪು
    * ಎಣ್ಣೆ – ಅರ್ಧ ಕಪ್

    ಮಾಡುವ ವಿಧಾನ:
    * ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಈರುಳ್ಳಿ, ಗೋಡಂಬಿ, ಚಕ್ಕೆ, ಲವಂಗ, ಕರಿ ಮೆಣಸು ಹಾಕಿ ಪೇಸ್ಟ್ ಮಾಡಿಕೊಳ್ಳಿ.

    * ಪಾತ್ರೆಯಲ್ಲಿ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ, ಈಗಾಗಲೇ ತಯಾರು ಮಾಡಿದ ಮಿಶ್ರಣದ ಪೇಸ್ಟ್ ಹಾಕಿ ಚೆನ್ನಾಗಿ ಬೇಯಿಸಬೇಕು.

    * ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ, ದನಿಯಾ ಪೌಡರ್, ಜೀರಿಗೆ ಪುಡಿ ಹಾಗೂ ರುಬ್ಬಿದ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಾಕಿ ಸ್ವಲ್ಪ ಬೇಯಿಸಿಕೊಳ್ಳಿ.

    * ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಟನ್ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಅರ್ಧ ಗಂಟೆ ಬೇಯಿಸಿದರೆ ರುಚಿಯಾದ ಹರಿಯಾಲಿ ಮಟನ್ ಸವಿಯಲು ಸಿದ್ಧವಾಗುತ್ತದೆ.

  • ಸಿಂಪಲ್ಲಾಗಿ ಮಟನ್ ಕರಿ ಮಾಡಿ ನಾಲಿಗೆ ಚಪ್ಪರಿಸಿ!

    ಸಿಂಪಲ್ಲಾಗಿ ಮಟನ್ ಕರಿ ಮಾಡಿ ನಾಲಿಗೆ ಚಪ್ಪರಿಸಿ!

    ರುಚಿಕರ ಆಹಾರ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದ್ರಲ್ಲೂ ಮಾಂಸಾಹಾರ (Non Veg) ಪ್ರಿಯರಿಗೇನು ಕಡಿಮೆ ಇಲ್ಲ. ಅತಿಥಿಗಳು ಬಂದಾಗ ಅಥವಾ ನಾಲಿಗೆ ರುಚಿಯಾದ ಆಹಾರ ತಿನ್ನಲು ಬಯಸಿದಾಗ,  ಮನೆಯಲ್ಲಿ ಸುಲಭ ವಿಧಾನಗಳ ಮೂಲಕ ಖಾರವಾದ ಮಟನ್ ಕರಿಯನ್ನು (Mutton Curry) ತಯಾರಿಸಬಹುದಾಗಿದೆ. ಅದಕ್ಕೆ ಸಿಂಪಲ್ ಟಿಪ್ಸ್ ಇಲ್ಲಿದೆ…

    ಬೇಕಾಗುವ ಸಾಮಗ್ರಿಗಳು:
    * ಕುರಿ ಮಾಂಸ- 1 ಕೆಜಿ
    * ಟೊಮೆಟೊ- 2
    * ಶುಂಠಿ ಬೆಳ್ಳುಳ್ಳಿ ಪೇಸ್ಟ್- 2 ಚಮಚ
    * ಈರುಳ್ಳಿ- 2
    * ಗರಂಮಸಾಲೆ- 1 ಚಮಚ
    * ದನಿಯಾ ಪುಡಿ- 2 ಚಮಚ
    * ಜೀರಿಗೆ ಪುಡಿ- 2 ಚಮಚ
    * ಅರಿಸಿಣ- ಸ್ವಲ್ಪ
    * ಖಾರದಪುಡಿ – 5 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ತೆಂಗಿನ ಎಣ್ಣೆ- ಅರ್ಧ ಕಪ್
    * ಕೊತ್ತಂಬರಿ ಸೊಪ್ಪು- ಸ್ವಲ್ಪ

    ಮಾಡುವ ವಿಧಾನ:
    * ಕುಕ್ಕರ್‌ಗೆ ಮಟನ್, ತೆಂಗಿನ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು 3 ರಿಂದ 4 ವಿಶಿಲ್ ಕೂಗಿಸಿ ಬೇಯಿಸಿಕೊಳ್ಳಿ.
    * ಮಿಕ್ಸಿ ಜಾರಿಗೆ ಈರುಳ್ಳಿ, ಟೊಮೆಟೊ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ರುಬ್ಬಿಕೊಳ್ಳಿ.
    * ನಂತರ ಒಂದು ಬಾಣೆಲೆಗೆ ತೆಂಗಿನ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ರುಬ್ಬಿಕೊಂಡ ಈರುಳ್ಳಿ ಪೇಸ್ಟ್, ಗರಂಮಸಾಲೆ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅರಿಶಿಣ ಪುಡಿ, ಖಾರದಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
    * ನಂತರ ಈ ಪಾತ್ರೆಗೆ ಈಗಾಗಲೇ ಬೇಯಿಸಿದ ಕುರಿ ಮಾಂಸ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಮಟನ್ ಕರಿ ಸವಿಯಲು ಸಿದ್ಧ.

  • ತಡರಾತ್ರಿ ಮಟನ್ ಸಾರು ಮಾಡಲು ನಿರಾಕರಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ

    ತಡರಾತ್ರಿ ಮಟನ್ ಸಾರು ಮಾಡಲು ನಿರಾಕರಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ

    ಹೈದರಾಬಾದ್: ಮಟನ್ ಸಾರು ಮಾಡಲು ನಿರಾಕರಿಸಿದ ಪತ್ನಿಯನ್ನ ಪತಿಯೇ ಕ್ರೂರವಾಗಿ ಥಳಿಸಿ ಹತ್ಯೆಮಾಡಿರುವ ಘಟನೆ ತೆಲಂಗಾಣದ(Telangana) ಮಹಬೂಬಾಬಾದ್‌ನಲ್ಲಿ ನಡೆದಿದೆ.

    ಮಾಲೋತ್ ಕಲಾವತಿ (35) ಕೊಲೆಯಾದ ಪತ್ನಿ. ತಡರಾತ್ರಿ ಕಲಾವತಿ ಬಳಿ ಮಟನ್ ಸಾರು ಮಾಡುವಂತೆ ಪತಿ ಹೇಳಿದ್ದಾನೆ. ಕಲಾವತಿ ಸಾರು ಮಾಡಲು ನಿರಾಕರಿಸಿದಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಯಾರೂ ಇಲ್ಲದಿದ್ದಾಗ ನಡೆದ ಜಗಳದಲ್ಲಿ ಕಲಾವತಿಯನ್ನು ಪತಿ ಹಲ್ಲೆ ಮಾಡಿ ಕೊಂದಿದ್ದಾನೆ ಎಂದು ಕಲಾವತಿ ತಾಯಿ ಆರೋಪಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಹೊತ್ತಿ ಉರಿದ ಟಾಕಿಸ್ – ಪೀಠೋಪಕರಣಗಳು ಭಸ್ಮ

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಮಾ.14ಕ್ಕೆ ರನ್ಯಾ ಬೇಲ್ ಭವಿಷ್ಯ

  • ರಾಜಸ್ಥಾನಿ ಲಾಲ್ ಮಾಸ್ ಮಟನ್ ಕರಿ ಮಾಡ್ನೋಡಿ

    ರಾಜಸ್ಥಾನಿ ಲಾಲ್ ಮಾಸ್ ಮಟನ್ ಕರಿ ಮಾಡ್ನೋಡಿ

    ರಾಜಸ್ಥಾನದ ಈ ಸಾಂಪ್ರದಾಯಿಕ ಮಟನ್ ಕರಿ ರೆಸಿಪಿ ಮದ್ರಾಸ್ ಶೈಲಿಯ ಅಡುಗೆಗೆ ಉತ್ತಮ ಪರ್ಯಾಯ. ಇಲ್ಲಿ ಸುಮಯ್ಯ ಮಟನ್ ಬಳಸಲಾಗುತ್ತದೆ. ಆದರೆ ಈ ರೆಸಿಪಿಯನ್ನು ಬೇಕೆಂದರೆ ಇತರ ಮಾಂಸವನ್ನು ಬಳಸಿಯೂ ತಯಾರಿಸಬಹುದು. ರಾಜಸ್ಥಾನ ಶೈಲಿಯ ಲಾಲ್ ಮಾಸ್ ಮಟನ್ ಕರಿ ನೀವೂ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಮಟನ್ ಮಾಂಸ – 1 ಕೆಜಿ
    ಲವಂಗ – 6
    ದಾಲ್ಚಿನ್ನಿ ಎಲೆ – 1
    ಕಪ್ಪು ಏಲಕ್ಕಿ – 1
    ಹೆಚ್ಚಿದ ಈರುಳ್ಳಿ – 1
    ತುರಿದ ಶುಂಠಿ – 1 ಇಂಚು
    ತುರಿದ ಬೆಳ್ಳುಳ್ಳಿ – 4
    ಕಾಶ್ಮೀರಿ ಮೆಣಸಿನ ಪುಡಿ – 1 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ಮೊಸರು – 400 ಗ್ರಾಂ
    ಬೆಳ್ಳುಳ್ಳಿ – 1
    ನೀರು – 50 ಮಿ.ಲೀ.
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಎಣ್ಣೆ – 3 ಟೀಸ್ಪೂನ್ ಇದನ್ನೂ ಓದಿ: 15 ನಿಮಿಷದಲ್ಲಿ ಮಾಡೋ ಚಿಕನ್ ನೂಡಲ್ ಸೂಪ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ತಳವಿರುವ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ ನಂತರ ಉರಿಯನ್ನು ಕಡಿಮೆ ಮಾಡಿ ಲವಂಗ, ಕಪ್ಪು ಏಲಕ್ಕಿ ಮತ್ತು ದಾಲ್ಚಿನ್ನಿ ಎಲೆ ಸೇರಿಸಿ ಸಿಡಿಯಲು ಬಿಡಿ. ಲಘುವಾಗಿ ಕಂದು ಬಣ್ಣ ಬರುವವರೆಗೆ ಬೇಯಿಸಿ.
    * ಅದಕ್ಕೆ ಮಟನ್ ಸೇರಿಸಿ ಬೆರೆಸಿಕೊಳ್ಳಿ.
    * ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ 2-3 ನಿಮಿಷಗಳ ಕಾಲ ಫ್ರೈ ಮಾಡಿ.
    * ಬಳಿಕ ಕಾಶ್ಮೀರಿ ಮೆಣಸಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಅರಿಶಿನ ಸೇರಿಸಿ ಮಟನ್ ಕಂದು ಬಣ್ಣ ಬರುವವರೆಗೆ ಸುಮಾರು 20 ನಿಮಿಷಗಳ ಕಾಲ ಹುರಿಯಿರಿ.
    * ಬಳಿಕ ಮೊಸರು ಮತ್ತು ಉಪ್ಪನ್ನು ಬೆರೆಸಿ 2-3 ನಿಮಿಷಗಳ ಕಾಲ ಮುಚ್ಚಳವಿಲ್ಲದೆ ಬೇಯಿಸಿ.
    * ಕತ್ತರಿಸಿದ ಬೆಳ್ಳುಳ್ಳಿ ಮತ್ತು ನೀರನ್ನು ಸೇರಿಸಿ, ನಂತರ ಪ್ಯಾನ್ ಅನ್ನು ಮುಚ್ಚಳದಿಂದ ಮುಚ್ಚಿ ಇನ್ನೂ 40-45 ನಿಮಿಷ ಬೇಯಿಸಿ.
    * ಬಳಿಕ ಉರಿಯನ್ನು ಆಫ್ ಮಾಡಿ, ಮುಚ್ಚಳವನ್ನು ತೆಗೆಯದೇ ಸುಮಾರು 2 ಗಂಟೆ ಹಾಗೇ ವಿಶ್ರಾಂತಿ ನೀಡಿ.
    * ಇದೀಗ ರಾಜಸ್ಥಾನಿ ಲಾಲ್ ಮಾಸ್ ಮಟನ್ ಕರಿ ತಯಾರಾಗಿದ್ದು, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಿಸಿಬಿಸಿಯಾಗಿ ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ರೆಸ್ಟೋರೆಂಟ್ ಸ್ಟೈಲ್‌ನ ಅಮೃತಸರಿ ಕುಲ್ಚಾ ಹೀಗೆ ಮಾಡಿ

    
    
  • ಹೊಸ ತೊಡಕಿಗೆ ರುಚಿಯಾದ ಮಟನ್ ಕರಿ ರೆಸಿಪಿ ನಿಮಗಾಗಿ

    ಹೊಸ ತೊಡಕಿಗೆ ರುಚಿಯಾದ ಮಟನ್ ಕರಿ ರೆಸಿಪಿ ನಿಮಗಾಗಿ

    ಯುಗಾದಿ ಹಬ್ಬದ ಮಾರನೇ ದಿನ ಆಚರಣೆ ಮಾಡೋದು ಹೊಸ ತೊಡಕು. ಯುಗಾದಿಯಂದು ಸಿಹಿ ಅಡುಗೆಗಳನ್ನು ಮಾಡಿ ಹೊಸ ವರ್ಷವನ್ನು ಬರ ಮಾಡಿಕೊಳ್ಳುತ್ತೇವೆ. ಅದರ ಮರುದಿನ ಏನಿದ್ದರೂ ಎಲ್ಲೆಡೆ ಬಾಡೂಟದ್ದೇ ಕಾರುಬಾರು. ಚಿಕನ್, ಮಟನ್ ಅಂತ ವಿವಿಧ ಭಕ್ಷ್ಯಗಳನ್ನು ಮಾಡಿ, ಹೊಸ ತೊಡಕನ್ನು ಸಂಭ್ರಮಿಸುತ್ತೇವೆ. ನಾವಿಂದು ಹೊಸ ತೊಡಕಿಗೆ ಸ್ಪೆಷಲ್ ರುಚಿಯಾದ ಮಟನ್ ಕರಿ (Mutton Curry) ರೆಸಿಪಿ ಹೇಳಿಕೊಡುತ್ತೇವೆ. ಈ ದಿನ ಬಾಡೂಟ ಸವಿದು ಹೊಸತೊಡಕನ್ನು ನೀವೂ ಆಚರಿಸಿ.

    ಬೇಕಾಗುವ ಪದಾರ್ಥಗಳು:
    ಮಟನ್ – 1 ಕೆ.ಜಿ
    ಬೆಳ್ಳುಳ್ಳಿ – 1
    ಅರಿಶಿನ – ಚಿಟಿಕೆ
    ಲವಂಗ – 7
    ಏಲಕ್ಕಿ – 3
    ಕೆಂಪು ಮೆಣಸಿನಕಾಯಿ – 8
    ಈರುಳ್ಳಿ – 4
    ತುರಿದ ಕೊಬ್ಬರಿ – 2 ಕಪ್
    ಗಸಗಸೆ – 2 ಟೀಸ್ಪೂನ್
    ಕಾಳು ಮೆಣಸು – 8
    ಖಾರದ ಪುಡಿ – 2 ಟೀಸ್ಪೂನ್
    ಶುಂಠಿ – 1 ಇಂಚು
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – 5 ಟೀಸ್ಪೂನ್ ಇದನ್ನೂ ಓದಿ: ಮಂಗಳೂರು ಸ್ಟೈಲ್‌ನಲ್ಲಿ ಚಿಕನ್ ಸುಕ್ಕ ಮಾಡಿ – ನಾಲಿಗೆ ಚಪ್ಪರಿಸಿ ಸವಿಯಿರಿ

    ಮಾಡುವ ವಿಧಾನ:
    * ಮೊದಲಿಗೆ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಒಂದು ಮಿಕ್ಸರ್ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಿ.
    * ತೊಳೆದು ಸಣ್ಣಗೆ ಕತ್ತರಿಸಿದ ಮಟನ್‌ಗೆ ರುಬ್ಬಿದ ಪದಾರ್ಥಗಳನ್ನು ಸವರಿ ಒಂದೂವರೆ ಗಂಟೆ ಇಡಿ.
    * ತುರಿದ ಕೊಬ್ಬರಿಯನ್ನು ಹುರಿದುಕೊಂಡು, ಅದರ ಜೊತೆಗೆ ಕತ್ತರಿಸಿದ 1 ಈರುಳ್ಳಿ, ಗಸಗಸೆ, ಲವಂಗ, ಏಲಕ್ಕಿ, ಕರಿಮೆಣಸು, ಖಾರದ ಪುಡಿ ಹಾಕಿಕೊಂಡು ರುಬ್ಬಿಕೊಳ್ಳಿ.
    * ಒಂದು ಬಾಣಲೆಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಅದಕ್ಕೆ ಉಳಿದಿರುವ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಹಾಕಿ, ಚಿಟಿಕೆ ಅರಿಶಿನ ಸೇರಿಸಿ ಫ್ರೈ ಮಾಡಿ.
    * ಬಳಿಕ ಅದಕ್ಕೆ ರುಬ್ಬಿದ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮಟನ್ ಹಾಕಿ ಬೇಕೆನಿಸಿದರೆ ನೀರು ಹಾಕಿ ಬೇಯಿಸಬೇಕು.
    * ಬೆಂದ ನಂತರ ಕೆಳಗೆ ಇಳಿಸಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿರುಚಿಯಾದ ಮಟನ್ ಕರಿ ಸವಿಯಲು ಸಿದ್ಧ. ಇದನ್ನೂ ಓದಿ: ಸರಳ, ರುಚಿಕರವಾಗಿ ಮೀನು ಸಾರು ಹೀಗೆ ಮಾಡಿ

  • ದೇಸಿ ಸ್ಟೈಲ್‍ನಲ್ಲಿ ಮಾಡಿ ಮಟನ್‌ ಕರಿ

    ದೇಸಿ ಸ್ಟೈಲ್‍ನಲ್ಲಿ ಮಾಡಿ ಮಟನ್‌ ಕರಿ

    ಭಾನುವಾರವೆಂದರೆ ನಾನ್ ವೆಜ್ ಪ್ರಿಯರು ಏನು ಸ್ಪೆಷಲ್ ಮಾಡಬೇಕು ಎಂದು ಯೋಚಿಸುತ್ತಿರುತ್ತಾರೆ. ಅದಕ್ಕೆ ಇಂದು ರುಚಿಕರವಾದ ಮಟನ್ ಅಥವಾ ಮೇಕೆ ಮೇಲೋಗರದ ಸರಳ ರೆಸಿಪಿಯನ್ನು ಇಲ್ಲಿ ತಿಳಿಸಲಾಗುವುದು. ಈ ರೆಸಿಪಿ ತುಂಬಾ ಸುಲಭವಾಗಿದ್ದು, ಈ ರೆಸಿಪಿಗೆ ಮೇಕೆ ಅಥವಾ ಕುರಿ ಮಾಂಸವನ್ನು ಬಳಸಬಹುದು.

    ಬೇಕಾಗಿರುವ ಪದಾರ್ಥಗಳು:
    * ಎಣ್ಣೆ – 4 ಟೀಸ್ಪೂನ್
    * ಕತ್ತರಿಸಿದ ಈರುಳ್ಳಿ- 2 ಕಪ್
    * ಕತ್ತರಿಸಿದ ಟೊಮ್ಯಾಟೊ – 1 ಕಪ್
    * ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
    * ಶುಂಠಿ ಪೇಸ್ಟ್ – 1 ಟೀಸ್ಪೂನ್
    * ಗರಂ ಮಸಾಲಾ ಪುಡಿ – 2 ಟೀಸ್ಪೂನ್


    * ಕೊತ್ತಂಬರಿ ಪುಡಿ – 2 ಟೀಸ್ಪೂನ್
    * ಜೀರಿಗೆ ಪುಡಿ – 1 ಟೀಸ್ಪೂನ್
    * ಅರಿಶಿನ ಪುಡಿ – 1/2 ಟೀಸ್ಪೂನ್
    * ಕೆಂಪು ಮೆಣಸಿನ ಪುಡಿ – 1/2 ಟೀಸ್ಪೂನ್
    * ಬೇಯಿಸಿದ ಮೇಕೆ ಮಾಂಸ – ಅರ್ಧ ಕೆಜಿ
    * ರುಚಿಗೆ ತಕ್ಕಷ್ಟು  ಉಪ್ಪು,
    * ಕತ್ತರಿಸಿದ ಕೊತ್ತಂಬರಿ ಸೊಪ್ಪು

    ಮಾಡುವ ವಿಧಾನ:
    * ಮೊದಲಿಗೆ ಎಲ್ಲ ಪದಾರ್ಥಗಳನ್ನು ಒಂದು ಕಡೆ ಜೋಡಿಸಿಕೊಳ್ಳಿ. ಮಧ್ಯಮ ಉರಿಯಲ್ಲಿ ದೊಡ್ಡ ಬಾಣಲೆಯಲ್ಲಿ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ.
    * ಬಿಸಿ ಎಣ್ಣೆಗೆ ಈರುಳ್ಳಿ ಸೇರಿಸಿ. ಈರುಳ್ಳಿ ತೆಳು ಗೋಲ್ಡನ್ ಬ್ರೌನ್ ಆಗಲು ಪ್ರಾರಂಭವಾಗುವವರೆಗೆ ಹುರಿಯಿರಿ. ನಂತರ ಅದರಲ್ಲಿರುವ ಎಣ್ಣೆ ತೆಗೆದುಹಾಕಿ.
    * ಫ್ರೈ ಮಾಡಿದ ಈರುಳ್ಳಿಯನ್ನು ಮಿಕ್ಸಿಗೆ ಹಾಕಿ ಸ್ವಲ್ಪ ಎಣ್ಣೆ ಹಾಕಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ.
    * ಟೊಮ್ಯಾಟೊ, ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಎಲ್ಲವನ್ನು ಮಿಕ್ಸ್ ಮಾಡಿ ರುಬ್ಬಿ.
    * ಮಧ್ಯಮ ಉರಿಯಲ್ಲಿ ಮತ್ತೆ ಎಣ್ಣೆಯನ್ನು ಬಿಸಿ ಮಾಡಿ ಈರುಳ್ಳಿ ಪೇಸ್ಟ್ ಅನ್ನು ಸೇರಿಸಿ. 2 ರಿಂದ 3 ನಿಮಿಷಗಳ ಕಾಲ ಹುರಿಯಿರಿ.
    * ಟೊಮ್ಯಾಟೊ, ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ನಂತರ ಗರಂ ಮಸಾಲಾ, ಕೊತ್ತಂಬರಿ, ಜೀರಿಗೆ, ಅರಿಶಿನ ಮತ್ತು ಕೆಂಪು ಮೆಣಸಿನ ಪುಡಿ ಸೇರಿಸಿ, ಚೆನ್ನಾಗಿ ಬೆರೆಸಿ.


    * ಫ್ರೈ ಮಾಡುವ ವೇಳೆ ಎಣ್ಣೆ ಕರಿಯಿಂದ ಬೇರ್ಪಡಲು ಪ್ರಾರಂಭವಾಗುವವರೆಗೆ ಮಸಾಲಾವನ್ನು ಹುರಿಯಿರಿ. ಇದು 10 ನಿಮಿಷಗಳವರೆಗೆ ತೆಗೆದುಕೊಳ್ಳಬಹುದು.
    * ಬೇಯಿಸಿ ಕಟ್ ಮಾಡಿದ ಮೇಕೆ ತುಂಡುಗಳನ್ನು ಮಸಾಲಾಗೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತು ಮಾಂಸವನ್ನು ಸಂಪೂರ್ಣವಾಗಿ ಮಸಾಲಾದೊಂದಿಗೆ ಬೆರೆಸಿ. ಈ ವೇಳೆ ಮಾಂಸವು ಕಂದು ಬಣ್ಣ ಬರುವವರೆಗೆ ಹುರಿಯಿರಿ.
    * ಪ್ಯಾನ್‍ಗೆ 1/2 ಕಪ್ ಬಿಸಿನೀರನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಲು ಬೆರೆಸಿ, ಕುದಿಯಲು ಪ್ಯಾನ್ ಮುಚ್ಚಿ. ಕರಿ ಹೆಚ್ಚು ಸುಟ್ಟು ಹೋಗದಂತೆ ನೋಡಿಕೊಳ್ಳಿ.

    ಕೊನೆಗೆ ಮಟನ್‌ ಕರಿ ಜೊತೆ ಚಪಾತಿ, ರೋಟಿ, ಪರೋಟ ಜೊತೆಗೆ ಸೇವಿಸಿ.

     

  • ಖಾರವಾದ ಮಟನ್ ಕರಿ ಮಾಡಿ ನಾಲಿಗೆ ಚಪ್ಪರಿಸಿ ಸವಿಯಿರಿ

    ಖಾರವಾದ ಮಟನ್ ಕರಿ ಮಾಡಿ ನಾಲಿಗೆ ಚಪ್ಪರಿಸಿ ಸವಿಯಿರಿ

    ರುಚಿಯಾದ ಆಹಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಾಂಸಾಹಾರ ಅಡುಗೆಗಳು ಎಂದರೆ ಬಾಯಲ್ಲಿ ನೀರೂರಿಸುತ್ತದೆ.  ಅತಿಥಿಗಳು ಬಂದಾಗ ಅಥವಾ ನಾಲಿಗೆ ರುಚಿಯಾದ ಆಹಾರ ತಿನ್ನಲು ಬಯಸಿದಾಗ,  ನೀವೂ ಮನೆಯಲ್ಲಿ ಸುಲಭ ವಿಧಾನಗಳ ಮೂಲಕ ಖಾರವಾದ ಮಟನ್ ಕರಿಯನ್ನು ತಯಾರಿಸಬಹುದಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಕುರಿ ಮಾಂಸ- 1 ಕೆಜಿ
    * ಟೊಮೆಟೋ- 2
    * ಶುಂಠಿ ಬೆಳ್ಳುಳ್ಳಿ ಪೇಸ್ಟ್- 2 ಚಮಚ
    * ಈರುಳ್ಳಿ- 2
    * ಗರಂಮಸಾಲೆ- 1ಚಮಚ
    * ದನಿಯಾ ಪುಡಿ- 2 ಚಮಚ
    * ಜೀರಿಗೆ ಪುಡಿ- 2 ಚಮಚ
    * ಅರಿಸಿಣ- ಸ್ವಲ್ಪ
    * ಖಾರದಪುಡಿ – 5 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ತೆಂಗಿನ ಎಣ್ಣೆ- ಅರ್ಧ ಕಪ್
    * ಕೊತ್ತಂಬರಿ ಸೊಪ್ಪು- ಸ್ವಲ್ಪ

    ಮಾಡುವ ವಿಧಾನ:

    * ಕುಕ್ಕರ್‍ಗೆ ಮಟ್ಟನ್, ತೆಂಗಿನ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಮೂರರಿಂದ ನಾಲ್ಕು ವಿಶಿಲ್ ಕೂಗಿಸಿ ಬೇಯಿಸಿಕೊಳ್ಳಿ.
    * ಮಿಕಿ ಜಾರಿಗೆ ಈರುಳ್ಳಿ, ಟೊಮೆಟೋ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ರುಬ್ಬಿಕೊಳ್ಳಿ. ಇದನ್ನೂ ಓದಿ: ಸ್ಪೆಷಲ್ ಮಟನ್ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ


    * ನಂತರ ಒಂದು ಬಾಣೆಲೆಗೆ ತೆಂಗಿನ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ರುಬ್ಬಿಕೊಂಡ ಈರುಳ್ಳಿ ಪೇಸ್ಟ್, ಗರಂಮಸಾಲೆ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅರಿಶಿಣ ಪುಡಿ, ಖಾರದಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಇದನ್ನೂ ಓದಿ: ಖಾರವಾದ ಮಟನ್ ಖೀಮಾ ಮಾಡಿ ಟೇಸ್ಟ್ ನೋಡಿ


    * ನಂತರ ಈ ಪಾತ್ರೆಗೆ ಈಗಾಗಲೇ ಬೀಯಿಸಿದ ಕುರಿ ಮಾಂಸ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಮಡನ್ ಕರಿ ಸವಿಯಲು ಸಿದ್ಧವಾಗುತ್ತದೆ.

     

  • ಪತ್ನಿ ಮಟನ್ ಕರಿ ಮಾಡ್ಲಿಲ್ಲ ಅಂತ ಪೊಲೀಸರಿಗೆ ಟಾರ್ಚರ್ ಕೊಟ್ಟ ವ್ಯಕ್ತಿ

    ಪತ್ನಿ ಮಟನ್ ಕರಿ ಮಾಡ್ಲಿಲ್ಲ ಅಂತ ಪೊಲೀಸರಿಗೆ ಟಾರ್ಚರ್ ಕೊಟ್ಟ ವ್ಯಕ್ತಿ

    ಹೈದರಾಬಾದ್: ಪತ್ನಿ ಮಟನ್ ಕರಿ ಮಾಡಿ ಕೊಡಲಿಲ್ಲ ಎಂದು ಪೊಲೀಸರಿಗೆ ಪದೇ, ಪದೇ ಕರೆ ಮಾಡುತ್ತಿದ್ದ ವ್ಯಕ್ತಿಯನ್ನು ತೆಲಂಗಾಣದ ನಲ್ಗೊಂಡ ಪೊಲೀಸರು ಬಂಧಿಸಿದ್ದಾರೆ.

    ಮಾರ್ಚ್ 18ರ ಶುಕ್ರವಾರ ರಾತ್ರಿ ಊಟದ ವೇಳೆ ತನಗೆ ಇಷ್ಟವಾದ ಮಟನ್ ಕರಿ ಮಾಡಲಿಲ್ಲ ಎಂಬ ಕಾರಣಕ್ಕೆ ನವೀನ್ ಮತ್ತು ಪತ್ನಿಯ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ನವೀನ್ ಪೊಲೀಸ್ ಸಹಾಯವಾಣಿ ಸಂಖ್ಯೆ 100ಕ್ಕೆ ಪದೇ ಪದೇ ಕರೆ ಮಾಡಿದ್ದಾನೆ. ಇದನ್ನೂ ಓದಿ: ಸೆಕ್ಸ್ ಮಾಡಲು ನಿರಾಕರಿಸಿದ್ದಕ್ಕೆ ಪ್ರಿಯತಮೆಯನ್ನೇ ಕೊಂದ ಪಾಗಲ್ ಪ್ರೇಮಿ

    POLICE JEEP

    ಆರಂಭದಲ್ಲಿ ನವೀನ್ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಗೆ ಡಯಲ್ ಮಾಡಿ ಘಟನೆಯನ್ನು ವಿವರಿಸಿ ತನ್ನ ಹೆಂಡತಿಯ ವಿರುದ್ಧ ದೂರು ನೀಡಿದಾಗ, ನಿರ್ವಾಹಕರು ಮದ್ಯದ ಅಮಲಿನಲ್ಲಿ ಕರೆ ಮಾಡಿದ್ದಾನೆ ಎಂದು ಭಾವಿಸಿ ಸುಮ್ಮನಿದ್ದರು. ಆದರೆ ನಿರಂತರವಾಗಿ ಕರೆ ಮಾಡುತ್ತಿದ್ದರಿಂದ ಕರ್ತವ್ಯದಲ್ಲಿದ್ದ ಪೊಲೀಸ್ ತನ್ನ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ.

    ನಂತರ ನವೀನ್ ಅವರ ಮನೆಗೆ ಗಸ್ತು ಕಾರನ್ನು ಕಳುಹಿಸಿ ಪರಿಶೀಲನೆ ನಡೆಸಿದಾಗ ಸೋಮಾರಿಯಂತೆ ಮಲಗಿರುವ ಸ್ಥಿತಿಯಲ್ಲಿ ನವೀನ್‍ನನ್ನು ಕಂಡು ಪೊಲೀಸರು ಆತನನ್ನು ಮಲಗಲು ಬಿಟ್ಟು ಹೊರಟು ಹೋಗಿದ್ದರು. ಆದರೆ ಶನಿವಾರ ಬೆಳಗ್ಗೆ ಕಣಗಲ್ ಮಂಡಲದ ಚೆರ್ಲಾ ಗೌರಾರಂ ಗ್ರಾಮದಲ್ಲಿ ಪೊಲೀಸರು ಮತ್ತೆ ಆತನ ಮನೆ ತೆರಳಿ ನವೀನ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಮದುವೆ ದಿನದಂದೇ ಯುವತಿ ನೇಣಿಗೆ ಶರಣು – ತಾಳಿಕಟ್ಟಿ ಕಲ್ಯಾಣ ಮಂಟಪದಿಂದಲೇ ಕಾಲ್ಕಿತ್ತ ಯುವಕ

  • ರುಚಿಯಾದ ಮಟನ್  ಕರ್ರಿ ಮಾಡುವ ವಿಧಾನ

    ರುಚಿಯಾದ ಮಟನ್ ಕರ್ರಿ ಮಾಡುವ ವಿಧಾನ

    ಭಾನುವಾರ ಬಂದರೆ ಸಾಕು ನಾನ್ ವೆಜ್ ಪ್ರಿಯರಿಗೆ ಸಂಭ್ರಮ. ರಜಾ ದಿನವಾಗಿದ್ದರಿಂದ ಕೆಲವರ ಮನೆಯಲ್ಲಿ ನಾನ್ ವೆಜ್ ಮಾಡಲೇಬೇಕಾಗುತ್ತದೆ. ಪ್ರತಿವಾರದಂತೆ ಚಿಕನ್ ಸಾಂಬಾರ್, ಕಬಾಬ್, ಬಿರಿಯಾನಿ ಮಾಡಿದರೆ ಮನೆಯವರಿಗೂ ಬೇಸರವಾಗುತ್ತದೆ. ಆದ್ದರಿಂದ ನಿಮಗಾಗಿ ರುಚಿರುಚಿಯಾಗಿ ಮಟನ್ ಕರ್ರಿ ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಮಟನ್ – 1 ಕೆ.ಜಿ.
    2. ಬೆಳ್ಳುಳ್ಳಿ – 1
    3. ಅರಿಶಿಣ – ಚಿಟಿಕೆ
    4. ಲವಂಗ – 7
    5. ಏಲಕ್ಕಿ- 3
    6. ಕೆಂಪು ಮೆಣಸಿನ ಕಾಯಿ – 8
    7. ಈರುಳ್ಳಿ – 4
    8. ಕೊಬ್ಬರಿ ತುರಿ – 2 ಕಪ್
    9. ಗಸಗಸೆ – 2 ಚಮಚ
    10. ಕರಿ ಮೆಣಸಿನ ಕಾಳು – 8
    11. ಖಾರದ ಪುಡಿ -2 ಚಮಚ
    12. ಶುಂಠಿ – ಸ್ವಲ್ಪ
    13. ಉಪ್ಪು ರುಚಿಗೆ ತಕ್ಕಷ್ಟು
    14. ಎಣ್ಣೆ – 4-5 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ರುಬ್ಬಿಕೊಳ್ಳಿ.
    * ತೊಳೆದ ಸಣ್ಣೆಗೆ ಕತ್ತರಿಸಿದ ಮಟನ್‍ಗೆ ರುಬ್ಬಿದ ಪದಾರ್ಥವನ್ನು ಅದರ ಮೇಲೆ ಸವರಿ ಒಂದೂವರೆ ಗಂಟೆ ಇಡಿ.
    * ಕೊಬ್ಬರಿ ತುರಿಯನ್ನು ಹುರಿದುಕೊಂಡು, ಅದರ ಜೊತೆಗೆ ಕಟ್ ಮಾಡಿದ್ದ ಈರುಳ್ಳಿ(1 ಈರುಳ್ಳಿ), ಗಸಗಸೆ, ಲವಂಗ, ಏಲಕ್ಕಿ, ಕರಿಮೆಣಸು, ಖಾರದ ಪುಡಿ ಹಾಕಿಕೊಂಡು ರುಬ್ಬಿಕೊಳ್ಳಿ.
    * ಈ ಒಂದು ಬೌಲ್‍ಗೆ 4-5 ಚಮಚ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಚಿಟಿಕೆ ಅರಿಶಿಣ ಹಾಕಿ ಫ್ರೈ ಮಾಡಿ.
    * ಬಳಿಕ ಅದಕ್ಕೆ ರುಬ್ಬಿದ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮಟನ್ ಹಾಕಿ ಬೇಕೆನಿಸಿದರೆ ನೀರು ಹಾಕಿ ಬೇಯಿಸಬೇಕು. ಬೆಂದ ನಂತರ ಕೆಳಗೆ ಇಳಿಸಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿರುಚಿಯಾದ ಮಟನ್ ಕರ್ರಿ ಸವಿಯಲು ಸಿದ್ಧ.

  • ಮಟನ್ ಸಾಂಬಾರ್ ಮಾಡು ಎಂದಿದ್ದಕ್ಕೆ ಪತ್ನಿಯಿಂದಲೇ ಪತಿಯ ಕೊಲೆ!

    ಮಟನ್ ಸಾಂಬಾರ್ ಮಾಡು ಎಂದಿದ್ದಕ್ಕೆ ಪತ್ನಿಯಿಂದಲೇ ಪತಿಯ ಕೊಲೆ!

    ಬೆಂಗಳೂರು: ಮಟನ್ ಸಾಂಬಾರ್ ಮಾಡು ಎಂದಿದ್ದಕ್ಕೆ ಪತ್ನಿ ತನ್ನ ಪತಿಯನ್ನೇ ಕೊಲೆ ಮಾಡಿದ ಘಟನೆ ಬೆಂಗಳೂರಿನ ಕುಮಾರ್ ಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಗೋಪಾಲ್ (46) ಕೊಲೆಯಾದ ಪತಿ. ಪತಿ ಗೋಪಾಲ್ ಕಂಠಪೂರ್ತಿ ಕುಡಿದು ಮಟನ್ ಸಾಂಬಾರ್ ಮಾಡುವಂತೆ ಗಲಾಟೆ ಮಾಡುತ್ತಿದ್ದನು. ಇದ್ದರಿಂದ ರೊಚ್ಚಿಗೆದ್ದ ಪತ್ನಿ ರುದ್ರಮ್ಮ ಆತನನ್ನು ಕೊಲೆ ಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ.

    ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ನಿ ರುದ್ರಮ್ಮಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.