Tag: muslims

  • ಮೋದಿ ಮುಸ್ಲಿಮರನ್ನು ಟಾರ್ಗೆಟ್ ಮಾಡ್ತಿದ್ದಾರೆ: ಇಕ್ಬಾಲ್ ಅನ್ಸಾರಿ

    ಮೋದಿ ಮುಸ್ಲಿಮರನ್ನು ಟಾರ್ಗೆಟ್ ಮಾಡ್ತಿದ್ದಾರೆ: ಇಕ್ಬಾಲ್ ಅನ್ಸಾರಿ

    ಕೊಪ್ಪಳ: ಪ್ರಧಾನಿ ಮೋದಿ ಮುಸ್ಲಿಮರನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮೋದಿ ವಿರುದ್ಧ ಕಿಡಿಕಾರಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ತ್ರಿವಳಿ ತಲಾಖ್ ತಂದ್ರಿ, ಗಂಡ ಜೈಲಿಗೆ ಹೋದರೆ ಹೆಂಡತಿ ಏನ್ ಮಾಡಬೇಕು. ಅವಳು ಎಲ್ಲಿಗೆ ಹೋಗಬೇಕು ಎಂದು ಮೋದಿಗೆ ಅನ್ಸಾರಿ ಪ್ರಶ್ನೆ ಮಾಡಿದ್ರು.

    ನನ್ನ ಪೌರತ್ವ ಕಸಿದುಕೊಳ್ಳಲು ಇವರು ಯಾರು? ನನ್ನ ಹೆರಿಗೆ ಸೂಲಗಿತ್ತಿ ಮಾಡಿಸಿದ್ದಾಳೆ. ನಾವೆಲ್ಲಿ ಸರ್ಟಿಫಿಕೆಟ್ ತರೋಣ?  ನಾವೆಲ್ಲಿ ದಾಖಲೆ ತರೋಣ ಎಂದು ಆಕ್ರೋಶ ಹೊರಹಾಕಿದರು.

    ಮುಸ್ಲಿಂ ಸಮಾಜಕ್ಕೆ ತೊಂದರೆ ಕೊಡಬೇಕೆಂದು ಈ ಸಿಎಎ ಕಾಯ್ದೆ ತಂದಿದ್ದಾರೆ. ಮುಸ್ಲಿಂ ಸಮಾಜ ರಾಮಮಂದಿರ ವಿಷಯದಲ್ಲೂ ಸುಮ್ಮನಿದ್ದರೂ, ನಮಗೆ ತ್ರಿವಳಿ ತಲಾಖ್ ಬೇಕಿರಲಿಲ್ಲ. ಮುಸ್ಲಿಮರನ್ನು ಸದೆ ಬಡಿಯಲು ಕಾನೂನು ತಂದಿದ್ದಾರೆ. ಇದು ಮೋದಿ ದೇಶ ಅಲ್ಲ, ನಮ್ಮ ದೇಶ. ಮೋದಿ ಈ ದೇಶಕ್ಕಾಗಿ ಹೋರಾಟ ಮಾಡಿಲ್ಲ. ನಮ್ಮ ಪೂರ್ವಜರು ಹೋರಾಟ ಮಾಡಿದ್ದಾರೆ. ಮುಸ್ಲಿಮರೇನು ಕುರಿಗಳಾ, ದನಗಳಾ ಪ್ರಶ್ನೆ ಮಾಡಿದರೆ ಬಂಧನ ಕೇಂದ್ರ ತೆರೆಯುತ್ತೇವೆ ಎನ್ನೋಕೆ. ಈ ದೇಶದ ಪ್ರಧಾನಿ ಸುಳ್ಳು ಹೇಳುತ್ತಿರೋದು ದೊಡ್ಡ ದುರಂತ ಎಂದರು.

    ಇದೇ ವೇಳೆ ಸೋಮಶೇಖರ್ ವಿವಾದಾತ್ಮಕ ಹೇಳಿಕೆಗೆ ಅನ್ಸಾರಿ ತೀರುಗೇಟು ನೀಡಿದರು. ಸೋಮಶೇಖರ್ ರೆಡ್ಡಿ ಮಾತನಾಡಿದ್ದು ನೋಡಿದರೆ, ಅವರ ಮಾನಸಿಕ ಸ್ಥಿತಿ ಗೊತ್ತಾಗುತ್ತದೆ. ಸೋಮಶೇಖರ್ ರೆಡ್ಡಿ ಅವರಿಂದ ರಾಜಕೀಯದಲ್ಲಿ ಒಳ್ಳೆಯ ಕೆಲಸ ಮಾಡುವವರ ಮರ್ಯಾದೆ ಹೋಗುತ್ತದೆ. ಖಡ್ಗ ಹಿಡಿದುಕೊಳ್ತೀವಿ ಎಂದು ಸೋಮಶೇಖರ್ ರೆಡ್ಡಿ ಹೇಳುತ್ತಾರೆ. ಅಂದ್ರೆ ಬೇರೆಯವರೇನು ಬಳೆ ಹಾಕಿಕೊಂಡಿದ್ದಾರಾ? ನೀವು ಖಡ್ಗ ಹಿಡಿದುಕೊಂಡ್ರೆ, ಮತ್ತೊಬ್ಬರು ಇನ್ನೊಂದು ಹಿಡ್ಕೊಂಡ್ರೆ ಏನ್ ಮಾಡ್ತೀರಾ? ನಮ್ಮ ದೇಶವನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂದು ಯೋಚನೆ ಮಾಡಿದ್ದೀರಾ ಎಂದು ಕಿಡಿಕಾರಿದರು.

  • ಪೌರತ್ವ ಕಾಯ್ದೆ ವಿರುದ್ಧ ಬೀದಿಗಿಳಿದ ಮುಸ್ಲಿಂ ಮಹಿಳೆಯರು

    ಪೌರತ್ವ ಕಾಯ್ದೆ ವಿರುದ್ಧ ಬೀದಿಗಿಳಿದ ಮುಸ್ಲಿಂ ಮಹಿಳೆಯರು

    ಚಾಮರಾಜನಗರ: ಪೌರತ್ವ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ) ವಿರುದ್ಧ ಚಾಮರಾಜನಗರದಲ್ಲಿ ಸಾವಿರಾರು ಮುಸ್ಲಿಂ ಮಹಿಳೆಯರು ಪ್ರತಿಭಟನೆ ನಡೆಸಿದರು.

    ಚಾಮರಾಜನಗರದಲ್ಲಿ ಪ್ರತಿಭಟನೆ ಪ್ರವಾಸಿ ಮಂದಿರದಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಲಾರಿ ಸ್ಟ್ಯಾಂಡ್ ಬಳಿ ಸಾವಿರಾರು ಮಹಿಳೆಯರು ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಬಳಿಕ ರಾಷ್ಟ್ರೀಯ ಹೆದ್ದಾರಿಯನ್ನು ಒಂದು ಗಂಟೆಗೂ ಹೆಚ್ಚು ಕಾಲ ತಡೆದು ಧರಣಿ ನಡೆಸಿದರು. ಪೊಲೀಸ್ ಇಲಾಖೆ ಅನುಮತಿ ನಿರಾಕರಣೆ ನಡುವೆಯೂ ಮಹಿಳೆಯರು ಭಾರೀ ಪ್ರತಿಭಟನೆ ನಡೆಸಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದರು.

    ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‍ಆರ್‍ಸಿಯನ್ನು ಹಿಂಪಡೆಯುವವರೆಗೂ ನಿರಂತರವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

  • ಸಿಎಎ ವಿರೋಧಿಸುವವರಿಗೆ ನಂಕಾನಾ ಸಾಹಿಬ್ ಮೇಲೆ ನಡೆದ ದಾಳಿಯೇ ಉತ್ತರ: ಅಮಿತ್ ಶಾ

    ಸಿಎಎ ವಿರೋಧಿಸುವವರಿಗೆ ನಂಕಾನಾ ಸಾಹಿಬ್ ಮೇಲೆ ನಡೆದ ದಾಳಿಯೇ ಉತ್ತರ: ಅಮಿತ್ ಶಾ

    ನವದೆಹಲಿ: ಸಿಎಎ ವಿರೋಧಿಸುತ್ತಿರುವವರಿಗೆ ಪಾಕಿಸ್ತಾನದಲ್ಲಿನ ಗುರುದ್ವಾರದ ನಂಕಾನಾ ಸಾಹಿಬ್ ಮೇಲೆ ನಡೆದಿರುವ ದಾಳಿಯೇ ಉತ್ತರ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

    ದೆಹಲಿಯಲ್ಲಿ ನಡೆದ ಬಿಜೆಪಿ ಅಭಿಯಾನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ರಾಹುಲ್, ಸೋನಿಯಾ ಗಾಂಧಿ ಹಾಗೂ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸಿಎಎಯನ್ನು ವಿರೋಧಿಸುತ್ತಿದ್ದಾರೆ. ಅವರು ಪಾಕಿಸ್ತಾನದಲ್ಲಿನ ಗುರುದ್ವಾರದ ನಂಕಾನಾ ಸಾಹಿಬ್ ಮೇಲೆ ದಾಳಿ ನಡೆದಿದ್ದನ್ನು ಅರಿಯಬೇಕು. ಅಲ್ಲದೆ ಯಾರು ಸಿಎಎ ವಿರೋಧಿಸುತ್ತಿದ್ದಾರೋ ಅವರೆಲ್ಲರಿಗೂ ಇದು ಸೂಕ್ತ ಉತ್ತರ ಎಂದು ತಿಳಿಸಿದರು.

    ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿಯವರು ಜನತೆಯನ್ನು ಪ್ರಚೋದಿಸುತ್ತಿದ್ದಾರೆ. ಅಲ್ಲದೆ ನಿಮ್ಮ ಪೌರತ್ವವನ್ನು ಕಳೆದುಕೊಳ್ಳುತ್ತೀರಿ ಎಂದು ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಿ, ಪ್ರಚೋದಿಸುತ್ತಿದ್ದಾರೆ. ಆದರೆ ಅಲ್ಪಸಂಖ್ಯಾತರು ಈ ಕುರಿತು ತಲೆ ಕೆಡಿಸಿಕೊಳ್ಳಬೇಕಿಲ್ಲ. ಅಲ್ಲದೆ ಸಿಎಎಯಿಂದ ಅಲ್ಪಸಂಖ್ಯಾತರು ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    1984ರ ಸಿಖ್ ವಿರೋಧಿ ಗಲಭೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಂಕಾನಾ ಸಾಹಿಬ್‍ನಲ್ಲಿ ಏನಾಯಿತು? ಸಿಖ್ಖರ ಮೇಲೆ ದಾಳಿ ನಡೆಸಿದ ರೀತಿ ನೋಡಿ. ಈ ರೀತಿಯಾದಾಗ ನಮ್ಮ ಸಿಖ್ ಸಹೋದರರು ಭಾರತವಿಲ್ಲದಿದ್ದರೆ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಸುಳ್ಳು ಭರವಸೆ ನೀಡುವುದರ ಮೂಲಕವೇ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. 5 ವರ್ಷ ಆಡಳಿತ ನಡೆಸಿದರೂ ಅವರು ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.

    ದೇಶಾದ್ಯಂತ ಸಿಎಎ ವಿರೋಧಿ ಹೋರಾಟಗಳು ನಡೆಯುತ್ತಿವೆ. ಇದರ ಮಧ್ಯೆಯೇ ಪಾಕಿಸ್ತಾನದಲ್ಲಿನ ಗುರುದ್ವಾರದ ಸಿಖ್ಖರ ಪವಿತ್ರ ಕ್ಷೇತ್ರ ನಂಕಾನಾ ಸಾಹೀಬ್ ಮೇಲೆ ಮುಸ್ಲಿಂ ಗುಂಪೊಂದು ದಾಳಿ ನಡೆಸಿ, ಕಲ್ಲು ತೂರಾಟ ನಡೆಸಿದೆ. ಇದು ತೀವ್ರ ಸಂಚಲನ ಸೃಷ್ಟಿಸಿದೆ. ಈ ಕುರಿತು ಸಿಖ್ ಸಮುದಾಯದವರು ದೇಶದಲ್ಲಿನ ಪಾಕಿಸ್ತಾನದ ರಾಯಭಾರಿ ಕಚೇರಿ ಮುಂಭಾಗ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

  • ಗಡಿ ಜಿಲ್ಲೆಯಲ್ಲಿ ಇನ್ನೂ ಕಡಿಮೆಯಾಗಿಲ್ಲ ಪೌರತ್ವ ಕಿಚ್ಚು

    ಗಡಿ ಜಿಲ್ಲೆಯಲ್ಲಿ ಇನ್ನೂ ಕಡಿಮೆಯಾಗಿಲ್ಲ ಪೌರತ್ವ ಕಿಚ್ಚು

    ಚಾಮರಾಜನಗರ: ಗಡಿ ಜಿಲ್ಲೆಯ ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದಲ್ಲಿ ಕೇಂದ್ರದ ಪೌರತ್ವ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ಗುಂಡ್ಲುಪೇಟೆ ಪಟ್ಟಣದ ವಿವಿಧ ರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

    ತ್ರಿವರ್ಣ ಧ್ವಜ ಹಿಡಿದ ಪ್ರತಿಭಟನಾಕಾರರು ಪೌರತ್ವ ವಿರುದ್ಧ ಧಿಕ್ಕಾರ ಕೂಗುತ್ತಾ ಈದ್ಗಾ ಮೈದಾನದ ಬಳಿ ತೆರಳಿದರು. ಈದ್ಗಾ ಮೈದಾನದಲ್ಲಿ ರಾಷ್ಟ್ರಗೀತೆ, ವಂದೆ ಮಾತರಂ ಗೀತೆಯನ್ನು ಹಾಡುವ ಮೂಲಕ ನಾವೆಲ್ಲ ಭಾರತೀಯರು ಎನ್ನುವ ಸಂದೇಶ ಸಾರುವ ಕೆಲಸಕ್ಕೆ ಮುಂದಾದರು.

    ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಕೇರಳದಿಂದ ಪ್ರತಿಭಟನಾಕಾರರು ಆಗಮಿಸುವ ಶಂಕೆ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಿದ್ದರು. ಭದ್ರತೆಗಾಗಿ 2 ಕೆ.ಎಸ್.ಆರ್.ಪಿ, 6 ಡಿಎಆರ್ ತುಕಡಿಗಳನ್ನು ನಿಯೋಜನೆ ಮಾಡುವ ಮೂಲಕ ಬಿಗಿ ಪೋಲಿಸ್ ಭದ್ರತೆ ಕೈಗೊಳ್ಳಲಾಗಿತ್ತು.

  • ಮಸೀದಿಯಲ್ಲಿ ಅಯ್ಯಪ್ಪಸ್ವಾಮಿ ಮಹಾಪೂಜೆ- ಕೋಮು ಸೌಹಾರ್ದತೆ ಸಾರಿದ ಮುಸ್ಲಿಂ ಬಾಂಧವರು

    ಮಸೀದಿಯಲ್ಲಿ ಅಯ್ಯಪ್ಪಸ್ವಾಮಿ ಮಹಾಪೂಜೆ- ಕೋಮು ಸೌಹಾರ್ದತೆ ಸಾರಿದ ಮುಸ್ಲಿಂ ಬಾಂಧವರು

    ಗದಗ: ಇತ್ತೀಚಿನ ದಿನಗಳಲ್ಲಿ ಜಾತಿ-ಧರ್ಮ, ಮಂದಿರ ಮಸೀದಿಗಳ ವಿಚಾರವಾಗಿ ಗಲಾಟೆ, ಗಲಭೆ ನಡೆಯುತ್ತಿದ್ದು, ಸಮಾಜ ಸ್ವಾಸ್ತತೆ ಹಾಳಾಗುತ್ತಿದೆ. ಅದನ್ನು ತಪ್ಪಿಸಿ ಕೋಮು ಸೌಹಾರ್ದತೆ ಸಾರಲು ಗದಗ ಮುಸ್ಲಿಂ ಬಾಂಧವರು ಅಯ್ಯಪ್ಪಸ್ವಾಮಿ ಮೊರೆಹೊಗಿದ್ದಾರೆ.

    ಈಶ್ವರ ಅಲ್ಲಾ ತೆರೆನಾಮ್ ಸಬ್ಕೊ ಸನ್ಮತಿ ದೇ ಭಗವಾನ್ ಎಂಬಮಾತು ಅಲ್ಲಿ ನಿಜಕ್ಕೂ ಸಾಬೀತು ಮಾಡಿದ್ದಾರೆ. ಮಸೀದಿಯಲ್ಲಿ ಅಯ್ಯಪ್ಪ ಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹಾಪೂಜೆ ನೆರವೇರಿಸುವ ಮೂಲಕ ಗದಗ ಜಿಲ್ಲೆಯ ಹೆಸರು ಮತ್ತಷ್ಟು ಉತ್ತುಂಗಕ್ಕೆರುವಂತೆ ಮಾಡಿದ್ದಾರೆ.

    ನಗರದ ಖಾನ್‍ತೋಟದ ಇಮಾಮ್ ಖಾಸಿಮ್ ಪಂಜದ್ ಮಸೀದಿಯಲ್ಲಿ ಅಯ್ಯಪ್ಪಸ್ವಾಮಿ ಮಹಾಪೂಜೆ ನೆರವೇರಿತು. ಇಮಾಮ್ ಸೆಂಟ್ರಿಂಗ್ ಪ್ಲೇಟ್ಸ್ ಸಂಘ ಹಾಗೂ ಮಸೀದಿ ಅಧ್ಯಕ್ಷ ಅಬ್ದುಲ್ ಮುನಾಫ್ ಮುಲ್ಲಾ ನೇತೃತ್ವದಲ್ಲಿ ಕೋಮು ಸೌಹಾರ್ದತೆ ಮಹಾಪೂಜೆ ನಡೆಯಿತು. ಮಸೀದಿಯಲ್ಲಿ ಶಾಸ್ತ್ರೋಕ್ತವಾಗಿ ಅಯ್ಯಪ್ಪ ಸ್ವಾಮಿ ಮಹಾಪೂಜೆ ನೆರವೇರಿತು. ಮುಸ್ಲಿಂ ಬಾಂಧವರು ಅಯ್ಯಪ್ಪನಿಗೆ ಭಕ್ತಿಯಿಂದ ಆರತಿ ಬೆಳಗಿ ಪಾರ್ಥಿಸಿದರು.

    ಧರ್ಮ-ಧರ್ಮಗಳ, ಜಾಯಿ-ಜಾತಿಗಳ ನಡುವೆ ಯುದ್ಧ ಸೃಷ್ಟಿಸಲು ಹೊರಟವರಿಗೆ, ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತುವವವರಿಗೆ ಸಾಮರಸ್ಯದ ನೀತಿಪಾಠ ಹೇಳುತ್ತಿದ್ದೇವೆ. ಹಿಂದೂ-ಮುಸ್ಲಿಂ-ಕ್ರೈಸ್ತರು ಒಂದೆ. ಎಲ್ಲರೂ ಒಂದಾಗಿ ಬಾಳೋಣ ಎಂಬ ಭಾವನೆಯಿಂದ ಕೋಮು ಸೌಹಾರ್ದತೆಯಿಂದ ಬಾಳಲು ಕಳೆದ ಎರಡು ವರ್ಷದಿಂದ ಅಯ್ಯಪ್ಪಸ್ವಾಮಿ ಪೂಜೆ ನಡೆಸುತ್ತ ಬಂದಿದ್ದೇವೆ ಎಂದು ದರ್ಗಾದ ಅಧ್ಯಕ್ಷ ಅಬ್ದುಲ್ ಮುನಾಫ್ ಮುಲ್ಲಾ ತಿಳಿಸಿದ್ದಾರೆ.

    ನಗರದ ಗಂಗಾಪೂರಪೇಟೆ ದುರ್ಗಾದೇವಿ ಸನ್ನಿದಾನದಿಂದ ಪಂಜದ್ ದರ್ಗಾವರೆಗೆ ಅಯ್ಯಪ್ಪನ ಮೂರ್ತಿಯೊಂದಿಗೆ ಮೆರವಣಿಗೆ ಮಾಡಲಾಯಿತು. ಮೋಹರಂ ಹಬ್ಬದ ವೇಳೆ ಮೊಲಾಲಿ ದೇವರು ಕೂಡವ ಜಾಗೆಯಲ್ಲಿ ಅಯ್ಯಪ್ಪ, ಗಣೇಶ ಹಾಗೂ ಷಣ್ಮುಖ ದೇವರ ಮಂಟಪಮಾಡಿ ಪೂಜೆ ನಡೆಸಿದರು. ಪೂಜೆಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಮುಸ್ಲಿಂ ಬಾಂಧವರೇ ತಂದು, ಹತ್ತಾರು ಗುರುಸ್ವಾಮಿಗಳು, ನೂರಾರು ಮಾಲಾಧಾರಿಗಳನ್ನು ಕರೆಯಿಸಿ ಪೂಜೆ ಸಲ್ಲಿಸಿದರು.

    ಮಸೀದಿಯಲ್ಲಿ ಪೂಜೆ ಮಾಡಿದ ಅಯ್ಯಪ್ಪನಿಗೆ ಕರ್ಪೂರ ಹಚ್ಚಿ, ಆರತಿ ಬೆಳಗಿ, ಶರಣ ಕೂಗುತ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದರು. ಜಲಾಭಿಷೇಕ, ಪಂಚಾಮೃತ, ಕುಂಕುಮಾರ್ಚನೆ, ಎಳೆನೀರು, ತುಪ್ಪದಭಿಷೇಕ, ಬಿಲ್ವಾರ್ಚಣೆ, ಹೂ ಮೂಲಕ ಮಹಾಪೂಜೆ ಸಲ್ಲಿಸಿ ಎಲ್ಲರೂ ಭಕ್ತಿಗೆ ಪಾತ್ರರಾದರು. ಹಾಗೆ ಇಮಾಮ್ ಖಾಸಿಂ ಪಂಜದ ದರ್ಗಾಗೂ ಪೂಜೆ ನೈವೇದ್ಯ ನಡೆಯಿತು. ನಂತರ ಅನ್ನ ಪ್ರಸಾದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಜನರಲ್ಲಿ ಧಾರ್ಮಿಕ ಭಾವನೆಗಳು ಬದಲಾಗಬೇಕೆಂಬ ದೃಷ್ಟಿಯಿಂದ ಈ ಪೂಜೆ ಹಮ್ಮಿಕೊಂಡಿರುವುದು ಸ್ಥಳೀಯರಿಗೂ ಖುಷಿ ತಂದಿದೆ.

  • ಎನ್ಆರ್​ಸಿ, ಸಿಎಎ ಮೇನಿಯಾ- ಆರ್ಥಿಕ ಗಣತಿಗೆ ಮುಸ್ಲಿಮರಿಂದ ಅಡ್ಡಿ

    ಎನ್ಆರ್​ಸಿ, ಸಿಎಎ ಮೇನಿಯಾ- ಆರ್ಥಿಕ ಗಣತಿಗೆ ಮುಸ್ಲಿಮರಿಂದ ಅಡ್ಡಿ

    ತುಮಕೂರು: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್​ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದಾರೆಂದು ಅನುಮಾನಿಸಿ ಮುಸ್ಲಿಮರು ಆರ್ಥಿಕ ಗಣತಿ ಮಾಡಲು ಬಂದಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಜಿಲ್ಲೆಯ ಮುಸ್ಲಿಮರಲ್ಲಿ ಈ ಹೊಸ ಕಾಯ್ದೆಯ ಮೇನಿಯಾ ಕಾಡುತ್ತಿದ್ದು, ಆರ್ಥಿಕ ಗಣತಿ ಮಾಡಲು ಬಂದಿದ್ದ ಸಿಎಸ್‍ಸಿ ಏಜೆನ್ಸಿ ಸಿಬ್ಬಂದಿ ಕಂಡು ಮುಸ್ಲಿಮರು ಆತಂಕಗೊಂಡಿದ್ದಾರೆ. ಮನೆಮನೆಗೆ ಭೇಟಿ ಕೊಟ್ಟು ಆರ್ಥಿಕ ಗಣತಿಗಾಗಿ ಮಾಹಿತಿ ಕಲೆ ಹಾಕುತ್ತಿದ್ದ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಎನ್ಆರ್​ಸಿ ಜಾರಿ ಕುರಿತು ಸಮೀಕ್ಷೆ ಮಾಡುತ್ತಿರಬಹುದು ಎಂದು ಆತಂಕಗೊಂಡು ಸಿಬ್ಬಂದಿ ಐಡಿ ಕಾರ್ಡ್, ಮಾನ್ಯತಾ ಪತ್ರ ಎಲ್ಲವನ್ನೂ ಪರಿಶೀಲಿಸಿದ್ದಾರೆ. ಆದರೂ ಸಮಾಧಾನ ಆಗದೆ ಗಣತಿ ಮಾಡುತ್ತಿದ್ದ ಸಿಬ್ಬಂದಿಯನ್ನ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

     

    ಸಿಎಸ್ಸಿ ಸಿಬ್ಬಂದಿ ಜಿ.ಸಿ.ಆರ್ ಕಾಲೋನಿ, ಪೂರ್ ಹೌಸ್ ಕಾಲೋನಿ ಹಾಗೂ ಬಿಬಿಜಾನ್ ಲೇಔಟ್‍ಗಳಲ್ಲಿ ಆರ್ಥಿಕ ಗಣತಿ ಮಾಡುತ್ತಿದ್ದರು. ಕೇವಲ ಮುಸ್ಲಿಮರು ಹೆಚ್ಚಾಗಿರುವ ಬಡಾವಣೆಗಳಲ್ಲೇ ಸರ್ವೆ ನಡೆಯುತ್ತಿದ್ದದ್ದು ಇನ್ನಷ್ಟು ಆತಂಕ್ಕೆ ಕಾರಣವಾಗಿತ್ತು. ಸಿಬ್ಬಂದಿ ಎಷ್ಟೇ ಮನವೊಲಿಸಿದರೂ ಸ್ಥಳೀಯರಿಗೆ ಸಮಾಧಾನ ತಂದಿಲ್ಲ. ಬಳಿಕ ಸಿಬ್ಬಂದಿಯನ್ನು ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಆಗ ಸತ್ಯಾಸತ್ಯತೆ ತಿಳಿದಿದೆ. ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಿಎಸ್ಸಿ ಏಜೆನ್ಸಿ ರಾಷ್ಟ್ರೀಯ 7ನೇ ಆರ್ಥಿಕ ಗಣತಿ ಕಾರ್ಯಕ್ರಮದ ಅನ್ವಯ ಆರ್ಥಿಕ ಗಣತಿ ನಡೆಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಮೂಲ ಕೂಡ ಸ್ಪಷ್ಟಪಡಿಸಿದೆ.

    2019ರ ನವೆಂಬರಿನಿಂದ ದೇಶಾದ್ಯಂತ ಆರ್ಥಿಕ ಗಣತಿ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ ನವೆಂಬರ್ 6 ರಿಂದ ಆರಂಭಗೊಂಡಿದೆ. ಇದೇ ರೀತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆರ್ಥಿಕ ಗಣತಿ ನಡೆಯುತ್ತಿದೆ. ಆದರೆ ಎನ್ಆರ್​ಸಿ ಹಾಗೂ ಪೌರತ್ವ ಕಾಯ್ದೆ ಬಗ್ಗೆ ಪ್ರತಿಪಕ್ಷಗಳು ಭಯಹುಟ್ಟಿಸಿರುವುದು ಹಾಗೂ ಕೇಂದ್ರ ಸರ್ಕಾರ ಸಾರ್ವಜನಿಕರಲ್ಲಿ ಸರಿಯಾಗಿ ಅರಿವು ಮೂಡಿಸದಿರುವುದು ಅವಾಂತರಕ್ಕೆ ಕಾರಣವಾಗಿದೆ.

  • ಪೇಜಾವರ ಶ್ರೀಗಳ ಶೀಘ್ರ ಚೇತರಿಕೆಗೆ ಮುಸ್ಲಿಮರಿಂದ ಪ್ರಾರ್ಥನೆ

    ಪೇಜಾವರ ಶ್ರೀಗಳ ಶೀಘ್ರ ಚೇತರಿಕೆಗೆ ಮುಸ್ಲಿಮರಿಂದ ಪ್ರಾರ್ಥನೆ

    ವಿಜಯಪುರ: ಆಸ್ಪತ್ರೆಗೆ ದಾಖಲಾಗಿರುವ ಉಡುಪಿ ಪೇಜಾವರ ಶ್ರೀಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ವಿಜಯಪುರದ ಮುಸ್ಲಿಮರು ಪ್ರಾರ್ಥಿಸಿದ್ದಾರೆ.

    ನಗರದ ಮುರ್ತುಜಾ ಖಾದ್ರಿ ದರ್ಗಾದಲ್ಲಿ ಹಲವಾರು ಮುಸ್ಲಿಂ ಯುವಕರು ನಮಾಜ್ ಮಾಡಿ ಶ್ರೀಗಳ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಅಲ್ಪಸಂಖ್ಯಾತ ಮುಖಂಡ ಯಾಸೀನ್ ಜವಳಿ ನೇತೃತ್ವದಲ್ಲಿ ಮುಸ್ಲಿಂ ಯುವಕರು ಈ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಕಳೆದ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಶ್ರೀಗಳನ್ನು ಕೂಡಲೇ ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ವಲ್ಪ ಮಟ್ಟಿನಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಎದೆಯಲ್ಲಿ ಕಫ ಕಟ್ಟಿದ್ದು, ನಿಧಾನವಾಗಿ ಕರಗುತ್ತಿದೆ. ಹೀಗಾಗಿ ಶ್ರೀಗಳು ಸದ್ಯ ಚೇತರಿಸಿಕೊಳ್ಳುತ್ತಿದ್ದು, ಭಕ್ತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಶ್ರೀಗಳ ಆಪ್ತ ಸಹಾಯಕರು ಮಾಹಿತಿ ನೀಡಿದ್ದಾರೆ.

  • ನನ್ನ ಮೇಲೆ ದ್ವೇಷ ಇದ್ದರೆ ಪ್ರತಿಕೃತಿಯನ್ನು ಸುಟ್ಟುಹಾಕಿ, ಸಾರ್ವಜನಿಕ ಆಸ್ತಿಯನಲ್ಲ – ಮೋದಿ

    ನನ್ನ ಮೇಲೆ ದ್ವೇಷ ಇದ್ದರೆ ಪ್ರತಿಕೃತಿಯನ್ನು ಸುಟ್ಟುಹಾಕಿ, ಸಾರ್ವಜನಿಕ ಆಸ್ತಿಯನಲ್ಲ – ಮೋದಿ

    – ನಾವು ಸಮಸ್ಯೆಗಳನ್ನು ಮುಂದುವರಿಸುವುದಿಲ್ಲ, ಬಗೆಹರಿಸುತ್ತೇವೆ

    ನವದೆಹಲಿ: ನನ್ನ ಮೇಲೆ ದ್ವೇಷ ಇದ್ದರೆ ನನ್ನ ಪ್ರತಿಕೃತಿಯನ್ನು ಸುಟ್ಟು ಹಾಕಿ, ಸಾರ್ವಜನಿಕ ಆಸ್ತಿಗಳನಲ್ಲ ಎಂದು ಪ್ರಧಾನಿ ನರೇಂದ್ರ ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಪ್ರತಿಭಟನಾಕಾರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಮುಸ್ಲಿಂ ಮತ್ತು ಹಿಂದೂಗಳಿಗೆ ಸಂಬಂಧಿಸದಲ್ಲ ಭಾರತದ ಮೂಲ ನಿವಾಸಿಗಳು ನೀವ್ಯಾರು ಆತಂಕ ಪಡುವ ಅಗತ್ಯ ಇಲ್ಲ ಎಂದು ಅಭಯ ನೀಡಿದ್ದಾರೆ. ಅಕ್ರಮ ಕಾಲೋನಿಗಳನ್ನು ಸಕ್ರಮ ಮಾಡಿದ ಹಿನ್ನೆಲೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮೋದಿ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.

    ಕಾಂಗ್ರೆಸ್ ಸೇರಿ ಕೆಲವು ವಿರೋಧ ಪಕ್ಷಗಳ ಪರದೆ ಹಿಂದೆ ಕೂತು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ನಕಲಿ ವಿಡಿಯೋಗಳ ಮೂಲಕ ಜನರನ್ನು ಉದ್ವೇಗಕ್ಕೆ ಒಳಡಪಸುತ್ತಿದ್ದಾರೆ. ಇದುವರೆಗೆ ಭಾರತದಲ್ಲಿ ಯಾವುದೇ ನಿರಾಶ್ರಿತರ ಕೇಂದ್ರಗಳನ್ನೇ ಸ್ಥಾಪಿಸಿಲ್ಲ. ಸುಖಾಸುಮ್ಮನೆ ಆರೋಪ ಮಾಡುವ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ಮಾಡಲಾಗುತ್ತಿದೆ ನಾವು ಸಮಸ್ಯೆಗಳನ್ನು ಮುಂದುವರಿಸಿಕೊಂಡು ಹೋಗುವುದಿಲ್ಲ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ ಎಂದರು.

    ಚಳಿಗಾಲದ ಅಧಿವೇಶನ ಒಂದರಲ್ಲಿ ನಾವು 40 ಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆ ಕೊಡುವ ನಿಟ್ಟಿನಲ್ಲಿ ಅಕ್ರಮ ಕಾಲೋನಿಗಳ ಸಕ್ರಮಕ್ಕೆ ಬಿಲ್ ಪಾಸ್ ಮಾಡಿದ್ದೇವೆ. ಅದೇ ಅಧಿವೇಶನದಲ್ಲಿ ದೇಶದ ಜನರನ್ನು ದೇಶ ಬಿಟ್ಟು ಕಳಿಸುವ ಬಿಲ್ ಪಾಸ್ ಮಾಡು ಮಾಡುತ್ತೇವಾ? ವಿಪಕ್ಷಗಳ ನಾಯಕರು ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಕೈಯಿಂದ ಆಗದ ಕೆಲಸವನ್ನು ನಾವು ಮಾಡಿದ್ದೇವೆ ಇದರಿಂದ ಲಕ್ಷಾಂತರ ಜನರು ನೆಮ್ಮದಿಯಿಂದ ಬದುಕಲಿದ್ದಾರೆ. ಪಾರ್ಲಿಮೆಂಟ್ ತೆಗೆದುಕೊಂಡಿರುವ ಈ ನಿರ್ಧಾರವನ್ನು ಎಲ್ಲರೂ ಎದ್ದು ನಿಂತು ಬೆಂಬಲಿಸಬೇಕು ಎಂದು ಮೋದಿ ಕರೆ ನೀಡಿದ್ದರು. ಅಲ್ಲದೇ ಎನ್.ಆರ್.ಸಿ ನಾವು ಜಾರಿ ಮಾಡಿದಲ್ಲ ಕಾಂಗ್ರೆಸ್ ಸಮಯದಲ್ಲೇ ಈ ಪ್ರಸ್ತಾವನೆ ಇತ್ತು ಸುಪ್ರೀಂಕೋರ್ಟ್ ನಿರ್ದೇಶನ ಮೇರೆಗೆ ನಾವು ಅಸ್ಸಾಂನಲ್ಲಿ ಮಾತ್ರ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಪ್ರಯತ್ನಪಟ್ಟಾಗ ಯಾಕೆ ಯಾರು ವಿರೋಧ ವ್ಯಕ್ತಪಡಿಸಲಿಲ್ಲ ಎಂದು ಮೋದಿ ಪ್ರಶ್ನಿಸಿದರು.

    ಕೇಂದ್ರ ಸರ್ಕಾರ ಆಯುಷ್ಮಾನ್, ಉಜ್ವಲ್ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇಲ್ಲಿ ಯಾರಿಗೂ ಜಾತಿ ಕೇಳಿ ಸೌಲಭ್ಯಗಳನ್ನು ವಿತರಿಸಿಲ್ಲ. ಭಾರತೀಯ ನಾಗರಿಕರು ಎಲ್ಲರೂ ಕೇಂದ್ರ ಸರ್ಕಾರದ ಲಾಭ ಪಡೆದಿದ್ದಾರೆ. ಪೌರತ್ವ ತಿದ್ದುಪಡಿ ವಿಚಾರದಲ್ಲಿ ನಾವು ಜಾತಿ ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟಪಡಿದರು. ದಲಿತರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ದಲಿತರ ಅಭಿವೃದ್ಧಿ ಮಾತನಾಡುವ ವಿಪಕ್ಷ ನಾಯಕರು ಏನು ಮಾಡಿಲ್ಲ. ದಲಿತರು ಇನ್ನು ಅದೇ ಪರಿಸ್ಥಿತಿಯಲ್ಲಿದ್ದಾರೆ. ಪೌರತ್ವ ಕಾಯ್ದೆ ಪಾಕಿಸ್ತಾನ ಅಫ್ಘಾನಿಸ್ತಾನ ಬಾಂಗ್ಲಾದೇಶದಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದವರಿಗೆ ನೆಲೆಯನ್ನು ನೀಡಲಿದೆ. ಪಾಕಿಸ್ತಾನದಲ್ಲಿ ದಲಿತರು ಇಂದೂ ಕೂಡಾ ಚಹಾದ ಜೊತೆಗೆ ಲೋಟದ ಹಣವನ್ನು ಸಂದಾಯ ಮಾಡಬೇಕು. ಅಲ್ಲದೇ ಆ ಲೋಟವನ್ನು ಚಹಾ ಕುಡಿದ ಬಳಿಕ ತೆಗೆದುಕೊಂಡು ಹೋಗಬೇಕು ಪಾಕಿಸ್ತಾನದಲ್ಲಿ ಒತ್ತಾಯ ಪೂರ್ವಕವಾಗಿ ಸಾಕಷ್ಟು ಮತಾಂತರಗಳಾಗಿವೆ. ಹೀಗೇ ಕಿರುಕುಳಕ್ಕೆ ಒಳಗಾದವರಿಗೆ ನಾವು ದೇಶದಲ್ಲಿ ನೆಲೆ ಕೊಡಲು ಬದ್ಧವಾಗಿದ್ದೇವೆ. ಇಂತಹ ಸಂಧರ್ಭದಲ್ಲಿ ನಮ್ಮ ಜನರನ್ನು ದೇಶ ಬಿಟ್ಟು ಕಳಿಸುತ್ತೇವೆ ಎನ್ನುವುದು ಶುದ್ಧ ಸುಳ್ಳು ಎಂದರು.

    ದೆಹಲಿಯಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಿದೆ. ಅದರೆ ರಾಜ್ಯ ಸರ್ಕಾರ ಸಹಕಾರ ನೀಡಿಲ್ಲ ಒಂದು ವೇಳೆ ರಾಜ್ಯ ಸರ್ಕಾರ ಸಹಕಾರ ನೀಡಿದ್ದರೇ ದೆಹಲಿಯಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಬಹುದಿತ್ತು. ಅದ್ಯಾಗೂ ದೆಹಲಿಯಲ್ಲಿ ಮೆಟ್ರೋ ವಿಸ್ತರಣೆ ಆಗಿದೆ ಹೈವೇ ಗಳನ್ನು ಮಾಡಿದ್ದೇವೆ ಶುದ್ಧ ಕುಡಿಯುವ ನೀರು ಕೊಡುತ್ತಿದ್ದೇವೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದರು.

  • ಪೌರತ್ವ ಕಾಯ್ದೆ ಬಗ್ಗೆ ಮುಸ್ಲಿಮರಿಗೆ ಅರಿವು ಮೂಡಿಸಿದ ಇನ್ಸ್‌ಪೆಕ್ಟರ್- ವಿಡಿಯೋ ವೈರಲ್

    ಪೌರತ್ವ ಕಾಯ್ದೆ ಬಗ್ಗೆ ಮುಸ್ಲಿಮರಿಗೆ ಅರಿವು ಮೂಡಿಸಿದ ಇನ್ಸ್‌ಪೆಕ್ಟರ್- ವಿಡಿಯೋ ವೈರಲ್

    ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಅದರಲ್ಲೂ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಪ್ರತಿಭಟನೆ ಕಾವು ಜೋರಾಗಿದೆ. ಇದರ ಮಧ್ಯದಲ್ಲಿ ಇಬ್ಬರು ಗೋಲಿಬಾರ್ ಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ಹೆಚ್ ಎಸ್ ಆರ್ ಲೇಔಟ್ ಇನ್ಸ್‌ಪೆಕ್ಟರ್ ಪೌರತ್ವ ಕಾಯ್ದೆ ಬಗ್ಗೆ ಅರಿವು ಮೂಡಿಸುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

    ಬೆಂಗಳೂರಿನ ಹೆಚ್ ಎಸ್ ಆರ್ ಲೇ ಔಟ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಾಘವೇಂದ್ರ ಹೆಚ್‍ಎಸ್‍ಆರ್ ಲೇ ಔಟ್ ಮಸೀದಿಗಳಿಗೆ ತೆರಳಿ ಕಾಯ್ದೆಯ ಬಗ್ಗೆ ಅರಿವು ಮೂಡಿಸಿದ್ದಾರೆ. ಗಲಭೆ, ಹಿಂಸಾಚಾರವಾಗುತ್ತಿದ್ದರೆ ಜನರಲ್ಲಿ ಅರಿವು ಮೂಡಿಸುವುದು ಅತ್ಯಂತ ಉತ್ತಮ ಪರಿಹಾರ ಎಂಬುದನ್ನ ಅರಿತ ಇವರು, ಎರಡು ಮಸೀದಿಗಳಿಗೆ ಹೋಗಿ ಮುಸ್ಲಿಮರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಖಾಕಿ ಧಿರಿಸಿನಲ್ಲಿ ಹೋಗಿ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ, ಏನೇ ಮಾಡುವುದಿದ್ದರೂ ಮೊದಲು ನಿಜವಾದ ಸಂಗತಿಯೇನೆಂದು ತಿಳಿದುಕೊಂಡು ಮುಂದುವರಿಯಿರಿ. ಏನಾದರೂ ಸಂದೇಹಗಳು ಬಂದರೆ ಬಂದು ನಮ್ಮ ಬಳಿ ಬಂದು ಮೊದಲು ವಿಷಯ ತಿಳಿದುಕೊಳ್ಳಿ, ತಪ್ಪು ದಾರಿಗಿಳಿಯಬೇಡಿ ಎಂದರು.

    ಮುಸಲ್ಮಾನರು, ಹಿಂದೂಗಳು, ಕ್ರಿಶ್ಚಿಯನ್ ರು ಎಲ್ಲಾ ಧರ್ಮದವರು ಒಂದೇ ನಾವೆಲ್ಲಾ ಸಹೋದರರು ಇದ್ದಂಗೆ. ನಾವೆಲ್ಲರೂ ಭಾರತೀಯರು ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನ ಅಡಿ ನಾವೆಲ್ಲಾ ಸಂತೋಷವಾಗಿ ಇದ್ದೀವಿ ಕೂಡಿ ಬಾಳೋಣ ಪೌರತ್ವ ನಿಷೇಧದ ಕಾಯ್ದೆ ಮುಸ್ಲಿಮರಿಗೆ ಆಗಲಿ, ಹಿಂದೂಗಳಿಗೆ ಆಗಲಿ ತೊಂದರೆ ಆಗಲ್ಲ ಇದಕ್ಕೆಲ್ಲಾ ಕಿವಿಗೊಡಬೇಡಿ. ಯಾವ ರೀತಿಯ ಸಂದೇಶ ವಾಟ್ಸಾಪ್ ಆಗಲಿ, ಫೇಸ್ ಬುಕ್ ಆಗಲಿ ಬಂದರೆ ನನಗೆ ತಿಳಿಸಿ ಅದರ ಬಗ್ಗೆ ನಾನು ಮಾಹಿತಿ ಕೊಡುತ್ತೇನೆ. ಹಾಗಾಗಿ ಗಲಭೆ ಗೊಂದಲ ಬೇಡ ಎಲ್ಲರೂ ಒಟ್ಟಾಗಿ ಕೂಡಿ ಬಾಳೋಣ ಎಂದಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗ್ತಿದೆ.

    ಮೂಲತಃ ಚಿಕ್ಕಮಗಳೂರಿನವರಾದ ರಾಘವೇಂದ್ರ ಅವರು, 2003ರಲ್ಲಿ ಪೊಲೀಸ್ ಸೇವೆಗೆ ಸೇರಿ ಅನೇಕ ಕಡೆಗಳಲ್ಲಿ ಇದುವರೆಗೆ ಕೆಲಸ ಮಾಡಿದ್ದಾರೆ. ಕಳೆದ ಜನವರಿಯಲ್ಲಿ ಹೆಚ್ ಎಸ್ ಆರ್ ಲೇ ಔಟ್ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.

    https://www.facebook.com/pavagada.soori.9/videos/119806289499343/

  • ಮುಸ್ಲಿಂ ಮುಖಂಡರೊಂದಿಗೆ ಖಾಕಿ ಪಡೆ ಸಭೆ

    ಮುಸ್ಲಿಂ ಮುಖಂಡರೊಂದಿಗೆ ಖಾಕಿ ಪಡೆ ಸಭೆ

    ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ದೇಶದ್ಯಾಂತ ಪ್ರತಿಭಟನೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸೆಕ್ಷನ್ 144 ಈಗಾಗಲೇ ಜಾರಿಗೊಳಿಸಲಾಗಿದೆ. ಮಂಗಳೂರು ಮತ್ತು ಬೆಂಗಳೂರಿನಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು ಗುರುವಾರ ಮಂಗಳೂರಿನಲ್ಲಿ ಗೋಲಿಬಾರ್ ಮಾಡಲಾಗಿ ಇಬ್ಬರು ಮೃತರಾಗಿದ್ದರು.

    ಜೊತೆಗೆ ಬೆಂಗಳೂರಿನ ಟೌನ್ ಹಾಲ್ ಮತ್ತು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಮಾಡಲು ಸಾವಿರಾರು ಜನ ಸೇರಿದರು. ಪೊಲೀಸರು ಯಾವುದೇ ಅಹಿತಕರ ಘಟನೆಗಳು ಆಗದಂತೆ ಕ್ರಮವಹಿಸಿ ಪ್ರತಿಭಟನಾಕಾರರನ್ನ ಬಂಧಿಸಿದ್ದರು.

    ಈ ಹಿನ್ನೆಲೆಯಲ್ಲಿ ಶುಕ್ರವಾರ ಮುಸ್ಲಿಂ ಮುಖಂಡರೊಂದಿಗೆ ಪೊಲೀಸರು ಸಭೆ ಮಾಡಿದ್ದಾರೆ. ಮಡಿವಾಳದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರೊಂದಿಗೆ ಪೊಲೀಸರು ಮಸೀದಿಯೊಂದರಲ್ಲಿ ಸಭೆ ಮಾಡಿದ್ದಾರೆ. ಸಭೆಯಲ್ಲಿ ಮಡಿವಾಳ ವಿಭಾಗ ಎಸಿಪಿ ಕರಿಬಸವನಗೌಡ ಪೌರತ್ವ ಕಾಯ್ದೆಯ ಬಗ್ಗೆ ವಿವರಿಸಿ ಕಾಯ್ದೆಯ ತಿದ್ದುಪಡಿಯಲ್ಲಿ ಯಾವೆಲ್ಲ ಅಂಶಗಳಿವೆ, ಇದರಿಂದ ಏನಾಗುತ್ತದೆ ಅನ್ನೋದನ್ನು ಮುಸ್ಲಿಂ ಸಮುದಾಯದವರಿಗೆ ತಿಳಿ ಹೇಳುವ ಕೆಲಸವನ್ನು ಮಾಡಿದ್ದಾರೆ.