Tag: Muthodi Forest

  • ಮುತ್ತೋಡಿ ಅರಣ್ಯದಲ್ಲಿ ಪ್ರವಾಸಿಗರ ಕ್ಯಾಮೆರಾಕ್ಕೆ  ಪೋಸ್ ​​ ಕೊಟ್ಟ ಹುಲಿರಾಯ

    ಮುತ್ತೋಡಿ ಅರಣ್ಯದಲ್ಲಿ ಪ್ರವಾಸಿಗರ ಕ್ಯಾಮೆರಾಕ್ಕೆ ಪೋಸ್ ​​ ಕೊಟ್ಟ ಹುಲಿರಾಯ

    ಚಿಕ್ಕಮಗಳೂರು: ಮುತ್ತೋಡಿ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿರಾಯನ ದರ್ಶನವಾಗಿದೆ. ಹುಲಿರಾಯ ಕ್ಯಾಮರಾಕ್ಕೆ ಪೋಸ್ ನೀಡಿದ್ದು ಪ್ರವಾಸಿಗರು ಫುಲ್ ದಿಲ್ ಖುಷ್ ಆಗಿದ್ದಾರೆ.

    ತಾಲೂಕಿನ ಮುತ್ತೋಡಿ ಅರಣ್ಯ ವಲಯಕ್ಕೆ ಆಗಾಗ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಬಂದವರೆಲ್ಲರೂ ಕೂಡ ಕಾಡಿನಲ್ಲಿ ಬೆಳಗ್ಗೆ, ಸಂಜೆ ಸಫಾರಿಗೆ ತೆರಳುತ್ತಾರೆ. ಆದರೆ, ಬಂದವರಿಗೆಲ್ಲಾ ಹುಲಿರಾಯನ ದರ್ಶನವಾಗುವುದಿಲ್ಲ. ಆದರೆ, ನಿನ್ನೆ ಸಂಜೆ ಸಫಾರಿಗೆ ಹೊರಟ ಪ್ರವಾಸಿಗರಿಗೆ ನೀರು ಕುಡಿದು ಹಳ್ಳ ದಾಟುತ್ತಿದ್ದ ಹುಲಿರಾಯನ ದರ್ಶನವಾಗಿದೆ. ಹಳ್ಳವನ್ನು ದಾಟುತ್ತಿದ್ದ ವ್ಯಾಘ್ರ ಪ್ರವಾಸಿಗರು ನನ್ನನ್ನೇ ನೋಡುತ್ತಿದ್ದಾರೆ ಎಂದು ಭಾವಿಸಿ ಪ್ರವಾಸಿಗರ ಕ್ಯಾಮೆರಾಕ್ಕೆ ಪೋಸ್ ಕೊಟ್ಟು ಹೋಗಿದೆ. ಇದನ್ನೂ ಓದಿ: ರಸ್ತೆ ಪಕ್ಕದಲ್ಲೇ ಹೊತ್ತಿ ಉರಿದ ಕಾರು – ತಪ್ಪಿದ ಭಾರೀ ಅನಾಹುತ

    ಕಾಡಲ್ಲಿ ಹುಲಿಯನ್ನು ಕಣ್ಣಾರೆ ಕಂಡ ಪ್ರವಾಸಿಗರು ಸಂತೋಷದಿಂದ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ. ಮುತ್ತೋಡಿ ಅರಣ್ಯದಲ್ಲಿ ಪ್ರತಿದಿನ ಬೆಳಗ್ಗೆ-ಸಂಜೆ ಸಫಾರಿಗೆ ಕರೆದುಕೊಂಡು ಹೋಗುತ್ತಾರೆ. ಈ ವೇಳೆ, ಆನೆಗಳ ಹಿಂಡು, ಕಾಡುಕೋಣ, ನವಿಲು, ಉಡ, ಜಿಂಕೆ, ಸಾರಗ ಸೇರಿದಂತೆ ಸಾಕಷ್ಟು ಪ್ರಾಣಿಗಳು ಪ್ರವಾಸಿಗರ ಕಣ್ಣಿಗೆ ಬೀಳುತ್ತವೆ. ಆದರೆ, ಚಿರತೆ ಹಾಗೂ ಹುಲಿ ಬೀಳುವುದು ತುಂಬಾ ವಿರಳ. ಕೆಲವೊಮ್ಮೆ ಪ್ರವಾಸಿಗರಿಗೆ ಹುಲಿಗಳ ಹೆಜ್ಜೆ ಗುರುತುಗಳು ಸಿಗುತ್ತವೆ. ಆದರೆ, ನಿನ್ನೆ ಹೋದ ಪ್ರವಾಸಿಗರಿಗೆ ಕ್ಯಾಮರಾ ಕಣ್ಣಿಗೆ ಮನುಷ್ಯರಂತೆ ಪೋಸ್ ನೀಡುವ ಹುಲಿಯೇ ಸಿಕ್ಕಿದೆ. ಅಂದಾಜು 25 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿರುವ ಮುತ್ತೋಡಿ ಅರಣ್ಯ ವಲಯವನ್ನೂ ಆಡಳಿತದ ಅನುಕೂಲಕ್ಕಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಇದನ್ನೂ ಓದಿ: ಅರೆನೂರು ಗ್ರಾಮಕ್ಕೆ ಸೇತುವೆ ಇಲ್ಲದೇ ಜನ ಪರದಾಟ- ಪ್ರಾಣ ಕೈಲಿಡಿದೇ ಓಡಾಟ!

  • ಭಾರೀ ಮಳೆಗೆ ಮುತ್ತೋಡಿ ಅರಣ್ಯ ವಲಯದಲ್ಲಿ ಗುಡ್ಡ ಕುಸಿತ

    ಭಾರೀ ಮಳೆಗೆ ಮುತ್ತೋಡಿ ಅರಣ್ಯ ವಲಯದಲ್ಲಿ ಗುಡ್ಡ ಕುಸಿತ

    – 30 ಕಿ.ಮೀ. ಬಳಸಿ ಮಲೆನಾಡಿಗರ ಸಂಚಾರ

    ಚಿಕ್ಕಮಗಳೂರು: ತಾಲೂಕಿನ ಮುತ್ತೋಡಿ ಅರಣ್ಯ ವಲಯದಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆ ಪಕ್ಕದ ಗುಡ್ಡ ಕುಸಿದು ಮಲೆನಾಡಿಗರು ಸುಮಾರು 30 ಕಿ.ಮೀ. ಬಳಸಿಕೊಂಡು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

    ಮುತ್ತೋಡಿ ಅರಣ್ಯ ವಲಯದ ಹತ್ತಾರು ಹಳ್ಳಿಗಳ ಜನರರಿದ್ದು, ಮಲೆನಾಡಲ್ಲಿ ಮಳೆ ಸಂಪೂರ್ಣ ಕ್ಷೀಣಿಸಿದೆ. ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ, ಬಾಳೆಹೊನ್ನೂರು, ಕಳಸ ಹಾಗೂ ಕೊಪ್ಪ ಭಾಗದಲ್ಲಿ ಮಳೆ ಕುಂಠಿತಗೊಂಡಿದೆ. ಆಗಾಗ್ಗೆ ಅಲ್ಲಲ್ಲೇ ಸ್ವಲ್ಪ ಹೊತ್ತು ಸುರಿದು ಹೋಗುತ್ತಿದೆ.

    ಕಳೆದ ರಾತ್ರಿ ಮುತ್ತೋಡಿ ಅರಣ್ಯ ವಲಯದ ಮುತ್ತೋಡಿ-ಹೊನ್ನಾಳ ಅರಣ್ಯ ಇಲಾಖೆಯ ಚೆಕ್‍ಪೋಸ್ಟ್ ನಿಂದ ಮೂರು ಕಿ.ಮೀ. ದೂರದಲ್ಲಿ ರಸ್ತೆ ಪಕ್ಕದ ಗುಡ್ಡ ಕುಸಿದಿದ್ದು, ಹಳ್ಳಿಗರು 30 ಕಿ.ಮೀ. ಸುತ್ತಿಕೊಂಡು ಓಡಾಡುವಂತಾಗಿದೆ. ಶಿರವಾಸೆ, ಗಾಳಿಗುಡ್ಡೆ, ಹೊನ್ನಾಳ ಸೇರಿದಂತೆ ಮುತ್ತೊಡಿ ಅರಣ್ಯ ವಲಯದ ಹತ್ತಾರು ಹಳ್ಳಿಯ ಜನ ಕೊಳಗಾಮೆ ಮಾರ್ಗವಾಗಿ ಕೈಮಾರ ಬಂದು ಚಿಕ್ಕಮಗಳೂರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ.

    ಜಿಲ್ಲೆಯ ಬಯಲುಸೀಮೆ ಭಾಗವಾದ ತರೀಕೆರೆ ಹಾಗೂ ಅಜ್ಜಂಪುರದಲ್ಲಿ ಕಳೆದ ರಾತ್ರಿ ಭಾರೀ ಮಳೆಯಾಗಿದೆ. ಬೀರೂರಿನಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರೆ, ಅಜ್ಜಂಪುರ ತಾಲೂಕಿನ ಶಿವನಿ ಕೆರೆ ತುಂಬಿದ ಪರಿಣಾಮ ಈರುಳ್ಳಿ ಹೊಲಗಳು ಸಂಪೂರ್ಣ ಜಲಾವೃತಗೊಂಡಿವೆ. ಕಳೆದ ವರ್ಷ ಕೂಡ ಅಜ್ಜಂಪುರದಲ್ಲಿ ಧಾರಾಕಾರ ಮಳೆ ಸುರಿದಿದ್ದರಿಂದ ಒಂದು ಹೊಲದ ಈರುಳ್ಳಿ ಮತ್ತೊಂದು ಹೊಲಕ್ಕೆ ಹೋಗಿ ನಿಂತಿತ್ತು. ಈ ವರ್ಷ ಕೂಡ ಭಾರೀ ಮಳೆಯಿಂದ ಬಯಲುಸೀಮೆ ಭಾಗದ ಬಹುತೇಕ ಬೆಳೆಗಳು ವರುಣದೇವನಿಗೆ ಆಹುತಿಯಾಗಿವೆ. ಭಾರೀ ಮಳೆಯಿಂದ ಬಯಲುಸೀಮೆ ಭಾಗದಲ್ಲಿ ಬಹುತೇಕ ಬೆಳೆಗಳು ನೀರುಪಾಲಾಗಿದ್ದು, ಕಳೆದ ವರ್ಷವೂ ಹೀಗೆ ಆಯ್ತು, ಈ ವರ್ಷವೂ ಹೀಗೆ ಆಯಿತು ಎಂದು ಜಿಲ್ಲೆಯ ಬಯಲುಸೀಮೆ ಭಾಗದ ರೈತರು ಕಂಗಾಲಾಗಿದ್ದಾರೆ.