Tag: Mussavir Hussain

  • Exclusive | ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್: ಬಾಂಬ್‌ ಇಟ್ಟ ಬಳಿಕ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದ ಮಾಸ್ಟರ್‌ ಮೈಂಡ್‌

    Exclusive | ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್: ಬಾಂಬ್‌ ಇಟ್ಟ ಬಳಿಕ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದ ಮಾಸ್ಟರ್‌ ಮೈಂಡ್‌

    ಬೆಂಗಳೂರು: ಇಡೀ ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Bomb Blast Case) ಪ್ರಕರಣವನ್ನು ಈಗಾಗಲೇ ಎನ್‌ಐಎ ತನಿಖೆ (NIA Investigation) ನಡೆಸುತ್ತಿದೆ. ಈ ನಡುವೆ ಸ್ಫೋಟಕ ವಿಚಾರವೊಂದು ಬೆಳಿಕಿಗೆ ಬಂದಿದೆ.

    ಸ್ಫೋಟಕ್ಕೆ ಬಾಂಬ್‌ ತಯಾರಿನಿಂದ ಹಿಡಿದು ಆರೋಪಿ ಮಸಾವೀರ್ ಎಸ್ಕೇಪ್‌ (Mussavir Hussain) ಆಗುವವರೆಗಿನ ಇಂಚಿಂಚೂ ಸ್ಟೋರಿ ʻಪಬ್ಲಿಕ್‌ ಟಿವಿʼಗೆ (Public TV) ಲಭ್ಯವಾಗಿದೆ. ಹೆಜ್ಜೆ ಹೆಜ್ಜೆಗೂ ಬಾಂಬರ್‌ಗಳ ಖತರ್ನಾಕ್‌ ಕೆಲಸ ಫೋಟೋಗಳಲ್ಲಿ ಅನಾವರಣಗೊಂಡಿದೆ. ಇದನ್ನೂ ಓದಿ: ಕಲಬುರಗಿ ಸೆಂಟ್ರಲ್ ಜೈಲ್ ಅಧೀಕ್ಷಕಿ ಕಾರು ಸ್ಫೋಟಿಸುವುದಾಗಿ ಬೆದರಿಕೆ – ದುಷ್ಕರ್ಮಿಯಿಂದ ಆಡಿಯೋ ಸಂದೇಶ

    ಶಂಕಿತ ಉಗ್ರ ಮಾಡಿದ್ದೇನು?
    ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟ ಬಳಿಕ ಆರೋಪಿ ಮುಸಾವೀರ್‌ ಮಸೀದಿಗೆ ಹೋಗಿ ಪ್ರಾರ್ಥನೆ ಮಾಡಿದ್ದ. ನಂತರ ಅಲ್ಲಿಂದ ಕೋಲ್ಕತ್ತಾದಲ್ಲಿ ತಲೆ ಮರೆಸಿಕೊಂಡಿದ್ದ, ಅದಕ್ಕಾಗಿ ಹಿಂದೂ ಹೆಸರು ಬಳಕೆ ಮಾಡಿದ್ದ. ಕ್ರಿಪ್ಟೋ ಕರೆನ್ಸಿಯನ್ನ ರೂಪಾಯಿ ಮಾಡಲು ಪ್ರಯತ್ನ ಸಹ ಮಾಡಿದ್ದ ಅನ್ನೋ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.

    ಈಗಾಗಲೇ ಬಾಂಬರ್‌ ಸೇರಿ ಹಲವು ಶಂಕಿತ ಉಗ್ರರನ್ನು ಬಂಧಿಸಿರುವ ಎನ್‌ಐಎ ಸ್ಥಳ ಮಹಜರು ಕೂಡ ನಡೆಸಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು – ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆ: ಜನಾಕ್ರೋಶ

  • ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌- ಆರೋಪಿಯನ್ನು ಕರೆ ತಂದು ಮರು ಸೃಷ್ಟಿ ಹೇಗೆ ಮಾಡಲಾಯ್ತು?

    ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌- ಆರೋಪಿಯನ್ನು ಕರೆ ತಂದು ಮರು ಸೃಷ್ಟಿ ಹೇಗೆ ಮಾಡಲಾಯ್ತು?

    ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಮುಸ್ಸಾವೀರ್ ಹುಸೇನ್ (Mussavir Hussain) ಸಮ್ಮುಖದಲ್ಲಿ ಎನ್‌ಐಎ (NIA) ಇಂದು ಸ್ಥಳ ಮಹಜರು ನಡೆಸಿತು.

    ಬಂಧನ ಮಾಡಿದ ಬಳಿಕ 5 ತಿಂಗಳ ನಂತರ ಮುಸ್ಸಾವೀರ್‌ ಹುಸೇನ್‌ನನ್ನು ರಾಮೇಶ್ವರಂ ಕೆಫೆಗೆ ಕರೆದುಕೊಂಡು ಬಂದು ಘಟನೆಯನ್ನು ಮರುಸೃಸ್ಟಿ ಮಾಡಿದ್ದಾರೆ. ಇದನ್ನೂ ಓದಿ: ಕೋಚಿಂಗ್‌ ಸೆಂಟರ್‌ಗಳು ಡೆತ್‌ ಚೇಂಬರ್‌ಗಳಾಗಿ ಮಾರ್ಪಟ್ಟಿವೆ – ಸುಪ್ರೀಂ ಚಾಟಿ

    ವೋಲ್ವೋ ಬಸ್ಸಿನಲ್ಲಿ ಬಂದ ಮುಸ್ಸಾವೀರ್‌ ರಾಮೇಶ್ವರಂ ಕೆಫೆ ಮುಂಭಾಗದಲ್ಲಿರುವ ಬಸ್ ನಿಲ್ದಾಣದಲ್ಲಿ ಇಳಿದಿದ್ದ. ಬಳಿಕ ಕಪ್ಪು ಬಣ್ಣದ ಬ್ಯಾಗ್‌ ತಲೆಗೆ ಟೊಪ್ಪಿ, ಮುಖಕ್ಕೆ ಮಾಸ್ಕ್ ಧರಿಸಿ ಹೋಟೆಲ್ ಒಳಗಡೆ ಪ್ರವೇಶಿಸಿದ್ದ.

    ಕ್ಯಾಶ್‌ ಕೌಂಟರ್‌ನಲ್ಲಿ ಇಡ್ಲಿ ಮತ್ತು ವಡೆಯನ್ನು ಖರೀದಿಸಿ ತಿಂಡಿ ತಿಂದು ಬಾಂಬ್‌ ಇಟ್ಟು ಬಟ್ಟೆ ಬದಲಿಸಿಕೊಂಡು ಬಸ್ ಮೂಲಕ ತಲೆಮರಿಸಿಕೊಂಡಿದ್ದ. ಇದನ್ನೂ ಓದಿ: Valmiki Scam | 3 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ – ನಾಗೇಂದ್ರ, ದದ್ದಲ್‌ ಹೆಸರಿಲ್ಲ

    ಮಾರ್ಚ್ 1 ರಂದು ಹೋಟೆಲ್‌ ಪ್ರವೇಶ ಮಾಡಿದ್ದು ಹೇಗೆ? ಪ್ರವೇಶ ಮಾಡಿದ ಬಳಿಕ ಪರಾರಿಯಾಗಿದ್ದು ಹೇಗೆ ಎನ್ನುವ ಮರು ಸೃಷ್ಟಿಯನ್ನು ಮುಸ್ಸಾವೀರ್ ಕೈಯಲ್ಲಿ ಮಾಡಿಸಲಾಯ್ತು. ಮುಂಜಾನೆ 5 ಗಂಟೆಯಿಂದ ಆರಂಭವಾದ ಎನ್‌ಐಎ ಮಹಜರು ಹಾಗೂ ಮರುಸೃಷ್ಟಿ ಕಾರ್ಯ ಸುಮಾರು ಮೂರು ಗಂಟೆಗಳ ಕಾಲ ನಡೆಯಿತು.

    ಬಾಂಬ್‌ ಇಟ್ಟ ಬಳಿಕ ಮುಸಾವೀರ್ ಹೂಡಿ ಬಳಿ ಇರುವ ಮಸೀದಿ ಹತ್ತಿರ ಬಟ್ಟೆಯನ್ನು ಬದಲಾವಣೆ ಮಾಡಿ ಬೆಂಗಳೂರಿನಿಂದ  ಪರಾರಿಯಾಗಿದ. ಹೀಗಾಗಿ ಮಸೀದಿ ಹತ್ತಿರ ಕೂಡ ಮಹಜರ್ ಪ್ರಕ್ರಿಯೆ ಹಾಗೂ ಮರುಸೃಷ್ಟಿ ಪ್ರಕ್ರಿಯೆ ಮಾಡಲಾಯಿತು.

     

  • ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡಿದ್ದ ಮತೀನ್‌ ಬಾಂಬ್‌ ಸ್ಫೋಟದ ಸೂತ್ರಧಾರ!

    ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡಿದ್ದ ಮತೀನ್‌ ಬಾಂಬ್‌ ಸ್ಫೋಟದ ಸೂತ್ರಧಾರ!

    ನವದೆಹಲಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ (Rameshwaram Cafe Bomb Blast) ನಡೆದ ಬರೋಬ್ಬರಿ 42 ದಿನಗಳ ಬಳಿಕ ಬಾಂಬರ್ ಮುಸಾವೀರ್ ಹುಸೇನ್ (Mussavir Hussain Shazeb) ಮತ್ತು ಸೂತ್ರಧಾರ ಅಬ್ದುಲ್ ಮತೀನ್ ತಾಹಾನನ್ನು (Abdul Matheen Taha) ರಾಷ್ಟ್ರೀಯ ತನಿಖಾ ದಳ (NIA) ಹೆಡೆಮುರಿ ಕಟ್ಟಿದೆ.

    ಖಚಿತ ಸುಳಿವಿನ ಆಧಾರದ ಮೇಲೆ ಪೂರ್ವ ಮಿಡ್ನಾಪುರದ ಕಾಂತಿ ಪಟ್ಟಣದಲ್ಲಿ ನಸುಕಿನ ಜಾವ ಮನೆಯೊಂದರ ಮೇಲೆ ಎನ್‌ಐಎ ದಾಳಿ ನಡೆಸಿದೆ. ಗಾಢ ನಿದ್ದೆಯಲ್ಲಿದ್ದ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದೆ.

    ಅಸ್ಸಾಂನಲ್ಲಿ ಕೆಲ ದಿನ ತಲೆ ಮರೆಸಿಕೊಂಡಿದ್ದ ಆರೋಪಿಗಳು ಇತ್ತೀಚಿಗೆ ಬಂಗಾಳಕ್ಕೆ ಶಿಫ್ಟ್ ಆಗಿದ್ದರು. ಮಾರ್ಚ್ 1ರಂದು ಸ್ಫೋಟ ನಡೆದ ದಿನವೇ ಬೆಂಗಳೂರಿನಿಂದ ಬಳ್ಳಾರಿ ಮಾರ್ಗವಾಗಿ ಬಾಂಬರ್ ಮುಸಾವೀರ್  ಪರಾರಿಯಾಗಿದ್ದ. ಆದರೆ ಮುಸಾವೀರ್ ಸಂಪೂರ್ಣ ಚಲನವಲನ ಹಲವು ಸಿಸಿಟಿವಿಗಳಲ್ಲಿ ಸೆರೆಯಾಗಿತ್ತು. ಮುಸಾವೀರ್ ಧರಿಸಿದ್ದ ಟೋಪಿ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಗುರುತಿಸಿದ್ದರು.

     

    ವಿದೇಶಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದ್ದ ಸೂತ್ರಧಾರ ಮತೀನ್ ವಿಘ್ನೇಶ್ ಹೆಸರಿನಲ್ಲಿ ದೇಶದ ಒಳಗಡೆಯೇ ತಲೆಮರೆಸಿಕೊಂಡಿದ್ದ. ಮುಸಾವಿರ್ ಪದೇ ಪದೇ ಸಿಮ್ ಬದಲಿಸುತ್ತಾ, ಸ್ಥಳ ಬದಲಿಸುತ್ತಾ ತನಿಖೆಯ ಹಾದಿ ತಪ್ಪಿಸಲು ನೋಡಿದ್ದ. ಇಬ್ಬರು ಜೊತೆಗೂಡಿ ನಕಲಿ ದಾಖಲೆ ನೀಡಿ ಕಡಿಮೆ ದರ್ಜೆಯ ಹೋಟೆಲ್‌ನಲ್ಲಿ ತಂಗಿದ್ದರು. ಕೊನೆಗೆ ಕಾಂತಿ ಪಟ್ಟಣದ ಹೊರವಲಯದಲ್ಲಿ ಬಾಡಿಗೆಗೆ ಮನೆ ಪಡೆದಿದ್ದರು.

    ಆರೋಪಿಗಳು ಬೇರೆ ಹೆಸರಲ್ಲಿ ಕೋಲ್ಕತ್ತಾದಲ್ಲಿ ಮಾರ್ಚ್ 13, 14ರಂದು ಹೋಟೆಲ್ ರೂಮ್ ಬುಕ್ ಮಾಡಿದ್ದರು. ಯುಶಾ ಶಾಹನವಾಜ್, ಅನ್ಮೋಲ್ ಕುಲಕರ್ಣಿ ಹೆಸರಲ್ಲಿ ಬುಕ್ ಮಾಡಿದ್ದ ಆರೋಪಿಗಳು ಎರಡು ದಿನ ಹೋಟೆಲ್‌ನಲ್ಲಿ ತಂಗಿದ್ದರು. ಇದನ್ನೂ ಓದಿ : 370 ವಿಧಿಯನ್ನು ರದ್ದುಪಡಿಸಿದ್ದಕ್ಕೆ ಅಂಬೇಡ್ಕರ್ ಆತ್ಮ ನನ್ನನ್ನು ಆಶೀರ್ವದಿಸುತ್ತಿರಬಹುದು: ಮೋದಿ

     

    ಇಂದು ಪೂರ್ವ ಮಿಡ್ನಾಪುರ ಕೋರ್ಟ್ ಮುಂದೆ ಪಾತಕಿಗಳನ್ನು ಹಾಜರುಪಡಿಸಿದ ಬಳಿಕ ಬೆಂಗಳೂರಿಗೆ ಎನ್‌ಐಎ ಕರೆತರಲಿದೆ. ಅಂದ ಹಾಗೇ ಇದೇ ಏ.6 ರಂದು ಪೂರ್ವ ಮಿಡ್ನಾಪುರದಲ್ಲಿ ಎನ್‌ಐಎ ಮಿಡ್‌ನೈಟ್ ಆಪರೇಷನ್‌ಗೆ ಮುಂದಾಗಿತ್ತು. 2 ವರ್ಷದ ಹಿಂದಿನ ಸ್ಪೋಟ ಪ್ರಕರಣದ ಆರೋಪಿಗಳನ್ನು ಬಂಧಿಸಲು ಮುಂದಾದಾಗ ಸ್ಥಳೀಯರು ತಿರುಗಿಬಿದ್ದಿದ್ದರು.

    ವಿವಿಧ ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಯುಪಿ, ದೆಹಲಿ, ಎಪಿ ಮತ್ತು ತೆಲಂಗಾಣ ರಾಜ್ಯ ಪೊಲೀಸ್ ಇಲಾಖೆಗಳ ಸಹಕಾರದಿಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ : ಕೇವಲ 2 ವೋಟಿಗಾಗಿ ಕಾಡು ಹಾದಿಯಲ್ಲಿ 107 ಕಿಮೀ ಸಾಗಿದ ಅಧಿಕಾರಿಗಳು

     

    ಯಾರು ಮುಸಾವೀರ್?
    ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಐಸಿಸ್‌ ತೀರ್ಥಹಳ್ಳಿ ಮಾಡ್ಯೂಲ್‌ನ ಪ್ರಮುಖ ವ್ಯಕ್ತಿ. ರಾಮೇಶ್ವರಂ ಕೆಫೆಯಲ್ಲಿ ಇಡ್ಲಿ ತಿಂದು ಬಾಂಬಿಟ್ಟು ಮುಸಾವೀರ್ ಹುಸೇನ್ ಪರಾರಿಯಾಗಿದ್ದ.

    ಯಾರು ಅಬ್ದುಲ್ ಮತೀನ್?
    ಕೆಫೆ ಸ್ಫೋಟ ಕೇಸ್‌ನ ಮಾಸ್ಟರ್‌ಮೈಂಡ್ ಆಗಿರುವ ಈತ ಅಲ್ ಹಿಂದ್ ಸಂಘಟನೆಯ ಪ್ರಮುಖ ಸದಸ್ಯನಾಗಿದ್ದಾನೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿಯಾಗಿದ್ದ ಈತ ಬ್ರಾಡ್‌ಬ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡಿದ್ದ ಈತ ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡಿದ್ದ. ಡಾರ್ಕ್‌ ವೆಬ್‌ ಬಳಕೆಯಲ್ಲಿ ಪರಿಣಿತನಾಗಿರುವ ಈತ 2020 ರಿಂದ ನಾಪತ್ತೆಯಾಗಿದ್ದಾನೆ. ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣದ ಕಿಂಗ್‌ಪಿನ್ ಆಗಿದ್ದು ಈಗ ಜೈಲಿನಲ್ಲಿ ಇರುವ ಶಾಕೀರ್‌ಗೆ ಬಾಂಬ್‌ ತಯಾರಿಸಲು ತರಬೇತಿ ನೀಡಿದ್ದ.