Tag: Mustache

  • ಐಪಿಎಲ್ 2022 – ಧೋನಿಯ ಹೊಸ ಮೀಸೆ ಲುಕ್ ವೈರಲ್

    ಐಪಿಎಲ್ 2022 – ಧೋನಿಯ ಹೊಸ ಮೀಸೆ ಲುಕ್ ವೈರಲ್

    ಚೆನ್ನೈ: ಐಪಿಎಲ್ 2022ಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಮ್ ಎಸ್ ಧೋನಿಯ ಹೊಸ ಮೀಸೆ ನೋಟವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಧೋನಿಯ ಈ ಹೊಸ ಲುಕ್‍ಗೆ ‘ತಲೈವರ್ ಸೂಪರ್ ಸ್ಟಾರ್’ ನಂತೆ ಕಾಣುತ್ತೀರಾ ಎಂದು ಬರೆದುಕೊಂಡಿದ್ದಾರೆ.

    ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿಯವರು ತಮ್ಮ ನಾಯಕತ್ವ ಮತ್ತು ವಿಕೆಟ್ ಕೀಪಿಂಗ್ ಕೌಶಲ್ಯಗಳಿಂದಲೇ ಹೆಸರುವಾಸಿಯಾದವರು. ಆದರೆ ಅವರು ಪ್ರತೀ ಐಪಿಎಲ್ ಸೀಸನ್‍ಗಳ ಜಾಹೀರಾತಿನಲ್ಲಿ ವಿಭಿನ್ನ ರೀತಿಯ ಗೆಟಪ್‍ಗಳನ್ನು ಧರಿಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ಈ ಗೆಟಪ್‍ಗಳಿಗೆ ಅಭಿಮಾನಿಗಳು ಸಹ ಹೆಚ್ಚಾಗಿ ಪ್ರಶಂಸುತ್ತಿರುತ್ತಾರೆ. ಇದನ್ನೂ ಓದಿ: ಅಲಿಯಾಗೆ ನನ್ನ ಮೇಲೆ ಕೈ ಮಾಡಲು 20 ಟೇಕ್ ತೆಗೆದುಕೊಂಡಿದ್ರು: ‘ಗಂಗೂಬಾಯಿ’ನಲ್ಲಿ ಶಂತನು

    ಧೋನಿಯವರು ಮುಂಬರುವ ಐಪಿಎಲ್ 2022ರ ಪ್ರೋಮೋಗಳ ಟೀಸರ್‌ಗಳಲ್ಲಿ ಒಂದಕ್ಕೆ ಅವರು ಮತ್ತೊಂದು ಹೊಸ ನೋಟವನ್ನು ಪ್ರದರ್ಶಿಸಿಸುತ್ತಿದ್ದಾರೆ. ಅವರ ಈ ಹೊಸ ಅವತಾರದಲ್ಲಿ ಮೀಸೆಯನ್ನು ಬಿಟ್ಟು ಬಹುತೇಕ ಗುರುತಿಸಲಾಗದಂತೆ ಕಾಣುತ್ತಿದ್ದಾರೆ.

    ಧೋನಿಯ ಅವರು ಜಗತ್ತಿನಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಅವರ ಈ ಹೊಸ ಅವತಾರಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮೂಲ್ಯ ಸೀಮಂತದ ಪಾರ್ಟಿಗೆ ಸ್ಯಾಂಡಲ್‍ವುಡ್ ತಾರೆಯರ ಮೆರುಗು

    ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಐಪಿಎಲ್ 2022ರ ಮೆಗಾ ಹರಾಜಿನಲ್ಲಿ 12 ಕೋಟಿ ರೂ.ಗೆ ಬೀಡ್ ಮಾಡಿ ಧೋನಿ ಅವರನ್ನು ಚೆನ್ನೈ ತಂಡದಲ್ಲಿಯೇ ಉಳಿಸಿಕೊಂಡಿದೆ. ಮುಂಬರುವ ಐಪಿಎಲ್‍ನಲ್ಲಿ ಅವರು ಸಿಎಸ್‍ಕೆ ತಂಡದ ನಾಯಕನಾಗಿ ಹಾಲಿ ಚಾಂಪಿಯನ್ನ್ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದ ನಾಯಕನಾಗಿ ಅವರು ಈಗಾಗಲೇ ಚೆನ್ನೈ ತಂಡಕ್ಕೆ 4 ಪ್ರಶಸ್ತಿಗಳನ್ನು ಸಹ ತಂದುಕೊಟ್ಟಿದ್ದಾರೆ.

    ಐಪಿಎಲ್‍ನ ಹೊಸ ಸ್ವರೂಪದ ಪ್ರಕಾರ ಈ ಬಾರಿ ಸಿಎಸ್‍ಕೆ ತಂಡವನ್ನು ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಮತ್ತು ಗುಜರಾತ್ ಟೈಟನ್ಸ್ ತಂಡಗಳ ಜೊತೆಗೆ ಬಿ ಗುಂಪಿನಲ್ಲಿ ಇರಿಸಲಾಗಿದೆ. ಚೆನ್ನೈ ತಂಡವು ಮೇಲೆ ತಿಳಿಸಿದ ಎಲ್ಲಾ ತಂಡಗಳ ವಿರುದ್ಧ 2 ಪಂದ್ಯಗಳನ್ನು ಆಡುತ್ತದೆ. ಆದರೆ ಎ ಗುಂಪಿನ ಮುಂಬೈ ತಂಡದ ವಿರುದ್ಧ ಮಾತ್ರ 2 ಬಾರಿ ಸೆಣಸಾಡಲಿದ್ದು, ಇತರ ಎ ಗುಂಪಿನ ಎಲ್ಲಾ ತಂಡಗಳ ವಿರುದ್ಧ ಕೇವಲ 1 ಬಾರಿ ಮಾತ್ರ ಆಡಲಿದೆ.

    ಐಪಿಎಲ್ 2022 ಸ್ವರೂಪದ ವೇಳಾಪಟ್ಟಿಯ ಗುಂಪು ವಿವರಗಳು:
    ಪ್ರತಿ ತಂಡವು ಒಟ್ಟು 14 ಪಂದ್ಯಗಳನ್ನು ಆಡುತ್ತದೆ – ಐದು ತಂಡಗಳ ವಿರುದ್ಧ ಎರಡು ಬಾರಿ ಅವರ ಗುಂಪಿನಿಂದ 4 ತಂಡಗಳು ಮತ್ತು ಇತರ ಗುಂಪಿನಿಂದ 1 ತಂಡ, ಒಮ್ಮೆ ಇತರ ಗುಂಪಿನ ನಾಲ್ಕು ತಂಡಗಳ ವಿರುದ್ಧ ಆಡಲಿವೆ.

    ಗುಂಪು ಎ – ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ದೆಹಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್

    ಗುಂಪು ಬಿ – ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್

    ಪಂದ್ಯಾವಳಿಯು ಮಾರ್ಚ್ 26 ರಂದು ಪ್ರಾರಂಭಗೊಳ್ಳುತ್ತದೆ. ಮೇ 29 ರಂದು ಕೊನೆಗೊಳ್ಳುತ್ತದೆ. ಕೋವಿಡ್ -19 ಸೋಂಕಿನ ಹಿಂದಿನ ಪ್ರಮುಖ ಕಾರಣವೆಂದು ಪರಿಗಣಿಸಲಾದ ವಿಮಾನ ಪ್ರಯಾಣವನ್ನು ತಪ್ಪಿಸಲು ಎಲ್ಲಾ ಪಂದ್ಯಗಳನ್ನು ಒಂದೇ ಹಬ್‍ನಲ್ಲಿ ಜೈವಿಕ-ಸುರಕ್ಷಿತ ವಾತಾವರಣದಲ್ಲಿ ಮಹಾರಾಷ್ಟ್ರದಲ್ಲಿ ಆಡಲಾಗುತ್ತದೆ.

    ಐಪಿಎಲ್ 2022ಗಾಗಿ ಸಿಎಸ್‍ಕೆ ತಂಡ ಪ್ರಕಟವಾಗಿದ್ದು, ಎಂಎಸ್ ಧೋನಿ, ರವೀಂದ್ರ ಜಡೇಜಾ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯಡು, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ದೀಪಕ್ ಚಾಹರ್, ಕೆಎಂ ಆಸಿಫ್, ಶಿವಂ ದುಬೆ, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್‍ಗೇಕರ್, ಡಿ ಪ್ರೇಮ್‍ಜೀತ್ ಸಿಂಗ್, ಡಿ ಪ್ರೇಮ್‍ಜೀತ್ ಸಿಂಗ್ , ಮಿಚ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಸುಭ್ರಾಂಶು ಸೇನಾಪತಿ, ಪ್ರಶಾಂತ್ ಸೋಲಂಕಿ, ಮುಖೇಶ್ ಚೌಧರಿ, ಸಿ ಹರಿ ನಿಶಾಂತ್, ಎನ್ ಜಗದೀಸನ್, ಕ್ರಿಸ್ ಜೋರ್ಡಾನ್, ಭಗತ್ ವರ್ಮಾ

  • ಮೀಸೆಗೆ ಕತ್ತರಿ – ಕ್ಷೌರಿಕನ ವಿರುದ್ಧ ದೂರು ದಾಖಲು

    ಮೀಸೆಗೆ ಕತ್ತರಿ – ಕ್ಷೌರಿಕನ ವಿರುದ್ಧ ದೂರು ದಾಖಲು

    ಮುಂಬೈ: ತಲೆ ಕೂದಲು ಕತ್ತರಿಸುವ ಬದಲು ಮೀಸೆ ಬೋಳಿಸಿದಕ್ಕೆ ನಡೆದ ನಡೆದ ಗಲಾಟೆ ಈಗ ಪೊಲೀಸ್ ಠಾಣೆಯವರೆಗೆ ತಲುಪಿದೆ.

    ಮಹಾರಾಷ್ಟ್ರದ ನಾಗ್ಪುರ ನಿವಾಸಿ ಕಿರಣ್ ಠಾಕೂರ್ (35), ಕ್ಷೌರಿಕ ಸುನಿಲ್ ಲಕ್ಷಣೆ ವಿರುದ್ಧ ದೂರು ದಾಖಲಿಸಿದ್ದಾರೆ. ಕ್ಷೌರದಂಗಡಿಯಿಂದ ಮನೆಗೆ ಹೋದಾಗ ನನ್ನ ಮೀಸೆಯನ್ನು ಕತ್ತರಿಸಿರೋದು ಗಮನಕ್ಕೆ ಬಂದಿದೆ. ನಾನು ಕೂಡಲೇ ಸುನಿಲ್‍ಗೆ ಕರೆ ಮಾಡಿ, ನನ್ನ ಅನುಮತಿ ಪಡೆಯದೇ ಹೇಗೆ ಮೀಸೆಗೆ ಕತ್ತರಿ ಹಾಕಿದೆ ಎಂದು ಪ್ರಶ್ನಿಸಿದೆ. ಆದ್ರೆ ಸುನಿಲ್ ತಪ್ಪನ್ನು ಒಪ್ಪಿಕೊಳ್ಳದೇ ನನಗೆ ಬೆದರಿಕೆ ಹಾಕಿದ ಎಂದು ಕಿರಣ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಕಿರಣ್ ದೂರಿನನ್ವಯ ಪೊಲೀಸರು ಐಪಿಸಿ ಸೆಕ್ಷನ್ 507 (ಜೀವ ಬೆದರಿಕೆ) ಅಡಿ ಆರೋಪಿ ಸುನಿಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಬಳಿಕ ಕ್ಷೌರಿಕ ಸಮಾಜದ ಮುಖ್ಯಸ್ಥರು ಮಾಹಿತಿ ಪಡೆದು, ಕಿರಣ್ ಅವರಿಗೆ ಯಾವುದೇ ಕ್ಷೌರಿಕ ಸೇವೆ ಒದಗಿಸಬಾರದು ಎಂದು ಆದೇಶ ಹೊರಡಿಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಕ್ಷೌರಿಕ ಸಮಾಜದ ಅಧ್ಯಕ್ಷ ಶರದ್ ವಾಟಕರ್, ಗ್ರಾಹಕ ಕಿರಣ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಮೀಸೆ ಕತ್ತರಿಸುವ ಮುನ್ನ ಗ್ರಾಹಕನ ಅನುಮತಿ ಪಡೆಯಲಾಗಿತ್ತು. ಅಂಗಡಿಯಿಂದ ಹೊರ ಹೋದ ಗ್ರಾಹಕ ಕಿರಣ್ ಸಂಜೆ ಬಂದು ಗಲಾಟೆ ಮಾಡಿದ್ದಾನೆ. ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಹಕನ ವಿರುದ್ಧ ದೂರು ದಾಖಲಿಸಲಾಗಿದೆ. ಇಂದು(ಸೋಮವಾರ) ಘಟನೆಯನ್ನು ಖಂಡಿಸಿ ಕನಹನ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

  • ಬೆಂಗ್ಳೂರಲ್ಲಿ ಟ್ರೆಂಡಿಂಗ್ ಆಯ್ತು ಅಭಿನಂದನ್ ಮೀಸೆ, ಹೇರ್ ಸ್ಟೈಲ್..!

    ಬೆಂಗ್ಳೂರಲ್ಲಿ ಟ್ರೆಂಡಿಂಗ್ ಆಯ್ತು ಅಭಿನಂದನ್ ಮೀಸೆ, ಹೇರ್ ಸ್ಟೈಲ್..!

    – ಕೊರಮಂಗಲ ಸೆಲೂನ್ ನಿಂದ ಸಖತ್ ಆಫರ್

    ಬೆಂಗಳೂರು: ಪಾಕ್ ಕಪಿಮುಷ್ಠಿಯಿಂದ ಬಿಡುಗಡೆಗೊಂಡು ತಾಯ್ನಾಡು ಭಾರತಕ್ಕೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ವಾಪಸ್ ಆಗಿದ್ದಾರೆ. ಈ ಮಧ್ಯೆ ವೀರಪುತ್ರನ ಮೀಸೆ ಹಾಗೂ ಹೇರ್ ಕಟ್ ಸಖತ್ ಟ್ರೆಂಡಿಂಗ್ ಆಗಿದೆ. ಬೆಂಗಳೂರಿನಲ್ಲಿ ಕೂಡ ಅಭಿ ಮೀಸೆ ಸ್ಟೈಲ್ ಸಖತ್ ಹವಾ ಸೃಷ್ಟಿ ಮಾಡಿದೆ.

    ಯುವ ಸಮೂಹ ಅಭಿನಂದನ್ ಸ್ಟೈಲ್ ಗೆ ಸಖತ್ ಫಿದಾ ಆಗಿದೆ. ನಗರದ ಬಹುತೇಕ ಸೆಲೂನ್ ನಲ್ಲಿ ಈ ಸ್ಟೈಲ್ ಗೆ ಭಾರೀ ಬೇಡಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೋರಮಂಗಲ ನಾನೇಶ್ ಹೇರ್ ಸಲೂನ್ ನಿಂದ್ ಸಖತ್ ಆಫರ್ ನೀಡಲಾಗಿದೆ.

    ಅಭಿನಂದನ್ ರೀತಿ ಸ್ಟೈಲ್ ಮಾಡುವವರಿಗೆ ಉಚಿತವಾಗಿ ಹೇರ್ ಸ್ಟೈಲ್ ಮಾಡಲಾಗುತ್ತಿದೆ. ಹೀಗಾಗಿ ಅಭಿನಂದನ್ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಅಭಿನಂದನ್ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಹೀಗಾಗಿ ಸೆಲೂನ್ ಮಾಲೀಕರು ಕೂಡ ವೀರ ಯೋಧನಿಗೆ ಗೌರವ ಸಲ್ಲಿಸಲು ಉಚಿತವಾಗಿ ಹೇರ್ ಆಂಡ್ ಮೀಸೆ ಸ್ಟೈಲ್ ಮಾಡುತ್ತಿದ್ದಾರೆ.

    ಮಾರ್ಚ್ 1ರ ಶುಕ್ರವಾರದಂದು ವೈರಿ ರಾಷ್ಟ್ರದಿಂದ ಬರುವ ವೇಳೆ ಮುಖದಲ್ಲಿ ಅದೇ ಮಂದಹಾಸ, ಅದೇ ಹುರಿ ಮೀಸೆ, ಅದೇ ಮಾನಸಿಕ ದೃಢತೆಯೊಂದಿಗೆ ಅಭಿನಂದನ್ ತಾಯ್ನಾಡಿಗೆ ಕಾಲಿಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಡಿಯೋ: ಬಲು ದುಃಖದಿಂದ ಈ ಕಾರಣಕ್ಕಾಗಿ ಮೀಸೆ, ಗಡ್ಡವನ್ನ ತೆಗೆದ ರಣ್‍ವೀರ್ ಸಿಂಗ್

    ವಿಡಿಯೋ: ಬಲು ದುಃಖದಿಂದ ಈ ಕಾರಣಕ್ಕಾಗಿ ಮೀಸೆ, ಗಡ್ಡವನ್ನ ತೆಗೆದ ರಣ್‍ವೀರ್ ಸಿಂಗ್

    ಮುಂಬೈ: ಬಾಲಿವುಡ್ ಫ್ಯಾಶನ್ ಸ್ಟಾರ್ ರಣ್‍ವೀರ್ ಸಿಂಗ್ ತಮ್ಮ ಚೆಂದನೆಯ ಮೀಸೆ ಮತ್ತು ಗಡ್ಡವನ್ನು ಬಲು ದುಃಖದಿಂದ ಕಟ್ ಮಾಡಿಸಿಕೊಂಡಿದ್ದಾರೆ.

    ಕೆಲವು ದಿನಗಳಿಂದ ರಣ್‍ವೀರ್ ತಮ್ಮ ಸ್ಟೈಲಿಶ್ ಮೀಸೆ ಮತ್ತು ಗಡ್ಡಗಳಿಂದ ಫ್ಯಾಶನ್ ಐಕಾನ್ ಆಗಿದ್ದರು. ಆದ್ರೆ ಇಂದು ಸ್ವತಃ ರಣ್‍ವೀರ್ ತಮ್ಮ ಹೇರ್ ಸ್ಟೈಲಿಶ್‍ರಿಂದ ತಮ್ಮ ಆಕರ್ಷಣೀಯ ಮೀಸೆ ಮತ್ತು ಉದ್ದನೆಯ ಗಡ್ಡವನ್ನು ತೆಗೆಸಿದ್ದಾರೆ.

    https://www.instagram.com/p/BWdHpeNhlkl/?taken-by=ranveersingh

    ರಣ್‍ವೀರ್ ತಾವು ನಟಿಸುತ್ತಿರುವ `ಪದ್ಮಾವತಿ’ ಚಿತ್ರಕ್ಕಾಗಿ ಇಷ್ಟು ದಿನ ಉದ್ದನೆಯ ಗಡ್ಡವನ್ನು ಬೆಳೆಸಿದ್ದರು. ಚಿತ್ರದ ಅರ್ಧಭಾಗ ಚಿತ್ರೀಕರಣಗೊಂಡಿದ್ದು, ಈಗ ರಣ್‍ವೀರ್ ಯುವಕನಾಗಿ ಕಾಣಿಸಿಕೊಳ್ಳವುದ್ರಿಂದ ಮೀಸೆ ಮತ್ತು ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ.

    https://www.instagram.com/p/BWdGh49BG0p/?taken-by=ranveersingh

    ಇಷ್ಟು ದಿನ ನಡೆದ ಚಿತ್ರದಲ್ಲಿ ರಣ್‍ವೀರ್ ವಯಸ್ಕನ ಪಾತ್ರದ ಶೂಟಿಂಗ್ ನಡೆಯುತಿತ್ತು. ಈಗ ರಣ್‍ವೀರ್ ಸಿನಿಮಾದಲ್ಲಿ ಯುವಕನಾಗಿರುವ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ರಣ್‍ವೀರ್ ತಮ್ಮ ಮೀಸೆ ಮತ್ತು ಗಡ್ಡಕ್ಕೆ ಕತ್ತರಿ ಹಾಕುವ ವಿಡಿಯೋ ಇನ್ ಸ್ಟಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಕಟ್ ಆದ ಬಳಿಕ ತಮ್ಮ ಮೀಸೆ ಮತ್ತು ಗಡ್ಡದ ಫೋಟೋವನ್ನು ಸಹ ಅಪ್ಲೋಡ್ ಮಾಡಿದ್ದಾರೆ.

    https://www.instagram.com/p/BVpCN9WhBzz/?taken-by=ranveersingh

    ಈ ಮೊದಲು `ಬಾಜೀರಾವ್ ಮಸ್ತಾನಿ’ ಸಿನಿಮಾದಲ್ಲಿ ರಾಜನಾಗಿ ಕಾಣಿಸಿಕೊಂಡಿದ್ದ ರಣ್‍ವೀರ್ ಉದ್ದನೆಯ ಮೀಸೆ ಬಿಟ್ಟಿದ್ದರು. ಸಿನಿಮಾ ರಿಲೀಸ್ ಬಳಿಕ ಖುದ್ದು ಗೆಳತಿ ದೀಪಿಕಾ ಮೀಸೆಗೆ ಕತ್ತರಿ ಹಾಕಿದ್ದರು. ಅಂದು ಸಹ ರಣ್‍ವೀರ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ರು.

    ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಮಿಂಚಲಿದ್ದಾರೆ. ಪದ್ಮಾವತಿಯಾಗಿ ಬೆಡಗಿ ದೀಪಿಕಾ ಪುಡಕೋಣೆ ಮತ್ತು ರಾಣಾ ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸುತ್ತಿದ್ದಾರೆ.

    https://www.youtube.com/watch?v=Y9vELL5yMpA

    https://www.instagram.com/p/BUPR7MXhWPN/?taken-by=ranveersingh

    https://www.instagram.com/p/BSlpMOAB1ha/?taken-by=ranveersingh

    https://www.instagram.com/p/BSlpCYwhhZe/?taken-by=ranveersingh

    https://www.instagram.com/p/BRJK_aDB17A/?taken-by=ranveersingh