Tag: Mustafa raj

  • ನನಗೆ ಬೆಂಬಲವಾಗಿ ಪತಿ ಬಂಡೆಗಲ್ಲಿನಂತೆ ನಿಂತಿದ್ದರು- ಟ್ರೋಲ್ ಬಗ್ಗೆ ಪ್ರಿಯಾಮಣಿ ಮಾತು

    ನನಗೆ ಬೆಂಬಲವಾಗಿ ಪತಿ ಬಂಡೆಗಲ್ಲಿನಂತೆ ನಿಂತಿದ್ದರು- ಟ್ರೋಲ್ ಬಗ್ಗೆ ಪ್ರಿಯಾಮಣಿ ಮಾತು

    ನ್ನಡತಿ ಪ್ರಿಯಾಮಣಿ (Priyamani) ಇದೀಗ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅರ್ಟಿಕಲ್ 370, ಮೈದಾನ್ ಸಿನಿಮಾದ ಸಕ್ಸಸ್ ನಂತರ ಇದೀಗ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ನಟಿ ಮಾತನಾಡಿದ್ದಾರೆ. ಟ್ರೋಲಿಂಗ್ ಮತ್ತು ನೆಗೆಟಿವ್ ಕಾಮೆಂಟ್‌ಗಳಿಂದ ಆದ ಪರಿಣಾಮದ ಬಗ್ಗೆ ಸಂದರ್ಶನವೊಂದರಲ್ಲಿ ಪ್ರಿಯಾಮಣಿ ಮೌನ ಮುರಿದಿದ್ದಾರೆ.

    ಜನರ ಕಾಮೆಂಟ್‌ಗಳು ಕೇವಲ ನನಗೆ ಮಾತ್ರವಲ್ಲದೆ, ನನ್ನ ಕುಟುಂಬದ ಮೇಲೂ, ವಿಶೇಷವಾಗಿ ನನ್ನ ತಂದೆ, ತಾಯಿಯ ಮೇಲೆ ತುಂಬಾ ಪರಿಣಾಮ ಬೀರಿತ್ತು. ಆಗ ನಮಗಾಗಿದ್ದ ನೋವು ವಿವರಿಸಲು ಅಸಾಧ್ಯ ಎಂದು ಪ್ರಿಯಾಮಣಿ ಬೇಸರ ತೊಡಿಕೊಂಡಿದ್ದಾರೆ. ಆಗ ನನ್ನ ಪತಿ ನನ್ನ ಪರವಾಗಿ ಬಂಡೆಗಲ್ಲಿನಂತೆ ನಿಂತಿದ್ದರು. ಏನು ಬೇಕಾದರೂ ಆಗಲಿ, ಅವೆಲ್ಲವೂ ಮೊದಲು ನನಗೆ ಬರುವಂತೆ ನೋಡಿಕೊಳ್ಳುತ್ತೇನೆ. ಅದೆಂಥ ಸಂದರ್ಭದಲ್ಲೂ ನನ್ನ ಕೈ ಹಿಡಿದುಕೋ ಮತ್ತು ಪ್ರತಿ ಹೆಜ್ಜೆಯಲ್ಲೂ ನನ್ನ ಜೊತೆಯಾಗಿರು ಎಂದು ಪತಿ ಹೇಳಿದ್ದರು ಎಂದು ನಟಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ತೆಲುಗಿನ ‘ಕಣ್ಣಪ್ಪ’ ಚಿತ್ರತಂಡ ಸೇರಿಕೊಂಡ ಅಕ್ಷಯ್ ಕುಮಾರ್

    ಮದುವೆಗೂ ಮುನ್ನವೇ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೆವು. ಈ ಬಗ್ಗೆ ಮುಸ್ತಫಾ ಜೊತೆ ಚರ್ಚಿಸಿದಾಗ, ನನ್ನೊಂದಿಗೆ ನಿಲ್ಲು ಮತ್ತು ನನ್ನನ್ನು ನಂಬು ಎಂದಷ್ಟೇ ಹೇಳಿದ್ದರು. ಆಗಲೇ ನಾವಿಬ್ಬರು ಕಷ್ಟಗಳ ಹಾದಿಯಲ್ಲಿ ಜೊತೆಯಾಗಿಯೇ ಸಾಗುವ ಮತ್ತು ಮುಂಬರುವ ಬಿರುಗಾಳಿಯನ್ನು ಧೈರ್ಯದಿಂದ ಎದುರಿಸುವ ನಿರ್ಧಾರ ಮಾಡಿದೆವು ಎಂದು ವಿವರಿಸಿದ್ದಾರೆ ಪ್ರಿಯಾಮಣಿ.

    ಈ ರೀತಿ ಟ್ರೋಲ್ಸ್, ಟೀಕೆ ಕೇಳಿ ಬಂದಾಗ ನಾನು ಮುಂಬೈನಲ್ಲಿ ಇರಲಿಲ್ಲ. ಪತಿ ಜೊತೆ ಬೆಂಗಳೂರಿನಲ್ಲಿದ್ದೆ. ಆದರೆ ಎಲ್ಲವನ್ನು ನಿಭಾಯಿಸಿದೆವು. ನಮ್ಮ ಕುಟುಂಬದವರಿಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಬೇಡಿ ಅಂತ ಹೇಳಿದ್ದೇವು. ದಿನದ ಕೊನೆಗೆ ಉಳಿಯುವುದು ನಾವೇ ಎಂದು ಹೇಳಿ ಸಮಾಧಾನ ಮಾಡಿದ್ದೆ. ಅವರ ಆಶೀರ್ವಾದ ಮತ್ತು ಪ್ರಾರ್ಥನೆಯೇ ನಮಗೆ ಶ್ರೀರಕ್ಷೆ ಎಂದು ಪ್ರಿಯಾಮಣಿ ಮಾತನಾಡಿದ್ದಾರೆ.

    2017ರಲಿ ಮುಸ್ತಫಾ ರಾಜ್ (Mustafa Raj) ಜೊತೆ ಪ್ರಿಯಾಮಣಿ ಮದುವೆಯಾಗಿದ್ದಾರೆ. ನಟಿಯ ಸಿನಿಮಾ ಕೆರಿಯರ್‌ಗೆ ಮುಸ್ತಫಾ ರಾಜ್ ಬೆಂಬಲವಾಗಿ ನಿಂತಿದ್ದಾರೆ. ಅಂದಹಾಗೆ, ರಾಮ್, ಅಣ್ಣಾಬಾಂಡ್ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ಪ್ರಿಯಾಮಣಿ ನಟಿಸಿದ್ದಾರೆ. ಸೌತ್ ಮತ್ತು ಬಾಲಿವುಡ್‌ನಲ್ಲಿ ನಟಿಗೆ ಭಾರೀ ಬೇಡಿಕೆ ಇದೆ.

  • ಕೋಟಿ ಕೊಟ್ರೂ ಸಿನಿಮಾದಲ್ಲಿ ಕಿಸ್‌ ಮಾಡಲ್ಲ- ಪ್ರಿಯಾಮಣಿ ಖಡಕ್‌ ಉತ್ತರ

    ಕೋಟಿ ಕೊಟ್ರೂ ಸಿನಿಮಾದಲ್ಲಿ ಕಿಸ್‌ ಮಾಡಲ್ಲ- ಪ್ರಿಯಾಮಣಿ ಖಡಕ್‌ ಉತ್ತರ

    ಬೆಂಗಳೂರಿನ ಬ್ಯೂಟಿ, ಕನ್ನಡತಿ ಪ್ರಿಯಾಮಣಿ (Priyamani) ಅವರು ಭಾರತೀಯ ಸಿನಿಮಾರಂಗದಲ್ಲಿ ಟಾಪ್ ನಟಿಯರಲ್ಲಿ ಒಬ್ಬರಾಗಿ ಗಮನ ಸೆಳೆಯುತ್ತಿದ್ದಾರೆ. ಬಹುಭಾಷೆಗಳಲ್ಲಿ ನಟಿಸುವ ಮೂಲಕ ಪ್ರಿಯಾಮಣಿ ಚಾರ್ಮ್ ಉಳಿಸಿಕೊಂಡಿದ್ದಾರೆ. ಸದ್ಯ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟು 20 ವರ್ಷಗಳಾಗಿದೆ. ಇದುವೆರೆಗೂ ಕಿಸ್ಸಿಂಗ್ ಸೀನ್‌ಗೆ ನಟಿ ನೋ ಎನ್ನುತ್ತಾರೆ. ಯಾಕೆ? ಈ ಬಗ್ಗೆ ಪ್ರಿಯಾಮಣಿ ಅವರ ಅಭಿಪ್ರಾಯವೇನು ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    ಕನ್ನಡದ ರಾಮ್, ಅಣ್ಣಾ ಬಾಂಡ್, ಕೋ ಕೋ, ವಿಷ್ಣುವರ್ಧನ, ಲಕ್ಷ್ಮಿ ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ‘ದಿ ಫ್ಯಾಮಿಲಿ ಮ್ಯಾನ್’ (The Family Man ) ವೆಬ್ ಸಿರೀಸ್‌ನಲ್ಲಿ ಪ್ರಿಯಾ ನಟಿಸಿದ್ದಾರೆ. ‌’ಚೆನ್ನೈ ಎಕ್ಸ್‌ಪ್ರೆಸ್’ ಸಿನಿಮಾದಲ್ಲಿನ ಹಾಡಿಗೆ ಶಾರುಖ್ ಖಾನ್ ಜೊತೆ ಪ್ರಿಯಾಮಣಿ ಹೆಜ್ಜೆ ಹಾಕಿದ್ದಾರೆ. 20 ವರ್ಷಗಳಲ್ಲಿ ಭಿನ್ನ ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರೋ ಪ್ರಿಯಾಮಣಿ, ಕೋಟಿ ಸಂಭಾವನೆ ಕೊಟ್ರು ಹಾಟ್ ದೃಶ್ಯ, ಲಿಪ್ ಲಾಕ್ ಸೀನ್‌ಗಳಲ್ಲಿ ನಟಿಸೋದಿಲ್ಲವಂತೆ. ಇದನ್ನೂ ಓದಿ:RRR ಹೀರೋ ಮಗಳಿಗೆ KKK ಹೆಸರು ನಾಮಕರಣ: ಲಲಿತ ಸಹಸ್ರನಾಮದಿಂದ ಹೆಸರು ಆಯ್ಕೆ

    ಸಿನಿಮಾದಲ್ಲಿ ನಟಿಸುವಾಗ ಅದು ಕೇವಲ ಒಂದು ಪಾತ್ರ ಆಗಿರುತ್ತದೆ. ಈ ಕಾರಣಕ್ಕೆ ಕೆಲವರು ಎಂತಹುದೇ ದೃಶ್ಯ ಇದ್ದರೂ ನಟಿಸುತ್ತಾರೆ. ಆದರೆ, ಕೆಲವರು ಮಡಿವಂತಿಕೆ ಕಾಪಾಡಿಕೊಂಡಿದ್ದಾರೆ. ಕಿಸ್ ದೃಶ್ಯಗಳಲ್ಲಿ, ಹಸಿಬಿಸಿ ದೃಶ್ಯಗಳಲ್ಲಿ ನಟಿಸೋಕೆ ನೋ ಎನ್ನುತ್ತಾರೆ. ಪ್ರಿಯಾಮಣಿ ಅವರು ಎರಡನೇ ಸಾಲಿಗೆ ಸೇರುತ್ತಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತೆರೆಮೇಲೆ ನಾನು ಕಿಸ್ ಮಾಡಲ್ಲ. ಅದಕ್ಕೆ ನಾನು ಯಾವಾಗಲೂ ನೋ ಎನ್ನುತ್ತೇನೆ. ನನಗೆ ಗೊತ್ತು ಅದು ಕೇವಲ ಪಾತ್ರ ಮತ್ತು ಅದು ನನ್ನ ಕೆಲಸ. ಆದರೆ, ಬೇರೆ ಪುರುಷನೊಂದಿಗೆ ತೆರೆಮೇಲೆ ಕಿಸ್ ಮಾಡಲು ನನಗೆ ಇರಿಸುಮುರುಸು ಉಂಟಾಗುತ್ತದೆ. ನಾನು ಉತ್ತರ ಕೊಡಬೇಕಾಗಿರುವುದು ನನ್ನ ಗಂಡನಿಗೆ ಮಾತ್ರ ಎಂದಿದ್ದಾರೆ.

    2017ರಲ್ಲಿ ಮುಸ್ತಫಾ ರಾಜ್ ಅವರನ್ನು ಪ್ರಿಯಾಮಣಿ ಮದುವೆ ಆದರು. ಮದುವೆ ನಂತರ ಪಾತ್ರಗಳನ್ನು ಮಾಡುತ್ತಿಲ್ಲ. ಆ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳದೇ ಇರೋದು ನನ್ನ ಜವಾಬ್ದಾರಿ ಎನಿಸುತ್ತದೆ. ಇತ್ತೀಚೆಗೆ ನಿರ್ದೇಶಕರೊಬ್ಬರು ಬಂದು ಸಿನಿಮಾ ಕಥೆ ಹೇಳಿದರು. ಅದರಲ್ಲಿ ಕಿಸ್ ದೃಶ್ಯ ಇತ್ತು. ನಾನು ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ನಟಿ ಮಾತನಾಡಿದ್ದಾರೆ.

    ಅನ್ಯ ಧರ್ಮೀಯರನ್ನು ಇಷ್ಟಪಟ್ಟು ಮದುವೆ ಆಗುವುದೇ ತಪ್ಪು ಎನ್ನುವ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ನಾನು ಯಾರನ್ನು ಇಷ್ಟಪಟ್ಟೆನೋ ಅವರನ್ನು ಮದುವೆಯಾಗಿದ್ದೇನೆ. ಪ್ರೀತಿಯಲ್ಲಿ ಜಾತಿ, ಧರ್ಮಗಳು ಇರುವುದಿಲ್ಲ. ಬೇರೆ ಧರ್ಮ ಅಥವಾ ಜಾತಿಯವರನ್ನು ಮದುವೆಯಾದರೆ ಏನು ತಪ್ಪು? ಎಂದು ಪ್ರಶ್ನೆ ಮಾಡಿದ್ದಾರೆ ಪ್ರಿಯಾಮಣಿ.

    ನನ್ನ ಮದುವೆಯನ್ನು ಹಲವರು ವಿರೋಧಿಸಿದರು. ಕೆಲವರು ಒಪ್ಪಿದರು. ನಾನು ನನ್ನ ಹುಡುಗನನ್ನು ಮತ್ತು ಮದುವೆಯನ್ನು ಒಪ್ಪಿಕೊಳ್ಳಿ ಎಂದು ಯಾವತ್ತೂ ಹೇಳಿಲ್ಲ. ಒಪ್ಪುವುದು ಮತ್ತು ಬಿಡುವುದು ಅವರಿಗೆ ಬಿಟ್ಟ ವಿಚಾರ. ಆದರೆ, ಮುಸ್ಲಿಂ ವ್ಯಕ್ತಿಯನ್ನು ಮದುವೆ ಆಗಿದ್ದೇನೆ ಎನ್ನುವ ಕಾರಣಕ್ಕಾಗಿ ಹಿಂಸೆ ನೀಡುವುದು ಸರಿಯಲ್ಲ. ನಾನು ಆಧುನಿಕ ಭಾರತದಲ್ಲಿ ಬದುಕುತ್ತಿದ್ದೇವೆ. ಭಾರತ ಜಾತ್ಯತೀತ ರಾಷ್ಟ್ರ ಎಂದಿದ್ದಾರೆ. ಈ ಮೂಲಕ ಮಸ್ಲಿಂರೆಲ್ಲಾ ಐಸಿಸ್ ಆಗಲ್ಲ, ಮುಸ್ಲಿಂ ವ್ಯಕ್ತಿಯನ್ನು ಮದುವೆ ಆಗಿದ್ದೇ ತಪ್ಪಾ ಎಂದು ಇತ್ತೀಚಿಗೆ ನಟಿ ಮಾತನಾಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲಿದ್ದಾರಾ ಪ್ರಿಯಾಮಣಿ: ವದಂತಿಗೆ ಸ್ಪಷ್ಟನೆ ನೀಡಿದ ನಟಿ

    ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲಿದ್ದಾರಾ ಪ್ರಿಯಾಮಣಿ: ವದಂತಿಗೆ ಸ್ಪಷ್ಟನೆ ನೀಡಿದ ನಟಿ

    ಹುಭಾಷಾ ನಟಿ ಪ್ರಿಯಾಮಣಿ ಇದೀಗ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸಿನಿಮಾ, ರಿಯಾಲಿಟಿ ಶೋ, ನಡುವೆ ಬ್ಯುಸಿಯಿರುವ ನಟಿಯ ಬಗ್ಗೆ ಈ ನಡುವೆ ಡಿವೋರ್ಸ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಪತಿ ಮುಸ್ತಾಫ್‌ರಿಂದ ಡಿವೋರ್ಸ್ ವದಂತಿಗೆ ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದಾರೆ.

    ಪುನೀತ್‌ಗೆ ನಾಯಕಿಯಾಗಿ `ರಾಮ್’ ಚಿತ್ರದ ಮೂಲಕ ಚಂದನವನಕ್ಕೆ ಲಗ್ಗೆಯಿಟ್ಟ ನಟಿ ನಂತರ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಬಹುಭಾಷಾ ನಾಯಕಿಯಾಗಿ ಗುರುತಿಸಿಕೊಂಡರು. ಬೇಡಿಕೆ ಇರುವಾಗಲೇ ಉದ್ಯಮಿ ಮುಸ್ತಾಫ್ ಜತೆ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ಮದುವೆ ಆಗಿ ಇಷ್ಟು ವರ್ಷಗಳಾದರು ಮಕ್ಕಳಾಗಿಲ್ಲ, ಮಕ್ಕಳನ್ನ ದತ್ತು ಪಡೆಯುತ್ತಿದ್ದಾರೆ ಎಂಬೆಲ್ಲಾ ವದಂತಿಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹಾಗಾಗಿ ಪ್ರಿಯಾಮಣಿ ಡಿವೋಸ್‌ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬೆನ್ನಲ್ಲೇ ನಟಿ ಕೂಡ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ ಸುಳ್ಳು, ನಾವು ಡಿವೋರ್ಸ್ ಪಡೆಯುತ್ತಿಲ್ಲ. ನಮ್ಮ ದಾಂಪತ್ಯ ಚೆನ್ನಾಗಿದೆ. ನಾವು ಖುಷಿಯಿಂದ ಬಾಳುತ್ತೀದ್ದೇವೆ ಎಂದು ಪ್ರಿಯಾಮಣಿ ಮಾತನಾಡಿದ್ದಾರೆ. ಈ ಮೂಲಕ ಡಿವೋರ್ಸ್ ವಿಚಾರದ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಪ್ರಿಯಾಮಣಿ ಜೊತೆ ಮದ್ವೆಯಾದ್ರಾ ಮುಸ್ತಾಫಾ?

    ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಪ್ರಿಯಾಮಣಿ ಜೊತೆ ಮದ್ವೆಯಾದ್ರಾ ಮುಸ್ತಾಫಾ?

    – ಇಬ್ಬರ ಮದುವೆ ಅಸಿಂಧು ಅಂದ್ರು ಮುಸ್ತಾಫಾ ಮೊದಲ ಮಡದಿ

    ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ಮತ್ತು ಮುಸ್ತಾಫಾ ರಾಜ್ ಮದುವೆ ಅಸಿಂಧು ಎಂದು ಮೊದಲ ಮಡದಿ ಆಯೇಷಾ ಹೇಳಿದ್ದು, ತಾನಿನ್ನೂ ಮುಸ್ತಾಫಾ ಪತ್ನಿ ಎಂದು ಹೇಳಿಕೊಂಡಿದ್ದಾರೆ. ಪತಿ ಮುಸ್ತಾಫಾ ತಮಗೆ ವಿಚ್ಛೇದನ ನೀಡದೇ ಪ್ರಿಯಾಮಣಿಯನ್ನು ಮದುವೆ ಆಗಿದ್ದಾರೆಂದು ಆಯೇಷಾ ಗಂಭೀರ ಆರೋಪ ಮಾಡಿದ್ದಾರೆ.

    2013ರಲ್ಲಿ ಮುಸ್ತಾಫಾ ಮತ್ತು ಆಯೇಷಾ ಪ್ರತ್ಯೇಕವಾಗಿದ್ದರು. ದಂಪತಿ ಎರಡು ಮಕ್ಕಳಿದ್ದು, ಪತ್ನಿಯಿಂದ ದೂರವಾದ್ರೂ ಮುಸ್ತಾಫಾ ಆರ್ಥಿಕ ಸಹಾಯ ನೀಡುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಮೊದಲ ಪತ್ನಿಯಿಂದ ದೂರವಾದ ಬಳಿಕ 2017ರಲ್ಲಿ ಪ್ರಿಯಾಮಣಿಯನ್ನ ಮುಸ್ತಾಫಾ ಮದುವೆಯಾಗಿದ್ದರು. ಸರಳವಾಗಿ ನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದ ಜೋಡಿ, ಆನಂತರ ಅದ್ಧೂರಿ ಆರತಕ್ಷತೆ ಆಯೋಜಿಸಿದ್ದರು. ಆದ್ರೆ ಪ್ರಿಯಾಮಣಿಯನ್ನ ಮದುವೆಯಾಗುವ ವೇಳೆ ಮುಸ್ತಾಫಾ ತಾವಿನ್ನೂ ಸಿಂಗಲ್ ಎಂದು ದಾಖಲಿಸಿದ್ದಾರೆ ಎನ್ನಲಾಗಿದೆ.

    ಆಯೇಷಾ ಹೇಳಿದ್ದೇನು?:
    ನಾನಿನ್ನೂ ಮುಸ್ತಾಫಾ ರಾಜ್ ಪತ್ನಿಯಾಗಿದ್ದು, ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಹ ಸಲ್ಲಿಸಿಲ್ಲ. 2017ರಲ್ಲಿ ಪ್ರಿಯಾಮಣಿ ಅವರನ್ನ ಮದುವೆಯಾಗುವಾಗ ಮುಸ್ತಾಫಾ ನ್ಯಾಯಾಲಯಕ್ಕೆ ತಾವು ಬ್ಯಾಚೂಲರ್ ಅಂತ ಹೇಳಿಕೊಂಡಿದ್ದಾರೆ. ಹಾಗಾಗಿ ಇಬ್ಬರ ಮದುವೆ ಕಾನೂನಿನ ಪ್ರಕಾರ ಅಸಿಂಧು. ಸರಿಯಾದ ದಾರಿಯಲ್ಲಿ ಸಮಸ್ಯೆಯನ್ನ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದೆ. ಆದ್ರೆ ಅದು ಫಲಪ್ರದವಾಗಲಿಲ್ಲ. ಹಾಗಾಗಿ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಆಯೇಷಾ ಹೇಳಿದ್ದಾರೆ. ಇದನ್ನೂ ಓದಿ: ಶಾರೂಖ್ ಬಳಿ 300 ರೂ. ಪಡೆದಿದ್ದ ಪ್ರಿಯಾಮಣಿ

    ಆಯೇಷಾ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮುಸ್ತಾಫಾ ರಾಜ್, ಮಕ್ಕಳಿಗಾಗಿ ಪತ್ನಿಗೆ ಹಣ ನೀಡುತ್ತಿದ್ದೇನೆ. 2017ರಲ್ಲಿ ಮದುವೆಯಾದ್ರೂ ಕೌಟುಂಬಿಕ ಹಿಂಸಾಚಾರ ಸೇರಿದಂತೆ ನನ್ನ ವಿರುದ್ಧ ಈಗ ಆರೋಪಗಳನ್ನು ಮಾಡುತ್ತಿರೋದೇಕೆ? ಎಂದು ಪ್ರಶ್ನೆ ಮಾಡಿದ್ದಾರೆ. ಇದು ನನ್ನಿಂದ ಹೆಚ್ಚು ಹಣ ಪಡೆದುಕೊಳ್ಳುವ ಹುನ್ನಾರ ಎಂದು ಮರು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸಾರಿ ಮಚ್ಚಾ, ನನ್ನ ಬಳಿ ನಮ್ಮಿಬರ ಜೊತೆಗಿನ ಫೋಟೋ ಇಲ್ಲ: ಪ್ರಿಯಾಮಣಿ

  • ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಪ್ರಿಯಾಮಣಿ!

    ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಪ್ರಿಯಾಮಣಿ!

    ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರಿಯಾಮಣಿ ಇತ್ತೀಚಿಗೆ ಒಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನೋಡಿದ ಅಭಿಮಾನಿಗಳು ಪ್ರಿಯಾಮಣಿ ತಾಯಿ ಆಗುತ್ತಿದ್ದಾರೆ ಎಂದು ಅವರಿಗೆ ಶುಭ ಕೋರುತ್ತಿದ್ದಾರೆ.

    “ನಾನು ಮತ್ತು ನನ್ನ ಪತಿ ಮುಸ್ತಾಫ್ ರಾಜ್ ಕಡೆಯಿಂದ ಸಮ್‍ಥಿಂಗ್ ಇಂಟ್ರೆಸ್ಟಿಂಗ್ ಹಾಗೂ ಫನ್ ಸಂಗತಿಯೊಂದು ನಿಮ್ಮ ಮುಂದೆ ಬರಲಿದೆ. ವೇಟ್ ಆಂಡ್ ವಾಚ್” ಎಂದು ಪ್ರಿಯಾಮಣಿ ತಮ್ಮ ಪತಿ ಜೊತೆಯಿರುವ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

    ಪ್ರಿಯಾಮಣಿ ಅವರ ಟ್ವೀಟ್ ನೋಡಿ ಅವರು ತಾಯಿ ಆಗುತ್ತಿದ್ದಾರಾ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಭಿಮಾನಿಗಳು ಕೂಡ ಅವರ ಟ್ವೀಟ್ ನೋಡಿ ಪ್ರಿಯಾಮಣಿ ಅಮ್ಮ ಆಗುತ್ತಿದ್ದಾರೆ ಎಂದು ತಿಳಿದು ಅವರಿಗೆ ಶುಭ ಕೋರುತ್ತಿದ್ದಾರೆ.

    https://twitter.com/priyamani6/status/1023587440018243590

    ಪ್ರಿಯಾಮಣಿ 2017 ಅಗಸ್ಟ್ 23ರಂದು ಮುಸ್ತಾಫ್ ರಾಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಈ ಟ್ವೀಟ್ ನೋಡಿ ಅಭಿಮಾನಿಗಳು ಪ್ರಿಯಾಮಣಿಗೆ ರೀ-ಟ್ವೀಟ್ ಮಾಡುವ ಮೂಲಕ ಜೂನಿಯರ್ ಪ್ರಿಯಾಮಣಿ ಬರುತ್ತಿರಬಹುದು ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು ಚೋಟಾ ಪ್ರಿಯಾಮಣಿ ಎಂದು ಟ್ವೀಟ್ ಮಾಡಿದ್ದಾರೆ.

    ಇತ್ತ ಪ್ರಿಯಾಮಣಿ ಟ್ವೀಟ್‍ಗೆ ನಟಿ ಪರೂಲ್ ಯಾದವ್ ಸಹ ಮಗು ಐಸ್ ಕ್ರೀಂ ತಿನ್ನುವ ಜಿಫ್ ಹಾಕುವ ಮೂಲಕ ಶುಭಾಶಯ ಕೋರಿದ್ದಾರೆ. ಪರೂಲ್ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಪ್ರಿಯಾಮಣಿ ಲವ್ ಸೂಚಕದ ಎಮೋಜಿ ಹಾಕಿ ಉತ್ತರಿಸಿದ್ದಾರೆ. ಸದ್ಯ ಪ್ರಿಯಾಮಣಿ ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಆ ಟ್ವೀಟ್ ನೋಡಿದ ಅಭಿಮಾನಿಗಳು ಪ್ರಿಯಾಮಣಿ ತಾಯಿ ಆಗುತ್ತಿದ್ದಾರೆ ಎಂದು ತಿಳಿದು ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ. ಸದ್ಯ ಪ್ರಿಯಾಮಣಿ ಅವರ ಸ್ಪೆಷಲ್ ಸುದ್ದಿ ಏನು ಎಂಬುದು ಕಾದು ನೋಡಬೇಕಿದೆ.