Tag: muslin

  • ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟ- ಸಮಯಪ್ರಜ್ಞೆ ಮೆರೆದ ಇನ್ಸ್‌ಪೆಕ್ಟರ್

    ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟ- ಸಮಯಪ್ರಜ್ಞೆ ಮೆರೆದ ಇನ್ಸ್‌ಪೆಕ್ಟರ್

    ಮಂಗಳೂರು: ಕಿಡಿಗೇಡಿಗಳು ಗಣಪತಿ ಕಟ್ಟೆಯಲ್ಲಿ ಮುಸ್ಲಿಮರ ಹಸಿರು ಬಾವುಟವಿಟ್ಟು (Green Colour Flag) ಗಲಭೆಗೆ ಯತ್ನಿಸಿದ್ದ ಘಟನೆ ಮೂಡಬಿದ್ರೆಯ ಪುಚ್ಚೆಮೊಗೇರು ಎಂಬಲ್ಲಿ ನಡೆದಿದೆ.

    ಮೂಡಬಿದಿರೆಯ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿಯವರ ಸಮಯ ಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ. ಕಳೆದ ಸೆ.28 ರ ಈದ್ ಮಿಲಾದ್ ದಿನ ಕಿಡಿಗೇಡಿಗಳು ಮೂಡಬಿದಿರೆಯ ಪುಚ್ಚೆಮೊಗರು ಗಣಪತಿ ಕಟ್ಟೆಯಲ್ಲಿ ಹಸಿರು ಬಣ್ಣದ ಮುಸ್ಲಿಮರ ಬಾವುಟ ಹಾಕಿದ್ದರು. ತಕ್ಷಣ ಗಮನಿಸಿದ ಸ್ಥಳೀಯರು ಅಲ್ಲಿನ ಹೊಸಬೆಟ್ಟು ಗ್ರಾಮ ಪಂಚಾಯತ್‍ನ ಪಿಡಿಓ ಶೇಖರ್ ಅವರ ಗಮನಕ್ಕೆ ತಂದಿದ್ದರು. ಆದರೂ ಪಿಡಿಓ ಕ್ರಮಕೈಗೊಳ್ಳದೆ ಎರಡು ದಿನಗಳ ಕಾಲ ಬಾವುಟ ಅದೇ ಜಾಗದಲ್ಲಿತ್ತು. ಇದನ್ನೂ ಓದಿ: ಬಂಗಾರಪೇಟೆ ಮಸೀದಿ ಬಳಿ ರಾತ್ರೋ ರಾತ್ರಿ ಕ್ಲಾಕ್‌ ಟವರ್ ನಿರ್ಮಾಣ

    ಸೆ.30 ರಂದು ವಿಚಾರ ತಿಳಿದ ಮೂಡಬಿದ್ರೆ ಠಾಣಾ ಇನ್ಸ್‍ಪೆಕ್ಟರ್ ಸಂದೇಶ್ ಪಿ.ಜಿ ಸಿಬ್ಬಂದಿ ಜೊತೆ ಸ್ಥಳಕ್ಕೆ ಬಂದಿದ್ದು, ಪಿಡಿಓ ಶೇಖರ್ ಅವರನ್ನೂ ಕರೆಸಿದ್ದರು. ಪಿಡಿಓ ವರ್ತನೆಗೆ ಕೆಂಡಾಂಮಡಲವಾದ ಇನ್ಸ್‍ಪೆಕ್ಟರ್, ಇದರ ಮೇಲೆ ಬಾವುಟ ಹಾಕಲು ಅನುಮತಿ ಇದ್ಯಾ?, ಅನುಮತಿ ಇಲ್ಲದೆ ಹಾಕಿದ್ದರೆ ಪೆÇಲೀಸ್ ದೂರು ನೀಡಬೇಕಿತ್ತು. ನಿನ್ನ ಅಧಿಕಾರ ಏನು ಅನ್ನೋದು ನಿನಗೆ ಗೊತ್ತಿಲ್ಲ, ನನಗೇನು ಸಂಬಂಧ ಇಲ್ಲ ಅನ್ನೋ ನೀನು ಪಿಡಿಓ ಆಗಿದ್ಯಾಕೆ?, ಇವನನ್ನೇ ಆರೋಪಿ ಮಾಡಬೇಕೆಂದು ಕೆಂಡಾಮಂಡಲವಾಗಿ ಇನ್ಸ್‍ಪೆಕ್ಟರ್ ಬೈದಿದ್ದಾರೆ. ಬಳಿಕ ಸಿಬ್ಬಂದಿ ಮೂಲಕ ಬಾವುಟವನ್ನು ಇನ್ಸ್‍ಪೆಕ್ಟರ್ ತೆರವುಗೊಳಿಸಿದ್ದಾರೆ.

    ಇದೀಗ ಇನ್ಸ್ ಪೆಕ್ಟರ್ ಅವರ ಸಮಯ ಪ್ರಜ್ಞೆಯ ವೀಡಿಯೋ ವೈರಲ್ ಆಗಿದ್ದು ಅನಾಹುತ ತಪ್ಪಿಸಿದ ಇನ್ಸ್‍ಪೆಕ್ಟರ್ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಸೀದಿಯ ಸಭಾಂಗಣದಲ್ಲೇ ಪ್ರತಿಯೊಬ್ರು ಮದ್ವೆಯಾಗ್ಬೇಕು- ಬಡ ಮುಸ್ಲಿಮರ ನಿದ್ದೆಗೆಡಿಸಿದ ಫತ್ವಾ

    ಮಸೀದಿಯ ಸಭಾಂಗಣದಲ್ಲೇ ಪ್ರತಿಯೊಬ್ರು ಮದ್ವೆಯಾಗ್ಬೇಕು- ಬಡ ಮುಸ್ಲಿಮರ ನಿದ್ದೆಗೆಡಿಸಿದ ಫತ್ವಾ

    ಉಡುಪಿ: ಜಿಲ್ಲೆಯಲ್ಲಿರುವ ಕನ್ನಂಗಾರು ಮಸೀದಿ ರಾಜ್ಯದಲ್ಲೇ ಬಹಳ ಪ್ರಸಿದ್ಧಿ ಪಡೆದಿದೆ. ಈ ಮಸೀದಿ ವ್ಯಾಪ್ತಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಮುಸ್ಲಿಮರೂ ಮಸೀದಿಯ ಸಭಾಂಗಣದಲ್ಲೇ ಮದುವೆಯಾಗಬೇಕು. ನಿಯಮ ಮೀರಿದರೆ ನಿಖಾ ರಿಜಿಸ್ಟರ್ ಆಗಲ್ಲ. ಇದೀಗ ಮಸಿದಿಯ ಈ ಫತ್ವಾ ಬಡ ಮುಸ್ಲಿಮರ ನಿದ್ದೆಗೆಡಿಸಿದೆ.

     ಫತ್ವಾ ಮೂಲಕ ಕನ್ನಂಗಾರು ಮಸೀದಿಯಲ್ಲಿರೋ ಹೈಬಾ ಸಭಾಂಗಣವೀಗ ವಿವಾದದ ಕೇಂದ್ರಬಿಂದುವಾಗಿದೆ. ಈ ಊರಲ್ಲಿ ಯಾವುದೇ ಮದುವೆಯಾದರೂ ಇಲ್ಲೇ ಆಗಬೇಕು ಎಂದು ಫತ್ವಾ ಹೊರಡಿಸಲಾಗಿದೆ. ಹೈಬಾ ಸಭಾಂಗಣ ಬಿಟ್ಟು ಬೇರೆ ಕಡೆ ಮದುವೆಯಾದರೆ 30 ಸಾವಿರ ರೂ. ದಂಡ ಕಟ್ಟಬೇಕು. ಒಂದು ವೇಳೆ ದಂಡ ಕಟ್ಟಿದರೂ ಆ ಮದುವೆಗೆ ಧರ್ಮಗುರುಗಳು ಬರಲೇಬೇಕು. ಇಲ್ಲದಿದ್ದರೆ ಮದುವೆ ರಿಜಿಸ್ಟರ್ ಗೆ ಮಸೀದಿ ಸತಾಯಿಸುತ್ತದೆ ಎಂದು ಕಾಪು ನಿವಾಸಿ ಹನೀಫ್  ದೂರಿದ್ದಾರೆ.

    ಈ ಮಸೀದಿಗೆ ಸರ್ಕಾರದಿಂದ 50 ಲಕ್ಷ ರೂಪಾಯಿ ಅನುದಾನ ಬಂದಿದೆ. ಬಡ ಮುಸ್ಲಿಮರಿಗಾಗಿ ವಕ್ಫ್ ಬೋರ್ಡ್‍ನಿಂದ ಸಮುದಾಯ ಭವನ ನಿರ್ಮಿಸಲಾಗಿದೆ. 5 ಲಕ್ಷ ರೂಪಾಯಿ ವಿನಿಯೋಗಿಸಿ ಹೈಬಾ ಆಡಿಟೋರಿಯಂ ನಿರ್ಮಿಸಲಾಗಿದೆ. ಈ ಮಸೀದಿಗೆ ಕಳೆದ 9 ವರ್ಷದಿಂದ ಮಂಗಳೂರು ಮೂಲದ ಎಚ್.ಪಿ.ಮೊಹಮ್ಮದ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಾರೆ. ಮೊಹಮ್ಮದ್‍ಗೆ ಮಾಜಿ ಸಚಿವ ಯು.ಟಿ ಖಾದರ್, ಮಾಜಿ ಶಾಸಕ ಮೊಯ್ದೀನ್ ಬಾವಾ, ಎಂಎಲ್‍ಸಿ ಫಾರೂಕ್ ಬೆಂಬಲ ಇದೆ ಅನ್ನೋ ಆರೋಪ ಕೇಳಿಬಂದಿದೆ.

    ಮಸೀದಿ ಸಭಾಂಗಣದಲ್ಲೇ ಮದುವೆಯಾಗಬೇಕು ಎಂಬ ಫರ್ಮಾನು ಸ್ಥಳೀಯ ಮುಸ್ಲಿಮರಿಗೆ ಕಷ್ಟವಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.